Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ನೀನಾಸಮ್ ತಿರುಗಾಟದ ಗಮನಾರ್ಹ ‘ಪಾದುಕಾ...

ನೀನಾಸಮ್ ತಿರುಗಾಟದ ಗಮನಾರ್ಹ ‘ಪಾದುಕಾ ಕಿರೀಟಿ’, ‘ಕೊಳ’

ಗಣೇಶ ಅಮೀನಗಡಗಣೇಶ ಅಮೀನಗಡ27 Nov 2026 2:54 PM IST
share
ನೀನಾಸಮ್ ತಿರುಗಾಟದ ಗಮನಾರ್ಹ ‘ಪಾದುಕಾ ಕಿರೀಟಿ’, ‘ಕೊಳ’

ನಾಟಕ: ಪಾದುಕಾ ಕಿರೀಟಿ

ರಚನೆ: ಕೆ.ವಿ.ಶಂಕರಗೌಡ

ನಿರ್ದೇಶನ: ಮಂಜು ಕೊಡಗು

ಸಂಗೀತ: ಕೃಷ್ಣ ಬಡಿಗೇರ

ತಂಡದ ವ್ಯವಸ್ಥಾಪಕ: ಶಿವಕುಮಾರ್ ತೀರ್ಥಹಳ್ಳಿ

ನಾಟಕ: ಕೊಳ

ಮೂಲ ಮರಾಠಿ: ಮಹೇಶ ಎಲ್ಕುಂಚವಾರ್

ಕನ್ನಡಕ್ಕೆ: ಕೆ.ಆರ್.ನಂದಿನಿ, ಪ್ರಶಾಂತ ಹಿರೇಮಠ

ನಿರ್ದೇಶನ: ಮಂಜು ಕಾಸರಗೋಡು

ಸಂಗೀತ: ಕೆ.ಎನ್.ಭಾರ್ಗವ

ಕಲಾವಿದರು: ಅನಘಾ ಅಜಯ್, ಅನುಷಾ ಹನುಮಂತರಾಯ, ಅರವಿಂದ ಸುಜಿತ್, ಅಶ್ವಿನಿ ಆರ್., ಗಿರೀಶ್ ಕೆ.ಎಂ., ದುರುಗೇಶ ಎಂ., ನಮಿತಾ ರಾಮು, ಭೀಮೇಶ್ ಎಚ್., ಮಂಜುನಾಥ ಎಸ್.ಎನ್. ಯಶು ಯುಗ, ಯೋಗೇಶ ಆರ್.ಎಸ್., ಲೋಕೇಶ್ ನ್ಯಾಮತಿ, ಹಾರಂಬಿ ಯತೀನ್.

ಅರೆಹೊಳೆ ಪ್ರತಿಷ್ಠಾನ, ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಹಾಗೂ ಅಸ್ತಿತ್ವ ಆಯೋಜನೆಯ ‘ಅರೆಹೊಳೆ ನಾಟಕೋತ್ಸವ’ ಅಂಗವಾಗಿ 2026ನೇ ಸಾಲಿನ ನೀನಾಸಮ್ ತಿರುಗಾಟದ ನಾಟಕಗಳನ್ನು ಕಳೆದ ವಾರ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ನಿತ್ಯಸಚಿವ ಎಂದು ಪ್ರಸಿದ್ಧರಾದವರು ಆಧುನಿಕ ಮಂಡ್ಯದ ರೂವಾರಿ ಕೆ.ವಿ.ಶಂಕರಗೌಡರು. ಅವರು ಕುವೆಂಪು ಅವರಿಂದ ನಿತ್ಯಸಚಿವ ಎಂದು ಗೌರವದಿಂದ ಕರೆಸಿಕೊಂಡವರು. ಇಂಥ ಶಂಕರಗೌಡರು ಐವತ್ತರ ದಶಕದಲ್ಲಿ ರಚಿಸಿ, ನಿರ್ದೇಶಿಸಿದ್ದ ‘ಪಾದುಕಾ ಕಿರೀಟಿ’ ನಾಟಕವನ್ನು 2026ನೇ ವರ್ಷದ ತಿರುಗಾಟಕ್ಕೆ ನೀನಾಸಮ್ ಆಯ್ದುಕೊಂಡಿದೆ.

ಕುವೆಂಪು ಅವರ ‘ರಾಮಾಯಣ ದರ್ಶನಂ’ ಕೃತಿಯಲ್ಲದೆ ಹಲವಾರು ರಾಮಾಯಣ ಕಥೆಗಳಿಂದ ಪ್ರೇರಣೆಗೊಂಡ ಈ ನಾಟಕದ ಕಥೆ ಹಳೆಯದು. ಆದರೆ ನಾಟಕ ಕಟ್ಟಿದ ರೀತಿ ಹೊಸದು.

ಮಂಥರೆಯ ಮಾತು ಕೈಕೇಯಿಯು ರಾಮನ ಪಟ್ಟಾಭಿಷೇಕವನ್ನು ನಿಲ್ಲಿಸುವುದರ ಮೂಲಕ ಶುರುವಾಗುತ್ತದೆ. ನಂತರ ರಾಮ ವನವಾಸಕ್ಕೆ ಹೋದಾಗ, ದಶರಥನ ಮರಣವಾಗಿ ಮುಂದುವರಿಯುವ ಈ ನಾಟಕದಲ್ಲಿ ಭರತನು ರಾಮನನ್ನು ಭೇಟಿಯಾಗಿ ವಾಪಸು ರಾಜ್ಯಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾನೆ. ವನವಾಸ ಮುಗಿಯುವವರೆಗೆ ಬರುವುದಿಲ್ಲ ಎನ್ನುತ್ತಾನೆ ರಾಮ. ಕೊನೆಗೆ ರಾಮನ ಪಾದುಕೆಗಳನ್ನಿಟ್ಟು ಭರತನು ರಾಜ್ಯಭಾರ ಮಾಡುವ ಸಂಕಲ್ಪದೊಂದಿಗೆ ನಾಟಕ ಕೊನೆಗೊಳ್ಳುತ್ತದೆ.

ಮುಖ್ಯವಾಗಿ ಈ ನಾಟಕದ ಸಂಭಾಷಣೆಗಳು ಅದ್ಭುತವಾಗಿವೆ. ಪಟ್ಟಾಭಿಷೇಕ ತೊರೆದು ಕಾಡಿಗೆ ಹೋಗಬೇಕೆಂಬ ಕೈಕೇಯಿಯ ಮಾತಿಗೆ ರಾಮ ಹೇಳುವ ಮಾತಿದು- ‘‘ಗಿರಿವನಪ್ರಿಯನಾದ ನನಗೆ ಅರಮನೆಯ ಜೀವನಕ್ಕಿಂತ ಅರಣ್ಯಪ್ರಿಯ. ಆಸ್ಥಾನದ ವಂದಿಮಾಗಧರಿಗಿಂತ ಕಾಡುಹಕ್ಕಿಗಳ ಹಾಡು ಮಧುರ. ಪುರದ ವೈಭವಕ್ಕಿಂತ ಪ್ರಕೃತಿವಿಲಾಸ ಹೃದ್ಯ. ಗಿರಿವನ ವಾಸ ಅದೇನು ಸಾಹಸವೆ? ವಲ್ಕಲ ಜಟೆಗಳು ಕಿರೀಟಕ್ಕಿಂತ ಕೀಳೇ’’

ಇನ್ನೊಂದು ಕಡೆ ರಾಮ ಹೇಳುತ್ತಾನೆ- ‘‘ತಾಳು ಸೌಮಿತ್ರಿ, ಹೆತ್ತಕರುಳು ತನಗಾದ ನೋವಿನಿಂದ ಭ್ರಾಂತಿಗೊಳಗಾಗಬಹುದು. ಆದರೆ ನಿನಗೇಕೆ ಬುದ್ಧಿವಿಕಲ್ಪ? ನೀನು ಪರಾಕ್ರಮಿ ಎಂಬುದನ್ನು ನಾನು ಕಾಣೆನೆ? ಸಾವಧಾನ... ನನಗೆ ಧರ್ಮವನ್ನು ಬಿಟ್ಟರೆ ಅನ್ಯಸಿರಿ ತೋರದು. ಧರ್ಮಸಹಿತ ಅರಣ್ಯವಾಸ ನನಗೆ ಅರಮನೆಗಿಂತ ಊನವಾಗಿ ತೋರದು. ರತ್ನಖಚಿತ ರಾಜಸೌಧ ಧರ್ಮರಹಿತವಾದರೆ ಸ್ಮಶಾನಕ್ಕಿಂತಲೂ ಹೆಚ್ಚು ಭೀಕರ... ಸೌಮಿತ್ರಿ. ಆಂತರ್ಯವನ್ನು ತಿಳಿಯದೆ ತಂದೆಯನ್ನು ವೃಥಾ ನಿಂದಿಸುವುದೆ? ಕೋಸಲನ ದೊರೆತನ ಸಿಗದ ಮಾತ್ರಕ್ಕೆ ನನಗೆ ಕೇಡಾಯ್ತೆಂದು ಭಾವಿಸಿದೆಯಾ? ವಿಧಿಗೆ ಅನಂತಮುಖ. ಈಗ ಅಸಹ್ಯವಾದರೂ ಮುಂದೊಮ್ಮೆ ಸಹ್ಯವಾಗಿ ತೋರಬಾರದು ಎಂದೇನಿಲ್ಲವಲ್ಲಾ?’’ ಎನ್ನುವ ಮಾತುಗಳು ಮಹತ್ವವಾದವು. ರಾಮನ ಪಾತ್ರಧಾರಿಯಾದ ಹಾರಂಬಿ ಯತೀನ್ ಗಮನ ಸೆಳೆಯುತ್ತಾರೆ. ಹಾಗೆಯೇ ಮಂಥರೆಯಾಗಿ ಭೀಮೇಶ, ಊರ್ಮಿಳೆಯಾಗಿ ಅನಘಾ ಅಜಯ್, ಕೌಸಲ್ಯೆಯಾಗಿ ಅನುಷಾ ಹನುಮಂತರಾಯ... ಹೀಗೆ ತಮ್ಮ ಪಾತ್ರಗಳಿಗೆ ಎಲ್ಲ ಕಲಾವಿದರು ನ್ಯಾಯ ಒದಗಿಸಿದ್ದಾರೆ. ನಾಟಕದ ನಿರ್ದೇಶಕ ಮಂಜು ಕೊಡಗು ಅವರು ಎಲ್ಲ ಕಲಾವಿದರನ್ನು ಸರಿಯಾಗಿ ದುಡಿಸಿಕೊಂಡಿದ್ದಾರೆ. ಇದರಿಂದ ನಾಟಕವು ಚೇತೋಹಾರಿಯಾಗಿದೆ. ಮಂಥರೆಯ ಕುಟಿಲತನ, ರಾಮನ ಒಳ್ಳೆಯತನ, ಭರತನ ಕಕ್ಕಲುತನ... ಹೀಗೆ ಮೇಳೈಸಿಕೊಂಡ ಈ ನಾಟಕ ಎಷ್ಟೆಲ್ಲ ಹೊಳಹುಗಳನ್ನು ಹೊಳೆಯಿಸುತ್ತದೆ!

***

ನೀನಾಸಮ್ ತಿರುಗಾಟದ ಇನ್ನೊಂದು ನಾಟಕ ‘ಕೊಳ’. ಇದು ಮರಾಠಿಯ ಮಹೇಶ ಎಲ್ಕುಂಚವಾರ್ ಅವರ ನಾಟಕವನ್ನು ಮೈಸೂರು ರಂಗಾಯಣದ ಹಿರಿಯ ಕಲಾವಿದ ದಂಪತಿಯಾದ ಕೆ.ಆರ್.ನಂದಿನಿ ಹಾಗೂ ಪ್ರಶಾಂತ ಹಿರೇಮಠ ಕನ್ನಡಕ್ಕೆ ತಂದಿದ್ದಾರೆ. ಇದು ಕನ್ನಡದ್ದೇ ಎನ್ನುವಷ್ಟು ತಾಜಾತನದಿಂದ ಕೂಡಿದೆ. ಮಂಜು ಕಾಸರಗೋಡು ಅವರ ನಿರ್ದೇಶನವೂ ಸಮರ್ಥ. ಇದು ಮಹೇಶ ಎಲ್ಕುಂಚವಾರ್ ಅವರ ಚಿರೇಬಂದಿವಾಡೆ ನಾಟಕದ ಮುಂದುವರಿದ ಭಾಗ. ಚಿರೇಬಂದಿವಾಡೆ ನಾಟಕವನ್ನು ಮಾರುತಿ ಶಾನಭಾಗ ಕನ್ನಡಕ್ಕೆ ತಂದಿದ್ದಾರೆ. ಈ ನಾಟಕವನ್ನು ನೀನಾಸಮ್ ತಿರುಗಾಟಕ್ಕೆ ಚಿದಂಬರರಾವ್ ಜಂಬೆ ಅವರು 1998ರಲ್ಲಿ ನಿರ್ದೇಶಿಸಿದ್ದರು. ಈಗಿನ ಸಿನೆಮಾ ನಟ ಅಚ್ಯುತಕುಮಾರ್ ಹಾಗೂ ಗೋಮಾರದಹಳ್ಳಿ ಮಂಜುನಾಥ ಅವರು ದೇಶಪಾಂಡೆ ಪಾತ್ರ ನಿರ್ವಹಿಸಿದ್ದರು. ನಂತರ ಪ್ರಮೀಳಾ ಬೆಂಗ್ರೆ ಅವರು ಮೈಸೂರು ರಂಗಾಯಣಕ್ಕೆ 2003ರಲ್ಲಿ ನಿರ್ದೇಶಿಸಿದರು. ಈ ಕುರಿತು ಪ್ರಸ್ತಾಪಿಸಲು ಕಾರಣವಿದೆ; ಚಿರೇಬಂದಿವಾಡೆ, ಕೊಳ ಮತ್ತು ಯುಗಾಂತ ನಾಟಕಗಳೆಲ್ಲ ಎಲ್ಕುಂಚವಾರ್ ಅವರ ತ್ರಿವಳಿಯವು.

ಚಿರೇಬಂದಿವಾಡೆ ನಾಟಕದಲ್ಲಿ ದೇಶಪಾಂಡೆಯವರ ವಾಡೆ ಹಾಗೂ ಮನೆತನ ಅವಸಾನದತ್ತ ಸಾಗುವ ಕಥೆಯನ್ನು ಹೇಳಿದರೆ, ಕೊಳ ನಾಟಕವು ತಲೆಮಾರುಗಳ ನಡುವಿನ ಸಂಘರ್ಷ, ಹೊಸ ವ್ಯಾಪಾರ, ಬಿಗಡಾಯಿಸಿದ ಸಂಬಂಧಗಳ ಕುರಿತಿದೆ. ನಗರಗಳಿಗೆ ವಲಸೆ ಹೋದವರು ತಮ್ಮ ಹಳ್ಳಿಯ ಊರಿಗೆ ಬಂದಾಗ ನಡೆಯುವ ಘಟನೆಗಳಿಗೆ ಸಾಕ್ಷಿಯಾಗುತ್ತ, ಅಸಹಾಯಕರಾಗಿ ನೋಡುತ್ತ, ಬದಲಾದ ಬದುಕಿನ ಕುರಿತು ಬೆರಗಾಗುತ್ತ, ಗಾಬರಿಯಾಗುತ್ತ ಸಾಗುವ ನಾಟಕವಿದು.

ಕೊಳ ನಾಟಕವು ಶುರುವಾಗುವುದೇ ರಂಜು ಮದುವೆ ತಯಾರಿ ಮೂಲಕ. ಚಿರೇಬಂದಿವಾಡೆ ನಾಟಕದಲ್ಲಿ ಇದೇ ರಂಜು ಇಂಗ್ಲಿಷ್ ಕಲಿಸಲು ಬರುತ್ತಿದ್ದ ಮಾಸ್ತರನೊಂದಿಗೆ ಚಿನ್ನಾಭರಣಗಳ ಸಮೇತ ಮುಂಬೈಗೆ ಓಡಿಹೋಗುತ್ತಾಳೆ. ಆದರೆ ಅಲ್ಲಿ ತನ್ನೆಲ್ಲ ಚಿನ್ನಾಭರಣಗಳೊಂದಿಗೆ ಮಾಸ್ತರ ಕೈಕೊಟ್ಟಾಗ ಕಂಗಾಲಾಗುವ ಆಕೆಯನ್ನು ವಾಪಸು ವಾಡೆಗೆ ಕರೆತರಲಾಗುತ್ತದೆ. ಇದಕ್ಕೂ ಮೊದಲು ಚಿರೇಬಂದಿವಾಡೆ ನಾಟಕದಲ್ಲಿ ಭಾಸ್ಕರ ದೇಶಪಾಂಡೆ ತನ್ನ ಹೆಂಡತಿಗೆ ಹಳೆಯ ಚಿನ್ನಾಭರಣಗಳನ್ನು ತೊಡಿಸುವ ದೃಶ್ಯವಿದೆ. ಹೀಗೆಯೇ ಕೊಳ ನಾಟಕದಲ್ಲೂ ಪರಾಗ ತನ್ನ ಹೆಂಡತಿ ನಂದಿನಿಗೆ ಹಳೆಯ ಚಿನ್ನಾಭರಣಗಳನ್ನು ತೊಡಿಸುವ ಮೂಲಕ ಪ್ರೀತಿ ತೋರುತ್ತಾನೆ. ಹೀಗೆ ಚಿನ್ನಾಭರಣ ತೊಡಿಸುವ ಮೊದಲು ಒರಟಾಗಿದ್ದ ಪರಾಗ, ಯಾವುದಕ್ಕೂ ಎದುರು ಉತ್ತರ ಕೊಡದ ಆತನ ಹೆಂಡತಿ ನಂದಿನಿ ನಡುವೆ ನಡೆಯುವ ಸಂಭಾಷಣೆ ಗಮನಾರ್ಹ. ಇನ್ನೊಂದು ಮಹಿಳೆಯೊಂದಿಗೆ ಸಂಬಂಧವಿದೆ ಎಂಬುದನ್ನು ತಿಳಿಸಿದಾಗ ಗೊತ್ತು ಎಂದು ತಣ್ಣಗೆ ಉತ್ತರ ಕೊಡುತ್ತಾಳೆ ನಂದಿನಿ. ಈಗ ಆಕೆಯೊಂದಿಗೆ ಸಂಬಂಧ ಮುಂದುವರಿದಿಲ್ಲ ಎಂದೂ ತಿಳಿಸುವುದರ ಜೊತೆಗೆ ಚಿನ್ನಾಭರಣ ತೊಡಿಸಿ ಆಕೆಯ ತೊಡೆಯ ಮೇಲೆ ಮಲಗುತ್ತಾನೆ. ಇಂಥ ಅನೇಕ ದೃಶ್ಯಗಳು ನಾಟಕದ ಉದ್ದಕ್ಕೂ ಇವೆ. ನೋವು, ಸಂಕಟ, ಸಮಸ್ಯೆ, ಸವಾಲು, ಹಳವಂಡಗಳ ಅನಾವರಣದ ಜೊತೆಗೆ ಆಧುನಿಕ ಬದುಕಿನಿಂದಾಗಿ ಎದುರಾಗುವ ಸಮಸ್ಯೆಗಳು, ವಿಘಟನೆಗಳಿಂದಾಗಿ ಕಂಗಾಲಾಗುವ ಹಿರಿಯರು, ಕೂಡುಕುಟುಂಬಗಳು ಛಿದ್ರವಾಗುವ, ಜಗಳವಾಡುತ್ತಲೇ ಒಂದಾಗುವ... ಇಂಥ ಹತ್ತಾರು ಘಟನೆಗಳು ಗಮನ ಸೆಳೆಯುತ್ತವೆ. ಆದರೆ ಎರಡು ತಾಸು ನಲವತ್ತು ನಿಮಿಷಗಳ ಈ ನಾಟಕ ನೋಡಲು ಪ್ರೇಕ್ಷಕರಿಗೆ ಬಹಳ ತಾಳ್ಮೆ ಬೇಕು.

ಆದರೆ ಈ ನಾಟಕ ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿದೆ. ಇದು ಕಲಾವಿದರಿಂದ ಹೊರಬಂದಿಲ್ಲ. ಇದಕ್ಕೆ ರಾಜ್ಯದ ವಿವಿಧೆಡೆಯ ಕಲಾವಿದರು ಕಾರಣವಾಗಿರಬಹುದು. ಆದರೂ ಅವರು ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ಸಂಭಾಷಣೆಗಳನ್ನು ಅವಸರವಾಗಿ ಹೇಳದೆ ಇನ್ನಷ್ಟು ಸಾವಕಾಶವಾಗಿ ಮತ್ತು ಪರಿಣಾಮಕಾರಿಯಾಗಿ ಹೇಳುವ ಅಗತ್ಯವಿದೆ.

ಕೊಳ ನಾಟಕ ನೋಡುವಾಗ ಮೈಸೂರು ರಂಗಾಯಣದ ಹಿರಿಯ ಕಲಾವಿದರು ಪ್ರಸ್ತುತಪಡಿಸುತ್ತಿದ್ದ ಚಿರೇಬಂದಿವಾಡೆ ನಾಟಕ ನೆನಪಾಗುತ್ತದೆ. ಹಾಗೆ ಹೋಲಿಸುವುದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೂ ಮೈಸೂರು ರಂಗಾಯಣದ ಕಲಾವಿದರಾದ ಪ್ರಶಾಂತ ಹಿರೇಮಠ ಅವರು ಭಾಸ್ಕರ ದೇಶಪಾಂಡೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅದರಲ್ಲಿ ‘‘ನಾವು ವಾಡೆ ಮಂದಿ. ಹಂಗ ಕುಂತು ಉಂತೀವಿ. ಗಂಟು ಕರಗಿದ್ರೂ ಚಿಂತಿಲ್ಲ. ಹೊರಗ ದುಡಿಯಾಕ ಹೋಗೂದಿಲ್ಲ. ಯಾಕಂದ್ರ ವಾಡೆ ಮರ್ಯಾದೆ ಹೋಗ್ತದ’’ ಎನ್ನುವ ಮಾತು, ಕೆ.ಆರ್.ನಂದಿನಿ ಅವರು ‘ವೆಂಕಟೇಶಾ’ ಎಂದು ಆಗಾಗ ಹೇಳುವ ಮಾತು ಮರೆಯಲಾಗದು. ಹೀಗೆಯೇ ತಾಯಿ ಪಾತ್ರದ ಪ್ರಮೀಳಾ ಬೆಂಗ್ರೆ, ಸುಧೀರ ಪಾತ್ರದಲ್ಲಿ ಹುಲಗಪ್ಪ ಕಟ್ಟಿಮನಿ, ಅತ್ತಿಗೆ ಪಾತ್ರದಲ್ಲಿ ಸರೋಜಾ ಹೆಗಡೆ, ರಂಜೂ ಪಾತ್ರದಲ್ಲಿ ಗಿರಿಜಾ ರವಿಮೋಹನ್, ಚಂದೂ ಪಾತ್ರದಲ್ಲಿ ನೂರ್ ಅಹ್ಮದ್ ಶೇಕ್, ಅಂಜಲಿ ಪಾತ್ರಧಾರಿಯಾಗಿ ಗೀತಾ ಮೋಂಟಡ್ಕ ಹಾಗೂ ಪರಾಗ ಪಾತ್ರದಲ್ಲಿ ಶಾಜಿ ಚಂದ್ರನ್ ಅಭಿನಯಿಸಿದ್ದರು. ಅವರ ಮಾಗಿದ ಅಭಿನಯಕ್ಕೆ ಮರುಳಾಗದವರಿಲ್ಲ. ಅದು ಕ್ಲಾಸಿಕ್ ನಾಟಕವಾಗಿ ನನ್ನಂಥ ಅನೇಕ ಪ್ರೇಕ್ಷಕರ ಮನದಾಳದಲ್ಲಿ ಈಗಲೂ ಇದೆ. ಮಂದ್ರ ಬೆಳಕು ಮತ್ತು ಮಂದ್ರ ಧ್ವನಿಯಲ್ಲಿ ಸಾಗುವ ಚಿರೇಬಂದಿವಾಡೆಯ ನಾಟಕದ ಪರಿಣಾಮ ಬಹಳ. ಹೀಗೆಯೇ ಕೊಳ ನಾಟಕ ಕೂಡಾ ತನ್ನ ರಂಗಸಜ್ಜಿಕೆ, ಉಡುಪು, ಸಂಗೀತದ ಮೂಲಕ ಗಮನ ಸೆಳೆಯುತ್ತದೆ. ಕಲಾವಿದರು ಇನ್ನಷ್ಟು ಮಾಗಬೇಕಷ್ಟೇ.

(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)

Tags

Paduka Kiriti
share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X