Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಭಾರತದ ಅಂತರ್‌ರಾಷ್ಟ್ರೀಯ ವರ್ಚಸ್ಸಿಗೆ...

ಭಾರತದ ಅಂತರ್‌ರಾಷ್ಟ್ರೀಯ ವರ್ಚಸ್ಸಿಗೆ ಧಕ್ಕೆ ತಂದಿರುವ ಅಮೆರಿಕದ ದೋಷಾರೋಪ

ವಾರ್ತಾಭಾರತಿವಾರ್ತಾಭಾರತಿ1 Dec 2023 9:18 AM IST
share
ಭಾರತದ ಅಂತರ್‌ರಾಷ್ಟ್ರೀಯ ವರ್ಚಸ್ಸಿಗೆ ಧಕ್ಕೆ ತಂದಿರುವ ಅಮೆರಿಕದ ದೋಷಾರೋಪ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅಮೆರಿಕದ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನೂನ್ ಅವರ ಹತ್ಯೆ ಯತ್ನ ಪ್ರಕರಣ ಹೊಸ ತಿರುವೊಂದನ್ನು ಪಡೆದುಕೊಂಡಿದೆ. ಪನ್ನೂನ್‌ನನ್ನು ಹತ್ಯೆಗೈಯಲು ಭಾರತೀಯ ಪ್ರಜೆ, ಮಾದಕ ದ್ರವ್ಯ ಕಳ್ಳಸಾಗಣೆದಾರನೆನ್ನಲಾದ ನಿಖಿಲ್ ಗುಪ್ತ ಎಂಬಾತ ಸಂಚು ರೂಪಿಸಿರುವುದು ಅಮೆರಿಕದ ತನಿಖೆಯಿಂದ ಬಹಿರಂಗವಾಗಿದೆ. ಇದಿಷ್ಟೇ ಆಗಿದ್ದರೆ ಭಾರತ ತಲೆಕೆಡಿಸಿಕೊಳ್ಳುವ ಅಗತ್ಯವಿದ್ದಿರಲಿಲ್ಲವೇನೋ? ಆದರೆ ಈತನಿಗೆ ಸುಪಾರಿ ಕೊಟ್ಟಿರುವುದು ಭಾರತದ ಬೇಹುಗಾರಿಕೆ ಇಲಾಖೆಯಲ್ಲಿರುವ ಅಧಿಕಾರಿ ಎನ್ನುವ ಅಂಶವನ್ನು ತನ್ನ ದೋಷಾರೋಪದಲ್ಲಿ ಅಮೆರಿಕ ಹೇಳಿದೆ. ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರ, ಮಾದಕ ದ್ರವ್ಯ ಜಾಲದ ಜೊತೆಗೆ ನಂಟಿರುವ ವ್ಯಕ್ತಿಯೊಬ್ಬನ ಜೊತೆಗೆ ಭಾರತದ ಬೇಹುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬ ಮೈತ್ರಿಯನ್ನು ಹೊಂದಿರುವುದಲ್ಲದೆ ಅಮೆರಿಕದ ಪ್ರಜೆಯೊಬ್ಬನನ್ನು ಹತ್ಯೆಗೈಯಲು ಸುಪಾರಿ ಕೊಟ್ಟಿರುವ ಆರೋಪ ನಿಜವೇ ಆಗಿದ್ದರೆ ಭವಿಷ್ಯದಲ್ಲಿ ಇದು ಭಾರತದ ಅಂತರ್‌ರಾಷ್ಟ್ರೀಯ ಸಂಬಂಧಗಳ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಮಾತ್ರವಲ್ಲ, ಈತನ ಈ ನಂಟು ವೈಯಕ್ತಿಕವಾದುದೋ ಅಥವಾ ಭಾರತ ಸರಕಾರವೂ ಇದರಲ್ಲಿ ಶಾಮೀಲಾಗಿದೆಯೋ ಎನ್ನುವುದು ಕೂಡ ಬಹಿರಂಗವಾಗಬೇಕಾಗಿದೆ. ಆರೋಪಗಳನ್ನು ಪರಿಶೀಲಿಸಲು ಭಾರತ ಒಂದು ಸಮಿತಿಯನ್ನು ಈಗಾಗಲೇ ರಚಿಸಿದೆ. ಈ ವಿಚಾರಣಾ ಸಮಿತಿಯ ವರದಿಯ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭಾರತ ಈಗಾಗಲೇ ಪ್ರತಿಕ್ರಿಯಿಸಿದೆ.

ಪ್ರಕರಣ ಆತಂಕಕಾರಿಯಾಗಿರುವುದು ಯಾಕೆ ಎಂದರೆ, ಇಂತಹ ಆರೋಪಗಳು ಭಾರತದ ವಿರುದ್ಧ ಕೇಳಿ ಬಂದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಕೆನಡಾದಲ್ಲಿ ನಡೆದ ಖಾಲಿಸ್ತಾನ ಬೆಂಬಲಿಗ ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಅಲ್ಲಿನ ಸರಕಾರ ಆರೋಪಿಸಿತ್ತು. ಆದರೆ ಭಾರತ ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದು ‘‘ತನಿಖೆಗೆ ಮುನ್ನವೇ ಭಾರತವನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ’’ ಎಂದು ಹೇಳಿಕೆ ನೀಡಿತ್ತು. ಈ ಹತ್ಯೆ ಕೆನಡಾ ಮತ್ತು ಭಾರತದ ನಡುವಿನ ಸಂಬಂಧವನ್ನು ಸಂಪೂರ್ಣ ಕೆಡಿಸಿತ್ತು ಮಾತ್ರವಲ್ಲ, ಉಭಯ ದೇಶಗಳ ನಡುವಿನ ಅಸಮಾಧಾನದ ಕಾರ್ಮೋಡ ಇನ್ನೂ ಕರಗಿಲ್ಲ. ಈ ಹತ್ಯೆಯನ್ನು ಭಾರತ ಮಾಡಿರುವುದು ನಿಜವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ ಈ ಹತ್ಯೆಗಳಿಂದ ಪಂಜಾಬ್‌ನ ಪ್ರತ್ಯೇಕತಾವಾದವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಮಾತ್ರವಲ್ಲ, ಉಗ್ರವಾದಿಗಳು ಇಂತಹ ಪ್ರಕರಣಗಳನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ. ಕೆನಡಾದ ಸಿಟ್ಟು ಖಾಲಿಸ್ತಾನಿಗಳ ವಿರುದ್ಧ ವ್ಯಕ್ತವಾಗುವ ಬದಲು ಭಾರತ ಸರಕಾರದ ವಿರುದ್ಧ ವ್ಯಕ್ತವಾಗುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಖಾಲಿಸ್ತಾನಿವಾದಿಗಳ ಬಗ್ಗೆ ಕೆನಡಾ ಮೃದು ಧೋರಣೆಯನ್ನು ತಳೆದಿದೆ ಎನ್ನುವುದು ಭಾರತದ ಹಳೆಯ ಆರೋಪ. ಇದರಲ್ಲಿ ಸತ್ಯಾಂಶವಿದೆ. ಖಾಲಿಸ್ತಾನಿ ಬೆಂಬಲಿಗರಿಗೆ ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ನೀಡುವ ಹಲವರಿಗೆ ಕೆನಡಾ ಆಶ್ರಯ ನೀಡಿದೆ ಮತ್ತು ಅವರನ್ನು ರಕ್ಷಿಸಲು ಕೆನಡಾ ಪ್ರಯತ್ನಿಸುತ್ತಿದೆ. ಇದು ಒಂದಲ್ಲ ಒಂದು ದಿನ ಕೆನಡಾಕ್ಕೆ ಮುಳುವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದನ್ನು ಭಾರತ ಸರಕಾರ ಕೆನಡಾಕ್ಕೆ ಮನವರಿಕೆ ಮನವರಿಕೆ ಮಾಡಿಕೊಡಬೇಕು. ಬದಲಿಗೆ, ಕೆನಡಾ ಪ್ರಜೆಯನ್ನು ಯಾವುದೇ ವಿಚಾರಣೆಗಳಿಲ್ಲದೆ ಭಯೋತ್ಪಾದಕನೆಂದು ಘೋಷಿಸಿ ತನ್ನ ಏಜೆಂಟರ ಮೂಲಕ ಅಂತರ್‌ರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಕೊಲ್ಲಲು ಮುಂದಾದರೆ ಅದು ಭಾರತಕ್ಕೆ ತಿರುಗು ಬಾಣವಾಗಬಹುದು. ಅಂತರ್‌ರಾಷ್ಟ್ರೀಯ ಕಟಕಟೆಯಲ್ಲಿ ಭಾರತ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಇತ್ತೀಚೆಗೆ ಖತರ್‌ನಲ್ಲಿ ಎಂಟು ಮಂದಿ ಮಾಜಿ ನೌಕಾ ದಳ ಅಧಿಕಾರಿಗಳಿಗೆ ಅಲ್ಲಿನ ಸರಕಾರ ಮರಣದಂಡನೆ ಶಿಕ್ಷೆಯನ್ನು ನೀಡಿತು. ಗೂಢಚರ್ಯೆ ಆರೋಪದಲ್ಲಿ ಈ ಎಂಟು ಮಂದಿಯನ್ನು ಖತರ್ ಗುಪ್ತಚರ ಏಜೆನ್ಸಿ ಬಂಧಿಸಿತ್ತು. ಇವರು ಸುಮಾರು ೨೦ ವರ್ಷಗಳ ಕಾಲ ಭಾರತದ ನೌಕಾದಳದಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ಖತರ್‌ನಲ್ಲಿ ಇವರು ಇಸ್ರೇಲ್ ದೇಶಕ್ಕಾಗಿ ಗೂಢಚರ್ಯೆ ಮಾಡಿದ ಆರೋಪಗಳನ್ನು ಹೊತ್ತುಕೊಂಡು ಇದೀಗ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಇವರಿಗೆ ನೀಡಿರುವ ಶಿಕ್ಷೆಯ ವಿರುದ್ಧ ಸರಕಾರ ಮೇಲ್ ಮನವಿಯನ್ನು ಮಾಡಿದೆಯಾದರೂ, ಈ ಆರೋಪಗಳು ಭಾರತಕ್ಕೆ ಸಾಕಷ್ಟು ಮುಜುಗರವನ್ನು ಉಂಟು ಮಾಡಿದೆ. ಭಾರತದ ಬೇಹು ಇಲಾಖೆಯಲ್ಲಿರುವ ಅಧಿಕಾರಿಗಳು ಕ್ರಿಮಿನಲ್‌ಗಳ ಜೊತೆಗೆ ನಂಟನ್ನು ಇಟ್ಟುಕೊಂಡು ಭೂಗತ ಲೋಕವನ್ನು ನಿಯಂತ್ರಿಸುವ ಪ್ರಕರಣಗಳು ಹಿಂದೆಯೂ ಬೆಳಕಿಗೆ ಬಂದಿವೆ. ಎರಡು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕರ ಜೊತೆಗೆ ವ್ಯವಹರಿಸುತ್ತಿರುವಾಗಲೇ ಹಿರಿಯ ಅಧಿಕಾರಿ ದೇವಿಂದರ್ ಸಿಂಗ್ ಎಂಬಾತನನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ಕಾಶ್ಮೀರದ ಭಯೋತ್ಪಾದಕರೊಂದಿಗೆ ಮಾತ್ರವಲ್ಲ, ಪಾಕಿಸ್ತಾನದ ಜೊತೆಗೂ ಈತ ಸಂಬಂಧವನ್ನು ಹೊಂದಿರುವುದು ತನಿಖೆಯಿಂದ ಹೊರ ಬಿದ್ದಿತ್ತು. ಪುಲ್ವಾನದಲ್ಲಿ ಭಾರತದ ಸೈನಿಕರ ಮೇಲೆ ನಡೆದಿರುವ ಬರ್ಬರ ದಾಳಿಯ ಕುರಿತಂತೆ ಹಲವು ಪ್ರಶ್ನೆಗಳು ಇಂದಿಗೂ ಉತ್ತರವಿಲ್ಲದೆ ಬಿದ್ದುಕೊಂಡಿವೆ. ಗುಪ್ತಚರ ಇಲಾಖೆಯ ವೈಫಲ್ಯಗಳ ಜೊತೆಗೆ, ಇಲಾಖೆಯೊಳಗಿರುವ ಜನರೂ ಈ ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡಿರುವ ಬಗ್ಗೆಯೂ ಚರ್ಚೆಗಳು ನಡೆದಿವೆ.

ಉಗ್ರವಾದದ ಕುರಿತಂತೆ ಭಾರತದ ದ್ವಂದ್ವ ನಿಲುವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಒಂದೆಡೆ ಭಾರತ ಸರಕಾರವೇ ಕೇಸರಿ ಉಗ್ರವಾದಿ ಸಂಘಟನೆಗಳ ಜೊತೆಗೆ ಕೈ ಜೋಡಿಸುತ್ತಿದೆ. ಮಾಲೆಗಾಂವ್ ಸ್ಫೋಟ ಆರೋಪಿಗೆ ಟಿಕೆಟ್ ನೀಡಿ ಆಕೆಯನ್ನು ಸಂಸತ್ ಸದಸ್ಯೆಯನ್ನಾಗಿ ಆಯ್ಕೆ ಮಾಡಿದೆ. ನಾಥೂರಾಂ ಗೋಡ್ಸೆ ಬೆಂಬಲಿಗರಿಗೆ ರಕ್ಷಣೆಯನ್ನು ನೀಡುತ್ತಿದೆ. ಸನಾತನ ಸಂಸ್ಥೆಯಂತಹ ಸಂಘಟನೆಗಳ ಜೊತೆಗೆ ಸಂಬಂಧ ಬೆಸೆದುಕೊಂಡಿದೆ. ತನ್ನದೇ ದೇಶದಲ್ಲಿ ಉಗ್ರವಾದಿಗಳಿಗೆ ನೀರೆರೆಯುತ್ತಾ, ಕೆನಡಾದಂತಹ ದೇಶಗಳಿಗೆ ಉಗ್ರವಾದದ ಬಗ್ಗೆ ಉಪದೇಶಗಳನ್ನು ನೀಡಿದರೆ ಅದು ಫಲ ನೀಡೀತೆ? ಇಂದು ಸಂಘಪರಿವಾರ ಉಗ್ರರು ಭಾರತದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದಾರೆ. ಹಲವು ಸ್ಫೋಟ, ಕೊಲೆಗಳಂತಹ ಪ್ರಕರಣಗಳಲ್ಲಿ ಇವರ ಹೆಸರು ಕೇಳಿ ಬರುತ್ತಿವೆ.ಹೇಮಂತ್ ಕರ್ಕರೆ ತಂಡ ಭಾರತದಲ್ಲಿ ಹರಡಿಕೊಂಡಿರುವ ಕೇಸರಿ ಉಗ್ರರ ಜಾಲದ ಬಗ್ಗೆ ತನಿಖೆ ನಡೆಸಿ ಇನ್ನೇನೂ ಕೊನೆ ಮುಟ್ಟಬೇಕು ಎನ್ನುವಷ್ಟರಲ್ಲಿ ತನಿಖಾ ತಂಡದಲ್ಲಿದ್ದ ಎಲ್ಲರೂ ನಿಗೂಢವಾಗಿ ಸಾಯಿಸಲ್ಪಟ್ಟರು. ಮಾಲೆಗಾಂವ್ ಸ್ಫೋಟ ಆರೋಪಿಗಳ ಕುರಿತಂತೆ ಮೃದು ಧೋರಣೆ ತಾಳಲು ಎನ್‌ಐಎ ಅಧಿಕಾರಿಗಳೇ ಒತ್ತಡ ಹಾಕಿರುವ ಬಗ್ಗೆ ಈ ಹಿಂದೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಆರೋಪಿಸಿರುವುದನ್ನು ನಾವು ಸ್ಮರಿಸಬೇಕು. ಭಾರತದಲ್ಲಿ ಕ್ರಿಮಿನಲ್‌ಗಳು, ಸಂಘಪರಿವಾರ ಮತ್ತು ತನಿಖಾ ಅಧಿಕಾರಿಗಳ ನಡುವಿನ ಅನೈತಿಕ ಮೈತ್ರಿಗಳು ಹಲವು ಬಾರಿ ಮಾಧ್ಯಮಗಳಲ್ಲಿ ಚರ್ಚೆಯಾಗಿವೆ. ಇದೀಗ ಈ ಸಂಬಂಧ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆಯಾಗಿದೆಯೇ ಎನ್ನುವ ಅನುಮಾನ ಕೆನಡಾ ಮತ್ತು ಅಮೆರಿಕದ ಪ್ರಕರಣಗಳಿಂದಾಗಿ ದೇಶವನ್ನು ಕಾಡುವಂತಾಗಿದೆ. ಭಾರತ ಸರಕಾರ ಈ ಆರೋಪಗಳ ಬಗ್ಗೆ ಗಂಭೀರ ತನಿಖೆ ನಡೆಸಿ ಈ ಕೃತ್ಯಗಳಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ. ಇಲ್ಲವಾದರೆ ಭಾರತವನ್ನೂ ಮುಂದೊಂದು ದಿನ ಪಾಕಿಸ್ತಾನದ ಸಾಲಿಗೆ ಸೇರಿಸುವ ಸಾಧ್ಯತೆಗಳಿವೆ. ಇಸ್ರೇಲ್, ಪಾಕಿಸ್ತಾನದಂತಹ ದೇಶಗಳು ಭಾರತದ ಬೇಹುಗಾರಿಕಾ ಸಂಸ್ಥೆಗಳಿಗೆ ಯಾವತ್ತೂ ಮಾದರಿಯಾಗದಿರಲಿ. ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನ್ ಸಿಂಗ್, ಅಟಲ್‌ಬಿಹಾರಿ ವಾಜಪೇಯಿಯಂತಹ ಮುತ್ಸದ್ದಿ ನಾಯಕರು ಕಟ್ಟಿ ಬೆಳೆಸಿದ ಭಾರತದ ಅಂತರ್‌ರಾಷ್ಟ್ರೀಯ ವರ್ಚಸ್ಸಿಗೆ, ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಮೋದಿ ನೇತೃತ್ವದ ಸರಕಾರಕ್ಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X