Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ

ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ

ವಾರ್ತಾಭಾರತಿವಾರ್ತಾಭಾರತಿ19 Sept 2026 8:20 AM IST
share
ಯುಪಿಐ ವಹಿವಾಟಿನ ಮೇಲೆ ಶುಲ್ಕದ ಬರೆ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆಯಿಲ್ಲದೆ, ತಿದ್ದುಪಡಿಗೊಂಡ ಪಾವತಿ ಮತ್ತು ಒಪ್ಪಂದ ವ್ಯವಸ್ಥೆಗಳ ಕಾನೂನು (Payment and Settlement Systems Act, 2007) ಒದಗಿಸಿರುವ ಅಧಿಕಾರವನ್ನು ಉಪಯೋಗಿಸಿ ಕೇಂದ್ರ ಸರಕಾರವು ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ಯುಪಿಐ ಅಂದರೆ ಏಕೀಕೃತ ಪಾವತಿ ವ್ಯವಸ್ಥೆಯ (ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್) ಮೂಲಕ ಮಾಡುವ ಪಾವತಿಗಳ ಮೇಲೆ ಷರತ್ತುಬದ್ಧವಾಗಿ ಶುಲ್ಕವನ್ನು ವಿಧಿಸಿದೆ. ರೂ. 2,000 ಮತ್ತು ಮೇಲ್ಪಟ್ಟ ಪಾವತಿಗೆ ಶೇ. 0.4ರಷ್ಟು ಶುಲ್ಕವನ್ನು ಎಂಡಿಆರ್-ಮರ್ಚಂಟ್ ಡಿಸ್ಕೌಂಟ್ ರೇಟ್-ಎಂಬ ಹೆಸರಿನಲ್ಲಿ ವ್ಯಾಪಾರಿಗಳು ತೆರಬೇಕಾಗುತ್ತದೆ. ರೂ. 2,000 ತನಕ ರುಪೇ ಡೆಬಿಟ್ ಕಾರ್ಡ್ ಮತ್ತು ಯುಪಿಐಯ ಮೂಲಕ ಮಾಡುವ ಪಾವತಿಗಳು ನಿಃಶುಲ್ಕವಾಗುತ್ತವೆ. ಎಂಡಿಆರ್ ಅಂದರೆ ಯುಪಿಐ ಮೂಲಕ ಪಾವತಿಯನ್ನು ಸ್ವೀಕರಿಸುವ ವ್ಯಾಪಾರಿಗಳು ಬ್ಯಾಂಕುಗಳಿಗೆ ಮತ್ತು ಯುಪಿಐ ಸೇವೆಯನ್ನು ಒದಗಿಸುವ ಕಂಪೆನಿಗಳಿಗೆ ಪ್ರತೀ ವಹಿವಾಟಿನ ಮೇಲೆ ಕೊಡುವ ಸೇವಾ ಶುಲ್ಕ. ಈ ಶುಲ್ಕವು ಖರೀದಿಸುವವರ ಬ್ಯಾಂಕಿಗೆ ಶೇ. 40, ವ್ಯಾಪಾರಿಯ ಬ್ಯಾಂಕಿಗೆ ಶೇ. 30, ಯುಪಿಐ ವ್ಯವಸ್ಥೆಯನ್ನು ಒದಗಿಸುವ ಕಂಪೆನಿಗೆ ಶೇ. 20 ಮತ್ತು ಅದರ ಬ್ಯಾಂಕಿಂಗ್ ಪಾಲುದಾರರಿಗೆ ಶೇ. 10ರಂತೆ ಹಂಚಿಕೆಯಾಗುತ್ತದೆ.

2016ರಲ್ಲಿ ಆರಂಭವಾದ ಯುಪಿಐ ಪಾವತಿ ಪದ್ಧತಿಯು ಅದೇ ವರ್ಷ ನವೆಂಬರ್‌ನಲ್ಲಿ ಸರಕಾರವು ಮಾಡಿದ ನೋಟುರದ್ದತಿಯಿಂದಾಗಿ ಜನಪ್ರಿಯವಾಯಿತು. ಸರಕಾರವೂ ನಗದು ವ್ಯವಹಾರದ ಬದಲಾಗಿ ಹಣಕಾಸು ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಯುಪಿಐ ಮೂಲಕ ಪಾವತಿ ಮಾಡಲು ಜನರನ್ನು ಉತ್ತೇಜಿಸಿತು. ಈ ಪಾವತಿಯು ನಿಃಶುಲ್ಕ; ನಗದನ್ನು ಒಯ್ಯುವ ಕಷ್ಟವಿಲ್ಲ, ಸ್ಮಾರ್ಟ್ ಫೋನ್‌ಗಳ ಮೂಲಕ ತಮ್ಮ ಬ್ಯಾಂಕು ಖಾತೆಯಿಂದ ವ್ಯಾಪಾರಿಯ ಖಾತೆಗೆ ಬಿಲ್ಲಿನಲ್ಲಿ ನಮೂದಿಸಿದ ಹಣವನ್ನು ಕ್ಷಣಾರ್ಧದಲ್ಲಿ ವರ್ಗಾಯಿಸಬಹುದು; ಅಷ್ಟೇ ಅಲ್ಲ ಎರಡು ಪಾರ್ಟಿಗಳಲ್ಲಿಯೂ ಹಣ ಕೊಟ್ಟದ್ದಕ್ಕೆ ಮತ್ತು ಸಿಕ್ಕಿದ್ದಕ್ಕೆ ಬ್ಯಾಂಕು ಖಾತೆಯಲ್ಲಿ ವಹಿವಾಟು ದಾಖಲಾಗುತ್ತದೆ.

ಅದೇ ಸಮಯಕ್ಕೆ ಸರಿಯಾಗಿ ಶೂನ್ಯ ಶಿಲ್ಕು(ಬ್ಯಾಲೆನ್ಸ್) ಇಡಬಹುದಾದ ಜನಧನ್ ಬ್ಯಾಂಕ್ ಅಕೌಂಟುಗಳನ್ನು ತೆರೆಯಲು, ಆ ಖಾತೆಗೆ ಆಧಾರ್ ಕಾರ್ಡನ್ನು ಜೋಡಿಸಿ ಆ ಮೂಲಕ ತಮಗೆ ಸರಕಾರದಿಂದ ಬರಬೇಕಾದ ಧನಸಹಾಯದ ಪಾವತಿ ಮತ್ತು ಇವುಗಳನ್ನೆಲ್ಲ ಸ್ಮಾರ್ಟ್ ಫೋನ್‌ಗಳ ಮೂಲಕ ನಡೆಸಿಕೊಡುವ ಸೌಲಭ್ಯಗಳಿಗೆ ಸರಕಾರ ಬಹಳಷ್ಟು ಉತ್ತೇಜನ ನೀಡಿತು. ಜನಧನ್, ಆಧಾರ್ ಮತ್ತು ಮೊಬೈಲ್ (ಜಾಮ್) ಎಂಬ ‘ತ್ರಿಮೂರ್ತಿ’ಗಳ ಮೂಲಕ ದೇಶದ ಹಣಕಾಸು ವಹಿವಾಟಿನಲ್ಲಿ ಮೂಲಭೂತ ಬದಲಾವಣೆಗಳು ಆದವು. ಯುಪಿಐ ಪದ್ಧತಿಯನ್ನು ಆರಂಭಿಸಿದಾಗ ಅದರ ನಿರ್ವಹಣಾ ವೆಚ್ಚವನ್ನು ಸರಕಾರವೇ ವಹಿಸಿಕೊಂಡಿತು. ಇದರಿಂದಾಗಿ ಗ್ರಾಹಕರ ಮೇಲೆ ಹೊರೆಯೂ ಬೀಳಲಿಲ್ಲ.

2007ರ ಪಾವತಿ ಮತ್ತು ಒಪ್ಪಂದ ವ್ಯವಸ್ಥೆಗಳ ಕಾನೂನು ಅಡಿಯಲ್ಲಿ 2008ರಲ್ಲಿಯೇ ಸ್ಥಾಪಿತವಾಗಿದ್ದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ)ಕ್ಕೆ ದೇಶದಾದ್ಯಂತ ಇಡೀ ಯುಪಿಐ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರವನ್ನು ನೀಡಲಾಯಿತು.

ವ್ಯಾಪಾರ-ವ್ಯವಹಾರದಲ್ಲಿ ಪಾವತಿಯನ್ನು ಮಾಡಲು ನಗದಿನ ಬದಲಿಗೆ ಪರ್ಯಾಯ ಮಾರ್ಗವನ್ನು ಮಾಹಿತಿ ತಂತ್ರಜ್ಞರು ಕಂಡುಹುಡುಕಿದ್ದು ಸಾವಿರಾರು ವರ್ಷಗಳ ಹಣದ ವಿಕಾಸದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲು. ಅದರಿಂದಾಗಿ ಅನೇಕ ದೇಶಗಳ ವ್ಯಾಪಾರ ವಹಿವಾಟುಗಳಿಗೆ ಸಂಬಂಧಪಟ್ಟ ಪಾವತಿವ್ಯವಸ್ಥೆಯು ಅಭೂತಪೂರ್ವ ಬದಲಾವಣೆಗಳನ್ನು ಕಂಡಿತು. ಮಾಹಿತಿ ತಂತ್ರಜ್ಞಾನರಂಗದಲ್ಲಿ ಭಾರತದ ಸಾಧನೆಗೆ ಕಳಶಪ್ರಾಯವಾಗಿ ಯುಪಿಐ ಪಾವತಿ ಪದ್ಧತಿಯು ದೇಶದಾದ್ಯಂತ ಜನಪ್ರಿಯವಾಯಿತು. 2025-26ರ ವಿತ್ತವರ್ಷದಲ್ಲಿ 241.6 ಬಿಲಿಯ ಯುಪಿಐ ವಹಿವಾಟುಗಳಾಗಿದ್ದವು. 550 ಮಿಲಿಯಕ್ಕಿಂತಲೂ ಹೆಚ್ಚು ಮಂದಿ ಅದರ ಮೂಲಕ ಪಾವತಿಯನ್ನು ಮಾಡಿದ್ದರು. ಇದರಿಂದ ಈ ಯುಪಿಐ ಮಾಧ್ಯಮದ ಪಾವತಿಯ ವಿಸ್ತಾರ ಮತ್ತು ಗಾತ್ರವನ್ನು ಅರ್ಥಮಾಡಿಕೊಳ್ಳಬಹುದು.

ಶುಲ್ಕ ವಿಧಿಸುವ ನಿರ್ಧಾರಕ್ಕೆ ಸರಕಾರ ನೀಡಿದ ಕಾರಣಗಳು ಹೀಗಿವೆ: ಯುಪಿಐ ವ್ಯವಸ್ಥೆಯನ್ನು ನಿರ್ವಹಿಸಲು ವೆಚ್ಚವಿದೆ. ಯಾವುದೇ ಸೌಲಭ್ಯವನ್ನು ನಾಗರಿಕರಿಗೆ ಉಚಿತವಾಗಿ ಅನಿರ್ದಿಷ್ಟಕಾಲದ ವರೆಗೆ ನೀಡಬಾರದು. ವಿದೇಶಗಳಲ್ಲಿಯೂ ಈ ರೀತಿಯ ಸೌಕರ್ಯವನ್ನು ಒದಗಿಸುವ ಸಂಸ್ಥೆಗಳು ಗ್ರಾಹಕರಿಂದ ಸೇವಾ ಶುಲ್ಕವನ್ನು ವಸೂಲಿಮಾಡುತ್ತವೆ. ಡಿಜಿಟಲ್ ಪಾವತಿಯು ಹೆಚ್ಚಾದಂತೆ ಸಾಮಾನ್ಯ ಹಾಗೂ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಅವುಗಳಿಗೆ ಕಡಿವಾಣ ಹಾಕಲು ಇನ್ನೂ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ವೆಚ್ಚವಾಗುತ್ತದೆ. ಆರ್‌ಬಿಐಯ ಗವರ್ನರ್ ಸಂಜಯ ಮಲ್ಹೋತ್ರ ಇತ್ತೀಚೆಗೆ ಹೇಳಿದ್ದರು: ‘‘ಇವುಗಳಿಗೆಲ್ಲ ಆಗುವ ವೆಚ್ಚವನ್ನು ಯಾರಾದರೂ ಭರಿಸಲೇ ಬೇಕಾಗುತ್ತದೆ’’.

ಸರಕಾರದ ಪ್ರಕಾರ ಬಹುತೇಕ ವಹಿವಾಟುಗಳು ರೂ. 2,000ದ ಒಳಗೆ ಇವೆ; ಹೀಗಾಗಿ ಜನಸಾಮಾನ್ಯರಿಗೆ ಇದರಿಂದ ಹೊರೆಯಾಗುವುದಿಲ್ಲ. ಅದರಿಂದ ಹೆಚ್ಚಿನ ವಹಿವಾಟುಗಳನ್ನು ಮಾಡುವವರು ಆರ್ಥಿಕವಾಗಿ ಮೇಲ್ವರ್ಗದವರು. ಮಾತ್ರವಲ್ಲ ರೂ. 2,000ದ ಮೇಲಿನ ವಹಿವಾಟಿಗೆ ಶುಲ್ಕವನ್ನು ವಿಧಿಸಿದರೂ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುವಂತಿಲ್ಲ ಎಂದು ಸರಕಾರ ಹೇಳಿಕೊಂಡಿದೆ.

ಸ್ವಾಭಾವಿಕವಾಗಿಯೇ ಇದಕ್ಕೆ ವಿರುದ್ಧವಾದ ಟೀಕೆಗಳು ರಾಜಕೀಯ ಮತ್ತು ಇತರ ವಲಯಗಳಿಂದ ಬಂದಿವೆ. ಅವುಗಳಲ್ಲಿ ಮೂರು ಚಿಂತನೆಗೆ ಗ್ರಾಸವಾಗುತ್ತವೆ.

ಒಂದು, ನೀವು ಖರೀದಿಸಿದ ಸರಕಿನ ಮೇಲೆ ಜಿಎಸ್‌ಟಿ ನೀಡುವುದಲ್ಲದೆ, ಪಾವತಿಯ ಮೇಲೆಯೂ ಶುಲ್ಕ ನೀಡುವುದು ಸರಿಯೇ? ಇದು ಸೇವಾಶುಲ್ಕವೆಂದಾದರೆ ಅದರ ಮೇಲೆಯೂ ಜಿಎಸ್‌ಟಿ ಕೊಡಬೇಕಾಗದೇ? ಎರಡು, ಭಾರತದಲ್ಲಿ ಯುಪಿಐ ಸೇವೆಯನ್ನು ಒದಗಿಸುವ ಅತಿ ದೊಡ್ಡ ಎರಡು ಕಂಪೆನಿಗಳು ಫೋನ್ ಪೇ ಮತ್ತು ಗೂಗಲ್ ಪೇ. ಇವುಗಳು ಅನುಕ್ರಮವಾಗಿ ಅಮೆರಿಕದ ಕಾರ್ಪೊರೇಟ್ ದಿಗ್ಗಜಗಳಾದ ವಾಲ್ ಮಾರ್ಟ್ ಮತ್ತು ಗೂಗಲ್ ಕಾರ್ಪೊರೇಶನ್‌ಗಳ ಸಹಸಂಸ್ಥೆಗಳು. ಅಮೆರಿಕದಲ್ಲಿ ಡಿಜಿಟಲ್ ವಹಿವಾಟಿಗೆ ಶುಲ್ಕ ವಿಧಿಸುವಾಗ ನಮ್ಮ ದೇಶದಲ್ಲಿ ನಿಃಶುಲ್ಕ ಮಾಡಬಾರದೆಂದು ಅಮೆರಿಕ ಸರಕಾರದ ವಾಣಿಜ್ಯ ಪ್ರತಿನಿಧಿಯ ಹೇಳಿದ್ದರೆಂಬ ವರದಿಗಳು ಇವೆ. ಹಾಗಿದ್ದರೆ ಈ ನಿರ್ಧಾರಕ್ಕೆ ಬಾಹ್ಯ ಆರ್ಥಿಕ ಶಕ್ತಿಗಳ ಒತ್ತಡವಿರಬಹುದೇ?

ಮೂರು, 2,000 ರೂ. ಮೇಲಿನ ವಹಿವಾಟಿಗೆ ವಿಧಿಸುವ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ ಎಂದು ಸರಕಾರ ಹೇಳಿದೆ. ಆದರೆ ಇದು ಸಾಧ್ಯವೇ? ವ್ಯಾಪಾರಿಯು ಯಾವತ್ತೂ ತನ್ನ ವೆಚ್ಚವನ್ನು ಕಡಿಮೆಮಾಡುವ ದಾರಿಯನ್ನು ಶೋಧಿಸುತ್ತಾನೆ.

ಈ ಬೆಳವಣಿಗೆಯ ಇನ್ನೊಂದು ಅಡ್ಡ ಪರಿಣಾಮವನ್ನು ಅಲ್ಲಗಳೆಯುವಂತಿಲ್ಲ. ಜನಸಾಮಾನ್ಯರ ದೃಷ್ಟಿಯಲ್ಲಿ ಕರೆನ್ಸಿ ಇಂದಿಗೂ ಭದ್ರತೆಯ ಸಂಕೇತ. ಈ ಕಾರಣದಿಂದಾಗಿ 2016ರ ನೋಟುರದ್ದತಿಯ ಬಳಿಕವೂ ಕರೆನ್ಸಿಯ ಚಲಾವಣೆ ಅನೇಕ ಪಟ್ಟು ಹೆಚ್ಚಿದೆ. ಈಗ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಿದರೆ ಯುಪಿಐಯನ್ನು ಬಳಸುವ ಬದಲು ಜನಸಾಮಾನ್ಯರು ಮತ್ತು ಕಿರು ಉದ್ದಿಮೆಗಳು ಮತ್ತೆ ನಗದು ವ್ಯವಹಾರಕ್ಕೆ ಮೊರೆಹೋಗಬಹುದು. ಇದರಿಂದಾಗಿ ನಗದುರಹಿತ ಅರ್ಥವ್ಯವಸ್ಥೆಗೆ ಹಿನ್ನಡೆ ಆಗಬಹುದು.

Tags

ChargesUPItransactions
share
ವಾರ್ತಾಭಾರತಿ
ವಾರ್ತಾಭಾರತಿ
Next Story
X