Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕೋಮು ವೈರಸ್ ಪೀಡಿತರಿಗೆ ಬೇಡವೇ...

ಕೋಮು ವೈರಸ್ ಪೀಡಿತರಿಗೆ ಬೇಡವೇ ಕ್ವಾರಂಟೈನ್?

ವಾರ್ತಾಭಾರತಿವಾರ್ತಾಭಾರತಿ27 Dec 2023 9:11 AM IST
share
ಕೋಮು ವೈರಸ್ ಪೀಡಿತರಿಗೆ ಬೇಡವೇ ಕ್ವಾರಂಟೈನ್?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಹೊಸ ವರ್ಷವನ್ನು ಸ್ವಾಗತಿಸಲು ಜಗತ್ತು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಕೊರೋನ ವೈರಸ್ ಸುದ್ದಿ ಮಾಡುತ್ತಿದೆ. ಕರ್ನಾಟಕದಲ್ಲೂ ಹಲವರಲ್ಲಿ ಕೊರೋನ ಸೋಂಕು ಕಂಡು ಬಂದಿದ್ದು, ಯಾರಲ್ಲೆಲ್ಲ ರೋಗ ಲಕ್ಷಣಗಳಿವೆಯೋ ಅವರೆಲ್ಲ ಮನೆಯಲ್ಲೇ ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳಬೇಕು ಎಂದು ಸರಕಾರ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯೂ ಹತ್ತಿರವಾಗುತ್ತಿದೆ. ಚುನಾವಣೆಯ ಹೊತ್ತಿಗೆ ದೇಶದಲ್ಲಿ ಕೊರೋನಕ್ಕಿಂತಲೂ ಭೀಕರ ವೈರಸ್‌ಗಳು ಬೀದಿಗಳಲ್ಲಿ ಅಡ್ಡಾಡತೊಡಗಿವೆ. ಈ ಕೋಮುವೈರಸ್ ಒಮ್ಮೆ ಹರಡಿತೆಂದರೆ ಅದು ಇಡೀ ಊರನ್ನಷ್ಟೇ ಅಲ್ಲ, ನಾಡನ್ನೇ ಬಲಿತೆಗೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ರೋಗ ಪೀಡಿತರನ್ನು ಗುರುತಿಸಿ ಸಾರ್ವಜನಿಕವಾಗಿ ಓಡಾಡದಂತೆ, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸದಂತೆ ಅವರಿಗೆ ನಿರ್ಬಂಧ ಹೇರುವುದು ಸರಕಾರದ ಕರ್ತವ್ಯ. ಕೊರೋನ ಶ್ವಾಸಕೋಶಕ್ಕೆ ಹಾನಿ ಮಾಡಿದರೆ, ಈ ಕೋಮುವೈರಸ್ ನೇರವಾಗಿ ಜನರ ಮೆದುಳನ್ನೇ ಬಲಿ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಸರಕಾರ ಕೊರೋನಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದುದು ಈ ದ್ವೇಷ ವೈರಸ್ ನಾಡಿನ ಜನರನ್ನು ಬಲಿತೆಗೆದುಕೊಳ್ಳದಂತೆ ನೋಡಿಕೊಳ್ಳುವುದು. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಈ ವೈರಸ್ ಪೀಡಿತರು ಸಮಾಜದಲ್ಲಿ ಸಕ್ರಿಯರಾಗಿದ್ದಾರೆ. ‘ವೈರಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ‘ಈ ವೈರಸ್ ಪೀಡಿತರನ್ನು ಕಂಡಲ್ಲಿ ಹಿಡಿದು ಕ್ವಾರಂಟೈನ್‌ಗೆ ತಳ್ಳುತ್ತೇವೆ’ ಎಂದು ಸರಕಾರ ಹೇಳುತ್ತಾ ಬಂದಿದೆಯಾದರೂ, ‘ಬೊಗಳುವ....ಕಚ್ಚುವುದಿಲ್ಲ....’ ಎನ್ನುವ ಗಾದೆಯ ಮೇಲೆ ಅಪಾರ ನಂಬಿಕೆಯನ್ನು ಹೊಂದಿರುವ ಈ ಕೋಮು ರೇಬಿಸ್ ಪೀಡಿತರು ರಾಜ್ಯಾದ್ಯಂತ ಬೊಗಳುತ್ತಲೂ, ಕಚ್ಚುತ್ತಲೂ ದಾಳಿಗೆ ಶುರು ಹಚ್ಚಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ, ಮೂರನೇ ದರ್ಜೆಯ ಭಾಷಣಗಳಿಗಾಗಿಯೇ ಒಂದಿಷ್ಟು ಜನರಿಂದ ನಾಯಕನೆಂದು ಕರೆಸಿಕೊಳ್ಳುತ್ತಿರುವ ಪ್ರಭಾಕರ ಭಟ್ಟ ಎಂಬಾತನ ರೋಗ ಉಲ್ಬಣಗೊಂಡಿದೆ. ಈತನಿಗೆ ಸರಕಾರದಿಂದ ಅತ್ಯಗತ್ಯ ಸಹಾಯ ಬೇಕಾಗಿದೆ. ಸದ್ಯಕ್ಕೆ ಕರಾವಳಿಯಲ್ಲಿ ಈತನ ಮೂರನೇ ದರ್ಜೆಯ ಮಾತುಗಳು ನೆಲೆ ಬೆಲೆ ಕಳೆದುಕೊಂಡಿರುವುದರಿಂದ, ಮಂಡ್ಯಕ್ಕೆ ತೆರಳಿ ಅಲ್ಲಿನ ವೇದಿಕೆಯಲ್ಲಿ ತನಗೆ ಅಂಟಿರುವ ಕಾಯಿಲೆಯನ್ನು ಹಂಚುವ ಪ್ರಯತ್ನ ನಡೆಸಿದ್ದಾನೆ. ಕಬ್ಬು ಬೆಳೆಗಾಗಿ, ಸಕ್ಕರೆಗಾಗಿ, ರೈತಚಳವಳಿಗಳಿಗಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಮಂಡ್ಯ ಈತನ ಮಾತುಗಳಿಂದ ಲಜ್ಜೆಯಿಂದ ತಲೆತಗ್ಗಿಸುವಂತಾಗಿದೆ. ಅಲ್ಲಿನ ತಾಯಂದಿರು ಈತನ ಮಾತುಗಳಿಗೆ ಆಕ್ರೋಶಗೊಂಡು ಬೀದಿಗಿಳಿದು ಛೀಮಾರಿ ಹಾಕುತ್ತಿದ್ದಾರೆ. ಆದರೆ ಸರಕಾರ ಮಾತ್ರ ಈತನ ಹೇಳಿಕೆಗೂ ತನಗೂ ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿದೆ. ಈ ವೈರಸ್ ಸೋಂಕಿತರಿಂದ ಕರಾವಳಿಯ ಗಾಳಿ ನೀರು ಹೇಗೆ ವಿಷಪೂರಿತವಾಗಿದೆ ಎನ್ನುವ ಅರಿವಿದ್ದೂ, ಮಂಡ್ಯದ ಸಕ್ಕರೆ ನಾಡಿನಲ್ಲಿ ಕಹಿ ಹಂಚುವ ಈತನ ಕೃತ್ಯವನ್ನು ಸರಕಾರ ಮೌನವಾಗಿ ಬೆಂಬಲಿಸುತ್ತಿದೆ. ನಾಡಿನ ಪ್ರಜ್ಞಾವಂತರು ಇದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ನೂತನ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಕರಾವಳಿಗೆ ಆಗಮಿಸಿದ ಹಲವು ಕಾಂಗ್ರೆಸ್ ನಾಯಕರು ‘ದ್ವೇಷ ಭಾಷಣಗಳ ವಿರುದ್ಧ ಕಠಿಣ ಕ್ರಮ’ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಸಚಿವರು ಈ ಹೇಳಿಕೆಗಳನ್ನು ನೀಡಿದ ಬೆನ್ನಿಗೇ, ಅವರಿಗೆ ಸವಾಲು ಹಾಕುವವರಂತೆ ಬಿಜೆಪಿಯ ಹಲವು ನಾಯಕರು ಸಾರ್ವಜನಿಕವಾಗಿ ದ್ವೇಷದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದೀಗ ಮಂಡ್ಯದಲ್ಲಿ ಮೂರನೇ ದರ್ಜೆಯ ಸಂಘಪರಿವಾರ ನಾಯಕನೊಬ್ಬ ತನ್ನ ಸಂಸ್ಕೃತಿಗೆ ತಕ್ಕುದಾದ ಭಾಷೆಯಲ್ಲಿ ಮಂಡ್ಯವನ್ನು ಗಬ್ಬೆಬ್ಬಿಸುತ್ತಿರುವಾಗ ಸ್ವಯಂ ಪ್ರಕರಣ ದಾಖಲಿಸಿ ಆತನ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈವರೆಗೆ ಅಂತಹದೇನೂ ಸಂಭವಿಸಿಲ್ಲ. ಇದೀಗ ಪ್ರಜ್ಞಾವಂತ ಜನರೇ ಈತನ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನಾದರೂ ಈತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ನಾಡಿನ ಜನರು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಅಥವಾ ಕಾಂಗ್ರೆಸ್‌ನ ಮುಖಂಡರ ವಿರುದ್ಧ ಬಿಜೆಪಿಯ ನಾಯಕರು ದ್ವೇಷದ ಹೇಳಿಕೆಗಳನ್ನು ನೀಡಿದಾಗ ಪೊಲೀಸರು ತಕ್ಷಣ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಒಬ್ಬ ಕೋಮು ವೈರಸ್ ಪೀಡಿತ ವ್ಯಕ್ತಿ ಈ ನಾಡಿನ ಮಹಿಳೆಯರ ವಿರುದ್ಧ್ದ ಅಸಹ್ಯ, ಅಶ್ಲೀಲ ಮಾತುಗಳನ್ನಾಡಿದರೆ ಪೊಲೀಸ್ ವ್ಯವಸ್ಥೆ ಜಾಣ ಕಿವುಡು ಪ್ರದರ್ಶಿಸುತ್ತದೆ ಎಂದಾದರೆ, ಸಿದ್ದರಾಮಯ್ಯ ಅವರ ‘ಮಹಿಳಾ ಸಬಲೀಕರಣ’ ಭರವಸೆಗಳಿಗೆ ಏನು ಅರ್ಥ ಉಳಿಯಿತು? ‘ಗೃಹ ಜ್ಯೋತಿ’ ‘ಗೃಹ ಲಕ್ಷ್ಮಿ’ಯರನ್ನು ಒಬ್ಬ ಸಂಸ್ಕೃತಿಹೀನ ಮನುಷ್ಯ ಸಾರ್ವಜನಿಕ ವೇದಿಕೆಯಲ್ಲಿ ನಿಂತು ಅಶ್ಲೀಲವಾಗಿ ನಿಂದಿಸುವ ನಾಡಿನಲ್ಲಿ ಗೃಹ ಲಕ್ಷ್ಮಿಯರು ಆತ್ಮವಿಶ್ವಾಸದಿಂದ ಬದುಕುವುದು ಸಾಧ್ಯವೆ?

ದ್ವೇಷ ಭಾಷಣಗಳ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಗಳಿಗಾದರೂ ರಾಜ್ಯ ಸರಕಾರ ಗೌರವವನ್ನು ನೀಡಬೇಕು. ದ್ವೇಷ ಭಾಷಣಗಳ ಮೂಲಕ ಕೋಮುಗಲಭೆಗಳನ್ನು ಎಬ್ಬಿಸಲು ಯಾರಾದರೂ ಯತ್ನಿಸಿದರೆ, ಸಂತ್ರಸ್ತರು ದೂರು ನೀಡುವವರೆಗೆ ಕಾಯದೇ ಸರಕಾರವೇ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಆಗಸ್ಟ್ ೨೫ರಂದು ನೀಡಿದ ಆದೇಶದಲ್ಲಿ ರಾಜ್ಯಗಳಿಗೆ ಹೇಳಿತ್ತು. ದೇಶಾದ್ಯಂತ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಹತ್ತು ಹಲವು ನಿರ್ದೇಶನಗಳನ್ನು ನೀಡಿತ್ತು. ದ್ವೇಷ ಅಪರಾಧಗಳನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ, ಮಾರ್ಗದರ್ಶಿ ಸೂತ್ರಗಳನ್ನು ಬಲಪಡಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿತ್ತು. ‘ಅವಹೇಳನ, ಬೆದರಿಕೆ, ಕಿರುಕುಳ, ಹಿಂಸೆ, ದ್ವೇಷಕ್ಕೆ ಪ್ರಚೋದನೆ, ಒಬ್ಬರ ಧರ್ಮ, ಜನಾಂಗ, ಹುಟ್ಟಿದ ಸ್ಥಳ, ಲೈಂಗಿಕ ಆದ್ಯತೆ, ವೈಯಕ್ತಿಕ ನಂಬಿಕೆಗಳ ಆಧಾರದಲ್ಲಿ ತಾರತಮ್ಯದ ಅಭಿವ್ಯಕ್ತಿ ಇವೆಲ್ಲ ದ್ವೇಷ ಭಾಷಣ ಆಗುತ್ತದೆ’ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ವ್ಯಾಖ್ಯಾನಿಸಿದೆ. ಇಷ್ಟಾದರೂ ಪ್ರಭಾಕರ ಭಟ್ಟನ ಮಾತುಗಳು ದ್ವೇಷ ಭಾಷಣ ಹೌದೋ ಅಲ್ಲವೋ ಎನ್ನುವ ಬಗ್ಗೆ ಸರಕಾರ ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬರದಿರಲು ಕಾರಣವೇನು? ಹೆಣ್ಣೊಬ್ಬಳು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವಳು ಎನ್ನುವ ಏಕೈಕ ಕಾರಣಕ್ಕೆ ಆಕೆಯ ಮಾನ, ಬದುಕು, ಘನತೆಯನ್ನು ಸಾರ್ವಜನಿಕವಾಗಿ ಅಪಹಾಸ್ಯಗೈಯುವ ಈತನ ನೀಚ ಕೃತ್ಯ ‘ಸ್ವಯಂ ಪ್ರೇರಿತ ದೂರು ದಾಖಲಿಸಲು’ ಯೋಗ್ಯ ಎಂದು ಯಾಕೆ ಸರಕಾರಕ್ಕೆ ಅನಿಸಿಲ್ಲ? ಇದೇ ಸಂದರ್ಭದಲ್ಲಿ ತನ್ನ ಸಂಸ್ಕೃತಿ ಹೀನ ಮಾತುಗಳನ್ನು ಇಡೀ ಹಿಂದೂ ಸಮುದಾಯದ ತಲೆಗೆ ಕೆಟ್ಟಲು ಈ ತಲೆಕೆಟ್ಟ ವ್ಯಕ್ತಿ ಯತ್ನಿಸುತ್ತಿರುವುದನ್ನು ಹಿಂದೂ ಧರ್ಮದ ಸ್ವಾಮೀಜಿಗಳು, ಧಾರ್ಮಿಕ ವ್ಯಕ್ತಿಗಳು ಕಟುವಾಗಿ ಖಂಡಿಸಬೇಕಾಗಿದೆ. ಈತನ ಜೊತೆಗೆ ಹಿಂದೂ ಧರ್ಮ ಅಂತರವನ್ನು ಕಾಯ್ದುಕೊಳ್ಳದೇ ಇದ್ದರೆ, ತನ್ನ ಕಾಯಿಲೆಯನ್ನು ಆತ ಇಡೀ ಸಮಾಜಕ್ಕೆ ಅಂಟಿಸಬಹುದು. ಸರಕಾರ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆ ಜೊತೆಗೇ ಸ್ವಾಮಿ ವಿವೇಕಾನಂದ, ನಾರಾಯಣಗುರು, ಮಹಾತ್ಮಾಗಾಂಧಿಯಂತಹ ಮಹಾನ್ ನಾಯಕರಿಂದ ನಿಲ್ಲಿಸಲ್ಪಟ್ಟ ಹಿಂದೂಧರ್ಮದ ಮೌಲ್ಯಗಳಿಗೆ ಈತ ಕಳಂಕವಾಗಿದ್ದಾನೆ. ಈತನಿಂದ ಹಿಂದೂಧರ್ಮವನ್ನು ರಕ್ಷಿಸುವುದಕ್ಕಾಗಿಧರ್ಮದ ಮುಖಂಡರು, ಸ್ವಾಮೀಜಿಗಳು, ಆಧ್ಯಾತ್ಮ ಚಿಂತಕರು ತುರ್ತಾಗಿ ಬೀದಿಗಿಳಿಯಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X