Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಚುನಾವಣೆಗೆ ಬೆದರಿ ಮೋದಿ ಅಡ್ಡದಾರಿ?

ಚುನಾವಣೆಗೆ ಬೆದರಿ ಮೋದಿ ಅಡ್ಡದಾರಿ?

ವಾರ್ತಾಭಾರತಿವಾರ್ತಾಭಾರತಿ30 March 2024 9:08 AM IST
share
ಚುನಾವಣೆಗೆ ಬೆದರಿ ಮೋದಿ ಅಡ್ಡದಾರಿ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿರುವಂತೆಯೇ ಪ್ರಧಾನಿ ಮೋದಿಯವರು ಫಲಿತಾಂಶದ ಬಗ್ಗೆ ತೀವ್ರ ಆತಂಕ ಗೊಂಡವರಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗಿಂತಲೂ ಬಿರುಸಿನಿಂದ ಅವರ ಪರವಾಗಿ ಚುನಾವಣೆಗಾಗಿ ತನಿಖಾ ಸಂಸ್ಥೆಗಳು ದುಡಿಯ ಹತ್ತಿವೆ. ಚುನಾವಣೆಯಲ್ಲಿ ರಾಮಮಂದಿರ ತನ್ನನ್ನು ಕಾಯುವುದಿಲ್ಲ ಎನ್ನುವ ವರದಿ ಅವರನ್ನು ಕಂಗೆಡಿಸಿದಂತಿದೆ. ಆರಂಭದಲ್ಲಿ ರಾಹುಲ್‌ಗಾಂಧಿ ನೇತೃತ್ವದ ‘ಇಂಡಿಯಾ’ವನ್ನು ಹಗುರವಾಗಿ ಕಂಡಿದ್ದ ಮೋದಿ ತಂಡಕ್ಕೆ, ನಿಧಾನಕ್ಕೆ ಬಿಸಿ ತಟ್ಟ ತೊಡಗಿದೆ. ಚುನಾವಣಾ ಬಾಂಡ್ ಹಗರಣವನ್ನು ಚುನಾವಣೆ ಮುಗಿಯುವವರೆಗೆ ಮುಚ್ಚಿಡಲು ಮೋದಿ ನೇತೃತ್ವದ ಕೇಂದ್ರ ಸರಕಾರ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಿತ್ತು. ಆದರೆ ನ್ಯಾಯಾಲಯದಲ್ಲಿ ಪ್ರಧಾನಿ ಮೋದಿಯ ಪ್ರಯತ್ನ ಸಂಪೂರ್ಣ ವಿಫಲವಾಯಿತು. ಚುನಾವಣಾ ದೇಣಿಗೆ ಹಗರಣ ಹೊರ ಬೀಳುತ್ತಿರುವಂತೆಯೇ ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿ ವಿರೋಧಿಗಳ ಮೇಲೆಯೇ ತನಿಖಾ ಸಂಸ್ಥೆಗಳನ್ನು ಬಳಸಲು ಮುಂದಾಗಿದ್ದಾರೆ. ಪರಿಣಾಮವಾಗಿ ಈಗಾಗಲೇ ಆಪ್ ನಾಯಕ ಕೇಜ್ರಿವಾಲ್ ಜೈಲು ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ್ನು ಆರ್ಥಿಕವಾಗಿ ದುರ್ಬಲಗೊಳಿಸಿ ಅದರ ಕೈ, ಕಾಲುಗಳನ್ನು ಕಟ್ಟಿ ಹಾಕಲು ಹೊರಟಿದೆ. ವಿರೋಧ ಪಕ್ಷಗಳ ಮುಖಂಡರನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸಿ ಅವರನ್ನು ಬಿಜೆಪಿಗೆ ಪಕ್ಷಾಂತರ ಮಾಡಿಸುವ ಕೆಲಸವೂ ಭರದಿಂದ ಸಾಗುತ್ತಿದೆ.

ಮೋದಿ ಭಾರತದಲ್ಲಿ ಉದ್ಯೋಗದ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿ ಬಹಿರಂಗ ಪಡಿಸಿದೆ. ದೇಶದ ಒಟ್ಟು ನಿರುದ್ಯೋಗಿ ಶ್ರಮಿಕ ಶಕ್ತಿಯ ಶೇ. 83ರಷ್ಟು ಮಂದಿ ಯುವಜನರಾಗಿದ್ದಾರೆ ಎನ್ನುವುದನ್ನು ವರದಿ ಹೇಳಿದೆ. ಅತ್ಯುನ್ನತ ಶಿಕ್ಷಣವೇ ಯುವಕರ ನಿರುದ್ಯೋಗಕ್ಕೆ ಬಹುಮುಖ್ಯ ಕಾರಣ ಎನ್ನುವ ಆತಂಕಕಾರಿ ವಿಷಯವನ್ನು ವರದಿ ಬಹಿರಂಗಪಡಿಸಿದೆ. ಯಾವುದೇ ಶಿಕ್ಷಣವನ್ನು ಪಡೆಯದವರಿಗೆ ಹೋಲಿಸಿದರೆ, ಅತ್ಯುನ್ನತ ಶಿಕ್ಷಣ ಪಡೆದವರೇ ನಿರುದ್ಯೋಗಿಗಳಾಗುವ ಅವಕಾಶ ಹೆಚ್ಚು ಎನ್ನುವ ಅಂಶ ಬೆಳಕಿಗೆ ಬಂದಿದೆ. ಪದವೀಧರರಲ್ಲಿ ನಿರುದ್ಯೋಗ ದರವು ಶೇ.29.1ರಷ್ಟಿದ್ದು,ಇದು ನಿರಕ್ಷರಿಗಳಲ್ಲಿಯ ಶೇ.3.4ರ ಹೆಚ್ಚುಕಡಿಮೆ ಒಂಭತ್ತು ಪಟ್ಟು ಹೆಚ್ಚಾಗಿದೆ. ಮಾಧ್ಯಮಿಕ ಮತ್ತು ಹೆಚ್ಚಿನ ಶಿಕ್ಷಣ ಪಡೆದವರಲ್ಲಿ ಈ ದರವು (ಶೇ.18.4) ಆರು ಪಟ್ಟು ಹೆಚ್ಚಾಗಿದೆ ಎಂದು ನೂತನ ಐಎಲ್‌ಒ ವರದಿಯು ಹೇಳಿದೆ.

ನಿರುದ್ಯೋಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಯುವಕರಿಗೆ ಪ್ರಧಾನಿ ಮೋದಿಯವರು ‘ಗೋಲ್‌ಗಪ್ಪ’ ವ್ಯಾಪಾರ ನಡೆಸುವ ಬಗ್ಗೆ ಸಲಹೆಯನ್ನು ನೀಡಿದ್ದರು. ಇದೀಗ ನೋಡಿದರೆ, ಅತ್ಯುನ್ನತ ಶಿಕ್ಷಣ ಪಡೆಯುವುದಕ್ಕಿಂತ ಶಿಕ್ಷಣ ಪಡೆಯದೆ ಗೋಲ್‌ಗಪ್ಪ ವ್ಯಾಪಾರ ನಡೆಸುವುದು ದೇಶದ ಯುವಕರ ಪಾಲಿಗೆ ಒಳಿತು ಎನ್ನುವಂತಹ ಸ್ಥಿತಿಯನ್ನು ಸರಕಾರ ಅಧಿಕೃತವಾಗಿ ನಿರ್ಮಾಣ ಮಾಡಿರುವುದನ್ನು ವರದಿ ಸ್ಪಷ್ಟ ಪಡಿಸಿದೆ. ಇನ್ನೊಂದೆಡೆ ನರೇಗಾ ಯೋಜನೆಯೂ ಸರಕಾರದ ನಿರ್ಲಕ್ಷ್ಯದಿಂದಾಗಿ ವಿಫಲವಾಗುತ್ತಿದೆ. ಕಾರ್ಮಿಕರಿಗೆ ನೀಡಬೇಕಾಗಿರುವ ಕೋಟ್ಯಂತರ ರೂಪಾಯಿಯನ್ನು ಕೇಂದ್ರ ಸರಕಾರ ಬಾಕಿಯಿರಿಸಿಕೊಂಡಿರುವ ಬಗ್ಗೆ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. 2024-25ನೇ ಸಾಲಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಾಸರಿ ವೇತನವು ದಿನವೊಂದಕ್ಕೆ 284 ರೂ.ಗಳಾಗಿದ್ದು,ಕಳೆದ ವರ್ಷ ಅದು 267 ರೂ.ಆಗಿತ್ತು. ದೇಶದಲ್ಲಿ ಅಪೌಷ್ಟಿಕತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಹಸಿವಿನ ಸೂಚ್ಯಂಕದಲ್ಲಿ ದೇಶ ಕಳಪೆ ಸಾಧನೆ ಮಾಡಿದೆ. ದೇಶ ಬಲಿಷ್ಠ ಆರ್ಥಿಕ ಶಕ್ತಿಯಾಗುತ್ತಿದೆ ಎನ್ನುವ ಪ್ರಚಾರವನ್ನು ನಂಬಬಾರದು ಎಂದು ಖ್ಯಾತ ಅರ್ಥ ಶಾಸ್ತ್ರಜ್ಞ ರಘುರಾಮ ರಾಜನ್ ಅವರು ಎಚ್ಚರಿಸಿದ್ದಾರೆ. ಇದನ್ನು ನಂಬಿ ಕುಳಿತರೆ ದೇಶವನ್ನು ನಾವಾಗಿಯೇ ಬಲಿಕೊಟ್ಟಂತಾಗಬಹುದು ಎಂದು ಅವರು ಹೇಳಿದ್ದಾರೆ.

ದೇಶ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದಕ್ಕೆ ಚಲಿಸಲ್ಪಡುವುದನ್ನು ರಾಮಮಂದಿರದ ಮೂಲಕ ಮುಚ್ಚಿ ಹಾಕುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು ಈ ಕಾರಣದಿಂದಲೇ, ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳಿಗೆ ಮುನ್ನ ಅವರು ಸಿಎಎಯಯನ್ನು ಜಾರಿಗೊಳಿಸಿದರು. ಈ ಮೂಲಕ ಮತ್ತೆ ದೇಶದಲ್ಲಿ ಪ್ರತಿಭಟನೆ, ದಂಗೆಗಳು ಎದ್ದು ಅವುಗಳನ್ನು ಹಿಂದು-ಮುಸ್ಲಿಮ್ ಗಲಭೆಗಳಾಗಿ ಪರಿವರ್ತಿಸಿ ಚುನಾವಣೆಯಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಭಾವಿಸಿದ್ದರು. ಆದರೆ ಸಿಎಎ ವಿರುದ್ಧದ ಹೋರಾಟದ ವಿಷಯದಲ್ಲಿ ದೇಶದ ಜನರು ಅತ್ಯಂತ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಆದುದರಿಂದ ಬಿಜೆಪಿಗೆ ಸಿಎಎ ನಿರೀಕ್ಷಿತ ಫಲಿತಾಂಶವನ್ನು ಕೊಡಲಿಲ್ಲ. ಚುನಾವಣಾ ಬಾಂಡ್ ಅಕ್ರಮಗಳು ಚುನಾವಣೆಯ ಪ್ರಚಾರದ ಕೇಂದ್ರ ವಿಷಯವಾಗಬಹುದು ಎನ್ನುವ ಭಯ ಹೆಚ್ಚಾಗುತ್ತಿದ್ದಂತೆಯೇ, ವಿರೋಧ ಪಕ್ಷಗಳ ನಾಯಕರ ಬಾಯಿಯನ್ನು ಕಟ್ಟಿ ಹಾಕಲು ಅವರ ಮೇಲಿರುವ ಪ್ರಕರಣವನ್ನು ಜೀವಂತಗೊಳಿಸಿದ್ದಾರೆ. ಪರಿಣಾಮವಾಗಿ ಕೇಜ್ರಿವಾಲ್ ಜೈಲು ಸೇರಿದ್ದಾರೆ. ಜೈಲಿನಿಂದಲೇ ದಿಲ್ಲಿಯನ್ನು ಅವರು ನಿಯಂತ್ರಿಸಬೇಕು ಮಾತ್ರವಲ್ಲ , ಈ ಚುನಾವಣೆಗೆ ಸಿದ್ಧತೆಯನ್ನು ಮಾಡಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್ ಸರಕಾರವನ್ನು ಅವರು ದುರ್ಬಲಗೊಳಿಸುವುದಕ್ಕೆ ಯೋಜನೆ ರೂಪಿಸಿದ್ದಾರೆ. ಅಲ್ಲಿ ಆಪರೇಷನ್ ಕಮಲಕ್ಕೆ ಚಾಲನೆ ದೊರಕಿದೆ. ಇತ್ತ ತೆರಿಗೆ ಪಾವತಿಯಲ್ಲಿ ಆಗಿರುವ ಲೋಪದೋಷಗಳಿಗಾಗಿ 1,823 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟಿಸ್ ನೀಡಿದೆ. ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. 2018-19ನೇ ಆರ್ಥಿಕ ವರ್ಷಕ್ಕಾಗಿ 210 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆಯು ನೀಡಿದ ನೋಟಿಸ್‌ಗೆ ಸಂಬಂಧಿಸಿ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದ್ದರು.ಅದೇ ದಿನ, ತನ್ನ ಬ್ಯಾಂಕ್ ಖಾತೆಗಳನ್ನು ಬಳಸಲು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಕಾಂಗ್ರೆಸ್‌ಗೆ ಅನುಮತಿ ನೀಡಿತ್ತು. ಆದರೆ, 115 ಕೋಟಿ ರೂಪಾಯಿಯನ್ನು ಮುಟ್ಟಬಾರದು ಎಂಬ ಆದೇಶ ನೀಡಿತ್ತು. ಅಂದರೆ, ಅಷ್ಟು ಮೊತ್ತವನ್ನು ಸ್ಥಗಿತಗೊಳಿಸಿತ್ತು. ಒಂದೆಡೆ ಬಿಜೆಪಿಯು ಚುನಾವಣಾ ದೇಣಿಗೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ದೋಚಿದ್ದರೆ, ಇನ್ನೊಂದೆಡೆ ತೆರಿಗೆ ಲೋಪದೋಷಗಳನ್ನು ಮುಂದೊಡ್ಡಿ ಕಾಂಗ್ರೆಸ್ ತನ್ನ ಖಾತೆಯಲ್ಲಿರುವ ಹಣವನ್ನು ಮುಟ್ಟದಂತೆ ದಿಗ್ಬಂಧನ ಹೇರುತ್ತಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗುವಂತೆ ನೋಡಿಕೊಳ್ಳುತ್ತಿದೆ. ಜೈಲು ಸೇರಿದ ಕೇಜ್ರಿವಾಲ್ ಅಕ್ರಮ ಮಾಡಿರಬಹುದು ಎಂದೇ ಇಟ್ಟುಕೊಳ್ಳೋಣ. ಕಾಂಗ್ರೆಸ್ ಪಕ್ಷವೂ ತೆರಿಗೆ ವ್ಯವಹಾರದಲ್ಲಿ ತಪ್ಪಿದೆ ಎಂದು ಭಾವಿಸೋಣ. ಆದರೆ ಇದೇ ಸಂದರ್ಭದಲ್ಲಿ ಭಾರೀ ಅಕ್ರಮಗಳನ್ನು ಎಸಗಿ ತನಿಖೆಗಳನ್ನು ಎದುರಿಸುತ್ತಿರುವ ಕಂಪೆನಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಪಡೆದುಕೊಂಡ ಬಿಜೆಪಿ ಮಾತ್ರ ಸಾಚಾ ಆಗುವುದು ಹೇಗೆ? ಕೇಜ್ರಿವಾಲ್ ತನಿಖೆಗೊಳಪಡಬಹುದಾದರೆ ಚುನಾವಣಾ ಬಾಂಡ್ ಹೆಸರಿನಲ್ಲಿ ಕೋಟ್ಯಂತರ ಅಕ್ರಮ ಎಸಗಿರುವ ಬಿಜೆಪಿಯ ವ್ಯವಹಾರಗಳೂ ತನಿಖೆಗೊಳಪಡಬೇಕು. ಅಕ್ರಮ ಕಂಪೆನಿಗಳ ಜೊತೆಗೆ ಬಿಜೆಪಿಗಿರುವ ನಂಟು ಬಹಿರಂಗವಾಗಬೇಕು. ಆದರೆ ಅಂತಹದೇನೂ ಸಂಭವಿಸುತ್ತಿಲ್ಲ.

ಲೋಕಸಭಾ ಚುನಾವಣೆಗೆ ಬಿಜೆಪಿಯ ಕಾರ್ಯಕರ್ತರೂ ನಾಚುವಂತೆ ತನಿಖಾಸಂಸ್ಥೆಗಳು ಮೋದಿಯ ಪರವಾಗಿ ದುಡಿಯುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ.

ಇವಿಎಂ ತಿರುಚುವಿಕೆಯ ಕುರಿತಂತೆ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರವನ್ನು ಇನ್ನೂ ನೀಡಿಲ್ಲ. ಈ ಚುನಾವಣೆಯ ಫಲಿತಾಂಶ ಬಹಿರಂಗವಾದ ಬಳಿಕ ದೇಶದಲ್ಲಿ ಚುನಾವಣೆಯ ರದ್ದುಗೊಳ್ಳಬಹುದು ಎನ್ನುವ ಆತಂಕವನ್ನು ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಆದರೆ, ವಿರೋಧ ಪಕ್ಷಗಳು ಚುನಾವಣೆಯಲ್ಲಿ ಮುಕ್ತವಾಗಿ ಸ್ಪರ್ಧಿಸದಂತೆ ಅವರ ಕೈಕಾಲುಗಳನ್ನು ಕಟ್ಟಿ ಹಾಕಿ, ನಡೆಸುವ ಲೋಕಸಭಾ ಚುನಾವಣೆಯನ್ನು ‘ಪ್ರಜಾಸತ್ತಾತ್ಮಕ ಚುನಾವಣೆ’ ಎಂದು ಕರೆಯುವುದಾದರೂ ಹೇಗೆ? ಈವರೆಗೆ ಇವಿಎಂ ಹ್ಯಾಕ್ ಬಗ್ಗೆ ಆತಂಕಗಳಿದ್ದವು, ಆದರೆ ಹ್ಯಾಕ್ ಆಗಿರುವುದು ಭಾರತದ ಪ್ರಜಾಸತ್ತಾತ್ಮ ವ್ಯವಸ್ಥೆ ಎನ್ನುವುದು ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X