Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ದೇಶವನ್ನು ಒಗ್ಗೂಡಿಸಲಿರುವ ಜಾತಿ ಗಣತಿ

ದೇಶವನ್ನು ಒಗ್ಗೂಡಿಸಲಿರುವ ಜಾತಿ ಗಣತಿ

ವಾರ್ತಾಭಾರತಿವಾರ್ತಾಭಾರತಿ4 Oct 2023 9:13 AM IST
share
ದೇಶವನ್ನು ಒಗ್ಗೂಡಿಸಲಿರುವ ಜಾತಿ ಗಣತಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಹಿಂದುಳಿದ ವರ್ಗಗಳೊಳಗೆ ಒಳಮೀಸಲಾತಿ ಚರ್ಚೆ ಮಹತ್ವ ಪಡೆದಿರುವ ಹೊತ್ತಿನಲ್ಲೇ ಬಿಹಾರ ಸರಕಾರವು ಸೋಮವಾರ ಜಾತಿ ಜನಗಣತಿಯ ವರದಿಯನ್ನು ಪ್ರಕಟಿಸಿದೆ. ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದು ಮಾತ್ರವಲ್ಲ, ಹಿಂದುಳಿದ ರಾಜ್ಯವಾಗಿಯೂ ಗುರುತಿಸಿಕೊಂಡಿರುವ ಬಿಹಾರದ ಜಾತಿ ಗಣತಿ ಈ ದೇಶದ ಹತ್ತು ಹಲವು ವಾಸ್ತವಗಳನ್ನು ಜಗತ್ತಿನ ಮುಂದಿಟ್ಟಿದೆ. ಹಿಂದುಳಿದ ವರ್ಗಗಳ ಪ್ರಮಾಣ ಶೇ. 63ಕ್ಕಿಂತಲೂ ಅಧಿಕವಿದೆ. ಇದರಲ್ಲಿ 36.01 ಶೇ.ದಷ್ಟು ಜನರು ಅತ್ಯಂತ ಹಿಂದುಳಿದ ವರ್ಗದ ಜನರಿದ್ದಾರೆ. ಪರಿಶಿಷ್ಟ ಜಾತಿಗಳ ಪ್ರಮಾಣ 19.65ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ಪಾಲು 1.68 ಶೇ. ದಷ್ಟಿದೆ. ಜನಸಂಖ್ಯೆಯಲ್ಲಿ ಯಾದವ ಸಮುದಾಯದ ಪ್ರಮಾಣ 14. 26 ಶೇ. ದಷ್ಟಿದೆ. ಮುಸ್ಲಿಮರ ಸಂಖ್ಯೆ ಶೇ. 17.70 ಎನ್ನುವುದು ವರದಿಯಿಂದ ಬಹಿರಂಗವಾಗಿದೆ. ಆಯಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನೂ ಈ ಸಮೀಕ್ಷೆ ಬಹಿರಂಗಪಡಿಸಿದೆ. ಅಭಿವೃದ್ಧಿಯ ಸಮಾನ ಹಂಚಿಕೆಗೆ ಈ ಸಮೀಕ್ಷೆ ತನ್ನ ಕೊಡುಗೆಯನ್ನು ನೀಡಲಿದೆ. ಅತಿ ಕಡಿಮೆ ಜನಸಂಖ್ಯೆಯಿರುವ ರಜಪೂತ, ಭೂಮಿಹಾರ್ ಮೊದಲಾದ ಸಮುದಾಯಗಳು ಮೀಸಲಾತಿಯ ಅತಿ ಹೆಚ್ಚು ಲಾಭಗಳನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಇದೀಗ ಜಾತಿ ಗಣತಿಯ ಆಧಾರದಲ್ಲಿ ಮೀಸಲಾತಿಯ ವೈಜ್ಞಾನಿಕವಾದ ಹಂಚಿಕೆ ಸುಲಭವಾಗಲಿದೆ.

ಮೀಸಲಾತಿಯ ಪರಿಣಾಮಕಾರಿ ವಿಸ್ತರಣೆಗೆ ಜಾತಿ ಜನಗಣತಿಯಾಗದೇ ಇರುವುದು ಅತಿ ದೊಡ್ಡ ಕೊರತೆಯಾಗಿತ್ತು. 1931ರಲ್ಲಿ ಬ್ರಿಟಿಷರು ನಡೆಸಿದ ಜಾತಿ ಜನಗಣತಿಯ ಬಳಿಕ ಯಾವುದೇ ಆ ರೀತಿಯ ಗಣತಿ ನಡೆದಿಲ್ಲ. ಇಂದಿಗೂ ಮೀಸಲಾತಿ ಹಂಚಿಕೆಗೆ ಆ ಗಣತಿಯನ್ನೇ ಸರಾಸರಿ ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ನಿಖರವಾದ ಜಾತಿ ಗಣತಿಯ ಅಗತ್ಯವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಮೀಸಲಾತಿ ತನ್ನ ಉದ್ದೇಶವನ್ನು ಸಾಧಿಸದೇ ಇರುವುದಕ್ಕೆ ವಿವಿಧ ಜಾತಿಗಳ ಸಾಮಾಜಿಕ, ಆರ್ಥಿಕ ಏಳು ಬೀಳುಗಳ ಬಗ್ಗೆ ಸರಿಯಾದ ಅಂಕಿಅಂಶಗಳಿಲ್ಲದೇ ಇರುವುದು ಮುಖ್ಯ ಕಾರಣವಾಗಿದೆ. ಹಿಂದುಳಿದ ವರ್ಗದಲ್ಲಿ ಬಲಾಢ್ಯ ಸಮುದಾಯಗಳೇ ಮೀಸಲಾತಿಯ ಲಾಭವನ್ನು ತನ್ನದಾಗಿಸಿಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಾತಿ ಗಣತಿಯನ್ನು ಬಳಸಿಕೊಳ್ಳಬಹುದಾಗಿದೆ. ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿದ ಕಾರಣಕ್ಕಾಗಿ ಪ್ರಧಾನಿ ಮೋದಿಯವರು ಬಿಹಾರ ಮುಖ್ಯಮಂತ್ರಿಯನ್ನು ಅಭಿನಂದಿಸಬೇಕಾಗಿತ್ತು. ‘‘ಹಿಂದುಳಿದ ವರ್ಗದ ಸಮುದಾಯದಿಂದ ಬಂದವನು ನಾನು’’ ಎಂದು ಇತ್ತೀಚೆಗೆ ಒಂದು ವೇದಿಕೆಯಲ್ಲಿ ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಹಿಂದುಳಿದ ವರ್ಗದ ಸ್ಥಿತಿಗತಿಗಳನ್ನು ಬಹಿರಂಗ ಪಡಿಸುವ ಜಾತಿಗಣತಿಯ ಬಗ್ಗೆ ಅತಿ ಹೆಚ್ಚು ಸಂತೋಷ ಪಡಬೇಕಾದವರು ಪ್ರಧಾನಿ ಮೋದಿ. ಆದರೆ ಬಿಹಾರದ ಜಾತಿ ಗಣತಿಯನ್ನು ‘‘ಜಾತಿಯ ಹೆಸರಿನಲ್ಲಿ ದೇಶ ವಿಭಜನೆಗೆ ಯತ್ನ’’ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಮೊಗಲರು, ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲೇ ಈ ದೇಶ ಜಾತಿ ಆಧಾರದಲ್ಲಿ ವಿಭಜನೆಗೊಂಡಿತ್ತು. ತಮ್ಮದೇ ಊರಿನ ಕೆರೆಯ ನೀರನ್ನು ದಲಿತರು ಮುಟ್ಟುವ ಸ್ಥಿತಿ ಇರಲಿಲ್ಲ. ಮುಖ್ಯ ರಸ್ತೆಯಲ್ಲಿ ಓಡಾಡುವ ಅವಕಾಶವಿರಲಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸುವುದಂತೂ ದೂರದ ಮಾತು. ದೇಶ ಸಾವಿರಾರು ಜಾತಿಗಳಾಗಿ ಒಡೆದು ಹೋಗಿರುವುದರಿಂದಲೇ ಇದನ್ನು ಕೈವಶ ಮಾಡಿಕೊಳ್ಳುವುದು ವಿದೇಶಿಯರಿಗೆ ಸುಲಭವಾಯಿತು. ಈ ನೆಲದ ಜನರಿಂದಲೇ ಶೋಷಣೆಗೊಳಗಾಗುತ್ತಿದ್ದ ಕೆಳ ಸಮುದಾಯ ಸಹಜವಾಗಿಯೇ ಇಲ್ಲಿನ ಆಳುವ ವರ್ಗವನ್ನು ವಿರೋಧಿಸಿ ವಿದೇಶಿಯರ ಜೊತೆಗೆ ನಿಂತಿತು. ಇದಕ್ಕೆ ಅತ್ಯುತ್ತಮ ಉದಾಹರಣೆ ಕೋರೆಗಾಂವ್ ಯುದ್ಧ.ಬ್ರಿಟಿಷರು ಮರಾಠರ ವಿರುದ್ಧ ಯುದ್ಧ ಮಾಡುವ ಸಂದರ್ಭದಲ್ಲಿ ಜಾತಿ ಕಾರಣದಿಂದ ಮಹಾರ್ ದಲಿತರನ್ನು ಸೇನೆಯಿಂದ ಹೊರಗಿಡಲಾಗಿತ್ತು. ಇದರಿಂದ ಸಿಟ್ಟುಕೊಂಡ 500 ಮಂದಿ ದಲಿತರು ಬ್ರಿಟಿಷರ ಸೇನೆ ಸೇರಿಕೊಂಡರು. ಮರಾಠರ 20,000ಕ್ಕೂ ಅಧಿಕ ಸೈನಿಕರಿರುವ ಸೇನೆ 500 ಮಂದಿ ದಲಿತ ಯೋಧರ ಮುಂದೆ ಸೋಲನ್ನೊಪ್ಪಿಕೊಂಡಿತು. ಇದರ ಸ್ಮರಣಾರ್ಥ ‘ಕೋರೆಗಾಂವ್ ವಿಜಯಸ್ತಂಭ’ ಸ್ಥಾಪಿಸಲಾಯಿತು. ಅಂಬೇಡ್ಕರ್ ಈ ವಿಜಯೋತ್ಸವ ಆಚರಣೆಯ ಪರಂಪರೆಯನ್ನು ಆರಂಭಿಸಿದರು.

ಯಾರು ಜಾತಿ ವ್ಯವಸ್ಥೆಯನ್ನು ಆರಂಭಿಸಿದ್ದರೋ ಅವರೇ ಈ ದೇಶವನ್ನು ಒಡೆದವರು. ಯಾರು ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆಯೋ ಅವರು ದೇಶವನ್ನು ಜಾತಿಯ ಹೆಸರಿನಲ್ಲಿ ವಿಭಜಿಸಿದವರು. ಈ ದೇಶದ ಬಹುಸಂಖ್ಯಾತರು ಶಿಕ್ಷಣವನ್ನು ಪಡೆಯದೇ ಇರಲು, ರಾಜಕೀಯ ಸ್ಥಾನಮಾನ ಪಡೆಯದೇ ಇರಲು ಜಾತಿವ್ಯವಸ್ಥೆ ಕಾರಣ. ಅವರಿಗೆ ಶಿಕ್ಷಣ, ರಾಜಕೀಯ, ಸಾಮಾಜಿಕ ಸ್ಥಾನಮಾನಗಳನ್ನು ಕೊಟ್ಟಿರುವುದು ಸಂವಿಧಾನ. ಮೀಸಲಾತಿಯನ್ನು ಜಾರಿಗೊಳಿಸದೇ ಇದ್ದಿದ್ದರೆ ಇಂದು ದಲಿತರು, ಹಿಂದುಳಿದವರ್ಗದ ಜನರು ಶಿಕ್ಷಿತರಾಗಿ ರಾಜಕೀಯ, ಆರ್ಥಿಕ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಿರಲಿಲ್ಲ. ಅಷ್ಟೇ ಯಾಕೆ, ಇಂದು ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಕನಸಿನಲ್ಲೂ ಊಹಿಸಲು ಸಾಧ್ಯವಿರುತ್ತಿರಲಿಲ್ಲ. ಶೋಷಿತ ಸಮುದಾಯಗಳನ್ನು ಗುರುತಿಸಿ ಅವರನ್ನು ಬಲಾಢ್ಯಗೊಳಿಸಲು ಕಾರ್ಯಕ್ರಮ ರೂಪಿಸಿದ ಪರಿಣಾಮವಾಗಿ ಜಾತಿಯ ಹೆಸರಲ್ಲಿ ಒಡೆದು ಹೋಗಿದ್ದ ಸಮಾಜ ಒಂದಾಗಿದೆ. ‘ಗಾಯಗಳನ್ನು ಗುರುತಿಸದೇ ಅದಕ್ಕೆ ಔಷಧಿಗಳನ್ನು ಹಚ್ಚುವುದಕ್ಕೆ ಸಾಧ್ಯವೆ?’ ಗಾಯಗಳನ್ನು ಗುರುತಿಸಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಅವುಗಳಿಗೆ ಔಷಧಿಯನ್ನು ಹಚ್ಚುವ ಬಗೆಯಾದರೂ ಹೇಗೆ? ಜಾತಿಗಳನ್ನು, ಅವುಗಳ ಸ್ಥಿತಿಗತಿಗಳನ್ನು ಗುರುತಿಸುವುದೆಂದರೆ ಈ ದೇಶದ ಗಾಯಗಳನ್ನು ಗುರುತಿಸುವುದೆಂದು ಅರ್ಥ. ಇದೀಗ ಬಿಹಾರ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದೆ. ಬಿಹಾರದೊಳಗಿರುವ ಜಾತಿ ಗಾಯಗಳನ್ನು ಅದು ಗುರುತಿಸಿದೆ. ಇದೀಗ ರಾಜ್ಯ ಮತ್ತು ಕೇಂದ್ರ ಸರಕಾರ ಜೊತೆಗೂಡಿ ಆ ಗಾಯಗಳಿಗೆ ಔಷಧಿ ಹಚ್ಚುವ ಕೆಲಸವನ್ನು ಮಾಡಬೇಕು. ಗಾಯಗಳು ಒಣಗಿದಾಗ ಮಾತ್ರ ಈ ದೇಶ ಅಖಂಡ ದೇಶವಾಗುತ್ತದೆ. ಸುಭದ್ರ ದೇಶವಾಗುತ್ತದೆ. ದೇಶ ಒಂದಾಗುವ ಇಷ್ಟವಿಲ್ಲದವರಷ್ಟೇ ಜಾತಿಗಣತಿಯನ್ನು ವಿರೋಧಿಸಲು ಸಾಧ್ಯ.

ಮುಖ್ಯವಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತಿಗಣತಿಯನ್ನು ಆರಂಭಿಸುವ ಯೋಜನೆಯನ್ನು ಮಾದರಿ ರೂಪದಲ್ಲಿ ಮೊದಲು ಹಮ್ಮಿಕೊಂಡದ್ದು ಕರ್ನಾಟಕ. ಇಲ್ಲಿ ಅದನ್ನು ಸಾಮಾಜಿಕ, ಆರ್ಥಿಕ ಸಮೀಕ್ಷೆಯೆಂದು ಕರೆಯಲಾಗಿದೆ. ಈ ಸಮೀಕ್ಷೆ ನಡೆದು ವರದಿ ಸಲ್ಲಿಕೆಯಾಗಿದ್ದರೂ ಇನ್ನೂ ವರದಿಯನ್ನು ಬಿಡುಗಡೆ ಮಾಡುವ ಕೆಲಸ ನಡೆದಿಲ್ಲ. ಒಂದು ವೇಳೆ ನಡೆದಿದ್ದರೆ, ಬಿಹಾರಕ್ಕಿಂತ ಮೊದಲೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತಿತ್ತು. ಜಾತಿ ಗಣತಿಯನ್ನು ಆರಂಭಿಸಿದ್ದು ಕಾಂಗ್ರೆಸ್ ನೇತೃತ್ವದ ಸರಕಾರ. ಇದೀಗ ಅದೇ ಸರಕಾರ ಮತ್ತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಈ ಸಮೀಕ್ಷಾ ವರದಿಯನ್ನು ಸ್ವೀಕರಿಸಲು ಸರಕಾರಕ್ಕೆ ಯಾವ ಅಡ್ಡಿಯೂ ಇಲ್ಲ. ಈ ನಿಟ್ಟಿನಲ್ಲಿ ಬಿಹಾರ ರಾಜ್ಯದ ಕ್ರಮ ಕರ್ನಾಟಕಕ್ಕೆ ಸ್ಫೂರ್ತಿಯಾಗಬೇಕು. ಅಷ್ಟೇ ಅಲ್ಲ, ದೇಶಾದ್ಯಂತ ಜಾತಿ ಗಣತಿ ನಡೆಸುವ ಮೂಲಕ ಈ ದೇಶದ ಶೋಷಿತ ಸಮುದಾಯಗಳನ್ನು, ಅವರ ಜನಸಂಖ್ಯಾ ಪ್ರಮಾಣವನ್ನು ಗುರುತಿಸಿ ಸಂಪನ್ಮೂಲದ ಹಂಚಿಕೆಯಾಗಬೇಕು. ಈ ಮೂಲಕ ಜಾತಿ ಆಧಾರದಲ್ಲಿ ವಿಭಜನೆಗೊಂಡಿರುವ ದೇಶವನ್ನು ಒಂದುಗೂಡಿಸುವ ಕೆಲಸಕ್ಕೆ ಪ್ರಧಾನಿ ಮೋದಿಯವರು ನೇತೃತ್ವವನ್ನು ವಹಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X