Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಕೊಪ್ಪಳದ ‘ರಂಗದಾರ’ದ ರಂಗಸಾಹಸ

ಕೊಪ್ಪಳದ ‘ರಂಗದಾರ’ದ ರಂಗಸಾಹಸ

ಗಣೇಶ ಅಮೀನಗಡಗಣೇಶ ಅಮೀನಗಡ25 Oct 2024 3:40 PM IST
share
ಕೊಪ್ಪಳದ ‘ರಂಗದಾರ’ದ ರಂಗಸಾಹಸ
ಶಿಕ್ಷಣದಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಹೇಗೆ ಮಾಡಬಹುದು ಎಂಬುದರ ಸಲುವಾಗಿ ವಿದ್ಯಾರ್ಥಿಗಳಿಗೆ ಪಠ್ಯವಿರುವ ನಾಟಕಗಳನ್ನು ಆಡುವುದರ ಜೊತೆಗೆ ಅಂಕಗಳು ಹೆಚ್ಚು ಬರಬೇಕು. ನಾಟಕಗಳಲ್ಲಿ ಆಸಕ್ತಿ ಹೆಚ್ಚಬೇಕು. ರಂಗಭೂಮಿಯತ್ತ ವಾಲಬೇಕು ಎನ್ನುವ ಉದ್ದೇಶದಿಂದ ಅವರು ಸಂಚಾರ ಕೈಗೊಂಡಿದ್ದಾರೆ.

ಕೊಪ್ಪಳದ ಲಕ್ಷ್ಮಣ ಪೀರಗಾರ ಹಾಗೂ ಶರಣು ಶೆಟ್ಟರ ಅವರು ಕೂಡಿ ಕಟ್ಟಿದ ‘ರಂಗದಾರ’ ರೆಪರ್ಟರಿ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಪಿಯು ವಿದ್ಯಾರ್ಥಿಗಳಿಗೆ ರಾಜ್ಯದಾದ್ಯಂತ ನಾಟಕವಾಡುವ ಈ ರೆಪರ್ಟರಿ ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳನ್ನು ನಾಟಕ ಮೂಲಕ ತಲುಪಿದೆ.

‘‘ನಾವೇ ನಟರು, ನಾವೇ ಸಂಘಟಕರು, ನಾವೇ ನಿರ್ದೇಶಕರು, ನಾವೇ ಅಡುಗೆ ಮಾಡಿಕೊಳ್ಳುವವರು... ಹೀಗೆ ನಾವೆಲ್ಲ ಒಂದು ತಂಡವಾಗಿ ಮುನ್ನಡೆದಿದ್ದೇವೆ. ಇದು ಯಶಸ್ವಿಯಾಗಿದೆ. ತಿಂಗಳಿಗೆ ಎರಡೂವರೆ ಲಕ್ಷ ರೂ.ವರೆಗೆ 15 ಕಲಾವಿದರಿಗೆ ಪಗಾರ ಕೊಡ್ತೀವಿ’’ ಎಂದು ಖುಷಿಯಿಂದ ಹೇಳಿದರು ಲಕ್ಷ್ಮಣ ಪೀರಗಾರ. ಅವರು ಕೊಪ್ಪಳದ ರಂಗದಾರ ರೆಪರ್ಟರಿಯ ನಿರ್ದೇಶಕರು.

ಶಿಕ್ಷಣದಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಹೇಗೆ ಮಾಡಬಹುದು ಎಂಬುದರ ಸಲುವಾಗಿ ವಿದ್ಯಾರ್ಥಿಗಳಿಗೆ ಪಠ್ಯವಿರುವ ನಾಟಕಗಳನ್ನು ಆಡುವುದರ ಜೊತೆಗೆ ಅಂಕಗಳು ಹೆಚ್ಚು ಬರಬೇಕು. ನಾಟಕಗಳಲ್ಲಿ ಆಸಕ್ತಿ ಹೆಚ್ಚಬೇಕು. ರಂಗಭೂಮಿಯತ್ತ ವಾಲಬೇಕು ಎನ್ನುವ ಉದ್ದೇಶದಿಂದ ಅವರು ಸಂಚಾರ ಕೈಗೊಂಡಿದ್ದಾರೆ. ಇದಕ್ಕಾಗಿ ಪಿಯು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯವಾಗಿರುವ ಡಾ.ಚಂದ್ರಶೇಖರ ಕಂಬಾರ ಅವರ ‘ಬೆಪ್ಪುತಕ್ಕಡಿ ಬೋಳೆಶಂಕರ’ ಹಾಗೂ ಪಿಯು ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯವಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡರ ಆನೆ’ ನಾಟಕವನ್ನು ಆಯ್ದುಕೊಂಡಿದ್ದಾರೆ. ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕವನ್ನು ಗಣಪತಿ ಹೆಗಡೆ ಹಿತ್ಲಕೈ ನಿರ್ದೇಶಿಸಿದ್ದರೆ, ‘ಕೃಷ್ಣೇಗೌಡರ ಆನೆ’ ನಾಟಕವನ್ನು ಜಗದೀಶ್ ಜಾಣಿ ನಿರ್ದೇಶಿಸಿದ್ದಾರೆ.

‘‘ಇತರ ರೆಪರ್ಟರಿ ಮಾದರಿಯಲ್ಲಿ ನಮ್ಮ ರಂಗದಾರ ರೆಪರ್ಟರಿ. ದಾರ ಅಂದರೆ ಪೋಣಿಸುವ ಅಂದರೆ ಹೊಲಿಯುವ ದಾರದ ಹಾಗೆ ನಮ್ಮ ರೆಪರ್ಟರಿ. ಸಂಬಂಧಗಳನ್ನು ಬೆಸೆಯುವ ನಮ್ಮ ತಂಡವು ಹೈದರಾಬಾದಿನ ‘ಸುರಭಿ’ ತಂಡದ ಹಾಗೆ. ಅಲ್ಲಿ ಇಡೀ ಕುಟುಂಬ ರಂಗಭೂಮಿಯಲ್ಲಿ ತೊಡಗಿಕೊಂಡಿದೆ. ಹೀಗೆಯೇ ನಮ್ಮ ತಂಡವೂ ತೊಡಗಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ನಾಟಕ ಆಡುತ್ತಿರುವುದರಿಂದ ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳಿಗೆ ಒತ್ತು ಕೊಟ್ಟಿದ್ದೇವೆ. ಇದರಿಂದ ಅವರು ಪಡೆಯುವ ಅಂಕಗಳು ಹೆಚ್ಚಿವೆ. ಸರಕಾರಿ ಕಾಲೇಜು ವಿದ್ಯಾರ್ಥಿಗಳ ಎದುರು ನಮ್ಮ ನಾಟಕ ಆಡುವಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ’’ ಎನ್ನುವ ಹೆಮ್ಮೆ ಲಕ್ಷ್ಮಣ ಅವರದು.

‘‘ಸಂಘಟಕರನ್ನು ಹುಡುಕಿ ನಾಟಕವಾಡುವುದು ಕಷ್ಟಸಾಧ್ಯ. ಮೊದಲ ವರ್ಷ ಅಂದರೆ 2022ರಲ್ಲಿ ಸಂಚಾರ ಆರಂಭ ಮಾಡಿದಾಗ ನಷ್ಟ ಅನುಭವಿಸಿದೆವು. ಮರುವರ್ಷ 2023ರಲ್ಲಿ ಹೊಸ ನಿರ್ದೇಶಕರನ್ನು ಹುಡುಕಿ, ಸಂಭಾವನೆ ಪಡೆಯದವರು ಅಂದರೆ ಆರಂಭದಲ್ಲೇ ತೆಗೆದುಕೊಳ್ಳದವರು ನಾಟಕ ನಿರ್ದೇಶಿಸಿದರು. ಕಳೆದ ವರ್ಷ 15 ಜಿಲ್ಲೆಗಳನ್ನು ತಲುಪಿದ್ದೆವು’’ ಎಂದು ಮೆಲುಕು ಹಾಕಿದರು ಲಕ್ಷ್ಮಣ.

ಶೈಕ್ಷಣಿಕ ರಂಗಭೂಮಿಯನ್ನು ಜೀವಂತವಾಗಿಡಬೇಕೆಂದು ಮೂರು ತಿಂಗಳ ಹಿಂದೆ ತಿರುಗಾಟ ಆರಂಭಿಸಿದ ಅವರು, ಈಗಾಗಲೇ ಬೆಳಗಾವಿ, ವಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಸಂಚರಿಸಿದ್ದಾರೆ. ಸದ್ಯ ರಾಮನಗರದಲ್ಲಿದ್ದಾರೆ. ಕರ್ನಾಟಕ ನಾಟಕ ಅಕಾಡಮಿ ಸದಸ್ಯ ಕುಂಬಾಪುರ ಬಾಬು ಅವರು ತಮ್ಮ ಜನಮುಖಿ ಟ್ರಸ್ಟ್ ಮೂಲಕ ನೀನಾಸಂ ನಾಟಕಗಳನ್ನು ರಾಮನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದಾಗ ತಮ್ಮ ಕಲಾವಿದರಿಗೂ ತೋರಿಸಿದರು. ಇದರೊಂದಿಗೆ ಡಾ.ಎಂ. ಬೈರೇಗೌಡ ಅವರ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ತಮ್ಮ ಕಲಾವಿದರಿಗೇ ಶಿಬಿರ ಆಯೋಜಿಸಲಿದ್ದಾರೆ. ಇದು ಹೇಗೆಂದರೆ; ನಾಟಕವಾಡುವುದರ ಜೊತೆಗೆ ತಮ್ಮ ತಂಡದ ಕಲಾವಿದರಿಗೆ ಹಿಂದಿನ ಅನುಭವಗಳ ಮೆಲುಕು ಹಾಕುತ್ತ, ಹೊಸ ಸವಾಲುಗಳನ್ನು ಸ್ವೀಕರಿಸುತ್ತ, ಸಲಹೆಗಳನ್ನು ಅಳವಡಿಸಿಕೊಳ್ಳುತ್ತ ಹತ್ತು ದಿನಗಳ ಪುನಶ್ಚೇತನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಆಮೇಲೆ ಮತ್ತೆ ತಿರುಗಾಟ ಮಾಡಲಿದ್ದಾರೆ. ರಾಮನಗರಕ್ಕೆ ನಾಟಕವಾಡಲು ಬಂದ ನೀನಾಸಂ ತಿರುಗಾಟದ ಕಲಾವಿದರೊಂದಿಗೆ ಅವರ ಕಲಾವಿದರು ಬೆರೆತರು. ಅವರೊಂದಿಗೆ ಚರ್ಚಿಸಿದರು. ಇದರಿಂದ ನೀನಾಸಂ ಕಲಾವಿದರ ಅಭಿನಯ, ಸಂಭಾಷಣೆ ಗಮನಿಸಿದರು.

ಮುಖ್ಯವಾಗಿ ನಾಟಕಗಳ ಸಂಚಾರಕ್ಕಾಗಿ ಬಾಡಿಗೆ ವಾಹನ, ಚಾಲಕರ ಪಗಾರ, ಲೈಟು, ಮೈಕು ಇತ್ಯಾದಿ ಬಾಡಿಗೆ ಪಡೆದು ಪರದಾಡದೆ ಕಳೆದ ವರ್ಷದ ಪಯಣದಿಂದ ಬಂದ ಲಾಭದಲ್ಲಿ ಟೆಂಪೊ ಟ್ರಾವೆಲರ್ ಖರೀದಿಸಿದ್ದಾರೆ. ಮೈಕ್, ಲೈಟ್ಸ್ ಕೂಡಾ ಹೊಂದಿದ್ದಾರೆ. ‘‘ಸರಳ ವೇದಿಕೆ ಮೇಲೆ ಕೂಡಾ ನಾಟಕವಾಡಲು ಸಿದ್ಧ, ಹಾಗೆಯೇ ಸರಳವಸತಿ ಸೌಲಭ್ಯ ಕಲ್ಪಿಸಿದರೆ ನಾಟಕ ಆಡಲು ಸಿದ್ಧ’’ ಎನ್ನುವ ಲಕ್ಷ್ಮಣ ಅವರು ನೀನಾಸಂ ಪದವೀಧರ ಹಾಗೂ ತಿರುಗಾಟದಲ್ಲಿ ನಾಲ್ಕು ವರ್ಷವಿದ್ದರು. ಇದರೊಂದಿಗೆ ಕೊಪ್ಪಳದ ವಿಸ್ತಾರ ರಂಗಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರ ತಂಡದಲ್ಲಿ ವೀರೇಶ್ ರಾಯಚೂರು, ಉಮೇಶ್ ಧಾರವಾಡ, ಮಂಜುನಾಥ್ ಚಿಕ್ಕಮಗಳೂರು, ಹನುಮೇಶ್ ಮುದಗಲ್, ಪರಶುರಾಮ ವಾಲಿಕಾರ, ಬಿ.ಎಚ್. ಕುಮಾರ್ ಹಂಚಿನಾಳ, ದುರುಗೇಶ್ ಮೂಲಿಮನಿ, ಶರಣಪ್ಪ ಬಿಂಗಿ, ಶಾಂಭವಿ ದೇವಋಷಿ, ರೇಶ್ಮಾ ಕೊಪ್ಪಳ, ಶಿವಪ್ಪ ಗುತ್ತಿಗನೂರ, ವೆಂಕಟೇಶ ಹೊಸಮನಿ, ಪ್ರವೀಣ ಬೇವೂರ, ಸೂರಿ ಚಿಲಕಮುಖಿ, ಮಂಜುನಾಥ ಪೂಜಾರ ಹಾಗೂ ಅನಿತಾ ಕೊಪ್ಪಳ ಕಲಾವಿದರಿದ್ದಾರೆ.

‘‘ಈ ದುರಿತ ಕಾಲದಲ್ಲಿ ಮಾನವೀಯತೆ ಯನ್ನು ಕಾಪಿಟ್ಟುಕೊಳ್ಳುವುದು ಬಲು ದುಸ್ತರವಾಗಿದೆ. ಇದಕ್ಕೆ ಮದ್ದು ನಮ್ಮ ಸಾಂಸ್ಕೃತಿಕ ಬೇರುಗಳಲ್ಲೇ ಇದೆ. ಆ ಬೇರುಗಳನ್ನು ಉಳಿಸಿಕೊಳ್ಳುವುದು ಇಂದಿನ ನಮ್ಮ ತುರ್ತಾಗಬೇಕಿದೆ. ಇದಕ್ಕೆ ರಂಗಭೂಮಿಯು ಚಿಕಿತ್ಸೆಯಾಗಿ ಮದ್ದು. ಇದಕ್ಕಾಗಿ ಜನಮಾನಸದಲ್ಲಿ ಸಾಂಸ್ಕೃತಿಕ ಎಚ್ಚರವೊಂದನ್ನು ಜಾಗೃತಗೊಳಿಸುವುದಕ್ಕಾಗಿ ಕಾಲೇಜಿನ ವಿದ್ಯಾರ್ಥಿಗಳನ್ನು ರಂಗಭೂಮಿ ಮೂಲಕ ತಲುಪುತ್ತಿದ್ದೇವೆ’’ ಎನ್ನುವ ಲಕ್ಷ್ಮಣ ಪೀರಗಾರ ಅವರೊಂದಿಗೆ ಶರಣು ಶೆಟ್ಟರ ಅವರು ರೆಪರ್ಟರಿಯ ಸಂಯೋಜಕರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ಶರಣು ಶೆಟ್ಟರ ಅವರು ಸಾಣೇಹಳ್ಳಿ ನಾಟಕ ಶಾಲೆಯ ಪದವೀಧರರು. ಶಿವಸಂಚಾರದಲ್ಲೂ ಇದ್ದರು.

‘‘ರಾಜ್ಯದಲ್ಲಿರುವ ಅನೇಕ ರಂಗಶಾಲೆಗಳಿಂದ ಬರುವವರು ಸಿನೆಮಾ, ಧಾರಾವಾಹಿಗಳತ್ತ ಮುಖ ಮಾಡುತ್ತಾರೆ. ಅಲ್ಲಿ ತಕ್ಷಣ ಅವಕಾಶ ಸಿಗದಾಗ ನಿರಾಸೆಯಾಗುತ್ತಾರೆ. ಇಂಥ ಸಂದರ್ಭದಲ್ಲಿ ರಂಗಭೂಮಿ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂದು ಸಾಬೀತುಪಡಿಸಿದ್ದೇವೆ’’ ಎನ್ನುವ ಹೆಮ್ಮೆ ಅವರದು.

‘‘ವಿದ್ಯಾರ್ಥಿಗಳಿಗೆ ನಾಟಕ ತೋರಿಸುತ್ತ, ಸಂವಹನ ಮಾಡುತ್ತೇವೆ. ಇತಿಹಾಸ, ವಿಜ್ಞಾನದ ಪಾಠಗಳ ಕುರಿತೂ ನಾಟಕ ಮಾಡಿ ಎಂದು ಕೇಳುತ್ತಿದ್ದಾರೆ ವಿದ್ಯಾರ್ಥಿಗಳು. ಬರುವ ಜನವರಿ ಅಂತ್ಯದವರೆಗೂ ಪಯಣವನ್ನು ರಾಜ್ಯದಾದ್ಯಂತ ಮುಂದುವರಿಸುತ್ತೇವೆ. ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪಿದ್ದೇವೆ. ಏಳೆಂಟು ತರಗತಿಗಳಲ್ಲಿ ಹೇಳುವುದನ್ನು ಒಂದೂವರೆ ಗಂಟೆಯಲ್ಲಿ ನಾಟಕ ಕಟ್ಟಿಕೊಡುವುದರಿಂದ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ. ಮರೆಯಲಾಗದ ಘಟನೆ ಎಂದರೆ; ಸಿನೆಮಾದಲ್ಲಿ ನಾಯಕನನ್ನು ಎತ್ತಿಕೊಂಡು ಮೆರೆಸಿದ ಹಾಗೆ ನಮ್ಮ ನಾಟಕದ ಕಲಾವಿದರನ್ನು ಅದರಲ್ಲೂ ಅವರಿಗೆ ಇಷ್ಟವಾದ ಕಲಾವಿದರನ್ನು ಎತ್ತಿಕೊಂಡು ಓಡಾಡುತ್ತಾರೆ. ಇದು ಅನೇಕ ಕಾಲೇಜುಗಳಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಕೊಣ್ಣೂರಿನ ಪಿಯು ಕಾಲೇಜಿನಲ್ಲಿ ತಮಗಿಷ್ಟವಾದ ‘ಕೃಷ್ಣೇಗೌಡರ ಆನೆ’ ನಾಟಕದ ವೇಲಾ ಹಾಗೂ ‘ಬೋಳೆಶಂಕರ’ ನಾಟಕದ ಕೋಡಂಗಿ ಪಾತ್ರಧಾರಿಗಳನ್ನು ಎತ್ತಿಕೊಂಡು ಓಡಾಡಿ ಮೆರವಣಿಗೆ ಮಾಡಿದರು. ಇದು ನಮ್ಮ ಕಲಾವಿದರಿಗೆ ಸಿಕ್ಕ ಗೌರವ’’ ಎಂದು ಶೆಟ್ಟರ ಸಂತಸ ಹಂಚಿಕೊಂಡರು.

ನಾಟಕ ನೋಡುವುದರ ಮೂಲಕ ವಿದ್ಯಾರ್ಥಿಗಳು ಬದಲಾಗುತ್ತಾರೆ. ಇದಕ್ಕಾಗಿ ಶಿಕ್ಷಣದಲ್ಲಿ ರಂಗಭೂಮಿ ಖಂಡಿತವಾಗಿ ಅಗತ್ಯವಿದೆ. ಅತಿಯಾದ ಮೊಬೈಲ್ ಬಳಕೆ, ವಾಟ್ಸ್‌ಆ್ಯಪ್, ಸೆಲ್ಫಿಯಲ್ಲೇ ಕಳೆದುಹೋಗುವ ವಿದ್ಯಾರ್ಥಿಗಳಿಗೆ ‘ರಂಗದಾರ’ ನಾಟಕಗಳು ಸಾಂಸ್ಕೃತಿಕ ಸಂಸ್ಕಾರವನ್ನು ನೀಡುತ್ತಿವೆ. ಆಸಕ್ತರು ಅವರಿಬ್ಬರನ್ನು (8197808300/9663974163) ಸಂಪರ್ಕಿಸಬಹುದು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X