Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಹೆಚ್ಚುತ್ತಿರುವ ಹೃದಯಾಘಾತ ಸಾವುಗಳಿಗೆ...

ಹೆಚ್ಚುತ್ತಿರುವ ಹೃದಯಾಘಾತ ಸಾವುಗಳಿಗೆ ಹೃದಯ ಹೀನ ಆರೋಗ್ಯ ವ್ಯವಸ್ಥೆ ಕಾರಣವೆ?

ವಾರ್ತಾಭಾರತಿವಾರ್ತಾಭಾರತಿ2 July 2025 7:18 AM IST
share
ಹೆಚ್ಚುತ್ತಿರುವ ಹೃದಯಾಘಾತ ಸಾವುಗಳಿಗೆ ಹೃದಯ ಹೀನ ಆರೋಗ್ಯ ವ್ಯವಸ್ಥೆ ಕಾರಣವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸಿದ ಸಾವಿನ ಸರಣಿ ಮುಂದುವರಿದಿದೆ. ಹಾಸನ ಜಿಲ್ಲೆಯಲ್ಲಿ ಒಂದೇ ದಿನ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತರಲ್ಲಿ ಮೂವರು 50 ವರ್ಷದ ಆಸುಪಾಸಿನವರು ಎನ್ನುವುದು ವಿಶೇಷ. ಕಳೆದ ನಾಲೈದು ವರ್ಷಗಳಿಂದ ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸುವ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ತಿಂಗಳೂ ಸರಾಸರಿ 50 ರಿಂದ 70 ಮಂದಿ ಯುವಕರೇ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶಗಳನ್ನು ವರದಿಗಳು ಹೇಳುತ್ತಿವೆ. ಹಾಸನದಲ್ಲಿ ಕಳೆದ ಒಂದು ತಿಂಗಳಲ್ಲಿ ಹೃದಯಾಘಾತದಿಂದ 18 ಮಂದಿ ಮೃತಪಟ್ಟಿದ್ದಾರೆ. ಇವರಾರೂ ಸ್ಕೂಲಕಾಯರಾಗಿರಲಿಲ್ಲ. ಸಾಧಾರಣವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಇಂತಹ ಸಾವುಗಳು ಸಂಭವಿಸಿದ್ದರೆ ಅದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ 40 ವರ್ಷದ ಒಳಗಿನವರೇ ಈ ಹೃದಯಸ್ತಂಭನ ಅಥವಾ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದರಿಂದ ಇದು ಆತಂಕದ ವಿಷಯವಾಗಿದೆ. 20 ವರ್ಷದ ಒಳಗಿನ ವಿದ್ಯಾರ್ಥಿಗಳು ಕೂಡ ಮೃತಪಟ್ಟಿರುವ ಉದಾಹರಣೆಗಳಿವೆ. ಕರ್ನಾಟಕದಲ್ಲಿ ಹೃದಯ ಸ್ತಂಭನ ಮೊತ್ತ ಮೊದಲು ಚರ್ಚೆಯಾಗಿದ್ದು ಪುನೀತ್ ರಾಜ್‌ಕುಮಾರ್ ಅವರ ದುರಂತದಿಂದ. ಈ ಅನಿರೀಕ್ಷಿತ ಆಘಾತವನ್ನು ಕರ್ನಾಟಕಕ್ಕೆ ತಾಳಿಕೊಳ್ಳುವುದು ಕಷ್ಟವಾಯಿತು. ಆರೋಗ್ಯ, ಮೈಕಟ್ಟಿನ ಕುರಿತಂತೆ ಅಪಾರ ಕಾಳಜಿಹೊಂದಿದ್ದ, ಆಹಾರದ ಬಗ್ಗೆಯೂ ಅತ್ಯಂತ ಜಾಗರೂಕರಾಗಿದ್ದ ಎಳೆ ವಯಸ್ಸಿನ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಹಠಾತ್ತನೆ ಹೃದಯಾಘಾತವಾಗಿದ್ದು ಹೇಗೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದರ ಬೆನ್ನಿಗೇ ರಾಜ್ಯದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಹೃದಯಾಘಾತಗಳು ಏಕಾಏಕಿ ಸದ್ದು ಮಾಡತೊಡಗಿದವು. ಹಲವು ತಜ್ಞರು ಈ ಬಗ್ಗೆ ತಮ್ಮ ಆತಂಕ, ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರಾದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಾ ಬಂತು. ಇದೀಗ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತ ಸಾವಿನ ಬಳಿಕ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ತನಿಖೆ ನಡೆಸಲು ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. 10 ದಿನಗಳ ಒಳಗೆ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.

ಈ ಹೃದಯಾಘಾತಗಳ ಬಗ್ಗೆ ಅನುಮಾನ ಪಡಲು ಹಲವು ಕಾರಣಗಳಿವೆ. ಮುಖ್ಯವಾಗಿ ಕೊರೋನೋತ್ತರ ದಿನಗಳಲ್ಲಿ ಈ ಹೃದಯಾಘಾತಗಳು ಹೆಚ್ಚಿ ವೆ. ಎರಡನೆಯದಾಗಿ, ಈ ಹೃದಯಾಘಾತಕ್ಕೆ 40 ವರ್ಷದ ಒಳಗಿನ ಯುವಕ ಯುವತಿಯರೇ ಬಲಿಯಾಗುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳೂ ಅನಿರೀಕ್ಷಿತವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆಗಳು ಹಲವೆಡೆ ವರದಿಯಾಗಿವೆ. ಆರಂಭದಲ್ಲಿ ಆಹಾರ ಶೈಲಿಯೇ ಈ ಹೃದಯಾಘಾತಕ್ಕೆ ಕಾರಣ ಎಂದು ವೈದ್ಯಕೀಯ ತಜ್ಞರು ಹೇಳಿಕೆ ನೀಡಿದ್ದರು. ಆದರೆ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿಯನ್ನು ವಹಿಸುವ ನಟರೂ ಇದಕ್ಕೆ ಬಲಿಯಾಗಿದ್ದಾರೆ. ಹಾಗೆಯೇ, ಜಂಕ್ ಫುಡ್‌ಗಳ ಅಭ್ಯಾಸವಿಲ್ಲದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೊರೋನೋತ್ತರ ದಿನಗಳಲ್ಲಿ ಈ ಹೃದಯಾಘಾತಗಳು ಯಾಕೆ ಹೆಚ್ಚಿವೆ? ಕೊರೋನಕ್ಕೂ ಈ ಹೃದಯಾಘಾತಕ್ಕೂ ಸಂಬಂಧವಿದೆಯೆ? ಎನ್ನುವುದಕ್ಕೆ ಉತ್ತರ ಕಂಡು ಹಿಡಿಯುವುದು ಅತ್ಯಗತ್ಯವಾಗಿದೆ. ಕೋವಿಡ್ ಹೆಸರಿನಲ್ಲಿ ನಡೆದ ಲಸಿಕೆ ದಂಧೆಯೂ ದೇಶದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನುವ ಭೀತಿಯನ್ನು ಈಗಾಗಲೇ ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ. ಕೊರೋನ ಕಾಲದಲ್ಲಿ ಲಸಿಕೆ ತಯಾರಿಕೆ ಸಂಬಂಧಿಸಿದಂತೆ ಅನಾರೋಗ್ಯಕರ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಗೆ ಅನಗತ್ಯವಾಗಿ ಭಾರತವೂ ಇಳಿಯಿತು. ಪೂರ್ಣ ಪ್ರಮಾಣದಲ್ಲಿ ಅನುಮೋದನೆಯನ್ನು ಪಡೆಯದ ಲಸಿಕೆಗಳನ್ನು ಮಾರುಕಟ್ಟೆಗೆ ಇಳಿಸಲು ಸರಕಾರ ಅನುಮತಿ ನೀಡಿತು. ಹಾಗೆಯೇ ಯುರೋಪಿನ ಹಲವು ದೇಶಗಳು ಬಳಸಲಾರಂಭಿಸಿದ ಕೆಲವೇ ಸಮಯಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಂಡು ಬಂದುದರಿಂದ ಲಸಿಕೆಗಳನ್ನು ಹಿಂದೆಗೆದುಕೊಂಡಿದ್ದವು. ಆದರೆ ಭಾರತ ಅಂತಹ ಲಸಿಕೆ ಬಳಕೆಯ ಬಗ್ಗೆ ಬೇಜವಾಬ್ದಾರಿ ನಿಲುವನ್ನು ತಳೆಯಿತು. ಇದೀಗ ಲಸಿಕೆಯ ದುಷ್ಪರಿಣಾಮಗಳ ಕುರಿತಂತೆ ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. 'ಲಸಿಕೆ ಐಚ್ಚಿಕವಾಗಿತ್ತು' ಎಂದು ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಿದೆ. ಆದರೆ ಲಸಿಕೆಯನ್ನು ಪರೋಕ್ಷವಾಗಿ ದೇಶದ ಮೇಲೆ ಸರಕಾರ ಹೇರಿತ್ತು. ಲಸಿಕೆ ಹಾಕಿಸಿಕೊಳ್ಳದವರಿಗೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ಅವಕಾಶವನ್ನು ನಿರಾಕರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಪ್ರವೇಶವಿಲ್ಲ ಎನ್ನುವ ಆದೇಶ ನೀಡಲಾಗಿತ್ತು. ಲಸಿಕೆ ಐಚ್ಚಿಕವಾದದ್ದು ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಹೊತ್ತಿಗೆ ಈ ದೇಶದ ಶೇ. 90ರಷ್ಟು ಜನರು ಲಸಿಕೆಗಳನ್ನು ಪಡೆದೂ ಆಗಿತ್ತು.

ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಭಾರತ ಮತ್ತು ಇತರ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗಿ ಲಸಿಕೆಯನ್ನು ಉತ್ಪಾದಿಸಲು ಆಸ್ಟಝನಕ ಜೊತೆಗೆ 2021ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದರ ಅತಿ ದೊಡ್ಡ ಮಾರುಕಟ್ಟೆ ಭಾರತವೇ ಆಗಿತ್ತು. 2024ರ ಏಪ್ರಿಲ್‌ನ ವೇಳೆಗೆ ಭಾರತದಲ್ಲಿ 170 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಸರಕಾರವೇ ಹೆಮ್ಮೆಯಿಂದ ಹೇಳಿಕೊಂಡಿತ್ತು. ವಿಪರ್ಯಾಸವೆಂದರೆ ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ನಂತಹ ಹಲವು ಯುರೋಪಿಯನ್ ದೇಶಗಳು ಈ ಲಸಿಕೆಯನ್ನು 2021ರಲ್ಲೇ ಬಳಸುವುದನ್ನು ನಿಲ್ಲಿಸಿದ್ದವು. ಬಳಿಕ ಡೆನ್ಮಾರ್ಕ್, ಐರ್‌ಲ್ಯಾಂಡ್, ಥಾಯ್ಲೆಂಡ್, ನೆದರ್ ಲ್ಯಾಂಡ್ಸ್, ನಾರ್ವೆ ಕೂಡ ನಿಷೇಧ ಹೇರಿತು. ಆದರೆ ಭಾರತದಲ್ಲಿ ಕೇಂದ್ರ ಸರಕಾರದ ನೇತೃತ್ವದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪ್ರೋತ್ಸಾಹಿಸಲಾಯಿತು. ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಬೇರೆ ಛಾಪಿಸಲಾಗಿತ್ತು. ಬಳಿಕ ಕೋವಿಶೀಲ್ಡ್ ಕಂಪೆನಿಯೇ ದುಷ್ಪರಿಣಾಮಗಳ ಬಗ್ಗೆ ನ್ಯಾಯಾಲಯದ ಮುಂದೆ ತಪ್ರೊಪ್ಪಿಕೊಂಡಿತು. ಆದರೆ ಪ್ರಧಾನಿ ಮಾತ್ರ ಈವರೆಗೂ ಲಸಿಕೆಯಲ್ಲಾದ ಪ್ರಮಾದಗಳ ಬಗ್ಗೆ ತಪ್ಪೋಪ್ಪಿಕೊಂಡಿಲ್ಲ. ನ್ಯಾಯಾಲಯದ ಮುಂದೆಯೂ, 'ದುಷ್ಪರಿಣಾಮಗಳಿಗೆ ಸರಕಾರ ಹೊಣೆಯಲ್ಲ' ಎಂದು ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಹೃದಯ ಸ್ತಂಭನ ಸಾವುಗಳ ಹಿಂದೆ ಲಸಿಕೆಯ ದುಷ್ಪರಿಣಾಮ ಎಷ್ಟಿದೆ ಎನ್ನುವುದು ತನಿಖೆ ನಡೆಯಬೇಕಾಗಿದೆ. ಒಂದು ವೇಳೆ ತನಿಖೆ ನಡೆದು ಲಸಿಕೆಯ ದುಷ್ಪರಿಣಾಮ ಸಾಬೀತಾದರೆ, ಸರಕಾರ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಆದುದರಿಂದಲೇ ಈ ಬಗ್ಗೆ ತನಿಖೆ ನಡೆಯುವುದಕ್ಕೆ ಕೇಂದ್ರ ಸರಕಾರ ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯ ಸರಕಾರಗಳೇ ತಜ್ಞರಿಂದ ತನಿಖೆ ನಡೆಸಬೇಕಾಗಿದೆ. ಹೃದಯಾಘಾತ, ಸ್ತಂಭನದಿಂದ ಮೃತಪಟ್ಟ ಯುವಕರಲ್ಲಿ ಲಸಿಕೆ ಪಡೆದುಕೊಂಡವರೆಷ್ಟು, ಅದು ಅವರ ಮೇಲೆ ಬೀರಿರುವ ಪರಿಣಾಮಗಳೇನು ಎಂಬ ಬಗ್ಗೆಯೂ ಅಧ್ಯಯನ ನಡೆಯಬೇಕು. ಈ ಹಿಂದೆ ಪೋಲಿಯೊ ಲಸಿಕೆಯನ್ನು ಆತುರಾತುರವಾಗಿ ಮಾರುಕಟ್ಟೆಗೆ ಇಳಿಸಿದ ಪರಿಣಾಮವಾಗಿ ಸಂಭವಿಸಿದ ಹಾನಿಯ ಬಗ್ಗೆ ಸಂಶೋಧನ ವರದಿಯೊಂದು ಬಹಿರಂಗಪಡಿಸಿತ್ತು. 2001ರಿಂದ 2017ರವರೆಗೆ 4.91 ಲಕ್ಷ ಮಕ್ಕಳು ಲಸಿಕೆಯಿಂದ ಪಾರ್ಶ್ವವಾಯು ಪೀಡಿತರಾಗಿದ್ದರು ಎಂದು ವರದಿ ಹೇಳಿತ್ತು. ಕೊರೋನ ಲಸಿಕೆ ಮಾನವ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ಸಿದ್ದಗೊಂಡ ಲಸಿಕೆಯಾಗಿದೆ. ಆದುದರಿಂದಲೇ, ಲಸಿಕೆಗೂ ಹೃದಯಾಘಾತಕ್ಕೂ ಇರುವ ಸಂಬಂಧಗಳ ಬಗ್ಗೆ ಅಧ್ಯಯನ ನಡೆಯುವುದು ಅತ್ಯಗತ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X