Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಪುಷ್ಪಮಾಲಾಗೆ ‘ರಾಜಮಾರ್ಗ’ ಪ್ರಶಸ್ತಿ...

ಪುಷ್ಪಮಾಲಾಗೆ ‘ರಾಜಮಾರ್ಗ’ ಪ್ರಶಸ್ತಿ ಮಾಲೆ

ಗಣೇಶ ಅಮೀನಗಡಗಣೇಶ ಅಮೀನಗಡ7 Jun 2024 3:05 PM IST
share
ಪುಷ್ಪಮಾಲಾಗೆ ‘ರಾಜಮಾರ್ಗ’ ಪ್ರಶಸ್ತಿ ಮಾಲೆ
ಅಪರೂಪದ ಕಲಾವಿದೆಯಾದ ಪುಷ್ಪಮಾಲಾ ಅವರಿಗೆ ಧಾರವಾಡದ ವಿದ್ಯಾವರ್ಧಕ ಸಂಘವು ಜೂನ್ 6ರಂದು ಧಾರವಾಡದಲ್ಲಿ ಏರ್ಪಡಿಸಿದ್ದ ಡಾ.ವೀರಣ್ಣ ರಾಜೂರ ದತ್ತಿ ಕಾರ್ಯಕ್ರಮದಲ್ಲಿ ‘ರಾಜಮಾರ್ಗ’ ಪ್ರಶಸ್ತಿ ನೀಡಿ ಗೌರವಿಸಿದೆ.

ಅವರು ನಾಟಕ ನಡೆಯುವಾಗಲೇ ಜನಿಸಿದರು. ನಾಟಕದ ದೃಶ್ಯವೊಂದರಲ್ಲಿ ಅವರಿಗೆ ನಾಮಕರಣವಾಯಿತು. ಅವರು ಹುಬ್ಬಳ್ಳಿಯ ಪುಷ್ಪಮಾಲಾ ಅಣ್ಣಿಗೇರಿ. ಅವರ ತಾಯಿ ಆದವಾನಿ ನಾಗರತ್ನಮ್ಮ. ತಂದೆ ಬಳ್ಳಾರಿ ಹತ್ತಿರದ ಕೋಡಿಹಾಳದ ಲಕ್ಷ್ಮಣ ಶೆಟ್ಟರ ಹಾರ್ಮೋನಿಯಂ ಮಾಸ್ತರರು. ‘ಕಲಬುರಗಿ ಶರಣ ಬಸವೇಶ್ವರ’ ನಾಟಕ ನಡೆಯುವಾಗ ನಾಗರತ್ನಮ್ಮ ತುಂಬು ಗರ್ಭಿಣಿ. ಅರ್ಧ ನಾಟಕವಾದಾಗ ಪುಷ್ಪಮಾಲಾ ಅವರು ಜನಿಸಿದರು. ಕಲಾವಿದೆಗೆ ಹೆರಿಗೆಯಾಗಿದೆಯೆಂದು ಪ್ರೇಕ್ಷಕರನ್ನು ವಾಪಸ್ ಕಳಿಸಿದರು. ಐದು ದಿನಗಳಾದ ಮೇಲೆ ಮತ್ತೆ ನಾಟಕ ಶುರುವಾದಾಗ ನಾಗತ್ನಮ್ಮ ಅವರು ಬಾಣಂತಿಯಾಗಿದ್ದರೂ ಅನಿವಾರ್ಯವಾಗಿ ಮತ್ತೆ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದರು. ‘ಸಿದ್ಧರಾಮೇಶ್ವರ’ ನಾಟಕದಲ್ಲಿ ಮಗುವಿಗೆ ನಾಮಕರಣ ಶಾಸ್ತ್ರದ ದೃಶ್ಯಕ್ಕೆ ಅದುವರೆಗೆ ಗೊಂಬೆಯೊಂದನ್ನು ತೊಟ್ಟಿಲಲ್ಲಿಟ್ಟು ಹೆಸರಿಡುತ್ತಿದ್ದರು. ಆದರೆ ಐದು ದಿನಗಳ ಮಗುವಾಗಿದ್ದ ಕೂಸನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಶಾಸ್ತ್ರದ ದೃಶ್ಯಕ್ಕೆ ಬಳಸಿಕೊಂಡರು. ಹೀಗೆ ಪುಷ್ಪಮಾಲಾ ಅವರ ರಂಗಭೂಮಿ ಪ್ರವೇಶವಾಗಿದ್ದು ಕೂಸಿದ್ದಾಗ. ಅವರ ತಾಯಿಯ ತಂದೆ ತಿಪ್ಪಣ್ಣ ಶಿಂಧೆ ಅವರು ಮೃದಂಗ ನುಡಿಸುತ್ತಿದ್ದರು. ಬಣ್ಣದ ಹುಚ್ಚಿನಿಂದಾಗಿ ಶಾರದಾ ನಾಟಕ ಮಂಡಳಿ ಎಂಬ ಕಂಪೆನಿ ಕಟ್ಟಿಕೊಂಡಿದ್ದರು.

ಚಿಕ್ಕಮ್ಮಂದಿರಾದ ಜಿ.ಎನ್. ಅಂಜಲಿದೇವಿ, ಆದವಾನಿ ಸುಭದ್ರಮ್ಮ ಹಾಗೂ ಸೀತಮ್ಮ ಕಲಾವಿದರು. ಹೀಗೆ ಅವರದು ಕಲಾವಿದರ ಕುಟುಂಬ. ಅವರ ತಾಯಿ ಚಿತ್ತರಗಿ, ಅರಿಶಿನಗೋಡಿ, ಶಿಶುವಿನಹಳ್ಳಿ, ಕವಲಿ ಚನ್ನಬಸಪ್ಪ ಕಂಪೆನಿಗಳಲ್ಲಿ ನಾಯಕಿಯಾಗಿದ್ದರು. ಮುಂದೆ ಪುಷ್ಪಮಾಲಾ ಅವರು ಆರೇಳು ವರ್ಷ ವಯಸ್ಸಿನವರಿದ್ದಾಗ ‘ರಕ್ತರಾತ್ರಿ’ ನಾಟಕದಲ್ಲಿ ದುರ್ಯೋಧನನ ಮಗ ದುರ್ಜಯನ ಪಾತ್ರ, ‘ಹರಿಶ್ಚಂದ್ರ’ ನಾಟಕದಲ್ಲಿ ಲೋಹಿತಾಶ್ವ ಪಾತ್ರ ಹಾಗೂ ‘ಸತ್ಯವಾನ ಸಾವಿತ್ರಿ’ ನಾಟಕದಲ್ಲಿ ನಾರದನ ಪಾತ್ರ ಮಾಡಿದಾಗ ಗೋಕಾಕ ಕಂಪೆನಿಯ ಮಾಲಕರಾದ ಬಸವಣ್ಣೆಪ್ಪ ತಮ್ಮ ಕಂಪೆನಿಗೆ ನಟಿಸಲು ಆಹ್ವಾನಿಸಿದಾಗ ಪುಷ್ಪಮಾಲಾ ಅವರ ಅಜ್ಜ ಕಳಿಸಿಕೊಡಲಿಲ್ಲ. ಮುಂದೆ 1962ರಲ್ಲಿ ಅವರ ಚಿಕ್ಕಮ್ಮ ಆದವಾನಿ ಸುಭದ್ರಮ್ಮ ಅವರು ಪಡೆಸೂರಿನ ಸಿದ್ಧಲಿಂಗೇಶ್ವರ ನಾಟ್ಯ ಸಂಘದಲ್ಲಿ ಕಲಾವಿದರಾಗಿದ್ದಾಗ, ಕಂಪೆನಿಯು ಹುಬ್ಬಳ್ಳಿಯಲ್ಲಿ ಮುಕ್ಕಾಮು ಮಾಡಿದಾಗ ಪುಷ್ಪಮಾಲಾ ಅವರು ಸೇರಿದರು. ಇಷ್ಟೊತ್ತಿಗೆ ಅವರ ಅಜ್ಜನ ಕಂಪೆನಿಯು ಬಂದ್ ಆಗಿತ್ತು. ಆರಂಭದಲ್ಲಿ ಬಾಲಕನ ಪಾತ್ರ ಮಾಡುತ್ತಿದ್ದ ಅವರು, 10-11ನೇ ವಯಸ್ಸಿನಲ್ಲಿ ‘ಅತ್ತೆ-ಸೊಸೆ’ ನಾಟಕದ ಕಾಲೇಜು ಹುಡುಗಿಯ ಪಾತ್ರ ಮಾಡುವ ಪ್ರಸಂಗ ಬಂತು. ಏಕೆಂದರೆ ಕಾಲೇಜು ಹುಡುಗಿಯ ಪಾತ್ರ ಮಾಡುವವರಿಗೆ ಅನಾರೋಗ್ಯ. ಅನಿವಾರ್ಯವಾಗಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದರು. ಆದರೆ 1968ರಲ್ಲಿ ಪಡೆಸೂರು ಕಂಪೆನಿ ಬಂದ್ ಆದ ಮೇಲೆ ಬೆಳವಣಿಕಿ ಕಂಪೆನಿ ಸೇರಿದರು. ಅಲ್ಲಿಯೇ ಇದ್ದ ಅಬ್ದುಲ್‌ಸಾಬ್ ಅಣ್ಣಿಗೇರಿ ಅವರನ್ನು ಮದುವೆಯಾದರು. ನಂತರ ಸುಳ್ಳದ ದೇಸಾಯಿ ಕಂಪೆನಿ, ಕಡಪಟ್ಟಿ ಕಂಪೆನಿ, ಜೋಶಿಯವರ ಕಂಪೆನಿ, ನರೇಗಲ್ಲ ಚನ್ನಬಸಯ್ಯನವರ ಕಂಪೆನಿ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಶ್ರೀ ಕುಮಾರ ವಿಜಯ ನಾಟ್ಯ ಸಂಘ, ಏಣಗಿ ಬಾಳಪ್ಪ ಅವರ ಕಲಾವೈಭವ ನಾಟ್ಯ ಸಂಘ, ಬಿ.ಆರ್. ಅರಿಶಿನಗೋಡಿ ಅವರ ಹುಚ್ಚೇಶ್ವರ ನಾಟ್ಯ ಸಂಘ, ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪೆನಿ, ಜೇವರ್ಗಿ ರಾಜಣ್ಣ ಅವರ ಕಂಪೆನಿ ಸೇರಿದಂತೆ ಬೇರೆ ಬೇರೆ ಕಂಪೆನಿಗಳಿಗೆ ಅಲೆದು ಕೊನೆಗೆ ವೀರೇಶ್ವರ ಕಂಪೆನಿ ಸೇರಿದರು. ಬಳಿಕ ಹವ್ಯಾಸಿ ಕಲಾವಿದೆಯಾಗಿ ಸಂಚರಿಸುತ್ತಿದ್ದಾರೆ.

ಅವರ ಒಬ್ಬನೇ ಮಗ ಮುಹಮ್ಮದ್ ಇಸ್ಮಾಯೀಲ್ ಸಲುವಾಗಿ 1973ರಿಂದ ಹುಬ್ಬಳ್ಳಿಯಲ್ಲಿ ನೆಲೆಯೂರಿ, ಹವ್ಯಾಸಿ ಕಲಾವಿದರಾದರು. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿರುವ ಅವರಿಗೆ ಅನುಭವಗಳೂ ದಟ್ಟ. ಬೆಳವಣಿಕಿ ಕಂಪೆನಿಯಲ್ಲಿದ್ದಾಗ ‘ಭಲೇ ಮಗಳು’ ನಾಟಕದ ಪ್ರಿಯಾ ಪಾತ್ರಕ್ಕೆ ಬಣ್ಣ ಹಚ್ಚಿಕೊಳ್ಳುವಾಗ ಅವರ ಚಿಕ್ಕಮ್ಮನ ಮಗಳು ರಾಜೇಶ್ವರಿ ತೀರಿಕೊಂಡ ಸುದ್ದಿ ಬಂತು. ‘ಆದ್ರೂ ನಾಟಕ ಮುಗಿಸಿಕೊಂಡು ಮಣ್ಣಿಗೆ ಹೋದೆ’ ಎನ್ನುತ್ತಾರೆ ಅವರು. ಇನ್ನೊಮ್ಮೆ 1976ರಲ್ಲಿ ನಾಟಕವಾಡಲು ಉಡುಪಿಗೆ ಹೋಗಬೇಕಿತ್ತು. ಆಹ್ವಾನಿಸಿದವರು ಕಾರು ತೆಗೆದುಕೊಂಡು ಬಂದಾಗ ಅವರ ಅತ್ತೆ ತೀರಿಕೊಂಡರು. ಅವರ ಅಂತ್ಯಕ್ರಿಯೆ ಮುಗಿಸಿದ ಮೇಲೆ ಕಾರು ಹತ್ತಿದರು.

ಅವರ ತಂಗಿಯರಾದ ಸಾವಿತ್ರಮ್ಮ ಬಳ್ಳಾರಿ, ಗಾಯತ್ರಿ, ಯಶೋದಾ ಕಲಾವಿದರು. ಇವರ ಮಕ್ಕಳೆಲ್ಲ ಕಲಾವಿದರು. ಆದರೆ ಅವರ ಒಬ್ಬನೇ ಮಗ ಮುಹಮ್ಮದ್ ಅವರಿಗೆ ರಂಗಭೂಮಿಯಲ್ಲಿ ಆಸಕ್ತಿಯಿದ್ದರೂ ತೊಡಗಿಸಲಿಲ್ಲ. ಹೀಗಾಗಿ ಅವರು ಖಾಸಗಿ ಕಂಪೆನಿಯ ಉದ್ಯೋಗಿ. ಅವರನ್ನು ಪ್ರೀತಿಯಿಂದ ಬಾಬು ಎಂದು ಕರೆಯುತ್ತಾರೆ.

ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಅಬ್ದುಲ್‌ಸಾಬ್ ಅವರು ಕೆಲ ವರ್ಷಗಳ ಹಿಂದೆ ತೀರಿಕೊಂಡರು. ಪುಷ್ಪಮಾಲಾ ಅವರಿಗೆ ಈಗ 73 ವರ್ಷ ವಯಸ್ಸು. ಈಗಲೂ ರಕ್ತರಾತ್ರಿ, ಹೇಮರಡ್ಡಿ ಮಲ್ಲಮ್ಮ, ರೇಣುಕಾ ಎಲ್ಲಮ್ಮ, ಜಗಜ್ಯೋತಿ ಬಸವೇಶ್ವರ, ಶಿವಾಜಿ, ಫಕೀರೇಶ್ವರ ಮಹಾತ್ಮೆ ನಾಟಕಗಳಿಗೆ ಬಣ್ಣ ಹಚ್ಚುತ್ತಾರೆ.

‘‘ಅವ್ವನ ಕೂಡ ಕಂಪೆನಿಯೊಳಗ ಇರ್ತಿದ್ದೆ. ಹಿಂಗಾಗಿ ಸಾಲಿಗೆ ಹೋಗಲಿಲ್ರಿ. ನಾಟಕ ಕಂಪೆನಿಯೊಳಗ ಸಣ್ಣ ಸಣ್ಣ ಪಾತ್ರ ಕೊಡ್ತಿದ್ರು. ಧುತ್ತರಗಿ, ಮಾಂಡ್ರೆ, ಎಚ್.ಎನ್. ಹೂಗಾರ, ಮಹಾಂತೇಶ ಶಾಸ್ತ್ರಿಗಳು ನಾಟಕ ಬರೆದುಕೊಂಡು ಕಂಪೆನಿಗೆ ಬಂದು ಎಲ್ಲರೆದುರು ಓದೋರು. ಮಾಲಕರು ಒಪ್ಪಿದ ಮ್ಯಾಲ ತಿಂಗಳುಗಟ್ಟಲೆ ಇದ್ದು ನಿರ್ದೇಶನ ಮಾಡ್ತಿದ್ರು. ಮೂರು ತಿಂಗಳವರೆಗೆ ನಾಟಕ ಕಲಿಸೋರು. ಎಲ್ಲಾ ಪಾತ್ರಗಳನ್ನು ಹಂಚಿ, ಮಾತು ಕಲಿಸ್ತಾಯಿದ್ರು. ಆಗೆಲ್ಲ ರಾತ್ರಿ ಎರಡು ಗಂಟೆಗೆ ನಾಟಕ ಮುಗಿದ ಮ್ಯಾಲ ಹೊಸ ನಾಟಕದ ಡ್ರೆಸ್ ಹಾಕ್ಕೊಂಡು ಬೆಳಗ್ಗೆ ತನಕ ತಾಲೀಮು ಮಾಡ್ತಿದ್ವಿ. ಗದಗದಿಂದ ಪಟ್ಟಣಶೆಟ್ಟಿ, ಕಲಕೇರಿ ಗುರುಸ್ವಾಮಿಗಳು ಬಂದು ಕವಿಗಳು ಬರೆದ ಹಾಡುಗಳಿಗೆ ಧಾಟಿ ಅಂದ್ರ ಸಂಗೀತ ಅಳವಡಿಸಿ ನಮ್ಮ ಕಡೆಯಿಂದ ಹಾಡಸ್ತಿದ್ರು. ಆಗೆಲ್ಲ ಸಿನೆಮಾ ಹಾಡುಗಳಿಗೆ ಅವಕಾಶ ಇರಲಿಲ್ಲ. ಶಾಸ್ತ್ರೀಯ ಸಂಗೀತ ಇಲ್ಲವೇ ಲಘು ಸಂಗೀತದ ಹಾಡು ಕಲಿಸ್ತಾ ಇದ್ರು. ಆಗೆಲ್ಲ ಛಲೊ ಇತ್ತು. ಚೆಂದ ಅನ್ನಿಸೋದು. ನಮ್ಮ ಪಾರ್ಟುಗಳೆಲ್ಲ ಕವಿಗಳಿಗೆ ಸರಿ ಅನ್ನಿಸಿದರೆ ದಿನಾಂಕ ನಿರ್ಧಾರ ಮಾಡಿ ನಾಟಕ ಆಡಿಸೋರು’’ ಎಂದು ನೆನಪಿಗೆ ಜಾರಿದರು ಪುಷ್ಪಮಾಲಾ.

‘‘ಪಡೆಸೂರು ಕಂಪೆನಿಯಲ್ಲಿದ್ದಾಗ 12-13 ವರ್ಷ ವಯಸ್ಸಿನವಳು. ಆಗ ಎಚ್.ಎನ್. ಹೂಗಾರ ಅವ್ರ ಹೊಡೆದು, ಬಡಿದು ಕಲಿಸೋರು. ಅದು ಗುರುವಿದ್ಯೆ. ಈಗಿನ ಕಲಾವಿದೆಯರು ಏನು ಮಾಡ್ತಾರ ಅದೇ ಖರೇ ಆಗೇತಿ. ಸಿನೆಮಾ, ಧಾರಾವಾಹಿ, ಮೊಬೈಲ್ ಫೋನ್ ನೋಡ್ತಾರ ತಮಗ ತಿಳಿದಂಗ ಮಾಡ್ತಾರ. ಏನಾದ್ರೂ ತಿಳಿವಳಿಕೆ ಹೇಳಿದ್ರ ಕೇಳೂದಿಲ್ಲ. ಆಗ ನಮಗೆಲ್ಲ ಮೇಕಪ್ ಸಹಿತ ತಾಲೀಮು ಇರ್ತಿತ್ತು. ಇಂತಿಂಥ ಪಾತ್ರ ಹಿಂಗ ಮಾಡ್ಬೇಕು ಅಂತ ಹೇಳಿಕೊಡ್ತಿದ್ರು. ಈಗಿನವ್ರ ಹೇಳಿದ್ರೂ ಕೇಳೂದಿಲ್ಲ. ಈಗ ಯಾರಿಗೂ ಏನೂ ಹೇಳುವಂಗಿಲ್ಲ. ನನ್ನ ಪಾಡಿಗೆ ನಾನು ಪಾತ್ರ ಮಾಡಿಬರ್ತೀನಿ. ನಾಟಕದ ದಿನವೇ ಪುಸ್ತಕ ತಗೊಂಡು ಈಗಿನವ್ರ ಹೋಗ್ತಾರ. ಯಾವ ನಾಟಕ? ಯಾವ ಪಾತ್ರ ಗೊತ್ತಿರೋದಿಲ್ಲ! ದುರಂತವಿದು.’’

‘‘ಆಗೆಲ್ಲ ಹಳ್ಳಿಗಳಿಗೆ ಎಂಟತ್ತು ದಿನಗಳವರೆಗೆ ತಾಲೀಮು ಇರ್ತಿತ್ತು. ನಾಟಕ ಆದ ಮ್ಯಾಲ 100-150 ರೂಪಾಯಿ ಕೊಡ್ತಿದ್ರು. ಆ ದಿನಗಳೇ ಬೇರೆ. ಆ ಜನರ ನಡವಳಿಕೆ, ವಿಶ್ವಾಸ, ಗೌರವ ಮೆಚ್ಚಬೇಕು. ಹುಬ್ಬಳ್ಳಿಗೆ ಬಂದರೆ ಕಾಳುಕಡಿ ತಂದುಕೊಡ್ತಿದ್ರು. ಈಗಲೂ ಪಾತ್ರಕ್ಕ ಕರೀತಾರ. ವಿಶ್ವಾಸದಿಂದ ಕಾಣ್ತಾರ. ಆದ್ರ ಈಗಿನವ್ರ ಹೆಂಗೆಂಗೋ ಪಾತ್ರ ಮಾಡ್ತಾರ. ಸಿನೆಮಾ ಹಾಡು ಹಾಡಿದಾಗ ಪ್ರೇಕ್ಷಕರೆಲ್ಲ ಹೋ ಅಂದು ಸೀಟಿ ಹೊಡೆದಾಗ ಕಲಾವಿದೆಯರು ಖುಷಿಯಾಗ್ತಾರ. ಸಂಭಾಷಣೆ ಬರಲಿ, ಬರದಿರಲಿ ಹೆಂಗೊ ನಾಟಕ ಮುಗಿಸಿ ಬರ್ತಾರ. ನಾಟಕ ಇದ್ದ ದಿನವೇ ರಾತ್ರಿ ಹತ್ತು ಗಂಟೆ ಹೊತ್ತಿಗೆ ಹೋಗ್ತಾರ. ಈಗಂತೂ ತಮ್ಮ ಪಾತ್ರಕ್ಕ ಕಲಾವಿದೆಯರು ಹಾಡಬೇಕಂತಿಲ್ಲ. ವಾದ್ಯಗಾರರೇ ಸಂಗೀತ ನೀಡಿ, ಹಾಡೂ ಹಾಡ್ತಾರ. ಹಿಂಗಾಗಿ ಕಲಾವಿದರು ಹಾಡೋದು ತಪ್ಪಿದೆ. ರಾಗ-ತಾಳದ ಜ್ಞಾನ ಇಲ್ಲ. ನಮ್ಮಂಥವ್ರ ಹೋದ್ರ ಈಗಿನವ್ರ ಮುಜುಗರ ಅನುಭವಿಸ್ತಾರ’’’ ಎನ್ನುತ್ತಾರೆ ಪುಷ್ಪಮಾಲಾ.

ಇಂತಹ ಅಪರೂಪದ ಕಲಾವಿದೆಯಾದ ಪುಷ್ಪಮಾಲಾ ಅವರ ಕುರಿತು ಬರೆಯಲು ಕಾರಣವಿದೆ. ಧಾರವಾಡದ ವಿದ್ಯಾವರ್ಧಕ ಸಂಘವು ನಿನ್ನೆ ಅಂದರೆ ಜೂನ್ 6ರಂದು ಧಾರವಾಡದಲ್ಲಿ ಏರ್ಪಡಿಸಿದ್ದ ಡಾ.ವೀರಣ್ಣ ರಾಜೂರ ದತ್ತಿ ಕಾರ್ಯಕ್ರಮದಲ್ಲಿ ಅವರಿಗೆ ‘ರಾಜಮಾರ್ಗ’ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಡಾ.ವೀರಣ್ಣ ರಾಜೂರ ಅವರ ದತ್ತಿ ಕಾರ್ಯಕ್ರಮ. ದತ್ತಿ ದಾನಿಗಳು ಅವರ ವಿದ್ಯಾರ್ಥಿ ಬಳಗ. ಡಾ.ರಾಜೂರ ಅವರ ವಿದ್ಯಾರ್ಥಿಗಳೆಲ್ಲ ಸೇರಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಿ, ಅದರಿಂದ ಪ್ರತಿ ವರ್ಷ ಸಾಧಕರಿಗೆ ‘ರಾಜಮಾರ್ಗ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X