Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮಾದಕ ವ್ಯಸನದ ವಿರುದ್ಧ ಗೆಲ್ಲಲೇ ಬೇಕಾದ...

ಮಾದಕ ವ್ಯಸನದ ವಿರುದ್ಧ ಗೆಲ್ಲಲೇ ಬೇಕಾದ ಯುದ್ಧ

ವಾರ್ತಾಭಾರತಿವಾರ್ತಾಭಾರತಿ13 Nov 2026 8:40 AM IST
share
ಮಾದಕ ವ್ಯಸನದ ವಿರುದ್ಧ ಗೆಲ್ಲಲೇ ಬೇಕಾದ ಯುದ್ಧ

ನಮ್ಮ ಕರ್ನಾಟಕ ರಾಜ್ಯ ಸರಕಾರವು ಹೇಳಿಕೊಂಡಿರುವಂತೆ, ಅದು ರಾಜ್ಯದಲ್ಲಿ ಮಾದಕ ಪದಾರ್ಥಗಳ ಬಳಕೆ ಮತ್ತು ವ್ಯವಹಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ. 2024ರಲ್ಲಿ ರಾಜ್ಯದಲ್ಲಿ, NDPSಕಾಯ್ದೆಯನ್ವಯ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ 4,187 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ ಅಂತಹ ಪ್ರಕರಣಗಳ ಸಂಖ್ಯೆ 6,825ಕ್ಕೇರಿತ್ತು. ಅಂದರೆ ಒಂದೇ ವರ್ಷದಲ್ಲಿ ಶೇ. 63 ಏರಿಕೆ. ಈ ವರ್ಷ (2026)ವಂತೂ ಪೊಲೀಸರ ಸಾಧನೆ ತೀರಾ ಅಸಾಮಾನ್ಯವಾಗಿದೆ. ವರ್ಷದ ಮೊದಲ ಎರಡು ತಿಂಗಳಲ್ಲೇ NDPSಕಾಯ್ದೆಯನ್ವಯ ಮಾದಕ ದ್ರವ್ಯ ಸಂಬಂಧಿ 2,378 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಸಂಖ್ಯೆ ಇದೇ ದರದಲ್ಲಿ ಮುಂದುವರಿದರೆ ವರ್ಷಾಂತ್ಯದೊಳಗೆ ದಾಖಲಿತ ಪ್ರಕರಣಗಳ ಸಂಖ್ಯೆ 14,000 ಮೀರುವ ಸಾಧ್ಯತೆ ಇದೆ.

ಕಳೆದ ತಿಂಗಳಷ್ಟೇ, ಮಾದಕದ್ರವ್ಯಗಳ ನಿಯಂತ್ರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು 2028ರೊಳಗೆ ಕರ್ನಾಟಕವನ್ನು ಸಂಪೂರ್ಣ ‘ಡ್ರಗ್ಸ್ ಮುಕ್ತ ರಾಜ್ಯ’ವಾಗಿ ಪರಿವರ್ತಿಸುವುದು ಸರಕಾರದ ಗುರಿಯಾಗಿದೆ ಎಂದು ಘೋಷಿಸಿದ್ದಾರೆ. ಡ್ರಗ್ಸ್ ವ್ಯವಹಾರಗಳ ವಿರುದ್ಧ ವ್ಯಾಪಕ ಅಭಿಯಾನ ನಡೆಸಿರುವ ರಾಜ್ಯ ಪೊಲೀಸ್ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ 850 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದೆ ಮತ್ತು ಡ್ರಗ್ಸ್ ಸಂಬಂಧಿ ಪ್ರಕರಣಗಳಲ್ಲಿ 32,000ಕ್ಕೂ ಹೆಚ್ಚಿನ ಮಂದಿಯನ್ನು ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ಬಿಡುಗಡೆಗೊಂಡ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈ ವರ್ಷದ ಮೊದಲ 5 ತಿಂಗಳಲ್ಲಿ, ಮಾದಕ ಪದಾರ್ಥಗಳನ್ನು ಬಳಸಿದ 900 ಮಂದಿಯನ್ನು ಹಾಗೂ ಅವುಗಳನ್ನು ಮಾರಾಟಮಾಡುತ್ತಿದ್ದ 310 ಮಂದಿಯನ್ನು ಬಂಧಿಸಲಾಗಿತ್ತು. ಹಾಗೆಯೇ, ಪ್ರಸ್ತುತ ಬಂಧಿತ ವ್ಯಕ್ತಿಗಳಿಂದ ಸುಮಾರು 171 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ವಿವಿಧ ನಂಬಲರ್ಹ ಮೂಲಗಳ ಪ್ರಕಾರ ಇಂದು ನಮ್ಮ ರಾಜ್ಯದಲ್ಲಿ ಡ್ರಗ್ಸ್ ಸಮಸ್ಯೆಯು ತುಂಬಾ ಕಳವಳಕಾರಿ ಎನ್ನುವಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಮತ್ತು ದಿನೇದಿನೇ ಅದರ ವ್ಯಾಪ್ತಿ ವಿಸ್ತರಿಸುತ್ತಲೂ ಇದೆ. ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ನಡೆಯುತ್ತಿರುವ ಶ್ರಮಗಳಿಗೆ ಹೋಲಿಸಿದರೆ, ಅವುಗಳ ಪ್ರಸಾರಕ್ಕಾಗಿ ಸಕ್ರಿಯವಾಗಿರುವ ಕ್ರಿಮಿನಲ್ ಜಾಲಗಳು ಹೆಚ್ಚು ಬಲಿಷ್ಠ, ವ್ಯಾಪಕ, ಸಂಘಟಿತ ಹಾಗೂ ಸಂಕೀರ್ಣವಾಗಿವೆ. ನಮ್ಮ ರಾಜ್ಯದ ದೌರ್ಭಾಗ್ಯ ಏನೆಂದರೆ ಇಲ್ಲಿ ಮಾದಕ ದ್ರವ್ಯಗಳ ಸಮಸ್ಯೆ ಯಾವುದಾದರೂ ಒಂದೆರಡು ನಗರ ಅಥವಾ ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ವರ್ಷ 2023 ಮತ್ತು 2026ರ ನಡುವಣ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ಎಲ್ಲ ಪ್ರಮುಖ ನಗರಗಳಲ್ಲೂ NDPS ಕಾಯ್ದೆಯನ್ವಯ ಡ್ರಗ್ಸ್ ಸಂಬಂಧಿ ಕೇಸುಗಳು ಗಣ್ಯ ಪ್ರಮಾಣದಲ್ಲಿ ದಾಖಲಾಗಿದ್ದವು. ಈ ಅವಧಿಯಲ್ಲಿ ಬೆಂಗಳೂರು ನಗರವೊಂದರಲ್ಲೇ 6,743 ಕೇಸುಗಳು ದಾಖಲಾಗಿದ್ದವು. ಈ ಮೂಲಕ ದೇಶದ ಐಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರವು ಡ್ರಗ್ಸ್ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿಬಿಟ್ಟಿತು.

ದುಃಖದ ಸಂಗತಿಯೇನೆಂದರೆ, ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಾದಕ ಪದಾರ್ಥಗಳ ವ್ಯವಹಾರ ನಡೆಯುತ್ತಿರುವ 12 ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಸೇರಿದೆ ಮತ್ತು ಅದು 6ನೇ ಸ್ಥಾನದಲ್ಲಿದೆ. ಇನ್ನಷ್ಟು ದುಃಖದ ಸಂಗತಿಯೇನೆಂದರೆ 2023 ಮತ್ತು 2026ರ ನಡುವಣ ಅವಧಿಯಲ್ಲಿ ನಮ್ಮ ಜಾಣರ ನಗರ ಮಂಗಳೂರಲ್ಲಿ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ 2,665 ಕೇಸುಗಳು ದಾಖಲಾಗಿವೆ. ಈ ಮೂಲಕ ಮಂಗಳೂರು ನಗರವು ಡ್ರಗ್ಸ್ ಕ್ಷೇತ್ರದಲ್ಲಿ ಕರ್ನಾಟಕದ ಉಪರಾಜಧಾನಿಯಾಗಿ ಬಿಟ್ಟಿದೆ. ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳು ಕ್ರಮವಾಗಿ 1,290 ಮತ್ತು 722 ಕೇಸುಗಳನ್ನು ದಾಖಲಿಸುವ ಮೂಲಕ ತಾವು ಕೂಡಾ ದೊಡ್ಡ ನಗರಗಳಿಗಿಂತ ಹೆಚ್ಚೇನೂ ಹಿಂದುಳಿದಿಲ್ಲ ಎಂಬುದನ್ನು ಸಾಬೀತುಪಡಿಸಿವೆ.

ಮಂಗಳೂರು ಇಂದು ಮಾದಕ ವ್ಯಸನಿಗಳ ನಗರ ಎಂಬ ಅಪಖ್ಯಾತಿಗೆ ತುತ್ತಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಮಂಗಳೂರು ನಗರ ಪೊಲೀಸರು, ತಾವು ವಶಪಡಿಸಿಕೊಂಡಿದ್ದ ಸುಮಾರು 82 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ನಾಶ ಮಾಡಿದ್ದರು. ಈ ವರ್ಷ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾದ ಮಾಹಿತಿ ಪ್ರಕಾರ ನಗರ ಪೊಲೀಸರು ನಗರದ 150 ಕಾಲೇಜುಗಳ ಸಹಭಾಗಿತ್ವದೊಂದಿಗೆ ಒಂದು ಕಾರ್ಯಾಚರಣೆಯನ್ನು ನಡೆಸಿ 8,310 ವಿದ್ಯಾರ್ಥಿಗಳನ್ನು ಮಾದಕ ವ್ಯಸನ ಪರೀಕ್ಷೆಗೆ ಒಳಪಡಿಸಿದ್ದರು. ಆ ಪೈಕಿ 98 ಮಂದಿ ವಿದ್ಯಾರ್ಥಿಗಳು ಮಾದಕ ಪದಾರ್ಥಗಳನ್ನು ಬಳಸುತ್ತಿದ್ದಾರೆಂದು ಪರೀಕ್ಷೆಯಿಂದ ಸಾಬೀತಾಯಿತು. ಮುಂದೆ ಪ್ರಸ್ತುತ ವ್ಯಸನಿ ವಿದ್ಯಾರ್ಥಿಗಳನ್ನು ವ್ಯಸನ ಮುಕ್ತಗೊಳಿಸುವುದಕ್ಕಾಗಿ ಕೌನ್ಸೆಲಿಂಗ್ ಮುಂತಾದ ಪ್ರಕ್ರಿಯೆಗಳಿಗೆ ಒಳಪಡಿಸಿದ ಬಳಿಕ ಮತ್ತೆ ಪರೀಕ್ಷೆ ನಡೆಸಿದಾಗ, ಆ ಪೈಕಿ ಹೆಚ್ಚಿನವರು ಮಾದಕ ವಸ್ತುಗಳ ದಾಸ್ಯದಿಂದ ಮುಕ್ತರಾಗುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಸಾಧನೆಗಳಿಗಾಗಿ ನಾವು ಸರಕಾರವನ್ನು ಮತ್ತು ವಿಶೇಷವಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸಲೇಬೇಕು.

ಮೇಲೆ ನೀಡಲಾದ ಎಲ್ಲ ಮಾಹಿತಿಗಳ ವಿಶೇಷತೆ ಏನೆಂದರೆ ಅವೆಲ್ಲಾ ಸರಕಾರಿ ಮೂಲಗಳಿಂದ ಹರಿದು ಬಂದ ಮಾಹಿತಿಗಳು. ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಾಗ ಇಂತಹ ಮಾಹಿತಿಗಳನ್ನು ಜನತೆಗೆ ಒದಗಿಸುತ್ತಿರುತ್ತಾರೆ. ಇವು ಜನತೆಗೆ ಬಹಳಷ್ಟು ನೆಮ್ಮದಿಯನ್ನು ನೀಡುತ್ತವೆ. ನಮ್ಮ ರಾಜ್ಯದಲ್ಲಿ ಮಾದಕ ಪದಾರ್ಥಗಳ ಚಲಾವಣೆ ಸಂಪೂರ್ಣ ನಿಯಂತ್ರಣದಲ್ಲಿದೆ, ಮಾದಕವಸ್ತುಗಳ ಶಾಪದಿಂದ ಸಮಾಜವನ್ನು ಮುಕ್ತವಾಗಿಡುವುದಕ್ಕಾಗಿ ಸರಕಾರ ಮತ್ತು ಪೊಲೀಸ್ ಇಲಾಖೆಯವರು ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಈ ರಂಗದ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಸಿಗುತ್ತಿದೆ ಎಂಬ ವಿಶ್ವಾಸ ಜನರಲ್ಲಿ ಮೂಡುತ್ತದೆ. ಆದರೆ ಇಲ್ಲೊಂದು ಸಮಸ್ಯೆ ಏನೆಂದರೆ ಇವೆಲ್ಲಾ ಕೇವಲ ಏಕಪಕ್ಷೀಯ ಮಾಹಿತಿಗಳು. ಮಾದಕ ದ್ರವ್ಯಗಳ ಕರಾಳ ಲೋಕವನ್ನು ಹತ್ತಿರದಿಂದ ನೋಡಿದರೆ, ಸನ್ನಿವೇಶವು, ಪೊಲೀಸರು ಮತ್ತು ಮಂತ್ರಿಗಳು ತಿಳಿಸುವಷ್ಟೇನೂ ಆಶಾದಾಯಕವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರು ದಾಖಲಿಸಿದ ಡ್ರಗ್ಸ್ ಸಂಬಂಧಿ ಕೇಸುಗಳಲ್ಲಿ ಒಂದೇ ವರ್ಷದಲ್ಲಿ ಶೇ. 63 ಏರಿಕೆ ಆಗಿದೆ ಎಂಬ ಸುದ್ದಿಯು ಒಂದು ಕಡೆ ಪೊಲೀಸರ ದಕ್ಷತೆಗೆ ಸಾಕ್ಷಿಯಾಗಿದ್ದರೆ ಇನ್ನೊಂದು ಕಡೆ, ಡ್ರಗ್ಸ್ ಮಾಫಿಯಾ ಜಾಲವು, ಸರಕಾರ, ಪೊಲೀಸು, ಕಾನೂನು ಇತ್ಯಾದಿಗಳನ್ನೆಲ್ಲಾ ಮೀರಿ ಕ್ಷಿಪ್ರವಾಗಿ ಬೆಳೆಯುತ್ತಿದೆ ಎಂಬುದಕ್ಕೂ ಅದು ಪುರಾವೆಯಾಗುತ್ತದೆ. ದಾಖಲಿತ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯ ದರವು ಮುಂದಿನ ವರ್ಷ ಮತ್ತಷ್ಟು ಬೆಳೆಯಬಹುದೆಂಬ ಆತಂಕವನ್ನೂ ಮೂಡಿಸುತ್ತದೆ.

ಬೇರೆ ಅಪರಾಧಗಳಿಗೆ ಹೋಲಿಸಿದರೆ ಮಾದಕದ್ರವ್ಯಗಳ ಪ್ರಸಾರವು ಸಮಾಜದ ಪಾಲಿಗೆ ಹೆಚ್ಚು ವಿನಾಶಕಾರಿಯಾಗಿದೆ. ಹಾಗೆಯೇ ಬೇರೆ ಅಪರಾಧ ಜಾಲಗಳಿಗೆ ಹೋಲಿಸಿದರೆ ಮಾದಕ ದ್ರವ್ಯಗಳ ಉತ್ಪಾದನೆ, ಸಾಗಾಟ, ಸಂಗ್ರಹ ಮತ್ತು ಮಾರಾಟದ ಜಾಲವು ತುಂಬಾ ಸಂಕೀರ್ಣವಾಗಿರುತ್ತದೆ. ಅದು ಭಾರೀ ಬೃಹತ್ ಮೊತ್ತದ ಆರ್ಥಿಕ ವ್ಯವಹಾರವನ್ನು ಒಳಗೊಂಡಿರುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಅಂತರ್‌ರಾಷ್ಟ್ರೀಯ ಮಟ್ಟದ ಭಾರೀ ಬಲಿಷ್ಠ ಅಪರಾಧಿ ಮಾಫಿಯಾಗಳು ಇದರಲ್ಲಿ ಒಳಗೊಂಡಿರುತ್ತವೆ. ಎಲ್ಲ ಬಗೆಯ ಕ್ರಿಮಿನಲ್ ಜಾಲಗಳನ್ನು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಮಾಫಿಯಾಗಳು ಒಂದು ಸಮಾಜವನ್ನು ನಾಶಮಾಡುವುದಕ್ಕೆ ಅದೇ ಸಮಾಜದ ಬಡ, ನಿರುದ್ಯೋಗಿ, ಮಹತ್ವಾಕಾಂಕ್ಷಿ ಯುವ ಜನರನ್ನು ಬಳಸಿಕೊಳ್ಳುತ್ತವೆ. ಕ್ಷಿಪ್ರ ಲಾಭದ ಆಮಿಷ ಒಡ್ಡಿ, ಯಾವುದೇ ಅಪರಾಧಿ ಹಿನ್ನೆಲೆ ಇಲ್ಲದ ರೈತರು, ಕೃಷಿಕರು ಮುಂತಾದವರನ್ನು, ಔಷಧ ಅಂಗಡಿಗಳನ್ನು, ಸಾಮಾನ್ಯ ಸರಕು ವಿತರಕರನ್ನು ಈ ಅಪರಾಧದಲ್ಲಿ ಪಾಲುದಾರರಾಗಿ ಮಾಡಲಾಗುತ್ತದೆ. ಭಯೋತ್ಪಾದನೆ, ಸುಪಾರಿ ಹತ್ಯೆ, ಕಳ್ಳ ಸಾಗಣೆ, ಕಪ್ಪುಹಣದ ವರ್ಗಾವಣೆ ಮತ್ತಿತರ ಹಲವು ಅಪರಾಧ ಚಟುವಟಿಕೆಗಳೊಂದಿಗೆ ಡ್ರಗ್ಸ್ ಜಾಲಕ್ಕೆ ನಿಕಟ ಸಂಬಂಧವಿರುತ್ತದೆ.

ಇಷ್ಟು ಬೃಹತ್ ಪ್ರಮಾಣದ, ಸಂಕೀರ್ಣ ಸ್ವರೂಪದ ವಿನಾಶಕಾರಿ ಜಾಲವನ್ನು ಸೋಲಿಸುವುದಕ್ಕೆ ಸಮಾಜವು ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ಅವಲಂಬಿಸಿರುವುದು ಮೂರ್ಖತನ. ನಿಜವಾಗಿ ಇಲ್ಲಿ ಸರಕಾರಕ್ಕಿರುವ ಪಾತ್ರ ಸೀಮಿತ. ನಿಜವಾದ ಪಾತ್ರ ಇರುವುದು ಸಮಾಜಕ್ಕೆ. ಈಗಾಗಲೇ ಈ ಮಾರಕ ಪಿಡುಗು ನಿಷ್ಪಕ್ಷವಾಗಿ ಮತ್ತು ಜಾತ್ಯತೀತವಾಗಿ ಸಮಾಜದ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಮನೆಬಾಗಿಲಿಗೆ ತಲುಪಿದೆ. ವಿದ್ಯಾರ್ಥಿ-ಯುವಜನರನ್ನು ಸಾಮೂಹಿಕವಾಗಿ ಬಲಿ ತೆಗೆದುಕೊಳ್ಳುತ್ತಿದೆ. ಅದನ್ನು ಸೋಲಿಸಬೇಕಿದ್ದರೆ ಸಂಪೂರ್ಣ ಸಮಾಜವು ಒಂದಾಗಿ ಅದರ ವಿರುದ್ಧ ಸಂಘಟಿತ ಯುದ್ಧ ಸಾರಬೇಕು. ಸಮಾಜದ ಪ್ರತಿಯೊಬ್ಬ ಸದಸ್ಯ ಈ ಯುದ್ಧದಲ್ಲಿ ಯೋಧರಾಗಬೇಕು. ಈ ಯುದ್ಧದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ಇರುವುದು ಜಾಗೃತಿ, ಮಾಹಿತಿ ಮತ್ತು ಸಮನ್ವಯಕ್ಕೆ. ಜನಮಾನಸದ ಮೇಲೆ ಪ್ರಭಾವ ಬೀರಬಲ್ಲ ನಮ್ಮ ಶಾಲೆ, ಕಾಲೇಜು, ಮಂದಿರ, ಮಸೀದಿ, ಚರ್ಚು ಮತ್ತಿತರ ಎಲ್ಲ ಸಾಂಪ್ರದಾಯಿಕ ಸಂಸ್ಥೆಗಳು ಮತ್ತು ನಮ್ಮ ಎಲ್ಲ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವೇದಿಕೆಗಳು ಸಮಾಜದಲ್ಲಿ ಈ ಕುರಿತು ಜಾಗೃತಿ ಬೆಳೆಸುವ ಪ್ರಕ್ರಿಯೆಯಲ್ಲಿ ತೊಡಗಬೇಕು. ಈ ಯುದ್ಧದ ಯಶಸ್ಸು, ಸಮಾಜವು ಈ ಯುದ್ಧದಲ್ಲಿ ಎಷ್ಟು ಒಗ್ಗಟ್ಟಿನೊಂದಿಗೆ, ಎಷ್ಟು ಸಕ್ರಿಯವಾಗಿ ಭಾಗವಹಿಸುತ್ತದೆ ಮತ್ತು ಸಮಾಜ ಹಾಗೂ ಸರಕಾರದ ನಡುವಣ ಸಮನ್ವಯವು ಎಷ್ಟು ಬಲಿಷ್ಠವಾಗಿರುತ್ತದೆ ಎಂಬುದನ್ನು ಅವಲಂಬಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X