Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗದೊಳಗಿಂದ
  5. ‘ಖಾಕಿಯೊಳಗಿನ ಸಂತ’: ಮಧುಕರ್ ಶೆಟ್ಟಿ ಅವರ...

‘ಖಾಕಿಯೊಳಗಿನ ಸಂತ’: ಮಧುಕರ್ ಶೆಟ್ಟಿ ಅವರ ಆದರ್ಶ ಬದುಕಿನ ರಂಗರೂಪ

ಡಾ. ನಾರಾಯಣ್ ಕ್ಯಾಸಂಬಳ್ಳಿಡಾ. ನಾರಾಯಣ್ ಕ್ಯಾಸಂಬಳ್ಳಿ18 Jun 2026 12:00 PM IST
share
‘ಖಾಕಿಯೊಳಗಿನ ಸಂತ’: ಮಧುಕರ್ ಶೆಟ್ಟಿ ಅವರ ಆದರ್ಶ ಬದುಕಿನ ರಂಗರೂಪ

ಕೋಲಾರದ ‘ಆದಿಮ’ ಸಾಂಸ್ಕೃತಿಕ ಸಂಸ್ಥೆಯು ತನ್ನ ಸರಣಿ 230ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಭಾಗವಾಗಿ, ಇದೇ ಮೇ 31ರಂದು ‘ಖಾಕಿಯೊಳಗಿನ ಸಂತ’ ನಾಟಕವನ್ನು ಪ್ರಸ್ತುತಪಡಿಸಿತು. ಈ ಕಾರ್ಯಕ್ರಮದ ಭಾಗವಾಗಿದ್ದ ನನಗೆ ಈ ನಾಟಕ ವಿಶೇಷ ಅನುಭವನ್ನು ನೀಡಿತು. ಈ ನಾಟಕದ ಮುಖ್ಯಕಥಾವಸ್ತು ಕನ್ನಡದ ಪ್ರಸಿದ್ಧ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗ ಹಾಗೂ ದಕ್ಷ ಐಪಿಎಸ್ ಅಧಿಕಾರಿ ದಿ. ಮಧುಕರ್ ಶೆಟ್ಟಿ ಅವರ ವೃತ್ತಿ ಬದುಕಿಗೆ ಸಂಬಂಧಿಸಿದ್ದು. ಇಂದಿನ ಸಾಮಾಜಿಕ ಮತ್ತು ಆಡಳಿತಾತ್ಮಕ ಸನ್ನಿವೇಶದಲ್ಲಿ ‘ಪೊಲೀಸ್ ಇಲಾಖೆ’ ಎಂದ ತಕ್ಷಣ ಸಾಮಾನ್ಯ ಜನರಲ್ಲಿ ಒಂದು ರೀತಿಯ ಅಪನಂಬಿಕೆ ಅಥವಾ ಭ್ರಷ್ಟಾಚಾರದ ಚಿತ್ರಣವು ಮೂಡುವುದು ಸಹಜ. ಆದರೆ ಇದೇ ಇಲಾಖೆಯಲ್ಲಿದ್ದುಕೊಂಡು ತಮಗೆ ಸಿಕ್ಕ ಅಧಿಕಾರವನ್ನು ಶೋಷಿತರ, ಆದಿವಾಸಿಗಳ ಮತ್ತು ಬಡವರ ಕಲ್ಯಾಣಕ್ಕಾಗಿ ಬಳಸಬಹುದು ಎಂಬುದನ್ನು ಬದುಕಿ ತೋರಿಸಿದ್ದ ಮಧುಕರ್ ಶೆಟ್ಟಿಯವರ ಬದುಕಿನ ನೈಜ ಗುಣಗಳು ಅವರ ನೈತಿಕವಾದ, ಆಡಳಿತಾತ್ಮಕ ದಕ್ಷತೆ ಮತ್ತು ಅವರೊಳಗಿದ್ದ ಮಾನವೀಯ ಮೌಲ್ಯಗಳನ್ನು ಅತ್ಯಂತ ಭಾವಪೂರ್ಣವಾಗಿ ರಂಗದ ಮೇಲೆ ಅನಾವರಣಗೊಳಿಸಲಾಯಿತು. ರಂಗಕರ್ಮಿ ಸಿದ್ದರಾಮ ಕೊಪ್ಪರ್ ಅವರ ಸಹಜ ಅತ್ಯುತ್ತಮ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ, ಒಬ್ಬ ಅಧಿಕಾರಿ ವ್ಯವಸ್ಥೆಯ ಭಾಗವಾಗಿದ್ದುಕೊಂಡೇ ಆ ವ್ಯವಸ್ಥೆಯ ತಪ್ಪುಗಳನ್ನು ಹೇಗೆ ಸರಿಪಡಿಸ ಬಹುದು; ಜನಸ್ನೇಹಿಯಾಗಬಹುದು ಎಂಬುದಕ್ಕೆ ಮಧುಕರ್ ಶೆಟ್ಟಿ ಅವರು ಉದಾಹರಣೆಯಾಗಿದ್ದರು.

ನಾಟಕದ ಆರಂಭಿಕ ದೃಶ್ಯಗಳೇ ಮಧುಕರ್ ಶೆಟ್ಟಿಯವರ ವಿಶಿಷ್ಟ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಸಾಮಾನ್ಯವಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಸಾಮಾನ್ಯ ಪೇದೆಗಳನ್ನು ಅಥವಾ ತಮಗಿಂತ ಕೆಳಹಂತದ ಸಿಬ್ಬಂದಿಯನ್ನು ತಮ್ಮ ಸೇವಕರು ಎಂಬಂತೆ ನೋಡುವ ಪರಿಪಾಠವಿದೆ. ಆದರೆ ಮಧುಕರ್ ಶೆಟ್ಟಿಯವರು ಇದಕ್ಕೆ ತದ್ವಿರುದ್ಧವಾಗಿದ್ದರು ಎಂಬುದನ್ನು ನಾಟಕದ ಹಲವು ಸನ್ನಿವೇಶಗಳು ನಮಗೆ ಅರಿವು ಮೂಡಿಸುತ್ತವೆ. ಮುಂಜಾನೆ ಸಾಮಾನ್ಯ ಟಿಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ಸೈಕಲ್ ಏರಿ ಮೈದಾನಕ್ಕೆ ಬಂದು ಪೇದೆಗಳ ಜೊತೆ ವಾಲಿಬಾಲ್ ಆಡುವ ದೃಶ್ಯ ಅವರ ಅಹಂಕಾರವಿಲ್ಲದ ಗುಣವನ್ನು ತೋರ್ಪಡಿಸುತ್ತದೆ. ಸಿಬ್ಬಂದಿಯ ವೈಯಕ್ತಿಕ ಕುಂದುಕೊರತೆಗಳನ್ನು ವಿಚಾರಿಸುವುದು, ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದು ಮತ್ತು ‘‘ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ಬಂದು ನನ್ನನ್ನು ಭೇಟಿಯಾಗಿ’’ ಎಂದು ಧೈರ್ಯ ತುಂಬುವ ಅವರ ನಡೆ ಇಲಾಖೆಯೊಳಗೆ ಹೊಸ ಆಶಾಕಿರಣವನ್ನು ಮೂಡಿಸುತ್ತದೆ.

ಅವರ ಮನೆಯಲ್ಲಿ ಯಾವುದೇ ವಿಲಾಸಿ ವಸ್ತುಗಳಿಲ್ಲದೆ ಕೇವಲ ಒಂದು ಚಾಪೆ, ಬಕೆಟ್ ಮತ್ತು ಮೂರು ಜೊತೆ ಬಟ್ಟೆ ಮಾತ್ರ ಇರುತ್ತಿದ್ದ ಸಂಗತಿಯನ್ನು ಪೇದೆಗಳು ಚರ್ಚಿಸುವ ದೃಶ್ಯ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುತ್ತದೆ. ಹಿರಿಯ ಲೇಖಕ ಮತ್ತು ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮಗನಾಗಿದ್ದರೂ, ಹಿರಿಯ ಗಾಂಧಿವಾದಿ ಎಚ್. ನರಸಿಂಹಯ್ಯನವರ ತತ್ವಗಳನ್ನು ಅಳವಡಿಸಿಕೊಂಡಿದ್ದ ಅವರು ಎಂದಿಗೂ ತಮ್ಮ ಪ್ರಭಾವವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ತಮಗಾಗಿ ಶೂಗಳನ್ನು ಕೈಯಲ್ಲಿ ಹಿಡಿದು ತಂದ ಜೀಪ್ ಡ್ರೈವರ್ನನ್ನು ತರಾಟೆಗೆ ತೆಗೆದುಕೊಂಡು, ‘‘ನನ್ನ ಕೈಗಳಿಗೆ ಶೂ ಎತ್ತುಕೊಳ್ಳುವಷ್ಟು ಶಕ್ತಿ ಇಲ್ಲವೇನೋ? ಇಂತಹ ಬಕೆಟ್ ಸಂಸ್ಕೃತಿಯನ್ನು ಇಲಾಖೆಯಿಂದ ಮೊದಲು ತೊಡೆದುಹಾಕಬೇಕು’’ ಎಂದು ಗದರಿಸುವ ದೃಶ್ಯ, ಅವರು ಅಧಿಕಾರಶಾಹಿಯ ದಾಸ್ಯ ಪದ್ಧತಿಯನ್ನು ಎಷ್ಟರ ಮಟ್ಟಿಗೆ ವಿರೋಧಿಸುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ನಾಟಕದ ಅತ್ಯಂತ ಪ್ರಮುಖ ಮತ್ತು ಆಕರ್ಷಕ ಭಾಗವೆಂದರೆ ದಲಿತರು ಹಾಗೂ ಆದಿವಾಸಿಗಳ ಭೂಮಿಯ ಹಕ್ಕಿಗಾಗಿ ಮಧುಕರ್ ಶೆಟ್ಟಿಯವರು ನಡೆಸಿದ ಹೋರಾಟ. ಜಮೀನ್ದಾರರು ಮತ್ತು ಬಂಡವಾಳಶಾಹಿಗಳು ಬಡವರ ಮತ್ತು ಆದಿವಾಸಿಗಳ ಭೂಮಿಯನ್ನು ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಿದಾಗ, ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರೊಂದಿಗೆ ಸಮಾಲೋಚಿಸಿ, ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಸರಕಾರದ ಗೋಮಾಳ ಜಮೀನನ್ನು ಕಾನೂನಾತ್ಮಕವಾಗಿ 32 ದಲಿತ ಹಾಗೂ ಆದಿವಾಸಿ ಕುಟುಂಬಗಳ ಹೆಸರಿಗೆ ಮಂಜೂರು ಮಾಡಿಸಿ ಹಕ್ಕುಪತ್ರ ವಿತರಿಸುತ್ತಾರೆ. ಈ ಐತಿಹಾಸಿಕ ನಡೆಯಿಂದ ಭಾವುಕರಾದ ಗ್ರಾಮಸ್ಥರು ಆ ಹಳ್ಳಿಗೆ ಅಧಿಕಾರಿಗಳಿಬ್ಬರ ಹೆಸರನ್ನೇ ಸೇರಿಸಿ ‘ಗುಪ್ತಶೆಟ್ಟಿಹಳ್ಳಿ’ (ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ) ಎಂದು ನಾಮಕರಣ ಮಾಡುತ್ತಾರೆ. ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಜನಸಾಮಾನ್ಯರ ಬದುಕಿನಲ್ಲಿ ಎಂತಹ ಕ್ರಾಂತಿಕಾರಿ ಬದಲಾವಣೆ ತರಬಹುದು ಎಂಬುದಕ್ಕೆ ಈ ದೃಶ್ಯ ಒಂದು ಅತ್ಯುನ್ನತ ಉದಾಹರಣೆಯಾಗಿದೆ. ದೇವಸ್ಥಾನ ಪ್ರವೇಶದ ಹಕ್ಕಿಗಾಗಿ ಹೋರಾಡುವ ದಲಿತರನ್ನು ತಾವೇ ಖುದ್ದಾಗಿ ದೇವಸ್ಥಾನದ ಒಳಗೆ ಕರೆದೊಯ್ದು ಸಾಮಾಜಿಕ ಸಮಾನತೆಯನ್ನು ಸಾರುವ ದೃಶ್ಯ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ.

‘ಖಾಕಿಯೊಳಗಿನ ಸಂತ’ ಎಂಬ ಈ ನಾಟಕದ ಮೂಲಕ ಕೋಲಾರದ ಆದಿಮ ಸಾಂಸ್ಕೃತಿಕ ಸಂಸ್ಥೆಯು ಒಬ್ಬ ಮಹಾನ್ ವ್ಯಕ್ತಿಯ ಬದುಕನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಒಬ್ಬ ಅಧಿಕಾರಿಯ ಬಯೋಪಿಕ್ ಅನ್ನು ರಂಗಭೂಮಿಯ ಮೇಲೆ ತರುವುದು ಸುಲಭದ ಕೆಲಸವಲ್ಲ ಆದರೆ ಸಿದ್ದರಾಮ್ ಕೊಪ್ಪರ್ ಮತ್ತು ತಂಡದವರು ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ರಂಗಪ್ರಯೋಗದ ಅತ್ಯಂತ ವಿಶಿಷ್ಟ ಸಂಗತಿಯೆಂದರೆ ಇಲ್ಲಿ ಪಾತ್ರವಹಿಸಿರುವ ಬಹುತೇಕ ಎಲ್ಲಾ ಕಲಾವಿದರು ವೃತ್ತಿಪರ ನಟರಲ್ಲ, ಬದಲಿಗೆ ಹವ್ಯಾಸಿ ರಂಗ ಕಲಾವಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದಿನನಿತ್ಯ ಜನಸಾಮಾನ್ಯರೊಂದಿಗೆ ಒಡನಾಡುವ ನೌಕರರು. ಇಡೀ ನಾಟಕದ ಕೇಂದ್ರಬಿಂದು ಮಧುಕರ್ ಶೆಟ್ಟಿ ಪಾತ್ರವನ್ನು ರಂಗಸ್ವಾಮಿಯವರು ತಮ್ಮ ಪ್ರಬುದ್ದ ನಟನೆಯ ಮೂಲಕ ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ನಟಿಸಿದ್ದಾರೆ. ರಮೇಶ್ (ಪೊಲೀಸ್ ಇನ್ಸ್ಪೆಕ್ಟರ್), ಶರಣಬಸಪ್ಪ ಜವಳಿ (ಪೊಲೀಸ್ ಕಾನ್ಸ್ಟೇಬಲ್) ಹಾಗೂ ನಾಗೇಶ್ (ಪೊಲೀಸ್), ಮಾದೇವ (ಕಡ್ಲೇಬೀಜ ವ್ಯಾಪಾರಿ), ಗಂಗಣ್ಣ(ವೆಂಕಟಪ್ಪ ಆದಿವಾಸಿ), ಭಾಗ್ಯಮ್ಮ ಮತ್ತು ಗಾಯತ್ರಮ್ಮ (ಆದಿವಾಸಿಗಳು/ದಲಿತರು) ವ್ಯವಸ್ಥೆಯಿಂದ ಶೋಷಿತರಾದ ದಲಿತ ಮತ್ತು ಆದಿವಾಸಿಗಳ ನೋವನ್ನು ಇವರು ಅತ್ಯಂತ ನೈಜವಾಗಿ ರಂಗದ ಮೇಲೆ ತಂದಿದ್ದಾರೆ. ಸತ್ಯ ದೊಡ್ಮನೆ (ಲಾಯರ್) ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ. ಸಹ ನಿರ್ದೇಶಕಿ ಪಿ. ಉಮಾ ಅವರ ಶ್ರಮ ಮೆಚ್ಚುವಂತಹದ್ದು. ಬೆಳಕು-ಮದನ್ ಹಾಗೂ ಮಹೇಂದ್ರ ಕುಮಾರ್.

ದಿನವಿಡೀ ಒತ್ತಡದ ಕೆಲಸ ನಿರ್ವಹಿಸಿಯೂ, ರಂಗದ ಮೇಲೆ ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವತುಂಬಿರುವುದು ಈ ನಾಟಕದ ಯಶಸ್ಸಿನ ಹೆಗ್ಗುರುತಾಗಿದೆ. ಈ ನಾಟಕವು ಕೇವಲ ಮನೋರಂಜನೆಯ ಮಾಧ್ಯಮವಾಗುಳಿಯದೆ, ಪ್ರತಿಯೊಬ್ಬ ನಾಗರಿಕನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಖಾಕಿಬಟ್ಟೆಯೊಳಗೆ ಸಂತನಂತೆ ಬದುಕಿದ ಮಧುಕರ್ ಶೆಟ್ಟಿಯವರಿಗೆ ಈ ರಂಗರೂಪವು ನಿಜವಾಗಿಯೂ ಒಂದು ಹೃದಯ ಸ್ಪರ್ಶಿ ರಂಗ ಸ್ಮರಣೆ ಎಂದರೆ ತಪ್ಪಾಗಲಾರದು.

Tags

Madhukar Shetty
share
ಡಾ. ನಾರಾಯಣ್ ಕ್ಯಾಸಂಬಳ್ಳಿ
ಡಾ. ನಾರಾಯಣ್ ಕ್ಯಾಸಂಬಳ್ಳಿ
Next Story
X