Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗೋಮಾಳಗಳನ್ನು ಮೇಯುತ್ತಿರುವ ಆರೆಸ್ಸೆಸ್...

ಗೋಮಾಳಗಳನ್ನು ಮೇಯುತ್ತಿರುವ ಆರೆಸ್ಸೆಸ್ ಸೋದರ ಸಂಸ್ಥೆಗಳು!

ವಾರ್ತಾಭಾರತಿವಾರ್ತಾಭಾರತಿ16 Oct 2025 8:50 AM IST
share
ಗೋಮಾಳಗಳನ್ನು ಮೇಯುತ್ತಿರುವ ಆರೆಸ್ಸೆಸ್ ಸೋದರ ಸಂಸ್ಥೆಗಳು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಬೇಕು’ ಎನ್ನುವ ಸಚಿವ ಪ್ರಿಯಾಂಕ್ ಖರ್ಗೆಯ ಹೇಳಿಕೆಯನ್ನು ಸ್ವತಃ ಆರೆಸ್ಸೆಸ್ ಕಾರ್ಯಕರ್ತರೇ ತಮ್ಮ ವರ್ತನೆಗಳ ಮೂಲಕ ಸಮರ್ಥಿಸುತ್ತಿದ್ದಾರೆ. ಆರೆಸ್ಸೆಸ್ ಕುರಿತ ಹೇಳಿಕೆಗಾಗಿ ಇದೀಗ ಸಚಿವ ಸಚಿವ ಪ್ರಿಯಾಂಕ್ ಖರ್ಗೆಯ ವ್ಯಕ್ತಿತ್ವ ಹರಣ ನಡೆಯುತ್ತಿದೆ. ನಿಂದನೆ, ಬೆದರಿಕೆಗಳ ಕರೆಗಳು ಅವರಿಗೆ ಬರುತ್ತಿವೆ. ಈ ಬಗ್ಗೆ ಸಚಿವರೇ ಹೇಳಿಕೊಂಡಿದ್ದಾರೆ ಮಾತ್ರವಲ್ಲ, ತಮಗೆ ಬಂದಿರುವ ಬೆದರಿಕೆ ಕರೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅತ್ಯಂತ ಅವಾಚ್ಯ ಪದಗಳಿಂದ ಸಚಿವರನ್ನು ನಿಂದಿಸಿದ್ದು, ಈ ಬೆದರಿಕೆ ಕರೆಗಳೇ ಆರೆಸ್ಸೆಸನ್ನು ನಿಷೇಧಿಸುವ ಅಗತ್ಯವನ್ನು ಹೇಳುತ್ತವೆೆ. ಕೊಟ್ಟ ವಚನಗಳನ್ನು ಮುರಿಯುವುದು, ಸಂದರ್ಭ ಬಂದಾಗ ವ್ಯವಸ್ಥೆಯ ಮುಂದೆ ಸಾಷ್ಟಾಂಗ ಎರಗಿ ಕ್ಷಮೆಯಾಚಿಸುವುದು, ಸಾಂಸ್ಕೃತಿಕ ಮುಖವಾಡದಲ್ಲೇ ರಾಜಕೀಯ ಚಟುವಟಿಕೆಗಳನ್ನು ನಡೆಸುವುದು, ಸಂವಿಧಾನದ ಸೌಲಭ್ಯಗಳನ್ನು ಪಡೆದುಕೊಂಡೇ ಸಂವಿಧಾನದ ವಿರುದ್ಧ ಸಂಚುಗಳನ್ನು ನಡೆಸುವುದು ಈ ಮೂಲಕವೇ ಆರೆಸ್ಸೆಸ್ ತನ್ನ ಸಾಮ್ರಾಜ್ಯವನ್ನು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ. ಎರೆಹುಳದಂತೆ ತೆವಳುತ್ತಲೇ, ಅವಕಾಶ ಸಿಕ್ಕಿದಾಗ ನಾಗರಹಾವಿನಂತೆ ಹೆಡೆ ಬಿಚ್ಚುತ್ತಾ ಬಂದ ಸಂಘಟನೆ ಆರೆಸ್ಸೆಸ್. ಯಾವ ಸರಕಾರ ಅಧಿಕಾರದಲ್ಲಿದ್ದರೂ ಆ ಸರಕಾರಕ್ಕೆ ತಕ್ಕ ವೇಷ ಹಾಕಿ ಅದರೊಳಗೆ ನುಸುಳಿಕೊಂಡು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಎತ್ತಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಾಗದೆ ತನ್ನ ಕಾರ್ಯಕರ್ತರ ಮೂಲಕ ಅವರನ್ನು ಬೆದರಿಸಿ ಬಾಯಿಮುಚ್ಚಿ ಸುವ ಪ್ರಯತ್ನವನ್ನು ಅರೆಸ್ಸೆಸ್ ಮುಖಂಡರು ಮರೆಯಲ್ಲಿ ಕುಳಿತು ನಡೆಸುತ್ತಿದ್ದಾರೆ.

ಡಿಜಿಟಲ್ ದ್ವೇಷ ಅಭಿಯಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಈ ಹಿಂದೆ ಹಲವು ಬಾರಿ ಗೃಹ ಸಚಿವ ಪರಮೇಶ್ವರ್ ಅವರು ಭರವಸೆ ನೀಡಿದ್ದರು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವದಂತಿಗಳನ್ನು ಹರಡುವ, ದ್ವೇಷಗಳನ್ನು ಬಿತ್ತುವ ಒಂದು ದೊಡ್ಡ ಪಡೆಯನ್ನೇ ಆರೆಸ್ಸೆಸ್ ದೇಶಾದ್ಯಂತ ಕಟ್ಟಿ ಬೆಳೆಸಿದೆ. ಇಂದು ಆ ಪಡೆಯೇ ಪ್ರಿಯಾಂಕ್ ಖರ್ಗೆಯ ಹಿಂದೆ ಬಿದ್ದಿದೆ. ಕಳೆದ ಎರಡು ದಿನಗಳಿಂದ ಖರ್ಗೆಯ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಸರಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪರಿಶೀಲಿಸಿದರೆ ನಿರಾಶೆಯಾಗುತ್ತದೆ. ತನ್ನದೇ ಸರಕಾರದ ಭಾಗವಾಗಿರುವ ಸಚಿವರ ಮೇಲೆ ನಡೆಯುತ್ತಿರುವ ದಾಳಿಗೇ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವ ಗೃಹ ಇಲಾಖೆ ಇನ್ನು ಜನಸಾಮಾನ್ಯರ ಮೇಲೆ ನಡೆಯುವ ದಾಳಿಗೆ ಏನು ಕ್ರಮ ತೆಗೆದುಕೊಳ್ಳಬಹುದು? ವಿಪರ್ಯಾಸವೆಂದರೆ, ವರ್ಷದ ಹಿಂದೆ ಹಾವೇರಿಯ ಸವಣೂರಿನಲ್ಲಿ ಆರೆಸ್ಸೆಸ್ನ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ೨೨ ಜನರ ಮೇಲೆ ಚಾರ್ಜ್

ಶೀಟ್ ಸಲ್ಲಿಸಲು ಇದೇ ಸರಕಾರ ಶಿಫಾರಸು ಮಾಡಿತ್ತು. ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಸವಣೂರಿನಲ್ಲಿ ಪ್ರತಿಭಟನೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರ ವಿರುದ್ಧ ದೂರು ಸಲ್ಲಿಸಲಾಗಿತ್ತು. ಪೊಲೀಸ್ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವಕ್ಕೆ ಸರಕಾರ ತನ್ನ ಅನುಮೋದನೆಯನ್ನು ನೀಡಿತ್ತು. ಗೃಹ ಸಚಿವ ಪರಮೇಶ್ವರ್ ಮೂಗಿನ ಕೆಳಗೇ ಇದು ನಡೆದಿದೆ. ಕನಿಷ್ಠ ಈ ನಾಡಿನ ಗೃಹ ಸಚಿವರಾಗಿರುವ ಪರಮೇಶ್ವರ್ ಅವರು ಆರೆಸ್ಸೆಸ್ ಕುರಿತಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಯಾಕೆಂದರೆ ಆರೆಸ್ಸೆಸ್ ಜೊತೆಗೆ ಪರಮೇಶ್ವರ್ ಮೃದು ನಿಲುವನ್ನು ಹೊಂದಿರುವ ಆರೋಪಗಳಿವೆ.

ಆರೆಸ್ಸೆಸ್ ಎಂದರೆ ಖಾಕಿ ಚಡ್ಡಿ, ಕರಿಟೋಪಿ ಮಾತ್ರ ಅಲ್ಲ, ಅದೊಂದು ಸಿದ್ಧಾಂತ. ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ಪುನರುತ್ಥಾನ, ಸ್ವದೇಶಿ ಆಂದೋಲನ ಹೀಗೆ ಬಗೆ ಬಗೆಯ ಮುಖವಾಡದಲ್ಲಿ ನಮ್ಮ ನಡುವೆ ಹರಡಿಕೊಂಡಿದೆ. ರಾಷ್ಟ್ರೋತ್ಥಾನ, ಜನಸೇವಾ ಟ್ರಸ್ಟ್ ಮೊದಲಾದ ಸಂಸ್ಥೆಗಳು ಆರೆಸ್ಸೆಸ್ ಚಿಂತನೆಗಳಿಗಾಗಿಯೇ ದುಡಿಯುತ್ತಿವೆ. ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಅಭಿಪ್ರಾಯ ಪಡುತ್ತಿರುವ ಸಂದರ್ಭದಲ್ಲೇ, ಈ ನಾಡಿನ ನೂರಾರು ಎಕರೆ ಸರಕಾರಿ ಭೂಮಿಗಳನ್ನು, ಗೋಮಾಳಗಳನ್ನು ಆರೆಸ್ಸೆಸ್ನ ಈ ಸಹೋದರ ಸಂಸ್ಥೆಗಳು ನುಂಗಿ ನೀರು ಕುಡಿದಿರುವುದನ್ನು ಕಂಡು ಕಾಣದಂತಿದೆ. ನಿರಾಶ್ರಿತರಿಗೆ ವಸತಿ ಯೋಜನೆ ಕಲ್ಪಿಸಲು ಸರಕಾರದ ಬಳಿ ಜಮೀನಿಲ್ಲ. ಆದರೆ, ಆರೆಸ್ಸೆಸ್ನ ಸಹ ಸಂಘಟನೆಗಳಿಗೆ ಸಬ್ಸಿಡಿಯಲ್ಲಿ ಸರಕಾರಿ ಜಮೀನನ್ನು ಕೊಡಲು ಯಾವುದೇ ಅಭ್ಯಂತರವಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದವು. ಆದರೆ ಆ ಯೋಜನೆಗಳ ಫಲಾನುಭವಿಗಳು ಆರೆಸ್ಸೆಸ್ ಸಹ ಸಂಸ್ಥೆಗಳಾಗಿದ್ದವು. ಇಂದು ಬಡವರಿಗೆ ಗ್ಯಾರಂಟಿಗಳನ್ನು ಕೊಡಲು ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಆರೆಸ್ಸೆಸ್ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಸರಕಾರಿ ಭೂಮಿಯನ್ನು, ಗೋಮಾಳಗಳನ್ನು ಅತ್ಯಂತ ಕಡಿಮೆ ಬೆಲೆಗೆ ಚಿನ್ನದ ಹರಿವಾಣದಲ್ಲಿ ಹಾಕಿ ಕೊಟ್ಟಿತ್ತು. ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯಲ್ಲಿ ಅಂದಿನ ಬಿಜೆಪಿ ಸರಕಾರವು ಏಳೂವರೆ ಕೋಟಿ ರೂ. ಬೆಲೆಬಾಳುವ ಜಮೀನನ್ನು ಬರೇ ೧.೮೬ ಕೋಟಿ ರೂಪಾಯಿಗೆ ಮಂಜೂರು ಮಾಡಿಸಿತ್ತು. ಗೋವುಗಳ ಪಾಲಿನ ಗೋಮಾಳವನ್ನೇ ಈ ಸಂಸ್ಥೆ ಯಾವ ನಾಚಿಕೆಯೂ ಇಲ್ಲದೆ ಮೆದ್ದಿದೆ. ರಾಷ್ಟ್ರೋತ್ಥಾನ ಪರಿಷತ್ಗೆ ಗೋಮಾಳವನ್ನು ನೀಡುವುದನ್ನು ಕಂದಾಯ ಇಲಾಖೆ ಸ್ಪಷ್ಟವಾಗಿ ವಿರೋಧಿಸಿತ್ತು. ಈ ವಿರೋಧದ ನಡುವೆಯೇ ಸರಕಾರ ಮಂಜೂರು ಮಾಡಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಸ್ಸೆಸ್ನ ಸಹೋದರ ಸಂಸ್ಥೆಗಳು ಸರಕಾರಿ ಭೂಮಿ ಮತ್ತು ಗೋಮಾಳದ ಮೇಲೆ ಕಣ್ಣು ಹಾಕಿ ಅವುಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಹಾಗೆಯೇ ಚಾಣಕ್ಯ ವಿವಿಗೆ ಬಿಜೆಪಿ ಸರಕಾರವು ಸುಮಾರು ೧೧೭ ಎಕರೆ ಜಮೀನನ್ನು ಬರೇ ೫೦ ಕೋಟಿ ರೂಪಾಯಿಗೆ ನೀಡಿತ್ತು. ವಿಪರ್ಯಾಸವೆಂದರೆ ಈ ಕೃಷಿ ಯೋಗ್ಯ ಭೂಮಿಯನ್ನು ರೈತರಿಂದ ಸರಕಾರ ಕೈಗಾರಿಕೆಯ ಉದ್ದೇಶದಿಂದ ವಶಪಡಿಸಿಕೊಂಡಿತ್ತು. ಆದರೆ ಬಳಿಕ ಆರೆಸ್ಸೆಸ್ ಸಿದ್ಧಾಂತವನ್ನು ಹರಡುವ ಉದ್ದೇಶದಿಂದಲೇ ಸ್ಥಾಪಿತಗೊಂಡಿರುವ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ಅಂದಿನ ಸರಕಾರ ನೀಡಿತು. ಸರಕಾರಕ್ಕೆ ಇದರಿಂದ ಸುಮಾರು ೨೪೬ ಕೋಟಿ ರೂಪಾಯಿ ನಷ್ಟವಾಗಿದೆ. ಅಂದಿನ ಸರಕಾರದ ನಿರ್ಧಾರವನ್ನು ಸಿದ್ದರಾಮಯ್ಯ ಅವರು ಕಟು ಪದಗಳಿಂದ ಟೀಕಿಸಿದ್ದರು. ‘‘ಜಾಣಕ್ಯ ವಿವಿ ಎನ್ನುವುದು ಮನುವಾದಿಗಳ ವಿಶ್ವವಿದ್ಯಾಲಯ’’ ಎಂದು ಅವರು ಕಿಡಿಕಾರಿದ್ದರು. ಒಂದೆಡೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಸೂಕ್ತ ಅನುದಾನಗಳಿಲ್ಲದೆ ನರಳುತ್ತಿರುವಾಗ, ಖಾಸಗಿ ಸಂಸ್ಥೆ ನಡೆಸುವ ಈ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಸರಕಾರ ರೈತರ ಜಮೀನನ್ನು ಕಿತ್ತು ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದರು. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದೆ. ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವುದು ಎಷ್ಟು ಮುಖ್ಯವೋ, ಆರೆಸ್ಸೆಸ್ ಸಹೋದರ ಸಂಸ್ಥೆಗಳು ಜಾಣಕ್ಯ ತಂತ್ರದ ಮೂಲಕ ಬೇಲಿ ಹಾಕಿಕೊಂಡಿರುವ ಸರಕಾರಿ ಜಮೀನುಗಳನ್ನು, ವಿವಿಧ ಗೋಮಾಳಗಳನ್ನು ಮತ್ತೆ ವಶಪಡಿಸಿಕೊಂಡು, ಜನಸಾಮಾನ್ಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವುಗಳನ್ನು ಬಳಸಿ ಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆರೆಸ್ಸೆಸ್ನ ದ್ವೇಷ ಸಿದ್ಧಾಂತಗಳನ್ನು ಬಿತ್ತಿ ಬೆಳೆಯುವ ಕೃಷಿ ಕಾರ್ಯಗಳಿಗಾಗಿ ಸರಕಾರಿ ಜಮೀನು, ಗೋಮಾಳಗಳ ದುರ್ಬಳಕೆ ನಿಲ್ಲಿಸಲು ಸರಕಾರ ಮೊದಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X