Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕಾಂಗ್ರೆಸ್ ಬಿರುಕಿಗೆ ಹೊಸ ತೇಪೆ

ಕಾಂಗ್ರೆಸ್ ಬಿರುಕಿಗೆ ಹೊಸ ತೇಪೆ

ವಾರ್ತಾಭಾರತಿವಾರ್ತಾಭಾರತಿ4 July 2025 7:25 AM IST
share
ಕಾಂಗ್ರೆಸ್ ಬಿರುಕಿಗೆ ಹೊಸ ತೇಪೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

''ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ಸ್ವಯಂ ಘೋಷಿಸುವ ಮೂಲಕ ವಿರೋಧ ಪಕ್ಷದ ನಾಯಕರ ಬಾಯಿಗೆ ಬೀಗ ಜಡಿದಿದ್ದಾರೆ. ಕಾಂಗ್ರೆಸ್‌ನ ಭಿನ್ನಮತದ ಬಗ್ಗೆ ಕಾಂಗ್ರೆಸ್ ನಾಯಕರಿಗಿಂತ ಬಿಜೆಪಿ ನಾಯಕರಿಗೇ ಹೆಚ್ಚು ಚಿಂತೆಯಾಗಿತ್ತು. ರಾಜ್ಯ ಬಿಜೆಪಿ ದುರಸ್ತಿಗೊಳಿಸಲಾಗದ ಮನೆಯೆನ್ನುವುದು ಅವರಿಗೆ ಈಗಾಗಲೇ ಸ್ಪಷ್ಟವಾಗಿರುವುದರಿಂದ, ತಮ್ಮ ಮನೆಯನ್ನು ಬಿಟ್ಟು ಕಾಂಗ್ರೆಸ್ ಮನೆಯ ಸೋರುವ ಮಾಡಿನ ರಿಪೇರಿಗೆ ಕೂತಿದ್ದಾರೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ವರಿಷ್ಠರು ತಮ್ಮ ಮನೆಯ ಬಿರುಕಿಗೆ ತೇಪೆ ಹಚ್ಚುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಆದರೆ ಈ ತೇಪೆ ಈ ಮಳೆಗಾಲ ಮುಗಿಯುವವರೆಗೆ ಹಿಡಿದು ನಿಲ್ಲಬಹುದೇ ಎನ್ನುವುದರ ಬಗ್ಗೆ ಪಕ್ಷದೊಳಗಿರುವ ಪ್ರಮುಖರಿಗೇ ಅನುಮಾನಗಳಿವೆ. ಅದೇನೇ ಇದ್ದರೂ ಸಾರ್ವಜನಿಕವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಕೈ ಕೈ ಹಿಡಿದು "ನಮ್ಮಲ್ಲಿ ಭಿನ್ನಮತವಿಲ್ಲ'' ಎಂದು ಘೋಷಿಸುವಲ್ಲಿ ಪಕ್ಷದ ವರಿಷ್ಠರು ಯಶಸ್ವಿಯಾಗಿರುವುದು ಸಣ್ಣ ಸಾಧನೆಯಲ್ಲ. ಶಾಸಕರಿಗೆ ಹೈಕಮಾಂಡ್ ನೀಡಿರುವ ಸ್ಪಷ್ಟ ಎಚ್ಚರಿಕೆಯ ಬಲದಿಂದಲೇ ಇದೀಗ "ಐದು ವರ್ಷ ನಾನೇ ಸಿಎಂ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವಂತಾಗಿದೆ. ಈ ಘೋಷಣೆ ಬಿಜೆಪಿ ಪಾಳಯದಲ್ಲಿ ತೀವ್ರ ನಿರಾಶೆಯನ್ನುಂಟು ಮಾಡಿದೆ.

ಕಾಂಗ್ರೆಸ್‌ನೊಳಗೆ ಇತ್ತೀಚೆಗೆ ಎದ್ದಿರುವ ಅಪಸ್ವರ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗಿತ್ತು. 'ಸರಕಾರದೊಳಗೆ ಹೆಚ್ಚಿರುವ ಭ್ರಷ್ಟಾಚಾರ'ವನ್ನು ಕೇಂದ್ರವಾಗಿಸಿಕೊಂಡು ಈ ಬಾರಿ ಕೆಲವು ಭಿನ್ನಮತೀಯರು ಪಕ್ಷದ ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದರು. ಅದರಲ್ಲಿ ಮುಖ್ಯವಾಗಿ ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ. ಆರ್. ಪಾಟೀಲ್ ಅವರು ವ್ಯಕ್ತ ಪಡಿಸಿರುವ ಆಕ್ರೋಶದ ಆಡಿಯೊ ಸೋರಿಕೆಯಾಗಿ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿತ್ತು. ಬಳಿಕ ಈ ಆಡಿಯೊದಲ್ಲಿ ಮಾಡಿರುವ ಆರೋಪಗಳನ್ನು ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದರು. ಇವರ ಜೊತೆಗೇ ಶಾಸಕ ರಾಜು ಕಾಗೆ ಕೂಡ ನಾಯಕತ್ವದ ವಿರುದ್ಧ ಆಕ್ರೋಶ ಹೊರಗೆಡಹಿದ್ದು, ಶೀಘ್ರದಲ್ಲೇ ಇನ್ನಷ್ಟು ನಾಯಕರು ನಮ್ಮ ಜೊತೆಗೆ ಸೇರಿಕೊಳ್ಳಲಿದ್ದಾರೆ ಎಂದು ಬೆದರಿಸಿದ್ದರು. ಆದರೆ ಪಾಟೀಲ್ ಅವರದೆನ್ನಲಾಗಿರುವ ಇನ್ನೊಂದು ಆಡಿಯೊ ಹೊರ ಬಿದ್ದು, ಅದರಲ್ಲಿ ಅವರು ಸಿದ್ದರಾಮಯ್ಯ ಕುರಿತಂತೆ ಆಡಿದ ಮಾತುಗಳು ಭಿನ್ನಮತೀಯರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿತು. "ಸಿದ್ದರಾಮಯ್ಯ ಅವರಿಗೆ ಸೋನಿಯಾಗಾಂಧಿಯನ್ನು ಪರಿಚಯಿಸಿದ್ದೇ ನಾನು. ಲಾಟರಿ ಹೊಡೆದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು' ಎಂಬಂತಹ ಮಾತುಗಳನ್ನು ಬಿ. ಆರ್. ಪಾಟೀಲ್ ಅದರಲ್ಲಿ ಆಡಿದ್ದರು. ಈ ಹಿಂದೆ ಬಿ. ಆರ್. ಪಾಟೀಲ್ ಮಾಡಿರುವ ಆರೋಪಗಳನ್ನು ಈ ಹೊಸ ಆಡಿಯೊ ದುರ್ಬಲಗೊಳಿಸಿತು. ಅವರ ಗುರಿ 'ಭ್ರಷ್ಟಾಚಾರವಲ್ಲ' ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಲು ಸುಲಭವಾಯಿತು. ಮುಖ್ಯಮಂತ್ರಿಯ ಕುರಿತಂತೆ ಕೇವಲವಾಗಿ ಮಾತನಾಡಿದ ಆಡಿಯೊ ಹೊರ ಬೀಳುತ್ತಿದ್ದಂತೆಯೇ ಉಳಿದ ಶಾಸಕರು ಬಿ. ಆರ್.ಪಾಟೀಲ್ ಜೊತೆಗೆ ಅಂತರ ಕಾಪಾಡಿಕೊಂಡು ತೆಪ್ಪಗಾದರು.

ರಾಜ್ಯ ಕಾಂಗ್ರೆಸ್‌ನ ಸಮಸ್ಯೆ 'ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಬೇಕೇ ಬೇಡವೇ?' ಎನ್ನುವುದು ಮಾತ್ರವಲ್ಲ. ಎರಡು ಹುದ್ದೆಗಳನ್ನು ಬಗಲಲ್ಲಿಟ್ಟುಕೊಂಡು ಓಡಾಡುತ್ತಿರುವ ಡಿಕೆಶಿ ಬಗ್ಗೆಯೂ ಕಾಂಗ್ರೆಸ್‌ನ ಒಂದು ಗುಂಪಿಗೆ ಅಸಮಾಧಾನವಿದೆ. ಸಿದ್ದರಾಮಯ್ಯ ವರ್ಚಸ್ಸು ಕಾಂಗ್ರೆಸ್‌ಗೆ ಅತ್ಯಗತ್ಯವಾಗಿದೆ. ಅವರನ್ನು ಬದಿಗಿಟ್ಟು ಸರಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಆತ್ಮವಿಶ್ವಾಸ ಕಾಂಗ್ರೆಸ್ ಹೈಕಮಾಂಡಿಗೆ ಇದ್ದಂತಿಲ್ಲ. ಮುಖ್ಯಮಂತ್ರಿ ಹುದ್ದೆ ಸಿಗದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಡಿ.ಕೆ. ಶಿವಕುಮಾರ್ ಸಿದ್ದರಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರೆ ಪಕ್ಷದ ನಿಯಂತ್ರಣ ತನ್ನ ಕೈಯಿಂದ ಸಂಪೂರ್ಣ ಜಾರಿಬಿಡಬಹುದು ಎನ್ನುವ ಆತಂಕ ಅವರಿಗಿದೆ. ಉಪಮುಖ್ಯಮಂತ್ರಿ ಸ್ಥಾನವೆನ್ನುವುದು ಹೆಸರಿಗಷ್ಟೇ ಎನ್ನುವುದು ಅವರಿಗೆ ಗೊತ್ತಿದೆ. ಹಾಗೆಯೇ ಉಪಮುಖ್ಯಮಂತ್ರಿ ಸ್ಥಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೂ ಡಿ.ಕೆ.ಶಿವಕುಮಾರ್ ಸಿದ್ದರಿಲ್ಲ. ಇದು ಪಕ್ಷದ ಹಲವು ಹಿರಿಯ ನಾಯಕರನ್ನು ಕೆರಳಿಸಿದೆ. ಹೈಕಮಾಂಡ್ ಒಂದೋ ಉಳಿದ ಅವಧಿಗೆ ಡಿಕೆಶಿಯವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ಡಿಕೆಶಿ ಕೈಯಲ್ಲಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಹುದ್ದೆಯನ್ನು ಇತರ ಹಿರಿಯ ನಾಯಕರಿಗೆ ಹಂಚಬೇಕು. ಅಥವಾ ಡಿಕೆಶಿಯವರನ್ನು ಮನವೊಲಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಇತರರಿಗೆ ಬಿಟ್ಟುಕೊಡಬೇಕು. ಈ ಹಿಂದೆಯೂ ಈ ಕಗ್ಗಂಟನ್ನು ಬಿಡಿಸಲಾಗದೆ ಅಂತಿಮವಾಗಿ ಭಿನ್ನಮತೀಯರಿಗೆ 'ತ್ಯಾಗ ಬಲಿದಾನದ' ಸಲಹೆಗಳನ್ನು ಹೈಕಮಾಂಡ್ ನೀಡಿ ಕೈತೊಳೆದುಕೊಂಡಿತ್ತು. ಇದೀಗ ಮತ್ತೆ ಅದೇ ಸಲಹೆಯನ್ನು ಭಿನ್ನಮತೀಯರಿಗೆ ಉಚಿತವಾಗಿ ಹಂಚಿ ಅವರ ಬಾಯಿ ಮುಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ದಡ ಮುಟ್ಟಿಸುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದರೆ, ಹೊಸ ಮುಖಗಳಿಗೆ ಆದ್ಯತೆ ನೀಡುವ ಭರವಸೆಯನ್ನೂ ಜೊತೆಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತದಲ್ಲಿ ಹೆಚ್ಚಿರುವ ಭ್ರಷ್ಟಾಚಾರದ ಬಗ್ಗೆ ಹೈಕಮಾಂಡ್ ಮೌನವಾಗಿದೆ.

'ಐದು ವರ್ಷ ನಾನೇ ಮುಖ್ಯಮಂತ್ರಿ' ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಅದನ್ನೂ ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ 'ಐದು ವರ್ಷ ನಾನೇ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಿಸುವ ಧೈರ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗಿದೆಯೆ? ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಯಾಕೆ ಬಿಜೆಪಿ ಇನ್ನೂ ಮೀನಾಮೇಷ ಎಣಿಸುತ್ತಿದೆ? ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವುದಕ್ಕಾದರೂ ಕಾಂಗ್ರೆಸ್ ನಾಯಕರು 'ನಮ್ಮೊಳಗೆ ಯಾವುದೇ ಭಿನ್ನಮತವಿಲ್ಲ'' ಎಂದು ಬಹಿರಂಗವಾಗಿ ಘೋಷಿಸಿಕೊಂಡರು. ಇಂತಹ ಘೋಷಣೆಯನ್ನು ಪರಸ್ಪರ ಕೈ ಹಿಡಿದುಕೊಂಡು ಬಿಜೆಪಿ ನಾಯಕರು ಮಾಡಬಲ್ಲರೆ? ಈಶ್ವರಪ್ಪ-ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಕೂತು ಕೈ ಜೋಡಿಸಿ 'ನಾವೆಲ್ಲ ಒಂದು- ಒಂದು ಎನ್ನಬಲ್ಲರೆ? ಈ ಪ್ರಶ್ನೆಗೆ ಮೊದಲು ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ. ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿದಾಗ ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗೆ ನಡೆದ ತಿಕ್ಕಾಟಗಳಿಗೆ ಹೋಲಿಸಿದರೆ, ಕಾಂಗ್ರೆಸ್ ನಲ್ಲಿರುವ ಭಿನ್ನಮತವನ್ನು ಹೈಕಮಾಂಡ್ ಮುತ್ಸದ್ದಿತನದಿಂದ ನಿಭಾಯಿಸುತ್ತಿದೆ. ಮುರಿದು ಬಿದ್ದ ಬಿಜೆಪಿಯೆಂಬ ಮನೆಯ ಅಧಿಕಾರಕ್ಕೆ ಇಷ್ಟೆಲ್ಲ ಹೊಡಿ ಬಡಿ ಆಟಗಳನ್ನು ಬಿಜೆಪಿ ನಾಯಕರು ನಡೆಸುತ್ತಿರುವಾಗ, ಬಹುಮತದಿಂದ ಸರಕಾರ ರಚನೆ ಮಾಡಿರುವ ಕಾಂಗ್ರೆಸ್‌ನೊಳಗೆ ಹಣ, ಅಧಿಕಾರಕ್ಕಾಗಿ ಇಷ್ಟಾದರೂ ನಡೆಯದಿದ್ದರೆ ಇಂದಿನ ರಾಜಕೀಯ'ಕ್ಕೆ ಬೆಲೆಯಾದರೂ ಎಲ್ಲಿದೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X