Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬೇಲೂರು 'ಚಪ್ಪಲಿ ಹಾರ' ಪ್ರಕರಣ: ನಿಜಕ್ಕೂ...

ಬೇಲೂರು 'ಚಪ್ಪಲಿ ಹಾರ' ಪ್ರಕರಣ: ನಿಜಕ್ಕೂ ಮಾನಸಿಕ ಅಸ್ವಸ್ಥರು ಯಾರು?

ವಾರ್ತಾಭಾರತಿವಾರ್ತಾಭಾರತಿ24 Sept 2025 7:30 AM IST
share
ಬೇಲೂರು ಚಪ್ಪಲಿ ಹಾರ ಪ್ರಕರಣ: ನಿಜಕ್ಕೂ ಮಾನಸಿಕ ಅಸ್ವಸ್ಥರು ಯಾರು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದ ಕೆಲವು ದಿನಗಳಿಂದ ರಾಜ್ಯದ ಶಾಂತಿಯನ್ನು ಕದಡಲು ದುಷ್ಕರ್ಮಿಗಳು ವ್ಯವಸ್ಥಿತ ಸಂಚು ನಡೆಸುತ್ತಿರುವುದು ಬೆಳಕಿಗೆ ಬರುತ್ತಿದೆ. ಅದಕ್ಕಾಗಿ ಅವರು ಸಾರ್ವಜನಿಕ ಗಣೇಶೋತ್ಸವವನ್ನು ಬಳಸಿಕೊಳ್ಳುವ ಗರಿಷ್ಠ ಪ್ರಯತ್ನ ನಡೆಸಿದರು. ಅದರಲ್ಲಿ ವಿಫಲವಾದಾಗ ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದು ಧರ್ಮದ ವಿರುದ್ಧ ದ್ವೇಷವನ್ನು ಹರಡುವ ಪ್ರಯತ್ನವನ್ನು ನಡೆಸಿದರು. ಆರೋಪಿಯ ಬಂಧನವಾದ ಬಳಿಕವೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬೇಲೂರು, ಹಾಸನದಲ್ಲಿ ನಡೆಸಿದ ಅವಾಂತರಗಳು ಬಿಜೆಪಿ ಮತ್ತು ಸಂಘಪರಿವಾರ ನಾಯಕರು ಎಷ್ಟು ಹತಾಶೆಯಿಂದಿದ್ದಾರೆ ಮತ್ತು ಸಮಾಜಕ್ಕೆ ಬೆಂಕಿ ಹಚ್ಚಿ ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಅದೆಷ್ಟು ಅವಸರದಲ್ಲಿದ್ದಾರೆ ಎನ್ನುವುದು ನಾಡಿನ ಜನತೆಗೆ ಸ್ಪಷ್ಟವಾಯಿತು. ಇದರ ಬೆನ್ನಿಗೇ ಬಾನುಮುಷಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿವಾದವಾಗಿಸಿದರು. ಬಿಜೆಪಿ ಮುಖಂಡ ಯತ್ನಾಳ್ ಅವರು ಬಾನುಮುಪ್ತಾಕ್ ವಿರುದ್ಧ ನೀಡಿದ ಹೇಳಿಕೆ ಅವರಿಗೇ ತಿರುಗುಬಾಣವಾಯಿತು. 'ಸನಾತನಿಗಳಷ್ಟೇ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕು. ದಲಿತ ಮಹಿಳೆಯರಿಗೂ ಆ ಅರ್ಹತೆಯಿಲ್ಲ' ಎನ್ನುವ ಅವರ ಮಾತನ್ನು ಮನುಷ್ಯರೆನಿಸಿಕೊಂಡವರೆಲ್ಲ ಒಕ್ಕೊರಲಲ್ಲಿ ಪ್ರತಿಭಟಿಸಿದರು. ಯತ್ನಾಳ್‌ ವಿರುದ್ಧವೇ ಎಫ್‌ಐಆರ್ ದಾಖಲಾಯಿತು. ಬಾನು ಮುಸ್ತಾಕ್ ಅವರು ದಸರಾವನ್ನು ಉದ್ಘಾಟಿಸಿದ ಬೆನ್ನಿಗೇ ನಾಡು ಅದನ್ನು ಸಂಭ್ರಮದಿಂದ ಸ್ವಾಗತಿಸಿದೆ. ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಹಿನ್ನಡೆಯಾಗುವ ಮೂಲಕ ಕೆಡುಕು ಸೋತು ದಸರಾ ಹಬ್ಬಕ್ಕೆ ಅರ್ಥಪೂರ್ಣ ಚಾಲನೆ ದೊರಕಿತು.

ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದ ಕೆಲವರು ಕೋಮುಉದ್ವಿಗ್ನತೆಯನ್ನು ಸೃಷ್ಟಿಸುವ ದುರುದ್ದೇಶವನ್ನು ಹೊಂದಿದ್ದರು ಎನ್ನುವುದನ್ನು ವೈರಲ್ ಆಗಿರುವ ವೀಡಿಯೊಗಳೇ ಬಹಿರಂಗಪಡಿಸಿವೆ. 'ಗಣಪತಿ ಬಪ್ಪ ಮೋರ್ಯ' ಎಂಬ ಘೋಷಣೆಯ ಬದಲಿಗೆ ಮೆರವಣಿಗೆಯುದ್ದಕ್ಕೂ ಒಂದು ಧರ್ಮದ ವಿರುದ್ಧ ನಿಂದನೀಯ ಘೋಷಣೆಗಳು ಕೇಳಿ ಬರುತ್ತಿದ್ದವು. ಅಂತಹ ಘೋಷಣೆಯ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನು ಮೆರವಣಿಗೆಯಲ್ಲಿದ್ದವರು ಮಾಡುತ್ತಿದ್ದರು. ಆದರೆ ಆ ಪ್ರಚೋದನೆ ವಿಫಲವಾದಾಗ 'ಮಸೀದಿ ಕಡೆಯಿಂದ ಕಲ್ಲುತೂರಾಟ' ನಡೆದಿದೆ ಎಂದು ಗುಲ್ಲೆಬ್ಬಿಸಿ ಮೆರವಣಿಗೆಯಲ್ಲಿದ್ದವರು ಮಸೀದಿ ಕಡೆಗೆ ಕಲ್ಲುತೂರಾಟ ನಡೆಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠರು ಮೊದಲು ಕಲ್ಲು ತೂರಿ ಬಂದಿರುವುದು ಮಸೀದಿ ಕಡೆಯಿಂದಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರಕರಣದ ಹೊಣೆಯನ್ನು ಸ್ಥಳೀಯ ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಸಿದರು. ಮೆರವಣಿಗೆಯಲ್ಲಿ ಒಂದು ಧರ್ಮದ ವಿರುದ್ದ ಅತ್ಯಂತ ಆಶ್ಲೀಲ ಘೋಷಣೆಗಳನ್ನು ಕೂಗಿರುವುದರ ಹಿಂದೆ ಗಲಭೆಗೆ ಪ್ರಚೋದನೆ ನೀಡುವ ಉದ್ದೇಶವಿತ್ತು ಎನ್ನುವುದನ್ನು ಅವರು ಮರೆ ಮಾಚಿದರು. ಆ ಘೋಷಣೆ ಕೂಗಿದ ದುಷ್ಕರ್ಮಿಗಳನ್ನು ಬಂಧಿಸಿ ಸರಿಯಾದ ರೀತಿಯಲ್ಲಿ 'ವಿಚಾರಣೆ' ನಡೆಸಿದ್ದರೆ ಕಲ್ಲುತೂರಾಟ ನಡೆಸಿದವರ ಅಸಲಿ ಮುಖ ಹೊರಗೆ ಬರುತ್ತಿತ್ತು.

ಇದಾದ ಕೆಲವೇ ದಿನಗಳಲ್ಲಿ ಹಾಸನದ ಹೊಳೆ ನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಇನ್ನೊಂದು ಭಾರೀ ದುರಂತ ಸಂಭವಿಸಿತು. ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ವಾಹನವೊಂದು ನಿಯಂತ್ರಣ ತಪ್ಪಿ ಜನರ ಮೇಲೆ ಹರಿಯಿತು. ಸುಮಾರು 10 ಜನರು ಈ ಅವಘಡದಲ್ಲಿ ಮೃತಪಟ್ಟಿದ್ದರು. ವಿಪರ್ಯಾಸವೆಂದರೆ, ದುರಂತಕ್ಕಾಗಿ ಮರುಗಬೇಕಾಗಿದ್ದ ಸಂಘಪರಿವಾರ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಟ್ರಕ್ ಡ್ರೈವರ್‌ನ ಧರ್ಮ ಯಾವುದು ಎನ್ನುವ ಹುಡುಕಾಟದಲ್ಲಿದ್ದರು. ಆತನೇನಾದರೂ ಬೇರೆ ಧರ್ಮಕ್ಕೆ ಸೇರಿದವನಾಗಿದ್ದರೆ ಇಡೀ ಹಾಸನ ಹೊತ್ತಿ ಉರಿಯುವ ಸಾಧ್ಯತೆಯಿತ್ತು. ಆರಂಭದಲ್ಲಿ 'ಟ್ರಕ್ ಡ್ರೈವರ್ ಮುಸ್ಲಿಮ್ ಧರ್ಮಕ್ಕೆ ಸೇರಿದವನು' ಎನ್ನುವ ವದಂತಿಯನ್ನು ದುಷ್ಕರ್ಮಿಗಳು ತೇಲಿ ಬಿಟ್ಟರು. ಇದರ ಹಿಂದೆಯೂ ಹಾಸನಕ್ಕೆ ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ದುರುದ್ದೇಶವಿತ್ತು. ಆದರೆ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡ ಕಾರಣ ಮತ್ತು ಪೊಲೀಸ್ ವರಿಷ್ಠರೇ ಮಾಧ್ಯಮಗಳಿಗೆ ಟ್ರಕ್ ಡ್ರೈವರ್‌ನ ಹೆಸರು ಬಹಿರಂಗಪಡಿಸಿದ್ದುದರಿಂದ ಅನಾಹುತ ತಪ್ಪಿತು.

ಇದರ ಬೆನ್ನಿಗೇ ಹಾಸನದ ಬೇಲೂರಿನಲ್ಲಿ ಗಣೇಶನ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ವಿಕೃತಿಯೊಂದು ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ನಾಯಕರು ಮತ್ತು ಸಂಘಪರಿವಾರ ಮುಖಂಡರು ಬೇಲೂರಿನಲ್ಲಿ ನೆರೆದು ಇದು ಮುಸ್ಲಿಮ್ ಧರ್ಮೀಯರದೇ ಕೆಲಸ ಎಂದು ಬಹಿರಂಗವಾಗಿಯೇ ಅರಚಾಡತೊಡಗಿದರು. ಅಷ್ಟೇ ಅಲ್ಲ, ಮುಸ್ಲಿಮರ ವಿರುದ್ದ ಅತ್ಯಂತ ನಿಂದನೀಯ ಭಾಷೆಯಲ್ಲಿ ಮಾತನಾಡಿ ಉದ್ವಿಗ್ನ ವಾತಾವರಣ ಸೃಷ್ಟಿಸಿದರು. ಆದರೆ ಸಿಸಿ ಟಿ.ವಿ.ಯ ಆಧಾರದಲ್ಲಿ ಪೊಲೀಸರು ಕೊನೆಗೂ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಕೃತ್ಯವನ್ನು ಲೀಲಮ್ಮ ಎಂಬ ಮಹಿಳೆ ಎಸಗಿರುವುದು ಬಹಿರಂಗವಾಯಿತು. ಆಕೆ ಮಾನಸಿಕವಾಗಿ ಅಸ್ವಸ್ಥಳು ಎಂದೂ ಪೊಲೀಸರು ತಿಳಿಸಿದ್ದಾರೆ. ಆದರೆ ನಿಜಕ್ಕೂ ಬೇಲೂರು ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥರಂತೆ ವರ್ತಿಸಿರುವುದು ಅಲ್ಲಿನ ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು. ಆರೋಪಿಯನ್ನು ಬಂಧಿಸಿದ ಬಳಿಕವೂ ಅವರಿಗೆ ಸಮಾಧಾನವಾಗಿರಲಿಲ್ಲ. ಯಾಕೆಂದರೆ ಪೊಲೀಸರು ಈ ನಾಯಕರಿಗೆ ಬೇಕಾದ ಆರೋಪಿಯನ್ನು ಬಂಧಿಸಿರಲಿಲ್ಲ. ತನಿಖೆಗೆ ಮೊದಲೇ ಇವರು ಆರೋಪಿಗಳನ್ನು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂದು ಘೋಷಿಸಿದ್ದರು. ಆರೋಪಿಯ ಬಂಧನವಾದ ಬಳಿಕವೂ ಬೀದಿ ಪ್ರತಿಭಟನೆ ನಡೆಸಿ 'ಇದರ ಹಿಂದೆ ಇರುವ ಸಂಚುಕೋರರನ್ನು ಬಂಧಿಸಿ' ಎಂದು ಸರಕಾರವನ್ನು ಒತ್ತಾಯಿಸಿದ್ದರು. ಮದ್ದೂರು, ಹೊಳೆ ನರಸೀಪುರ ಪ್ರಕರಣವನ್ನು ಗಮನಿಸಿದರೆ, ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದರ ಹಿಂದೆ ಯಾರಾದರೂ ಇದ್ದರೆ ಅದು ಸಮಾಜದ ಶಾಂತಿ ಕೆಡಿಸಲು ತುದಿಗಾಲಲ್ಲಿ ನಿಂತಿರುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ, ಮಹಿಳೆಯ ಕೈಯಲ್ಲಿ ಈ ಕೃತ್ಯವನ್ನು ಮಾಡಿಸಿದ ದುಷ್ಕರ್ಮಿ ಯಾರು ಎನ್ನುವುದರ ತನಿಖೆಯನ್ನು ಸರಕಾರ ನಡೆಸಬಹುದಾಗಿದೆ.

ಈ ಹಿಂದೆ ಸಿಂಧಗಿಯಲ್ಲಿ ತಹಶೀಲ್ದಾರ ಕಚೇರಿಯ ಮುಂದೆ ಪಾಕಿಸ್ತಾನ ಧ್ವಜ ಹಾರಿಸಿ ಸಮಾಜದ ಶಾಂತಿ ಕೆಡಿಸಲು ಯತ್ನಿಸಿದ ಆರೋಪ ಶ್ರೀರಾಮಸೇನೆಯ ಮು ಖಂಡರ ಮೇಲಿದೆ. ಕೋಮುಗಲಭೆಯನ್ನು ಸೃಷ್ಟಿಸಲು ಪಾಕಿಸ್ತಾನ ಧ್ವಜ ಹಾರಿಸುವ, ತನ್ನದೇ ತಾಯೇಲಕ್ಕೆ ದ್ರೋಹ ಎಸಗುವ ಈ ಜನರು ಹಾಸನದಲ್ಲಿ ಶಾಂತಿ ಕದಡಲು ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿಸಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಚಪ್ಪಲಿ ಹಾರ ಹಾಕಿದ ಬೆನ್ನಿಗೇ ತನಿಖೆಯ ದಾರಿ ತಪ್ಪಿಸಲು ಅವರು ನಡೆಸಿದ ಪ್ರಯತ್ನ, ಮಾಡಿದ ದ್ವೇಷ ಭಾಷಣಗಳೇ ಬೇಲೂರಿನಲ್ಲಿ ಚಪ್ಪಲಿ ಹಾರದ ಹಿಂದಿರುವ ದುಷ್ಕರ್ಮಿಗಳು ಯಾರು ಎನ್ನುವುದನ್ನು ಹೇಳುತ್ತದೆ. ಈ ನಿಟ್ಟಿನಲ್ಲಿ, ಚಪ್ಪಲಿ ಹಾರ ಪ್ರಕರಣ ಮುಂದಿಟ್ಟು ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟಲು ಗರಿಷ್ಠ ಶ್ರಮಿಸಿದ ನಾಯಕರ ವಿರುದ್ದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕಾಗಿದೆ. ನಿಜವಾದ ಮಾನಸಿಕ ಅಸ್ವಸ್ಥರು ಯಾರು ಎನ್ನುವುದು ಈ ಮೂಲಕ ನಾಡಿಗೆ ಗೊತ್ತಾಗಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X