Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಗಟ್ಟಿಗಿತ್ತಿ ಸರಸ್ವತಿ ಜುಲೇಖಾ ಬೇಗಂ

ಗಟ್ಟಿಗಿತ್ತಿ ಸರಸ್ವತಿ ಜುಲೇಖಾ ಬೇಗಂ

ಗಣೇಶ ಅಮೀನಗಡಗಣೇಶ ಅಮೀನಗಡ19 Dec 2025 3:45 PM IST
share
ಗಟ್ಟಿಗಿತ್ತಿ ಸರಸ್ವತಿ ಜುಲೇಖಾ ಬೇಗಂ

ನಾಟಕ ಕಂಪನಿಗಳಲ್ಲಿದ್ದಾಗ ಸರಸ್ವತಿ ಶೇಕ್ ಚಾಂದ್ ಎಂದೇ ಕರೆಯಲ್ಪಡುತ್ತಿದ್ದ ಇವರು ಈಚೆಗೆ ಸರಸ್ವತಿ ಜುಲೇಖಾ ಬೇಗಂ ಎಂದು ಪ್ರಸಿದ್ಧರು. ‘‘ಯಾವಾಗಲೂ ಪಾತ್ರ ಬಿಟ್ಟಿಲ್ರಿ. ಈಗಲೂ ಪಾತ್ರ ಮಾಡಾಕ ರೆಡಿ ಅದೀನ್ರಿ’’ ಎನ್ನುವ ಸರಸ್ವತಿ ಜುಲೇಖಾ ಬೇಗಂ ಕಳೆದ ವರ್ಷ (2024) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಮೊದಲು ಕಾಳಮ್ಮ, ಆಮೇಲೆ ಮಲ್ಲಮ್ಮ, ಬಳಿಕ ಸರಸ್ವತಿ, ನಂತರ ಸರಸ್ವತಿ ಶೇಕ್ ಚಾಂದ್, ಈಗ ಸರಸ್ವತಿ ಜುಲೇಖಾ ಬೇಗಂ

ಇವೆಲ್ಲ ಒಬ್ಬರದೇ ಹೆಸರುಗಳು. ಈಗ ಮೈಸೂರಿನಲ್ಲಿ ನೆಲೆಸಿರುವ ರಂಗಭೂಮಿಯ ಹಿರಿಯ ಕಲಾವಿದರಾದ ಸರಸ್ವತಿ ಜುಲೇಖಾ ಬೇಗಂ ಅವರಿಗೆ 82 ವರ್ಷ ವಯಸ್ಸು.

ಹುಟ್ಟಿದೂರು ಕೊಪ್ಪಳ ಜಿಲ್ಲೆಯ ಕುಕನೂರು. ಅಪ್ಪ ವೀರಪ್ಪ ಹೂಗಾರ. ಅವ್ವ ಶಿವಬಸಮ್ಮ ಹೂಗಾರ. ವೀರಪ್ಪ ಅವರು ಹೂ ಮಾರುತ್ತಿದ್ದರು. ಗದಗ ಜಿಲ್ಲೆಯ ಲಕ್ಕುಂಡಿಯ ಹೂವಿನ ತೋಟದಿಂದ ಸೇವಂತಿಗೆ ಹೂವು ತರಲು ಹೋಗುತ್ತಿದ್ದರು. ಮಲ್ಲಿಗೆ ಹೂವಿಗಾಗಿ ಹೊಸಪೇಟೆಗೆ ಹೋಗುತ್ತಿದ್ದರು. ಒಮ್ಮೊಮ್ಮೆ ವೀರಪ್ಪ ಅವರು ಚೀಟಿ ಬರೆದು ಬಾಲಕಿ ಮಲ್ಲಮ್ಮ ಅವರನ್ನು ವಾಹನದಲ್ಲಿ ಕಳಿಸುತ್ತಿದ್ದರು. ಜಾತ್ರೆ, ಕಡೆ ಸೋಮವಾರ ಸಲುವಾಗಿ ಹೂವಿನ ಪೊಟ್ಟಣಗಳನ್ನು ಬಾಲಕಿ ಮಲ್ಲಮ್ಮ ತರುತ್ತಿದ್ದಳು. ಹೀಗೆಯೇ ಸಂಕನೂರು, ಸೂಡಿ, ಹಾಲಕೆರೆ, ಕುಕನೂರು ಮೊದಲಾದ ಜಾತ್ರೆಗಳ ಸಲುವಾಗಿ ಹೂವಿನ ಪೊಟ್ಟಣಗಳನ್ನು ಮಲ್ಲಮ್ಮ ತರುವುದು ರೂಢಿಯಾಯಿತು. ಹಾಗೆ ಬಸ್ಸಿನಲ್ಲಿ ಹೂವುಗಳ ಪೊಟ್ಟಣಗಳು ಬಂದ ಮೇಲೆ ವೀರಪ್ಪ ಅವರು ತಂದ ಹೂವಿನ ಬುಟ್ಟಿಯಲ್ಲಿರಿಸಿ ಮಾರುತ್ತಿದ್ದರು. ಮದುವೆಗೆ ಮೊದಲು ರೈತರಾಗಿದ್ದ ವೀರಪ್ಪ ಅವರು ಶಿವಬಸಮ್ಮ ಅವರನ್ನು ಮದುವೆಯಾದ ಮೇಲೆ ಮನೆಗಳು ಬೇರೆಯಾದವು. ಹೀಗೆ ಜಾತ್ರೆಗಳಲ್ಲಿ ಹೂವು ಮಾರುತ್ತಿದ್ದ ಮಲ್ಲಮ್ಮ ಎರಡನೆಯ ಇಯತ್ತೆ ಪಾಸಾದರು. ಶಾಲೆಗೆ ಹೋಗುತ್ತ, ಹೂವು ಮಾರುತ್ತ ಸಿನೆಮಾಗಳನ್ನು ನೋಡುತ್ತಿದ್ದ ಮಲ್ಲಮ್ಮರಿಗೆ ಪ್ರಭಾವವಾಯಿತು. ನೋಡಿದ ಸಿನೆಮಾಗಳ ಪಾತ್ರಗಳಂತೆ ನಟಿಸತೊಡಗಿದರು. ಇದನ್ನೆಲ್ಲ ನೋಡಿದ ಓಣಿಯವರು ಮೆಚ್ಚಿದರು. ಬೇಗಡೆ ಇಟ್ಟು ಹತ್ತು-ಹನ್ನೊಂದು ಹೂವುಗಳನ್ನಿಟ್ಟು ಮಾಲೆ ಕಟ್ಟಿ, ಮಾರುವ ಕಲೆಯೂ ಗೊತ್ತಿತ್ತು. ಹೀಗಿದ್ದಾಗ ಅವರ ಮನೆ ಕಳುವಾಯಿತು. ವೀರಪ್ಪ ಅವರು ಮಾರುತ್ತಿದ್ದ ಉಪ್ಪು-ಎಣ್ಣೆಯಲ್ಲಿ ಮರಳು ಬೆರೆಸಿ ಅವರನ್ನು ಕಂಡರಾಗದವರು ದ್ವೇಷಿಸಿದರು. ಮಲ್ಲಮ್ಮ ತಾಯಿ ಹುಚ್ಚಿಯಂತಾದರು. ಇದನ್ನು ಹೋಗಲಾಡಿಸಲು ಗದಗಿನ ತೋಂಟದಾರ್ಯ ಮಠಕ್ಕೆ ಹೋಗಿ ಸ್ವಾಮಿಗಳ ಆಶೀರ್ವಾದ ಪಡೆಯಿರಿ ಎಂದು ಊರವರು ಸಲಹೆ ನೀಡಿದರು. ಆಗ ಕುಕನೂರು ಬಿಟ್ಟು ಅವರ ತಂದೆ-ತಾಯಿ ಗದಗಿಗೆ ಹೋದರು. ತೋಂಟದಾರ್ಯ ಮಠದ ಹತ್ತಿರ ಗದ್ದಿಗೆಯ ಬಳಿ ಶಿವಬಸಮ್ಮ ಅವರು ಕೂತಿದ್ದಾಗ, ಮಲ್ಲಮ್ಮ ಹಾಗೂ ಅವರ ಸೋದರ ಬಸವರಾಜ ಆಟವಾಡುತ್ತಿದ್ದರು. ಆಗ ಕುಕನೂರಿನಲ್ಲಿ ನೆರೆಹೊರೆಯವರಾಗಿದ್ದ ಬಾಗಮ್ಮ ಬಂದು ‘‘ಏನಿಲ್ಲಿ?’’ ಎಂದು ಕೇಳಿದಾಗ ಮನೆ ಕಳವಾಗಿರುವುದರ ಕುರಿತು ಹೇಳುತ್ತಾರೆ. ಆಗ ಬಾಗಮ್ಮ ಅವರು ತಮ್ಮ ಮಗಳು ಭಾಣಾಪುರ ಲಕ್ಷ್ಮೀದೇವಿ ನಾಟಕ ಕಂಪನಿಯಲ್ಲಿರುವುದನ್ನು ಹೇಳಿ, ‘‘ನಿನ್ನ ಮಗಳು ಭಾಳ ಚೆಂದ ಅದಾಳ. ಕಣ್ಣು ಚೆಂದ ಅದಾವು’’ ಎಂದು ಮೆಚ್ಚುಗೆ ಸೂಚಿಸಿ ತಮ್ಮ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಲಕ್ಷ್ಮೀದೇವಿ ನೃತ್ಯ ಮಾಡುವುದನ್ನು ಕಂಡ ಮಲ್ಲಮ್ಮ ಕೂಡಾ ನರ್ತಿಸಲು ಮುಂದಾದರು. ‘‘ಏನ ಚೂಟಿ ಐತಿ ಈ ಹುಡುಗಿ!’’ ಎಂದು ಮೆಚ್ಚುಗೆಯಾಡಿದರು. ನಂತರ ಬಿ.ಆರ್. ಅರಿಶಿನಗೋಡಿ ಅವರ ಕಮತಗಿ ಹುಚ್ಚೇಶ್ವರ ನಾಟ್ಯ ಸಂಘಕ್ಕೆ ಕರೆದುಕೊಂಡು ಹೋದರು. ಅಲ್ಲಿ ರಾತ್ರಿ ನಾಟಕ ನೋಡಿದರೆ, ಹಗಲು ಹೊತ್ತು ಶಾಲೆಗೆ ಹೋಗಬೇಕಿತ್ತು. ಆದರೆ ಶಾಲೆಗೆ ಹೋಗದೆ ಲಕ್ಷ್ಮೀದೇವಿ ಅವರ ಮನೆಗೆ ಮಲ್ಲಮ್ಮ ಹೋಗುತ್ತಿದ್ದರು. ಕೊನೆಗೊಂದು ದಿನ ಬಾಗಮ್ಮ ‘‘ನಿನ್ನ ಮಗಳನ್ನು ನಾಟಕ ಕಂಪನಿಗೆ ಸೇರಿಸು. ಭಾಳ ಚೆಂದ ಅದಾಳ. ನಾಟಕಕ್ಕ ಒಪ್ತಾಳ’’ ಎಂದು ಹುರಿದುಂಬಿಸಿದರು. ಕೊನೆಗೆ ಶಿವಬಸಮ್ಮ ಒಪ್ಪಿದಾಗ ಅರಿಶಿನಗೋಡಿ ಅವರ ಕಂಪನಿ ಬಿಟ್ಟು ನ್ಯಾಮತಿಯ ಶಾಂತಣ್ಣ ಅವರ ಮಹೇಶ್ವರ ನಾಟ್ಯ ಸಂಘಕ್ಕೆ ಲಕ್ಷ್ಮೀ ದೇವಿ ಸೇರಿದರು. ಅಲ್ಲಿ ಲಾಡಸಾಹೇಬ್ ಅಮೀನಗಡ, ದುದುನಿ ಅಬ್ದುಲ್ ಸಾಹೇಬ್ ಮೊದಲಾದ ನಟರಿದ್ದರು. ಸತ್ಯಹರಿಶ್ಚಂದ್ರ, ಮಲಮಗಳು, ಟಿಪ್ಪುಸುಲ್ತಾನ್ ನಾಟಕಗಳಾಗುತ್ತಿದ್ದವು. ಆಗ ಮಲ್ಲಮ್ಮಳಿಗೆ ಸತ್ಯಹರಿಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವ ಪಾತ್ರ ಸಿಕ್ಕಿತು. ಆದರೆ ಹಾಲು ಎನ್ನದೆ ‘ಆಲು’ ಎನ್ನುತ್ತಿದ್ದಳು ಮಲ್ಲಮ್ಮ. ಸರಿಯಾಗಿ ಹೇಳದಾಗ ಜಬರಿಯಿಂದ ಅಂದರೆ ಪುಂಡಿಪಲ್ಯದ ಕಡ್ಡಿಯಿಂದ ಹೊಡೆಯುತ್ತಿದ್ದರು. ‘ಆ ದಿನಗಳ ಏಟು ರಂಗದ ಮೇಲೆ ಮಿಂಚಲು ಸಾಧ್ಯವಾಯಿತು’ ಎನ್ನುವ ಹೆಮ್ಮೆ ಅವರಿಗೆ. ‘ಸತ್ಯಹರಿಶ್ಚಂದ್ರ’ ನಾಟಕದಲ್ಲಿ ತಾರಾಮತಿ ಮತ್ತು ಹರಿಶ್ಚಂದ್ರ ಸಂಭಾಷಣೆಯು ಒಂದು ಗಂಟೆಯವರೆಗೆ ನಡೆಯುವಾಗ ಮಲ್ಲಮ್ಮ ಮಲಗಿರುತ್ತಿದ್ದಳು. ಕೊನೆಗೆ ವಿಶ್ವಾಮಿತ್ರ ಪಾತ್ರಧಾರಿ ದುದುನಿ ಅಬ್ದುಲ್ ಸಾಹೇಬರು ನೀರು ಚಿಮುಕಿಸುತ್ತಿದ್ದರು. ಆದರೆ ಏಳದಾಗ ತಾರಾಮತಿ ಪಾತ್ರಧಾರಿ ಮುರಗೋಡು ರೇಣುಕಮ್ಮ ಅವರು ಮಲ್ಲಮ್ಮಳ ಹೆಬ್ಬೆಟ್ಟು ತುಳಿದಾಗ ಕಿಟಾರನೆ ಕಿರುಚಿ ಅವ್ವ, ಅಪ್ಪ ಎನ್ನುತ್ತಿದ್ದಳು. ಹರಿಶ್ಚಂದ್ರನನ್ನು ಮಾರಾಟ ಮಾಡುವ ದೃಶ್ಯದಲ್ಲಿ ‘ಅಪ್ಪ, ಅವ್ವ ನೀವಿಲ್ಲದೆ ನಾನೆಲ್ಲಿ ಇರಲಿ?’ ಎಂದು ಲೋಹಿತಾಶ್ವ ಪಾತ್ರಧಾರಿ ಮಲ್ಲಮ್ಮ ಕೇಳುವ ದೃಶ್ಯ ಮನಮಿಡಿಯುವಂತೆ ಮಾಡಲು ಮುರಗೋಡ ರೇಣುಕಮ್ಮ ಅವರು ಜೋರಾಗಿ ಮಲ್ಲಮ್ಮಳ ಗಲ್ಲ ಹಿಂಡುತ್ತಿದ್ದರು. ಆಗ ಅತ್ತು ಸಂಭಾಷಣೆ ಹೇಳಿದಾಗ ಪ್ರೇಕ್ಷಕರೂ ಅಳುತ್ತಿದ್ದರು. ಇದರಿಂದ ಅವರಿಗೆ ಒಂದು ರೂಪಾಯಿ ಆಯೇರಿ (ಕಾಣಿಕೆ) ಸಿಕ್ಕಿತು. ಹೀಗಿದ್ದಾಗ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಭಾನಾಪುರ ಲಕ್ಷ್ಮೀದೇವಿ ಅವರು ‘‘ನಾನು ಲಕ್ಷ್ಮೀ. ನೀನು ಸರಸ್ವತಿಯಾಗು. ಅಕ್ಕತಂಗಿಯರಾಗಿ ಮೆರೆಯೋಣ’’ ಎಂದು ಸರಸ್ವತಿಯೆಂದು ಹೆಸರು ಬದಲಾಯಿಸಿದರು. ಹೀಗೆ ಅವರು ಮನೆಯಲ್ಲಿ ಕಾಳಮ್ಮಳಾಗಿ, ಶಾಲೆಯಲ್ಲಿ ಮಲ್ಲಮ್ಮಳಾಗಿ, ರಂಗದ ಮೇಲೆ ಸರಸ್ವತಿ ಎಂದಾದರು. ಆದರೆ ಅವರ ತಾಯಿ ಶಿವಬಸಮ್ಮ ಹಾಗೂ ವೀರಪ್ಪ ಅವರು ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ ವಾಪಸ್ ಕರೆದುಕೊಂಡು ಬಂದು ಕುಕನೂರು ಹತ್ತಿರದ ಭಾಣಾಪುರದಲ್ಲಿ ಶಾಲೆಗೆ ಹಚ್ಚಿದರು. ಹೀಗಾಗಿ ಮೂರನೆಯ ತರಗತಿಗೆ ಸೇರಿ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಹೀಗಿದ್ದಾಗ ಭಾಣಾಪುರ ಲಕ್ಷ್ಮೀದೇವಿ ಅವರು ಕಂಪನಿ ಬಿಟ್ಟು ಬಂದು ಭಾಣಾಪುರ ಕ್ರಾಸಿನಲ್ಲಿ ಹೊಟೇಲ್ ಆರಂಭಿಸಿದರು. ಇದರಿಂದ ಆಗಾಗ ಅವರ ಮನೆಗೆ ಸರಸ್ವತಿ ಅವರು ಹೋಗುತ್ತಿದ್ದರು. ನಾಟಕದಲ್ಲಿ ಪಾತ್ರ ಮಾಡಬೇಕೆಂಬ ಬಯಕೆಯನ್ನು ಲಕ್ಷ್ಮೀದೇವಿ ಅವರ ಹತ್ತಿರ ಸರಸ್ವತಿ ಅವರು ಹೇಳಿದಾಗ ಪಟ್ಟದಕಲ್ಲು ಬಸಯ್ಯ ಅವರ ಕಂಪನಿಯು ಗದಗದಲ್ಲಿತ್ತು. ಅವರಿಗೊಂದು ಪತ್ರವನ್ನು ಲಕ್ಷ್ಮೀದೇವಿ ಕೊಟ್ಟರು. ಹಾಗೆ ಪತ್ರ ಸಿಕ್ಕ ಕೂಡಲೇ ಭಾಣಾಪುರದಿಂದ ಒಬ್ಬರೇ ರೈಲು ಹತ್ತಿ ಗದಗಿಗೆ ಹೋಗಿ ಅನಾಥಳೆಂದು ಬಸಯ್ಯ ಅವರನ್ನು ಕಂಡು ವಿನಂತಿಸಿಕೊಂಡರು (ಹೀಗೆಯೇ ಹೇಳೆಂದು ಲಕ್ಷ್ಮೀದೇವಿ ಹೇಳಿಕೊಟ್ಟಿದ್ದರು). ಅಲ್ಲಿ ಫ್ಲೋರಿನಾಬಾಯಿ, ಲಾಠಿ ಗುಂಡಪ್ಪಜ್ಜ, ಖೇಡಗಿ ಮೈಬುಸಾಬ್ ಕಲಾವಿದರಿದ್ದರು. ಹೀಗೆ ಕಂಪನಿ ಸೇರಿದಾಗ ‘‘ಪಾತ್ರ ಮಾಡಬೇಕಂದ್ರ ಹತ್ತು ಮಳೆಗಾಲ ಕಳೆಯಬೇಕು’’ ಎಂದು ಫ್ಲೋರಿನಾಬಾಯಿ ಹೇಳುತ್ತಿದ್ದರು. ಕಂಪನಿಯಲ್ಲಿ ಕುರ್ಚಿಗುಂಡಿ ಕಸಗುಡಿಸುವ, ಬಣ್ಣ ಅಳಿಸಿಕೊಳ್ಳುವ ರಂಗಪಾರ್ಟಿ ಬಟ್ಟೆ ತೊಳೆಯುವ ಕೆಲಸ ನಿರ್ವಹಿಸಿದರು. ರಾತ್ರಿ ತಬಲಾ ನುಡಿಸುವ ಕಲಾವಿದರ ಪಕ್ಕ ಕೂತು ದಿನವೂ ನಾಟಕ ನೋಡುತ್ತಿದ್ದರು. ಹೀಗಿರುವಾಗ ‘ಹೇಮರಡ್ಡಿ ಮಲ್ಲಮ್ಮ’ ನಾಟಕದ ಮಲ್ಲಮ್ಮನ ಪಾತ್ರಕ್ಕೆ ಹಾವೇರಿ ಜುಬೇದಾಬಾಯಿ ಬಂದಾಗ ‘‘ಪಾರ್ಟ್ ಮಾಡಬೇಕು’’ ಎಂದು ಸರಸ್ವತಿ ಅವರನ್ನು ಕೇಳಿಕೊಂಡರು. ಆಗ ಅವರು ಮಾಗನೂರು ಭರಮಣ್ಣನ ಕಂಪನಿಗೆ ಸೇರಿಸಿದರು. ಈ ಕಂಪನಿಯ ಅನೇಕ ನಾಟಕಗಳಿಗೆ ಬಣ್ಣ ಹಚ್ಚಿದ ಅವರು, ಪ್ರಮುಖ ಪಾತ್ರಗಳನ್ನೂ ನಿರ್ವಹಿಸಿದರು. ಅಲ್ಲಿಂದ ಬೆಳಗಾವಿ ಜಿಲ್ಲೆಯ ಸುರೇಬಾನದಲ್ಲಿ ಕೊಣನೂರು ಕ್ಯಾಂಪಿನಲ್ಲಿ ಮಾಂಡ್ರೆ ಕವಿಗಳು ಹಾಗೂ ಬಿ.ಪಿ.ಸಣ್ಣಪ್ಪ ಅವರು ಕಂಪನಿ ಶುರು ಮಾಡಿದಾಗ ಸರಸ್ವತಿಯೂ ಸೇರಿದರು. ಸಂಗಮೇಶ, ತುರುಬಿನ ಬಸವರಾಜ ಹಾಗೂ ಶಿರಹಟ್ಟಿ ರಾಮಣ್ಣ ನೃತ್ಯಗಾರರಿದ್ದರು. ಮೆಹಬೂಬಲಿ, ನಂಜಪ್ಪ, ಜಕ್ಕಲಿ ಈಶ್ವರ, ಸೂಡಿ ಶೇಖರಯ್ಯ ಹೆಂಡತಿ ಲಕ್ಷ್ಮೀದೇವಿ, ವರಲಕ್ಷ್ಮೀ, ಕಲಾವತಿ, ಶಕುಂತಲಾ ಮೊದಲಾದ ಕಲಾವಿದರಿದ್ದರು. ಗಾಂಧಿಟೋಪಿ, ಹಳ್ಳಿಯಿಂದ ದಿಲ್ಲಿಯವರೆಗೆ, ಖಾದಿಸೀರೆ, ಚಿತ್ರಂಗದಾ, ಪುತ್ಥಳಿ ನಾಟಕಗಳಲ್ಲಿ ಸರಸ್ವತಿ ಪ್ರಮುಖ ಪಾತ್ರ ನಿರ್ವಹಿಸಿದರು. ಆದರೆ ಕಂಪನಿ ಮುಚ್ಚಿದಾಗ ಅವರ ತಂದೆ ವೀರಪ್ಪ ಕೊಪ್ಪಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸರಸ್ವತಿಯವರು ಟೈಲರಿಂಗ್ ಕಲಿಯಲು ಆರಂಭಿಸಿದರು. ಮದುವೆ ಮಾಡಲು ಅವರ ತಂದೆ ಮುಂದಾಗಿದ್ದರು. ಹೀಗಿದ್ದಾಗ ಶೇಕ್ ಚಾಂದ್ ಅವರ ಕಲ್ಯಾಣೇಶ್ವರ ಕೃಪಾ ಪೋಷಿತ ನಾಟ್ಯ ಸಂಘವನ್ನು ಕಲಬುರಗಿ ಜಿಲ್ಲೆಯ ಮಲ್ಲಾಬಿಯಲ್ಲಿ ಆರಂಭಿಸಿದರು. ಇದಕ್ಕಾಗಿ ಕಲಾವಿದೆಯರನ್ನು ಹುಡುಕುತ್ತಿದ್ದರು. ಆಗ ಕಲಾವಿದರಾದ ತಾಳಿಕೋಟಿ ಶಿವಣ್ಣ, ಶ್ರೀಶೈಲ ಅವರು ಸರಸ್ವತಿಯ ಹೆಸರು ಹೇಳಿದರು. ಶೇಕ್ ಚಾಂದ್ ಅವರು ಕೊಪ್ಪಳಕ್ಕೆ ಬಂದು ಕಂಪನಿಗೆ ಆಹ್ವಾನಿಸಿದಾಗ ಸರಸ್ವತಿಯವರ ತಂದೆ ವೀರಪ್ಪ ಅವರು ಕಳಿಸಲ್ಲವೆಂದರು. ‘‘ಕಲಬುರಗಿಯ ಶರಣಬಸಪ್ಪ ಗುಡಿ ನೋಡಬೇಕಂತ ಆಸೆ. ಇದೊಂದು ಸರ್ತಿ ಕಂಪನಿಯ ನಾಟಕಕ್ಕ ಹೋಗ್ತೀನಿ’’ ಎಂದು ಸರಸ್ವತಿ ಹೇಳಿದಾಗ ಒಪ್ಪಿ ಕರೆದುಕೊಂಡು ಹೋದರು. ಹೀಗೆ 3-4 ಕಡೆ ಮುಕ್ಕಾಮು ಮಾಡಿದಾಗ ಶೇಕ್ ಚಾಂದ್ ಅವರೊಂದಿಗೆ ‘ಬಸ್ ಹಮಾಲ’ ನಾಟಕದಲ್ಲಿ ಹೆಂಡತಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದರು. ಹೀಗಿದ್ದಾಗ ಸರಸ್ವತಿ ಅವರನ್ನು ಪ್ರೀತಿಸುತ್ತಿದ್ದ ಶೇಕ್ ಚಾಂದ್ ಅವರು ಮದುವೆಯಾಗಲು ಕೇಳಿಕೊಂಡರು. ಸರಸ್ವತಿ ಅವರು ಮೊದಲು ಒಪ್ಪಲಿಲ್ಲ. ಇದರಿಂದ ಬೇಸರಗೊಂಡ ಶೇಕ್ ಅವರು 12 ದಿನಗಳವರೆಗೆ ಉಪವಾಸ ಮಾಡಿ ನಿತ್ರಾಣರಾದಾಗ ಸರಸ್ವತಿ ಅವರು ಮದುವೆಯಾಗಲು ವಚನ ಕೊಟ್ಟರು. ಆದರೆ ಅವರ ತಂದೆ ಒಪ್ಪದಾಗ ತಮ್ಮ ಊರಾದ ಮಲ್ಲಾಬಿಗೆ ಶೇಕ್ ಅವರು ಕರೆದುಕೊಂಡು ಹೋದರು. ಅಲ್ಲಿಗೂ ಹುಡುಕಿಕೊಂಡು ಬಂದ ವೀರಪ್ಪ ಅವರು ಮದುವೆ ಬೇಡವೆಂದು ಒತ್ತಾಯಿಸಿದರು. ಆಗ ಅವರಿಂದ ತಪ್ಪಿಸಿಕೊಂಡು ವಿಜಯಪುರ ಜಿಲ್ಲೆಯ ಸಿಂದಗಿಗೆ ತೆರಳಿ ಮದುವೆ ಮಾಡಿಕೊಂಡು ಜುಲೇಖಾ ಬೇಗಂ ಎಂದಾದರು. ಅವರಿಗೆ ಮೂವರು ಪುತ್ರರು. ಮುಹ್ಮದ್‌ರಫಿ ಅವರು ಸಿಪಿಐ ಆಗಿದ್ದವರು ಹೃದಯಾಘಾತದಿಂದ ನಿಧನರಾದರು. ಸಿಕಂದರ್ ಬಾದಷಾ ಅವರು ಅನಾರೋಗ್ಯದಿಂದ ನಿಧನರಾದರು. ಅವರ ಇನ್ನೊಬ್ಬ ಪುತ್ರ ಅಬ್ದುಲ್ ಕರೀಂ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಮೈಸೂರಿನಲ್ಲಿದ್ದಾರೆ.

ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕಂಪನಿಯಲ್ಲಿ 1969ರಿಂದ 1985ರ ವರೆಗೆ ಶೇಕ್ ಅವರೊಂದಿಗೆ ಕಲಾವಿದರಾಗಿದ್ದರು. ನಾಟಕ ಕಂಪನಿಗಳಲ್ಲಿದ್ದಾಗ ಸರಸ್ವತಿ ಶೇಕ್ ಚಾಂದ್ ಎಂದೇ ಕರೆಯಲ್ಪಡುತ್ತಿದವರು ಈಚೆಗೆ ಸರಸ್ವತಿ ಜುಲೇಖಾ ಬೇಗಂ ಎಂದು ಪ್ರಸಿದ್ಧರಾಗಿದ್ದಾರೆ. ಶೇಕ್ ಚಾಂದ್ ಅವರು ಇಪ್ಪತ್ತೈದು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡರು. ‘‘ಯಾವಾಗಲೂ ಪಾತ್ರ ಬಿಟ್ಟಿಲ್ರಿ. ಈಗಲೂ ಪಾತ್ರ ಮಾಡಾಕ ರೆಡಿ ಅದೀನ್ರಿ’’ ಎನ್ನುವ ಸರಸ್ವತಿ ಜುಲೇಖಾ ಬೇಗಂ ಕಳೆದ ವರ್ಷ (2024) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X