Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಪಟಾಕಿ ದುರಂತ: ಯಾರು ಹೊಣೆ?

ಪಟಾಕಿ ದುರಂತ: ಯಾರು ಹೊಣೆ?

ವಾರ್ತಾಭಾರತಿವಾರ್ತಾಭಾರತಿ31 Oct 2024 6:51 AM IST
share
ಪಟಾಕಿ ದುರಂತ: ಯಾರು ಹೊಣೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬೆಳಕನ್ನು ಹೊತ್ತು ತರುವ ದೀಪಾವಳಿಯ ನಿರೀಕ್ಷೆಯಲ್ಲಿದೆ ನಾಡು. ಇದೇ ಹೊತ್ತಿಗೆ, ಕೇರಳದ ನೀಲೇಶ್ವರ ದೈವಕ್ಷೇತ್ರದ ಉತ್ಸವದ ವೇಳೆ ಪಟಾಕಿ ದಾಸ್ತಾನು ಸ್ಫೋಟಿಸಿ 150ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಿದೆ. ಬೆಳಕಿನ ಹಬ್ಬ ದೀಪಾವಳಿಯ ಸ್ವಾಗತಕ್ಕೆ ಸಜ್ಜಾಗಿ ನಿಂತ ಜನರ ಮೇಲೆ ಈ ಸುದ್ದಿ ಗಾಢ ಕತ್ತಲ ರೂಪದಲ್ಲಿ ಎರಗಿದೆ. ಕ್ಷೇತ್ರದಲ್ಲಿ ಕಳೆದ ರಾತ್ರಿ ವಾರ್ಷಿಕ ತೆಯ್ಯಂ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ಜನರು ನೆರೆದ ಸ್ಥಳದಲ್ಲಿ ಈ ದುರಂತ ಸಂಭವಿಸಿದೆ. ಪಟಾಕಿ ಸ್ಫೋಟಗಳಿಂದ ನಡೆಯುವ ದುರಂತಗಳು ಕೇರಳಕ್ಕೆ ಹೊಸತೇನೂ ಅಲ್ಲ. ಎಂಟು ವರ್ಷಗಳ ಹಿಂದೆ, ಇದೇ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ ದೇವಳದಲ್ಲಿ ನಡೆದ ಸ್ಫೋಟಗಳಿಂದಾಗಿ 100ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 2016ರ ಎಪ್ರಿಲ್ ತಿಂಗಳಲ್ಲಿ ದೇವಳದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಈ ದುರಂತವನ್ನು ಕೇರಳದ ರಾಷ್ಟ್ರೀಯ ದುರಂತವೆಂದು ಘೋಷಿಸಲು ಅಂದಿನ ಮುಖ್ಯಮಂತ್ರಿ ಕೇಂದ್ರವನ್ನು ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಈ ದುರಂತದ ಬಳಿಕ ಕೇರಳದಲ್ಲಿ ಪಟಾಕಿಯನ್ನು ನಿಷೇಧಿಸಲು ಭಾರೀ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಕೆಲವು ಹಿತಾಸಕ್ತಿಗಳು ಪಟಾಕಿ ನಿಷೇಧಕ್ಕೆ ಧಾರ್ಮಿಕ ಬಣ್ಣವನ್ನು ನೀಡಿದ್ದರಿಂದ ಅದು ಸಾಧ್ಯವಾಗಲಿಲ್ಲ. ಪಟಾಕಿ ಸಂಗ್ರಹಕ್ಕೆ ಹಲವು ನಿರ್ಬಂಧಗಳಿದ್ದರೂ ಅವೆಲ್ಲವನ್ನು ಉಲ್ಲಂಘಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತದೆ. ಪರಿಣಾಮವಾಗಿ ನೀಲೇಶ್ವರದಲ್ಲಿ ಪಟಾಕಿ ದುರಂತ ಮರುಕಳಿಸಿದೆ.

ಇದು ಕೇರಳಕ್ಕಷ್ಟೇ ಸೀಮಿತವಾಗಿಲ್ಲ. ದೀಪಾವಳಿ ಹತ್ತಿರ ಬರುತ್ತಿದ್ದಂತೆಯೇ ದೇಶಾದ್ಯಂತ ಪತ್ರಿಕೆಗಳ ಮುಖಪುಟಗಳಲ್ಲಿ ಪಟಾಕಿ ದುರಂತಗಳು ರಾರಾಜಿಸತೊಡಗುತ್ತವೆ. ಕಳೆದ ವರ್ಷ ಪಟಾಕಿ ಕಾರಣಗಳಿಂದಾಗಿ 500ಕ್ಕೂ ಅಧಿಕ ಮಂದಿ ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇದೇಸಂದರ್ಭದಲ್ಲಿ ಸಾವಿರಾರು ಜನರು ಪಟಾಕಿ ಕಾರಣದಿಂದ ಗಾಯಗೊಂಡಿದ್ದಾರೆ. ಇಷ್ಟೆಲ್ಲ ಸಾವು ನೋವುಗಳು ಸಂಭವಿಸುತ್ತಿದ್ದರೂ, ಈ ಪಟಾಕಿಗಳನ್ನು ದೀಪಾವಳಿಯ ಸಂದರ್ಭದಲ್ಲಿ ಜನರ ಮೇಲೆ ಬಲವಂತವಾಗಿ ಹೇರುವುದಕ್ಕೆ ಕೆಲವು ರಾಜಕೀಯ ಶಕ್ತಿಗಳು ಹವಣಿಸುತ್ತಿರುವುದು ಕಳವಳಕಾರಿಯಾಗಿದೆ. ನೀಲೇಶ್ವರದಲ್ಲಿ ಪಟಾಕಿ ದುರಂತದಿಂದ ನೂರಾರು ಜನರು ಗಾಯಗೊಂಡಿರುವ ಹೊತ್ತಿನಲ್ಲೇ ಕೆಲವು ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಪಟಾಕಿ ಪರವಾಗಿ ವಕಾಲತು ಶುರುಹಚ್ಚಿಕೊಂಡಿದ್ದಾರೆ. ಸರಕಾರ ಪಟಾಕಿ ವಿರುದ್ದ ಕಠಿಣ ನಿರ್ಬಂಧಗಳನ್ನು ಹೇರುತ್ತಿದ್ದಂತೆಯೇ, ಇದನ್ನು ‘ಹಿಂದೂ ಧರ್ಮದ ಹಬ್ಬಗಳ ವಿರುದ್ಧ ಹೇರಿದ ನಿರ್ಬಂಧ’ ಎಂದು ವ್ಯಾಖ್ಯಾನಿಸಿ ಜನರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಇವರ ಸಾಲಿಗೆ ಸೋನು ನಿಗಂನಂತಹ ಕಲಾವಿದರೂ ಸೇರಿರುವುದು ವಿಪರ್ಯಾಸವಾಗಿದೆ. ಪಟಾಕಿಯ ವಿರುದ್ಧ ನಟನೊಬ್ಬ ಜಾಗೃತಿ ಮೂಡಿಸುತ್ತಿದ್ದಾಗ, ಸೋನಿ ನಿಗಂ ಪಟಾಕಿಯನ್ನು ಸಮರ್ಥಿಸಿದ್ದು ಮಾತ್ರವಲ್ಲ, ಇಸ್ರೇಲ್ ಹಾರಿಸುತ್ತಿರುವ ಕ್ಷಿಪಣಿಗಳನ್ನು ತೋರಿಸಿ ಪಟಾಕಿಯನ್ನು ಸಮರ್ಥಿಸುವ ಕೆಳ ಮಟ್ಟಕ್ಕೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಅವರು ‘‘ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ. ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿ’’ ಎಂದು ಕರೆ ನೀಡಿದ್ದಾರೆ. ಪಟಾಕಿ ಉದ್ಯಮದಿಂದ ನೂರಾರು ಜನರು ಉದ್ಯೋಗವನ್ನು ಹೊಂದಿದ್ದಾರೆ. ಇವರ ಜೀವನಾಧಾರ ಪಟಾಕಿಯಾಗಿದೆ. ಆದುದರಿಂದ ಪಟಾಕಿಯನ್ನು ಪ್ರೋತ್ಸಾಹಿಸಿ ಎಂದೂ ಹೇಳಿದ್ದಾರೆ.

ದೀಪಾವಳಿ ಹೆಸರೇ ಹೇಳುವಂತೆ ದೀಪದ ಹಬ್ಬವೇ ಹೊರತು, ಪಟಾಕಿಯ ಹಬ್ಬವಲ್ಲ. ದೀಪಾವಳಿಯಲ್ಲಿ ಮುಖ್ಯ ಬೆಳಕೇ ಹೊರತು, ಪಟಾಕಿಯ ಸದ್ದಲ್ಲ. ಹಣತೆ ಕತ್ತಲನ್ನು ಬೆಳಗಿಸಿದರೆ ಪಟಾಕಿ ಸದ್ದು ಮಾಡುತ್ತಾ ಉರಿದು ಕತ್ತಲು ಮತ್ತು ಗಂಧಕದ ವಾಸನೆಯನ್ನು ಉಳಿಸಿ ಹೋಗುತ್ತದೆ. ಕತ್ತಲನ್ನು ಬೆಳಗುವ ಶಕ್ತಿಯಿರುವುದು ಹಣತೆಗಳಿಗೇ ಹೊರತು, ಪಟಾಕಿಗಳಿಗಲ್ಲ. ದೀಪಾವಳಿಗೆ ಪಟಾಕಿಯನ್ನು ಜೋಡಿಸಿರುವುದರ ಹಿಂದೆ ರಾಜಕೀಯವಿದೆ. ಪಟಾಕಿ ಕಾರ್ಖಾನೆಗಳು ಮಹಿಳೆಯರನ್ನು ಮತ್ತು ಮಕ್ಕಳನ್ನು ಶೋಷಿಸುತ್ತಿರುವುದು ಮಾಧ್ಯಮಗಳಲ್ಲಿ ಆಗಾಗ ಬೆಳಕಿಗೆ ಬರುತ್ತಿವೆ. ಪಟಾಕಿ ಉದ್ಯಮದಲ್ಲಿ ದುಡಿಯುವ ಕಾರ್ಮಿಕರು ತೀವ್ರ ಶೋಷಣೆಗೊಳಗಾಗುತ್ತಿದ್ದಾರೆ ಮಾತ್ರವಲ್ಲ, 40 ವರ್ಷದ ಒಳಗೇ ಅಸ್ತಮಾ, ಕ್ಷಯ ಸೇರಿದಂತೆ ಹಲವು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಮತ್ತು ಇವರನ್ನು ಪಟಾಕಿ ಉದ್ಯಮ ಬಳಸಿ ಎಸೆಯುತ್ತಿದೆ. ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸಿದಾಗ ಅವುಗಳಿಗೆ ಬಲಿಯಾಗುವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಅಧಿಕ ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತಿವೆ. ಪಟಾಕಿ ಉದ್ಯಮವನ್ನು ಮುಂದಿಟ್ಟುಕೊಂಡು ಅಕ್ರಮ ಸ್ಫೋಟಕಗಳನ್ನು ಉತ್ಪಾದಿಸುವ, ದಾಸ್ತಾನು ಮಾಡುವ ಭಾರೀ ದಂಧೆಗಳು ನಡೆಯುತ್ತವೆ. ಪಟಾಕಿ ಉದ್ಯಮವನ್ನು ಸಮರ್ಥಿಸುವವರು ಈ ಅಕ್ರಮ ದಂಧೆಯ ಪರೋಕ್ಷ ಪೋಷಕರಾಗಿದ್ದಾರೆ. ಪಟಾಕಿಯ ಮರೆಯಲ್ಲೇ ಸ್ಫೋಟಕಗಳನ್ನು ಉತ್ಪಾದಿಸಿ ದುಷ್ಕರ್ಮಿಗಳಿಗೆ, ಉಗ್ರಗಾಮಿಗಳಿಗೆ ಪೂರೈಸುವ ಕೆಲಸವೂ ನಡೆಯುತ್ತಿದೆ. ದೇಶದಲ್ಲಿ ಸಕ್ರಮ ಪಟಾಕಿ ದಾಸ್ತಾನುಗಳಿಗಿಂತ ಅಕ್ರಮ ದಾಸ್ತಾನುಗಳೇ ಅಧಿಕ. ಪಟಾಕಿಗಳ ಹೆಸರಿನಲ್ಲಿ ಅಪಾಯಕಾರಿ ಸ್ಫೋಟಕಗಳನ್ನು ತಯಾರಿಸಿ ಅದನ್ನು ಮಾರುವ ಕೆಲಸವೂ ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ಪಟಾಕಿಯನ್ನು ಅಧಿಕೃತವಾಗಿ ನಿಷೇಧಿಸಿದ್ದೇ ಆದರೆ, ಈ ದೇಶದಲ್ಲಿ ದುಷ್ಕರ್ಮಿಗಳಿಗೆ ಸ್ಫೋಟಕಗಳನ್ನು ಅಕ್ರಮವಾಗಿ ವಿಸ್ತರಿಸುವ ದೊಡ್ಡ ದಂಧೆಗೆ ಭಾಗಶಃ ಕಡಿವಾಣ ಬಿದ್ದಂತಾಗುತ್ತದೆ. ಇದು ರಾಜಕಾರಣಿಗಳಿಗೂ ಚೆನ್ನಾಗಿಯೇ ಗೊತ್ತಿದೆ. ಆದುದರಿಂದಲೇ ಅವರು ಸಂಸ್ಕೃತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಪಟಾಕಿಯನ್ನು ಪೋಷಿಸಲು ಮುಂದಾಗಿದ್ದಾರೆ. ನಿಜಕ್ಕೂ, ಇಂದು ಉಳಿಯಬೇಕಾಗಿರುವುದು ಪಟಾಕಿ ಉದ್ಯಮವಲ್ಲ, ಸಾವಿರಾರು ಜನರ ಬದುಕಿಗೆ ಆಸರೆಯಾಗಿರುವ ಗ್ರಾಮೀಣ ಪ್ರದೇಶದ ಕುಂಬಾರಿಕೆ ವೃತ್ತಿ. ಜನರು ಪಟಾಕಿಗೆ ಸುರಿಯುವ ದುಡ್ಡನ್ನು ಮಣ್ಣಿನ ಹಣತೆಗಳನ್ನು ಕೊಳ್ಳಲು ಬಳಸಿದರೆ ಈ ಗುಡಿಗಾರಿಕೆಯನ್ನು ಅವಲಂಬಿಸಿದ ಸಾವಿರಾರು ಜನರ ಬದುಕು ಹಸನಾಗುತ್ತದೆ. ಜೊತೆ ಜೊತೆಗೇ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗುತ್ತದೆ.

ಪಟಾಕಿಗಳು ಭಾರತೀಯ ಸಂಸ್ಕೃತಿಯ ಸಂಕೇತವಲ್ಲ, ಬದಲಿಗೆ ಭಾರತೀಯ ಸಂಸ್ಕೃತಿಗೆ ಅದು ವಿರೋಧಿಯಾಗಿದೆ. ಭಾರತದ ಎಲ್ಲ ಹಬ್ಬಗಳು ಪ್ರಕೃತಿಯೊಂದಿಗೆ, ಪರಿಸರದೊಂದಿಗೆ ಸಂಬಂಧವನ್ನು ಬೆಸೆದುಕೊಂಡಿವೆ. ಪಟಾಕಿ ಸಾವು ನೋವುಗಳನ್ನುಂಟು ಮಾಡಿ ಹಬ್ಬಗಳ ಸಂಭ್ರವನ್ನು ನಾಶ ಮಾಡುತ್ತಿರುವುದು ಮಾತ್ರವಲ್ಲ, ಅದು ಪ್ರಕೃತಿ ವಿರೋಧಿ, ಪರಿಸರ ವಿರೋಧಿಯಾಗಿಯೂ ಕೆಲಸ ಮಾಡುತ್ತಿದೆ. ಕಳೆದ ಗುರುವಾರ ಬಿಡುಗಡೆಗೊಂಡ 2024ರ ಜಾಗತಿಕ ಪ್ರಕೃತಿ ಸಂರಕ್ಷಣೆ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 176ನೇ ಸ್ಥಾನದಲ್ಲಿದೆ. ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಭಾರತದ ವೈಫಲ್ಯವನ್ನು ಇದು ಹೇಳುತ್ತಿದೆ. ಭಾರತ ನದಿಗಳನ್ನು ದೇವತೆಗಳೆಂದು ಪೂಜಿಸುವ ದೇಶ. ಆದರೆ ನಮ್ಮ ನದಿಗಳನ್ನು ಹಬ್ಬ, ಹರಿದಿನ, ಸಂಪ್ರದಾಯ, ಪೂಜೆ, ಪುರಸ್ಕಾರದ ಹೆಸರಿನಲ್ಲೇ ನಾಶ ಮಾಡುತ್ತಾ ಬರುತ್ತಿದ್ದೇವೆ. ಈ ಕಾರಣದಿಂದಲೇ, ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಿದರೂ ಗಂಗಾನದಿಯನ್ನು ಶುದ್ಧೀಕರಿಸಲು ನಮಗೆ ಸಾಧ್ಯವಾಗಿಲ್ಲ. ದೀಪಾವಳಿಯ ಹೆಸರಿನಲ್ಲಿ ಪಟಾಕಿಗಳನ್ನು ಸಿಡಿಸುತ್ತಾ ಭಾರತೀಯ ಮೌಲ್ಯಗಳಿಗೆ ನಾವೇ ಕುಂದುಂಟು ಮಾಡುತ್ತಿದ್ದೇವೆ. ಪಟಾಕಿಯನ್ನು ಬಳಸುವುದು ಭಾರತೀಯ ಸಂಸ್ಕೃತಿಗೆ ಮಾಡುವ ಅಪಚಾರ ಎಂದು ಭಾವಿಸಿ ಹಬ್ಬಗಳಿಂದ ಪಟಾಕಿಗಳನ್ನು ನಾವು ದೂರವಿಡಬೇಕು. ಈ ಮೂಲಕ ಮನುಷ್ಯನ ಪ್ರಾಣ, ಸೊತ್ತುಗಳ ಜೊತೆಗೆ ನಮ್ಮ ಪ್ರಕೃತಿಯನ್ನು ಉಳಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ. ದೀಪಾವಳಿ ಎಲ್ಲ ಬಗೆಯ ಕತ್ತಲನ್ನು ಕಳೆದು ನಮ್ಮೆಲ್ಲರ ಬದುಕಿನಲ್ಲಿ ಬೆಳಕನ್ನು ತರಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X