Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಧೂಳು ಕೊಡವಿಕೊಂಡ ‘ಧರ್ಮಸ್ಥಳ ಫೈಲ್’

ಧೂಳು ಕೊಡವಿಕೊಂಡ ‘ಧರ್ಮಸ್ಥಳ ಫೈಲ್’

ವಾರ್ತಾಭಾರತಿವಾರ್ತಾಭಾರತಿ21 July 2025 7:15 AM IST
share
ಧೂಳು ಕೊಡವಿಕೊಂಡ ‘ಧರ್ಮಸ್ಥಳ ಫೈಲ್’

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೊನೆಗೂ ಧರ್ಮಸ್ಥಳ ಫೈಲ್ ಧೂಳು ಕೊಡವಿಕೊಂಡಿದೆ. ಸರಣಿ ಹತ್ಯೆ ಮತ್ತು ಸಮಾಧಿಗೆ ಸಂಬಂಧಿಸಿದ ದೂರಿನ ಗೋರಿಯನ್ನು ಅಗೆಯುವುದಕ್ಕೆ ಸರಕಾರ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ‘ಹತ್ಯೆಗೀಡಾದ ನೂರಾರು ಮೃತದೇಹಗಳನ್ನು ಹೂತು ಹಾಕಲು ಸಹಕರಿಸಿದ್ದೇನೆ’ ಎಂದು ವ್ಯಕ್ತಿಯೊಬ್ಬ ಸಾಕ್ಷಿ ಹೇಳಲು ನ್ಯಾಯಾಲಯದ ಮುಂದೆ ಬಂದ ದಿನದಿಂದ ‘ಧರ್ಮಸ್ಥಳ’ ಎನ್ನುವ ಊರು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗತೊಡಗಿತು. ಈ ಆರೋಪ ಕೇಳಿ ಬಂದಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಂತೂ ಬೂದಿ ಮುಚ್ಚಿದ ಕೆಂಡದಂತಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಧರ್ಮಸ್ಥಳದ ಅಸ್ಥಿಪಂಜರಗಳ ಕತೆಗಳು ರೆಕ್ಕೆ ಪುಕ್ಕಗಳನ್ನು ಪಡೆದುಕೊಳ್ಳುತ್ತಿದ್ದವು. ವಿಪರ್ಯಾಸವೆಂದರೆ, ಇಷ್ಟೆಲ್ಲ ನಡೆಯುತ್ತಿದ್ದರೂ ರಾಜ್ಯದ ಗೃಹ ಸಚಿವರು ಮಾತ್ರ ‘‘ನನ್ನ ಗಮನಕ್ಕೆ ಬಂದಿಲ್ಲ. ಎಲ್ಲ ಪ್ರಕರಣಗಳು ನನ್ನ ಗಮನಕ್ಕೆ ಬರಬೇಕು ಎಂದಿಲ್ಲ’’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಜಾರಿಕೊಂಡಿದ್ದರು. ಆದರೆ ಪರಿಸ್ಥಿತಿ ಕೈ ಮೀರುತ್ತಿದೆ ಎನ್ನುವುದು ಅರ್ಥವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ ತನಿಖೆಗೆ ಆದೇಶವನ್ನು ನೀಡಿದ್ದಾರೆ.

ದೂರು ಬಂದ ದಿನದಿಂದ ಜಿಲ್ಲಾ ಪೊಲೀಸ್ ವರಿಷ್ಠರು ನೀಡುತ್ತಿರುವ ಹೇಳಿಕೆಗಳಲ್ಲಿ ‘ತನಿಖೆಗೆ’ ತೋರುತ್ತಿರುವ ಹಿಂಜರಿಕೆ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಪ್ರಕರಣ ಒಂದು ತಲೆಬುರುಡೆಗೆ ಸಂಬಂಧಿಸಿದ್ದಾಗಿದ್ದರೆ ಅಥವಾ ಯಾರೋ ಒಬ್ಬ ಕ್ರಿಮಿನಲ್ ಎಂದೋ ಎಸಗಿ ಬಿಟ್ಟ ಕೃತ್ಯಕ್ಕೆ ಸಂಬಂಧಿಸಿದ್ದಾಗಿದ್ದರೆ ಜಿಲ್ಲಾ ಪೊಲೀಸರು ತನಿಖೆಗೆ ಹಿಂಜರಿಯುತ್ತಿರಲಿಲ್ಲ. ಆದರೆ ಈ ದೂರು ಕೇವಲ ಅಪರಾಧ ಪ್ರಕರಣವಾಗಿಯಷ್ಟೇ ಚರ್ಚೆಯಾಗುತ್ತಿಲ್ಲ. ಇದಕ್ಕೆ ಬೇರೆ ಬೇರೆ ರೀತಿಯ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಮುಖಗಳಿವೆ. ದೂರನ್ನು ಆಧರಿಸಿ ಒಮ್ಮೆ ಯಾವುದೋ ಒಂದು ಸಮಾಧಿಯನ್ನು ಅಗೆಯಲು ಶುರು ಹಚ್ಚಿದರೆ ಈ ಅಗೆತ ಇನ್ನಷ್ಟು ಸಮಾಧಿಗಳ ಕತೆಗಳನ್ನು ತೆರೆದಿಡುವ ಸಾಧ್ಯತೆಗಳಿವೆ ಎನ್ನುವ ಆತಂಕ ಜಿಲ್ಲಾ ಪೊಲೀಸರನ್ನೂ ಕಾಡುತ್ತಿರಬೇಕು. ಒಮ್ಮೆ ಸಮಾಧಿ ತೆರೆದುಕೊಂಡರೆ ಅದು ಸಮಾಜದಲ್ಲಿ ಉದ್ವಿಗ್ನತೆಯನ್ನು, ಆತಂಕವನ್ನು ಸೃಷ್ಟಿಸಬಹುದು ಎನ್ನುವ ಭಯವೂ ಅವರಿಗಿತ್ತು. ಆದುದರಿಂದ ಸ್ಥಳೀಯ ಪೊಲೀಸರು ತನಿಖೆಗೆ ಮೀನಾಮೇಷ ಎಣಿಸುತ್ತಿದ್ದರು. ಬಾಯಿ ಮಾತಿಗೆ ಮೇಲಿನಿಂದ ಆದೇಶ ಬರಬೇಕು, ಸುಪ್ರೀಂಕೋರ್ಟ್‌ನ ಮಾರ್ಗದರ್ಶನ ಬೇಕು, ಮಂಪರು ಪರೀಕ್ಷೆಯಾಗಬೇಕು ಎಂದು ಕುಂಟು ನೆಪಗಳನ್ನು ಮುಂದಿಡುತ್ತಿದ್ದರು. ಸಾಕ್ಷಿಯು ಸ್ಥಳ ಮಹಜರಿಗೆ ಸಿದ್ಧನಾಗಿ ಬಂದಿದ್ದರೂ ಪೊಲೀಸರು ಅದಕ್ಕೆ ಸಿದ್ಧರಿಲ್ಲದೇ ಇರುವುದು ಕೂಡ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿತು. ಸ್ಥಳ ಮಹಜರು ನಡೆಸಿದ ಬಳಿಕ ‘ಸಾಕ್ಷಿ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ’ ಎಂಬ ಎಸ್ಪಿಯವರ ಹೇಳಿಕೆ ಪರೋಕ್ಷವಾಗಿ ಸಾಕ್ಷಿಯನ್ನೇ ‘ಆರೋಪಿ’ಯನ್ನಾಗಿಸುವ ದುರುದ್ದೇಶ ಹೊಂದಿದಂತಿತ್ತು.

ತಡವಾಗಿಯಾದರೂ ಸರಕಾರ ‘ಸಿಟ್’ ರಚನೆಯ ಅಗತ್ಯವನ್ನು ಮನಗಂಡಿರುವುದು ಸಮಾಧಾನ ತರುವಂತಿದೆ. ಬಹುಶಃ ಇನ್ನೂ ತಡ ಮಾಡಿದ್ದರೆ, ಜನರು ಬೀದಿಗಿಳಿಯುವ ಸಾಧ್ಯತೆಗಳಿದ್ದವು. ಸಿಟ್ ತಂಡದ ನೇತೃತ್ವವನ್ನು ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ ಮೊಹಾಂತಿ ಅವರಿಗೆ ನೀಡಿರುವುದೂ ಶ್ಲಾಘನೀಯ. ಸಿಟ್‌ನಲ್ಲಿರುವ ಅಷ್ಟೂ ಅಧಿಕಾರಿಗಳ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯಗಳಿವೆ. ಪ್ರಕರಣಕ್ಕೆ ಅಧಿಕಾರಿಗಳು ನ್ಯಾಯ ನೀಡಬಹುದು ಎನ್ನುವ ಸಣ್ಣದೊಂದು ಭರವಸೆ ಜನರಲ್ಲಿ ಮೂಡಿದೆ. ಸಾಕ್ಷಿ ಈಗಾಗಲೇ ಸ್ಥಳ ಮಹಜರು ನಡೆಸಲು ಹಲವು ಬಾರಿ ಕೇಳಿ ಕೊಂಡಿದ್ದಾನೆ. ಆದರೆ ಪೊಲೀಸರು ಸಿದ್ಧರಿರಲ್ಲ. ಆತ ನೀಡಿದ ದೂರಿನಲ್ಲಿ ಸತ್ಯಾಂಶವೆಷ್ಟಿದೆ ಎನ್ನುವುದು ಬಹಿರಂಗವಾಗ ಬೇಕಾದರೆ ಆತನನ್ನು ಸ್ಥಳಕ್ಕೆ ಕೊಂಡೊಯ್ದು, ಆತ ತೋರಿಸಿದ ಸಮಾಧಿಗಳನ್ನು ಅಗೆಯುವ ಕೆಲಸ ನಡೆಯಬೇಕು. ಇದು ತಡವಾದಷ್ಟೂ ಅದರ ಲಾಭವನ್ನು ಆರೋಪಿಗಳು ತಮ್ಮದಾಗಿಸಿಕೊಳ್ಳುತ್ತಾರೆ. ಸಾಕ್ಷಿಯು ಯಾವುದೇ ಅಧಿಕೃತ ಸ್ಮಶಾನದಲ್ಲಿರುವ ಸಮಾಧಿಗಳ ಬಗ್ಗೆ ಮಾತನಾಡುತ್ತಿಲ್ಲ. ಧರ್ಮಸ್ಥಳದ ಕಾಡು ಪ್ರದೇಶದಲ್ಲಿ ತಾನು ಹೂತಿರುವ ಮೃತದೇಹಗಳ ಬಗ್ಗೆ ಮಾತನಾಡುತ್ತಿದ್ದಾನೆ. ಆತ ಹೇಳುವುದರಲ್ಲಿ ಎಷ್ಟು ಸತ್ಯವಿದೆ ಎನ್ನುವುದು ಗೊತ್ತಾಗುವುದೇ ಅಲ್ಲಿ ಅಸ್ಥಿಪಂಜರಗಳು ಪತ್ತೆಯಾದ ಬಳಿಕ. ಅದಾದ ಮೇಲೆ ಆ ಅಸ್ಥಿ ಪಂಜರಗಳ ಹಿನ್ನೆಲೆಯನ್ನು ಪತ್ತೆ ಹಚ್ಚಬೇಕಾಗ್ತಿದೆ.

ಸಾಕ್ಷಿ ಹೇಳಲು ಬಂದಿರುವ ವ್ಯಕ್ತಿಯ ಜೀವಕ್ಕೆ ಭದ್ರತೆ ನೀಡುವುದು ತನಿಖಾಧಿಕಾರಿಗಳ ಕರ್ತವ್ಯವಾಗಿದೆ. ಯಾಕೆಂದರೆ, ಈ ತನಿಖೆ ತೆರೆದುಕೊಂಡಿರುವುದೇ ಅಪರಾಧದಲ್ಲಿ ಪರೋಕ್ಷವಾಗಿ ಭಾಗಿಯಾಗಿರುವ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಳ್ಳುವ ಮೂಲಕ. ಆತ ಪೊಲೀಸ್ ಇಲಾಖೆಯ ಮೇಲೆ ನಂಬಿಕೆಯಿಟ್ಟು ಹೇಳಿಕೆ ನೀಡಲು ಮುಂದೆ ಬಂದಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಪೊಲೀಸರ ಬಹುದೊಡ್ಡ ಹೊಣೆಗಾರಿಕೆಯಾಗಿದೆ. ಈ ಪ್ರಕರಣದ ಹಿಂದೆ ಇರುವ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಸಾಕ್ಷಿದಾರ ಜೀವಂತವಿರುವುದು ಅತ್ಯಗತ್ಯ. ಈಗಾಗಲೇ ‘ಸಾಕ್ಷಿದಾರ ತಲೆಮರೆಸಿಕೊಳ್ಳುವ ಬಗ್ಗೆ ಗುಪ್ತ ಮಾಹಿತಿ ದೊರೆತಿದೆ’ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ‘ತಲೆಮರೆಸುವುದು’ ಎಂದರೆ ಏನು? ಇಲ್ಲಿ ಸಾಕ್ಷಿಯು ಭೂಗತವಾಗುವುದು ಒಂದಾದರೆ, ಆತನನ್ನು ಕೆಲವು ಶಕ್ತಿಗಳು ಭೂಗತವಾಗಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಒಂದು ವೇಳೆ ಈತನ ಜೀವಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಪೊಲೀಸ್ ಇಲಾಖೆ ಭಾರೀ ಬೆಲೆ ತೆರಬೇಕಾಗಬಹುದು.

ಸಿಟ್ ತಂಡ ‘ಸೌಜನ್ಯಾ ಪ್ರಕರಣ’ವನ್ನು ತನಿಖೆ ನಡೆಸುವುದಿಲ್ಲ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಮುಖ್ಯವಾಗಿ ಈಗ ತೆರೆದುಕೊಂಡಿರುವ ಹೊಸ ಪ್ರಕರಣಗಳಲ್ಲಿ ಒಂದಿಷ್ಟು ಸತ್ಯವಿದೆ ಎಂದಾದರೂ, ನೂರಾರು ಸೌಜನ್ಯಾ ಪ್ರಕರಣಗಳು ಜೀವ ಪಡೆದುಕೊಳ್ಳುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ, ಅದು ರಾಜ್ಯವನ್ನು ಮಾತ್ರವಲ್ಲ, ಇಡೀ ದೇಶವನ್ನೇ ಅಲುಗಾಡಿಸಬಹುದು. ಈ ನಿಟ್ಟಿನಲ್ಲಿ ಈ ಪ್ರಕರಣಕ್ಕಿರುವ ಸಾಮಾಜಿಕ, ರಾಜಕೀಯ, ಧಾರ್ಮಿಕ ಆಯಾಮಗಳ ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಂಡು ಸಿಟ್ ತಂಡ ತನಿಖೆ ಮಾಡಬೇಕು. ಅಂತಹದೊಂದು ಪ್ರಾಮಾಣಿಕ, ದಿಟ್ಟ ತನಿಖೆಗೆ ನಮ್ಮನ್ನಾಳುವ ರಾಜಕೀಯ ನಾಯಕರು ಎಷ್ಟರಮಟ್ಟಿಗೆ ಅವಕಾಶ ಕೊಟ್ಟಾರು ಎನ್ನುವ ಅನುಮಾನ ಮಾತ್ರ ಜನರಲ್ಲಿ ಇನ್ನೂ ಉಳಿದುಕೊಂಡಿದೆ. ಆ ಅನುಮಾನವನ್ನು ನಿವಾರಿಸುವ ಹೊಣೆಗಾರಿಕೆ ಆಡಳಿತ ಮತ್ತು ವಿರೋಧ ಪಕ್ಷ ನಾಯಕರದ್ದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X