Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕಾವೇರಿ ವಿವಾದ: ರೈತ ನಾಯಕರು ಮುನ್ನೆಲೆಗೆ...

ಕಾವೇರಿ ವಿವಾದ: ರೈತ ನಾಯಕರು ಮುನ್ನೆಲೆಗೆ ಬರಲಿ

ವಾರ್ತಾಭಾರತಿವಾರ್ತಾಭಾರತಿ23 Sept 2023 9:00 AM IST
share
ಕಾವೇರಿ ವಿವಾದ: ರೈತ ನಾಯಕರು ಮುನ್ನೆಲೆಗೆ ಬರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಾವೇರಿ ನದಿಯಿಂದ ತಮಿಳುನಾಡಿಗೆ ಕರ್ನಾಟಕವು ಪ್ರತಿದಿನ ೫,೦೦೦ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ನಿರ್ದೇಶನದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲಿಗೆ ರಾಜ್ಯ ಸರಕಾರಕ್ಕಿರುವ ಕಟ್ಟ ಕಡೆಯ ‘ನೀರಿನ ಆಸರೆ’ಯೂ ಇಲ್ಲದಂತಾಗಿದೆ. ಪ್ರತಿದಿನ ೩,೦೦೦ ಕ್ಯೂಸೆಕ್‌ಗಿಂತ ಹೆಚ್ಚಿನ ನೀರಿನ ಬಿಡುಗಡೆ ಸಾಧ್ಯವಿಲ್ಲ ಎಂಬ ಕರ್ನಾಟಕದ ವಾದಕ್ಕೆ ಸುಪ್ರೀಂಕೋರ್ಟ್ ಕಿವುಡಾಗಿದೆ. ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವ ಸಾಧ್ಯತೆಗಳೇನೂ ಕಾಣಿಸುತ್ತಿಲ್ಲ. ಕರ್ನಾಟಕದ ಅಗತ್ಯಕ್ಕೆ ಬೇಕಾದಷ್ಟು ನೀರೇ ಜಲಾಶಯದಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರನ್ನು ಬಿಡುವುದು ಸಾಧ್ಯವಾಗುವ ಮಾತೆ? ತೀರ್ಪು ಹೊರ ಬಿದ್ದ ಬೆನ್ನಿಗೇ ಮೈಸೂರು, ಮಂಡ್ಯದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಕಾವೇರಿ ನೀರಿನ ಕುರಿತ ವಿರೋಧ ಪಕ್ಷಗಳ ಕಾಳಜಿ ರಾಜ್ಯ ಸರಕಾರವನ್ನು ಟೀಕಿಸುವುದಕ್ಕೆ ಸೀಮಿತವಾಗಿದೆ. ಸಿದ್ದರಾಮಯ್ಯ ಅವರು ‘ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ. ಆದರೆ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸುತ್ತಾರೆ ಎನ್ನುವ ನಿರೀಕ್ಷೆ ಫಲ ನೀಡುವುದು ಕಷ್ಟ ಎನ್ನುವುದು ರಾಜ್ಯಕ್ಕೆ ಚೆನ್ನಾಗಿಯೇ ಗೊತ್ತಿದೆ.

ಹಿಂದೆ ‘ಡಬಲ್ ಇಂಜಿನ್’ ಸರಕಾರವಿದ್ದಾಗ ಕರ್ನಾಟಕದ ನೆರೆ, ಬರ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ? ಎನ್ನುವ ಅರಿವು ಸಿದ್ದರಾಮಯ್ಯ ಸರಕಾರಕ್ಕಿರಬೇಕಾಗಿದೆ. ರಾಜ್ಯ ನೆರೆಯಿಂದ ಕೊಚ್ಚಿ ಹೋಗುತ್ತಿರುವಾಗ ಕನಿಷ್ಠ ಭೇಟಿ ಮಾಡುವ ಸೌಜನ್ಯವನ್ನೂ ಅವರು ಪ್ರದರ್ಶಿಸಿರಲಿಲ್ಲ. ಯಡಿಯೂರಪ್ಪ ನೇತೃತ್ವದ ಸರಕಾರ ಮಳೆ ಪರಿಹಾರಕ್ಕಾಗಿ ಕೇಂದ್ರದ ಸಹಾಯ ನಿರೀಕ್ಷಿಸಿದಾಗ ಅದಕ್ಕೆ ಸ್ಪಂದಿಸಲಿಲ್ಲ ಮಾತ್ರವಲ್ಲ ರಾಜ್ಯದ ಕೆಲವು ಸಂಸದರು ‘‘ಕರ್ನಾಟಕದ ಬೊಕ್ಕಸದಲ್ಲಿ ಹಣವಿದೆ. ಕೇಂದ್ರ ಪರಿಹಾರ ನೀಡುವ ಅಗತ್ಯವಿಲ್ಲ’’ ಎಂಬಂತಹ ಸಾರ್ವಜನಿಕ ಹೇಳಿಕೆಗಳನ್ನು ನೀಡಿ, ಕರ್ನಾಟಕ ವಿರೋಧಿ ಧೋರಣೆಯನ್ನು ತಳೆದಿದ್ದರು. ಕೊರೋನಾ ಸಂದರ್ಭದಲ್ಲಿಯೂ ಆಕ್ಸಿಜನ್ ಸಿಲಿಂಡರ್ ಒದಗಿಸುವಲ್ಲೂ ಪಕ್ಷಪಾತ ಪ್ರದರ್ಶಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗಲೇ ಕರ್ನಾಟಕದ ಅಳಲಿಗೆ ಸ್ಪಂದಿಸದ ಕೇಂದ್ರ ಸರಕಾರ ಈಗ ಕಾವೇರಿ ನೀರಿನ ವಿಷಯದಲ್ಲಿ ಸ್ಪಂದಿಸುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವೆ? ಇಷ್ಟಕ್ಕೂ ರಾಜ್ಯದ ಜನತೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಕೇಂದ್ರಕ್ಕೆ ಆಯ್ಕೆ ಮಾಡಿ ಕಳುಹಿಸಿದೆ. ಅವರೆಲ್ಲ ಕೇಂದ್ರದ ಮೇಲೆ ಕಾವೇರಿ ವಿಷಯದಲ್ಲಿ ಎಷ್ಟರಮಟ್ಟಿಗೆ ಒತ್ತಡಗಳನ್ನು ಹೇರಿದ್ದಾರೆ? ಕನಿಷ್ಠ ಈಗ ರಾಜ್ಯ ಸರಕಾರದ ಮೇಲೆ ಹಾಕಿದ ಅರ್ಧದಷ್ಟು ಒತ್ತಡವನ್ನು ಕೇಂದ್ರ ಸರಕಾರದ ಮೇಲೆ ಹಾಕಿದ್ದಿದ್ದರೆ, ಕಾವೇರಿ ವಿವಾದ ಭವಿಷ್ಯದ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡಿದ್ದಿದ್ದರೆ ಸಮಸ್ಯೆ ಇಲ್ಲಿಯವರೆಗೆ ತಲುಪುತ್ತಿರಲಿಲ್ಲವೇನೋ?

ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಂತರ್‌ರಾಜ್ಯ ಜಲ ವಿವಾದಕ್ಕೆ ಸುಪ್ರೀಂಕೋರ್ಟ್‌ನಿಂದ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ರಾಜಕೀಯ ಒತ್ತಡವನ್ನು ಹೇರಲು ಸಾಧ್ಯವಾಗುವ ಕಾರಣಕ್ಕಾಗಿಯೇ ಕಾವೇರಿ ನೀರಿನ ವಿಷಯದಲ್ಲಿ ತಮಿಳು ನಾಡಿಗೆ ನಿರಂತರವಾಗಿ ಜಯವಾಗುತ್ತಾ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಅಂದರೆ, ಕಾವೇರಿ ವಿವಾದ ಸೃಷ್ಟಿಯಾದಾಗಲೆಲ್ಲ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ರಾಜ್ಯ ಸರಕಾರದ ವಿರುದ್ಧ ಅದನ್ನು ಅಸ್ತ್ರವಾಗಿ ಬಳಸುತ್ತಾ ಬಂದಿವೆಯೇ ಹೊರತು, ಎಲ್ಲರೂ ಒಟ್ಟಾಗಿ ಕೇಂದ್ರದ ವಿರುದ್ಧ ಒತ್ತಡ ಹೇರಲು ಮುಂದಾಗಿಲ್ಲ. ‘ರಾಜ್ಯ ಸರಕಾರದ ವೈಫಲ್ಯದಿಂದ ತಮಿಳು ನಾಡಿನ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ’ ಎಂದು ಬೊಮ್ಮಾಯಿಯವರು ಆರೋಪಿಸುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೂ ‘ರಾಜ್ಯದ ವಿರುದ್ಧ’ ತೀರ್ಪು ಬಂದಿತ್ತು. ರಾಜ್ಯ ನೀರು ಬಿಡಲೇ ಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿತ್ತು. ಅಂದರೆ ಬಿಜೆಪಿಯೂ ಕರ್ನಾಟಕದ ಪರವಾಗಿ ಅಭಿಪ್ರಾಯ ಮಂಡಿಸಲು ವಿಫಲವಾಗಿತ್ತು. ಇದನ್ನು ಬಿಜೆಪಿ ಅಥವಾ ಕಾಂಗ್ರೆಸ್‌ನ ಸೋಲು ಎಂದು ಕರೆಯುವುದಕ್ಕಿಂತ ಒಟ್ಟು ಕರ್ನಾಟಕದ ರಾಜಕೀಯ ಇಚ್ಛಾಶಕ್ತಿಯ ಸೋಲು ಎಂದೇ ಕರೆಯುವುದು ಸೂಕ್ತ. ಕಾವೇರಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಟ್ಟು ಕರ್ನಾಟಕದ ಧ್ವನಿಯಾಗಿ ಕೇಂದ್ರ ಸರಕಾರವನ್ನು ಯಾವತ್ತೂ ತಲುಪಿಯೇ ಇಲ್ಲ.

ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ವಿರೋಧ ಪಕ್ಷಗಳು ಮಾತನಾಡುತ್ತಿವೆ. ಇದೇ ಸಂದರ್ಭದಲ್ಲಿ ಸರ್ವ ಪಕ್ಷ ಸಭೆಯಲ್ಲಿ ಹಾಜರಾಗಿ ಸರಕಾರಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದು, ರಾಜ್ಯ ಸರಕಾರದ ಮೇಲೆ ಒತ್ತಡಗಳನ್ನು ಹಾಕುವುದು ವಿರೋಧ ಪಕ್ಷಗಳ ಕರ್ತವ್ಯವಾಗಿತ್ತು. ಜೊತೆಗೆ, ಎಲ್ಲ ಪಕ್ಷದ ನಾಯಕರು ಒಂದಾಗಿ ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ಯುವ ಉದ್ದೇಶಕ್ಕೂ ವಿರೋಧ ಪಕ್ಷಗಳು ಮಣ್ಣು ಹಾಕಿದ್ದವು. ಆದುದರಿಂದ, ಸುಪ್ರೀಂಕೋರ್ಟ್ ತೀರ್ಪಿಗೆ ಕೇವಲ ರಾಜ್ಯ ಸರಕಾರವನ್ನು ಮಾತ್ರ ಹೊಣೆ ಮಾಡಿ ವಿರೋಧ ಪಕ್ಷದ ನಾಯಕರು ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಸುಪ್ರೀಂಕೋರ್ಟ್ ಕಾವೇರಿ ಕುರಿತಂತೆ ನೀಡಿದ ತೀರ್ಪಿನ ಬೆನ್ನಿಗೇ ಬಿಜೆಪಿಯ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದಾಗಿ ಜೆಡಿಎಸ್ ಘೋಷಿಸಿಕೊಂಡಿದೆ. ಈ ಮೈತ್ರಿ ಕರ್ನಾಟಕದ ಹಿತಾಸಕ್ತಿಗಾಗಿ ಮಾಡಿದ್ದೇ ಆಗಿದ್ದರೆ, ಪ್ರಧಾನಿ ಮೋದಿಗೆ ರಾಜಕೀಯ ಒತ್ತಡಗಳನ್ನು ಹೇರಲು ಬಿಜೆಪಿ ನಾಯಕರಿಗಿಂತ ಜೆಡಿಎಸ್ ನಾಯಕರು ಸದ್ಯಕ್ಕೆ ಹೆಚ್ಚು ಸಮರ್ಥರು. ದೇವೇಗೌಡರು ಕಾವೇರಿ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಪ್ರಧಾನಿ ಮೋದಿಗೆ ಕರೆ ನೀಡಬೇಕು. ಈ ಮೂಲಕ ಮೈತ್ರಿಯ ಹಾದಿಯನ್ನು ಕರ್ನಾಟಕಕ್ಕೆ

ಪೂರಕವಾಗಿಸಿ ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಅವಕಾಶ ಅವರ ಮುಂದಿದೆ.

ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲಂಘಿಸುವುದು ರಾಜ್ಯದ ಪಾಲಿಗೆ ಕ್ಷೇಮವಲ್ಲ. ಅದು ಇನ್ನಷ್ಟು ಸಾಂವಿಧಾನಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ. ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೃತ್ಯಗಳು ಅಲ್ಲಲ್ಲಿ ಆರಂಭವಾಗಿವೆ. ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುವುದರಿಂದ, ಕಾವೇರಿ ನೀರನ್ನು ಉಳಿಸಿಕೊಳ್ಳುವುದು ಖಂಡಿತ ಅಸಾಧ್ಯ. ನಾವು ನಮ್ಮದೇ ಸೊತ್ತುಗಳಿಗೆ ಹಾನಿ ಮಾಡಿ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಇದೊಂದು ರೀತಿ, ಇನ್ನಾರದೋ ಮೇಲಿನ ಸಿಟ್ಟಿಗೆ ನಾವು ನಮ್ಮ ಮೂಗು ಕತ್ತರಿಸಿಕೊಂಡಂತೆ. ಇದೇ ಸಂದರ್ಭದಲ್ಲಿ ಕಾವೇರಿ ನೀರಿನ ನಿಜವಾದ ಹಕ್ಕುದಾರರು ರಾಜಕಾರಣಿಗಳಲ್ಲ, ಉಭಯ ರಾಜ್ಯಗಳ ರೈತರು. ಆದುದರಿಂದ, ಉಭಯ ರಾಜ್ಯಗಳ ರೈತ ನಾಯಕರು ಈ ಬಗ್ಗೆ ಮಾತನಾಡಬೇಕಾಗಿದೆ. ವಾಸ್ತವಗಳನ್ನು ಅವರಷ್ಟೇ ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ದೇಶದ ಮುಂದಿಡಬಲ್ಲರು. ರಾಷ್ಟ್ರಮಟ್ಟದ ರೈತ ನಾಯಕರು ಉಭಯ ರಾಜ್ಯಗಳ ರೈತರ ಮಾತುಕತೆಯಲ್ಲಿ ಮುಖ್ಯ ಪಾತ್ರವಹಿಸಬೇಕು. ವಿವಾದ ರಾಜಕೀಯ ರಹಿತವಾದಷ್ಟೂ ಪರಿಹಾರ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಹೊಸ ಪ್ರಯತ್ನ ನಡೆಯಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X