Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಬಡತನ ಕಾಡುವಾಗ ಬಣ್ಣದ ಬದುಕಿಗೆ...

ಬಡತನ ಕಾಡುವಾಗ ಬಣ್ಣದ ಬದುಕಿಗೆ...

ಗಣೇಶ ಅಮೀನಗಡಗಣೇಶ ಅಮೀನಗಡ13 Dec 2025 2:49 PM IST
share
ಬಡತನ ಕಾಡುವಾಗ ಬಣ್ಣದ ಬದುಕಿಗೆ...

ಇಪ್ಪತ್ತು ವರ್ಷಗಳಿಂದ ಪ್ರೇಮಾ ಗುಳೇದಗುಡ್ಡ ತಮ್ಮ ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ ಆಶಾಪುರದ ಬಸವರಾಜಗೌಡ ಪಾಟೀಲ ಅವರು ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು 27-12-1982ರಲ್ಲಿ ತಮ್ಮ ಊರಾದ ಆಶಾಪುರದಲ್ಲಿ ಆರಂಭಿಸಿದ್ದರು. 2007ರವರೆಗೆ ಆಶಾಪುರ ಗೌಡರು ಮಾಲಕರಾಗಿ ಮುನ್ನಡೆಸಿದರು. ಅವರು ತೀರಿಕೊಂಡ ನಂತರ ಅಂದರೆ ಇಪ್ಪತ್ತು ವರ್ಷಗಳಿಂದ ಈ ಸಂಘದ ಒಡತಿಯಾಗುವುದರ ಜೊತೆಗೆ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಪ್ರೇಮಾ ಅವರು.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಗುದ್ನೇಶ್ವರ ಜಾತ್ರೆಯ ಅಂಗವಾಗಿ ಆಶಾಪುರದ ಶ್ರೀ ಸಂಗಮೇಶ್ವರ ನಾಟ್ಯ ಸಂಘವು ಮುಕ್ಕಾಂ ಮಾಡಿದ್ದು, ‘ಹಣಿಕಿ ನೋಡ್ಯಾಳ ಹಳ್ಳಕ್ಕ ಕೆಡಿವ್ಯಾಳ’ ನಾಟಕ ಪ್ರದರ್ಶಿಸುತ್ತಿದೆ.

ಈ ನಾಟಕ ರಮೇಶ ಬಡಿಗೇರ ಅವರದು. ಇದರಲ್ಲಿ ಮೂರ್ತಿ ಹಂದ್ರಾಳ ಹಾಗೂ ತೇಜಸ್ವಿನಿ ವಿಜಯಪುರ ಹಾಸ್ಯಪಾತ್ರದಲ್ಲಿ, ಶಿವು ಬ್ಯಾಡಗಿ ಹಾಗೂ ಗಂಗಾ ನಕ್ಷತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಈ ಸಂಘದ ಒಡತಿ ಪ್ರೇಮಾ ಗುಳೇದಗುಡ್ಡ ಮಾರ್ಗದರ್ಶನ ನೀಡುತ್ತಿದ್ದಾರೆ.

ಇಪ್ಪತ್ತು ವರ್ಷಗಳಿಂದ ಅವರು ತಮ್ಮ ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ ಆಶಾಪುರದ ಬಸವರಾಜಗೌಡ ಪಾಟೀಲ ಅವರು ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು 27-12-1982ರಲ್ಲಿ ತಮ್ಮ ಊರಾದ ಆಶಾಪುರದಲ್ಲಿ ಆರಂಭಿಸಿದ್ದರು. 2007ರವರೆಗೆ ಆಶಾಪುರ ಗೌಡರು ಮಾಲಕರಾಗಿ ಮುನ್ನಡೆಸಿದರು. ಅವರು ತೀರಿಕೊಂಡ ನಂತರ ಅಂದರೆ ಇಪ್ಪತ್ತು ವರ್ಷಗಳಿಂದ ಈ ಸಂಘದ ಒಡತಿಯಾಗುವುದರ ಜೊತೆಗೆ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಪ್ರೇಮಾ ಅವರು.

ನಾ.ದೇ. ಅವರ ‘ಎಚ್ಚರ ತಂಗಿ ಎಚ್ಚರ’, ಮಾಂಡ್ರೆ ಅವರ ‘ಮಡದಿ ಕೊಟ್ಟ ಮಾತು’ ಹಾಗೂ ‘ದೇಸಾಯರ ದರ್ಬಾರ್’ ಮತ್ತು ‘ಶ್ರೀ ಗೂಗಲ್ ಪ್ರಭುಲಿಂಗೇಶ್ವರ ಮಹಾತ್ಮೆ’, ಪ್ರಕಾಶ ಕಡಪಟ್ಟಿ ಅವರ ಚೆನ್ನಪ್ಪ ಚೆನ್ನೇಗೌಡ, ಸಾಳುಂಕೆ ಅವರ ‘ಕಿವುಡ ಮಾಡಿದ ಕಿತಾಪತಿ’, ಬಿ.ಆರ್. ಅರಿಸಿನಗೋಡಿ ಅವರ ‘ಬಸ್ ಕಂಡಕ್ಟರ್’ ಈ ನಾಟಕಗಳನ್ನು ಕಳೆದ 15-20 ವರ್ಷಗಳಿಂದ ಅವರು ನಿರಂತರವಾಗಿ ಪ್ರದರ್ಶಿಸುತ್ತಿದ್ದು, ಯಶಸ್ವಿಯೂ ಆಗಿವೆ.

ಇಂಥ ಪ್ರೇಮಾ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರು. ಈ ಊರಲ್ಲಿ ಸ್ವಸ್ತಿಕ್ ಸಿನೆಮಾ ಟಾಕೀಸ್ ಮಾಲಕರಾಗಿದ್ದ ಬಸಪ್ಪ ಕರಿಗೋಳಣ್ಣವರ ತಮಾಷಾ ನೃತ್ಯ ಏರ್ಪಡಿಸಿದ್ದರು. ಆದರೆ ನೃತ್ಯಗಾರ್ತಿ ಕೈಕೊಟ್ಟಾಗ ಜೈನರಾಗಿದ್ದ ಸುಲೋಚನಾಬಾಯಿ ನೃತ್ಯ ಮಾಡುತ್ತಾರೆ. ‘‘ಆಗ ಜೈನರಲ್ಲಿ ನೃತ್ಯ ಮಾಡುವುದು ನಿಷೇಧ ಆಗಿತ್ರಿ. ಆದ್ರೂ ಆಕಿ ನೃತ್ಯ ಮಾಡಿದ್ಲು. ನೀರು ಕುಡದ್ರ ಗಂಟಲದಾಗ ಕಾಣಬೇಕು. ಅಷ್ಟು ಲಾಲ್ (ಕೆಂಪು) ಇದ್ಲು. ಎತ್ತರ ಇದ್ಲು. ಕಾಲಿಗೆ ನೂರು ಗೆಜ್ಜೆ ಕಟ್ಟಿದ್ರೂ ಒಂದು ಗೆಜ್ಜೆ ಮಾತ್ರ ನುಡಿಸೋ ಪ್ರಾವೀಣ್ಯತೆ ಆಕೆಗೆ ಇತ್ತು. ಆಕೆಯ ನೃತ್ಯ ನೋಡಿದ ನಮ್ಮ ತಂದೆ ಬಸಪ್ಪ ಕರಿಗೋಳಣ್ಣವರ ಮನೆ ಕಾಣಿಕೆಯಾಗಿ ಕೊಟ್ರು. ನಮ್ಮಪ್ಪ-ಆಕೆ ರಿಜಿಸ್ಟ್ರಾರ್ ಲಗ್ನಾದ್ರು. ಆಮ್ಯಾಲ ಗುಳೇದಗುಡ್ಡದಲ್ಲಿಯೇ ಉಳದ್ಲು. ಮನೆಮಾತು ಮರಾಠಿ. ಅವ್ರಿಗೆ ಆರು ಮಕ್ಕಳು. ನಾಲ್ವರು ಪುತ್ರಿಯರಲ್ಲಿ ಮೂರನೆಯವಳು ನಾನು. ವಿಜಯಾ, ಸುನಂದಾ ಅಕ್ಕಂದಿರು. ತಂಗಿ ನಂದಾ. ನಾವೆಲ್ಲ ಕಲಾವಿದೆಯರಾದೆವು’’ ಎಂದು ಪ್ರೇಮಾ ಸ್ಮರಿಸಿಕೊಳ್ಳುತ್ತಾರೆ.

1975ರಲ್ಲಿ ಆದೋನಿಯಲ್ಲಿ ‘ಗೌಡ್ರಗದ್ಲ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು ಪ್ರೇಮಾ. ಅಲ್ಲಿಂದ ಹೈದರಾಬಾದ್‌ನಲ್ಲಿ ಇದೇ ನಾಟಕವನ್ನು ಮಾನ್ವಿ ತಾಲೂಕಿನ ಬಾಗಲವಾಡದ ಅಮರೇಶ್ವರ ನಾಟ್ಯ ಸಂಘವು ಪ್ರದರ್ಶಿಸಿತು. ಈ ನಾಟಕದ ಗೌಡನ ಪಾತ್ರವನ್ನು ಸಿ.ಡಿ. ಮಲ್ಲಿಕಾರ್ಜುನಗೌಡ ನಿರ್ವಹಿಸಿದರೆ, ಪ್ರೇಮಾ ಅವರು ಖಳನಾಯಕಿ ಮಧುರಾ ಪಾತ್ರಕ್ಕೆ ಬಣ್ಣ ಹಚ್ಚಿದರು. ಹೈದರಾಬಾದ್‌ನಲ್ಲಿ ಕಂಪನಿ ಬಂದ್ ಆದ ಮೇಲೆ ರಾಯಚೂರಿನಲ್ಲಿ ಗೂಡುಸಾಬ್ ಅವರ ನವೋದಯ ನಾಟ್ಯ ಸಂಘವನ್ನು ಪ್ರೇಮಾ ಸೇರಿದರು. ಅಲ್ಲಿ ರಾಘವೇಂದ್ರ ದೇಸಾಯಿ, ಪಟ್ಟದಕಲ್ಲು ಶಿವಪುತ್ರಯ್ಯಸ್ವಾಮಿ ಅವರು ‘ಬಸ್ ಕಂಡಕ್ಟರ್’ ನಾಟಕಕ್ಕೆ ಪ್ರೇಮಾ ಅವರನ್ನು ಕರೆತಂದರು. ಇಲಕಲ್ಲದ ಕೀರ್ತೆಪ್ಪ, ಕಾಕೋಳು ಬಸವರಾಜಪ್ಪ ನಟರಿದ್ದರು. ಈ ನಾಟಕ 150 ಪ್ರಯೋಗ ಕಂಡಿತು. ಇದಕ್ಕೂ ಮೊದಲು ಮೈಂದರಗಿಯ ಕಂಪನಿ, ಕುಕನೂರಿನ ರಹಿಮಾನವ್ವ ಕಲ್ಮನಿ ಕಂಪನಿ, ಗುಡಗುಂಟಿ ಗಂಗಯ್ಯಸ್ವಾಮಿಗಳ ಕಂಪನಿ, ರಾಮರಾವ್ ದೇಸಾಯಿ ಕಂಪನಿ, ಬಿ.ಆರ್. ಅರಿಸಿನಗೋಡಿ ಕಂಪನಿ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕಂಪನಿ, ಅರಳಿಗನೂರು ಚಂದ್ರಯ್ಯ ಕಂಪನಿ, ಸೂಡಿ ಶೇಖರಯ್ಯ ಕಂಪನಿ, ಯಂಕಂಚಿ ಜಟ್ಟೆಪ್ಪನವರ ಕಂಪನಿ ಮೊದಲಾದ ಕಂಪನಿಗಳಲ್ಲಿ ಕಲಾವಿದೆಯಾಗಿದ್ದರು.

‘‘ಗೂಡುಸಾಬ್ ಅವರ ಕಂಪನಿಯಲ್ಲಿದ್ದಾಗ ಆಶಾಪುರ ಗೌಡರಾದ ಬಸವರಾಜ ಪಾಟೀಲ ಅವರು ಕಂಪನಿಗೆ ಕಾಲ್ ಪೆಟಿಗೆ (ಲೆಗ್ ಹಾರ್ಮೋನಿಯಂ) ಕೊಟ್ಟಿದ್ರು; ತಿಂಗಳಿಗೆ ಐವತ್ತು ರೂಪಾಯಿ ಬಾಡಿಗೆಗೆ. ಆಗ ನನಗ 16-17 ವರ್ಷ ವಯಸ್ಸು. ಮಂತ್ರಾಲಯದಲ್ಲಿ ಮದುವೆಯಾದೆವು. ಪುತ್ರಿ ಸೀಮಾ, ಪುತ್ರ ಪ್ರವೀಣ ಹುಟ್ಟಿದ್ರು. ಸೀಮಾ ಕಲಾವಿದೆಯಾಗಲಿಲ್ಲ. ಆಕೆಯನ್ನು ಅಶೋಕ ಮಾಳಗಿ ಅವರಿಗೆ ಕೊಟ್ಟು ಲಗ್ನ ಮಾಡಿದೆವು. ಪುತ್ರ ಪ್ರವೀಣ 2005ರಲ್ಲಿ ಬೈಕ್ ಅಪಘಾತದಲ್ಲಿ ತೀರಿಕೊಂಡ’’ ಎಂದು ನೆನೆದು ಮರುಗಿದರು.

‘‘ಆಶಾಪುರ ಗೌಡರಿಗೆ ಸೀರಿಯಸ್ ಆದಾಗ ಕಂಪನಿಯ ವ್ಯವಸ್ಥಾಪಕರಾದ ಕರೀಂಸಾಬ್, ಈಶ್ವರಪ್ಪ ಅವರನ್ನು ಕರೆದು ಪ್ರೇಮಾ ಧೈರ್ಯವಂತಳು. ಕಂಪನಿ ಮುಂದುವರಸ್ರಿ ಎಂದರು. ಇಪ್ಪತ್ತು ವರ್ಷಗಳಿಂದ ಕಂಪನಿ ನಡೆಸೀನಿ. ಮಗಳು ಸೀಮಾ, ಅಳಿಯ ಅಶೋಕ ಅವರ ಸಹಾಯ, ಸಹಕಾರ ದೊಡ್ಡದು’’ ಎನ್ನುವ ಪ್ರೇಮಾ ಅವರಿಗೆ ಈಗ 69 ವರ್ಷ ವಯಸ್ಸು.

‘‘ಎಸೆಸೆಲ್ಸಿ ಫೇಲಾದೆ. ನಮ್ಮ ತಾಯಿ ನೃತ್ಯ ಕಲಿಸಿದಳು. ಅಪ್ಪ ಕುಡುಕನಾದ. ಬಡತನ ಕಾಡುವಾಗ ಬಣ್ಣದ ಬದುಕಿಗೆ ಬಂದೆ’’ ಎನ್ನುವ ಅವರು ಕಷ್ಟಸುಖಗಳನ್ನು ಸಮನಾಗಿ ಕಂಡಿದ್ದಾರೆ.

‘‘ರಾಯಚೂರು ಜಿಲ್ಲೆಯ ಕವಿತಾಳ ಜಾತ್ರೆಯಲ್ಲಿ ಮಳೆಗಾಳಿಗೆ ಥಿಯೇಟರ್ ಬಿತ್ತು. ಹಿಂಗ ಶಹಪುರದಾಗ ಮಳೆಗಾಳಿಗೆ ಥಿಯೇಟರ್ ಬಿತ್ತು. ಬೆಳಗಾವಿ ಜಿಲ್ಲೆಯ ಅಂಕಲಿಯಲ್ಲಿದ್ದಾಗ ಮಳೆಗಾಳಿಗೆ ಥಿಯೇಟರ್ ಬಿದ್ದಾಗ ಕೈಗೆ ಸಿಕ್ಕ ತಗಡು, ಕುರ್ಚಿ ತಗೊಂಡು ಬಂದ್ವಿ. ಕೈಯಾಗ ರೊಕ್ಕಿಲ್ಲ. ಹಳಸಿದ ಅನ್ನ ಊಟ ಮಾಡಿದ್ವಿ’’ ಎಂದು ಕಣ್ಣೀರು ಒರೆಸಿಕೊಂಡರು.

‘‘ಮಳೆಗಾಳಿ ಜೊತೆಗೆ ಕಲಾವಿದರ ಕೊರತೆಯಿಂದ ಕಂಪನಿ ಬಂದ್ ಮಾಡಬೇಕನ್ನಸ್ತದ. ಆದ್ರ ಬಣ್ಣದ ಬದುಕಿಗೆ ಅಂಟಿಕೊಂಡೀನಿ. ಬಿಡಂಗಿಲ್ರಿ. ಕಂಪನಿ ನಡೆಸಬೇಕು ಅನ್ನೋ ಛಲ ಐತ್ರಿ. 1994ರಲ್ಲಿ ಕುಕನೂರು ಜಾತ್ರೆಗೆ ಮುಕ್ಕಾಮು ಮಾಡಿದ್ವಿ. ಈಗ ಮತ್ತೆ ಈ ವರ್ಷ ಬಂದ್ವಿ. ರಮೇಶ ಬಡಿಗೇರ ಅವರ ‘ಹಣಿಕಿ ನೋಡ್ಯಾಳ ಹಳ್ಳಕ್ಕ ಕೆಡಿವ್ಯಾಳ’ ನಾಟಕ ಆಡ್ತಾ ಇದ್ದೀವಿ. ರಾಜು, ಕಿರಣ್, ಕೊಪ್ಪಳ ಮೂರ್ತಿ ಇತರರು ಕಲಾವಿದರು. ಸೌಂಡ್, ಸೀನ್ಸ್ ಸಿದ್ಧಪಡಿಸಿ ಕೊಟ್ಟಾರ ಅಳಿಯ ಅಶೋಕ. ಮೊಮ್ಮಗಳು ಸೌಮ್ಯಾ ಮೊದಲ ವರ್ಷ ಪಿಯುಸಿ ಓದ್ತಾಳ. ಭರತನಾಟ್ಯ ಕಲಾವಿದೆ. ಕ್ಯಾಶಿಯೊ ನುಡಿಸ್ತಾಳ. ಕಲಾವಿದರ ಮಕ್ಕಳನ್ನು ಕಡೆಗಣಿಸೊ ಕಾಲದಾಗ ನಮ್ಮ ಅಳಿಯ ಅಶೋಕ ಕಂಪನಿ ಬೆಂಬಲಕ್ಕ ನಿಂತಾರ’’ ಎನ್ನುವ ಖುಷಿ, ಹೆಮ್ಮೆ ಅವರಿಗೆ.

ಕರ್ನಾಟಕ ರಾಜ್ಯೋತ್ಸವ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಳ್ಳಾರಿ ರಾಘವ ಪ್ರಶಸ್ತಿ ಪುರಸ್ಕೃತರಾದ ಅವರು, ಪಿ.ಬಿ. ಧುತ್ತರಗಿ ಅವರ ‘ಕಿತ್ತೂರು ಚೆನ್ನಮ್ಮ’ ನಾಟಕದಲ್ಲಿ ಚೆನ್ನಮ್ಮನ ಪಾತ್ರಕ್ಕೆ ಪ್ರಸಿದ್ಧರು. ಈ ನಾಟಕ ಏಳು ಸಾವಿರ ಪ್ರದರ್ಶನಗಳನ್ನು ಕಂಡಿದೆ. ಈಗಲೂ ಅವರನ್ನು ಚೆನ್ನಮ್ಮ ಎಂದೇ ಜನರು ಪ್ರೀತಿಯಿಂದ ಕರೆಯುತ್ತಾರೆ.

ಅವರ ಕುರಿತು ಗವೀಶ ಹಿರೇಮಠ ಅವರು ಸಂಪಾದಿಸಿದ ‘ರಂಗದೀಪ್ತಿ’ ಎನ್ನುವ ಅಭಿನಂದನ ಗ್ರಂಥ ಪ್ರಕಟವಾಗಿದೆ. ಇದಕ್ಕೆ ಶೇಖ್ ಮಾಸ್ತರರು ಸಾಥ್ ನೀಡಿದರೆಂದು ಅವರು ಸ್ಮರಿಸುತ್ತಾರೆ.

‘‘ಟಿ.ವಿ., ಮೊಬೈಲ್ ಫೋನ್ ಅದರಾಗೂ ರೀಲ್ಸ್ ಕಾಲದಾಗ ರಿಯಲ್ ಆಗಿ ನಡೆವ ನಾಟಕ ನೋಡಾಕ ಪ್ರೇಕ್ಷಕರು ಬರ್ತಾರ. ಕುಕನೂರು, ಕೊಪ್ಪಳ, ಸವದತ್ತಿ, ಬನಶಂಕರಿ, ಮೈಲಾರ ಜಾತ್ರೆಗಳಲ್ಲಿ ನಾಟಕ ಕಂಪನಿಗಳಿಗೆ ಲಾಭ ಆಗ್ತದ’’ ಎನ್ನುವ ಭರವಸೆ ಅವರದು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X