Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಹ್ಯಾಕ್ ಆಗಿರುವುದು ಇವಿಎಂ ಅಥವಾ ಚುನಾವಣಾ...

ಹ್ಯಾಕ್ ಆಗಿರುವುದು ಇವಿಎಂ ಅಥವಾ ಚುನಾವಣಾ ಆಯೋಗ?

ವಾರ್ತಾಭಾರತಿವಾರ್ತಾಭಾರತಿ4 Jan 2024 9:11 AM IST
share
ಹ್ಯಾಕ್ ಆಗಿರುವುದು ಇವಿಎಂ ಅಥವಾ ಚುನಾವಣಾ ಆಯೋಗ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದ ವಿಧಾನಸಭಾ ಚುನಾವಣೆಯ ಹಿನ್ನಡೆಯ ಬಳಿಕ ಹಲವು ರಾಜಕೀಯ ನಾಯಕರು ಇವಿಎಂ ಬಗ್ಗೆ ತಕರಾರುಗಳನ್ನು ಎತ್ತುತ್ತಿದ್ದಾರೆ. ಈ ಮೂಲಕ ಇವಿಎಂ ಪರ-ವಿರೋಧ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇವಿಎಂ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸುವವರೆಲ್ಲ ಜೀವಂತವಾಗುವುದು ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಆನಂತರವಾಗಿರುವುದರಿಂದ ಆರೋಪಗಳೇ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಬಂದಿವೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಾಗ ಇವಿಎಂ ಬಗ್ಗೆ ಮಾತನಾಡದೆ ಸುಮ್ಮಗಿದ್ದು, ಸೋಲಾದಾಗ ಮಾತ್ರ ಇವಿಎಂ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದರೆ ಆರೋಪವನು ಯಾರಾದರೂ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಇವಿಎಂ ಬಗ್ಗೆ ಯಾವುದೇ ತಕರಾರುಗಳಿದ್ದರೂ ಚುನಾವಣೆಗೆ ಮುನ್ನವೇ ಅದನ್ನು ವ್ಯಕ್ತಪಡಿಸಬೇಕು. ಎಲ್ಲ ವಿರೋಧ ಪಕ್ಷಗಳು ಜೊತೆಗೂಡಿ ಇವಿಎಂನ್ನು ಪ್ರಶ್ನಿಸಿದರೆ, ಅದರ ವಿರುದ್ಧ ಧ್ವನಿಯೆತ್ತಿದರೆ ಚುನಾವಣಾ ಆಯೋಗ ಕೂಡ ಆರೋಪವನ್ನು ಗಂಭೀರವಾಗಿ ಪರಿಗಣಿಸಬಹುದು. ದುರದೃಷ್ಟವಶಾತ್, ಇವಿಎಂ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೇ ಗೊಂದಲಗಳಿವೆ. ವೀರಪ್ಪಮೊಯ್ಲಿಯಂತಹ ಹಿರಿಯ ನಾಯಕರು ಇವಿಎಂನ್ನು ಈಗಲೂ ಬಹಿರಂಗವಾಗಿ ಬೆಂಬಲಿಸುತ್ತಾರೆ. ಹಲವು ನಾಯಕರು ಇವಿಎಂ ಪರ ವಿರೋಧಗಳ ಜೊತೆಗೆ ಗುರುತಿಸಿಕೊಳ್ಳದೆ ಮೌನ ತಳೆದಿದ್ದಾರೆ. ಸ್ವತಃ ರಾಹುಲ್ಗಾಂಧಿಯವರೇ ಇವಿಎಂ ಬಗ್ಗೆ ಇನ್ನೂ ಸ್ಪಷ್ಟವಾದ ಹೇಳಿಕೆಗಳನ್ನು ನೀಡಿಲ್ಲ. ಅಂದರೆ ಸದ್ಯದ ಸಂದರ್ಭದಲ್ಲಿ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಇವಿಎಂ ಹ್ಯಾಕ್ ಮಾಡುವ ಅಗತ್ಯವೇನೂ ಇಲ್ಲ ಎನ್ನುವುದು ಇವರೆಲ್ಲರಿಗೂ ಗೊತ್ತಿದ್ದಂತಿದೆ.

ವಿಶ್ವಾಸಾರ್ಹ ಚುನಾವಣೆಗೆ ಇವಿಎಂನ್ನು ಬದಿಗಿಟ್ಟು ಮತ್ತೆ ಮತಪತ್ರದ ಕಡೆಗೆ ತಿರುಗುವುದು ಪರಿಹಾರವೇ ಎನ್ನುವುದರ ಬಗ್ಗೆಯೂ ಇವರಲ್ಲಿ ಸ್ಪಷ್ಟತೆಯಿಲ್ಲ. ಉತ್ತರ ಭಾರತದಲ್ಲಿ ಚುನಾವಣೆಗಳನ್ನು ಸಂಘಪರಿವಾರದ ಗೂಂಡಾಗಳೇ ನಿಯಂತ್ರಿಸುತ್ತಾರೆ ಎನ್ನುವ ವ್ಯಾಪಕ ಆರೋಪಗಳಿವೆ. ಅಲ್ಪಸಂಖ್ಯಾತರು ಇವರಿಗೆ ಹೆದರಿ ಮತದಾನ ಮಾಡುವುದಕ್ಕೇ ಹಿಂಜರಿಯುತ್ತಾರೆ ಎನ್ನುವುದು ಮಾಧ್ಯಮಗಳಲ್ಲೂ ವರದಿಯಾಗಿವೆ. ಹೀಗಿರುವಾಗ, ಮತಪತ್ರಗಳಲ್ಲಿ ನಡೆಸುವ ಚುನಾವಣೆಗಳು ಕೂಡ ಮುಂದಿನ ದಿನಗಳಲ್ಲಿ ವಿಶ್ವಾಸಾರ್ಹವಾಗಿ ಉಳಿಯುವುದು ಸಾಧ್ಯವಿಲ್ಲ. ಚುನಾವಣಾ ಅಧಿಕಾರಿಗಳು, ನ್ಯಾಯಾಲಯ, ಚುನಾವಣಾ ಆಯೋಗ, ಮಾಧ್ಯಮ ಇವರೆಲ್ಲರ ಮೆದುಳನ್ನು ಒಂದು ಪಕ್ಷ ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿರುವಾಗ ಮತಯಂತ್ರವನ್ನು ಬದಲಿಸುವುದರಿಂದ ಚುನಾವಣೆಯ ಫಲಿತಾಂಶವನ್ನು ಬದಲಿಸಲಿಕ್ಕಾಗುತ್ತದೆಯೆ? ಚುನಾವಣೆಯನ್ನು ನಿಯಂತ್ರಿಸುವಲ್ಲಿ ಕಾರ್ಪೊರೇಟ್ ಶಕ್ತಿ ಮತ್ತು ಆರೆಸ್ಸೆಸ್ ಕೈ ಜೋಡಿಸಿದೆ. ಈ ಜಂಟಿ ಕಾರ್ಯಾಚರಣೆಯ ಮುಂದೆ ಸಂವಿಧಾನವೂ ಅಸಹಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಪಕ್ಷಗಳಿಗೆ ಆತ್ಮವಿಶ್ವಾಸದಿಂದ ಇವಿಎಂ ಪೂರ್ಣ ಪ್ರಮಾಣದಲ್ಲಿ ಹ್ಯಾಕ್ ಆಗುತ್ತಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಬರೇ ಗೊಣಗಾಟಗಳನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗ ಇವಿಎಂ ವಿರುದ್ಧ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಬಯಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ, ಇವಿಎಂನ ಬದಲಾವಣೆಯ ಬದಲಿಗೆ ಇವಿಎಂ ಸುಧಾರಣೆಯ ಬಗ್ಗೆ ವಿರೋಧಪಕ್ಷಗಳು ಲೋಕಸಭಾ ಚುನಾವಣೆಗೆ ಮುನ್ನ ಒಂದಾಗಿ ಧ್ವನಿಯೆತ್ತಬೇಕಾಗಿದೆ.

ಇವಿಎಂ ಬಗ್ಗೆ ಎರಡು ದಿನಗಳ ಹಿಂದೆ, ಸ್ಯಾಮ್ ಪಿಟ್ರೋಡಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನವೇ ಇವಿಎಂನ ಮೇಲಿರುವ ಆರೋಪಗಳನ್ನು ಸರಿಪಡಿಸಬೇಕು. ಇಲ್ಲವಾದರೆ, ಬಿಜೆಪಿ ೪೦೦ಕ್ಕೂ ಅಧಿಕ ಸ್ಥಾನಗಳನ್ನು ತನ್ನದಾಗಿಸಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಶೇ.೧೦೦ ರಷ್ಟು ವಿವಿ ಪ್ಯಾಟ್ಗಳನ್ನು ಅಳವಡಿಸಬೇಕು ಮಾತ್ರವಲ್ಲ, ಈ ವಿವಿಪ್ಯಾಟ್ ಸ್ಲಿಪ್ಗಳನ್ನು ಮತ ಹಾಕಿದ ಮತದಾರರು ಪಡೆದುಕೊಳ್ಳುವಂತಾಗಬೇಕು ಎನ್ನುವುದು ಅವರ ಆಗ್ರಹವಾಗಿದೆ. ಇವರಿಗೆ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಜೊತೆಯಾಗಿದ್ದಾರೆ. ‘‘ನಾನು ನನಗೆ ಇಷ್ಟವಿದ್ದವರಿಗೆ ಮತ ಹಾಕಿದರೆ ಅದು ಯಾರಿಗೆ ಬಿದ್ದಿದೆ ಎನ್ನುವುದು ನನಗೆ ಗೊತ್ತಿಲ್ಲ. ಹ್ಯಾಕ್ ಮಾಡಲಾಗದ ಚಿಪ್ ಅಳವಡಿಸಿರುವ ಒಂದೂ ಯಂತ್ರವೂ ಈ ಪ್ರಪಂಚದಲ್ಲಿಲ್ಲ. ಚಿಪ್ ತನ್ನಲ್ಲಿ ಅಡಕವಾಗಿರುವ ಸಾಫ್ಟ್ವೇರ್ನ ಆದೇಶವನ್ನು ಅನುಸರಿಸುತ್ತದೆ’’ ಎಂದಿರುವ ಅವರು, ರಾಹುಲ್ ಮೆಹ್ತಾರ ವೀಡಿಯೊವನ್ನು ತಮ್ಮ ವಾದಕ್ಕೆ ಸಾಕ್ಷಿಯಾಗಿ ನೀಡಿದ್ದಾರೆ. ಎಲ್ಲಕ್ಕಿಂತ ಗಂಭೀರ ವಿಷಯವೆಂದರೆ, ಇವಿಎಂ ಕುರಿತಂತೆ ವಿರೋಧಪಕ್ಷಗಳ ಜೊತೆಗೆ ಚುನಾವಣಾ ಆಯೋಗ ಚರ್ಚಿಸುವುದಕ್ಕೆ ಮುಂದೆ ಬರದೇ ಇರುವುದು. ‘‘ವಿವಿಪ್ಯಾಟ್ ಕುರಿತಂತೆ ಅಭಿಪ್ರಾಯ ಮುಂದಿಡಲು ಇಂಡಿಯಾ ನಿಯೋಗಕ್ಕೆ ಅವಕಾಶ ನೀಡಿ’’ ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ಆಗ್ರಹಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ನಾಯಕರು ಚುನಾವಣಾ ಆಯೋಗಕ್ಕೆ ಪದೇ ಪದೇ ಬೇಡಿಕೆ ಸಲ್ಲಿಸಿದ್ದರೂ ಆಯೋಗ ಈ ಬೇಡಿಕೆಯನ್ನು ನಿರ್ಲಕ್ಷಿಸುತ್ತಾ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇವಿಎಂನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ ಇಲ್ಲವೇ ಎನ್ನುವುದು ಆನಂತರದ ವಿಷಯ. ಮೊತ್ತ ಮೊದಲು, ಚರ್ಚೆಯಾಗಬೇಕಾಗಿರುವುದು ಚುನಾವಣಾ ಆಯೋಗ ಹ್ಯಾಕ್ ಆಗಿದೆಯೇ ಎನ್ನುವುದು. ಈ ದೇಶದ ಬಹುಜನರನ್ನು ಪ್ರತಿನಿಧಿಸುವ ಮೈತ್ರಿಕೂಟ ಪಕ್ಷವೊಂದು ಇವಿಎಂ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗವನ್ನು ಭೇಟಿ ಮಾಡಲು ಇಚ್ಛಿಸಿದರೆ ಅದಕ್ಕೆ ಅವಕಾಶ ಮಾಡಿ ಕೊಡದೇ ಇರುವುದು ಇವಿಎಂ ವಿರುದ್ಧ ಇರುವ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ. ಇವಿಎಂನ್ನು ದುರುಪಯೋಗ ಪಡಿಸಲು ಸಾಧ್ಯವೇ ಇಲ್ಲ ಎಂದಾದರೆ ಚುನಾವಣಾ ಆಯೋಗವೇಕೆ ವಿರೋಧಪಕ್ಷಗಳ ನಾಯಕರನ್ನು ಭೇಟಿ ಮಾಡಿ ಅವರಿಗೆ ಅದನ್ನು ಮನವರಿಕೆ ಮಾಡಿಕೊಡಬಾರದು? ಇಷ್ಟಕ್ಕೂ ವಿರೋಧ ಪಕ್ಷ ಕೇಳುತ್ತಿರುವುದು ಇವಿಎಂನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದಲ್ಲ. ಇವಿಎಂನಲ್ಲಿ ಸುಧಾರಣೆಯಾಗಬೇಕು ಎಂದಾಗಿದೆ. ಈ ಬೇಡಿಕೆ ಪಾರದರ್ಶಕ ಚುನಾವಣೆಯ ದೃಷ್ಟಿಯಿಂದ ಮುಖ್ಯವಾದುದು ಎಂದು ಯಾಕೆ ಚುನಾವಣಾ ಆಯೋಗಕ್ಕೆ ಅನ್ನಿಸುತ್ತಿಲ್ಲ. ಆಯೋಗಕ್ಕೇ ಪಾರದರ್ಶಕವಾದ ಚುನಾವಣೆ ನಡೆಯುವುದು ಇಷ್ಟವಿಲ್ಲವೆ? ಇವಿಎಂನಲ್ಲಿ ದೋಷವಿರಲಿ, ಇಲ್ಲದಿರಲಿ. ಅದರ ಬಗ್ಗೆ ಈ ದೇಶದ ಬಹುಸಂಖ್ಯೆಯ ಜನರು ತಮ್ಮ ಅನುಮಾನವನ್ನು,ಶಂಕೆಯನ್ನು ವ್ಯಕ್ತಪಡಿಸುತ್ತಾರೆ ಎಂದಾದರೆ ಅವರು ಪರೋಕ್ಷವಾಗಿ ಚುನಾವಣೆಯ ಪಾರದರ್ಶಕತೆಯ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಅರ್ಥ. ಆ ಶಂಕೆಯನ್ನು ನಿವಾರಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ.

ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರಾಗಿರುವ ಮದನ್ ಲೋಕೂರ್, ದೇಶದ ಪ್ರಥಮ ಆರ್ಟಿಐ ಕಮಿಷನರ್ ವಜಾಹತ್ ಸಹಿತ ಹಲವು ಗಣ್ಯರು, ತಜ್ಞರ ನೇತೃತ್ವದ ಸಮಿತಿಯೊಂದು ಇವಿಎಂ ಸುಧಾರಣೆಯ ಅಗತ್ಯವನ್ನು ಎತ್ತಿ ಹಿಡಿದಿದೆ. ಹ್ಯಾಕಿಂಗ್ ಜಾಲ ಅತ್ಯಾಧುನಿಕ ತಂತ್ರಜ್ಞಾನಗಳ ಮೊರೆ ಹೋಗುತ್ತಿರುವುದರಿಂದ ಕಾರ್ಪೊರೇಟ್ ಶಕ್ತಿಗಳು ಇವರನ್ನು ಬಳಸಿಕೊಳ್ಳುವುದನ್ನು ನಿರಾಕರಿಸುವಂತಿಲ್ಲ ಎಂದು ಸಮಿತಿ ಅಭಿಪ್ರಾಯ ಪಡುತ್ತದೆ. ಆದುದರಿಂದ ಇವಿಎಂನಲ್ಲಿ ಎಲ್ಲ ರೀತಿಯ ಸುಧಾರಣೆಯ ಬಗ್ಗೆ ವಿವರವಾದ ವರದಿಯನ್ನು ಸಮಿತಿ ನೀಡಿದೆ. ಸದ್ಯಕ್ಕೆ ವಿರೋಧ ಪಕ್ಷಗಳು ಒಕ್ಕೊರಲಿನಿಂದ ನೂರು ಶೇಕಡ ವಿವಿಪ್ಯಾಟ್ ಬಳಕೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು. ಮತ್ತು ಅದರ ಚೀಟಿಯನ್ನು ಮತದಾರರಿಗೆ ನೀಡುವುದು ಕಡ್ಡಾಯವಾಗಬೇಕು. ಇಷ್ಟನ್ನಾದರೂ ಲೋಕಸಭಾಚುನಾವಣೆಗೆ ಮುನ್ನ ಚುನಾವಣಾ ಆಯೋಗ ವ್ಯವಸ್ಥೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮೈತ್ರಿಕೂಟಗಳ ಬೇಡಿಕೆಗಳನ್ನು ಚುನಾವಣಾ ಆಯೋಗ ಆಲಿಸುವುದಕ್ಕೆ ಸಮಯವನ್ನು ನಿಗದಿಪಡಿಸಬೇಕು. ಇದಕ್ಕೂ ಚುನಾವಣಾ ಆಯೋಗ ಹಿಂದೇಟು ಹಾಕುತ್ತದೆ ಎಂದಾದರೆ, ಲೋಪಗಳು ಇವಿಎಂನಲ್ಲಿ ಮಾತ್ರವಲ್ಲ, ಚುನಾವಣಾ ಆಯೋಗದಲ್ಲೂ ಇವೆ ಎಂದು ಭಾವಿಸುವುದು ಅನಿವಾರ್ಯವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X