Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಬದುಕುವ ಬಗೆ ಅರಿವ ಸಾಣೇಹಳ್ಳಿ ನಾಡಹಬ್ಬ

ಬದುಕುವ ಬಗೆ ಅರಿವ ಸಾಣೇಹಳ್ಳಿ ನಾಡಹಬ್ಬ

ಗಣೇಶ ಅಮೀನಗಡಗಣೇಶ ಅಮೀನಗಡ6 Nov 2026 9:40 AM IST
share
ಬದುಕುವ ಬಗೆ ಅರಿವ ಸಾಣೇಹಳ್ಳಿ ನಾಡಹಬ್ಬ

‘‘ಸತತ 30 ವರ್ಷಗಳ ಕಾಲ ಸಾಣೇಹಳ್ಳಿಯಲ್ಲಿ ನಾಟಕೋತ್ಸವವು ನಾಡಹಬ್ಬದಂತೆ ನಡೆಯುತ್ತಾ ಬಂದಿರುವುದು ಕನ್ನಡ ರಂಗಭೂಮಿ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ. ನಾಟಕೋತ್ಸವ ಎಂದರೆ ಕೇವಲ ನಾಟಕಗಳ ಪ್ರದರ್ಶನವಲ್ಲ. ನಾಟಕಗಳನ್ನು ನೆಪವಾಗಿಟ್ಟುಕೊಂಡು ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನಕ್ಕೆ ಬಿತ್ತುವುದು ಮುಖ್ಯ ಉದ್ದೇಶ. ಕಾಲ, ಕಾಯಕ, ಕಾಸು ಇವುಗಳಿಗೆ ಬೆಲೆ ಕೊಟ್ಟರೆ ಬದುಕಿನಲ್ಲಿ ಅದ್ಭುತ ಸಾಧನೆ ಸಾಧಿಸಲು ಸಾಧ್ಯ’’ ಎನ್ನುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳೊಂದಿಗೆ ಅವರ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುತ್ತಾರೆ.

ರಾಜ್ಯೋತ್ಸವದ ಸಂಭ್ರಮಕ್ಕೆ ಇಂಬು ಕೊಡುವಂತೆ ಸಾಣೇಹಳ್ಳಿಯಲ್ಲಿ 30ನೇ ನಾಟಕೋತ್ಸವ ನಡೆಯುತ್ತಿದ್ದು, ಇಂದು (ನವೆಂಬರ್ 6) ಕೊನೆಗೊಳ್ಳಲಿದೆ.

ಸಾಮಾನ್ಯವಾಗಿ ನವೆಂಬರ್ 2ರಿಂದ ಆರಂಭವಾಗುತ್ತಿದ್ದ ನಾಟಕೋತ್ಸವವು ಈ ಬಾರಿ ರಾಜ್ಯೋತ್ಸವ ದಿನದಂದೇ ಆರಂಭವಾಯಿತು. ರಾಜ್ಯೋತ್ಸವ ಆಚರಣೆ ಜೊತೆಗೆ ವಿಚಾರ ಮಾಲಿಕೆ, ವಿಚಾರ ಸಂಕಿರಣ ನಡೆದವು.

‘ದಾರಿ ನೂರಾರಿವೆ ಬೆಳಕಿನರಮನೆಗೆ’ ಎನ್ನುವ ಕವಿವಾಣಿಯಂತೆ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸಾವಿರಾರು ಪ್ರೇಕ್ಷಕರು ನಾಟಕೋತ್ಸವದಲ್ಲಿ ಭಾಗವಹಿಸಲೆಂದೇ ಬರುತ್ತಾರೆ. ನಾಟಕೋತ್ಸವ ನೋಡಲೆಂದೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾದಿಂದ ಯುವರೈತ ಅರವಿಂದ ಲೋಣಿ ಬಂದಿದ್ದರು. ‘‘ನಾಟಕೋತ್ಸವ ಅನ್ನೋ ಈ ಜಾತ್ರಿ ನೋಡಾಕ ಬಂದೀನ್ರಿ. ಪ್ರಸಾದ ಮಾಡಿ, ವಾರಗಟ್ಟಲೆ ನಾಟಕ ನೋಡಾಕ ಛಲೋ ಅನ್ನಸ್ತದರಿ’’ ಎಂದು ಉತ್ಸಾಹದಿಂದ ಹೇಳಿದ್ದನ್ನು ಮರೆಯಲಾಗದು.

ಇನ್ನು ಸ್ಥಳೀಯ ಹಿರಿಯ ರೈತ ಜೆ. ಮರುಳಸಿದ್ಧಪ್ಪ ಅವರು ‘‘ನಾಟಕೋತ್ಸವ ನೋಡುತ್ತಾ ಮನಸ್ಸು ಬದಲಾಯಿತು. ಜ್ಞಾನ ಬೆಳೆಯಿತು. ಕೆಟ್ಟದ್ದನ್ನು ಬಿಡ್ತೀವಿ, ಒಳ್ಳೇದನ್ನು ತಗೊಳ್ತೀವಿ. ಬೇರೆ ಬೇರೆ ಊರಿಂದ ಅತಿಥಿಗಳು ಬರ್ತಾರೆ. ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ಮಾಡುತ್ತೇವೆ’’ ಎಂದು ಖುಷಿಯಿಂದ ಹೇಳಿದರು.

ಈ ಬಾರಿ ಶಿವಸಂಚಾರದ ಕಲಾವಿದರಾದ ಬೆಳಗಾವಿ ಜಿಲ್ಲೆಯ ರಾಮದುರ್ಗದ ಭಗತ್ ಸಿಂಗ್ ಹಳಗೋಡಿ ‘‘ಕಳೆದ ವರ್ಷ ಶಿವಕುಮಾರ ರಂಗ ಪ್ರಯೋಗಶಾಲೆಯ ವಿದ್ಯಾರ್ಥಿಯಾಗಿ ನಾಟಕೋತ್ಸವದಲ್ಲಿ ಭಾಗವಹಿಸಿದ್ದೆ. ಈ ಬಾರಿ ಶಿವಸಂಚಾರದ ಕಲಾವಿದನಾಗಿ ಭಾಗವಹಿಸುತ್ತಿರುವುದಕ್ಕೆ ಭಾಳ ಸಂತೋಷ ಆಗ್ತದ. ಸಾವಿರಾರು ಜನರ ಎದುರು ನಾಟಕ ಪ್ರದರ್ಶಿಸಾಕ ಉತ್ಸಾಹ ಅದರಿ. ಅದು ಸುಲಭವಲ್ಲ ಅಂತ ಗೊತ್ತದರಿ’’ ಎನ್ನುವ ಅವರು ತಮ್ಮ ಸಂಗಾತಿಗಳೊಂದಿಗೆ ಬಿಡುವಿಲ್ಲದ ಕೆಲಸದ ನಡುವೆಯೂ ಮಾತನಾಡಿದರು.

ಇಲ್ಲಿನ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕರ್ತರ ಹಾಗೆ ಬ್ಯಾನರ್ ಕಟ್ಟುವುದರಿಂದ ಹಿಡಿದು ಅತಿಥಿಗಳನ್ನು ಸತ್ಕರಿಸುವುದು, ನಾಟಕ, ನೃತ್ಯರೂಪಕದಲ್ಲಿ ಭಾಗವಹಿಸುವುದು... ಹೀಗೆ ಅವರು ಗೊತ್ತಿಲ್ಲದೆ ರಂಗ ತರಬೇತಿ ಪಡೆಯುತ್ತಾರೆ. ಈ ಮೂಲಕ ಬದುಕುವ ಬಗೆಯನ್ನು ಅರಿಯುತ್ತಾರೆ.

ಇಲ್ಲಿನ ಕಲಾವಿದರಾದ ಎಚ್.ಎಸ್. ನಾಗರಾಜ, ಕೆ.ಜ್ಯೋತಿ, ಕೆ.ದಾಕ್ಷಾಯಿಣಿ, ಶರಣಕುಮಾರ್, ಪುನೀತ್ ಅವರು ವಚನಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಎದೆಯೊಳಗೆ ಇಳಿಯುತ್ತಾರೆ.

‘‘ಸತತ 30 ವರ್ಷಗಳ ಕಾಲ ಸಾಣೇಹಳ್ಳಿಯಲ್ಲಿ ನಾಟಕೋತ್ಸವವು ನಾಡಹಬ್ಬದಂತೆ ನಡೆಯುತ್ತಾ ಬಂದಿರುವುದು ಕನ್ನಡ ರಂಗಭೂಮಿ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ. ನಾಟಕೋತ್ಸವ ಎಂದರೆ ಕೇವಲ ನಾಟಕಗಳ ಪ್ರದರ್ಶನವಲ್ಲ. ನಾಟಕಗಳನ್ನು ನೆಪವಾಗಿಟ್ಟುಕೊಂಡು ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನಕ್ಕೆ ಬಿತ್ತುವುದು ಮುಖ್ಯ ಉದ್ದೇಶ. ಕಾಲ, ಕಾಯಕ, ಕಾಸು ಇವುಗಳಿಗೆ ಬೆಲೆ ಕೊಟ್ಟರೆ ಬದುಕಿನಲ್ಲಿ ಅದ್ಭುತ ಸಾಧನೆ ಸಾಧಿಸಲು ಸಾಧ್ಯ’’ ಎನ್ನುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳೊಂದಿಗೆ ಅವರ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುತ್ತಾರೆ.

ಇದಕ್ಕೆ ಸಾಕ್ಷಿಯಾದವರು ಸಾವಿರಾರು ಪ್ರೇಕ್ಷಕರು. ಅವರಲ್ಲಿ ಮೊದಲ ಬಾರಿಗೆ ಸಾಣೇಹಳ್ಳಿಗೆ ಬಂದ ಬೆಳಗಾವಿಯ ಹಿರಿಯ ಲೇಖಕ ಅಶೋಕ ಮಳಗಲಿ ಅವರು ‘‘ನಾಟಕದ ನವರಸಗಳೊಂದಿಗೆ ಬದುಕಿನ ಮೌಲ್ಯಗಳನ್ನು ಮೈಗೂಡಿಸಿಕೊಂಡ ನಾಟಕೋತ್ಸವ ನನ್ನ ಪಾಲಿಗೆ ಎಂದಿಗೂ ಅಚ್ಚಳಿಯದ ನೆನಪು. ಸಾವಿರಾರು ಜನರು ನೆರೆಯುವ ಸಮಾರಂಭದಲ್ಲಿ ಕಿಂಚಿತ್ತೂ ಗದ್ದಲವಿಲ್ಲದೆ ಕಾಯ್ದುಕೊಂಡ ಶಿಸ್ತು, ಸಂಯಮ ಮತ್ತು ಸಮಯನಿಷ್ಠೆ ನನ್ನ ಅಂತರಾಳದಲ್ಲಿ ಬಹುದೊಡ್ಡ ಕಂಪನವನ್ನುಂಟು ಮಾಡಿದೆ. ಮೊದಲ ಬಾರಿಯ ಈ ಭೇಟಿ ನನ್ನಲ್ಲಿ ಬಿತ್ತಿದ ಸದ್ವಿಚಾರಗಳು ಮತ್ತು ಕಲಿಸಿದ ಜೀವನಪಾಠ ಸದಾ ಹಸಿರಾಗಿರಲಿದೆ. ಈ ರಂಗಯಾತ್ರೆ ನನ್ನ ಬದುಕಿನ ಅನುಭವ ಲೋಕವನ್ನು ಅಪಾರವಾಗಿ ಶ್ರೀಮಂತಗೊಳಿಸಿದೆ’’ ಎಂದು ಖುಷಿಯಾಗಿ ಹೇಳಿದರು. ಅವರ ಹಾಗೆ ಮೊದಲ ಬಾರಿಗೆ ಬಂದವರು ಕಲಬುರಗಿ ಜಿಲ್ಲೆಯ ಸದಲಗಾದ ಹಿರಿಯ ರೈತರಾದ ಮಲ್ಲಿಕಾರ್ಜುನ. ಇಂಥವರ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಲೇ ಇದೆ.

***

ಪಂಡಿತಾರಾಧ್ಯ ಶ್ರೀಗಳ ರಂಗಸಂಸ್ಕಾರಕ್ಕೆ ಅವರ ಗುರುಗಳಾದ ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾರಣ. ಅವರು 1950ರ ಅವಧಿಯಲ್ಲೇ ತರಳಬಾಳು ಕಲಾ ಸಂಘವನ್ನು ಆರಂಭಿಸಿದರು. ರಂಗಭೂಮಿಯು ಅವರಿಗೆ ಮನರಂಜನೆಯಾಗದೆ ಮನೋವಿಕಾಸ ಆಗಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರ ತತ್ವಾದರ್ಶಗಳನ್ನು ಎಲ್ಲ ವರ್ಗದ ಜನರಿಗೆ ಸಲುಭವಾಗಿ ತಲುಪಿಸುವ ಮಾಧ್ಯಮ ರಂಗಭೂಮಿ ಎಂದು ಅರಿತಿದ್ದರು. ಇದಕ್ಕಾಗಿ ತಮ್ಮ ಮಠದ ಮೂಲಪುರುಷ ‘ವಿಶ್ವಬಂಧು ಮರುಳಸಿದ್ಧ’ ನಾಟಕ ರಚಿಸುವುದರ ಜೊತೆಗೆ ಬಸವಣ್ಣನವರಿಗೆ ಸಂಬಂಧಿಸಿ ‘ಮರಣವೆ ಮಹಾನವಮಿ’, ಅಕ್ಕಮಹಾದೇವಿ ಕುರಿತು ‘ಶರಣಸತಿ ಲಿಂಗಪತಿ’, ಮಾದಾರ ಚೆನ್ನಯ್ಯ ಕುರಿತು ‘ಶಿವಕುಲ’ ನಾಟಕಗಳನ್ನು ರಚಿಸುವುದರ ಜೊತೆಗೆ ಪ್ರದರ್ಶಿಸಿದರು ಕೂಡಾ. ಹೀಗಿದ್ದಾಗ ಪಂಡಿತಾರಾಧ್ಯ ಶ್ರೀಗಳು ಸಿರಿಗೆರೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡರು. ಇದರ ಪರಿಣಾಮ 1987ರಲ್ಲಿ ಶ್ರೀ ಶಿವಕುಮಾರ ಕಲಾಸಂಘ ಹುಟ್ಟು ಹಾಕಿದರು. ರಂಗಕರ್ಮಿ ಸಿಜಿಕೆ ಸಂಪರ್ಕ ಬಂದ ಪರಿಣಾಮ 1997ರಲ್ಲಿ ಶಿವಸಂಚಾರ ಎನ್ನುವ ರೆಪರ್ಟರಿ ಆರಂಭವಾಯಿತು. 2008ರಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಆರಂಭಿಸಿದರು. ಶಿವಸಂಚಾರದ ಕಲಾವಿದರು ಒಂದು ವರ್ಷ ತರಬೇತಿ ಪಡೆದ ನಂತರ ಮೂರು ನಾಟಕಗಳನ್ನು ರಾಜ್ಯ, ಹೊರರಾಜ್ಯಗಳಲ್ಲಿ ಪ್ರದರ್ಶಿಸುತ್ತಾರೆ. ಸಂಚಾರ ಹೊರಡುವ ಮೊದಲು ಸಾವಿರಾರು ಪ್ರೇಕ್ಷಕರು ಕುಳಿತುಕೊಳ್ಳಲು ಸಾಧ್ಯವಾಗುವ ಶಿವಕುಮಾರ ಬಯಲು ರಂಗಮಂದಿರ ಪಕ್ಕದಲ್ಲಿ ಶಿವಕುಮಾರ ಶ್ರೀಗಳ ಮೂರ್ತಿಯನ್ನು ಇರಿಸಲಾಗುತ್ತದೆ. ಇನ್ನೊಂದು ಕಡೆ ಸಿಜಿಕೆ ಸಮಾಧಿಯಿದೆ. ಅವರ ಸಮುಖದಲ್ಲಿ ಮುಖಾಮುಖಿಯಾಗುತ್ತದೆ ನಾಟಕೋತ್ಸವ.

ಇದರೊಂದಿಗೆ ನಾಟಕೋತ್ಸವ ಅಂಗವಾಗಿ ನಡೆದ ವಿಚಾರ ಸಂಕಿರಣ, ಚಿಂತನ ಮಾಲಿಕೆಯಲ್ಲಿ ಪಾಲ್ಗೊಂಡ ಲೇಖಕರ ಲೇಖನಗಳನ್ನು ಒಟ್ಟಾಗಿಸಿ ಸಂಕಲನವನ್ನೂ ಶ್ರೀಗಳು ಪ್ರಕಟಿಸುತ್ತಾರೆ. ಹೀಗೆ ಕಳೆದ ವರ್ಷದ ನಾಟಕೋತ್ಸವ ಕುರಿತು ‘ಕಾಯಕ ಕಲೆಯಾದಾಗ’ ಕೃತಿ ಪ್ರಕಟಗೊಂಡಿದೆ.

ಇದೆಲ್ಲದರೊಂದಿಗೆ ಕಣ್ಣಿಗೆ ಕಾಣುವ ವಿದ್ಯುತ್ ದೀಪಾಲಂಕಾರ, ಅಲ್ಲಲ್ಲಿ ಸಾಲಂಕೃತಗೊಂಡ ಶರಣರ ವಚನಗಳ ಜೊತೆಗೆ ಲೇಖಕರ ಮಾತುಗಳನ್ನು ಉಲ್ಲೇಖಿಸಿದ ಬ್ಯಾನರುಗಳು ಗಮನ ಸೆಳೆಯುತ್ತವೆ. ಹೀಗೆ ಹುಬ್ಬು ಹಾರಿಸುವ ಹಬ್ಬವಾಗಿ ನಾಟಕೋತ್ಸವ ಕಣ್ಣಿಗೆ ಕಂಡರೆ, ಮನಸ್ಸಿನೊಳಗೆ ಇಳಿವ ಪರಿಣಾಮ ಬೇರೆ.

ಇದೆಲ್ಲ ಯಾಕಾಗಿ ಎಂದರೆ; ಒಳ್ಳೆಯ ನಾಟಕಗಳನ್ನು ನೋಡುವ ಮೂಲಕ ಪ್ರೇಕ್ಷಕರು ರಂಗಾಭಿರುಚಿ ಹೆಚ್ಚಿಸಿಕೊಳ್ಳುತ್ತಾರೆ. ಸಾಣೇಹಳ್ಳಿಗೆ ಬಂದರೆ ಸಾಕು ನಾಟಕಗಳ ಸುಗ್ಗಿ ಎಂಬ ಮಾತು ಜನಪ್ರಿಯ. ಇದಕ್ಕೆಲ್ಲ 75ರ ಹರೆಯದ ದಣಿವರಿಯದ ಪಂಡಿತಾರಾಧ್ಯ ಶ್ರೀಗಳ ಅವಿರತ ಶ್ರಮ ಕಾರಣ. ಅವರ ಶ್ರಮ ಸಾರ್ಥಕವಾಗುತ್ತಲೇ ಇದೆ.

(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)

Tags

SanehalliNaadahabbaSanehalli Festival
share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X