Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಹೆಚ್ಚುತ್ತಿರುವ ಹಸಿವಿಗೆ ಬಡತನ...

ಹೆಚ್ಚುತ್ತಿರುವ ಹಸಿವಿಗೆ ಬಡತನ ಕಾರಣವಲ್ಲವೆ?

ವಾರ್ತಾಭಾರತಿವಾರ್ತಾಭಾರತಿ16 Jun 2025 8:45 AM IST
share
ಹೆಚ್ಚುತ್ತಿರುವ ಹಸಿವಿಗೆ ಬಡತನ ಕಾರಣವಲ್ಲವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬಿಹಾರದ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ವಿಶ್ವಬ್ಯಾಂಕ್ ಮೋದಿ ಸರಕಾರಕ್ಕೆ ಶಹಭಾಶ್‌ಗಿರಿಯನ್ನು ನೀಡಲು ಮುಂದಾಗುವುದು ಕಾಕತಾಳೀಯವೇನಲ್ಲ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಈ ದೇಶದಲ್ಲಿ ಹಸಿವು, ನಿರುದ್ಯೋಗಗಳನ್ನು ಹೆಚ್ಚಿ

ಸಿವೆ ಎನ್ನುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೋದಿ ಸರಕಾರದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಡತನ ಗಣನೀಯವಾಗಿ ಇಳಿಕೆಯಾಗಿದೆ ಎನ್ನುವ ದತ್ತಾಂಶವನ್ನು ವಿಶ್ವಬ್ಯಾಂಕ್ ತೇಲಿ ಬಿಟ್ಟಿದೆ. ಹಾಗೆ ನೋಡಿದರೆ, ಈ ಇಳಿಕೆಯ ಹೆಗ್ಗಳಿಕೆ ನೇರವಾಗಿ ವಿಶ್ವಬ್ಯಾಂಕ್‌ಗೇ ಸೇರಬೇಕಾಗಿದೆ. ಯಾಕೆಂದರೆ, ಸದ್ಯಕ್ಕೆ ಭಾರತದ ಆರ್ಥಿಕ ನೀತಿಗಳು ರೂಪುಗೊಳ್ಳುತ್ತಿರುವುದು ವಿಶ್ವಬ್ಯಾಂಕ್‌ನ ಮೂಗಿನ ನೇರಕ್ಕೇ ಆಗಿರುವುದರಿಂದ, ಈ ನೀತಿಯ ಸಾಧಕ ಬಾಧಕಗಳ ಹಿರಿಮೆಯ ಪಾಲು ವಿಶ್ವಬ್ಯಾಂಕ್‌ಗೂ ಸಲ್ಲಬೇಕು. ಆದುದರಿಂದಲೇ, ಭಾರತದಲ್ಲಿ ಬಡತನ ಇಳಿಕೆಯಾಗಿದೆ ಎನ್ನುವುದನ್ನು ಸಾಬೀತು ಮಾಡುವುದು ವಿಶ್ವಬ್ಯಾಂಕ್‌ನ ಹೊಣೆಗಾರಿಕೆಯೂ ಹೌದು. ಭಾರತವು ಕಳೆದ ದಶಕದಲ್ಲಿ ಕಡುಬಡತನದ ಪ್ರಮಾಣವನನ್ನು ಕಡಿಮೆ ಮಾಡುವಲ್ಲಿ ಭಾರೀ ಪ್ರಗತಿಯನ್ನು ಸಾಧಿಸಿದೆ. 2011-12ರಲ್ಲಿ ಶೇ. 27.1 ಇದ್ದ ಕಡು ಬಡವರ ಸಂಖ್ಯೆ 2022-23ರಲ್ಲಿ ಶೇ. 5.3ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ದತ್ತಾಂಶ ಹೇಳುತ್ತಿದೆ. 2011-12ರಲ್ಲಿ 34 ಕೋಟಿ ಕಡು ಬಡವರು ದೇಶದಲ್ಲಿದ್ದರು, ಇವರ ಸಂಖ್ಯೆ 2022-23ರಲ್ಲಿ 7.5 ಕೋಟಿಗೆ ಕುಸಿದಿದೆ. 11 ವರ್ಷದಲ್ಲಿ ಸುಮಾರು 26 ಕೋಟಿ ಜನರು ಕಡು ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳುತ್ತಿದೆ. ವಿಶೇಷವೆಂದರೆ, ಅನಕ್ಷರತೆ, ಅಪೌಷ್ಟಿಕತೆಗಾಗಿ ಕುಖ್ಯಾತವಾಗಿರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲೇ ಕಡುಬಡವರ ಸಂಖ್ಯೆ ಇಳಿಮುಖವಾಗಿದೆ ಎಂದು ವಿಶ್ವಬ್ಯಾಂಕ್ ದತ್ತಾಂಶ ಬಹಿರಂಗಪಡಿಸಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಬಂಗಾಳ, ಮಧ್ಯ ಪ್ರದೇಶಗಳಲ್ಲಿ ಶೇ. 65ರಷ್ಟು ಕಡುಬಡವರಿದ್ದರು. ಬಡತನ ರೇಖೆಯಿಂದ ಹೊರ ಬಂದವರಲ್ಲಿ ಮೂರನೇ ಒಂದರಷ್ಟು ಮಂದಿ ಈ ರಾಜ್ಯಗಳಿಗೆ ಸೇರಿದ್ದಾರೆ.

ಇದೇ ವಿಶ್ವಬ್ಯಾಂಕ್ ಸರಕಾರೇತರ ಸಂಸ್ಥೆಯಾಗಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ನಡೆಸಿದ ಅಧ್ಯಯನದ ಆಧಾರದಲ್ಲಿ 2020ರಲ್ಲಿ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಜಗತ್ತಿನಾದ್ಯಂತ ಬಡತನ ರೇಖೆಗಿಂತ ಕೆಳಗೆ ತುಳಿಯಲ್ಪಟ್ಟ ಒಟ್ಟು ಜನಸಂಖ್ಯೆಯ ಶೇ. 79ರಷ್ಟು ಜನರು ಭಾರತೀಯರು ಎಂದು ಹೇಳಿತ್ತು. 2020ರಲ್ಲಿ ಜಗತ್ತಿನಲ್ಲಿ ಹೊಸದಾಗಿ ದಾರಿದ್ರ್ಯಕ್ಕೆ ಸೇರ್ಪಡೆಯಾದ 7.1 ಕೋಟಿಯಲ್ಲಿ 5.6 ಕೋಟಿ ಜನರು ಭಾರತದವರು ಎಂದು ಅದು ಬಹಿರಂಗಪಡಿಸಿತ್ತು. 2022ರಲ್ಲಿ ಬಹಿರಂಗವಾದ ಜಾಗತಿಕ ಹಸಿವು ಸೂಚ್ಯಂಕದಲ್ಲೂ 121 ದೇಶಗಳಲ್ಲಿ ಭಾರತವು 107ಕ್ಕೆ ಕುಸಿದಿತ್ತು. ಸಮೀಕ್ಷೆಯ ಪ್ರಕಾರ ನೆರೆಯ ಶ್ರೀಲಂಕಾ, ನೇಪಾಳ, ಪಾಕಿಸ್ತಾನವು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿತ್ತು. ಏಶ್ಯದಲ್ಲಿ ಅಪ್ಘಾನಿಸ್ತಾನ ಬಿಟ್ಟರೆ ಹಸಿವು ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸ್ಥಾನದಲ್ಲಿ ಭಾರತ ದೇಶವಿದೆ ಎನ್ನುವುದನ್ನು ಗ್ಲೋಬಲ್ ಹಂಗರ್ ಇಂಡೆಕ್ಸ್ ಹೇಳಿತ್ತು. ನೋಟುನಿಷೇಧ, ಕೊರೋನ, ಲಾಕ್‌ಡೌನ್‌ಗಳು ಈ ದೇಶದ ಸಣ್ಣ ಉದ್ದಿಮೆಗಳ ಮೇಲೆ ಮಾರಕ ಪರಿಣಾಮಗಳನ್ನು ಬೀರಿದ್ದವು. ಇದರಿಂದಾಗಿ ಸಾವಿರಾರು ಜನರು ಉದ್ಯೋಗಗಳನ್ನು ಕಳೆದುಕೊಂಡರು. ನಿರುದ್ಯೋಗಗಳು ಹೆಚ್ಚಾಗುತ್ತಿದ್ದಂತೆಯೇ ಬಡತನ ಹೆಚ್ಚಾಗುವುದು ಸಹಜವಾಗಿದೆ. 2020-21ರಲ್ಲಿ ಲಾಕ್‌ಡೌನ್ ಭಾರತದ ಆರ್ಥಿಕತೆಯ ಗಾಯಗಳ ಮೇಲೆ ಬರೆ ಎಳೆದಿದ್ದವು. ಅಪೌಷ್ಟಿಕತೆ ಈ ಅವಧಿಯಲ್ಲೇ ಅತಿ ಹೆಚ್ಚಾಗಿತ್ತು. 2021ರ ಮೇ ತಿಂಗಳಲ್ಲಿ ಅಝೀಂ ಪ್ರೇಮ್‌ಜಿ ಯುನಿವರ್ಸಿಟಿಯ ಒಂದು ಅಧ್ಯಯನವು ಕೋವಿಡ್ ಲಾಕ್‌ಡೌನ್‌ನಿಂದಾಗಿ 2020-21ರ ವರ್ಷದಲ್ಲಿ ಸುಮಾರು 23 ಕೋಟಿ ಜನರು ಕಡುಬಡತನಕ್ಕೆ ತಳ್ಳಲ್ಪಟ್ಟಿದ್ದರು ಎಂದು ಹೇಳಿತ್ತು. ಇವೆಲ್ಲವನ್ನು ಈ ಹಿಂದೆ ವಿಶ್ವಸಂಸ್ಥೆಯ ಅಧ್ಯಯನಾ ವರದಿಗಳೂ ಬೆಟ್ಟು ಮಾಡಿವೆ. ಆದರೆ ಇದೀಗ ವಿಶ್ವಬ್ಯಾಂಕ್ ಭಾರತದಲ್ಲಿ ಬಡತನ ಇಳಿಕೆಯಾಗಿರುವ ಶುಭವಾರ್ತೆಯನ್ನು ಜಗತ್ತಿಗೆ ನೀಡಿದೆ. ವಿಶ್ವಬ್ಯಾಂಕ್ ಪ್ರಮಾಣ ಪತ್ರ ನೀಡಿರುವುದರಿಂದ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಯಾರಾದರೂ ‘ಹಸಿವಾಗುತ್ತಿದೆ’ ಎಂದರೆ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸುವ ಸಾಧ್ಯತೆಗಳೂ ಇವೆ.

ಒಟ್ಟಿನಲ್ಲಿ ಬಡತನಕ್ಕೆ ಹಸಿವು, ಅಪೌಷ್ಟಿಕತೆಯೊಂದಿಗೆ ಸಂಬಂಧವಿಲ್ಲ ಎನ್ನುವುದನ್ನು ವಿಶ್ವಬ್ಯಾಂಕ್ ಪ್ರತಿಪಾದಿಸಲು ಹೊರಟಿದೆ. ಭಾರತ ಸರಕಾರಕ್ಕೂ ಇದೇ ಬೇಕಾಗಿರುವುದು. ಈ ಹಿಂದೆ ಹಸಿವು ಸೂಚ್ಯಂಕ ವರದಿಯನ್ನು ಭಾರತ ತಿರಸ್ಕರಿಸಿತ್ತು ಮಾತ್ರವಲ್ಲ, ಇದಕ್ಕೆ ಅನುಸರಿಸಿದ ಮಾನದಂಡ ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಹಸಿವು ಸೂಚ್ಯಂಕವನ್ನು ನಿರ್ಧರಿಸಲು ಈ ದೇಶದ ಜನರ ಅಪೌಷ್ಟಿಕತೆ, ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ರಕ್ತಹೀನತೆ, ದೈಹಿಕ ಬೆಳವಣಿಗೆಗಳನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ. ಕಡುಬಡವರನ್ನು ಗುರುತಿಸಲು ವಿಶ್ವಬ್ಯಾಂಕ್ ಯಾರು ಎಷ್ಟು ವೆಚ್ಚ ಮಾಡುತ್ತಾರೆ ಎನ್ನುವುದನ್ನು ಆಧರಿಸಿ ದತ್ತಾಂಶವನ್ನು ಸಂಗ್ರಹಿಸುತ್ತದೆ. 2017ರಲ್ಲಿ ದಿನಕ್ಕೆ 184 ರೂಪಾಯಿಗಿಂತ ಕಡಿಮೆ ವೆಚ್ಚ ಮಾಡುವವರನ್ನು ಕಡು ಬಡವರು ಎಂದು ವರ್ಗೀಕರಿಸಲಾಗುತ್ತಿತ್ತು. 2021ರ ಬಳಿಕ ಇದನ್ನು 250ಕ್ಕೆ ಏರಿಸಲಾಗಿದೆ. ಬಡತನಕ್ಕೆ ಇರುವ ಅಳತೆಗೋಲುಗಳನ್ನು ಬದಲಾಯಿಸುವ ಮೂಲಕ, ಈ ಹಿಂದೆ ದೇಶದ ಲಕ್ಷಾಂತರ ಬಡವರನ್ನು ಸರಕಾರ ಇಲ್ಲವಾಗಿಸಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ರೇಷನ್‌ಕಾರ್ಡ್‌ನ ಹೊರೆಯನ್ನು ಇಳಿಸಲು, ಕಡುಬಡವರಿಗೆ ನೀಡುವ ಬೇರೆ ಬೇರೆ ಬಗೆಯ ಸಬ್ಸಿಡಿಯ ಹೊರೆಯನ್ನು ಇಳಿಸುವುದಕ್ಕಾಗಿ ಈ ಮಾನದಂಡವನ್ನು ಸರಕಾರ ಆಗಾಗ ಬದಲಿಸುತ್ತಾ ಬಂದಿದೆ. 2004ರಲ್ಲಿ ತೆಂಡುಲ್ಕರ್ ಸಮಿತಿಯನ್ನು ಇದಕ್ಕಾಗಿಯೇ ನೇಮಿಸಲಾಯಿತು.ನಗರ ಪ್ರದೇಶಗಳಲ್ಲಿ ದಿನಕ್ಕೆ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 28 ರೂಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡು ಬಡವರು ಎಂದು ಈ ಸಮಿತಿ ಘೋಷಿಸಿತು. ಇದರ ಆಧಾರದಲ್ಲೇ 2012ರಲ್ಲಿ ಯೋಜನಾ ಆಯೋಗದ ಮುಖ್ಯಸ್ಥ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು 2004-05ರಲ್ಲಿ ಶೇ. 37ರಷ್ಟಿದ್ದ ಭಾರತದ ಬಡತನದ ಪ್ರಮಾಣ 2011-12ರ ಹೊತ್ತಿಗೆ ಶೇ. 22ಕ್ಕೆ ಇಳಿದಿದೆ ಎಂದು ಪ್ರಕಟಿಸಿದ್ದರು. ಭಾರತದಲ್ಲಿ ಕಡು ಬಡತನ ಇಳಿಕೆಯಾಗಲು ಕೇಂದ್ರ ಸರಕಾರ ನೀಡುತ್ತಿರುವ ಉಚಿತ ರೇಷನ್ ಕೂಡ ಕಾರಣ ಎನ್ನುವುದನ್ನು ಕೂಡ ವಿಶ್ವಬ್ಯಾಂಕ್ ಉಲ್ಲೇಖಿಸಿದೆ. ಭಾರತದಲ್ಲಿ ಕಡುಬಡವರು ಇಲ್ಲವೆಂದಾದರೆ ಈ ಉಚಿತ ಧಾನ್ಯಗಳ ವಿತರಣೆಯ ಅಗತ್ಯವೇನು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ವಿಶ್ವಬ್ಯಾಂಕ್ ವರದಿ ಆಧಾರವಾಗಿಟ್ಟುಕೊಂಡು ಭವಿಷ್ಯದಲ್ಲಿ ಉಚಿತ ಧಾನ್ಯಗಳ ವಿತರಣೆಯನ್ನು ಸರಕಾರ ಸ್ಥಗಿತಗೊಳಿಸಿದರೆ ಅಚ್ಚರಿಯೇನೂ ಇಲ್ಲ. ಅಷ್ಟಕ್ಕೂ, ವಿಶ್ವಬ್ಯಾಂಕ್ ತನ್ನ ಅಂಕಿಅಂಶಗಳಲ್ಲಿ ಸಂಪೂರ್ಣವಾಗಿ ಸುಳ್ಳನ್ನೇನೂ ಹೇಳಿಲ್ಲ. ತಪ್ಪಿರುವುದು, ಭಾರತದ ಬಡತನವನ್ನು ಅಳೆಯುವುದಕ್ಕೆ ಅದು ಆರಿಸಿದ ಮಾನದಂಡದಲ್ಲಿ. ಕಳೆದ ಒಂದು ದಶಕದಲ್ಲಿ ಭಾರತ ಕಂಡ ಹಣದುಬ್ಬರ, ಅದು ಎದುರಿಸಿದ ಸಾಮಾಜಿಕ, ಆರ್ಥಿಕ ಆಘಾತಗಳನ್ನು ಮುಂದಿಟ್ಟುಕೊಂಡು ಜನರ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದಾಗ ಮಾತ್ರ ವಾಸ್ತವ ಬೆಳಕಿಗೆ ಬರುತ್ತದೆ. ಈ ಕಾಲಘಟ್ಟಕ್ಕೆ ಅನುಗುಣವಾಗಿ ಜನರಿಗೆ ಸಿಗುತ್ತಿರುವ ಮೂಲಭೂತ ಸೌಲಭ್ಯಗಳು, ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಉದ್ಯೋಗ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಬಡತನವನ್ನು ಅಳೆಯಬೇಕು. ಆದರೆ ಅದಕ್ಕೆ ಭಾರತ ಸರಕಾರ ಸಿದ್ಧವಿಲ್ಲ. ಬಡತನವನ್ನು ಅಳೆಯಲು ಬಳಸುವ ಮಾಪನವನ್ನು ನಮಗೆ ಪೂರಕವಾಗುವಂತೆ ಬದಲಿಸಿ, ಅದರಿಂದ ಅಳೆದು ‘ಬಡತನವಿಲ್ಲ’ ಎಂದು ಘೋಷಿಸಿದರೆ ಬಡತನ ಇಲ್ಲವಾಗುವುದಿಲ್ಲ. ಗಾಯಗಳನ್ನು ಮುಚ್ಚಿಟ್ಟಷ್ಟೂ ಅದರ ನಂಜು ಉಲ್ಬಣಗೊಳ್ಳುತ್ತದೆ. ಅದರ ಬದಲಿಗೆ ಗಾಯಗಳನ್ನು ಹುಡುಕಿ ಅವುಗಳಿಗೆ ಔಷಧಿ ಹಚ್ಚುವ ಕೆಲಸವನ್ನು ಸರಕಾರ ಮಾಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X