Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗದೊಳಗಿಂದ
  5. ಕರಾವಳಿ ನಿರ್ದಿಗಂತ ನಾಟಕೋತ್ಸವ ಮಾನವತೆಯ...

ಕರಾವಳಿ ನಿರ್ದಿಗಂತ ನಾಟಕೋತ್ಸವ ಮಾನವತೆಯ ಅಂತಃಕರಣ ತಟ್ಟಿದ ಮಕ್ಕಳ ನಾಟಕಗಳು

ಸಂತೋಷ್ ನಾಯಕ್ ಪಟ್ಲಸಂತೋಷ್ ನಾಯಕ್ ಪಟ್ಲ20 Jan 2026 11:20 AM IST
share
ಕರಾವಳಿ ನಿರ್ದಿಗಂತ ನಾಟಕೋತ್ಸವ ಮಾನವತೆಯ ಅಂತಃಕರಣ ತಟ್ಟಿದ ಮಕ್ಕಳ ನಾಟಕಗಳು

ಮಕ್ಕಳ ರಂಗಭೂಮಿ ಈ ವರೆಗೆ ಸಾಲು ಸಾಲು ರಂಜಕವಾದ ಮತ್ತು ಭ್ರಮಾತ್ಮಕ ಜಗತ್ತನ್ನು ಹೊಂದಿರುವ ಫ್ಯಾಂಟಸಿ ಕಥೆಗಳನ್ನು ಅದ್ಭುತವೆಂಬಂತೆ ರಂಗದಮೇಲೆ ತಂದಿದೆ. ಆದರೆ ಕಳೆದೊಂದು ದಶಕದಿಂದ ಮಕ್ಕಳ ರಂಗಭೂಮಿಯಲ್ಲಿ ಕಟ್ಟಲ್ಪಟ್ಟ ಹೊಸ ವ್ಯಾಖ್ಯಾನಗಳು ಮತ್ತು ಹೊಸ ಪ್ರಯೋಗಗಳು ಮಕ್ಕಳ ರಂಗಭೂಮಿಯ ವ್ಯಾಕರಣವನ್ನು ಬದಲಾಯಿಸಿ ಬಿಟ್ಟಿದೆ. ಹಾಗಾಗಿಯೇ ಭ್ರಮಾತ್ಮಕವಾದ ಫ್ಯಾಂಟಸಿ ಕಥೆಗಳಿಂದ ಮಕ್ಕಳ ರಂಗಭೂಮಿ ತನ್ನ ಮಗ್ಗುಲನ್ನು ಬದಲಾಯಿಸಿದ್ದು, ವಾಸ್ತವವಾದಿ ಕಥೆಗಳ ಮೂಲಕ ರಮ್ಯತೆಯ ಜಗತ್ತಿನಾಚೆಗೆ ಜಿಗಿದು ಬಂಡಾಯದ ಕ್ರಿಯೆಗಳ ಮೂಲಕ ವರ್ತಮಾನದ ವೈರುಧ್ಯಗಳಿಗೆ ಧ್ವನಿಯಾಗುವ ಸಾಹಸವನ್ನು ಮಾಡುತ್ತಿದೆ. ಮಾಡಬೇಕು ಕೂಡಾ. ಏಕೆಂದರೆ ಶಿಕ್ಷಣದಲ್ಲಿ ರಂಗಭೂಮಿಯನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಈ ಹೊತ್ತಿನಲ್ಲಿ ಈ ರೀತಿಯ ಜಿಗಿಯುವಿಕೆ ಅನಿವಾರ್ಯವೇ ಆಗಿದೆ ಮತ್ತು ಅದು ಶೈಕ್ಷಣಿಕ ಕ್ರಿಯೆಯೇ ಆಗಿದೆ. ಕರಾವಳಿ ನಿರ್ದಿಗಂತ ಆಯೋಜಿಸಿದ ಮೂರು ಮಕ್ಕಳ ನಾಟಕಗಳು ಈ ನೆಲೆಯಲ್ಲಿ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ.

ನಾಟಕ: ಮೃಗ ಮತ್ತು ಸುಂದರಿ

ರಚನೆ: ಗಜಾನನ ಶರ್ಮಾ

ನಿರ್ದೇಶನ: ಬಿಂದು ರಕ್ಷಿದಿ

ಪ್ರಸ್ತುತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಬ್ರಹ್ಮಾವರ

‘‘ಸಾವಿನೂರಿಗೆ ಸಾಗೋ ಮುನ್ನ ಸಂತೆಲೊಂದು ಆಡೋ ಆಟ, ಅದು ನಾಟಕ ಥೇಟ’’ ಎಂಬ ಹಾಡಿನೊಂದಿಗೆ ಆರಂಭವಾದ ನಾಟಕ ‘ಮೃಗ ಮತ್ತು ಸುಂದರಿ’. ಮಕ್ಕಳ ಕಥೆಗಳಲ್ಲಿ ಬರುವ ಮೃಗಗಳು ಮತ್ತು ರಾಕ್ಷಸರು ಯಾವಾಗಲೂ ಒಳ್ಳೆಯ ಅಂತಃಕರಣವನ್ನೇ ಹೊಂದಿರುತ್ತಾರೆ. ಪುಣ್ಯಕೋಟಿ ಕಥೆಯಲ್ಲಿ ಬರುವ ಅರ್ಬುದನೆಂಬ ವ್ಯಾಘ್ರದ ಕಣ್ಣಲ್ಲಿ ನೀರು ಕಂಡವರು ನಾವು. ಮೃಗ ಮತ್ತು ಸುಂದರಿ ನಾಟಕ ಮೂಲತಃ ಒಂದು ಫ್ಯಾಂಟಸಿ ಕಥನ. ರಂಜನೆ ಮತ್ತು ಭ್ರಮಾತ್ಮಕ ಕ್ರಿಯೆಗಳೇ. ಆದರೆ ಬ್ರೆಖ್ಟಿಯನ್ ನಾಟಕ ತಂತ್ರವನ್ನು ನಿರ್ದೇಶಕರು ನಾಟಕದುದ್ದಕ್ಕೂ ಬಳಸಿಕೊಂಡ ಪರಿಣಾಮವಾಗಿ ರಮ್ಯತೆಯ ಜಗತ್ತನ್ನು ಮೀರಿ ನಾಟಕ ವಾಸ್ತವವಾದಿ ನೆಲೆಗಟ್ಟನ್ನು ಪಡೆದುಕೊಳ್ಳುತ್ತದೆ. ಬಹಳ ಪ್ರಜ್ಞಾಪೂರ್ವಕವಾದ ರಂಗಕ್ರಿಯೆಗಳು ಮತ್ತು ಲವಲವಿಕೆಯ ರಂಗಭಾಷೆಯ ಮೂಲಕ ಅರಿವಿನ ದಾರಿಯನ್ನು ಕಂಡುಕೊಳ್ಳುತ್ತದೆ.

ಪಟ್ಟಣದ ಧನಿಕ ಶೆಟ್ಟಿಯೊಬ್ಬ ತನ್ನ ಹಡಗು ಸಮುದ್ರದಲ್ಲಿ ಮುಳುಗಿಹೋದ ಕಾರಣಕ್ಕಾಗಿ ಸಿರಿ ಸಂಪತ್ತಿನಿಂದ ಕೂಡಿದ ತನ್ನ ಮನೆಯನ್ನು ಬಿಟ್ಟು ಮೂವರು ಹೆಣ್ಣು ಮಕ್ಕಳೊಂದಿಗೆ ಹಳ್ಳಿಗೆ ಬಂದು ನೆಲೆಸುತ್ತಾನೆ. ಹಡಗು ಮುಳುಗಿದ್ದು ಯಾರೋ ದುಷ್ಟರು ಹಬ್ಬಿಸಿದ ಸುಳ್ಳುಸುದ್ದಿ ಎಂದು ತಿಳಿದಾಗ ಮತ್ತೆ ಪಟ್ಟಣಕ್ಕೆ ಹೋಗಿ ಬರೋ ದಾರಿಯಲ್ಲಿ ಒಂದು ಭೀಕರ ಮೃಗದ ಆಕ್ರಮಣಕ್ಕೆ ಒಳಗಾಗುತ್ತಾನೆ. ಬೇಡಿಕೊಂಡ ನಂತರದಲ್ಲಿ ಒಂದು ಶಾಂತಿಯುತ ಒಪ್ಪಂದದ ಮೇರೆಗೆ ಹಿಂದಿರುಗುತ್ತಾನೆ. ಮೂವರು ಮಕ್ಕಳಲ್ಲಿ ಕೊನೆಯವಳಾದ ಸುಂದರಿ ಮಾತ್ರ, ಆಗಿರುವ ಒಪ್ಪಂದದಂತೆ ಮೃಗದ ಬಳಿ ಹೋಗಲು ಬಯಸುತ್ತಾಳೆ. ಆದರೆ ಎಣಿಸಿದಂತೆ ಮೃಗ ಕ್ರೂರವಾಗಿರುವುದಿಲ್ಲ. ಹಾಗಾಗಿ ಸುಂದರಿಯೂ ಮೃಗದೊಂದಿಗೆ ಯಾವುದೇ ತೊಂದರೆಗೆ ಒಳಗಾಗದೆ ಬದುಕುತ್ತಾಳೆ. ಕೆಲವು ದಿನಗಳ ಬಳಿಕ ಮನೆಗೆ ಬಂದ ಸುಂದರಿಗೆ ಮನುಷ್ಯರಿಗಿಂತ ಮೃಗವೇ ವಾಸಿ ಎಂದು ಎಣಿಸಿ ಮತ್ತೆ ಮೃಗದ ಬಳಿಗೆ ಬರುತ್ತಾಳೆ. ಅಷ್ಟು ಹೊತ್ತಿಗೆ ಮೃಗ ಸುಂದರಿಯ ಕಾಣದೆ ಬಳಲಿರುತ್ತದೆ. ಕೊನೆಗೆ ಸುಂದರಿ ಮೃಗದೊಂದಿಗೆ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಶಾಪಗ್ರಸ್ತ ರಾಜಕುಮಾರ ಮೃಗದ ವೇಷ ಕಳಚಿ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾನೆ.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ವಸತಿ ಶಾಲೆಯಲ್ಲಿ ಕಲಿಯುವ ಬೇರೆ ಬೇರೆ ವಯಸ್ಸಿನ ಇಪ್ಪತ್ತಮೂರು ಮಕ್ಕಳು ಅಭಿನಯಿಸಿದ ಈ ನಾಟಕ ತನ್ನ ಬಿಗಿಯಾದ ಸಂಭಾಷಣೆ, ಶಕ್ತಿಯುತ ಆಂಗಿಕ ಮತ್ತು ಸ್ಪಷ್ಟವಾದ ವಾಚಿಕದಿಂದ ಉತ್ತಮವಾಗಿಯೇ ರಂಗದ ಮೇಲೆ ಪ್ರದರ್ಶನವನ್ನು ಕಂಡಿತು. ಕಥೆಯನ್ನು ಅರ್ಥಮಾಡಿಕೊಳ್ಳಲು ಕಥೆಗಾರನ ತಂತ್ರವನ್ನು ಬಳಸಿದ ನಿರ್ದೇಶಕರು ಕಥೆಗಾರನನ್ನು ಕಥೆ ಮತ್ತು ಪ್ರೇಕ್ಷಕರಿಗೆ ಸೇತುವೆಯಾಗಿ ಮಾತ್ರ ಬಳಸಿಕೊಳ್ಳದೆ ನಾಟಕದೊಳಗೆ ಪ್ರವೇಶಿಕೆ ಕೊಡುವುದರ ಮೂಲಕ ನಾಟಕದ ಪ್ರಸ್ತುತಿಗೆ ಹೊಸ ಆಯಾಮವನ್ನು ಕೊಡುತ್ತಾರೆ.

ರಂಗದ ಮೇಲಿರುವ ವೇಷ ಬಳಿದ ಹತ್ತಕ್ಕೂ ಮೇಲ್ಪಟ್ಟ ಕಬ್ಬಿಣದ ಟ್ರಂಕುಗಳೇ ವಿವಿಧ ವಿನ್ಯಾಸ ಪಡೆದು ರಂಗದ ಮೇಲೆ ನಿಲ್ಲುವುದು, ಪಾತ್ರಧಾರಿಗಳೇ ವಿವಿಧ ಬಣ್ಣ ಮತ್ತು ಆಕಾರದ ವಿವಿಧ ಹೂವುಗಳಾಗಿ ಕಾಣುವುದು ನಾಟಕದ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಸ್ತ್ರವಿನ್ಯಾಸದಲ್ಲಿ ಬಳಸಿದ ಬಣ್ಣಗಳು, ಬೆಳಕು, ಕಚಗುಳಿ ಇಡುವ ಹಾಡುಗಳು ಮತ್ತು ಲವಲವಿಕೆಯ ತೊಡಗಿಸಿಕೊಳ್ಳುವಿಕೆ ಎಲ್ಲವೂ ಸೇರಿ ನಾಟಕವನ್ನು ವರ್ಣಮಯವಾಗಿಸುತ್ತದೆ.

ನಾಟಕ ಮನರಂಜನೆಯ ಮಾಧ್ಯಮ ಮಾತ್ರ ಅಲ್ಲ ಅದು ಅರಿವಿನ ದಾರಿಯಾಗಬೇಕು ಎಂಬುದನ್ನು ಮತ್ತೆ ಮತ್ತೆ ನೆನಪಿಸಿದ ನಾಟಕವಿದು. ಕಥೆಗಾರನಿಂದ ಸಮಾನತೆಯ ಪಾಠ ಮಾಡುವುದರ ಮೂಲಕ ಆರಂಭವಾದ ನಾಟಕ, ಮೃಗಗಳಿಗಿಂತ ಮೃಗರೂಪದ ಮನುಷ್ಯರು ಹೆಚ್ಚು ಅಪಾಯಕಾರಿಯಾದವರು, ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಪ್ರೀತಿಯ ಸೌಂದರ್ಯ ಬಹಳ ಮುಖ್ಯವಾದುದು ಎಂಬ ಅರಿವನ್ನು ಮಕ್ಕಳ ಭಾವಕೋಶಗಳಲ್ಲಿ ಬಿತ್ತುತ್ತದೆ.

ನಾಟಕ: ಕ್ಯೂರಿಯಸ್

ರಚನೆ : ವರದರಾಜ್ ಬಿರ್ತಿ

ನಿರ್ದೇಶನ: ರೋಹಿತ್ ಎಸ್. ಬೈಕಾಡಿ

ಪ್ರಸ್ತುತಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ

ಮನುಷ್ಯ ಜೀವನದ ಕಷ್ಟಕಾರ್ಪಣ್ಯಗಳನ್ನು ಕಡಿಮೆ ಮಾಡೋದೊಂದೇ ವಿಜ್ಞಾನದ ಪರಮ ಗುರಿ. ಗೆಲಿಲಿಯೋ ನಿಂದ ತೊಡಗಿ ಜಗತ್ತಿನ ಎಲ್ಲಾ ದಾರ್ಶನಿಕರು ತಮ್ಮ ವಿಜ್ಞಾನದ ಹುಡುಕಾಟದ ದಾರಿಯಲ್ಲಿ ಕಂಡುಕೊಂಡು ಪ್ರತಿಪಾದಿಸಿದ ತತ್ವವಿದು. ಈ ಪ್ರತಿಯೊಂದು ಹುಡುಕಾಟದ ಹಿಂದೆ ನೋವಿನ ಎಳೆಗಳ ಹಲವು ಕಥನಗಳಿವೆ. ಸತ್ಯದ ಅನ್ವೇಷಣೆಯ ದಾರಿಯನ್ನು ಹಲವರು ಹಲವು ರೀತಿಯಲ್ಲಿ ದಾಟಿಹೋಗಿರಬಹುದು. ಆದರೆ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನದಲ್ಲಿ ಎರಡು ನೊಬೆಲ್ ಬಹುಮಾನ ಪಡೆದ ಮೇರಿಕ್ಯೂರಿ ಸಾಗಿದ ದಾರಿ ವಿಜ್ಞಾನ ಲೋಕದ ಚರಿತ್ರೆಯಲ್ಲಿ ಇನ್ನೂ ಹಸಿ ಹಸಿಯಾಗಿಯೇ ಇದೆ. ಈ ಹಸಿಯಾದ ಸಾವಿನ ಹುಡುಕಾಟದ ದಾರಿಯ ಚಿತ್ರಣವನ್ನು ಕಟ್ಟಿಕೊಡುವ ನಾಟಕ ‘ಕ್ಯೂರಿಯಸ್’

ಹೆಣ್ಣಾಗಿರುವ ಕಾರಣಕ್ಕಾಗಿ ಉನ್ನತ ವಿದ್ಯಾಭ್ಯಾಸದಿಂದ ವಂಚಿತಳಾಗಿ, ವಿಜ್ಞಾನದಲ್ಲಿ ಸ್ವಂತ ಅಧ್ಯಯನವನ್ನು ಕೈಗೊಂಡು ವಿಕಿರಣಶೀಲ ಪೊಲೋನಿಯಂ ಮತ್ತು ರೇಡಿಯಂ ಎಂಬ ಎರಡು ಧಾತುಗಳನ್ನು ಆವರ್ತಕ ಕೋಷ್ಟಕದಲ್ಲಿ ಸೇರಿಸುವ ವರೆಗಿನ ಅವಳ ಹೋರಾಟ ಮತ್ತು ಅದರ ದೀರ್ಘಕಾಲಿಕ ಪರಿಣಾಮದಿಂದ ಬೋನ್ ಮ್ಯಾರೋ ಅಪ್ಲೇಸಿಯಾ ರೋಗಕ್ಕೆ ತುತ್ತಾಗುವ ಕಥಾನಕವೇ ನಾಟಕದ ಕಥಾವಸ್ತು.

ಮನುಕುಲಕ್ಕೆ ಒಳಿತಾಗಲಿ ಎಂಬ ಘೋಷ ವಾಕ್ಯದೊಂದಿಗೆ ರಂಗವೇರಿದ ನಾಟಕ ತನ್ನ ಬತ್ತಳಿಕೆಯಲ್ಲಿ ರಾಷ್ಟ್ರಮಟ್ಟಕ್ಕೇರಿದ ಪ್ರಭಾವಳಿಗಳನ್ನು ಸಹಜವಾಗಿಯೇ ಹೊಂದಿತ್ತು. ಅತಿ ದೊಡ್ಡ ವೇದಿಕೆಯಲ್ಲಿ ತಮಗೆ ಬೇಕಾದಷ್ಟೇ ಭಾಗವನ್ನು ಬಳಸಿಕೊಂಡು ಆತ್ಮವಿಶ್ವಾಸಭರಿತ ಎಂಟು ಮಕ್ಕಳಿಂದ ರಂಗದ ಮೇಲೆ ಪ್ರಸ್ತುತಗೊಂಡ ಕೇವಲ ಮೂವತ್ತು ನಿಮಿಷಗಳ ನಾಟಕವಿದು. ವಿಜ್ಞಾನದ ವಸ್ತುವನ್ನು ರಂಗದ ಮೇಲೆ ತರುವಾಗ ನಿರ್ದೇಶಕರು ವಿನ್ಯಾಸಗೊಳಿಸಿದ ವಿಭಿನ್ನ ತಂತ್ರಗಾರಿಕೆ ನಾಟಕದ ಶಕ್ತಿ. ಹುಡುಕಾಟದ ಪ್ರತಿಮೆಗಳಾಗಿ ಬಳಸಲ್ಪಟ್ಟ ಪ್ರಶ್ನಾ ದಂಡಗಳು, ಸರ್ಚ್ ಲೈಟ್‌ಗಳು ಮತ್ತು ಬಣ್ಣದ ರಿಬ್ಬನ್‌ಗಳು ಹೆಚ್ಚು ವಾಚ್ಯವೇ ಇರುವ ಕಥಾ ನಿರೂಪಣೆಯ ವಿನ್ಯಾಸವನ್ನು ಹೊಂದಿರುವ ಈ ವಿಜ್ಞಾನದ ನಾಟಕವನ್ನು ನಾಟಕೀಕರಣಗೊಳಿಸಿವೆ. ದೇಸೀ ಮತ್ತು ವೆಸ್ಟರ್ನ್ ರಿದಂಗಳ ಹದವಾದ ಮಿಶ್ರಣವಿರುವ ಈ ನಾಟಕ ಕೇವಲ ಮೇರಿಕ್ಯೂರಿಯಲ್ಲಿಗೇ ಕೊನೆಗೊಳ್ಳದೆ ಮಹಿಳಾ ವಿಜ್ಞಾನಿಗಳ ಪೆರೇಡ್‌ನ್ನು ರಂಗಕ್ಕೆ ತರುತ್ತದೆ.

ವಿಜ್ಞಾನದ ಅತಿ ಸಂಕೀರ್ಣವಾದ ವಿಷಯವನ್ನು ರಂಗದ ಮೇಲೆ ತರುವಾಗ ವಿಷಯದ ಆಳವಾದ ಅಧ್ಯಯನದ ಅಗತ್ಯವಿರುತ್ತದೆ. ಈ ಸವಾಲನ್ನು ನಿರ್ದೇಶಕರು ಶಕ್ತಿಯುತವಾಗಿಯೇ ದಾಟಿದ್ದಾರೆ. ಆದರೆ ವಿಷಯದ ಸಂಕೀರ್ಣತೆಯನ್ನು ಇನ್ನಷ್ಟು ತಿಳಿಗೊಳಿಸುವ ಸಲುವಾಗಿ ಮತ್ತಷ್ಟು ವಿಷಯದ ಅಗತ್ಯತೆ ಬೇಕಿತ್ತು ಎಂದು ಅನಿಸಿದ್ದು ಮಾತ್ರ ಸತ್ಯ.

ನಾಟಕ: ಕುಣಿ ಕುಣಿ ನವಿಲೆ

ರಚನೆ: ಎಚ್.ಎಸ್. ವೆಂಕಟೇಶ್ ಮೂರ್ತಿ

ನಿರ್ದೇಶನ: ರೋಹಿತ್ ಎಸ್. ಬೈಕಾಡಿ

ವೆಂಕಟೇಶ್ ಮೂರ್ತಿಯವರು ಬಹಳ ಹಿಂದೆಯೇ ಬರೆದ ಪ್ರಖರ ರಾಜಕೀಯ ವಿಡಂಬನಾತ್ಮಕ ನಾಟಕವಿದು. ಒಂದು ಕಾಡಿನಲ್ಲಿರುವ ಹುಲಿ, ತೋಳ, ನವಿಲು, ಹೆಗ್ಗಣ ಇತ್ಯಾದಿ ಪ್ರಾಣಿಗಳನ್ನಿಟ್ಟುಕೊಂಡು ರಾಜಕೀಯ ನಾಯಕರು ಮತ್ತು ಅಧಿಕಾರಿ ವ್ಯವಸ್ಥೆ ಹೇಗೆ ವರ್ತಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಚುರುಕಾದ ಸಂಭಾಷಣೆ, ನವಿರಾದ ಹಾಸ್ಯ ಮತ್ತು ಮೊನಚಾದ ವಿಡಂಬನೆಗಳು ಮೂಲ ನಾಟಕದಲ್ಲೇ ಅಂತರ್ಗತವಾಗಿವೆ ಮತ್ತು ಪ್ರಸ್ತುತ ರಾಜಕಾರಣಕ್ಕೆ ಅದನ್ನು ವಿಸ್ತರಿಸುವ ವಿಪುಲ ಸಾಧ್ಯತೆಗಳನ್ನು ರಂಗದ ಮೇಲೆ ಸಾಧ್ಯವಾಗಿಸುವ ರಂಗನಾಟಕವಿದು. ಈ ನಾಟಕದ ಭಾಷೆ ಮತ್ತು ಫ್ರೌಢತೆಯಿಂದಾಗಿ ಇದು ಬರೀ ಮಕ್ಕಳು ಅಭಿನಯಿಸುವ ನಾಟಕವಾಗಿಲ್ಲ, ಬದಲಾಗಿ ದೊಡ್ಡವರು ಮಕ್ಕಳಿಗಾಗಿ ಅಭಿನಯಿಸಿ ತೋರಿಸುವ ನಾಟಕವಾಗುವ ಸಾಧ್ಯತೆಗಳೇ ಹೆಚ್ಚು ಇದೆ. ಒಂದು ವೇಳೆ ಮಕ್ಕಳೇ ಅಭಿನಯಿಸುವುದಾದರೂ ಮಕ್ಕಳ ವಯಸ್ಸಿನ ಪ್ರೌಢಿಮೆಯನ್ನೂ ಈ ನಾಟಕ ಬಯಸುತ್ತದೆ ಎಂಬುದು ಸತ್ಯ.

ಹೀಗಿದ್ದೂ ನಿರ್ದೇಶಕರು ತೀರಾ ಎಳೆ ಮಕ್ಕಳಿಂದ ಈ ನಾಟಕ ಮಾಡುವ ಧೈರ್ಯ ಮಾಡಿರುವುದಕ್ಕೆ ಅಭಿನಂದನೆಗಳು. ಆರಂಭದ ದೃಶ್ಯಗಳು ಈ ಎಲ್ಲಾ ಸವಾಲುಗಳನ್ನು ಮೀರಿ ರಂಗದ ಮೇಲೆ ತೆರೆದುಕೊಳ್ಳುತ್ತವೆ. ನಾಟಕದ ಮೂಲ ಪಠ್ಯದಲ್ಲಿರುವ ರಾಜಕೀಯ ವಿಡಂಬನೆಯನ್ನು ಈ ಕಾಲದಲ್ಲಿ ನಿಂತು ನೋಡಿಕೊಳ್ಳುವಲ್ಲಿ ಮತ್ತು ಕಾಣಿಸಿಕೊಳ್ಳುವಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಬಹುಪಾಲು ಹೆಣ್ಣು ಮಕ್ಕಳೇ ಇರುವ ಈ ತಂಡದಲ್ಲಿ ನಾಟಕದಲ್ಲಿ ಬರುವ ಗಂಡುಪ್ರಾಣಿಗಳ ಪಾತ್ರವನ್ನು ಗಂಡಿನ ಕೊರತೆ ಇಲ್ಲದಂತೆ ನಿಭಾಯಿಸಿದ್ದಾರೆ. ಹಾಗಾಗಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗುತ್ತದೆ.

ಆದರೆ ರಂಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಇಳಿಬಿಟ್ಟ ನೀಳವಾದ ಮೂರು ಆಯಾಮವನ್ನು ನೀಡುವ ದಟ್ಟವಾದ ಕಾಡಿನ ಚಿತ್ರಣ ಹಳೆಯ ಪರದೆಯ ನಾಟಕದ ನೋಟವನ್ನು ನೀಡಿ, ಇಡೀ ನಾಟಕದ ನಟರ ರಂಗ ಚಲನೆಗಳನ್ನು ಗೌಣವಾಗಿಸಿದ ಸಾಧ್ಯತೆಗಳೇ ಹೆಚ್ಚಿವೆ. ಮಕ್ಕಳ ತಲೆಯ ಮೇಲೆ ಕೂರಿಸಿದ ಹುಲಿ, ತೋಳ, ನವಿಲುಗಳ ಶಿರೋ ಭೂಷಣಗಳು ನಾಟಕದ ಅದ್ದೂರಿತನಕ್ಕೆ ಸಾಕ್ಷಿಯಾದುವೇ ಹೊರತು ಪಾತ್ರಗಳ ಸೂಕ್ಷ್ಮತೆಗೆ ಧಕ್ಕೆಯಾದಂತೆ ಭಾಸವಾಗುತ್ತದೆ. ರಂಗದ ಮೇಲೆ ನಿರ್ದೇಶಕರ ರಂಗವಿನ್ಯಾಸ ಮತ್ತು ಶ್ರಮ ವ್ಯಕ್ತವಾಗುತ್ತದೆಯೇ ಹೊರತು ಮಕ್ಕಳಲ್ಲ. ಹಾಗಾಗಿ ಮಕ್ಕಳ ನಾಟಕವಾಗಿ ಇದು ಇನ್ನೂ ಹೆಚ್ಚು ಪರಿಪೂರ್ಣತೆಯನ್ನು ಪಡೆಯಬೇಕಾದರೆ ಹೆಚ್ಚಿನ ಅಭ್ಯಾಸವನ್ನು ಬೇಡುತ್ತದೆ.

ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಮೂರು ನಾಟಕಗಳು ಮಕ್ಕಳ ರಂಗಭೂಮಿಯ ಕುರಿತಾದ ಗಂಭೀರ ಯೋಚನೆಗಳನ್ನು ಮತ್ತೆ ಹುಟ್ಟು ಹಾಕಿವೆ. ಮಕ್ಕಳ ನಾಟಕ ವೆಂದರೆ ಅದು ಹೇಗಿರಬೇಕು? ಯಾವ ವಸ್ತು ಮಕ್ಕಳ ನಾಟಕವಾಗಬಲ್ಲುದು? ವಸ್ತುವಿನ ಆಯ್ಕೆ ಮತ್ತು ಮಕ್ಕಳ ವಯೋಮಾನ ಇವುಗಳ ನಡುವೆ ಸಾಂಗತ್ಯ ಅಗತ್ಯವೇ? ಮಕ್ಕಳ ನಾಟಕದ ಮಕ್ಕಳೇ ಧರಿಸುವ ಮುಖವಾಡದಂತಹ ರಂಗಪರಿಕರಗಳ ಬಣ್ಣ ಗಾತ್ರ ಹೇಗಿರಬೇಕು? ಮಕ್ಕಳ ನಾಟಕದ ಪ್ರದರ್ಶನವೇ ಮುಖ್ಯವಾಗಿ ಅದ್ದೂರಿತನ ರಂಗದಲ್ಲಿ ಮೇಳೈಸಿ ಮಕ್ಕಳ ರಂಗಭೂಮಿಯ ನಾಟಕ ಕಟ್ಟುವ ಪ್ರಕ್ರಿಯೆ ಮಸುಕಾಗುತ್ತಿದೆಯೇ?

ಪ್ರದರ್ಶನಾಧಾರಿತ ನಾಟಕಗಳು ನಿರ್ದೇಶಕರು ಮತ್ತು ವಿನ್ಯಾಸವನ್ನು ಗೆಲ್ಲಿಸುವ ನೆಪದಲ್ಲಿ ಮಕ್ಕಳನ್ನು ಗೆಲ್ಲಿಸಬಲ್ಲುವುದಾಗಿದ್ದರೆ? ಏಕೆಂದರೆ ಈ ಮೂರೂ ನಾಟಕಗಳು ಮಕ್ಕಳ ರಂಗಭೂಮಿಯ ಪ್ರಧಾನ ಭಾಗವಾದ ರಂಗಸಂಗೀತದಲ್ಲಿ ಮಕ್ಕಳನ್ನು ದುಡಿಸಿಕೊಂಡಿಲ್ಲ. ಮಕ್ಕಳ ನಾಟಕಗಳಿಗೆ ಮಕ್ಕಳೇ ಹಾಡಿ, ಸಂಗೀತವಾದ್ಯಗಳನ್ನು ನುಡಿಸುವುದಿದ್ದರೆ ನಿಜಾರ್ಥದಲ್ಲಿ ಮಕ್ಕಳ ಗೆಲುವಿಗೆ ದಾರಿಯಾಗುತ್ತಿತ್ತು. ಪ್ರದರ್ಶನದಲ್ಲೂ ವೇದಿಕೆಯ ಕೆಳಗೆ ಕುಳಿತು ಸಂಗೀತ ಮತ್ತು ಸಂಗೀತವಾದ್ಯಗಳ ಮೂಲಕ ಮಕ್ಕಳನ್ನು ನಿರ್ದೇಶಕರು ಮತ್ತು ಅವರ ತಂಡ ನಿಯಂತ್ರಿಸುತ್ತಿರುವುದು ಇವತ್ತಿನ ಮಕ್ಕಳ ರಂಗಭೂಮಿಯ ಸೋಲು ಎಂದು ಯಾಕೆ ಭಾವಿಸಬಾರದು?

Tags

Karavali Nirdiganta Drama Festival Children
share
ಸಂತೋಷ್ ನಾಯಕ್ ಪಟ್ಲ
ಸಂತೋಷ್ ನಾಯಕ್ ಪಟ್ಲ
Next Story
X