Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಧರ್ಮಸ್ಥಳ: ಸಿಟ್ ತಂಡದ ಮುಂದಿರುವ...

ಧರ್ಮಸ್ಥಳ: ಸಿಟ್ ತಂಡದ ಮುಂದಿರುವ ಸವಾಲುಗಳು

ವಾರ್ತಾಭಾರತಿವಾರ್ತಾಭಾರತಿ26 July 2025 9:09 AM IST
share
ಧರ್ಮಸ್ಥಳ: ಸಿಟ್ ತಂಡದ ಮುಂದಿರುವ ಸವಾಲುಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅನಾಮಧೇಯ ವ್ಯಕ್ತಿಯೊಬ್ಬ ಮುಂದೆ ಬಂದು ಧರ್ಮಸ್ಥಳದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಸೂಚನೆಯ ಮೇರೆಗೆ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದಾಗ ದಕ್ಷಿಣ ಜಿಲ್ಲೆ ಮಾತ್ರವಲ್ಲ, ರಾಜ್ಯವೇ ಬೆಚ್ಚಿ ಬಿದ್ದಿತ್ತು. ಇದೇ ಸಂದರ್ಭದಲ್ಲಿ ದೂರಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ತನಿಖೆ ನಡೆಸಲು ಹಿಂಜರಿಯುತ್ತಿರುವುದು ಇನ್ನಷ್ಟು ಅನುಮಾನ, ಆತಂಕಗಳಿಗೆ ಪುಷ್ಟಿಯನ್ನು ನೀಡಿತ್ತು. ರಾಜಕಾರಣಿಗಳು ಕೂಡ ದೂರಿನ ಗಾಂಭೀರ್ಯತೆಯನ್ನು ಅರಿಯದೆ ಹೇಳಿಕೆಗಳನ್ನು ನೀಡತೊಡಗಿದರು. ಆದರೆ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗ ತೊಡಗಿದಂತೆ ಅನಿವಾರ್ಯವಾಗಿ ಎಸ್ಐಟಿ ತನಿಖೆಗೆ ಸರಕಾರ ಸಮ್ಮತಿ ವ್ಯಕ್ತಪಡಿಸಿತು. ಇನ್ನಾದರೂ ಪ್ರಕರಣದ ಸತ್ಯಾಸತ್ಯತೆ ಹೊರಬೀಳಬಹುದು ಎಂದು ರಾಜ್ಯ ಸಮಾಧಾನದ ನಿಟ್ಟುಸಿರು ಬಿಟ್ಟಿತ್ತು. ಆದರೆ ಸಿಟ್ ತನಿಖೆ ಆರಂಭಕ್ಕೆ ಮುನ್ನವೇ ವಿಘ್ನಗಳು ಎದುರಾಗುತ್ತಿವೆ. ತಂಡವನ್ನು ಘೋಷಿಸಿದ ಎರಡೇ ದಿನದಲ್ಲಿ ಇಬ್ಬರು ಅಧಿಕಾರಿಗಳು ತಂಡದಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ‘ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ’ ಎಂದು ಗೃಹ ಸಚಿವರು ಹೇಳಿಕೆಯನ್ನು ನೀಡಿದ್ದಾರಾದರೂ, ಐಪಿಎಸ್ ಅಧಿಕಾರಿ ಸೌಮ್ಯ ಲತಾ ಹಾಗೂ ಮತ್ತೊಬ್ಬ ಐಪಿಎಸ್ಯೇತರ ಅಧಿಕಾರಿ ತಮ್ಮನ್ನು ತಂಡದಿಂದ ಕೈ ಬಿಡಬೇಕೆಂದು ಪತ್ರ ಬರೆದಿದ್ದಾರೆ ಎನ್ನುವ ವದಂತಿಗಳು ಹರಡಿವೆ. ಇತ್ತೀಚೆಗೆ ನಡೆದ ಸಿಟ್ ಸಭೆಗೂ ಇವರು ಗೈರು ಹಾಜರಾಗಿದ್ದರು. ಇವರ ಮನವಿಯನ್ನು ತಂಡದ ನೇತೃತ್ವ ವಹಿಸಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಾಂತಿ ಅವರು ಪುರಸ್ಕರಿಸಿದ್ದು ಇಬ್ಬರ ಹೆಸರನ್ನು ಕೈ ಬಿಡಲು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿರುವ ಸೌಜನ್ಯಾ ಹತ್ಯೆ ಪ್ರಕರಣದಲ್ಲಿ ತನಿಖೆಯ ಲೋಪದೋಷ ತೀವ್ರ ಟೀಕೆಗೆ ಒಳಗಾಗಿತ್ತು. ಅಪರಾಧಿಗಳನ್ನು ರಕ್ಷಿಸುವಲ್ಲಿ ಪೊಲೀಸರ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಾಮಾಣಿಕವಾಗಿ ತನಿಖೆ ನಡೆಸುವ ಧೈರ್ಯ, ಆತ್ಮವಿಶ್ವಾಸವಿಲ್ಲದ ಅಧಿಕಾರಿಗಳು ತಂಡದಿಂದ ಹಿಂದೆ ಸರಿಯುವುದು ತನಿಖೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೇ ಆಗಿದೆ. ಈ ಪ್ರಕರಣದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳು ಅನುಮಾನ ವ್ಯಕ್ತ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹಿಂಜರಿಕೆ ವ್ಯಕ್ತ ಪಡಿಸುವುದು ಸಹಜವೂ ಆಗಿದೆ. ಹಲವು ಒತ್ತಡಗಳ ನಡುವೆ ಈ ತನಿಖೆಯನ್ನು ನಡೆಸಬೇಕಾಗುತ್ತದೆ. ತನಿಖೆಯಲ್ಲಿ ನಿಜವಾದ ಆರೋಪಿಗಳನ್ನು ಗುರುತಿಸುವ ಸಂದರ್ಭಗಳಲ್ಲಿ ಹಲವರ ಟೀಕೆ, ಆಕ್ರೋಶಗಳನ್ನು ಎದುರಿಸಬೇಕಾಗಬಹುದು. ಈಗಾಗಲೇ ಕೆಲವು ಮಾಧ್ಯಮಗಳು ತನಿಖೆಗೆ ಮುನ್ನವೇ ಆರೋಪಿಗಳ ಹೆಸರುಗಳನ್ನು ಘೋಷಿಸಿಯಾಗಿದೆ. ನಾಳೆ, ಮಾಧ್ಯಮಗಳು ಬಯಸಿದ ಆರೋಪಿಗಳನ್ನು ಹಿಡಿಯಲು ತನಿಖಾ ತಂಡ ವಿಫಲವಾದರೆ ಆಗಲೂ ಕೆಲವು ವರ್ಗದ, ಗುಂಪುಗಳ ಆಕ್ರೋಶಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ರಾಜಕೀಯ, ಧಾರ್ಮಿಕ ವಲಯಗಳ ಒತ್ತಡಗಳಿಗೆ ತಲೆಬಾಗ ಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ತನಿಖಾ ತಂಡದಲ್ಲಿರುವ ಅಧಿಕಾರಿಗಳಿಗೆ ಇವೆಲ್ಲದರ ಅರಿವು ಇಲ್ಲದೇ ಇರುವುದಿಲ್ಲ. ಆದುದರಿಂದ, ಸಹಜವಾಗಿಯೇ ಅವರು ತನಿಖೆಯಿಂದ ಹಿಂದೆ ಸರಿಯ ಬಹುದು. ಇದಕ್ಕಾಗಿ ಅವರನ್ನು ನೇರ ಹೊಣೆ ಮಾಡುವಂತಿಲ್ಲ. ಎಸ್ಐಟಿ ತಂಡವನ್ನು ರಚನೆ ಮಾಡಿದ ಸರಕಾರವೇ ಈ ತನಿಖೆಯ ಬಗ್ಗೆ ಎಷ್ಟರಮಟ್ಟಿಗೆ ಆಸಕ್ತಿಯನ್ನು ವಹಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದು. ರಾಷ್ಟ್ರಮಟ್ಟದ ಒತ್ತಡಗಳು ಬೀಳದೆ ಇದ್ದರೆ ಸರಕಾರ ಎಸ್ಐಟಿಯನ್ನು ರಚಿಸಲು ಮುಂದಾಗುತ್ತಿರಲಿಲ್ಲ. ಸರಕಾರದೊಳಗಿರುವ ವ್ಯಕ್ತಿಗಳೇ ನಾಳೆ ತಮ್ಮ ತನಿಖೆಗೆ ಸಮಸ್ಯೆಯನ್ನು, ತೊಡಕುಗಳನ್ನು ತಂದೊಡ್ಡಬಹುದು ಎನ್ನುವ ಆತಂಕಗಳು ಅಧಿಕಾರಿಗಳಲ್ಲಿ ಇರಬಹುದು. ಇವೆಲ್ಲವೂ ಅವರನ್ನು ತಂಡದಿಂದ ಹಿಂದೆ ಸರಿಯುವಂತೆ ಮಾಡಿರಬಹುದು.

ಆದರೆ, ಸಿಟ್ ತಂಡ ರಚನೆ ಮಾಡುವಾಗ, ಅಧಿಕಾರಿಗಳ ಸಮ್ಮತಿಯನ್ನು ಮೊದಲೇ ಪಡೆದುಕೊಳ್ಳುವುದು ಅತ್ಯಗತ್ಯವಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟ ಒತ್ತಡಗಳನ್ನು ಎದುರಿಸಬಲ್ಲ, ಸವಾಲುಗಳನ್ನು ನಿಭಾಯಿಸ ಬಲ್ಲ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರೂ, ಪ್ರಾಮಾಣಿಕರೂ ಆಗಿರುವ ಅಧಿಕಾರಿಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿತ್ತು. ತಂಡದ ಘೋಷಣೆಯ ಬಳಿಕ ಅಧಿಕಾರಿಗಳು ಒಬ್ಬೊಬ್ಬರಾಗಿ ತಂಡದಿಂದ ಹಿಂಜರಿಯತೊಡಗಿದರೆ ಒಟ್ಟು ತನಿಖೆಯ ಬಗ್ಗೆಯೇ ಜನರಲ್ಲಿ ಅವಿಶ್ವಾಸ ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲ ತಂಡದ ಇತರ ಅಧಿಕಾರಿಗಳ ಸಾಮರ್ಥ್ಯದ ಬಗ್ಗೆಯೂ ಅನುಮಾನಗಳು ಹುಟ್ಟುತ್ತವೆ. ಹೊರಗಿನಿಂದ ಈ ಅಧಿಕಾರಿಗಳ ಮೇಲೆ ಒತ್ತಡಗಳನ್ನು ಹಾಕಲಾಗುತ್ತಿದೆಯೇ ಎಂದು ಜನರು ಶಂಕಿಸತೊಡಗಿದರೆ, ನಡೆಯುವ ತನಿಖೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಪೊಲೀಸ್ ಅಧಿಕಾರಿಗಳೂ ನಮ್ಮಂತೆ ಸಾಮಾನ್ಯ ಮನುಷ್ಯರು. ಬಲವಂತವಾಗಿ ಇಂತಹ ತನಿಖೆಗಳನ್ನು ಅವರ ಮೇಲೆ ಹೇರಿದರೆ, ತನಿಖೆ ಹಳ್ಳ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ತಮಗೆ ತೋಚಿದ ಹೆಸರುಗಳನ್ನು ಎಸ್ಐಟಿಗೆ ತುರುಕಿದ ಸರಕಾರ ಮತ್ತು ಗೃಹ ಇಲಾಖೆಯ ಮುಖ್ಯಸ್ಥರನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ.

ರಾಘವೇಶ್ವರ ಸ್ವಾಮೀಜಿ ಪ್ರಕರಣಗಳಿಗೆ ಸಂಬಂಧಿಸಿ ಈ ರಾಜ್ಯದ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಗಳೇ ಹಲವು ಬಾರಿ ವಿಚಾರಣೆಯಿಂದ ಹಿಂದೆಸರಿದಿದ್ದಾರೆ ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ರಾಮಚಂದ್ರಾ ಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಸ್ವಾಮೀಜಿಗಳನ್ನು ಅವರ ಲೈಂಗಿಕ ಹಗರಣಗಳ ಹಿನ್ನೆಲೆಯಲ್ಲಿ ಪೀಠದಿಂದ ಕೆಳಗಿಳಿಸಬೇಕು ಎಂದು ಎದುರ್ಕಳ ಈಶ್ವರಭಟ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಈ ಪ್ರಕರಣವೂ ಸೇರಿದಂತೆ ರಾಮಚಂದ್ರ ಪುರ ಮಠದ ವಿವಿಧ ಪ್ರಕರಣಗಳ ವಿಚಾರಣೆಯಿಂದ ೭ಕ್ಕೂ ಅಧಿಕ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದರು. ರಾಘವೇಶ್ವರ ಶ್ರೀಗಳ ಮೇಲಿದ್ದ ಲೈಂಗಿಕ ಹಗರಣಗಳಲ್ಲಿ ಅವರಿಗೆ ಶಿಕ್ಷೆಯಾಗದೇ ಇರುವಲ್ಲಿ, ನ್ಯಾಯಾಧೀಶರ ಪಾತ್ರವೆಷ್ಟು ಎನ್ನುವ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ನ್ಯಾಯಾಧೀಶರ ಸ್ಥಿತಿಯೇ ಇಷ್ಟು ದಯನೀಯವಾಗಿರುವಾಗ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಉದ್ಯಮಿಗಳ ಮೂಲಕ ಬೇರೆ ಬೇರೆ ರೀತಿಯ ಒತ್ತಡಗಳನ್ನು ದಿನ ನಿತ್ಯ ಎದುರಿಸಬೇಕಾಗಿರುವ ಪೊಲೀಸ್ ಅಧಿಕಾರಿಗಳ ಸ್ಥಿತಿ ಹೇಗಿರಬಹುದು? ವಿಪರ್ಯಾಸವೆಂದರೆ, ಸಿಟ್ ತಂಡದಲ್ಲಿ ಇರುವ ಏಕೈಕ ಮಹಿಳಾ ಐಪಿಎಸ್ ಅಧಿಕಾರಿ ಹಿಂದೆ ಸರಿದಿದ್ದಾರೆ. ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳು ನಡೆದಿವೆ ಎನ್ನುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಉನ್ನತ ಅಧಿಕಾರಿಯೊಬ್ಬರು ತನಿಖಾ ತಂಡದಲ್ಲಿ ಇರುವುದು ಅತ್ಯಗತ್ಯವಾಗಿದೆ. ಹಾಗೆಯೇ ತನಿಖಾ ತಂಡದ ಪೊಲೀಸ್ ಅಧಿಕಾರಿಗಳ ಮೇಲೆ ಯಾವುದೇ ಒತ್ತಡಗಳು ಬೀಳದಂತೆ ಸರಕಾರ ಮುತುವರ್ಜಿ ವಹಿಸಬೇಕು. ರಾಜಕಾರಣಿಗಳು ತಂಡದ ಜೊತೆಗೆ ಅಂತರವನ್ನು ಕಾಪಾಡಬೇಕು ಮಾತ್ರವಲ್ಲ, ತನಿಖೆಗೆ ಸಂಬಂಧಿಸಿ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ತಂಡಕ್ಕೆ ನೀಡಬೇಕು. ಹಾಗಾದಾಗ ಮಾತ್ರ ತನಿಖೆ ಒಂದು ತಾರ್ಕಿಕ ಕೊನೆಯನ್ನು ಮುಟ್ಟಬಹುದು. ಇಲ್ಲವಾದರೆ ಧರ್ಮಸ್ಥಳದಲ್ಲಿ ಗೋರಿ ಅಗೆದು ಬರಿಗೈಯಲ್ಲಿ ಬಂದರು ಎಂಬ ಹೊಸ ಗಾದೆಯ ಸೃಷ್ಟಿಗೆ ಸಿಟ್ ತಂಡ ಕಾರಣವಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X