Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮುಂದಿದೆ ಸವಾಲುಗಳ ಬಂಡೆ

ಮುಂದಿದೆ ಸವಾಲುಗಳ ಬಂಡೆ

ವಾರ್ತಾಭಾರತಿವಾರ್ತಾಭಾರತಿ1 Jun 2026 7:59 AM IST
share
ಮುಂದಿದೆ ಸವಾಲುಗಳ ಬಂಡೆ

ರಿಲೇ ಓಟದ ಕೋಲನ್ನು ಸಿದ್ದರಾಮಯ್ಯ ಅವರು ಕೊನೆಗೂ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ರಿಲೇ ಎನ್ನುವುದು ಜಂಟಿ ಓಟ. ಮೊದಲು ಕೋಲು ಹಿಡಿದು ಓಡಿದವನು ಎಷ್ಟೇ ಸಮರ್ಥನಾಗಿದ್ದರೂ ಅದನ್ನು ಆತ ಹಸ್ತಾಂತರಿಸಲೇ ಬೇಕು. ರಿಲೇ ಓಟದ ನಿಯಮ ಅದು. ಹಸ್ತಾಂತರಿಸುವುದಿಲ್ಲ ಎಂದು ಹಟ ಹಿಡಿದು ಒಬ್ಬನೇ ಓಡಿದರೆ ಆಟ ಕೆಡುತ್ತದೆ. ಆಟ ಕೆಡುವ ಮೊದಲೇ ಸಿದ್ದರಾಮಯ್ಯ ಅವರು ಕೋಲನ್ನು ಹಸ್ತಾಂತರಿಸಿರುವುದರಿಂದ ರಾಜ್ಯ ಕಾಂಗ್ರೆಸ್ ನಿರಾಳ ನಿಟ್ಟುಸಿರು ಬಿಟ್ಟಿದೆ. ಹಸ್ತಾಂತರಿಸಿರುವುದಲ್ಲ, ಡಿ. ಕೆ. ಶಿವಕುಮಾರ್ ಕೋಲನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸುವವರೂ ಇದ್ದಾರೆ. ಆದರೆ ಓಟಕ್ಕೆ ಮೊದಲೇ, ಇದು ‘ರಿಲೇ ಅಟ’ ಎಂದು ಹೈಕಮಾಂಡ್ ಘೋಷಿಸಿರುವುದರಿಂದ ಆಟದ ನಿಯಮವನ್ನು ಗೌರವಿಸುವುದು ಅನಿವಾರ್ಯ. ಮೊದಲು ಕೋಲು ಹಿಡಿದು ಓಡಿದವನ ಓಟದ ಸಾಮರ್ಥ್ಯ ಗುರಿ ತಲುಪುವುದರಲ್ಲಿ ನಿರ್ಣಾಯಕವಾಗುತ್ತದೆ. ಹಲವು ಬಾರಿ ಎಡವಿದರೂ, ಓಟದ ಗತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅದೇ ಓಟದ ಗತಿಯನ್ನು ಡಿ.ಕೆ.ಶಿವಕುಮಾರ್ ಉಳಿಸಿಕೊಳ್ಳುತ್ತಾರೆಯೋ ಎನ್ನುವುದರ ಮೇಲೆ ಸರಕಾರದ ಯಶಸ್ಸು ನಿಂತಿದೆ.

ಸಿದ್ದರಾಮಯ್ಯ ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ರಾಜಕೀಯಕ್ಕೆ ಕಾಲಿಟ್ಟವರು. ಅಹಿಂದ, ದುರ್ಬಲವರ್ಗ, ಶೋಷಿತ ಸಮುದಾಯ ಎಂದು ರಾಜಕೀಯ ಮಾಡುತ್ತಾ ಬಂದವರು. ಅವರು ಮುಖ್ಯಮಂತ್ರಿಯಾದಾಗ ಸಹಜವಾಗಿಯೇ ಜನರಲ್ಲಿ ಅಪಾರ ನಿರೀಕ್ಷೆಗಳಿದ್ದವು. ಈ ಅತಿ ನಿರೀಕ್ಷೆಯ ಪರಿಣಾಮವಾಗಿ ಸಿದ್ದರಾಮಯ್ಯ ಕಳೆದ ಮೂರು ವರ್ಷಗಳಲ್ಲಿ ಎಲ್ಲ ವರ್ಗಗಳಿಂದಲೂ ಟೀಕೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಇಷ್ಟಾದರೂ ಅವರು ಈ ನಾಡಿನ ರೈತಾಪಿ ವರ್ಗ, ಗ್ರಾಮೀಣ ಮಹಿಳೆಯರ ನಡುವೆ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ನೊಳಗಿದ್ದೂ ಕಾಂಗ್ರೆಸ್‌ಗಿಂತ ಭಿನ್ನರಾಗಿ ತನ್ನ ವ್ಯಕ್ತಿತ್ವವನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಅಪ್ಪಟ ಕಾಂಗ್ರೆಸಿಗರು. ಅವರು ಬೆಳೆಯುವುದಕ್ಕೆ ಕಾಂಗ್ರೆಸ್ ಕೊಡುಗೆಯಿದ್ದಂತೆಯೇ ಕಳೆದ ಎರಡೂ ಅವಧಿಯ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಅಳಿವು ಉಳಿವಿನಲ್ಲಿ ಡಿಕೆಶಿ ಕೊಡುಗೆಯೂ ಇದೆ. ಹಣಬಲ, ಜಾತಿ ಬಲದ ಮೂಲಕವೇ ಕಾಂಗ್ರೆಸ್‌ನಲ್ಲಿ ತನ್ನ ನೆಲೆಯನ್ನು ಗಟ್ಟಿ ಪಡಿಸಿಕೊಂಡವರು. ಅವರ ರಾಜಕೀಯ ಯಾವುದೇ ಸೈದ್ಧಾಂತಿಕ ತಳಹದಿಯ ಮೇಲೆ ರೂಪುಗೊಂಡದ್ದಲ್ಲ. ‘ಅಪ್ಪಟ ಕಾಂಗ್ರೆಸಿಗ’ ಎನ್ನುವುದೇ ಅವರ ರಾಜಕೀಯದ ಅಧಿಕೃತ ಮೊಹರು. ಸಿದ್ದರಾಮಯ್ಯ ಕುರಿತಂತೆ ಇದ್ದ ಭಾರೀ ನಿರೀಕ್ಷೆಗಳು ಡಿ. ಕೆ. ಶಿವಕುಮಾರ್ ಮೇಲೆ ಜನರಿಗೆ ಇಲ್ಲದೇ ಇದ್ದರೂ, ಈ ಹಿಂದಿನ ಸಿದ್ದರಾಮಯ್ಯ ಆಡಳಿತವನ್ನು ಮಾನದಂಡವಾಗಿ ಇಟ್ಟುಕೊಂಡು ಭವಿಷ್ಯದಲ್ಲಿ ಡಿಕೆಶಿ ನೇತೃತ್ವದ ಸರಕಾರದ ಟೀಕೆ ಟಿಪ್ಪಣಿಗಳು ನಡೆಯಲಿವೆ ಎನ್ನುವುದು ಸ್ಪಷ್ಟ.

ಗ್ಯಾರಂಟಿ ಯೋಜನೆಗಳ ಬಗ್ಗೆ ಡಿ. ಕೆ. ಶಿವಕುಮಾರ್ ತೆಗೆದುಕೊಳ್ಳುವ ನಿರ್ಧಾರಗಳು ಸರಕಾರದ ಮೇಲೆ ನೇರ ಪರಿಣಾಮಗಳನ್ನು ಬೀರಲಿವೆ. ಗ್ಯಾರಂಟಿ ಯೋಜನೆಗಳು ಡಿಕೆಶಿ ಪಾಲಿಗೆ ಉಗುಳಲೂ ಆಗದ, ನುಂಗಲೂ ಆಗದ ಕಡುಬು. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಸಾಕಾಗುತ್ತಿಲ್ಲ, ಸರಕಾರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವ ಮಾತುಗಳು ವದಂತಿಗಳಲ್ಲ. ಇದರಲ್ಲಿ ಸತ್ಯವಿದೆ. ಕಾಂಗ್ರೆಸ್‌ನೊಳಗೇ ಗ್ಯಾರಂಟಿ ಯೋಜನೆಗಳ ವಿರುದ್ಧ ಅಸಮಾಧಾನವಿದೆ. ಡಿಕೆಶಿ ಮುಖ್ಯಮಂತ್ರಿಯಾದರೆ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಬೀಳುತ್ತದೆ ಎಂದು ಕಾಯುತ್ತಿರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಿದರೂ ವಿರೋಧ ಪಕ್ಷಗಳು ಅದರ ವಿರುದ್ಧ್ದ ಧ್ವನಿಯೆತ್ತುತ್ತವೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದರೂ, ಸರಕಾರದ ಆರ್ಥಿಕ ಸ್ಥಿತಿಗತಿಯನ್ನು ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತವೆ. ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಿದರೆ, ಗ್ರಾಮೀಣ ಮಹಿಳೆಯರ ದೃಷ್ಟಿಯಲ್ಲಿ ಡಿಕೆಶಿ ಖಳನಾಯಕರಾಗಬೇಕಾಗುತ್ತದೆ. ಹಾಗೆಂದು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿ ಕೆಲವು ಬದಲಾವಣೆಗಳನ್ನಾದರೂ ಮಾಡದೇ ಇದ್ದರೆ, ರಾಜ್ಯವನ್ನು ಮುನ್ನಡೆಸುವುದು ಕಷ್ಟ. ಈ ಸವಾಲನ್ನು ಡಿಕೆಶಿ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ವಿರೋಧ ಪಕ್ಷಗಳು ಕುತೂಹಲದಿಂದ ಕಾಯುತ್ತಿವೆ. ಇದೇ ಸಂದರ್ಭದಲ್ಲಿ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಯ ಕ್ಷಣದಲ್ಲಿ ಸ್ವೀಕರಿಸಿದ್ದಾರೆ. ಅದನ್ನು ಮಂಡಿಸುವ ಹೊಣೆಗಾರಿಕೆ ಈಗ ಡಿಕೆಶಿ ಅವರ ಹೆಗಲಿಗೆ ಬಿದ್ದಿದೆ. ಒಕ್ಕಲಿಗ ಸಮುದಾಯದ ನಾಯಕರು ಜಾತಿಗಣತಿಯ ವರದಿಯ ವಿರುದ್ಧ ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಿರುವಾಗ, ಜಾತಿಗಣತಿ ವರದಿಯನ್ನು ಮಂಡಿಸಲು ಡಿಕೆಶಿ ಅವಕಾಶ ನೀಡುತ್ತಾರೆಯೇ? ಎನ್ನುವ ಪ್ರಶ್ನೆಯೂ ರಾಜ್ಯದ ಮುಂದಿದೆ.

ದಾವಣಗೆರೆ ಉಪಚುನಾವಣೆಗಳ ಬಳಿಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮ್ ಸಮುದಾಯದ ಮತದಾರರು ರಾಜ್ಯ ಕಾಂಗ್ರೆಸ್ ವರಿಷ್ಠರ ಬಗ್ಗೆ ತೀವ್ರ ಅಸಮಾಧಾನವನ್ನು ಹೊಂದಿದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ನೀಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ದಾವಣಗೆರೆ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬಕ್ಕೆ ಮಣೆ ಹಾಕಿ, ದಲಿತ, ಮುಸ್ಲಿಮ್ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಬಗೆಗಿನ ಕೋಪ ತಾಪ ಇನ್ನೂ ತಣಿದಿಲ್ಲ. ಮುಸ್ಲಿಮ್ ಸಂಘಟನೆಗಳು ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸಲು ಡಿಕೆಶಿ ನೇತೃತ್ವದ ಸರಕಾರ ಯಾವ ರೀತಿ ಪ್ರಯತ್ನಿಸುತ್ತದೆ ಎನ್ನುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗುತ್ತದೆ. ಬರೇ ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗುವುದೇ ಡಿಕೆಶಿ ಗುರಿಯಾಗಿದ್ದರೆ ಇದಕ್ಕೆಲ್ಲ ತಲೆಕೆಡಿಸಬೇಕಾಗಿಲ್ಲ. ಕೋಮುವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಡಿಕೆಶಿ ಅವರಿಗೆ ಸಾಧ್ಯವಾಗಲಿದೆಯೇ ಅಥವಾ ಸಂಘಪರಿವಾರ ಡಿಕೆಶಿ ಸರಕಾರದ ಮರೆಯಲ್ಲಿ ಮತ್ತೆ ಹೆಡೆ ಬಿಚ್ಚಲಿದೆಯೇ ಎನ್ನುವುದೂ ಸರಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸರಕಾರ ನಿಭಾಯಿಸಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಡಿಕೆಶಿ ವಿರುದ್ಧ ಇರುವ ಪ್ರಕರಣಗಳು ಮತ್ತೆ ತೆರೆದುಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿಯವರ ಪ್ರಚೋದನೆಯಿಂದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡಲು ಆರಂಭಿಸಿದರೆ, ಡಿಕೆಶಿ ಆಡಳಿತ ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಕೇಂದ್ರದ ವಿರುದ್ಧ ಸಿದ್ದರಾಮಯ್ಯ ತೊಡೆತಟ್ಟಿದಂತೆ ನಿಷ್ಠುರವಾಗಿ ಡಿಕೆಶಿಗೆ ತೊಡೆ ತಟ್ಟಲು ಸಾಧ್ಯವೇ ಎನ್ನುವ ಅನುಮಾನವೂ ಕಾಡುತ್ತದೆ. ಈ ಎಲ್ಲ ಸವಾಲಿನ ಬಂಡೆಗಳನ್ನು ದಾಟಿ ಸರಕಾರವನ್ನು ಮುನ್ನಡೆಸುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಅವರದು. ಮುಖ್ಯವಾಗಿ, ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸವಾಲುಗಳನ್ನು ಗೆಲ್ಲಲು ಸಾಧ್ಯವಾದರೆ, ಮುಂದಿನ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಡಿಕೆಶಿ ಹೊರಹೊಮ್ಮುವುದರಲ್ಲಿ ಅಚ್ಚರಿಯಿಲ್ಲ.

Tags

DK ShivakumarCongressCMofkarnataka
share
ವಾರ್ತಾಭಾರತಿ
ವಾರ್ತಾಭಾರತಿ
Next Story
X