Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮತ್ತೆ ಮತ್ತೆ ಸಂಭವಿಸುವ ಕೈಗಾರಿಕಾ...

ಮತ್ತೆ ಮತ್ತೆ ಸಂಭವಿಸುವ ಕೈಗಾರಿಕಾ ದುರಂತಗಳು

ವಾರ್ತಾಭಾರತಿವಾರ್ತಾಭಾರತಿ3 Oct 2026 7:50 AM IST
share
ಮತ್ತೆ ಮತ್ತೆ ಸಂಭವಿಸುವ ಕೈಗಾರಿಕಾ ದುರಂತಗಳು

ಮಂಗಳೂರಿನ ಹೊರವಲಯದಲ್ಲಿರುವ ಎಂಆರ್‌ಪಿಎಲ್ ಮಂಗಳೂರು ತೈಲ ಸಂಸ್ಕರಣಾ ಕಂಪೆನಿಯ ಸ್ಥಾವರದಲ್ಲಿ ಸೆಪ್ಟಂಬರ್ 30ರಂದು ಸಂಭವಿಸಿದ ಸ್ಫೋಟದಲ್ಲಿ ಓರ್ವ ಗುತ್ತಿಗೆ ಕಾರ್ಮಿಕ ಜೀವ ಕಳಕೊಂಡಿದ್ದಾರೆ. ಅನೇಕ ಮಂದಿಗೆ ಗಾಯಗಳಾಗಿವೆ. ಸ್ಫೋಟದ ಸಂದರ್ಭದಲ್ಲಿ ಆದ ಭೂಕಂಪನದಿಂದ ಆ ವಲಯದ ಕೆಲವು ಪೂಜಾಸ್ಥಾನ, ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಯಥಾಪ್ರಕಾರ ಮೃತರ ಕುಟುಂಬಕ್ಕೆ ಕಂಪೆನಿಯು ಪರಿಹಾರವನ್ನು ಘೋಷಿಸಿದೆ. ಅವಘಡಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಬಹುದು. ಅಲ್ಲಿಗೆ ಸರಕಾರದ ಮತ್ತು ಕಂಪೆನಿಯ ಜವಾಬ್ದಾರಿ ಮುಗಿಯಿತು.

ಕೈಗಾರಿಕಾ ಕ್ಷೇತ್ರದಲ್ಲಿ ಅವಘಡ ಸಂಭವಿಸುವುದು ಹೊಸತಲ್ಲ. ಈ ವರ್ಷ ಎಪ್ರಿಲ್ ತಿಂಗಳಿನಲ್ಲಿ ಛತ್ತೀಸ್‌ಗಡದ ಸಿಂಘಿಟರೈಯಲ್ಲಿರುವ ವೇದಾಂತ ಕಂಪೆನಿಯ 1,200 ಮೆಗಾವಾಟ್ಸ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರದಲ್ಲಿ ಉಗಿಯನ್ನು ಸಾಗಿಸುವ ಕೊಳವೆ ಒಡೆದು 24 ಕಾರ್ಮಿಕರು ಮೃತಪಟ್ಟರು, 15 ಮಂದಿ ಗಾಯಗೊಂಡರು.

ಎಂಆರ್‌ಪಿಎಲ್‌ನಲ್ಲಿಯೇ 2025 ಜುಲೈಯಲ್ಲಿ ಇಬ್ಬರು ನೌಕರರು ಹೈಡ್ರೋಜನ್ ಸಲ್ಪೈಡ್ ಅನಿಲ ಸೋರಿಕೆಗೆ ಬಲಿಯಾಗಿ ಪ್ರಾಣ ಕಳಕೊಂಡಿದ್ದರು. ಆ ವರ್ಷ ಜೂನ್ ತಿಂಗಳಿನಲ್ಲಿ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧಿ ಉತ್ಪಾದಿಸುವ ಸಿಗಾಚಿ ಇಂಡಸ್ಟ್ರೀಸ್ ಸ್ಥಾವರದಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ 54 ಮಂದಿ ಮೃತರಾಗಿದ್ದರು. 2024ರ ಆಗಸ್ಟ್ ತಿಂಗಳಿನಲ್ಲಿ ಅದೇ ರಾಜ್ಯದ ವಿಶೇಷ ಆರ್ಥಿಕ ವಲಯದಲ್ಲಿ ಇನ್ನೊಂದು ಔಷಧಿ ತಯಾರಿಸುವ ಘಟಕದಲ್ಲಿ ಆದ ಸ್ಫೋಟದಲ್ಲಿ 18 ಕಾರ್ಮಿಕರು ಜೀವ ಕಳಕೊಂಡಿದ್ದರು. ಆ ವರ್ಷ ಮೇ ತಿಂಗಳಿನಲ್ಲಿ ಮುಂಬೈಯ ರಾಸಾಯನಿಕ ಕಂಪೆನಿಯಲ್ಲಿ ಆದ ದುರ್ಘಟನೆಯು 13 ಜನರನ್ನು ಬಲಿಪಡೆದಿತ್ತು. 2022 ಮೇಯಲ್ಲಿ ದಿಲ್ಲಿಯ ಸಮೀಪದ ಮುಂಡ್ಕಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಕಾರ್ಖಾನೆಯ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು 21 ಮಂದಿ ಮಹಿಳಾ ಉದ್ಯೋಗಿಗಳು ಸೇರಿದಂತೆ 27 ಮಂದಿಯ ಪ್ರಾಣ ಹರಣವಾಯಿತು.

ಕೈಗಾರಿಕಾ ಸ್ಥಾವರಗಳಲ್ಲಿ ಯಾಕೆ ಈ ತರದ ಅವಘಡಗಳು ಸಂಭವಿಸುತ್ತವೆ? ಹಲವಾರು ಅಪಘಾತಗಳ ಅಧ್ಯಯನದಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಎರಡು ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಒಂದು, ಸ್ಥಾವರಗಳಲ್ಲಿ ಅಗತ್ಯದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವುದು. ಎರಡು, ಅಲ್ಲಿನ ಉದ್ಯೋಗಿಗಳಿಗೆ ಅಪಘಾತಗಳ ತಡೆಗೆ ಅಗತ್ಯವಾದ ಕೌಶಲ್ಯದ ತರಬೇತಿಯ ಕೊರತೆ. ಕಂಪೆನಿಯ ಲಾಭದಾಯಕತೆಯನ್ನು ಹೆಚ್ಚಿಸಲು ವೆಚ್ಚದಲ್ಲಿ ಕಡಿತಮಾಡಬೇಕೆಂಬ ನೀತಿಯು ಈ ಎರಡು ಕಾರಣಗಳ ಹಿಂದೆ ಅಡಗಿದೆ.

1984 ಡಿಸೆಂಬರ್‌ನಲ್ಲಿ ಭೋಪಾಲದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ನಡೆದ ಭಯಾನಕ ವಿಷಾನಿಲ ಸೋರಿಕೆಯು 3,000ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿತ್ತು. ಅದಕ್ಕೆ ಪ್ರಮುಖ ಕಾರಣ ಅಗತ್ಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಂಪೆನಿಯು ಮೀನಮೇಷ ಎಣಿಸಿದ್ದು ಎಂಬ ವರದಿಗಳಿದ್ದವು. ಅದು ವಿಶ್ವದಲ್ಲಿಯೇ ಅತಿ ಘೋರವಾದ ಕೈಗಾರಿಕಾ ದುರಂತವಾಗಿತ್ತು. ಆ ಬಳಿಕ ಕೈಗಾರಿಕಾ ಸ್ಥಾವರಗಳ ಸುರಕ್ಷತೆಯ ಬಗ್ಗೆ ಇನ್ನೂ ಹೆಚ್ಚಿನ ನಿಯಮಗಳನ್ನು ರೂಪಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಿ ಪ್ರತೀ ರಾಜ್ಯದಲ್ಲಿ ಮತ್ತು ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ. ಅವುಗಳ ಪ್ರಮುಖ ಜವಾಬ್ದಾರಿ ಕಾಲಕಾಲಕ್ಕೆ ಕೈಗಾರಿಕಾ ಸ್ಥಾವರಗಳಲ್ಲಿ ಸುರಕ್ಷಾ ನಿರ್ವಹಣೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಿ ಲೋಪಗಳು ಕಂಡು ಬಂದರೆ ಅವುಗಳನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುವುದು. ಅಪಘಾತಗಳಿಂದ ಜೀವ ಮತ್ತು ಸಂಪತ್ತು ಹಾನಿಯಲ್ಲದೆ ಆ ಪ್ರದೇಶದ ಪರಿಸರಕ್ಕೂ ತೀವ್ರ ಹಾನಿಯಾಗುತ್ತದೆ. ಸರಕಾರಗಳ ಅರಣ್ಯ, ಪರಿಸರ ಮತ್ತು ಹವಾಮಾನ ಸಚಿವಾಲಯ ಮತ್ತು ಮಾಲಿನ್ಯ ಮಂಡಳಿಗಳು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊಂದಿವೆ.

2020ರಲ್ಲಿ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು. ಈ ಸಂಹಿತೆಯ ಪ್ರಕಾರವೂ ಸ್ಥಾವರಗಳ ಮಾಲಕರ ಮೇಲೆ ಸುರಕ್ಷತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಕಾರ್ಖಾನೆಯ ಮತ್ತು ಅಲ್ಲಿ ದುಡಿಯುವ ಉದ್ಯೋಗಿಗಳ ರಕ್ಷಣೆಗೆ ಅವರು ಸ್ವಯಂಪ್ರೇರಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು. ಈ ಸಂಹಿತೆಯ ಅಡಿಯಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಒಕ್ಯುಪೇಶನಲ್ ಸೇಫ್ಟಿ ಆಂಡ್ ಹೆಲ್ತ್ (ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ರಕ್ಷಣೆಯ ನಿರ್ದೇಶಕ ಮಂಡಳಿ) ಅನ್ನು ರಚಿಸಲಾಗಿದೆ. ಆದರೆ ವರದಿಗಳ ಪ್ರಕಾರ ಈ ಮಂಡಳಿಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಇಷ್ಟೆಲ್ಲ ಶಾಸನಾತ್ಮಕ ವ್ಯವಸ್ಥೆಗಳಿದ್ದರೂ ಕೈಗಾರಿಕಾ ಸ್ಥಾವರಗಳಲ್ಲಿ ಮತ್ತೆ ಮತ್ತೆ ದುರಂತಗಳು ಸಂಭವಿಸುತ್ತಲೇ ಇವೆ. ಈ ವೈಫಲ್ಯಕ್ಕೆ ಉತ್ತರದಾಯಿತ್ವ ಬೇಡವೇ?

ಇತ್ತೀಚೆಗಿನ ವರ್ಷಗಳಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ಮತ್ತಷ್ಟು ವಿಶಾಲಗೊಳಿಸಬೇಕು ಎಂದು ಉದ್ಯೋಗಪತಿಗಳು ಸರಕಾರಗಳ ಮುಂದೆ ತಮ್ಮ ಬೇಡಿಕೆಗಳನ್ನು ಉಚ್ಚರಿಸುತ್ತಲೇ ಇರುತ್ತಾರೆ; ಈ ಬೇಡಿಕೆಗಳಿಗೆ ಸರಕಾರವು ಸ್ಪಂದಿಸುವ ಭರದಲ್ಲಿ ಸ್ಥಾವರಗಳಲ್ಲಿ ಊರ್ಜಿತಗೊಳಿಸಬೇಕಾದ ಶಿಷ್ಟಾಚಾರಗಳ ಕುರಿತು, ಅಲ್ಲಿನ ಉದ್ಯೋಗಿಗಳ ಸುರಕ್ಷತೆಯ ಕುರಿತು, ಪರಿಸರದ ರಕ್ಷಣೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠಕ್ರಮಗಳನ್ನು ಕೈಗೊಳ್ಳುವಲ್ಲಿ ಹಿಂಜರಿಯುತ್ತಿವೆ. ಕಂಪೆನಿಗಳು ತಮ್ಮ ಲಾಭಾಂಶದ ಒಂದಂಶವನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ (ಅoಡಿಠಿoಡಿಚಿಣe Soಛಿiಚಿಟ ಖesಠಿoಟಿsibiಟiಣಥಿ-ಸಿಎಸ್‌ಆರ್) ನಿರ್ವಹಣೆಗೆ ಬಳಸಬೇಕೆಂಬ ನಿಯಮವಿದೆ. ಈ ಹಣವನ್ನು ರಾಜಕೀಯ ಪಕ್ಷಗಳಿಗೆ, ಸಂಯೋಜಿತ ಸಾಮಾಜಿಕ ಸಂಸ್ಥೆಗಳಿಗೆ ಇಲ್ಲವೇ ಅವುಗಳ ‘ಸಾಮಾಜಿಕ’ ಕಾರ್ಯಕ್ರಮಗಳಿಗೆ ಒದಗಿಸಿದಾಗ ಉದ್ಯೋಗಪತಿಗಳ ವೈಫಲ್ಯಗಳನ್ನು ಪ್ರಶ್ನಿಸುವ ನೈತಿಕತೆ ಯಾವ ಪಕ್ಷದ ಧುರೀಣರಿಗೆ ಇದೆ?

ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ನೊಯ್ಡಾದ ಆಸುಪಾಸಿನಲ್ಲಿ ಸಂಭವಿಸಿದ ಕಾರ್ಮಿಕರ ಮುಷ್ಕರಕ್ಕೆ ಒಂದು ಪ್ರಮುಖ ಕಾರಣ ಕಾರ್ಖಾನೆಗಳಲ್ಲಿ ಕಾರ್ಮಿಕರ ಸುರಕ್ಷತೆಯ ಅಭಾವವಾಗಿತ್ತು. ಆ ಮುಷ್ಕರವನ್ನು ಹತ್ತಿಕ್ಕಲು ಅತಿಯಾದ ಬಲಪ್ರಯೋಗವನ್ನು ಮಾಡಲಾಗಿತ್ತು. ಅಧಿಕಾರಿಗಳ ಈ ವರ್ತನೆ ಸರಕಾರಗಳು ದುಡಿಯುವವರ ಸುರಕ್ಷತೆಗೆ ಎಷ್ಟು ಬದ್ಧವಾಗಿವೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಇದಾದ ಬಳಿಕ ಆಗಸ್ಟ್ ತಿಂಗಳಿನಲ್ಲಿ ನೊಯ್ಡಾದ ಇಲೆಕ್ಟ್ರಾನಿಕ್ಸ್ ಚಿಪ್ಸ್ ಉತ್ಪಾದಿಸುವ ಒಂದು ಕಾರ್ಖಾನೆಗೆ ಬೆಂಕಿ ಹಿಡಿದು ಬೆಂಕಿ ನಂದಿಸಲು ಬಂದ ಅಗ್ನಿಶಾಮಕದಳದ ಇಬ್ಬರು ಉದ್ಯೋಗಿಗಳೇ ಬೆಂಕಿಗೆ ಬಲಿಯಾಗಿದ್ದರು.

ಭೋಪಾಲದ ದುರಂತದ ಬಳಿಕ ಶಾಸನಗಳಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಆದರೆ, ಸ್ಥಾವರಗಳಲ್ಲಿ ದುಡಿಯುವ ಜೀವಗಳಿಗೆ ಕನಿಷ್ಠ ರಕ್ಷಣೆಯನ್ನು ಒದಗಿಸುವಲ್ಲಿ ಮತ್ತು ಪರಿಸರದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಮಾನವೀಯತೆ ಮತ್ತು ಇಚ್ಛಾಶಕ್ತಿ ಅತೀ ಅಗತ್ಯ. ಅದರ ಕೊರತೆಯಿಂದಾಗಿ ಕೈಗಾರಿಕಾ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತವೆ; ಮತ್ತು ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ನಡೆಯುತ್ತದೆ.

Tags

EditorialMRPLindustrial Tragedies
share
ವಾರ್ತಾಭಾರತಿ
ವಾರ್ತಾಭಾರತಿ
Next Story
X