Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಸುಂಕದವನ ಬಳಿ ಸುಖ ದುಃಖ

ಸುಂಕದವನ ಬಳಿ ಸುಖ ದುಃಖ

ವಾರ್ತಾಭಾರತಿವಾರ್ತಾಭಾರತಿ27 Aug 2025 9:05 AM IST
share
ಸುಂಕದವನ ಬಳಿ ಸುಖ ದುಃಖ

‘ಸುಂಕದವನ ಬಳಿ ಸುಖ ದುಃಖ ಹೇಳಿಕೊಂಡರೆ’ ಪ್ರಯೋಜನವಿಲ್ಲ ಎನ್ನುವುದು ಭಾರತಕ್ಕೆ ಕೊನೆಗೂ ಸ್ಪಷ್ಟವಾಗಿದೆ. ಬುಧವಾರದಿಂದ ಅಮೆರಿಕಕ್ಕೆ ರಫ್ತಾಗುವ ಭಾರತದ ಸರಕುಗಳಿಗೆ ಶೇ.50ರಷ್ಟು ಸುಂಕವು ಜಾರಿಗೆ ಬರಲಿದೆ. ಭಾರತವು ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಒಟ್ಟು 87.3 ಶತಕೋಟಿ ಡಾಲರ್ ಮೊತ್ತದ ಸರಕುಗಳ ಪೈಕಿ ಅರ್ಧಾಂಶದಷ್ಟು, ಶೇ.50 ಸುಂಕಕ್ಕೆ ಒಳಪಡಲಿದೆ. ಪ್ರಮುಖವಾಗಿ ಜವಳಿ, ಉಡುಪುಗಳು, ರತ್ನಗಳು, ಆಭರಣ, ಸಮುದ್ರ ಆಹಾರ (ಮುಖ್ಯವಾಗಿ ಸಿಗಡಿ) ಹಾಗೂ ಚರ್ಮ ಸೇರಿದಂತೆ ಹಲವಾರು ಸರಕುಗಳ ಮೇಲೆ

ಶೇ.50ರಷ್ಟು ಸುಂಕ ಹೇರಿಕೆ ಆಗಲಿದೆ. ಇದು ಭಾರತದ ಆರ್ಥಿಕ ಚಟುವಟಿಕೆಗಳಲ್ಲಿ ತಲ್ಲಣ ಎಬ್ಬಿಸಿದೆ. ಪ್ರಧಾನಿ ಮೋದಿಯವರ ರಾಜ್ಯವಾಗಿರುವ ಗುಜರಾತ್‌ನ ಮೇಲೆ ಈಗಾಗಲೇ ಇದು ಪರಿಣಾಮ ಬೀರಿದೆ. ವಜ್ರದ ಉದ್ಯಮಗಳಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೆಲೆಯೇರಿಕೆಯ ಕಾರಣಕ್ಕಾಗಿ ಅಮೆರಿಕದಿಂದ ಹೊಸ ಬೇಡಿಕೆಗಳು ರದ್ದಾಗಿವೆ. ಸೆಪ್ಟಂಬರ್ ಹೊತ್ತಿಗೆ ಇದು ಭಾರತದ ಬೇರೆ ಬೇರೆ ವಲಯಗಳಲ್ಲಿ ತನ್ನ ಪರಿಣಾಮಗಳನ್ನು ಬೀರಬಹುದು.

ನದಿಯಲ್ಲಿ ನೀರು ಕುಡಿಯುತ್ತಿದ್ದ ಕುರಿಮರಿಯನ್ನು ತಿಂದು ಹಾಕಲು ತೋಳ ನೆಪಗಳನ್ನು ಹೇಳುವ ಕತೆ ಭಾರತದ ಪಾಲಿಗೆ ತೀರಾ ಹಳೆಯದು. ಭಾರತದ ಮೇಲೆ ಸುಂಕ ವಿಧಿಸಲು ಅಮೆರಿಕ ಹೇಳುತ್ತಿರುವ ಕಾರಣಗಳು ಈ ತೋಳದ ಕತೆಯನ್ನು ನೆನಪಿಸುತ್ತಿದೆ. ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ತಂತ್ರದ ಭಾಗವಾಗಿ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಶ್ವೇತ ಭವನ ಹೇಳುತ್ತಿದೆ. ಉಕ್ರೇನ್ ಯುದ್ಧ ಅಮೆರಿಕಕ್ಕೆ ಒಂದು ನೆಪ ಮಾತ್ರವಾಗಿದೆ. ಭಾರತವು ರಶ್ಯ, ಇರಾನ್, ಚೀನಾದಂತಹ ದೇಶಗಳ ಜೊತೆಗೆ ಸಂಬಂಧವನ್ನು ವಿಸ್ತರಿಸುವುದು ಅಮೆರಿಕಕ್ಕೆ ಇಷ್ಟವಿಲ್ಲದ ವಿಷಯವಾಗಿದೆ. ನಿಜಕ್ಕೂ ಯುದ್ಧವೇ ಇವೆಲ್ಲಕ್ಕೂ ಕಾರಣವಾಗಿದ್ದರೆ, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿರುವುದಕ್ಕಾಗಿ ಅಮೆರಿಕದ ಮೇಲೆ ಜಗತ್ತು ವಿಧಿಸಬೇಕಾಗಿರುವ ಸುಂಕವೆಷ್ಟು? ಒಂದೆಡೆ ಇಸ್ರೇಲನ್ನು ಬಳಸಿಕೊಂಡು ಮಧ್ಯಪ್ರಾಚ್ಯವನ್ನು ಹಿಂಸಾಗ್ರಸ್ಥವನ್ನಾಗಿಸಿರುವ ಅಮೆರಿಕಕ್ಕೆ ಉಕ್ರೇನ್‌ನ ವಿರುದ್ಧದ ಯುದ್ಧಕ್ಕಾಗಿ ರಶ್ಯವನ್ನು ಟೀಕಿಸುವ ನೈತಿಕತೆಯಿದೆಯೆ? ರಶ್ಯವನ್ನು ಮುಂದಿಟ್ಟುಕೊಂಡು ಅಮೆರಿಕವು ಉಕ್ರೇನನ್ನು ಕೂಡ

ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಭಾರತವು ಅಮೆರಿಕದ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಷ್ಟೂ ಹೆಚ್ಚು ಸ್ವಾವಲಂಬಿಯಾಗುತ್ತಾ ಹೋಗುತ್ತದೆ. ಈ ಕಾರಣದಿಂದಲೇ ಭಾರತದ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಳ್ಳಲು ಅಮೆರಿಕಕ್ಕೆ ಇಷ್ಟವಿಲ್ಲ. ಒಂದು ರೀತಿಯಲ್ಲಿ ಅದಕ್ಕೆ ಭಾರತದ ಸ್ನೇಹ ಬೇಡ. ಬದಲಿಗೆ ಪಾಕಿಸ್ತಾನದಂತೆ ಭಾರತವೂ ಅಮೆರಿಕದ ಜೀತ ಮಾಡುತ್ತಿರಬೇಕು

ಎನ್ನುವ ಉದ್ಧಟತನ ಈ ಸುಂಕ ಹೇರಿಕೆಯ ಹಿಂದಿದೆ. ಸುಂಕಕ್ಕೆ ಹೆದರಿ ಭಾರತವು ರಶ್ಯದ ಜೊತೆಗೆ ತೈಲ ಒಪ್ಪಂದದಿಂದ ಹಿಂದೆ ಸರಿಯುತ್ತದೆ ಎಂದು ಅಮೆರಿಕ ಭಾವಿಸಿತ್ತು. ಆದರೆ, ಇದೀಗ ಸುಂಕ ಹೇರಿಕೆಯನ್ನು ಭಾರತ ಖಂಡಿಸಿದೆ ಮಾತ್ರವಲ್ಲ, ರಶ್ಯದ ಜೊತೆಗೆ ಪೂರ್ಣ ಪ್ರಮಾಣದ ಸಂಬಂಧ ಕಡಿದುಕೊಳ್ಳಲು ಸಿದ್ಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ವಿಪರ್ಯಾಸವೆಂದರೆ, ಯುರೋಪ್‌ನ ದೇಶಗಳು ರಶ್ಯದ ಜೊತೆಗೆ ವ್ಯಾಪಾರ ಸಂಬಂಧವನ್ನು ಉಳಿಸಿಕೊಂಡಿದ್ದು ಅಮೆರಿಕ ಅದರ ಬಗ್ಗೆ ತುಟಿ ಬಿಚ್ಚಿಲ್ಲ.

ನಿಜಕ್ಕೂ ಅಮೆರಿಕ ಯುದ್ಧದ ಕುರಿತಂತೆ ಕಾಳಜಿಯನ್ನು ಹೊಂದಿದ್ದರೆ ಅದು ಪಾಕಿಸ್ತಾನದ ಜೊತೆಗೆ ಅಂತರವನ್ನು ಕಾಪಾಡುತ್ತಿತ್ತು. ಆದರೆ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರದ ಬಳಿಕ ಅಮೆರಿಕವು ಪಾಕಿಸ್ತಾನಕ್ಕೆ ಇನ್ನಷ್ಟು ಹತ್ತಿರವಾಗಿದೆ. ಮೊದಲ ಬಾರಿಗೆ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥನ ಜೊತೆಗೆ ಚಹಾ ಕೂಟ ನಡೆಸಿದರು. ಅಷ್ಟೇ ಅಲ್ಲ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಅನಗತ್ಯವಾಗಿ ಮೂಗು ತೂರಿಸಿದರು. ಭಾರತ ನಿರಾಕರಿಸಿದ ಬಳಿಕವೂ, ‘ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದೆ’ ಎಂದು ಹೇಳುತ್ತಾ ಮುಜುಗರವುಂಟು ಮಾಡಿದರು. ಈ ಎಲ್ಲ ಬೆಳವಣಿಗೆಗಳು ಭಾರತ-ಅಮೆರಿಕ ನಡುವಿನ ಸಂಬಂಧ ಹಳಸಲು ಕಾರಣವಾಯಿತು. ಟ್ರಂಪ್ ನಡವಳಿಕೆ ಭಾರತದ ಜೊತೆಗಿನ ಸಂಬಂಧದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿರುವುದನ್ನು ಅಮೆರಿಕದ ನಾಯಕರೇ ಗಮನಿಸಿದ್ದಾರೆ. ಈ ಸಂಬಂಧ ಮಾಜಿ ವಿದೇಶ ಕಾರ್ಯದರ್ಶಿ ಜಾನ್ ಕೆರಿ, ರಿಪಬ್ಲಿಕನ್ ನಾಯಕಿ ನಿಕಿ ಹ್ಯಾಲೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಉಭಯ ದೇಶಗಳ ನಾಯಕರು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳದಿದ್ದರೆ

ಬಿರುಕು ಇನ್ನಷ್ಟು ತೀವ್ರವಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಮಾತುಕತೆ ಎಂದರೆ, ಅಮೆರಿಕ ಹೇಳಿದ ಎಲ್ಲ ಶರತ್ತುಗಳಿಗೆ ತಲೆಯಾಡಿಸುವುದು ಎಂದಾಗಿದ್ದರೆ, ಅಂತಹ ಮಾತುಕತೆಗಳಿಂದ ಭಾರತದ ಜನರ ಹಿತಾಸಕ್ತಿಗೆ ಧಕ್ಕೆಯಾಗಲಿದೆ.

ರಶ್ಯ, ಚೀನಾ, ಇರಾನ್, ಭಾರತ ಮೊದಲಾದ ದೇಶಗಳು ಒಂದಾಗಿ ಡಾಲರ್‌ಗೆ ಪರ್ಯಾಯವಾದ ಆರ್ಥಿಕತೆಯೊಂದನ್ನು ಕಟ್ಟುವ ಆತಂಕ ಅಮೆರಿಕವನ್ನು ಕಾಡುತ್ತಿದೆ. ಚೀನಾ ಇಂದು ಪರ್ಯಾಯ ಶಕ್ತಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವು ತೈಲ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ರಶ್ಯದ ಜೊತೆಗೆ ಸಂಬಂಧವನ್ನು ಹೊಂದುವುದರಿಂದ ಅಮೆರಿಕಕ್ಕೆ ಆರ್ಥಿಕವಾಗಿ ನಷ್ಟವಾಗುತ್ತದೆ ಮಾತ್ರವಲ್ಲ, ರಶ್ಯ ಆರ್ಥಿಕವಾಗಿ ಬಲಿಷ್ಠವಾಗುತ್ತದೆ. ಇದೇ ಸಂದರ್ಭದಲ್ಲಿ ಚೀನಾದ ಜೊತೆಗೆ ಸಂಬಂಧ ಸುಧಾರಣೆಗೆ ಭಾರತ ಪ್ರಯತ್ನಿಸುತ್ತಿರುವುದು ಕೂಡ ಅಮೆರಿಕದ ಕಣ್ಣು ಕೆಂಪಾಗಿಸಿದೆ. ಇರಾನ್ ಜೊತೆಗೆ ತೈಲ ಒಪ್ಪಂದದಲ್ಲಿ ಸುಧಾರಣೆಯಾದರೆ ಭಾರತಕ್ಕೆ ಬಹಳಷ್ಟು ಆರ್ಥಿಕ ಲಾಭವಿದೆ. ಇದು ಅಮೆರಿಕಕ್ಕೂ ಗೊತ್ತಿದೆ. ಆದುದರಿಂದಲೇ, ಒಂದೆಡೆ ಇರಾನನ್ನು ಖಳನಾಯಕನಾಗಿಸಿ ಅದರ ಜೊತೆಗೆ ಇತರ ದೇಶಗಳು ಸಂಬಂಧವನ್ನು ಹೊಂದದಂತೆ ಒತ್ತಡಗಳನ್ನು ಹಾಕುತ್ತಿದೆ. ಆದರೆ ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದರೆ, ಸಾರ್ವಭೌಮತೆಯನ್ನು ಉಳಿಸಿಕೊಳ್ಳಬೇಕಾದರೆ ಅಮೆರಿಕದ ಸವಾಲನ್ನು ಸ್ವೀಕರಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಮೊತ್ತ ಮೊದಲಾಗಿ ತನ್ನ ನೆರೆ ಹೊರೆಯ ಜೊತೆಗೆ ಸಂಬಂಧ ಸುಧಾರಣೆ ಮಾಡುವ ಬಗ್ಗೆ ಒತ್ತು ನೀಡಬೇಕು. ಚೀನಾದ ಜೊತೆಗೆ ಸಂಬಂಧವನ್ನು ಮರು ನಿರ್ಮಿಸುವುದು ಎಲ್ಲ ರೀತಿಯಲ್ಲೂ ಭಾರತಕ್ಕೆ ಅನಿವಾರ್ಯವಾಗಿದೆ. ರಶ್ಯದಿಂದ ತೈಲ ಆಮದು ಮಾಡಿಕೊಳ್ಳುವುದರಿಂದ ಭಾರತಕ್ಕೆ ಲಾಭವಿದೆ ಎಂದಾದರೆ, ಉಕ್ರೇನ್ ಮೇಲಿನ ಯುದ್ಧದ ಹೆಸರಿನಲ್ಲಿ ಭಾರತದ ಮೇಲೆ ನಿಯಂತ್ರಣ ಹೇರುವ ಅಧಿಕಾರ ಅಮೆರಿಕಕ್ಕೆ ಇಲ್ಲ. ಯಾಕೆಂದರೆ, ಉಕ್ರೇನ್‌ನ ಮೇಲೆ ರಶ್ಯ ನಡೆಸುತ್ತಿರುವ ದಾಳಿಗೆ ಅಮೆರಿಕವೂ ಪರೋಕ್ಷವಾಗಿ ಕಾರಣವಾಗಿದೆ. ಒಂದೆಡೆ ಇಸ್ರೇಲ್, ಮಗದೊಂದೆಡೆ ಪಾಕಿಸ್ತಾನದ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡು ಭಾರತಕ್ಕೆ ಶಾಂತಿಯ ಬಗ್ಗೆ ಬೋಧನೆ ಮಾಡುವುದೇ ಅಮೆರಿಕದ ಆಷಾಢಭೂತಿತನದ ಪರಮಾವಧಿಯಾಗಿದೆ. ಭಾರತವು ಅಮೆರಿಕವನ್ನು ನೆಚ್ಚಿಕೊಳ್ಳುವ ಭರದಲ್ಲಿ ಕೆಡಿಸಿಕೊಂಡ ಇತರ ದೇಶಗಳ ಜೊತೆಗಿನ ಸಂಬಂಧಕ್ಕೆ ಮರುಜೀವ ಕೊಟ್ಟು, ಸ್ವಾವಲಂಬಿತನಕ್ಕೆ ಆದ್ಯತೆ ನೀಡಬೇಕು. ಭಾರತ ತನ್ನ ಬೆದರಿಕೆಗೆ ಮಣಿಯುವ ದೇಶವಲ್ಲ ಎನ್ನುವುದು ಅರ್ಥವಾದ ದಿನ, ಅಮೆರಿಕ ಖುದ್ದಾಗಿ ಭಾರತದ ಜೊತೆಗೆ ಮಾತುಕತೆಗೆ ಮುಂದಾಗಲಿದೆ. ಅಲ್ಲಿಯವರೆಗೆ ಟ್ರಂಪ್ ಸುಂಕ ಹೇರಿಕೆಯ ಕೆಲವು ದುಷ್ಪರಿಣಾಮಗಳನ್ನು ಎದುರಿಸಲು ಭಾರತ ಮಾನಸಿಕವಾಗಿ ಸಿದ್ಧವಾಗಿರಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X