Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ...

ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ ಆತಂಕ

ವಾರ್ತಾಭಾರತಿವಾರ್ತಾಭಾರತಿ11 Dec 2025 7:05 AM IST
share
ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 1,777 ಎಕರೆ ಭೂ ಸ್ವಾಧೀನದಿಂದ ಹಿಂದೆ ಸರಿದಿದ್ದೇವೆೆ ಎಂದು ಸರಕಾರ ಘೋಷಿಸಿದೆಯಾದರೂ, ಸ್ಥಳೀಯ ರೈತರ ಆತಂಕ, ಭಯ ಇನ್ನೂ ತಿಳಿಯಾಗಿಲ್ಲ. ‘ರೈತರ ಹೋರಾಟಕ್ಕೆ ಮಣಿದಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿದ್ದೇವೆ’ ಎಂದು ಘೋಷಿಸಿರುವ ಸರಕಾರ ಇದೇ ಸಂದರ್ಭದಲ್ಲಿ ‘ಅಷ್ಟೂ ಜಮೀನನ್ನೂ ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಘೋಷಿಸಿ ಕೃಷಿಗೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ಹೇಳಿದೆ. ಮೇಲ್ನೋಟಕ್ಕೆ ಸರಕಾರದ ಈ ನಿರ್ಧಾರ ಕೃಷಿಕರ ಪರವಾಗಿದೆಯೆಂದು ಭಾಸವಾಗುತ್ತದೆಯಾದರೂ, ತನಗೆ ಜಮೀನು ನೀಡಲು ಹಿಂಜರಿದ ರೈತರ ವಿರುದ್ಧ ಸರಕಾರ ಈ ಮೂಲಕ ಸೇಡು ತೀರಿಸಲು ಹೊರಟಿದೆಯೋ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಈ ಹೋಬಳಿಯಲ್ಲಿರುವ ಅಷ್ಟೂ ಭೂಮಿಯನ್ನು ವಾಣಿಜ್ಯ ಉದ್ದೇಶದಿಂದ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಸುಮಾರು ಮೂರು ವರ್ಷಗಳಿಗೂ ಅಧಿಕ ಕಾಲ ರೈತರು ಇದರ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ. ಕೆಐಎಡಿಬಿಗೆ ಭೂಮಿಯನ್ನು ನೀಡುವುದಿಲ್ಲ ಎನ್ನುವುದಕ್ಕೆ ರೈತರಲ್ಲೂ ಸಕಾರಣಗಳಿದ್ದವು. ಮುಖ್ಯವಾಗಿ ಅವರು ತಲೆ ತಲಾಂತರಗಳಿಂದ ಕೃಷಿ ಮಾಡುತ್ತಾ ಬಂದ ಜಮೀನು ಅದಾಗಿತ್ತು. ಈ ಭೂಮಿಯಲ್ಲಿ ಅವರು ಸುಮಾರು 900ರಿಂದ 1,000 ಟನ್ ರಾಗಿ ಮತ್ತಿತರ ಆಹಾರ ಧಾನ್ಯಗಳು, 2,000 ಟನ್ ದ್ರಾಕ್ಷಿ, 100ರಿಂದ 150 ಟನ್ ಮಾವು ಮುಂತಾದ ಬೆಳೆಗಳು, ಹೂವು, ತರಕಾರಿಗಳನ್ನು ಬೆಳೆಯುತ್ತಾ ಬರುತ್ತಿದ್ದಾರೆ. ಈ ಹಳ್ಳಿಗಳಲ್ಲಿ ಪ್ರತಿ ದಿನ 6,000ದಿಂದ 8,000 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಮತ್ತು ಬೆಂಗಳೂರು ಬ್ಲೂ ದ್ರಾಕ್ಷಿ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದೆ. ಕೃಷಿ ಕೌಶಲ್ಯಗಳು ಸುಮಾರು 6,000 ಜನರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿವೆ ಎನ್ನುವುದು ರೈತ ಹೋರಾಟಗಾರರು ಭೂಮಿಯನ್ನು ನೀಡದೆ ಇರುವುದಕ್ಕೆ ಕೊಟ್ಟ ಪ್ರಮುಖ ಕಾರಣಗಳಾಗಿದ್ದವು. ಇದೀಗ ಅದೇ ಕಾರಣವನ್ನು ಮುಂದಿಟ್ಟುಕೊಂಡು ಕೃಷಿ ಹಿತವನ್ನು ಕಾಪಾಡುವುದಕ್ಕಾಗಿ ಸರಕಾರ ಭೂಸ್ವಾಧೀನದಿಂದ ಹಿಂದೆ ಸರಿದು, ಆ ಭಾಗವನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿಸುತ್ತೇವೆೆ ಎನ್ನುತ್ತಿದೆ. 1,777 ಎಕರೆ ಭೂಮಿಯನ್ನು ಸರಕಾರವೇನಾದರೂ ಶಾಶ್ವತ ಕೃಷಿ ವಲಯವನ್ನಾಗಿ ಘೋಷಿಸಿದರೆ, ಭವಿಷ್ಯದಲ್ಲಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವ ಹಕ್ಕನ್ನು ರೈತರು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭೀತಿಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಭೂಸ್ವಾಧೀನವನ್ನು ವಿರೋಧಿಸಿರುವುದೇ ಕೃಷಿಯ ಮೇಲಿನ ಕಾಳಜಿಯಿಂದಾಗಿರುವಾಗ, ‘ಶಾಶ್ವತ ವಿಶೇಷ ಕೃಷಿ ವಲಯ’ಕ್ಕೆ ಆಕ್ಷೇಪವೇಕೆ ಎಂದು ಸರಕಾರ ಕೇಳುತ್ತಿದೆ. ಇದು ಸರಕಾರ ರೈತರಿಗೆ ಹಾಕುತ್ತಿರುವ ತಿರುಮಂತ್ರ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಕಳೆದ ಮೂರು ವರ್ಷಗಳಿಂದ ರೈತರು ತಮ್ಮ ಜಮೀನನ್ನು ಕೆಐಎಡಿಬಿ ಯೋಜನೆಗೆ ನೀಡುವುದಿಲ್ಲ ಎಂದು ಆಗ್ರಹಿಸುತ್ತಾ ಬಂದಿದ್ದಾರೆಯೇ ಹೊರತು, ಈ ಭೂಮಿಯನ್ನು ‘ವಿಶೇಷ ಕೃಷಿ ವಲಯವನ್ನಾಗಿಸಿ’ ಎಂದು ಯಾವತ್ತೂ ಸರಕಾರವನ್ನು ಕೇಳಿಕೊಂಡಿಲ್ಲ. ಒಂದು ರೀತಿಯಲ್ಲಿ ‘ನಮ್ಮ ಜಮೀನು ನಮ್ಮ ಹಕ್ಕು’ ಎಂಬ ಘೋಷಣೆಯ ಜೊತೆಗೆ ಸರಕಾರದ ಭೂಸ್ವಾಧೀನವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಯಾವತ್ತೋ ಒಂದು ದಿನ ಅಗತ್ಯ ಬಿದ್ದಾಗ ಒಬ್ಬ ರೈತನಿಗೆ ತನ್ನ ಜಮೀನಿನ ಒಂದು ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಬೇಕು ಎಂದೆನಿಸಿದರೆ ಅದನ್ನು ತಡೆಯುವ ಹಕ್ಕು ಸರಕಾರಕ್ಕಿಲ್ಲ. ‘ಯಾವತ್ತಾದರೂ ನಿಮಗೆ ಅಗತ್ಯವಿದ್ದಾಗ ಮಾರುವ ಉದ್ದೇಶವಿದೆಯಾದರೆ ಇಂದೇ ನಮಗೆ ಮಾರಿ ಬಿಡಿ’ ಎನ್ನುವ ಪರೋಕ್ಷ ಒತ್ತಡವನ್ನು ರೈತರ ಮೇಲೆ ಸರಕಾರ ಹಾಕುತ್ತಿದೆಯೇ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವೆಂದರೆ, ಒಂದೆಡೆ ವಿಶೇಷ ಕೃಷಿ ವಲಯವಾಗಿ ಘೋಷಣೆ ಮಾಡುವುದಾಗಿ ಹೇಳಿಕೆ ನೀಡುತ್ತಲೇ, ಕೆಐಎಡಿಬಿಗೆ ಭೂಮಿ ನೀಡಲು ಇಚ್ಛೆ ಇರುವ ರೈತರಿಗೆ ಇನ್ನೂ ಮೂರು ತಿಂಗಳ ಅವಕಾಶವನ್ನು ನೀಡಿದೆ. ‘ವಿಶೇಷ ಕೃಷಿ ವಲಯ’ವಾಗಿ ಘೋಷಣೆಯಾಗಿ ರೈತರು ವಾಣಿಜ್ಯ ಉದ್ದೇಶಕ್ಕೆ ಭೂಮಿಯನ್ನು ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳುವ ಭಯದಿಂದ ಈ ಮೂರು ತಿಂಗಳ ಅವಧಿಯಲ್ಲಿ ಕೆಲವರಾದರೂ ತಮ್ಮ ಭೂಸ್ವಾಧೀನಕ್ಕೆ ತಲೆಬಾಗುತ್ತಾರೆ ಎನ್ನುವ ದುರುದ್ದೇಶವನ್ನು ಸರಕಾರ ಹೊಂದಿದೆ. ರೈತರನ್ನು ಸರಕಾರ ಪರೋಕ್ಷವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸರಕಾರದ ನಿರ್ಧಾರದಿಂದ ಒಂದು ಸ್ಜಷ್ಟವಾಗಿ ಬಿಡುತ್ತದೆ. ಕಳೆದ ಮೂರು ವರ್ಷಗಳಿಂದ ರೈತರು ಮಾಡುತ್ತಿರುವ ಹೋರಾಟದ ಹಿಂದಿರುವ ಪ್ರಾಮಾಣಿಕತೆಯ ಬಗ್ಗೆ ಅದು ಇನ್ನೂ ಅನುಮಾನವನ್ನು ಇಟ್ಟುಕೊಂಡಿದೆ. ಭೂಸ್ವಾಧೀನ ನಡೆಯದಂತೆ ಕೆಲವು ಹಿತಾಸಕ್ತಿಗಳು ರೈತರ ಜೊತೆಗೆ ಸೇರಿ ಸಂಚು ನಡೆಸುತ್ತಿದ್ದಾರೆ ಎಂದು ಈ ಹಿಂದೆಯೂ ಸಚಿವರೊಬ್ಬರು ಆರೋಪ ಮಾಡಿದ್ದರು. ರಿಯಲ್ ಎಸ್ಟೇಟ್‌ಗೆ ಸಂಬಂಧ ಪಟ್ಟ ಶಕ್ತಿಗಳೂ ಇದರ ಹಿಂದಿವೆ ಎಂದು ಅವರು ಅನುಮಾನಿಸುತ್ತಿದ್ದಾರೆ. ನಿಜಕ್ಕೂ ಕೃಷಿ ಹಿತಾಸಕ್ತಿಯೇ ಭೂಸ್ವಾಧೀನವನ್ನು ವಿರೋಧಿಸಲು ಕಾರಣವಾಗಿದ್ದರೆ ‘ಶಾಶ್ವತ ಕೃಷಿ ವಲಯ’ವನ್ನು ವಿರೋಧಿಸುವುದೇಕೆ? ಎನ್ನುವ ಪ್ರಶ್ನೆಯನ್ನು ಸರಕಾರ ಇದೀಗ ರೈತರ ಬಳಿ ಪರೋಕ್ಷವಾಗಿ ಇಟ್ಟಿದೆ. ಈ ಮೂಲಕ ರೈತ ಹೋರಾಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಾ ಬಂದಿರುವ ಭೂಮಿಯನ್ನು ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಎನ್ನುವ ಹಕ್ಕು ರೈತರದು ಎನ್ನುವುದನ್ನು ಸರಕಾರ ಮರೆಯಬಾರದು. ಅವರು ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವುದು ಕೆಐಎಡಿಬಿಗೆ ಭೂಮಿ ನೀಡುವುದಿಲ್ಲ ಎಂದು. ದೇವನಹಳ್ಳಿಯಲ್ಲಿ ಭೂಮಿ ಅತ್ಯಂತ ಬೆಲೆ ಬಾಳುತ್ತದೆ. ನಾಳೆ ಯಾವುದೇ ಸಂಕಟ ಬಂದಾಗ ತನ್ನ ಭೂಮಿಯನ್ನು ಯಾರಿಗಾದರೂ ಮಾರಬೇಕೆಂದು ರೈತ ಬಯಸಿದರೆ ಅದಕ್ಕೆ ಸರಕಾರದ ಅನುಮತಿಯನ್ನು ಯಾಕೆ ಕೇಳಬೇಕು? ಕೃಷಿ ಕ್ಷೇತ್ರಕ್ಕೂ ಬಂಡವಾಳ ಹರಿದು ಬರುವ ಬಗ್ಗೆ ಸರಕಾರ ಮಾತನಾಡುತ್ತಿದೆ. ಅಂದರೆ, ಭವಿಷ್ಯದಲ್ಲಿ ಕಾರ್ಪೊರೇಟ್ ದೊರೆಗಳು ಈ ಕೃಷಿಯ ನೇತೃತ್ವವನ್ನು ವಹಿಸಿಕೊಳ್ಳುವುದಿದ್ದರೆ ಈ ರೈತರು ಅವರಿಗೆ ತಮ್ಮ ಜಮೀನನ್ನು ನೀಡುವ ಸಂದರ್ಭವೂ ಒದಗಿ ಬರಬಹುದು. ದೇವನಹಳ್ಳಿಯ ಭೂಸ್ವಾಧೀನದ ಕುರಿತಂತೆ ಸರಕಾರದ ನಿರ್ಧಾರ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ತಂತ್ರವಾಗಿದೆ. ಸರಕಾರ ಭೂಮಿಯನ್ನು ವಶಪಡಿಸಿಕೊಳ್ಳುವ ತನ್ನ ಉದ್ದೇಶದಿಂದ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X