Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಉತ್ತರದ ಕತ್ತೆಯನ್ನು ಕುದುರೆ ಮಾಡುವ...

ಉತ್ತರದ ಕತ್ತೆಯನ್ನು ಕುದುರೆ ಮಾಡುವ ಬಿಜೆಪಿ ನಾಯಕರ ವ್ಯರ್ಥ ಪ್ರಯತ್ನ

ವಾರ್ತಾಭಾರತಿವಾರ್ತಾಭಾರತಿ2 April 2026 6:20 AM IST
share
ಉತ್ತರದ ಕತ್ತೆಯನ್ನು ಕುದುರೆ ಮಾಡುವ ಬಿಜೆಪಿ ನಾಯಕರ ವ್ಯರ್ಥ ಪ್ರಯತ್ನ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ತೃತೀಯ ಭಾಷೆಗಳ ಒತ್ತಡಗಳಿಂದ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಪಾರು ಮಾಡುವ ಸರಕಾರದ ನಿರ್ಧಾರವನ್ನು ಎಲ್ಲ ಪೋಷಕರು, ಕನ್ನಡ ಪರ ಸಂಘಟನೆಗಳು ಸ್ವಾಗತಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಮತ್ತು ಅದರ ಸೋದರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಳವಳಕಾರಿಯಾಗಿದೆ. ಹಿಂದಿ ಭಾಷೆಯಲ್ಲಿ ನಾಲ್ಕು ಸಾಲು ಸ್ಪಷ್ಟವಾಗಿ ಮಾತನಾಡಲು ತಿಣುಕಾಡುವ ನಾಯಕರೂ ತಮ್ಮನ್ನು ಬೆಳೆಸಿದ ಕನ್ನಡವನ್ನು ಬದಿಗಿಟ್ಟು ‘ಹಿಂದಿ ಹಿಂದಿ’ ಎಂದು ಹಿಂದೀವಾಲಾಗಳಿಗೆ ಕೊಡೆ ಹಿಡಿಯಲು ಹೊರಟಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಅಂಕಗಳನ್ನು ಪರಿಗಣಿಸದಿರಲು ನಿರ್ಧರಿಸುವುದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು, ತಮ್ಮ ಆಳ್ವಿಕೆಯ ಕಾಲದಲ್ಲಿ ಮಾಡಿದ ಹಸ್ತಕ್ಷೇಪ ಕಲಿಕೆಯ ಗುಣಮಟ್ಟವನ್ನು ಹೇಗೆ ಹಾಳುಗೆಡವಿತ್ತು ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಆಯಾ ರಾಜ್ಯಗಳ ಮಾತೃ ಭಾಷೆಗಳ ಮೂಲಕ ಅಥವಾ ಇಂಗ್ಲಿಷ್ ಮೂಲಕವೇ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾ ಬರುತ್ತಿದ್ದಾರೆ ಮತ್ತು ಆ ಮೂಲಕವೇ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಾ ಬರಲಾಗುತ್ತಿದೆ. ಹಿಂದಿಯನ್ನು ಕೆಲವು ರಾಜ್ಯಗಳು ಒಂದು ಪಠ್ಯವಾಗಿ ಕಲಿಸುತ್ತಿವೆಯೇ ಹೊರತು, ಅದರಾಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿಗೆ ಯಾವ ಮಹತ್ವವೂ ಇಲ್ಲ. ಹೀಗಿರುವಾಗ ತೃತೀಯ ಭಾಷೆಯನ್ನು ಅಂಕದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ನಿರ್ಧರಿಸಿದರೆ ಅದು ಶಿಕ್ಷಣದ ಮೇಲೆ ಹೇಗೆ ದುಷ್ಪರಿಣಾಮವನ್ನು ಬೀರುತ್ತದೆ? ಈ ಬಗ್ಗೆ ಬಿಜೆಪಿ ನಾಯಕರಲ್ಲಿ ವಿವರಣೆಗಳಿಲ್ಲ. ಹಿಂದಿಯ ಪರವಾಗಿ ಮಾತನಾಡುವ ಮೂಲಕ ಬಿಜೆಪಿ ನಾಯಕರು ದಿಲ್ಲಿಯ ವರಿಷ್ಠರನ್ನು ಸಂತೃಪ್ತಿ ಪಡಿಸುವ ಪ್ರಯತ್ನದಲ್ಲಿದ್ದಾರೆ ಎನ್ನುವುದು ಸ್ಪಷ್ಟ.

ಯಾವುದೇ ಸಾರ್ವಜನಿಕ ಚರ್ಚೆಗಳನ್ನು ನಡೆಸದೇ ತೃತೀಯ ಭಾಷೆಯನ್ನು ಹಿಂದೆಗೆಯಲಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ. ಈಗಾಗಲೇ ಪರೀಕ್ಷೆಗಾಗಿ ಹಿಂದಿಯನ್ನು ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರಬಹುದು ಎಂದು ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿಯನ್ನು ಪ್ರತ್ಯೇಕವಾಗಿ ಪಠ್ಯವಾಗಿ ಕಲಿಸಲಾಗುತ್ತದೆಯೇ ಹೊರತು, ಹಿಂದಿ ಮಾಧ್ಯಮದ ಮೂಲಕ ಯಾರೂ ಕಲಿಯುತ್ತಿಲ್ಲ. ಆದುದರಿಂದ ಪರೀಕ್ಷೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಒಂದು ಪಠ್ಯದ ಪರೀಕ್ಷೆಯ ಒತ್ತಡ ಕಡಿಮೆಯಾಗುವುದರಿಂದ ಸಹಜವಾಗಿಯೇ ಇತರ ಪರೀಕ್ಷೆಗಳಿಗೆ ವ್ಯಯ ಮಾಡಲು ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಿದಂತಾಗುತ್ತದೆ. ಇಷ್ಟಕ್ಕೂ ತೃತೀಯ ಭಾಷೆಗಳ ಹೊರೆ ಕಡಿಮೆ ಮಾಡಿರುವುದರಿಂದ ಪರೀಕ್ಷೆಯ ಒತ್ತಡ ಹೆಚ್ಚಿದೆ ಎಂದು ಯಾವುದೇ ವಿದ್ಯಾರ್ಥಿಗಳು ಬಿಜೆಪಿ ನಾಯಕರ ಮುಂದೆ ಅಳಲು ತೋಡಿಕೊಂಡಿದ್ದಾರೆಯೆ? ಯಾವುದೇ ಪೋಷಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಯೆ? ಈ ಬಿಜೆಪಿ ನಾಯಕರಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ತಮ್ಮ ರಾಜಕೀಯ ಭವಿಷ್ಯ ಮುಖ್ಯವಾಗಿದೆ. ವಿದ್ಯಾರ್ಥಿಗಳ ಮೇಲೆ ಕಾಳಜಿಯನ್ನು ನಟಿಸುತ್ತಿರುವ ಇವರು, ತಮ್ಮ ದಿಲ್ಲಿ ನಾಯಕರನ್ನು ಓಲೈಸುವ ಕಾರಣಕ್ಕಾಗಿ ಹಿಂದಿ ಹಿಂದಿ ಎಂದು ಬಡಬಡಿಸುತ್ತಿದ್ದಾರೆ. ನಿಜಕ್ಕೂ ಈ ಬಿಜೆಪಿ ನಾಯಕರಿಗೆ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕಾಳಜಿಯಿದ್ದಿದ್ದರೆ, ತಮ್ಮ ಅಧಿಕಾರಾವಧಿಯಲ್ಲಿ ಹಿಜಾಬ್ ಹೆಸರಿನಲ್ಲಿ ನೂರಾರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣ ವಂಚಿತರನ್ನಾಗಿಸುತ್ತಿದ್ದರೆ? ಹಿಜಾಬ್‌ನ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶ ಮಾಡದಂತೆ ತಡೆದ, ಅವರು ಪರೀಕ್ಷೆ ಯೇ ಬರೆಯದಂತೆ ಅಡ್ಡಿ ಮಾಡಿದ ಇದೇ ನಾಯಕರು ಈಗ ವಿದ್ಯಾರ್ಥಿಗಳ ಶಿಕ್ಷಣ, ಭವಿಷ್ಯದ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ತಮಾಷೆಯಾಗಿದೆ.

ಹಿಂದಿಯ ಜೊತೆಗೆ ಅತಿ ಹತ್ತಿರದ ಸಂಬಂಧವಿರುವ ಮಹಾರಾಷ್ಟ್ರವೇ ದ್ವಿಭಾಷಾ ನೀತಿಯನ್ನು ಎತ್ತಿ ಹಿಡಿದಿದೆ. ಹಿಂದಿಯನ್ನು ಕೈ ಬಿಟ್ಟು ಮರಾಠಿ ಭಾಷೆಗೆ ಆದ್ಯತೆ ನೀಡಿದೆ. ಈ ನಿರ್ಧಾರವನ್ನು ಮಾಡಿರುವುದು ಸ್ವತಃ ಬಿಜೆಪಿ ಸರಕಾರವಾಗಿದೆ. ಮಹಾರಾಷ್ಟ್ರದ ಬಿಜೆಪಿ ನಾಯಕರು ಕರ್ನಾಟಕದ ಬಿಜೆಪಿ ನಾಯಕರಿಗಿಂತ ದಿಲ್ಲಿ ಬಿಜೆಪಿ ವರಿಷ್ಠರಿಗೆ ಹೆಚ್ಚು ಸನಿಹದಲ್ಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಮಾತೃ ಭಾಷಿಗರು ಇಲ್ಲವೇ ಇಲ್ಲ ಎನ್ನುವಷ್ಟು ಸಣ್ಣ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕಕ್ಕೆ ಉದ್ಯೋಗ ಅರಸಿಕೊಂಡು ಬಂದ ಹಿಂದಿ ಭಾಷಿಗರನ್ನು ಹೊರತು ಪಡಿಸಿದರೆ, ಇಲ್ಲಿ ಯಾರಿಗೂ ಹಿಂದಿಯ ಬಗ್ಗೆ ಆಸಕ್ತಿಯಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ದೊಡ್ಡದಿದೆ. ಇಷ್ಟಾದರೂ ಅಲ್ಲಿನ ಸರಕಾರ ಹಿಂದಿಯನ್ನು ಶೈಕ್ಷಣಿಕ ಕಲಿಕೆಯಿಂದ ಹೊರಗಿಡುವ ಮಹತ್ವದ ನಿರ್ಧಾರವನ್ನು ಮಾಡಿತು. ಕನಿಷ್ಠ ಮಹಾರಾಷ್ಟ್ರದ ಬಿಜೆಪಿ ನಾಯಕರಿಗಿರುವ ಶೈಕ್ಷಣಿಕ ಪ್ರಜ್ಞೆಯೂ ಕರ್ನಾಟಕದ ಬಿಜೆಪಿ ನಾಯಕರಿಗೆ ಇಲ್ಲದೇ ಇರುವುದು ಬೇಸರದ ಸಂಗತಿಯಾಗಿದೆ. ಇದೇ ಸಂದರ್ಭದಲ್ಲಿ ಉತ್ತರ ಭಾರತೀಯರಿಗೆ ಹಿಂದಿ ಅನ್ನ ನೀಡುವ ಭಾಷೆಯಾಗಿದೆ. ಹಿಂದಿಯ ಜೊತೆಗೆ ಅವರು ಇಂಗ್ಲಿ ಷನ್ನು ಕಲಿಯುತ್ತಿದ್ದಾರೆ. ಅದಕ್ಕೆ ಯಾರ ವಿರೋಧವೂ ಇಲ್ಲ. ಹಾಗೆಯೇ ಕನ್ನಡಿಗರ ಪಾಲಿಗೆ ಕನ್ನಡ ಮತ್ತು ಇಂಗ್ಲಿಷ್ ಅನ್ನದ ಭಾಷೆಯಾಗಿವೆ. ನಾವಿಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೂಲಕ ಶಿಕ್ಷಣವನ್ನು ಕಲಿಯುವುದು ಅನಿವಾರ್ಯವಾಗಿದೆ. ಹೇಗೆ ಉತ್ತರ ಭಾರತೀಯರು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡವನ್ನು ಕಲಿಯುವುದಿಲ್ಲವೋ ಹಾಗೆಯೇ ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಕಲಿಸುವ ಅಗತ್ಯವೂ ಇಲ್ಲ. ಹಾಗೆಂದು ಹಿಂದಿಯನ್ನು ಶಿಕ್ಷಣದಿಂದ ಸಂಪೂರ್ಣ ಹೊರಗಿಟ್ಟಿಲ್ಲ. ಆಸಕ್ತಿಯುಳ್ಳವರು ಕಲಿಯುವುದಕ್ಕೆ ಯಾವ ಅಡ್ಡಿಯೂ ಇಲ್ಲ ಎಂದು ಸರಕಾರ ಈಗಾಗಲೇ ಹೇಳಿದೆ.

ತೃತೀಯ ಭಾಷೆಯನ್ನು ಸಮರ್ಥಿಸುವುದಕ್ಕಾಗಿ ಬಿಜೆಪಿಯ ನಾಯಕರು ‘ಭಾಷಾ ಸೌಹಾರ್ದ’ವನ್ನು ಮುಂದೆ ತಂದಿದ್ದಾರೆ. ‘ತೃತೀಯ ಭಾಷೆಯನ್ನು ಕಲಿಸುವುದರ ಹಿಂದೆ ಬಹುಭಾಷಾ ಸೌಹಾರ್ದದ ಉದ್ದೇಶವಿದೆ. ಈ ಮೂಲಕ ಭಾಷಾ ಬಾಂಧವ್ಯ ಬೆಸೆಯುತ್ತದೆ’ ಎಂದು ಭಾಷಣ ಬಿಗಿಯುತ್ತಿದ್ದಾರೆ. ನಿಜಕ್ಕೂ ಭಾಷಾ ಸೌಹಾರ್ದದ ಬಗ್ಗೆ ಇವರು ಕಾಳಜಿಯನ್ನು ಹೊಂದಿದ್ದಾರೆ ಎಂದಾದರೆ ಉತ್ತರ ಭಾರತೀಯರು ತೃತೀಯ ಭಾಷೆಯಾಗಿ ಕನ್ನಡವನ್ನು ಆಯ್ದುಕೊಳ್ಳಲು ಒತ್ತಾಯಿಸಬೇಕಾಗಿತ್ತು. ಆದರೆ ಆ ಬಗ್ಗೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಇಷ್ಟಕ್ಕೂ ಧರ್ಮದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ವಿಭಜನೆಯನ್ನು ಸೃಷ್ಟಿಸುವುದರಲ್ಲಿ ಕುಖ್ಯಾತರಾಗಿರುವ ಬಿಜೆಪಿ ನಾಯಕರೇ ಇದೀಗ ಹಿಂದಿ ಭಾಷೆಯನ್ನು ಸಮರ್ಥಿಸುವುದಕ್ಕಾಗಿ ‘ಸೌಹಾರ್ದ’ದ ಮೊರೆ ಹೋಗಿರುವುದು ವಿಪರ್ಯಾಸವಾಗಿದೆ. ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಮುಖ್ಯವಲ್ಲ, ಯಾವ ಭಾಷೆಯಲ್ಲಿ ಏನನ್ನು ಮಾತನಾಡುತ್ತೇವೆ ಎನ್ನುವುದು ಮುಖ್ಯ. ಉತ್ತರ ಭಾರತದ ಸಂಘಪರಿವಾರ ನಾಯಕರು ಹಿಂದಿ ಭಾಷೆಯಲ್ಲಿ ಉದ್ವಿಗ್ನಕಾರಿ, ವಿಷಕಾರಿ ಭಾಷಣಗಳನ್ನು ಮಾಡುತ್ತಾ ಸೌಹಾರ್ದ ಬದುಕಿಗೆ ದಕ್ಕೆ ತರುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಆ ವಿಷಕಾರಿ ಭಾಷಣಗಳನ್ನು ಕರ್ನಾಟಕದಲ್ಲೂ ಹರಡುವ ಏಕೈಕ ಉದ್ದೇಶಕ್ಕಾಗಿ ಇಲ್ಲಿಯ ಮಕ್ಕಳ ಮೇಲೆ ಹಿಂದಿಯನ್ನು ಹೇರುವ ಅಗತ್ಯವಿದೆಯೆ? ಇಂದು ಕನ್ನಡದ ಸೌಹಾರ್ದ ಸಂಸ್ಕೃತಿಯನ್ನು ದೇಶದೆಲ್ಲೆಡೆ ಹರಡುವ ಕೆಲಸ ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಉತ್ತರ ಭಾರತೀಯರಿಗೆ ತಲುಪಿಸುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಹೆಗಲು ಕೊಡಬೇಕು. ‘ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು, ದಕ್ಷಿಣದ ದೇಶಕದು ಕುದುರೆಯಹುದೆ?’ ಎಂದು ಕುವೆಂಪು ದಶಕಗಳ ಹಿಂದೆಯೇ ಕೇಳಿದ್ದರು. ಉತ್ತರದ ಕತ್ತೆಯನ್ನು ಕರ್ನಾಟಕದಲ್ಲಿ ಕುದುರೆ ಮಾಡುವ ತಮ್ಮ ಪ್ರಯತ್ನವನ್ನು ಬಿಜೆಪಿಯ ನಾಯಕರು ಇನ್ನಾದರೂ ನಿಲ್ಲಿಸಬೇಕಾಗಿದೆ.

Tags

BJP leadersHindi
share
ವಾರ್ತಾಭಾರತಿ
ವಾರ್ತಾಭಾರತಿ
Next Story
X