Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ‘ಹಸಿವಾಗುತ್ತದೆ’ ಎನ್ನುವುದು ಇನ್ನು...

‘ಹಸಿವಾಗುತ್ತದೆ’ ಎನ್ನುವುದು ಇನ್ನು ಮುಂದೆ ದೇಶದ್ರೋಹವೆ?

ವಾರ್ತಾಭಾರತಿವಾರ್ತಾಭಾರತಿ19 Oct 2023 8:48 AM IST
share
‘ಹಸಿವಾಗುತ್ತದೆ’ ಎನ್ನುವುದು ಇನ್ನು ಮುಂದೆ ದೇಶದ್ರೋಹವೆ?

‘ಗುಜರಾತ್ ಹತ್ಯಾಕಾಂಡದ ಕುರಿತಂತೆ ಬಿಬಿಸಿ ವರದಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಭಾರತ ಸರಕಾರ ಆಕ್ಷೇಪ ವ್ಯಕ್ತಪಡಿಸಿತು ಮಾತ್ರವಲ್ಲ, ಆ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಿದ ಸಂಸ್ಥೆಗಳನ್ನು ದೇಶ ವಿರೋಧಿಯೆಂದು ಕರೆಯಿತು. ಅದಾನಿಯ ಗೋಲ್‌ಮಾಲ್‌ಗಳನ್ನು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ ಮಾಧ್ಯಮದ ವಿರುದ್ಧವೂ ಸರಕಾರ ಇದೇ ಆರೋಪವನ್ನು ಹೊರಿಸಿತು. ಈ ಸಂಶೋಧನ ವರದಿಯನ್ನು ‘ಭಾರತದ ವಿರುದ್ಧ ಸಂಚು’ ಎಂದು ಬಣ್ಣಿಸಿತು. ಮಣಿಪುರದಲ್ಲಿ ನಡೆಯುತ್ತಿರುವ ನರಮೇಧದ ಕುರಿತಂತೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದಾಗ ‘ವಿಶ್ವಸಂಸ್ಥೆಯ ಹೇಳಿಕೆ’ಯನ್ನು ಅಲ್ಲಗಳೆಯಿತು. ಮಣಿಪುರದಲ್ಲಿ ಯಾವುದೇ ಮಾನವಹಕ್ಕು ದಮನಗಳು ನಡೆದಿಲ್ಲ, ಕಾನೂನು ವ್ಯವಸ್ಥೆ ಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿತು. ಇದೀಗ ‘2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪಟ್ಟಿಯಲ್ಲಿ 111 ನೇ ಸ್ಥಾನದಲ್ಲಿದೆ’ ಎನ್ನುವ ವಾಸ್ತವವನ್ನು ಸರಕಾರೇತರ ಸಂಸ್ಥೆಗಳು ಬಹಿರಂಗಪಡಿಸಿವೆ. ಎಂದಿನಂತೆ ಈ ಬಾರಿಯೂ ಭಾರತ ಸರಕಾರ ‘‘ಹಸಿವೆಯನ್ನು ಅಳೆಯುವ ವಿಧಾನಗಳೇ ಸರಿಯಿಲ್ಲ’’ ಎಂದು ಇಡೀ ಸಮೀಕ್ಷೆಯನ್ನೇ ತಿರಸ್ಕರಿಸಿದೆ.

ಸರಕಾರೇತರ ಸಂಸ್ಥೆಗಳಾಗಿರುವ ‘ಕನ್ಸರ್ನ್ ವರ್ಲ್ಡ್‌ವೈಡ್’ ಮತ್ತು ‘ವೆಲ್ಟ್ ಹಂಗರ್’ ಕಳೆದ ಗುರುವಾರ ಬಿಡುಗಡೆಗೊಳಿಸಿದ ಹಸಿವಿನ ಸೂಚ್ಯಂಕದಲ್ಲಿ ಭಾರತ ಹೀನಾಯ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ, ಈ ಬಾರಿಯ ಹಸಿವು ಸೂಚ್ಯಂಕದಲ್ಲಿಯೂ ಭಾರತ ಅಫ್ಘಾನಿಸ್ತಾನ ಹೊರತು ಪಡಿಸಿ ಇತರೆಲ್ಲ ತನ್ನ ನೆರೆ ದೇಶಗಳಿಗಿಂತ ಹಿಂದುಳಿದಿದೆ. ಹಸಿವಿನಲ್ಲಿ ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀಲಂಕಾ 60ನೇ ಸ್ಥಾನಗಳಲ್ಲಿವೆ. ಸೊನ್ನೆಯಿಂದ 100 ಅಂಕಗಳ ಮಾಪನದಲ್ಲಿ ಭಾರತವು 28.7 ಅಂಕಗಳನ್ನು ಗಳಿಸಿದೆ. ಹಸಿವೆಯೇ ಇಲ್ಲದ ದೇಶಕ್ಕೆ 0 ಅಂಕವನ್ನು ನೀಡಲಾದರೆ, ಸಂಖ್ಯೆಗಳು ಹೆಚ್ಚುತ್ತಾ ಹೋದ ಹಾಗೆ ಹಸಿವು ಸೂಚ್ಯಂಕ ಕಳಪೆಯಾಗುತ್ತಾ ಹೋಗುತ್ತದೆ. ನಾಲ್ಕು ಅಂಶಗಳನ್ನು ಆಧರಿಸಿ ಈ ಹಸಿವು ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಅಪೌಷ್ಟಿಕತೆ, ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಮಾಣ, ಪ್ರಾಯಕ್ಕೆ ತಕ್ಕಷ್ಟು ಎತ್ತರವಿಲ್ಲದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಮಾಣ ಮತ್ತು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ದರ ಈ ಅಂಶಗಳನ್ನಿಟ್ಟುಕೊಂಡು ಒಂದು ದೇಶದ ಬಡತನ ಮತ್ತು ಹಸಿವಿನ ಪ್ರಮಾಣವನ್ನು ಗುರುತಿಸಲಾಗುತ್ತದೆ. ಕಳೆದ ಮೂರು ಸಮೀಕ್ಷೆಗಳಲ್ಲೂ ಭಾರತದ ಸಾಧನೆ ಕಳಪೆಯಾಗಿದೆ. 2015ಕ್ಕೆ ಹೋಲಿಸಿದರೆ ಈ ಬಾರಿಯ ಸಮೀಕ್ಷೆ ಒಂದಿಷ್ಟು ಸಮಾಧಾನವನ್ನು ತರುತ್ತದೆ. 2015ರಲ್ಲಿ ಭಾರತ 29.2 ಅಂಕವನ್ನು ಗಳಿಸಿದ್ದರೆ ಈ ಬಾರಿ 28.7 ಅಂಕವನ್ನು ಗಳಿಸಿದೆ. ‘‘ಹಸಿವು ಸೂಚ್ಯಂಕವನ್ನು ಅಳೆಯುವ ಮಾನದಂಡಗಳು ಸರಿಯಾಗಿಲ್ಲದೇ ಇರುವುದೇ ಭಾರತದ ಕಳಪೆ ಸ್ಥಾನಕ್ಕೆ ಕಾರಣ’’ ಎಂದು ಮೂರನೆಯ ಬಾರಿಯೂ ಸರಕಾರ ತನ್ನ ಮಾನ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಹಸಿವನ್ನು ಅಳೆಯುವ ತಪ್ಪು ವಿಧಾನಗಳನ್ನು ಬಳಸಿ ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ ಮತ್ತು ಅವರ ವಿಧಾನಗಳಲ್ಲಿ ಗಂಭೀರ ಲೋಪದೋಷಗಳಿವೆ ಎಂದು ಸರಕಾರ ಹೇಳಿಕೆಯಲ್ಲಿ ತಿಳಿಸಿದೆ.

ಆಧಾರ್ ಕಾರ್ಡ್ ಇಲ್ಲ ಎನ್ನುವ ಒಂದೇ ಕಾರಣಕ್ಕಾಗಿ ರೇಷನ್ ನಿರಾಕರಿಸಲ್ಪಟ್ಟು ಬಿಪಿಎಲ್ ಕಾರ್ಡ್‌ದಾರರು ಹಸಿವಿನಿಂದ ಮೃತಪಟ್ಟಿರುವ ದೇಶ ನಮ್ಮದು. ಕೊರೋನ ಕಾಲದಲ್ಲಿ ವೈರಸ್‌ಗಿಂತ ಹಸಿವಿನಿಂದ ಸತ್ತವರ ಸಂಖ್ಯೆಯೇ ದೊಡ್ಡದು. ಈ ದೇಶದ ಶೇ. 75ರಷ್ಟು ಸಂಪತ್ತನ್ನು ಶೇ. 1ರಷ್ಟು ಶ್ರೀಮಂತರು ಹೊಂದಿದ್ದಾರೆ. ಇಂತಹ ಭಾರತದಲ್ಲಿ ಹಸಿವೆ ಎನ್ನುವುದು ಮಾರಕ ರೋಗವಾಗಿದೆ. ಕಳೆದ ಕೊರೋನ ಅವಧಿಯಲ್ಲಿ ಅತಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದರೆ ಬಡವರು ಇನ್ನಷ್ಟು ಬಡವರಾಗಿದ್ದಾರೆ. ಕೊರೋನ ಅಲೆಯಲ್ಲಿ ಕ್ಷಯ, ಎಚ್‌ಐವಿಯಂತಹ ಹಸಿವು, ಅಪೌಷ್ಟಿಕತೆಯ ಜೊತೆಗೆ ಸಂಬಂಧವಿರುವ ಕಾಯಿಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಒಂದೆಡೆ ಕ್ಷಯ, ಎಚ್‌ಐವಿಗೆ ಮೀಸಲಿರಿಸಿದ ಹಣವನ್ನು ಕೊರೋನ ಲಸಿಕೆಗಳಿಗೆ ವರ್ಗಾಯಿಸಲಾಯಿತು. ಇದೇ ಸಂದರ್ಭದಲ್ಲಿ, ನಿರುದ್ಯೋಗ, ಬಡತನ ಹೆಚ್ಚಿದ ಕಾರಣದಿಂದ ಅಪೌಷ್ಟಿಕತೆಯೂ ಹೆಚ್ಚಿತು. ಇಂದು ಕ್ಷಯ ಮತ್ತು ಎಚ್‌ಐವಿ ರೋಗಿಗಳು ಔಷಧಿಗಳಿಗಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಸುವ ಸನ್ನಿವೇಶ ನಿರ್ಮಾಣವಾಗಿದೆ. ಕ್ಷಯದಿಂದ ಶೇ. 95ರಷ್ಟು ಬಡ ಮತ್ತು ಮಧ್ಯಮವರ್ಗದಲ್ಲಿ ಸಾವುಗಳು ಸಂಭವಿಸುತ್ತವೆ. 15ರಿಂದ 45 ವರ್ಷಗಳ ಮಹಿಳೆಯರ ಸಾವಿಗೆ ಮೂರನೇ ಪ್ರಮುಖ ಕಾರಣ ಕ್ಷಯವೆಂದು ಗುರುತಿಸಲಾಗಿದೆ. ಕೊರೋನೋತ್ತರ ದಿನಗಳಲ್ಲಿ ಜನರ ಮೂಲಭೂತ ಅಗತ್ಯಗಳಲ್ಲಿ ಬಹುಮುಖ್ಯವಾಗಿದ್ದುದು ಅನ್ನ. ಸರಕಾರ ಅದನ್ನು ಒದಗಿಸಲು ನೆರವಾಗಬೇಕಾಗಿತ್ತು. ಮುಖ್ಯವಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಅಕ್ಕಿ, ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಗಳ ವಿತರಣೆ, ಮೂಲಭೂತ ಅಗತ್ಯಗಳಿಗೆ ಬೇಕಾದ ಸಬ್ಸಿಡಿಗಳನ್ನು ಹೆಚ್ಚಿಸಬೇಕಾಗಿತ್ತು. ಆದರೆ ಸರಕಾರ ‘ಉಚಿತ’ಗಳಿಂದ ದೇಶ ಹಿಂದಕ್ಕೆ ಚಲಿಸುತ್ತದೆ ಎಂದು ಘೋಷಿಸಿತು. ಬಹುತೇಕ ಸಬ್ಸಿಡಿಗಳನ್ನು ಕಿತ್ತುಕೊಂಡಿತು. ಇದು ದೇಶದಲ್ಲಿ ಹಸಿವು ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಹಸಿವು ಮುಕ್ತ ರಾಜ್ಯವನ್ನಾಗಿಸಲು ಉಚಿತ ಅಕ್ಕಿ ಮಾತ್ರವಲ್ಲದೆ ಮಹಿಳೆಯರಿಗೆ ಬೇರೆ ಬೇರೆ ಉಚಿತ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಇದು ಕೇಂದ್ರ ಸರಕಾರಕ್ಕೆ ಮಾದರಿಯಾಗಬೇಕಾದ ಕಾರ್ಯಕ್ರಮಗಳಾಗಿವೆ.

ಸದ್ಯಕ್ಕೆ ಕೇಂದ್ರ ಸರಕಾರದ ಪ್ರಕಾರ ದೇಶದಲ್ಲಿ ‘ಹಸಿವೇ ಇಲ್ಲ’. ಅಥವಾ ಬಡತನ, ಅಪೌಷ್ಟಿಕತೆಯಿಂದ ನರಳುತ್ತಿರುವ ಜನರು ಈ ದೇಶಕ್ಕೆ ಸೇರಿದವರು ಅಲ್ಲ. ಮುಂದಿನ ದಿನಗಳಲ್ಲಿ ‘ಹಸಿವಾಗುತ್ತಿದೆ’ ಎಂದು ಹೇಳಿದರೆ ಅವರ ಮೇಲೆ ಸರಕಾರ ದೇಶದ್ರೋಹದ ಪ್ರಕರಣವನ್ನು ದಾಖಲಿಸುವ ಎಲ್ಲ ಸಾಧ್ಯತೆಗಳಿವೆ. ‘ಹಸಿವಾಗುತ್ತಿವೆ’ ಎನ್ನುವವರು ನೆರೆಯ ಪಾಕಿಸ್ತಾನ, ಚೀನಾದ ಕುಮ್ಮಕ್ಕಿಗೆ ಒಳಗಾಗಿ ದೇಶಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಬಹುದು. ‘ನಮಗೆ ಹಸಿವಾಗುತ್ತದೆ’ ಎನ್ನುವುದನ್ನು ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕಾದ ಸಂದರ್ಭಗಳು ಈ ದೇಶದ ಬಡವರಿಗೆ ಬರಬಹುದು. ಜಾಗತಿಕ ಹಸಿವು ಸೂಚ್ಯಂಕವನ್ನು ಗುರುತಿಸುವ ವಿಧಾನ ಸರಿಯಿಲ್ಲ ಎಂದಾದರೆ, ಅದನ್ನು ಗುರುತಿಸಲು ಇರುವ ಯೋಗ್ಯ ವಿಧಾನ ಯಾವುದು ಎನ್ನುವುದನ್ನು ಸರಕಾರ ಸ್ಪಷ್ಟ ಪಡಿಸಬೇಕು. ಕೊರೋನ ಕಾಲದಲ್ಲಿ ಬಡತನ, ನಿರುದ್ಯೋಗ ದುಪ್ಪಟ್ಟಾದಾಗ ಅಂಬಾನಿ, ಅದಾನಿ ಅವರ ಸಂಪತ್ತು ಹೆಚ್ಚಿರುವುದನ್ನು ಈ ದೇಶದಲ್ಲಿ ಬಡತನ ಇಳಿಕೆಯಾಗಿರುವುದಕ್ಕೆ ಮಾನದಂಡವೆಂದು ಸರಕಾರ ಭಾವಿಸುತ್ತದೆಯೆ? ಸಂಪತ್ತಿನ ಅಸಮಾನತೆ ಈ ದೇಶದಲ್ಲಿ ಬಡವರ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತದೆಯೇ ಹೊರತು, ಯಾವ ಕಾರಣಕ್ಕೂ ಇಳಿಸುವುದಿಲ್ಲ. ಮೊದಲು ಈ ದೇಶದ ಆರ್ಥಿಕ, ಸಾಮಾಜಿಕ ಸನ್ನಿವೇಶಗಳನ್ನು ನೋಡುವ ವಿಧಾನಗಳನ್ನು ಸರಕಾರ ಬದಲಿಸಬೇಕು. ಆಗ ಈ ದೇಶದಲ್ಲಿ ಹೆಚ್ಚುತ್ತಿರುವ ಬಡತನ, ಹಸಿವು ಮತ್ತು ಅನಾರೋಗ್ಯ ಸ್ಪಷ್ಟವಾಗಿ ಕಾಣತೊಡಗುತ್ತದೆ. ಎಲ್ಲಿಯವರೆಗೆ ಈ ದೇಶದ ಹಸಿವು, ಬಡತನವನ್ನು ಗುರುತಿಸಲು ಸರಕಾರ ಶಕ್ತವಾಗುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಇಲ್ಲವಾಗಿಸಲು ಮಾರ್ಗವನ್ನು ಕಂಡುಕೊಳ್ಳುವುದು ಕೂಡ ಸರಕಾರಕ್ಕೆ ಸಾಧ್ಯವಾಗುವುದಿಲ್ಲ. ಆಗ ಈ ದೇಶದ ಬಡವರೆಂದು ಗುರುತಿಸಿಕೊಂಡವರನ್ನೆಲ್ಲ ‘ದೇಶದ್ರೋಹಿ’ಗಳೆಂದು ಕರೆದು ಜೈಲಿಗೆ ತಳ್ಳುವುದಷ್ಟೇ ಹಸಿವು ನಿವಾರಣೆಗೆ ಸರಕಾರದ ಮುಂದಿರುವ ಏಕೈಕ ಪರಿಹಾರ ಮಾರ್ಗವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X