Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಸಮಕಾಲೀನವಾಗುವ ತಾಜಾತನದ ‘ಸೂರ್ಯಶಿಕಾರಿ’

ಸಮಕಾಲೀನವಾಗುವ ತಾಜಾತನದ ‘ಸೂರ್ಯಶಿಕಾರಿ’

ವಾರ್ತಾಭಾರತಿವಾರ್ತಾಭಾರತಿ24 July 2026 3:31 PM IST
share
ಸಮಕಾಲೀನವಾಗುವ ತಾಜಾತನದ ‘ಸೂರ್ಯಶಿಕಾರಿ’

ನಾಟಕ: ಸೂರ್ಯಶಿಕಾರಿ

ಬಂಗಾಳಿ ಮೂಲ: ಉತ್ಪಲ್ ದತ್

ಕನ್ನಡಕ್ಕೆ: ಎಂ.ಪಿ. ಪ್ರಕಾಶ್

ವಿನ್ಯಾಸ, ನಿರ್ದೇಶನ: ಹುಲುಗಪ್ಪ ಕಟ್ಟಿಮನಿ

ನಿರ್ಮಾಣ: ಎಂ.ಪಿ. ಸುಮಾ ವಿಜಯ್

ತಂಡ: ರಂಗಭಾರತಿ

ಸಂಗೀತ ಸಂಯೋಜನೆ: ಶ್ರೀನಿವಾಸ್ ಭಟ್ ಚೀನಿ, ದಿಗ್ವಿಜಯ ಹೆಗ್ಗೋಡು.

ವಸ್ತ್ರವಿನ್ಯಾಸ: ಪ್ರಮೋದ್ ಶಿಗ್ಗಾಂವ

ಪರಿಕರ: ಪ್ರಶಾಂತ್ ಹೆಬ್ಬಸೂರು

ಸಂಗೀತ ನಿರ್ವಹಣೆ: ಮುಹಮ್ಮದ್ ಸಾಧ್

ಬೆಳಕಿನ ವಿನ್ಯಾಸ: ಮಧು ಸೊಪ್ಪಿನ್

ಬೆಳಕಿನ ನಿರ್ವಹಣೆ: ನವೀನ್ ಹಡಗಲಿ

ಪ್ರಸಾಧನ: ಸಂತೋಷ್ ಮಹಾಲೆ

ರಂಗದ ಮೇಲೆ: ಟಿ.ಪಿ. ವೀರೇಂದ್ರ ಪಾಟೀಲ, ಆಸಿಫ್ ಹಡಗಲಿ, ವಾಗೀಶ್ ಕೊಟ್ರಗೌಡ್ರು, ಸಂತೋಷ್ ಗಾರಗೌಡ್ರು, ಮುದ್ದಿನವೀನ್, ಕೊಟ್ರಸ್ವಾಮಿ ಪಿ.ಎಂ., ಯಶವಂತ ನಾಯ್ಕ್ ಎಲ್.ಜಿ., ಮಂಜುನಾಥ್ ಪಾಟೀಲ, ಅಜಯ್ ಚ., ದಾನಪ್ಪ ಟಿ., ಜಯಣ್ಣ ಕೋಡಿಹಳ್ಳಿ, ರೋಹಿಣಿ ಹಾಸನ, ಅಶ್ವಿನಿ ಎಂ., ಅಕ್ಷತಾ ಕುಮಟಾ, ಹರ್ಷ ಮುಲ್ಕಿ ಒಡೆಯರ್, ಗುರುಬಸವರಾಜ, ಮಂಜುನಾಥ್ ಓಲಿ, ಬಿ.ಎಂ. ದೊಡ್ಡಬಸವಯ್ಯ.

ಬರೊಬ್ಬರಿ 41 ವರ್ಷಗಳ ಹಿಂದೆ ಮೊದಲ ಬಾರಿಗೆ ಪ್ರದರ್ಶನ ಗೊಂಡ ನಾಟಕವು ಮತ್ತೆ ಪ್ರದರ್ಶನಗೊಂಡರೆ ಅದರ ತಾಜಾತಾನವೇ ಕಾರಣ. ಜೊತೆಗೆ ಅದು ಸಮಕಾಲೀನವಾಗುವ ಸಾಧ್ಯತೆಯಿಂದಾಗಿ. ಅದು ಸೂರ್ಯಶಿಕಾರಿ ನಾಟಕ. ಈ ನಾಟಕವು ಮೊನ್ನೆ ಅಂದರೆ ಜುಲೈ 21ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅದರ 137ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರದರ್ಶನಗೊಂಡು ಯಶಸ್ವಿಯಾಯಿತು.

1985ರಲ್ಲಿ ರಂಗಕರ್ಮಿ ಎಲ್. ಕೃಷ್ಣಪ್ಪ ಅವರು ಈ ನಾಟಕವನ್ನು ನಿರ್ದೇಶಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನ ನಾಟ್ಯ ಮಂಡಳಿಯ ತಂಡದ ಮೂಲಕ ಪ್ರದರ್ಶಿಸಿ ಗಮನ ಸೆಳೆದಿದ್ದರು. ಉತ್ಪಲ್ ದತ್ತ ಅವರು ಮೂರೂವರೆ ಗಂಟೆಗಳವರೆಗೆ ಕೊಲ್ಕತಾದಲ್ಲಿ ತಮ್ಮ ತಂಡದ ಮೂಲಕ ಜಾತ್ರಾ ಶೈಲಿಯಲ್ಲಿ ನಾಟಕ ಪ್ರದರ್ಶಿಸಿದ್ದರೆ, ಎಲ್.ಕೃಷ್ಣಪ್ಪ ಅವರು ಆಧುನಿಕ ಶೈಲಿಯಲ್ಲಿ ನಿರ್ದೇಶಿಸಿದ್ದರು. ಈ ನಾಟಕವು ಪ್ರಸಿದ್ಧವಾಯಿತು, ಜೊತೆಗೆ ಎಲ್.ಕೃಷ್ಣಪ್ಪ ಕೂಡಾ ಪ್ರಸಿದ್ಧರಾದರು. ಕವಿ ಸಿದ್ದಲಿಂಗಯ್ಯ ಅವರು ಈ ನಾಟಕಕ್ಕೆಂದೇ ಹಾಡುಗಳನ್ನು ಬರೆದರು.

ಈ ನಾಟಕವನ್ನು 1987ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಸಂಪಿಗೆ ತೋಂಟದಾರ್ಯ ಅವರು ಹುಬ್ಬಳ್ಳಿ-ಧಾರವಾಡ ಸಮುದಾಯಕ್ಕೆ ಈ ನಾಟಕವನ್ನು ನಿರ್ದೇಶಿಸಿದ್ದರು. ಮಹಾರಾಜ ಸುಮುದ್ರಗುಪ್ತನಾಗಿ ಈಶ್ವರ ಬಸವರೆಡ್ಡಿ, ಹಯಗ್ರೀವನಾಗಿ ಪ್ರಭುಸ್ವಾಮಿ ಮಳಿಮಠ, ಕಲ್ಹಣನನಾಗಿ ಮಧ್ವರಾಜ, ವಿದೂಷಕನ ಪಾತ್ರದಲ್ಲಿ ಡಾ. ಎಚ್.ಎ. ಪಾರ್ಶ್ವನಾಥ್ ಮಿಂಚಿದ್ದರು. ಇದೇ ನಾಟಕವನ್ನು 1987ರಲ್ಲಿ ಬಳ್ಳಾರಿ ಸಮುದಾಯ ತಂಡಕ್ಕೆ ಜನ್ನಿ ನಿರ್ದೇಶಿಸಿದ್ದರು. ಹೀಗೆ ಈ ನಾಟಕವು ವಿವಿಧೆಡೆ ಪ್ರಯೋಗಗೊಂಡಿದೆ.

ಮತ್ತೆ ಇದೇ ನಾಟಕವನ್ನು ಎಂ.ಪಿ. ಪ್ರಕಾಶ್ ಅವರ ಪುತ್ರಿ ಎಂ.ಪಿ. ಸುಮಾ ವಿಜಯ್ ಅವರು ತಮ್ಮ ಊರಾದ ಹೂವಿನಹಡಗಲಿಯ ತಮ್ಮದೇ ರಂಗ ಭಾರತಿ ತಂಡದ ಮೂಲಕ ನಿರ್ಮಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ; ಇಲ್ಲಿನ ಹೆಚ್ಚಿನ ಕಲಾವಿದರೆಲ್ಲ ಹೂವಿನಹಡಗಲಿಯವರೇ. ಎರಡು ಗಂಟೆಗಳ ನಾಟಕವನ್ನು ಎಲ್ಲೂ ಬೇಸರವಾಗದ ಹಾಗೆ ಹುಲುಗಪ್ಪ ಕಟ್ಟಿಮನಿ ಕಟ್ಟಿಕೊಟ್ಟಿದ್ದಾರೆ.

ಜಾತಿ, ಧರ್ಮ ಹಾಗೂ ಅಧಿಕಾರವು ಈಗಲೂ ಈ ದೇಶವನ್ನು ಹೇಗೆ ಕಾಡುತ್ತಿವೆ ಎನ್ನುವುದನ್ನು ತಿಳಿಸುವ ಈ ನಾಟಕದ ವಸ್ತು ಪ್ರಸ್ತುತವಾಗುತ್ತದೆ. ಮುಖ್ಯವಾಗಿ ಚಕ್ರವರ್ತಿ ಸಮುದ್ರಗುಪ್ತ ಹಾಗೂ ಬೌದ್ಧಭಿಕ್ಷು ಕಲ್ಹಣನ ನಡುವಣ ಸಂಘರ್ಷದ ಅನಾವರಣವಿದೆ. ಅದೆಂದರೆ; ಭೂಮಿ ಗುಂಡಗಿದೆ ಎಂದು ಪ್ರತಿಪಾದಿಸುವ ಕಲ್ಹಣನ ವಾದವನ್ನು ಒಪ್ಪಿಕೊಳ್ಳದ ಚಕ್ರವರ್ತಿ ಸಮುದ್ರಗುಪ್ತ ಭೂಮಿ ಚಪ್ಪಟೆಯಾಗಿದೆ ಎಂದು ಪ್ರತಿಪಾದಿಸು ಎಂದು ಒತ್ತಾಯಿಸುತ್ತ, ಹಿಂಸಿಸುತ್ತಾನೆ. ಈ ಮೂಲಕ ಧರ್ಮ ಮತ್ತು ವಿಜ್ಞಾನದ ನಡುವೆ ನಡೆಯುವ ಸಂಘರ್ಷ ಇಲ್ಲಿದೆ. ಇದರೊಂದಿಗೆ ಪ್ರೀತಿ, ಕಾಮ, ಶೋಷಣೆಯ ಅನಾವರಣವೂ ಇದೆ.

ಕಲ್ಹಣನ ಶಿಷ್ಯೆಯಾದ ಇಂದ್ರಾಣಿಯನ್ನು ಬಂಧಿಸಲು ಮಹಾರಾಜ ಸಮುದ್ರಗುಪ್ತ ಆಜ್ಞಾಪಿಸುತ್ತಾನೆ. ಆಗ ಇಂದ್ರಾಣಿ ಪರವಾಗಿ ದಂಡನಾಯಕ ಹಯಗ್ರೀವ ನಿಲ್ಲುತ್ತಾನೆ. ಬಳಿಕದ ದೃಶ್ಯದಲ್ಲಿ ಮಹಾರಾಣಿ ಊರ್ಮಿಳೆ ಹಾಗೂ ಹಯಗ್ರೀವನ ಭೇಟಿ. ‘‘ಅಂತಃಪುರಕ್ಕೆ ಬರಲು ಆಜ್ಞಾಪಿಸಿದರೂ ಏಕೆ ಬರಲಿಲ್ಲ?’’ ಎಂದು ಊರ್ಮಿಳೆ ಕೇಳಿದಾಗ ‘‘ಬೇರೆ ಕೆಲಸವಿತ್ತು’’ ಎನ್ನುತ್ತಾನೆ ಹಯಗ್ರೀವ. ‘‘ಈ ಸಾಮ್ರಾಜ್ಞಿಯ ಆಜ್ಞೆಯನ್ನು ಮೀರುವಷ್ಟು ಕೆಲಸವೆ? ನಿನ್ನ ಎಲ್ಲಾ ಹೆಂಗಸರನ್ನು ಪತ್ತೆ ಹಚ್ಚಿ ನಾಳೆಯಿಂದ ಒಬ್ಬೊಬ್ಬರನ್ನು ಕೊಲ್ಲಿಸುವವರೆಗೂ ನನಗೆ ಸಮಾಧಾನ ಇಲ್ಲ’’ ಎನ್ನುತ್ತಾಳೆ. ‘‘ಹಾಗಾದ್ರೆ ನನ್ನೊಂದಿಗೆ ಒಂದು ರಾತ್ರಿ ಜೊತೆಗಿರಲು ಒಪ್ಪುವೆಯಾ?’’ ಎಂದು ಕೇಳುತ್ತಾಳೆ. ‘‘ನಾನು ಮಹಾರಾಜರ ಸೇವಕ. ಆತನ ಧರ್ಮಪತ್ನಿ ಆತನಿಗೆ ದ್ರೋಹ ಬಗೆಯಬಹುದು. ಆದರೆ ಸೇವಕನೆಂದಿಗೂ ದ್ರೋಹ ಬಗೆಯಲಾರ’’ ಎಂದು ಸ್ಪಷ್ಟಪಡಿಸಿ ಹೊರಡುತ್ತಾನೆ. ಆಮೇಲೆ ಬರುವ ದುರ್ಧರ, ಶಿಶುಮಾರ ಹಾಗೂ ವಿರೂಪಾಕ್ಷ ಅವರೊಂದಿಗೆ ಇಂದ್ರಾಣಿ ಕುರಿತು ಮಹಾರಾಣಿ ಊರ್ಮಿಳೆ ವಿಚಾರಿಸುತ್ತಾಳೆ. ಹೀಗೆ ಸಾಗುವ ನಾಟಕದಲ್ಲಿ ಭೂಮಿ ಗುಂಡಗಿದೆ ಎಂದು ಸಾರುವ ಆಚಾರ್ಯ ಕಲ್ಹಣನನ್ನು ಮಹಾರಾಜ ಸಮುದ್ರಗುಪ್ತ ಕರೆಸುತ್ತಾನೆ. ಆಗ ಬಸುಬಂಧು ‘‘ರಾಜಕಾರಣ ಹಾಗೂ ರಾಜ್ಯದ ಹಿತಕ್ಕಾಗಿ ಸತ್ಯವನ್ನು ತಿರುಚಬೇಕಾಗುತ್ತದೆ. ನಿಮ್ಮ ಶೂನ್ಯವಾದ ಹಾಗೂ ವಿಜ್ಞಾನ ನಮ್ಮ ಪುರೋಹಿತಶಾಹಿಯನ್ನೇ ಅಲುಗಾಡಿಸುತ್ತದೆ. ಗುಲಾಮರನ್ನು ಬಂಡೇಳುವಂತೆ ಪ್ರಚೋದಿಸುತ್ತದೆ’’ ಎನ್ನುತ್ತಾನೆ. ನಂತರ ಸಮುದ್ರಗುಪ್ತ ‘‘ರಾಜ್ಯದ ಎಲ್ಲ ವಿದ್ವಾಂಸರು ಕಲೆತು ಕಲ್ಹಣನ ಸಿದ್ಧಾಂತ ಸುಳ್ಳಾಗಿಸಬೇಕು. ಆತನ ಸಿದ್ಧಾಂತ ಸುಳ್ಳಾಗಿಸಬೇಕಾದರೆ ಆತ ಸಾಯಬೇಕು. ಏಕೆಂದರೆ ಸೂರ್ಯಶಿಕಾರಿ ಮಾಡುವ ನನ್ನ ಹಕ್ಕನ್ನು ಅವನು ಕಸಿದುಕೊಳ್ಳುತ್ತಿದ್ದಾನೆ. ರಾಜನೋರ್ವನೇ ಸೂರ್ಯ ಬೇಟೆ ಆಡಬಲ್ಲ; ಇಂತಹ ಸನ್ಯಾಸಿಯಲ್ಲ’’ ಎಂದು ಸ್ಪಷ್ಟಪಡಿಸುತ್ತಾನೆ.

ಅತ್ತ ಇಂದ್ರಾಣಿಯ ಬಳಿ ಸಾಗುವ ಹಯಗ್ರೀವ ‘‘ಅರಮನೆಯಿಂದ ಆಚೆ ಹೊರಡು ಇಲ್ಲದಿದ್ದರೆ ಕೊಲ್ಲುತ್ತಾರೆ’’ ಎಂದು ಎಚ್ಚರಿಸುತ್ತಾನೆ. ಆದರೆ ಇಂದ್ರಾಣಿ ಬೆದರುವುದಿಲ್ಲ. ಆಗ ಹಯಗ್ರೀವ ‘‘ನಾನು ನಯನಾಜೂಕಿನಿಂದ ಬೆಳೆಯಲಿಲ್ಲ. ಲವಲವಿಕೆಯಿಂದ, ಪ್ರೀತಿಪ್ರೇಮಗಳಿಂದ ಕಿವಿಯಲ್ಲಿ ಪಿಸುಗುಡುವ ಜಾಣ್ಮೆ ಕಲಿತಿಲ್ಲ. ನಿನಗೆ ಹೇಗೆ ಹೇಳಬೇಕೋ ತಿಳಿಯದಾಗಿದೆ. ನನ್ನನ್ನು ಏಕೆ ಪ್ರೀತಿಸುವುದಿಲ್ಲ?’’ ಎಂದು ಕೇಳುತ್ತಾನೆ. ಇದಕ್ಕೆ ಇಂದ್ರಾಣಿ ‘‘ಹೂಗಳ ಪಕಳೆಗಳನ್ನು ಹಿಸುಕಿ ಬಿಸಾಡಿಬಿಡುತ್ತೀರಿ. ಅದಕ್ಕಾಗಿಯೇ ನೀವು ಪ್ರೀತಿಯನ್ನು ಆಜ್ಞಾಪಿಸಿ ತೆಗೆದುಕೊಳ್ಳುವಿರಿ. ನಿಮ್ಮ ಬಗ್ಗೆ ಕನಿಕರ ಬರುತ್ತದೆ. ವಿನಯವಿಲ್ಲದ ನೀವು ಯಾರನ್ನೂ ಪ್ರೀತಿಸಲಾರಿರಿ, ಯಾರೂ ನಿಮ್ಮನ್ನು ಪ್ರೀತಿಸಲಾರರು’’ ಎಂದು ಸ್ಪಷ್ಟಪಡಿಸುತ್ತಾಳೆ. ಆಗ ಹಯಗ್ರೀವ ಅವಳ ಬಳಿ ಕಾಲೂರಿ ಕುಳಿತು ‘‘ಕರಜೋಡಿಸಿ ನಿನ್ನ ಪದತಲದಲ್ಲಿ ಕುಳಿತು ಬೇಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಪ್ರೀತಿಸು. ನಾನು ನಿನ್ನನ್ನು ಪ್ರೀತಿಸಲು ಅನುಮತಿ ಕೊಡು. ಮುಳ್ಳಂಗಿಯಂತೆ ನನ್ನ ಮೇಲೆ ಕುಳಿತಿರುವ ಅಹಂಕಾರವನ್ನು ಅಳಿಸಿ ಹಾಕು’’ ಎಂದು ಬೇಡಿಕೊಳ್ಳುತ್ತಾನೆ. ‘‘ನಾನೊಬ್ಬ ಸಾಮಾನ್ಯ ಹೆಂಗಸು. ನನ್ನ ಮುಂದೆ ನೀವು ಕಾಲೂರಿ ಯಾಚಿಸಬಾರದು’’ ಎನ್ನುತ್ತಾಳೆ. ‘‘ನೀನು ಒಳ್ಳೆಯವನನ್ನಾಗಿ ಮಾಡಿದೆ’’ ಎನ್ನುವ ಹಯಗ್ರೀವನಿಗೆ ‘‘ನಿಮ್ಮನ್ನು ಮನಸಾರೆ ಪ್ರೀತಿಸಲಾರೆ’’ ಎನ್ನುತ್ತಾಳೆ. ಆಗ ಬರುವ ಮಹಾರಾಜ ಸಮುದ್ರಗುಪ್ತ, ಮಹಾರಾಣಿ ಊರ್ಮಿಳೆ ಹಾಗೂ ವಿರೂಪಾಕ್ಷ ಚರ್ಚಿಸಿ ಕಲ್ಹಣನ ವಿರುದ್ಧ ಸಾಕ್ಷಿ ನುಡಿಯಲು ಇಂದ್ರಾಣಿಯನ್ನು ಒತ್ತಾಯಿಸುತ್ತಾರೆ. ಒಪ್ಪದಾಗ ಆನೆಯ ಕಾಲಿನಿಂದ ಸಾಯಿಸಲು ತೀರ್ಮಾನಿಸುತ್ತಾರೆ. ಆಗ ಆಕೆಯ ಪರವಾಗಿ ಹಯಗ್ರೀವ ನಿಲ್ಲುತ್ತಾನೆ. ಕಲ್ಹಣ ಕೂಡಾ ‘‘ನಾನು ನನ್ನ ಸಿದ್ಧಾಂತಗಳನ್ನು ಅಲ್ಲಗಳೆಯಬಹುದು. ಆದರೆ ನಿಮ್ಮ ಮೌಢ್ಯ ಹಾಗೂ ಮೂಢನಂಬಿಕೆಗಳು ಎನಿತು ಕಾಲ ಜನಗಳನ್ನು ಕತ್ತಲಲ್ಲಿ ಇಡಬಲ್ಲವು. ಇಂದಿನ ಸೌಖ್ಯಕ್ಕಾಗಿ ನಾಳೆಯನ್ನು ಮೋಸ ಮಾಡಲಾರೆ. ಇಂದ್ರಾಣಿ ಜೀವ ಉಳಿಸಲು ನಾನು ನಾಳೆಯನ್ನು ಹಾಳುಗೆಡವಲಾರೆ. ಸ್ವತಃ ಇಂದ್ರಾಣಿಯೇ ಇದನ್ನು ಒಪ್ಪಲಾರಳು’’ ಎನ್ನುತ್ತಾನೆ. ಆಗ ಇಂದ್ರಾಣಿಯನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತದೆ. ಆಗ ಹಯಗ್ರೀವ ‘‘ಒಂದು ಬಾರಿ ಸುಳ್ಳು ಹೇಳು. ದೂರ ಹೋಗೋಣ’’ ಎಂದು ಇಂದ್ರಾಣಿಯನ್ನು ಒತ್ತಾಯಿಸುತ್ತಾನೆ. ಆದರೆ ಆಕೆ ಒಪ್ಪುವುದಿಲ್ಲ. ಇಂದ್ರಾಣಿಯ ಸೇವಕಿ ಮಧುಕಾರಿಕಾ ಮಗ ವೀರಕನಿಗೆ ತನ್ನ ಕೈಯಲ್ಲಿನ ಉಂಗುರ ಕೊಟ್ಟು ‘‘ಪೂರ್ವಾಚಲದಲ್ಲಿರುವ ಬೌದ್ಧ ಸನ್ಯಾಸಿ ದೇವಾಂಗ ಸಂಗೋಪರನ್ನು ಕಾಣು. ಅವರು ಈ ಉಂಗುರವನ್ನು ನೋಡಿ ಕೆಲ ಪುಸ್ತಕ ಕೊಡುವರು. ಅವುಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಮಧುರಾಕ್ಕೆ ಹೋಗಿ ಆಚಾರ್ಯ ಪ್ರಶಜಯನ ಗುರುಕುಲದಲ್ಲಿ ಅಭ್ಯಸಿಸು’’ ಎಂದು ಹೇಳುತ್ತಾಳೆ. ‘‘ಯಾವ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳಿವು?’’ ಎಂದು ವೀರಕ ಕೇಳಿದಾಗ ‘‘ಜ್ಞಾನದ ದಿಗಂತಕ್ಕೆ ಸಂಬಂಧಿಸಿದವು. ನನ್ನ ಗುರು ಕಲಿಸಿದ ಶಾಶ್ವತ ಸತ್ಯಗಳನ್ನು ಆ ಪುಸ್ತಕಗಳಲ್ಲಿ ಬರೆದಿಟ್ಟಿದ್ದೇನೆ. ಅವುಗಳನ್ನು ಸೈನಿಕರ ಕೈಗೆ ಬೀಳದಂತೆ ಕಾಪಾಡು’’ ಎಂದು ಬೀಳ್ಕೊಡುತ್ತಾಳೆ. ಈಮೂಲಕ ಜ್ಞಾನ, ಶಾಶ್ವತ ಸತ್ಯಗಳು ಪರಂಪರಾಗತವಾಗಿ ಬರುತ್ತವೆ ಮತ್ತು ಉಳಿಯುತ್ತವೆ ಎಂಬುದನ್ನು ಈ ದೃಶ್ಯ ಬಿಂಬಿಸುತ್ತದೆ. ಬಳಿಕ ಆನೆಯ ಕಾಲಿಗೆ ಇಂದ್ರಾಣಿ ಹಾಗೂ ಹಯಗ್ರೀವನನ್ನು ಬಲಿ ಕೊಡುವುದನ್ನು ನೋಡದೆ ಮಹಾರಾಣಿ ಊರ್ಮಿಳೆ ಅಂತಃಪುರಕ್ಕೆ ಹೊರಟುನಿಂತಾಗ ‘‘ಕಾಮನೆ ತೀರಿಸಿಕೊಳ್ಳಲು ಹಯಗ್ರೀವನ ಹಿಂದೆ ಬಿದ್ದೆ. ನೀನು ನನ್ನ ಅರ್ಧಾಂಗಿಯೆಂಬ ಅಧಿಕಾರವನ್ನು ಎಂದೋ ಕಳೆದುಕೊಂಡಿರುವೆ. ಆದರೆ ನಾನು ಆಜ್ಞಾಪಿಸುವವರೆಗೆ ರಾಣಿಯ ಪೋಷಾಕನ್ನು ಹಾಕಿಕೊಂಡು ಪ್ರಜೆಗಳ ಕಣ್ಣಿಗೆ ಮಹಾರಾಣಿಯಾಗಿ ಕಂಗೊಳಿಸಬೇಕು’’ ಎಂದು ಆಜ್ಞಾಪಿಸುತ್ತಾನೆ. ಕೊನೆಗೆ ಕಲ್ಹಣನಿಗೆ ಕೊಟ್ಟ ಶಿಕ್ಷೆ ಯಾವುದು? ಕೊನೆಗೂ ಮಧುಕಾರಿಕಾ ಸಾರಿದ ಸಂದೇಶ ಏನು ಎನ್ನುವುದಕ್ಕೆ ನಾಟಕ ನೋಡಬೇಕು.

ಹೀಗೆ ಕನ್ನಡದ್ದೇ ಎನ್ನುವಷ್ಟು ಎಂ.ಪಿ.ಪ್ರಕಾಶ್ ಅವರ ಅನುವಾದ ಚೆನ್ನಾಗಿದೆ. ರಾಜ್ಯ, ರಾಜಕಾರಣ, ಪ್ರೇಮ-ಕಾಮಗಳ ತಿಕ್ಕಾಟ, ವಿಜ್ಞಾನ ಮತ್ತು ಮೌಢ್ಯದ ನಡುವಣ ಸಂಘರ್ಷಗಳ ಮೂಲಕ ಈ ನಾಟಕ ನೆನಪಲ್ಲಿ ಉಳಿಯುತ್ತದೆ. ಹಾಗೆ ನೆನಪಲ್ಲಿ ಉಳಿಯುವ ಹಾಗೆ ಕಲಾವಿದರೂ ಅಭಿನಯಿಸಿದ್ದಾರೆ.

Tags

sooryashikari
share
ವಾರ್ತಾಭಾರತಿ
ವಾರ್ತಾಭಾರತಿ
Next Story
X