Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕೃಷ್ಣ ಕಿರೀಟದ ಗರಿಗಳು-ಕರಿಗಳು!

ಕೃಷ್ಣ ಕಿರೀಟದ ಗರಿಗಳು-ಕರಿಗಳು!

ವಾರ್ತಾಭಾರತಿವಾರ್ತಾಭಾರತಿ11 Dec 2024 8:38 AM IST
share
ಕೃಷ್ಣ ಕಿರೀಟದ ಗರಿಗಳು-ಕರಿಗಳು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಸಮಾಜವಾದಿ, ಮಾಜಿ ಕಾಂಗ್ರೆಸ್ವಾದಿ ಹೀಗೆ ಹತ್ತು ಹಲವು ‘ಮಾಜಿ’ಗಳನ್ನು ಧರಿಸಿಕೊಂಡು ರಾಜಕೀಯವಾಗಿ ನಿವೃತ್ತರಾಗಿದ್ದ ಎಸ್. ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಬಲಾಢ್ಯ ಜಾತಿಯಿಂದ, ರಾಜಕೀಯ ಹಿನ್ನೆಲೆಯಿರುವ ಕುಟುಂಬದಿಂದ ಬಂದ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಟ್ಟ ಕೊಡುಗೆಗಳು ಎಂದಿಗೂ ಸ್ಮರಿಸಲ್ಪಡುವಂಥವುಗಳು. ಐಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟದ್ದು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ. ಬೆಂಗಳೂರನ್ನು ಇನ್ನೊಂದು ಸಿಂಗಾಪುರ ಮಾಡುತ್ತೇನೆ ಎಂದು ಹೊರಟು, ರಾಜ್ಯವನ್ನು ಮರೆತರು ಎಂಬ ಆರೋಪವೂ ಇವರ ಮೇಲಿದೆ. ಬೆಂಗಳೂರಿನ ಮೂಗಿನ ನೇರಕ್ಕೆ ಅವರ ಅಭಿವೃದ್ಧಿ ಕಾರ್ಯಗಳು ರೂಪುಗೊಳ್ಳುತ್ತಿದ್ದವು ಎನ್ನುವ ಟೀಕೆಗಳನ್ನು ಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಕಾರ್ಪೊರೇಟ್ ಧಣಿಗಳ ಮುದ್ದಿನ ಕೃಷ್ಣ ಎಂದು ಗುರುತಿಸಿಕೊಂಡ ಕಾರಣಕ್ಕೇ, ‘ಇಂಡಿಯಾ ಟುಡೇ’ಯಲ್ಲಿ ಇವರು ದೇಶದ ನಂ. 1 ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇವರ ಕಾಲದಲ್ಲಿ ಕರ್ನಾಟಕ ರೈತರ ಆತ್ಮಹತ್ಯೆಗೆ ಸುದ್ದಿಯಾಯಿತು. ಕಾವೇರಿ ಗದ್ದಲಗಳನ್ನು ನಿಭಾಯಿಸುವ ಸಂದರ್ಭದಲ್ಲೂ ಬಹಳಷ್ಟು ಮುಜುಗರದ ಸನ್ನಿವೇಶವನ್ನು ಕೃಷ್ಣ ಎದುರಿಸಬೇಕಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನಟ ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದೂ ಇವರ ಅಧಿಕಾರಾವಧಿಯಲ್ಲೇ. ಬರಗಾಲದಿಂದ ತತ್ತರಿಸಿದ ರೈತರ ಸಂಕಟಗಳಿಗೆ ಕೃಷ್ಣ ಧ್ವನಿಯಾಗಲಿಲ್ಲ ಎನ್ನುವ ಟೀಕೆಗಳು ಕೃಷ್ಣ ಕಿರೀಟದ ಗರಿಗಳಾಗಿವೆ. ೨೧ನೇ ಶತಮಾನವನ್ನು ಅದ್ದೂರಿಯಿಂದ ಸ್ವಾಗತಿಸುತ್ತಿದ್ದ ಕಾಲದಲ್ಲೇ ಕರ್ನಾಟಕವನ್ನು ಅದಕ್ಕೆ ಪೂರಕವಾಗಿ ಸಿದ್ಧಗೊಳಿಸುವ ಕನಸು ಕೃಷ್ಣ ಅವರು ಕಂಡಿದ್ದರು. ಖಾಸಗೀಕರಣ, ಉದಾರೀಕರಣಕ್ಕೆ ರಾಜ್ಯವನ್ನು ಪೂರ್ಣ ಸಜ್ಜುಗೊಳಿಸಿದ್ದೂ ಕೃಷ್ಣ ಅವರೇ. ಆದರೆ ಬೆಂಗಳೂರು ಸಿಂಗಾಪುರವಾಗುವುದಿರಲಿ, ಈಗಲೂ ಒಂದು ಮಳೆಯನ್ನು ತಾಳಿಕೊಳ್ಳುವುದಕ್ಕೆ ಈ ನಗರಕ್ಕೆ ಕಷ್ಟವಾಗುತ್ತಿದೆ. ಎಸ್. ಎಂ. ಕೃಷ್ಣ ಅವರ ರಾಜಕೀಯ ಕೊನೆಯ ದಿನಗಳಿಗೆ ವಿಷಾದಮಯ ರೂಪಕದಂತಿದೆ ಇಂದಿನ ಬೆಂಗಳೂರು.

ದೇವರಾಜ ಅರಸು ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸೇರಿದ ದಿನದಿಂದ ಎಸ್. ಎಂ. ಕೃಷ್ಣ ಅವರು ಇಂದಿರಾಗಾಂಧಿಗೆ ಹತ್ತಿರದವರಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಹಲವು ಅತ್ಯುನ್ನತ ಸ್ಥಾನಗಳನ್ನು ತನ್ನದಾಗಿಸುತ್ತಲೇ ಹೋದರು. ತನ್ನ ಇಳಿ ವಯಸ್ಸಿನಲ್ಲೂ ವಿದೇಶಾಂಗ ಸಚಿವ ಸ್ಥಾನವನ್ನು ವೈಯಕ್ತಿಕ ವರ್ಚಸ್ಸಿನ ಬಲದಿಂದ ತನ್ನದಾಗಿಸಿಕೊಂಡವರು. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಹುದ್ದೆಯ ಅಗತ್ಯವನ್ನು ಸೃಷ್ಟಿಸಿದ್ದೂ ಎಸ್. ಎಂ. ಕೃಷ್ಣ. ಹಿರಿಯ ನಾಯಕ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ, ಕೃಷ್ಣ ಅವರನ್ನು ಸಂತೈಸಲು ಕಾಂಗ್ರೆಸ್ ಹೈಕಮಾಂಡ್ ಅನಿವಾರ್ಯವಾಗಿ ಕೃಷ್ಣ ಅವರನ್ನು ಉಪಮುಖ್ಯಮಂತ್ರಿಯಾಗಿಸಿತು. ಅಲ್ಲಿಂದ ಅದೀಗ ರಾಜ್ಯದಲ್ಲಿ ಒಂದು ಅನಿವಾರ್ಯ ಹುದ್ದೆಯಾಗಿ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಕಾರ್ಪೊರೇಟ್ ಶಕ್ತಿಗಳು ಬೆಂಗಳೂರಿನಲ್ಲಿ ಬಲ ಪಡೆದವು. ಗ್ರಾಮೀಣ ಕರ್ನಾಟಕ ನಿರ್ಲಕ್ಷಿಸಲ್ಪಟ್ಟಿತು ಎನ್ನುವ ಮಾತುಗಳೂ ಇವೆ. ಇವುಗಳ ನಡುವೆಯೂ ಕೃಷ್ಣ ನೇತೃತ್ವದಲ್ಲಿ ರಾಜ್ಯದಲ್ಲಿ ಯಶಸ್ವೀ ಬಿಸಿಯೂಟ ಯೋಜನೆ ಆರಂಭವಾಯಿತು. ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಕ್ರಾಂತಿಕಾರಿಯಾದ ಪಾತ್ರವನ್ನು ನಿರ್ವಹಿಸಿತು. ಹಲವು ಟೀಕೆಗಳು ಕೇಳಿ ಬಂದಾಗಲೂ ಅವುಗಳನ್ನ್ನು ನಿರ್ಲಕ್ಷಿಸಿ ಶಾಲೆಯ ಹಿತ್ತಿಲಲ್ಲಿ ಬಿಸಿಯೂಟಕ್ಕೆ ಒಲೆ ಹಚ್ಚಿದರು ಕೃಷ್ಣ. ಉತ್ತರ ಕರ್ನಾಟಕದಲ್ಲಿ ಜಾರಿಗೊಂಡ ಯೋಜನೆ ನಿಧಾನಕ್ಕೆ ರಾಜ್ಯಾದ್ಯಂತ ವಿಸ್ತರಣೆಗೊಂಡಿತು. ಇತರ ರಾಜ್ಯಗಳಿಗೂ ಬಿಸಿಯೂಟ ಯೋಜನೆ ಮಾದರಿಯಾಯಿತು. ರೈತರ ಜಮೀನು ಡಿಜಿಟಲೀಕರಣ, ವಿಶ್ವೇಶ್ವರ ನಾಲೆಯ ಆಧುನೀಕರಣ, ಕೃಷ್ಣ ಜಲ ಭಾಗ್ಯ ನಿಗಮ, ಇಂಧನ ಇಲಾಖೆಯಲ್ಲಾದ ಸುಧಾರಣೆ ಕೃಷ್ಣ ಅವರ ಆಡಳಿತದ ಹೆಗ್ಗಳಿಕೆಗಳು. ಹಾಗೆಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಮೃದು ಹಿಂದುತ್ವದೆಡೆಗೆ ವಾಲಿದ್ದೂ ಕೃಷ್ಣ ಅಧಿಕಾರಾವಧಿಯಲ್ಲಿ. ನಾಡಗೀತೆಯನ್ನು ತಿರುಚಿ, ಕುವೆಂಪು ಅವರ ನಿಲುವಿಗೆ ವಿರುದ್ಧವಾಗಿ ಮಧ್ವರನ್ನು ಸೇರಿಸಿದ ಹೆಗ್ಗಳಿಕೆಯೂ ಇದೇ ಕೃಷ್ಣ ಅವರಿಗೆ ಸೇರಬೇಕು. ಈ ಕಾರಣಕ್ಕಾಗಿ ಕೃಷ್ಣ ಅವರಿಗೆ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಸನ್ಮಾನವೂ ಆಯಿತು. ಮುಖ್ಯಮಂತ್ರಿ ಕೃಷ್ಣ ಅವರ ಹೈಟೆಕ್ ಆಡಳಿತ ಮಾಧ್ಯಮಗಳಲ್ಲಿ ಸುದ್ದಿಯಾದರೂ, ಅದು ಕರ್ನಾಟಕದಲ್ಲಿ ಕಾಂಗ್ರೆಸ್ಗೆ ವಿಶೇಷ ಪ್ರಯೋಜನವನ್ನುಂಟು ಮಾಡಲಿಲ್ಲ. ಬಳಿಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತು. ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಯಿತು. ಈ ಮೈತ್ರಿ ರಾಜಕಾರಣ ರಾಜ್ಯದಲ್ಲಿ ಮುಂದೆ ಹಲವು ಆವಾಂತರಗಳಿಗೆ ಕಾರಣವಾಯಿತು.

ಒಬ್ಬ ಸುಶಿಕ್ಷಿತ, ಮುತ್ಸದ್ದಿ ರಾಜಕಾರಣಿಗೆ ಏನೆಲ್ಲ ಸಲ್ಲಬೇಕೋ ಅದೆಲ್ಲವೂ ಕೃಷ್ಣ ಅವರಿಗೆ ಕಾಂಗ್ರೆಸ್ನಿಂದ ಸಂದಿದೆ. ತೀರಾ ಇಳಿ ವಯಸ್ಸಿನಲ್ಲಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ಯುಪಿಎ ಸರಕಾರ ಮಾಡಿತು. ವಯಸ್ಸಿನ ಕಾರಣದಿಂದ ಹಲವು ತಪ್ಪುಗಳು ಘಟಿಸಿ ತಮಾಷೆಯ ವಸ್ತುವೂ ಆದರು. ಬಳಿಕ ವಯಸ್ಸಿನ ನಿಬಂಧನೆ ಹಾಕಿ, ಕಾಂಗ್ರೆಸ್ ಹೈಕಮಾಂಡ್ ಕೃಷ್ಣ ಅವರನ್ನು ಅಧಿಕಾರದಿಂದ ಹೊರಗಿಟ್ಟಾಗ ‘‘ನನ್ನನ್ನು ಕಾಂಗ್ರೆಸ್ನಲ್ಲಿ ಕಡೆಗಣಿಸಲಾಗಿದೆ’’ ಎನ್ನುವ ಪೊಳ್ಳು ನೆಪವನ್ನು ಮುಂದಿಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ರಾಜಕೀಯ ಬದುಕಿನುದ್ದಕ್ಕೂ ಸ್ಥಿತಪ್ರಜ್ಞರು ಎಂದೇ ಗುರುತಿಸಲ್ಪಟ್ಟಿದ್ದ ಕೃಷ್ಣ, ತನ್ನ ಇಳಿ ವಯಸ್ಸಿನಲ್ಲಿ ಆ ಸ್ಥಿಮಿತತೆಯನ್ನು ಕಳೆದುಕೊಂಡರು. ಆವರೆಗೆ ಅವರು ರಾಜಕೀಯದಲ್ಲಿ ಏನೆಲ್ಲ ಗಳಿಸಿಕೊಂಡಿದ್ದರೋ ಅದನ್ನು ಬಿಜೆಪಿಗೆ ಸೇರಿ ಕಳೆದುಕೊಂಡರು. ಕಾಂಗ್ರೆಸ್ ಕಡೆಗಣಿಸಿದೆ ಎನ್ನುವ ಕೃಷ್ಣ ಆರೋಪವನ್ನು ಬಿಜೆಪಿಯೊಳಗಿರುವ ನಾಯಕರೇ ಒಪ್ಪಿರಲಿಲ್ಲ. ಅವರ ಸೇರ್ಪಡೆಯನ್ನು ಕೆಲವು ಬಿಜೆಪಿಯ ನಾಯಕರೇ ವ್ಯಂಗ್ಯ ಮಾಡಿದ್ದರು. ಮುಖ್ಯವಾಗಿ, ತನ್ನನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಸೇರಿದ ಕೃಷ್ಣ ಅವರನ್ನು ಬಿಜೆಪಿ ಅದಕ್ಕಿಂತಲೂ ಹೀನಾಯವಾಗಿ ನಡೆಸಿಕೊಂಡಿತು. ರಾಜ್ಯಸಭೆಗೆ ಆಯ್ಕೆ ಮಾಡುತ್ತದೆ ಎನ್ನುವ ಅವರ ನಿರೀಕ್ಷೆ ಹುಸಿಯಾಯಿತು. ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ಬೆದರಿಸಿದ ಪರಿಣಾಮವಾಗಿ ಅವರು ಬಿಜೆಪಿಗೆ ಸೇರುವ ಸನ್ನಿವೇಶ ಸೃಷ್ಟಿಯಾಯಿತು ಎಂಬ ಮಾತುಗಳೂ ಇವೆ. ಹಾಗೆ ಪಕ್ಷಾಂತರ ಮಾಡುವ ಮೂಲಕ ಅಳಿಯನ ಅಕ್ರಮಗಳನ್ನು ಸಕ್ರಮಗೊಳಿಸಲು ಪ್ರಯತ್ನಿಸಿದ್ದರು. ಆದರೆ ಈ ಸೇರ್ಪಡೆಯಿಂದಲೂ ಕೃಷ್ಣ ಕುಟುಂಬಕ್ಕೆ ವಿಶೇಷ ಪ್ರಯೋಜನವಾಗಲಿಲ್ಲ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಅವರ ಅಳಿಯ ಕಾಫಿ ಡೇ ಮಾಲಕ ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಅವರ ರಾಜಕೀಯ ದುರಂತವನ್ನು ಇನ್ನಷ್ಟು ಭೀಕರವಾಗಿಸಿತು. ಬಳಿಕ ಹೆಸರಿಗಷ್ಟೇ ಬಿಜೆಪಿಯೊಳಗೆ ಓಡಾಡಿಕೊಂಡಿದ್ದರು.

ಮೇಲ್ನೋಟಕ್ಕೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದರು ಅನ್ನಿಸಿದರೂ, ಅವರು ತನಗೆ ತಾನೇ ಅನ್ಯಾಯ ಮಾಡಿಕೊಂಡಿದ್ದರು. ಸ್ವಯಂ ಇರಿದುಕೊಂಡಿದ್ದರು. ಯಾಕೆಂದರೆ, ಕೃಷ್ಣ ಕಾಂಗ್ರೆಸ್ ತೊರೆದ ಕಾರಣದಿಂದ ಕಾಂಗ್ರೆಸ್ ಏನನ್ನೂ ಕಳೆದುಕೊಳ್ಳಲಿಲ್ಲ. ಬಿಜೆಪಿಗೂ ಅದರಿಂದ ವಿಶೇಷ ಪ್ರಯೋಜನವಾಗಿರಲಿಲ್ಲ. ಯಾಕೆಂದರೆ, ಒಕ್ಕಲಿಗ ಸಮುದಾಯದಲ್ಲಿ ತಳಸ್ತರದ ಸಂಪರ್ಕವನ್ನು ಅವರು ಎಂದೋ ಕಳೆದುಕೊಂಡಿದ್ದರು. ತನ್ನ ಜೊತೆಗೆ ತನ್ನ ಸಮುದಾಯದ ಮತಗಳನ್ನು ಪಕ್ಷಾಂತರಗೊಳಿಸುವ ಶಕ್ತಿ ಅವರ ರಾಜಕೀಯ ವರ್ಚಸ್ಸಿಗಿರಲಿಲ್ಲ. ಒಂದು ಕಾಲದಲ್ಲಿ ಸಮಾಜವಾದಿ ಎಂದು ಸ್ವಯಂ ಘೋಷಿಸಿಕೊಂಡಿದ್ದ ಕೃಷ್ಣ ಆರೆಸ್ಸೆಸ್ ಟೋಪಿಯನ್ನೂ ಧರಿಸಿ ಅಪಹಾಸ್ಯಕ್ಕೀಡಾದರು. ಕಾಂಗ್ರೆಸ್ನ ಮೇಲೆ ಅಸಮಾಧಾನವಿದ್ದಿದ್ದರೆ ಅವರಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ರಾಜಕೀಯ ನಿವೃತ್ತಿಯನ್ನು ಘೋಷಿಸಿಕೊಳ್ಳುವ ಅವಕಾಶ ಖಂಡಿತ ಇತ್ತು. ‘ಸೊಳ್ಳೆ ತಿಂದು ಜಾತಿ ಕೆಡಿಸಿಕೊಂಡ’ ಎನ್ನುವ ಮಾತೊಂದಿದೆ. ತನ್ನ ರಾಜಕೀಯ ಬದುಕಿನುದ್ದಕ್ಕೂ ಗಳಿಸಿಕೊಂಡ ಎಲ್ಲ ವರ್ಚಸ್ಸನ್ನು ಬಿಜೆಪಿ ಸೇರ್ಪಡೆಯ ಒಂದು ನಡೆಯಿಂದ ಕೃಷ್ಣ ಕಳೆದುಕೊಂಡು ಬಿಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X