Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ‘ಸರಕಾರದ ಬಳಿ ಹಣವಿಲ್ಲ’ ಎನ್ನುವುದು...

‘ಸರಕಾರದ ಬಳಿ ಹಣವಿಲ್ಲ’ ಎನ್ನುವುದು ತಮಾಷೆಯ ಮಾತೆ?

ವಾರ್ತಾಭಾರತಿವಾರ್ತಾಭಾರತಿ25 Jun 2025 9:37 AM IST
share
‘ಸರಕಾರದ ಬಳಿ ಹಣವಿಲ್ಲ’ ಎನ್ನುವುದು ತಮಾಷೆಯ ಮಾತೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಸತಿ ಯೋಜನೆಯಲ್ಲಿ ಲಂಚ ತಾಂಡವವಾಡುತ್ತಿದೆ ಎನ್ನುವ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಆಡಿಯೊ ಒಂದು ಬಹಿರಂಗವಾಗಿದ್ದು, ಇದೀಗ ಆಡಿಯೊ ನಕಲಿ ಅಲ್ಲ, ಅಸಲಿ ಎನ್ನುವುದನ್ನು ಪಾಟೀಲ್ ಅವರೇ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ, ‘ಆಡಿಯೋದಲ್ಲಿರುವ ಹೇಳಿಕೆಗೆ ಬದ್ಧವಾಗಿದ್ದೇನೆ. ನೇರವಾಗಿ ಮುಖ್ಯಮಂತ್ರಿಯವರಿಗೇ ಈ ಬಗ್ಗೆ ಮಾಹಿತಿಯನ್ನು ನೀಡಲು ಸಿದ್ಧನಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಆರೋಪದ ಬೆನ್ನಿಗೇ ಸಚಿವ ಝಮೀರ್ ಅಹ್ಮದ್ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಲಂಚ ಹೊಸ ವಿಷಯವೇನೂ ಅಲ್ಲ. ಆದರೆ ಏಕಾಏಕಿ ಪಾಟೀಲ್ ಅವರು ಈ ಬಗ್ಗೆ ಬಹಿರಂಗವಾಗಿ ಧ್ವನಿಯೆತ್ತಿರುವುದು ಯಾಕೆ? ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಈ ಆಡಿಯೊ ಸಚಿವರ ಆಪ್ತರ ಜೊತೆಗೆ ಮಾಡಿದ ಸಂಭಾಷಣೆಯ ತುಣುಕಾಗಿದೆ. ಈ ಬಗ್ಗೆ ಸಚಿವರಿಗೂ, ಮುಖ್ಯಮಂತ್ರಿಗೂ ನೇರವಾಗಿ ದೂರು ನೀಡುವ ಅವಕಾಶ ಶಾಸಕರಗಿದ್ದರೂ, ಅವರು ಆ ದಾರಿಯಲ್ಲಿ ಸಾಗದೆ, ತಾವೇ ಆಡಿದ ಮೊಬೈಲ್ ಸಂಭಾಷಣೆಯನ್ನು ಸೋರಿಕೆ ಮಾಡಿದ್ದಾರೆ. ಅಂದರೆ ಅವರ ಉದ್ದೇಶ ಇಲಾಖೆಯೊಳಗಿರುವ ಭ್ರಷ್ಟಾಚಾರವನ್ನು ತಡೆಯುವುದಾಗಿರದೆ, ಸರಕಾರವನ್ನು ಪರೋಕ್ಷವಾಗಿ ಬ್ಲ್ಯಾಕ್ಮೇಲ್ ಮಾಡುವುದು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ೨೦೨೪ರಲ್ಲಿ ಮಂಜೂರಾಗಿರುವ ಮನೆಗಳಿಗೆ ಸಂಬಂಧಿಸಿ ಇಷ್ಟು ತಡವಾಗಿ ಯಾಕೆ ಧ್ವನಿಯೆತ್ತಿದ್ದಾರೆ ಎಂಬ ಪ್ರಶ್ನೆಯೂ ಎದ್ದಿದೆ. ಒಟ್ಟಿನಲ್ಲಿ ಈ ಆರೋಪದ ಉದ್ದೇಶ ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವುದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದೇ ಸಂದರ್ಭದಲ್ಲಿ, ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಅಥವಾ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದು ಪಾಟೀಲ್ ಅವರ ಹೊಣೆಗಾರಿಕೆಯಾಗಿರುತ್ತದೆ. ಅಂತಹ ಯಾವುದೇ ದಾಖಲೆಗಳನ್ನು ಅವರು ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಯವರಿಗೂ ಈವರೆಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೀಗಿರುವಾಗ, ಸಚಿವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ಪಾಟೀಲ್ ಅವರ ಹೇಳಿಕೆಯ ಬೆನ್ನಿಗೇ ಹಿರಿಯ ಶಾಸಕ ರಾಜು ಕಾಗೆ ಅವರು ‘‘ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ’’ ಎಂದು ಆರೋಪಿಸಿದ್ದಾರೆ. ಪಾಟೀಲ್ ಆರೋಪದ ಬೆನ್ನಿಗೇ ಕಾಗೆ ರಾಜೀನಾಮೆ ನೀಡುವ ಬೆದರಿಕೆಯನ್ನು ಒಡ್ಡಿರುವುದು ಆಕಸ್ಮಿಕವಂತೂ ಅಲ್ಲ. ‘‘ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ ೨೫ ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಹಂಚಿಕೆ ಮಾಡಿ ಎರಡು ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಅಧಿಕಾರಿಗಳನ್ನು ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಸತಿ ನಿಗಮದ ಕುರಿತ ಆರೋಪಕ್ಕೆ ಇನ್ನಷ್ಟು ಶಾಸಕರು ಶೀಘ್ರದಲ್ಲೇ ಬೆಂಬಲ ನೀಡಲಿದ್ದಾರೆ ಎಂದು ಪಾಟೀಲ್ ಕೂಡ ಬೆದರಿಕೆಯೊಡ್ಡಿದ್ದಾರೆ. ಇದರ ಬೆನ್ನಿಗೇ ಕೆಲವು ಶಾಸಕರು ಅತ್ಯಂತ ಉಡಾಫೆಯ ಹೇಳಿಕೆಗಳನ್ನು ನೀಡುತ್ತಾ, ಸರಕಾರವನ್ನು ಇನ್ನಷ್ಟು ಮುಜುಗರಕ್ಕೆ ಸಿಲುಕಿಸುತ್ತಿದ್ದಾರೆ. ‘‘ಸರಕಾರಿ ಭೂಮಿಯನ್ನು ಸಾಬರ ಹೆಸರಿಗೆ ಪರಭಾರೆ ಮಾಡಿದರೆ ಅಂತಹ ಅಧಿಕಾರಿಯನ್ನು ನೇಣಿಗೆ ಹಾಕುತ್ತೇನೆ’’ ಎನ್ನುವ ಜನಾಂಗೀಯವಾದಿ ಹೇಳಿಕೆಯ ಮೂಲಕ ಕಾಂಗ್ರೆಸ್ನ ಶಾಸಕ ರಮೇಶ್ ಬಂಡಿಸಿದ್ದೇ ಗೌಡ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಇಂತಹ ಬೆದರಿಕೆಯ ಅರ್ಥವೇನು? ಸರಕಾರಿ ಭೂಮಿಯನ್ನು ಯಾರಿಗೆ ಪರಭಾರೆ ಮಾಡಿದರೂ ಅದರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸುವುದು ಸರಿ. ಆದರೆ ‘ಒಂದು ಸಮುದಾಯವನ್ನಷ್ಟೇ ಉಲ್ಲೇಖಿಸಿ’ ಎಚ್ಚರಿಕೆಯನ್ನು ನೀಡುವ ಮೂಲಕ ಅವರು ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಮುಂದಾಗಿದ್ದಾರೆ. ಬಿಜೆಪಿಯವರ ಕೋಮುಧ್ರುವೀಕರಣ ರಾಜಕಾರಣವನ್ನು ಇವರು ಈ ಮೂಲಕ ಸಮರ್ಥಿಸಿಕೊಂಡಂತಾಗಲಿಲ್ಲವೆ? ಸರಕಾರಿ ಭೂಮಿಯನ್ನು ಮುಸ್ಲಿಮರು ಪರಭಾರೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಇವರು ಆರೋಪಿಸುತ್ತಿದ್ದಾರೆಯೆ? ಅಥವಾ ಮುಸ್ಲಿಮರನ್ನು ಹೊರತು ಪಡಿಸಿ ಬೇರೆ ಸಮುದಾಯಕ್ಕೆ ಬೇಕಾದರೆ ಪರಭಾರೆ ಮಾಡಿಸಿ ಎಂದು ಸೂಚನೆ ನೀಡುತ್ತಿದ್ದಾರೆಯೆ?

ಇದರ ಬೆನ್ನಿಗೇ ಮುಖ್ಯಮಂತ್ರಿ ಆಕಾಂಕ್ಷಿ, ಸ್ವತಃ ಗೃಹ ಸಚಿವ ಪರಮೇಶ್ವರ್ ಅವರೇ ತಮ್ಮ ಸಡಿಲ ಮಾತುಗಳ ಮೂಲಕ ಸರಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರಿಗೆ ಆಹಾರವನ್ನು ಒದಗಿಸಿಕೊಟ್ಟಿದ್ದಾರೆ. ಬಾದಾಮಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ‘‘ನಗರದ ಪುನರ್ನಿರ್ಮಾಣಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸಿ ಅದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ. ರಾಜ್ಯ ಸರಕಾರಕ್ಕೆ ಕಳುಹಿಸಬೇಡಿ. ಸಿದ್ದರಾಮಯ್ಯ ಅವರ ಕೈಯಲ್ಲಿ ಹಣವಿಲ್ಲ. ಆ ಹಣವೆಲ್ಲ ನಿಮಗೆ ಉಚಿತ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ಖಾಲಿಯಾಗಿದೆ’’ ಎಂದು ಹೇಳಿದ್ದಾರೆ. ಸ್ವತಃ ಗೃಹ ಸಚಿವರೇ ಸರಕಾರದ ಬಳಿ ಹಣವಿಲ್ಲ ಎನ್ನುವುದನ್ನು ಸಾರ್ವಜನಿಕ ವೇದಿಕೆಯಲ್ಲಿ ಘಂಟಾಘೋಷವಾಗಿ ಹೇಳಿದ ಮೇಲೆ ಇನ್ನೇನು ಉಳಿಯಿತು? ಗೃಹ ಸಚಿವರ ಮಾತುಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ದಾಳಿ ಮಾಡಲು ಶುರು ಮಾಡಿದಂತೆ ಪರಮೇಶ್ವರ್ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ‘‘ಸುಮ್ಮನೆ ತಮಾಷೆಗೆ ಹೇಳಿದ್ದೆ’’ ಎಂದು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಗೃಹ ಸಚಿವರು ನಿಜಕ್ಕೂ ತಮ್ಮ ಹೇಳಿಕೆಯ ಮೂಲಕ ತಮಾಷೆ ಮಾಡಿದ್ದು ಯಾರನ್ನು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ? ಅಥವಾ ಬಾದಾಮಿಯ ಅಭಿವೃದ್ಧಿಯನ್ನೇ? ಅಥವಾ ಉಚಿತ ಅಕ್ಕಿ, ಬೇಳೆ, ಎಣ್ಣೆ ಪಡೆಯುತ್ತಿರುವ ಜನಸಾಮಾನ್ಯರನ್ನೇ? ಅಥವಾ ಸರಕಾರದ ಗ್ಯಾರಂಟಿ ಯೋಜನೆಗಳನ್ನೇ? ಸಾವಿರಾರು ಜನರು ನೆರೆದಿರುವ ಸಮಾವೇಶದಲ್ಲಿ ವೇದಿಕೆಯ ಮೇಲೆ ನಿಂತು, ಗೃಹ ಖಾತೆಯಂತಹ ಉನ್ನತ ಸ್ಥಾನದಿಂದ ‘‘ಸರಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಎಲ್ಲ ಖಾಲಿಯಾಗಿದೆ’’ ಎಂದು ಹೇಳುವುದು ತಮಾಷೆಯ ಮಾತೆ? ಕೆಲವು ದಿನಗಳ ಹಿಂದೆ, ಮಂಗಳೂರಿನಲ್ಲಿ ಗುಂಪೊಂದು ಅಮಾಯಕ ವಲಸೆ ಕಾರ್ಮಿಕನನ್ನು ಥಳಿಸಿ ಕೊಂದು ಹಾಕಿದಾಗ, ಇದೇ ಗೃಹ ಸಚಿವರು ‘‘ಕಾರ್ಮಿಕ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ. ಆದುದರಿಂದ ಗುಂಪು ಥಳಿಸಿಕೊಂದು ಹಾಕಿತು ಎಂದು ಮೂಲಗಳಿಂದ ತಿಳಿದು ಬಂದಿದೆ’’ ಎಂಬಂತಹ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದರು. ಯಾವ ಮೂಲಗಳಿಂದ ತಿಳಿದು ಬಂದಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಿರಲಿಲ್ಲ. ಗುಂಪುಥಳಿತವನ್ನು ಸಮರ್ಥಿಸಿಕೊಂಡಿದ್ದ ಕೆಲವು ಸಂಘಪರಿವಾರ ನಾಯಕರು ‘‘ಗೃಹ ಸಚಿವರ ಹೇಳಿಕೆಯನ್ನು’’ ಬಳಿಕ ಬಳಸಿಕೊಂಡರು. ೩೦ಕ್ಕೂ ಅಧಿಕ ಮಂದಿ ಒಬ್ಬ ಅಮಾಯಕ ಕೂಲಿ ಕಾರ್ಮಿಕನನ್ನು ಬ್ಯಾಟು, ದೊಣ್ಣೆಗಳಿಂದ ಭೀಕರವಾಗಿ ಸುಮಾರು ಒಂದು ಗಂಟೆಗಳ ಕಾಲ ಥಳಿಸಿ ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಾಕ್ಷಣ ಗೃಹ ಸಚಿವರು ಮಂಗಳೂರಿಗೆ ಧಾವಿಸಬೇಕಾಗಿತ್ತು. ಆದರೆ ಅದರ ಬದಲಿಗೆ, ಘಟನೆಗೆ ‘ಪಾಕಿಸ್ತಾನ’ದ ಬಣ್ಣ ಬಳಿದು, ಗುಂಪು ಥಳಿತ ಆರೋಪಿಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಸದ್ಯಕ್ಕೆ ರಾಜ್ಯದಲ್ಲಿ ವಿರೋಧ ಪಕ್ಷ ಸಕ್ರಿಯವಾಗಿಲ್ಲ. ಇದ್ದರೂ ಅದನ್ನು ಜನತೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ ಪರಮೇಶ್ವರ್ರಂತಹ ಸಡಿಲ ನಾಲಗೆಯ ನಾಯಕರು ಕಾಂಗ್ರೆಸ್ನಲ್ಲಿರುವವರೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಬೇರೆ ವಿರೋಧಪಕ್ಷವೊಂದರ ಅಗತ್ಯವೂ ಇಲ್ಲ. ಮನೆ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನ್ನದೇ ಪಕ್ಷದ ಶಾಸಕರು ಧ್ವನಿಯೆತ್ತಿರುವುದರಿಂದ ಸಿದ್ದರಾಮಯ್ಯ ತಕ್ಷಣ ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕಾಗಿದೆ. ಹಾಗೆಯೇ, ಸರಕಾರದ ಬಳಿ ಹಣವಿಲ್ಲ ಎನ್ನುವ ಪರಮೇಶ್ವರ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X