Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಕಲಿತ, ಅನುಭವ ಪರಂಪರೆಗಳ ಮುಖಾಮುಖಿ...

ಕಲಿತ, ಅನುಭವ ಪರಂಪರೆಗಳ ಮುಖಾಮುಖಿ ‘ಶರ್ಮಿಷ್ಠೆ’

ಗಣೇಶ ಅಮೀನಗಡಗಣೇಶ ಅಮೀನಗಡ25 April 2025 3:25 PM IST
share
ಕಲಿತ, ಅನುಭವ ಪರಂಪರೆಗಳ ಮುಖಾಮುಖಿ ‘ಶರ್ಮಿಷ್ಠೆ’
ನಾಟಕ: ಶರ್ಮಿಷ್ಠೆ ರಚನೆ: ಬೇಲೂರು ರಘುನಂದನ್ ವಿನ್ಯಾಸ, ನಿರ್ದೇಶನ: ಚಿದಂಬರರಾವ್ ಜಂಬೆ ರಂಗದ ಮೇಲೆ: ಡಾ.ಉಮಾಶ್ರೀ ತಂಡ: ರಂಗ ಸಂಪದ ರಂಗದ ಹಿಂದೆ ರಂಗಸಜ್ಜಿಕೆ/ವಸ್ತ್ರವಿನ್ಯಾಸ/ಪರಿಕರ: ಪ್ರಮೋದ್ ಶಿಗ್ಗಾಂವ ಬೆಳಕು: ಅರುಣ್ ಮೂರ್ತಿ, ಅರುಣ್, ಅಪ್ಪಯ್ಯ ಸಂಗೀತ ವಿನ್ಯಾಸ: ಅನೂಶ್ ಶೆಟ್ಟಿ ಸಂಗೀತ ನಿರ್ವಹಣೆ: ಶಿವಲಿಂಗ ಪ್ರಸಾದ್, ರವಿಕುಮಾರ್ ಪ್ರಸಾಧನ: ಎನ್.ಕೆ.ರಾಮಕೃಷ್ಣ, ದಿಲೀಪ್‌ಕುಮಾರ್ ಕಲೆ: ಸುದೇಶ್ ಮಹಾನ್ ರಂಗ ನಿರ್ವಹಣೆ: ವಿಠಲ್ ಬಿ.ಅಪ್ಪಯ್ಯ, ಮನೋಹರ್ ಪ್ರಚಾರ: ಎಂ.ಚಂದ್ರಕಾಂತ್ ಸಮಗ್ರ ನಿರ್ವಹಣೆ: ವಿ.ಎಂ.ನಾಗೇಶ್, ಜೆ.ಲೋಕೇಶ್ ರಂಗಪಠ್ಯ ನೆರವು: ಉಮಾಮಹೇಶ್ವರ ಹೆಗಡೆ, ರಮೇಶಚಂದ್ ಸಹನಿರ್ದೇಶನ: ಶಿವಲಿಂಗ ಪ್ರಸಾದ್

ಕಳೆದ ಶನಿವಾರ, ರವಿವಾರ (ಎಪ್ರಿಲ್ 19,20) ಮೈಸೂರಿನ ರಂಗಾಯಣದ ಆವರಣದಲ್ಲಿ ‘ಶರ್ಮಿಷ್ಠೆ’ ನಾಟಕದ ಸಲುವಾಗಿ ಉದ್ದದ ಸರತಿ ಸಾಲಿತ್ತು. ಅನೇಕರಿಗೆ ಟಿಕೆಟ್ ಸಿಗದೆ ನಿರಾಶರಾಗಿ ಮರಳಿದರು. ಶನಿವಾರ ಸಂಜೆಯ ಪ್ರಯೋಗ ಹೌಸ್‌ಫುಲ್. ಇದರ ಮರುದಿನ ರವಿವಾರ ಸಂಜೆ ನಾಲ್ಕರ ಪ್ರಯೋಗಕ್ಕೂ ಮಧ್ಯಾಹ್ನ ಎರಡು ಗಂಟೆಗೇ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದವರು ಅನೇಕರು. ಆದರೆ ಟಿಕೆಟ್ ಸಿಗದೆ ವಾಪಸಾದವರು ಐವತ್ತಕ್ಕೂ ಅಧಿಕ. ಮತ್ತೆ ಸಂಜೆಯ ಪ್ರಯೋಗಕ್ಕೂ ಹಾಗೆಯೇ ಆಯಿತು. ತುಂಬಿದ ಭೂಮಿಗೀತ ರಂಗಮಂದಿರದಲ್ಲಿ ಪ್ಲಾಸ್ಟಿಕ್ ಕುರ್ಚಿಗಳನ್ನು ಹಾಕಲಾಯಿತು. ಇವುಗಳೂ ತುಂಬಿ ನಿಂತು ನೋಡಿದವರಿದ್ದಾರೆ.

ಇದೆಲ್ಲ ಸಾಧ್ಯವಾಗಿದ್ದು ಖ್ಯಾತ ಕಲಾವಿದೆ ಉಮಾಶ್ರೀ ಅವರಿಂದ. ಅವರು ಶರ್ಮಿಷ್ಠೆ ಪಾತ್ರದಲ್ಲಿ ಮಿಂಚಿದರು. ಅವರ ಅಭಿನಯ, ಸಂಭಾಷಣೆ, ಆಂಗಿಕ ಅಭಿನಯ, ಅವರ ಎನರ್ಜಿ, ಬದ್ಧತೆಗೆ ಮನಸೋತವರು ಪ್ರೇಕ್ಷಕರು. ಅವರ ಅಭಿನಯವನ್ನೇ ನೋಡಬೇಕೆಂದು ಬಂದ ಹೊಸ ಪ್ರೇಕ್ಷಕರಿದ್ದರು. ಹೀಗಾಗಿ ಶರ್ಮಿಷ್ಠೆ ಎನ್ನುವ ನಾಟಕಕ್ಕಿಂತ ಉಮಾಶ್ರೀ ಅವರ ನಾಟಕ ನೋಡಬೇಕೆಂದು ಬಂದವರೇ ಹೆಚ್ಚು.

ಇದು ಬೆಂಗಳೂರಿನ ರಂಗ ಸಂಪದ ತಂಡದ ಹೊಸ ನಾಟಕ. ಇದರ ಅಧ್ಯಕ್ಷ ಜೆ. ಲೋಕೇಶ್ ಅವರು ಹಾಗೂ ಅವರ ತಂಡದ ಇತರರು ಎಪ್ಪತ್ತೈದರ ಹರೆಯದವರು. ದಣಿಯದೆ ಬೆಂಗಳೂರು-ಮೈಸೂರು ನಡುವೆ ಓಡಾಡಿ ನಾಟಕವನ್ನು ಯಶಸ್ವಿಗೊಳಿಸಿದರು. ಇದಕ್ಕಾಗಿ ಅವರನ್ನು ಹಾಗೂ ಉಮಾಶ್ರೀ ಅವರನ್ನು ಅಭಿನಂದಿಸುವೆ.

ಇನ್ನು ನಾಟಕದ ಕಥೆ ಕುರಿತು; ಮಹಾಭಾರತದ ಚಂದ್ರವಂಶದ ಯಯಾತಿ ಕಥೆ ನಿಮಗೆ ಗೊತ್ತಿರಬಹುದು. ಕ್ಷಣಿಕ ಸುಖ ಹಾಗೂ ದೀರ್ಘಕಾಲದ ಸಂತೋಷಗಳ ನಡುವಿನ ವ್ಯತ್ಯಾಸಗಳನ್ನೇ ಅರಿಯದ ಯಯಾತಿಯ ಸುತ್ತ ಹಬ್ಬಿದ ಪಾತ್ರ, ವೇಷ-ಪರಿವೇಷಗಳಲ್ಲಿ ಉಳಿಯುವಾಕೆ ಶರ್ಮಿಷ್ಠೆ.

ದೈತ್ಯರ ಅರಸು ವೃಷಪರ್ವನ ಮಗಳಾಗಿ, ರಾಜಕುವರಿಯಾಗಿ, ಪಟ್ಟದರಸಿಯಾಗಿ ಮೆರೆಯಬೇಕಿದ್ದ ಶರ್ಮಿಷ್ಠೆ, ವಿಧಿಯಾಟದಿಂದಾಗಿ ಬ್ರಾಹ್ಮಣ ಕನ್ಯೆ, ರಾಕ್ಷಸ ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯ ದಾಸಿಯಾಗಿ, ಹಸ್ತಿನಾಪುರಕ್ಕೆ ಬಂದ ನಂತರವೂ ತನ್ನ ಒಳಿತಿನಿಂದಾಗಿ ಮೇಲೆದ್ದು ನಿಲ್ಲುತ್ತಾಳೆ.

ಯಯಾತಿಯ ಲಂಪಟತನ, ದೇವಯಾನಿಯ ಯಜಮಾನಿಕೆ ಮತ್ತು ಹಟಮಾರಿತನಗಳ ನಡುವೆ ಯಯಾತಿಯನ್ನೇ ಗಾಂಧರ್ವ ವಿವಾಹವಾಗಿ ಪುರುವಿನಂಥ ಧೀರ ಹಾಗೂ ಮಾನವೀಯ ಮಗನ ತಾಯಿಯಾಗುತ್ತಾಳೆ ಶರ್ಮಿಷ್ಠೆ. ಶುಕ್ರಾಚಾರ್ಯರ ಶಾಪಕ್ಕೆ ಒಳಗಾಗಿ ವೃದ್ಧಾಪ್ಯವನ್ನು ಅಪ್ಪುವ ಯಯಾತಿಗೆ ತನ್ನ ಯೌವನವನ್ನೇ ಧಾರೆ ಎರೆದು, ಆದರ್ಶದ ಅಮಲಿಗೆ ಒಳಗಾಗುವ ಮಗ ಒಂದೆಡೆಯಾದರೆ, ತನ್ನೆಲ್ಲ ಕನಸುಗಳನ್ನು ಚೆಲ್ಲಿಕೊಂಡು, ಭಾವಕೋಶಗಳನ್ನೇ ಹೊಸಕಿಹಾಕಿಕೊಳ್ಳುವ ಸೊಸೆ ಚಿತ್ರಲೇಖೆಯ ಪರವಾಗಿ ನಿಲ್ಲುವ ಶರ್ಮಿಷ್ಠೆ, ಎಲ್ಲ ಸೋಲುಗಳ ನಡುವೆಯೂ ಎದ್ದು-ಗೆದ್ದು ನಿಲ್ಲುತ್ತಾಳೆ.

ನಾಟಕದ ಆರಂಭದಲ್ಲಿ ಗಿಡ ಮೊಗ್ಗು ಬಿಡುವುದು ಹೇಗೆಂದು ಶರ್ಮಿಷ್ಠೆಯು ತನ್ನ ತಾಯಿಯನ್ನು ಕೇಳಿದಾಗ ‘‘ನೀನು ಮದುವೆಯಾಗು, ಗೊತ್ತಾಗುವುದು’’ ಎಂದಾಗ ‘‘ಯಾವಾಗ ಮದುವೆ ಮಾಡ್ತಿ?’’ ಎಂದು ಮುಗ್ಧವಾಗಿ ಕೇಳುತ್ತಾಳೆ.

ನಂತರ ಶರ್ಮಿಷ್ಠೆಯ ಪ್ರೀತಿ, ಸುಖ, ವಾತ್ಸಲ್ಯದ ಕನಸುಗಳನ್ನು ಚಿವುಟುತ್ತಾಳೆ ದೇವಯಾನಿ. ಯಯಾತಿಯನ್ನು ಗಾಂಧರ್ವ ವಿವಾಹವಾಗುವ ಶರ್ಮಿಷ್ಠೆಯು ಬಸುರಿಯಾದಾಗಲೂ ದೇವಯಾನಿ ಸಹಿಸಿಕೊಳ್ಳುವುದಿಲ್ಲ. ತನ್ನ ವಸ್ತ್ರವನ್ನು ಶರ್ಮಿಷ್ಠೆ ಧರಿಸಿದಳೆಂದು ದೇವಯಾನಿಗೆ ಸಹಿಸಿಕೊಳ್ಳಲಾಗುವುದಿಲ್ಲ. ಆದರೆ ಕೊನೆಗೆ ತನ್ನ ಮಗನಿಗೆ ಪಟ್ಟ ಕಟ್ಟದೆ ಸವತಿಯಾದ ಶರ್ಮಿಷ್ಠೆಯ ಮಗನಾದ ಪುರುನಿಗೆ ಪಟ್ಟ ಕಟ್ಟಲು ಮುಂದಾಗುತ್ತಾಳೆ. ಅವಳಿಗೂ ಗೊತ್ತು; ತನ್ನ ಮಗನಿಗಿಂತ ಪುರು ವೀರ-ಧೀರನೆಂದು.

‘ನನ್ನನ್ನು ಮದುವೆಯಾಗ್ತೀಯಾ?’ ಎಂದು ವ್ಯಂಗ್ಯವಾಗಿ ಕೇಳುವ ಯಯಾತಿಯಿಂದ ಶರ್ಮಿಷ್ಠೆ ಕಂಗಾಲಾಗುತ್ತಾಳೆ. ಮುಖ್ಯವಾಗಿ ತನ್ನ ಮಗ ಪುರುನ ಯೌವನವನ್ನು ಪಡೆಯುವ ಯಯಾತಿಯೊಂದಿಗೆ ಕೂಡಬೇಕೆ? ಕೂಡಿದರೆ ಮಗನೊಂದಿಗೆ ಕೂಡಿದಂತಾಗುವುದು ಎನ್ನುವ ಶರ್ಮಿಷ್ಠೆ ಅನುಭವಿಸುವ ನೋವು ಅಸಾಧ್ಯ.

ಕಚನಿಂದ ಪ್ರೀತಿ ವಂಚಿತಳಾಗುವ ದೇವಯಾನಿ, ಯಯಾತಿಯನ್ನು ಮದುವೆಯಾಗುತ್ತಾಳೆ. ಆದರೆ ಯಯಾತಿಗೆ ದೇವಯಾನಿಯಲ್ಲಿ ಸಿಗದಿರುವ ತೃಪ್ತಿಯಿಂದಾಗಿ ಬಹಶಃ ಶರ್ಮಿಷ್ಠೆ ಕಡೆಗೆ ತಿರುಗಿರಬೇಕು. ಶರ್ಮಿಷ್ಠೆ ಶೂದ್ರಳು. ದೇವಯಾನಿ ಬ್ರಾಹ್ಮಣಳು. ಯಯಾತಿ ಕ್ಷತ್ರಿಯ. ಈ ಮೂವರ ಪ್ರೇಮ ಪ್ರಸಂಗದ ಅನಾವರಣ ಇಲ್ಲಿದೆ. ಇದರೊಂದಿಗೆ ಯಯಾತಿಯು ಶುಕ್ರಾಚಾರ್ಯರ ಶಾಪಕ್ಕೆ ಗುರಿಯಾಗಿ ವೃದ್ಧನಾಗುತ್ತಾನೆ. ಏಕೆಂದರೆ ಯಯಾತಿಯು ಶರ್ಮಿಷ್ಠೆಯನ್ನು ಗಾಂಧರ್ವ ವಿವಾಹವಾದುದನ್ನು ಸಹಿಸಿಕೊಳ್ಳದ ದೇವಯಾನಿಯು ತನ್ನ ತಂದೆ ಶುಕ್ರಾಚಾರ್ಯರಿಗೆ ದೂರುತ್ತಾಳೆ. ಆಗ ಶುಕ್ರಾಚಾರ್ಯರು ಅಕಾಲ ವೃದ್ಧಾಪ್ಯಕ್ಕೆ ಒಳಗಾಗು ಎಂದು ಶಾಪ ಕೊಡುತ್ತಾರೆ. ವೃದ್ಧ ಗಂಡನೊಂದಿಗೆ ಹೇಗೆ ಬಾಳುವುದೆಂದು ದೇವಯಾನಿಯು ಶುಕ್ರಾಚಾರ್ಯರಿಗೆ ಶಾಪವನ್ನು ಹಿಂದೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ವಾಪಸ್ ಪಡೆಯಲಾಗದು, ಆದರೆ ಉಶ್ಯಾಪ ಅಂದರೆ ಪರಿಹಾರ ಹೇಳುತ್ತಾರೆ. ಯಯಾತಿಯ ವೃದ್ಧಾಪ್ಯ ಯಾರು ತೆಗೆದುಕೊಳ್ಳುತ್ತಾರೋ ಅವರಿಂದ ಮತ್ತೆ ಯೌವನ ಪಡೆಯಬಹುದು ಎಂದು. ಆಗ ಶರ್ಮಿಷ್ಠೆಯ ಮಗ ಪುರು ತನ್ನ ತಾರುಣ್ಯ ಕೊಡುತ್ತಾನೆ. ಆಗ ಶರ್ಮಿಷ್ಠೆಗೆ ಯಯಾತಿಯನ್ನು ಮಗನೆಂದು ಸ್ವೀಕರಿಸಬೇಕೆ? ಗಂಡನೆಂದು ಭೋಗಿಸಬೇಕೆ ಎನ್ನುವ ಪ್ರಶ್ನೆ ಕಾಡುತ್ತದೆ. ಕೊನೆಗೆ ಯಯಾತಿಯು ‘ದೇವಯಾನಿ, ಶಮಾ ನಡೆಯಿರಿ ವಾನಪ್ರಸ್ಥಕ್ಕೆ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ. ಕೊನೆಗೆ ಮನುಷ್ಯನಾಗುವ ಕಡೆಗೆ ಯಯಾತಿ ಹೆಜ್ಜೆ ಹಾಕುತ್ತಾನೆ.

ನಾಟಕಕ್ಕೆ ಪೂರಕವಾಗಿ ಲೈಟಿಂಗ್, ಪ್ರಸಾಧನ, ರಂಗವಿನ್ಯಾಸ ಪೂರಕವಾಗಿವೆ. ಅದರಲ್ಲೂ ಲೈಟಿಂಗ್ ಕೂಡಾ ಪಾತ್ರಗಳಾಗಿವೆ. ಮುಖ್ಯವಾಗಿ ಇದು ಶರ್ಮಿಷ್ಠೆಯ ಕಥೆಯಲ್ಲ; ಶರ್ಮಿಷ್ಠೆಯಂಥ ಮಹಿಳೆಯರ ಬದುಕಿನಲ್ಲಿ ಈ ಬಗೆಯ ಘಟನೆಗಳು ನಡೆದಿರುತ್ತವೆ. ಹೀಗಾಗಿ ನಾಟಕದಲ್ಲಿ ಘಟನೆಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ. ಸುರುಳಿಯ ಚಿತ್ರಗಳು ಕ್ರಮವಾಗಿಲ್ಲದಿದ್ದರೂ ಹೆಣ್ಣಿನ ಶೋಷಣೆ, ಸಮಕಾಲೀನವಾಗುವ ಮಾತುಗಳು ಹಿಡಿದಿಡುತ್ತವೆ.

ಮಾನಕ್ಕೊಂದು ಅಸ್ತ್ರ

ಆ ಅಸ್ತ್ರಕ್ಕೊಂದು ವಸ್ತ್ರ

ವಸ್ತ್ರಕ್ಕೊಂದು ಸಂಹಿತೆ

ಸಂಹಿತೆಗೊಂದು ರಾಜಕಾರಣ

ಕೊನೆಗೆ ವಸ್ತ್ರರಾಜಕಾರಣ

ಎನ್ನುವುದರ ಜೊತೆಗೆ ‘‘ಸಂಹಿತೆ ಎಂದರೆ ಗೊತ್ತಲ್ಲ? ಹಾಕಿಕೊಟ್ಟ ನಿಯಮಗಳನ್ನು ಮೀರುವಂತಿಲ್ಲ. ಇಷ್ಟಪಟ್ಟಿದ್ದು ಯಾವುದೂ ಸಂಹಿತೆಗಳ ಮುಂದೆ ನಡೆಯಲ್ಲ. ಮರ್ಯಾದೆ, ಘನತೆ, ಪ್ರತಿಷ್ಠೆ ಕೊನೆಗೆ ಜಾತಿ, ಧರ್ಮ ಎಲ್ಲವನ್ನೂ ಬಟ್ಟೆಯೆನ್ನುವ ನೂಲಿಗೆ ತಗಲಿ ಹಾಕಿಬಿಟ್ಟ ಮೂರ್ಖ ಮನುಷ್ಯ. ರಕ್ತ, ಮಾಂಸಗಳಿಗೆ ತೊಡಿಸಿದ ಚರ್ಮ ಎಂಬ ಬಟ್ಟೆ ಪ್ರತೀ ಜೀವಿಗೂ ಇರುವಾಗ ತೊಟ್ಟ ಬಟ್ಟೆಗಳಿಂದ ಮನುಷ್ಯನ ಘನತೆ ಹೆಚ್ಚುವುದೆಂದು ಹಟ ಹಿಡಿಯುವುದಾದರೂ ಏತಕ್ಕೆ? ನೂಲು ನೂಲು ಒಂದಾದ ಬಟ್ಟೆಗೆ ಮೇಲು-ಕೀಳೆಂಬ, ಶ್ರೇಷ್ಠ-ಕನಿಷ್ಠ ಎಂಬ ಬಣ್ಣ ಹಚ್ಚುವ ವ್ಯಸನವಾದರೂ ಏಕೆ?’’ ಎನ್ನುವ ಮಾತುಗಳು ಗಮನ ಸೆಳೆಯುತ್ತವೆ.

ಇನ್ನು ಈ ನಾಟಕ ನಿರ್ದೇಶಿಸಿದ ಚಿದಂಬರರಾವ್ ಜಂಬೆ ಅವರು ‘‘ಉಮಾಶ್ರೀ ಅವರಿಗೆ ನಾಟಕ ನಿರ್ದೇಶಿಸಿದೆ ಎನ್ನುವುದಕ್ಕಿಂತ ನನಗೂ ಪಾಠವಾಯಿತು. ಅವರ ಎನರ್ಜಿ, ಕಲಿಯಬೇಕೆಂಬ ಹಟ ದೊಡ್ಡದು. ಎರಡು ಪರಂಪರೆಯವರು ನಾವು. ಅವರು ನಾಟಕಗಳ ಕಲಾವಿದರು. ನೀವು ಹೇಳಿದ್ದನ್ನು ಮಾಡ್ತೀನಿ ಎನ್ನುತ್ತಾರೆ. ಅವರೊಳಗಿನದನ್ನು ತೆಗೆಯೋದು ನನ್ನ ಕೆಲಸ. ಅವರು ನಿರ್ದೇಶಕರ ಕಲಾವಿದೆ. ನಮ್ಮ ಹುಡುಗರಿಗೆ ಹೇಳಿ ಅಭಿನಯ ತೆಗೆಸುತ್ತಿದ್ದೆವು. ಉಮಾಶ್ರೀ ಅವರು ನಮ್ಮಿಂದ ತೆಗೆಯುತ್ತಿದ್ದರು ಅಂದರೆ ನನ್ನಿಂದ ಅಭಿನಯ ತೆಗೆಸಿದ್ರು. ಇದು ನನಗೆ ಪಾಠ. ನಾವು ಕಲಿತ ಪರಂಪರೆಯಿಂದ ಬಂದವರು; ಅವರು ಅನುಭವದ ಪರಂಪರೆಯಿಂದ ಬಂದವರು. ಇದು ಎರಡು ಪರಂಪರೆಗಳ ಮುಖಾಮುಖಿ. ನಾವು ಬೆಳೆದು ಬಂದ ರೀತಿ, ಕಲಿತ ಬಗೆ ಬೇರೆ ಬೇರೆ. ಇದನ್ನು ಒರೆಗೆ ಹಚ್ಚಿದ್ದು ವಿಶಿಷ್ಟ ಅನುಭವ’’ ಎನ್ನುವ ಅವರಿಗೆ ಏಕವ್ಯಕ್ತಿ ನಾಟಕ ನಿರ್ದೇಶಿಸಿದ್ದು ಎರಡನೆಯದು. 2004ರಲ್ಲಿ ಮೈಸೂರು ರಂಗಾಯಣದ ಕಲಾವಿದರಾಗಿದ್ದ ಬಸವರಾಜ ಕೂಡಿಗೆ ನೆನಪಿಗೆ ಬಿ.ಎನ್. ಶಶಿಕಲಾ ಅವರಿಗೆ ಲಿಂಗದೇವರು ಹಳೆಮನೆ ಅವರ ‘ವಾನಪ್ರಸ್ಥ’ ಎಂಬ ಏಕವ್ಯಕ್ತಿ ನಾಟಕ ನಿರ್ದೇಶಿಸಿದ್ದರು.

ಉಮಾಶ್ರೀ ಅವರಿಗೆ ಇದು ಮೊದಲ ಏಕವ್ಯಕ್ತಿ ಪ್ರಯೋಗ. ಅವರು ದೇವನೂರ ಮಹಾದೇವ ಅವರ ‘ಒಡಲಾಳ’ ನಾಟಕದ ಸಾಕವ್ವ ಮೂಲಕ ಪ್ರಸಿದ್ಧರಾದರು. ಇದನ್ನು ಸಿಜಿಕೆ ನಿರ್ದೇಶಿಸಿದ್ದರು. ಆಗ ದೇವನೂರ ಮಹಾದೇವ ಅವರಿಗೆ ಯಾರೋ ನಾಟಕ ಹೇಗಿದೆ ಎಂದು ಕೇಳಿದಾಗ ನಕ್ಕು ‘‘ನನ್ನ ಒಡಲಾಳ ಕೃತಿಗಳು ಹೆಚ್ಚು ಮಾರಾಟವಾದವು’’ ಎಂದಿದ್ದರು. ಈಗ ಶರ್ಮಿಷ್ಠೆ ನಾಟಕವನ್ನು ಉಮಾಶ್ರೀ ಅವರ ಮೂಲಕ ನೋಡುತ್ತೇವೆ. ಹೀಗಾಗಿ ಶರ್ಮಿಷ್ಠೆ ಹಿಂದೆ ಸರಿದು, ಉಮಾಶ್ರೀ ಮಿಂಚುತ್ತಾರೆ. ಇದನ್ನು ಈ ಲೇಖನದ ಆರಂಭದಲ್ಲೇ ಹೇಳಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X