Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಡಿಕೆಶಿ ಬೀಸಿದ ಬಲೆಗೆ ಬಿದ್ದೀತೆ...

ಡಿಕೆಶಿ ಬೀಸಿದ ಬಲೆಗೆ ಬಿದ್ದೀತೆ ಮಂಗಳೂರಿನ ಮೀನು?

ವಾರ್ತಾಭಾರತಿವಾರ್ತಾಭಾರತಿ21 Sept 2026 7:50 AM IST
share
ಡಿಕೆಶಿ ಬೀಸಿದ ಬಲೆಗೆ ಬಿದ್ದೀತೆ ಮಂಗಳೂರಿನ ಮೀನು?

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸೆಪ್ಟಂಬರ್ 18ರಂದು ನಡೆದಿರುವುದು ನಿಸ್ಸಂದೇಹವಾಗಿಯೂ ಒಂದು ಪ್ರಮುಖ ಬೆಳವಣಿಗೆ. ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರನ್ನು ಮೀರಿ ಯೋಚಿಸುವ ಉದ್ದೇಶದೊಂದಿಗೆ ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲೂ ರಾಜಧಾನಿಯಿಂದ ಆಚೆ ಕಲಬುರಗಿ, ಮಲೆ ಮಹದೇಶ್ವರ ಬೆಟ್ಟ ಮತ್ತು ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಗಳು ನಡೆದಿದ್ದವು. ಈಗ ಸರಕಾರ ಈ ಸಂಪುಟ ಸಭೆಯ ಮೂಲಕ ತುಳುನಾಡಿನ ಜನರ ಬಹುಕಾಲದ ಹಂಬಲಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದೆ. ಕರಾವಳಿಯನ್ನು ಬಹುತೇಕ ಕೋಮುವಾದದ ಉರಿಯೊಲೆಯಾಗಿ ಮಾತ್ರ ಬಳಸುತ್ತ ಬಂದಿರುವ ಬಿಜೆಪಿಗೆ ಬಹುಶಃ ಇದು ಹೊಟ್ಟೆಯುರಿಸುವ ವಿಷಯವಾಗಲೂಬಹುದು. ಅದೇನೇ ಇದ್ದರೂ, ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಿಂದ ನಿಜವಾಗಿಯೂ ದಕ್ಷಿಣ ಕನ್ನಡಕ್ಕೆ ಉಪಕಾರವಾಯಿತೆ ಎಂಬ ಪ್ರಶ್ನೆಯನ್ನು ಬದಿಗೆ ಸರಿಸಲಾಗದು. ನಾವು ಜನರ ಭಾವನೆ ಮೇಲಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂಬ ಮುಖ್ಯಮಂತ್ರಿಯ ಮಾತು ದಕ್ಷಿಣ ಕನ್ನಡದ ಬದುಕುಗಳ ನಾಡಿಮಿಡಿತವನ್ನು ಗ್ರಹಿಸುತ್ತದೆಯೇ ಎಂದು ನೋಡಬೇಕಿದೆ.

ಈ ಸಂಪುಟ ಸಭೆಯಲ್ಲಿ ಸರಕಾರ ತುಳು ಭಾಷೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ಎರಡನೇ ಆಡಳಿತ ಭಾಷೆಯಾಗಿ ಘೋಷಿಸಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಮತ್ತು ಜಾಗತಿಕವಾಗಿ ಒಂದು ಕೋಟಿಗೂ ಹೆಚ್ಚು ಜನರ ಆಡುನುಡಿಯಾಗಿರುವ ತುಳು ಭಾಷೆಗೆ ಇದು ಸಲ್ಲಬೇಕಿದ್ದ ಗೌರವ. ದಕ್ಷಿಣ ಕನ್ನಡಕ್ಕೆ ಮಂಗಳೂರು ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನೂ ಸರಕಾರ ಗಮನಿಸಿದೆ. ಇದಲ್ಲದೆ, ಮೀನುಗಾರಿಕಾ ವಿಶ್ವವಿದ್ಯಾನಿಲಯ, 549 ಕೋಟಿ ರೂ ವೆಚ್ಚದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಕರಾವಳಿ ಅಭಿವೃದ್ಧಿಗೆ 32,611 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕೈಗೊಂಡ 60 ತೀರ್ಮಾನಗಳಲ್ಲಿ 40 ನಿರ್ಧಾರಗಳು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿವೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಪ್ರವಾಸಿ ನಗರ, ರೆಸಾರ್ಟ್, ಕರಾವಳಿಯ ದ್ವೀಪಗಳನ್ನು ಜಾಗತಿಕ ಪ್ರವಾಸಿ ತಾಣವಾಗಿಸುವುದು, ಜಲ ಮೆಟ್ರೋ ಯೋಜನೆ ಇಂಥ ಪ್ರವಾಸೋದ್ಯಮ ಯೋಜನೆಗಳತ್ತ ಹೆಚ್ಚು ಒತ್ತು ಕೊಟ್ಟಿರುವುದರ ಹಿಂದೆ ಮುಖ್ಯಮಂತ್ರಿಯವರ ‘ಉದ್ಯಮಿ ನಿಲುವು’ ಕೂಡ ಇದ್ದಿರಬಹುದು. ಇಂಥ ಘೋಷಣೆಗಳ ಹೊತ್ತಿನಲ್ಲೆಲ್ಲ ಏಳುವ ಮೊದಲ ಅನುಮಾನವೆಂದರೆ, ಅವು ಘೋಷಣೆಯ ಮಟ್ಟದಲ್ಲಿಯೇ ಉಳಿದುಬಿಡುತ್ತವೆಯೆ ಎಂಬುದು. ಎರಡನೆಯದಾಗಿ, ಅಭಿವೃದ್ಧಿ ಯೋಜನೆಗಳು ಅಗತ್ಯ, ನಿಜ. ಆದರೆ ಅವು ಯಾರ ಅಭಿವೃದ್ದಿಯನ್ನು ಗಮನದಲ್ಲಿಟ್ಟಿವೆ ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಕರಾವಳಿಯಲ್ಲಿ ನಿಂತು ಘೋಷಿಸಿದ್ದೆಲ್ಲವೂ ಕರಾವಳಿಗೇ ಸಲ್ಲುತ್ತದೆಂದು ಭ್ರಮಿಸಲು ಸಾಧ್ಯವಿಲ್ಲ. ಅದರಾಚೆಗಿನ ಲಾಭದ ಆಕಾಂಕ್ಷೆಗಳ ಸುಳಿವುಗಳೂ ಇಂಥ ಯೋಜನೆಗಳ ಥಳುಕಿನಡಿಯೇ ಕಾಣಿಸುತ್ತಿರುತ್ತವೆ.

ದಕ್ಷಿಣ ಕನ್ನಡಕ್ಕೆ ಜನರ ಹಿತದೃಷ್ಟಿಯಿಂದ ಬೇಕಿರುವುದೇನು ಎಂದು ಕೇಳಿಕೊಳ್ಳದೇ ಹೋದರೆ, ಈಗಿನ ಘೋಷಣೆಗಳು ಸ್ಪಂದನೆಯೆನ್ನಿಸದೇ, ರಾಜಕಾರಣ ಮಾತ್ರವಾಗುವ ಅಪಾಯವಿದೆ. ಈಗಿನ ದೂರುಗಳನ್ನು ಗಮನಿಸಿದರೆ, ದಕ್ಷಿಣ ಕನ್ನಡದಂಥ ಜಿಲ್ಲೆಗೆ ಉತ್ತರ ಭಾರತದಿಂದ ಕಾರ್ಮಿಕರು ಮತ್ತು ಗುತ್ತಿಗೆದಾರರು ದೊಡ್ಡ ಪ್ರಮಾಣದಲ್ಲಿ ವಲಸೆ ಬರುತ್ತಿರುವಾಗ, ಇಲ್ಲಿನ ಯುವಕರು ಉದ್ಯೋಗ ಹುಡುಕಿಕೊಂಡು ಇನ್ನಾವುದೋ ನಗರ, ಗಲ್ಫ್‌ನಂಥ ಇನ್ನಾವುದೋ ದೇಶಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಜಿಲ್ಲೆಯ ಜನರು ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳಿಗೆ ಬೇಡಿಕೆಯಿಟ್ಟಿದ್ದಾರೆ. ತಾಲೂಕು ಆಸ್ಪತ್ರೆಗಳಿಗಾಗಿ ಕೇಳುತ್ತಿದ್ದಾರೆ. ಇರುವ ಸರಕಾರಿ ಆಸ್ಪತ್ರೆಗಳ ಸ್ಥಿತಿಯೂ ಸರಿಯಿಲ್ಲ. ಸುಳ್ಯ, ಪುತ್ತೂರು ಭಾಗದ ಪ್ರಮುಖ ಬೆಳೆಗಳಾದ ಅಡಿಕೆ, ರಬ್ಬರ್ ಮತ್ತು ಗೋಡಂಬಿ ಕೃಷಿಗೆ ಪೂರಕವಾಗಿ ಸಂರಕ್ಷಣೆ ಮತ್ತು ಮೌಲ್ಯವರ್ಧನಾ ಘಟಕಗಳಿಗಾಗಿ ಬೇಡಿಕೆಯಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಪ್ರವಾಸೋದ್ಯಮ ಯೋಜನೆಗಳೂ ಸೇರಿ ಕೃಷಿ ಮತ್ತು ಸಮುದ್ರ ಆಧಾರಿತ ಎಲ್ಲ ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಬೇಕಿದೆ. ಜಿಲ್ಲೆಯ ಕರಾವಳಿ ತೀರಗಳಲ್ಲಿನ ಗಂಭೀರ ಸಮಸ್ಯೆಯಾಗಿರುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಅಗತ್ಯವಿದೆ. ‘ಬ್ಲೂ ಇಕಾನಮಿ’ ಬಗ್ಗೆ ಯೋಚಿಸುತ್ತಿರುವ ಸರಕಾರ ಮೀನುಗಾರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ನೂರೆಂಟಿರುವುದನ್ನೂ ಗಮನಿಸಬೇಕಿದೆ. ಅಳಿವೆ ಬಾಗಿಲಿನ ಹೂಳೆತ್ತುವಿಕೆ, ಬಂದರಿನಲ್ಲಿ ದೋಣಿ ನಿಲುಗಡೆಗೆ ಇರುವ ಸಮಸ್ಯೆ ಮಾತ್ರವಲ್ಲದೆ, ಆಳ ಸಮುದ್ರ ಮೀನುಗಾರರ ತುರ್ತು ಸ್ಥಿತಿಯಲ್ಲಿ ಒದಗಲು ಸೀ ಆಂಬುಲೆನ್ಸ್’ ಬಗ್ಗೆ ಯೋಚಿಸಬೇಕಿದೆ. ಮುಖ್ಯಮಂತ್ರಿ ಮೀನುಗಾರರ ಅಹವಾಲು ಆಲಿಸಿದರೆಂಬುದು ಮೆಚ್ಚುವಂಥ ವಿಷಯ. ಆದರೆ ದೊಡ್ಡ ಯೋಜನೆಗಳ ಗದ್ದಲದಲ್ಲಿ, ಈ ಪ್ರದೇಶದ ಸಾಮಾನ್ಯ ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ವಸತಿ ಸೌಲಭ್ಯ ಒದಗಿಸುವುದನ್ನು ಮರೆಯಬಾರದು.

ಅಭಿವೃದ್ಧಿ ಯೋಜನೆಗಳು ಎಂದೊಡನೆ ಆತಂಕವಾಗುವುದೇ ಅವು ಕಾರ್ಪೊರೇಟ್‌ಗಳನ್ನು ಸಾಕುವುದಕ್ಕೊಂದು ನೆಪವಾಗುತ್ತಿರುವ ಸನ್ನಿವೇಶವಿರುವುದಕ್ಕೆ. ಎಷ್ಟೋ ಸಲ ಪ್ರಗತಿಯ ಹೆಸರಲ್ಲಿ ನಡೆಯುತ್ತಿರುವುದೆಲ್ಲವೂ ಆ ಪ್ರದೇಶದ ಜನರಿಗೆ ಪ್ರಯೋಜನವಾಗುವುದು ಹಾಗಿರಲಿ, ಅವರ ಬದುಕನ್ನೇ ಕಸಿಯುವುದಿದೆ. ಒಂದು ವೇಳೆ ಜನರಿಗೆ ಉಪಯೋಗವಾಗುವಂತಿದ್ದರೂ, ಅದು ಎಲ್ಲಾ ಸಮುದಾಯಗಳನ್ನು ತಲುಪದೇ ಉಳಿಯುವುದಿದೆ. ಪ್ರವಾಸೋದ್ಯಮದಂಥ ಯೋಜನೆಗಳು ದೊಡ್ಡ ಆಕರ್ಷಣೆಯಾಗುವಾಗಲೇ, ಪರಿಸರದ ದೃಷ್ಟಿಯಿಂದ ಪ್ರಶ್ನೆಗಳು ಸಾಕಷ್ಟಿರುತ್ತವೆ. ಇದೆಲ್ಲವನ್ನೂ ವಿವೇಚಿಸಿ, ಜನರ ಬದುಕನ್ನು ಮುಟ್ಟುವ ನಿಟ್ಟಿನಲ್ಲಿ ಸರಕಾರ ನಡೆಯಬೇಕಿದೆ.

ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್, ಘೋಷಣೆಗಳೆಲ್ಲವೂ ಕಾಗದದ ಮೇಲೆಯೇ ಉಳಿಯಲಿವೆ ಎಂದು ಬಿಜೆಪಿಗರು ಟೀಕಿಸುವಲ್ಲಿನ ರಾಜಕಾರಣ ಬೇರೆ. ಕಡೇಪಕ್ಷ ಈ ಸರಕಾರ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸುವ ಮೂಲಕ, ಕರಾವಳಿಯ ಜನಮಾನಸದ ಕಡಲ ಮೊರೆತವನ್ನು ಆಲಿಸಿದೆ. ಅಲ್ಲಿ ಅಭಿವೃದ್ಧಿಯ ಸಾಧ್ಯತೆಗಳನ್ನು ನೋಡಿದೆ. ಆದರೆ, ಘೋಷಣೆಗಳು ಮಾತ್ರವೇ ಸಾಕಾಗುವುದಿಲ್ಲ. ಆ ಘೋಷಣೆಗಳನ್ನು ಜನರ ಅಗತ್ಯಕ್ಕೆ ತಕ್ಕಂತೆ ಒಗ್ಗಿಸಿ ತ್ವರಿತವಾಗಿ ವಾಸ್ತವಕ್ಕಿಳಿಸುವುದು ಮುಖ್ಯ. ಇನ್ನೂ ಹತ್ತು ಹನ್ನೆರಡು ಕಡೆ ಸಂಪುಟ ಸಭೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಹೇಳಿದ್ದಾರೆ. ಆ ಧಾವಂತದಲ್ಲಿ ಈಗಿನ ಭರವಸೆಗಳನ್ನು ಮರೆಯುತ್ತ ಹೋದರೆ, ಇಂಥ ಸಂಪುಟ ಸಭೆಗಳು ಶೋಕಿ ಮಾತ್ರವಾಗಿ, ಕಡೆಗೆ ಭಾವನೆಗಳ ಮೇಲಿನ ರಾಜಕಾರಣ ಮಾತ್ರವಾಗಿ, ‘ಅಂಬಾರಿ’ಯಲ್ಲಿ ಬಂದವರು ಏನೂ ಕೊಡದೇ ಹೋದರು ಎಂಬ ಅಪವಾದವೇ ಉಳಿದೀತು.

Tags

MangaloreDKShivakumarKarnataka Cabinet
share
ವಾರ್ತಾಭಾರತಿ
ವಾರ್ತಾಭಾರತಿ
Next Story
X