Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮುಂದುವರಿದ ಜ್ಞಾನೇಶ್ ಭಂಡತನ!

ಮುಂದುವರಿದ ಜ್ಞಾನೇಶ್ ಭಂಡತನ!

ವಾರ್ತಾಭಾರತಿವಾರ್ತಾಭಾರತಿ28 Sept 2026 8:50 AM IST
share
ಮುಂದುವರಿದ ಜ್ಞಾನೇಶ್ ಭಂಡತನ!

ಚುನಾವಣಾ ಆಯೋಗದಲ್ಲಿ ಮೋದಿ ಸರಕಾರ ಪ್ರಾಯೋಜಿತ ಜ್ಞಾನೇಶ್ ಕುಮಾರ್ ನಾಟಕ ಮುಂದುವರಿದಿದೆ. ಕಳೆದ ಹಲವು ತಿಂಗಳುಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿಯವರ ಅಭಿಪ್ರಾಯ, ಆಕ್ಷೇಪಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದದ್ದು ಬಯಲಾದ ಬಳಿಕವೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಭಂಡತನ ಕೊನೆಗೊಳ್ಳುತ್ತಿಲ್ಲ. ಸಿಇಸಿ ಮತ್ತು ಇಬ್ಬರು ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಆರೋಪಗಳನ್ನು ಮರೆಮಾಚಲು ಸೆಪ್ಟ್ಟಂಬರ್ 26ರಂದು ಮೂವರೂ ಆಯುಕ್ತರ ಸಭೆ ಮೂಲಕ ‘ಸರ್ವಾನುಮತ’ ಪ್ರದರ್ಶನ ನಡೆಯಿತು. ಮೋದಿ ನಿಷ್ಠ ಜ್ಞಾನೇಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳಲು ಇನ್ನಿಬ್ಬರು ಆಯುಕ್ತರನ್ನು ಅಸಹಾಯಕರನ್ನಾಗಿಸಿ ಅಕ್ಕಪಕ್ಕ ಗೊಂಬೆಗಳಂತೆ ಕೂರಿಸಿದಂತಿದ್ದ ನಿರ್ಲಜ್ಜ ‘ಶೋ’ ಅದಾಗಿತ್ತು. ಸುಳ್ಳುಗಳನ್ನೇ ಬಂಡವಾಳವಾಗಿಸಿಕೊಂಡ ಸರಕಾರದ ಪದತಳಕ್ಕೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಜ್ಞಾನೇಶ್ ಕುಮಾರ್ ತಂದಿಳಿಸಿ ಕೂತಿದ್ದಾರೆ ಎಂಬುದು ಪ್ರಜಾಪ್ರಭುತ್ವದಲ್ಲಿ ತೀವ್ರ ಕಳವಳಕಾರಿಯಾಗಿದೆ.

ಕಳವಳಗಳು ಇಲ್ಲಿಗೇ ಮುಗಿಯುವುದಿಲ್ಲ. ಮೂವರೂ ಚುನಾವಣಾ ಆಯುಕ್ತರ ಶನಿವಾರದ ಸಭೆಯನ್ನು, ಆರೋಪಗಳ ನಂತರದ ಆಕ್ರೋಶ ಶಮನದ ಯತ್ನವೆನ್ನಲಾಗಿದೆ. ಆಯೋಗದ ಶರಣಾಗತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಅದು ನಮ್ಮದೇ ಸಂವಿಧಾನದ ಮೌಲ್ಯಗಳನ್ನು ದುರ್ಗತಿಗೆ ತಂದಿಟ್ಟ ಘಳಿಗೆಯೂ ಹೌದು. ಇಬ್ಬರು ಆಯುಕ್ತರ ಆಕ್ಷೇಪಗಳ ಹೊರತಾಗಿಯೂ ತೆಗೆದುಕೊಂಡ ಕೆಲವು ನಿರ್ಧಾರಗಳ ಸಮರ್ಥನೆಗೆ, ಸುಪ್ರೀಂ ಕೋರ್ಟ್ ಆದೇಶಗಳನ್ನು ಬಳಸಿಕೊಳ್ಳಲಾಗುತ್ತಿರುವುದು ಕನಿಷ್ಠ ನಾಚಿಕೆಯೂ ಇಲ್ಲದ ನಡೆ. 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವಂತೆ 2025ರ ಜೂನ್ 24ರಂದು ಹೊರಡಿಸಲಾಗಿದ್ದ ಎಸ್‌ಐಆರ್ ಕುರಿತ ಆದೇಶಕ್ಕೆ ಆಯೋಗದ ಸರ್ವಾನುಮತವಿತ್ತು ಮತ್ತು ಸುಪ್ರೀಂ ಕೋರ್ಟ್ 2026ರ ಮೇ 27ರ ಆದೇಶದಲ್ಲಿ ಅದನ್ನು ಎತ್ತಿಹಿಡಿದಿದೆ ಎಂದು ಶನಿವಾರದ ಸಭೆಯಲ್ಲಿ ವಿವರಣೆ ನೀಡಲಾಯಿತು. ಹಾಗೆಯೇ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಳಸಲಾಗುವ ಫಾರಂ 6ರಲ್ಲಿನ ಬದಲಾವಣೆಗಳನ್ನು ಕೂಡ ಸುಪ್ರೀಂ ಕೋರ್ಟ್ ಎತ್ತಿಹಿದಿದೆ ಎಂಬುದನ್ನು ಉಲ್ಲೇಖಿಸಲಾಯಿತು. ಅಂದರೆ, ಇಬ್ಬರು ಆಯುಕ್ತರ ಆಕ್ಷೇಪಗಳೇನೇ ಇದ್ದರೂ ಅವು ಈಗ ಅಪ್ರಸ್ತುತ ಎಂಬ ಧಾಟಿಯಲ್ಲಿ ಈ ವಿವರಣೆಗಳಿದ್ದವು. ಅದರೊಂದಿಗೆ, ಜ್ಞಾನೇಶ್ ಕುಮಾರ್ ತೆಗೆದುಕೊಂಡ ಏಕಪಕ್ಷೀಯ ನಿಲುವುಗಳ ವಿರುದ್ಧದ ಆಯೋಗದೊಳಗಿನದೇ ಧ್ವನಿಗಳನ್ನು ಇಡೀ ದೇಶ ನೋಡನೋಡುತ್ತಿರುವಾಗಲೇ ಅಡಗಿಸಲಾಯಿತು.

ಆಕ್ಷೇಪಗಳನ್ನು ಕಡೆಗಣಿಸುವ ಸಿಇಸಿ ನಡವಳಿಕೆ, ಅವರನ್ನು ನೇಮಿಸಿರುವ ಕೇಂದ್ರ ಸರಕಾರದ್ದೇ ಪಾಠ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರ ನೇಮಕದ ಅಧಿಕಾರವನ್ನು ಈಗಾಗಲೇ ತನ್ನ ವಶದಲ್ಲಿಟ್ಟುಕೊಂಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ, ಆಯುಕ್ತರ ನೇಮಕದ ಹೊತ್ತಲ್ಲಿ ವಿರೋಧಪಕ್ಷದ ನಾಯಕನನ್ನು ಹೆಸರಿಗಷ್ಟೇ ಕೂರಿಸಿಕೊಂಡು, ಅಭಿಪ್ರಾಯವನ್ನು ಕಡೆಗಣಿಸುತ್ತದೆ. ಅಲ್ಲದೆ, ಸಿಇಸಿ ಸೇರಿದಂತೆ ಚುನಾವಣಾ ಆಯುಕ್ತರು ಅಧಿಕಾರಾವಧಿಯಲ್ಲಿ ಮಾಡಿದ ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಅಪರಾಧಕ್ಕಾಗಿ ಕಡೆಯವರೆಗೂ ಯಾವುದೇ ಪ್ರಕರಣವನ್ನು ಭಾರತದ ಯಾವುದೇ ನ್ಯಾಯಾಲಯ ತೆಗೆದುಕೊಳ್ಳಲು ಸಾಧ್ಯವಿಲ್ಲದಂಥ ಕಾನೂನನ್ನೂ 2023ರಲ್ಲೇ ತರಲಾಗಿದೆ. ಹಾಗೆ ಅವರನ್ನು ಮೋದಿ ಸರಕಾರ ರಕ್ಷಿಸಿರುವುದು, ಚುನಾವಣಾ ಕಣದಲ್ಲಿ ಬಿಜೆಪಿಯನ್ನು ಅವರು ರಕ್ಷಿಸಬೇಕು ಎಂಬುದಕ್ಕಾಗಿ. ಅದನ್ನು ತಲೆಬಾಗಿ ಮಾಡುವ ಮೂಲಕ ಜ್ಞಾನೇಶ್ ಕುಮಾರ್ ಋಣಸಂದಾಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಷ್ಟಕ್ಕೂ ಬಿಜೆಪಿ ಜೊತೆಗಿನ ಜ್ಞಾನೇಶ್ ಕುಮಾರ್ ನಂಟು ಹೊಸದೇನಲ್ಲ, ರಹಸ್ಯವೂ ಅಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಕೇರಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜ್ಞಾನೇಶ್ ಕುಮಾರ್ ಆಹ್ವಾನ ನೀಡಿದ್ದ ವಿಷಯವನ್ನು ಕೇರಳಂನ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಜಿಜಿ ಥಾಮ್ಸನ್ ಬಹಿರಂಗಪಡಿಸಿದ್ದಾರೆ. ಯಾವುದೇ ಬಿಜೆಪಿ ನಾಯಕರ ಬದಲು ಸೇವಾನಿರತ ಐಎಎಸ್ ಅಧಿಕಾರಿಯಿಂದ ಈ ಪ್ರಸ್ತಾವ ಬಂದದ್ದು ಅಚ್ಚರಿಯನ್ನುಂಟು ಮಾಡಿತ್ತು ಎಂದು ಆ ಆಹ್ವಾನವನ್ನು ತಿರಸ್ಕರಿಸಿದ್ದ ಥಾಮ್ಸನ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ, ಮೊದಲು ಬಿಜೆಪಿಗೆ ಜನರನ್ನು ತರಲು ಜ್ಞಾನೇಶ್ ಕುಮಾರ್ ಅವರನ್ನು ಬಳಸಿಕೊಂಡ ಮೋದಿ ಮತ್ತು ಶಾ ಜೋಡಿ, ಆನಂತರ ಅವರನ್ನು ಭಾರತದ ಚುನಾವಣೆಯ ಅಂಪೈರ್ ಮತ್ತು ಮ್ಯಾಚ್ ಫಿಕ್ಸಿಂಗ್ ಉಸ್ತುವಾರಿಯನ್ನಾಗಿಸಿತು ಎಂದು ಟೀಕಿಸಿದ್ದಾರೆ.

2016ರಿಂದಲೂ ಜ್ಞಾನೇಶ್ ಕುಮಾರ್ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ, ಅದರಲ್ಲೂ ಗೃಹ ಸಚಿವಾಲಯದಲ್ಲಿ ಕೆಲಸ ಮಾಡಿದ್ದಾರೆ. ರಾಮಜನ್ಮಭೂಮಿ ಟ್ರಸ್ಟ್ ಸ್ಥಾಪನೆಯಲ್ಲಿ, ಜಮು-್ಮ ಕಾಶ್ಮೀರದ 370ನೇ ವಿಧಿ ರದ್ದುಪಡಿಸಿದಾಗ ಆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿಸುವಲ್ಲಿ ಅವರ ಪಾತ್ರವಿತ್ತೆನ್ನಲಾಗುತ್ತದೆ. 2024ರಲ್ಲಿ ಸೃಷ್ಟಿಯಾದ ಒಂದು ಸನ್ನಿವೇಶದಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ ಬಳಿಕ ಆ ಕುರ್ಚಿಯಲ್ಲಿ ಮೋದಿ ಸರಕಾರ ಜ್ಞಾನೇಶ್ ಕುಮಾರ್ ಅವರನ್ನು ತಂದು ಕೂರಿಸಿತು. ಅದಕ್ಕಿಂತ ಎರಡೇ ತಿಂಗಳ ಮೊದಲು ಸಿಇಸಿ, ಇಸಿ ನೇಮಕಾತಿ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿತ್ತು ಎಂಬುದನ್ನು ಗಮನಿಸಬೇಕು. ಆ ಕಾಯ್ದೆಯ ಜಾರಿಯೊಂದಿಗೇ ಸಿಇಸಿ ಹುದ್ದೆಗೆ ಬಂದಿರುವ ಜ್ಞಾನೇಶ್ ಕುಮಾರ್ ಭಂಡತನ ರೂಢಿಸಿಕೊಂಡಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಅವರ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಯಾರೇ ಏನೇ ಅಂದರೂ, ಸಮರ್ಥಿಸಿಕೊಳ್ಳಲು ಅವರಿಗಿಂತ ಮೊದಲು ಬಿಜೆಪಿ ನಾಯಕರೇ ಓಡೋಡಿ ಬರುವುದೂ ನಡೆಯುತ್ತಿದೆ. ಹಾಗಾಗಿ, ಚುನಾವಣಾ ಆಯೋಗವೆನ್ನುವುದು ಈ ದೇಶದ ಒಂದು ಸಾಂವಿಧಾನಿಕ ಸಂಸ್ಥೆಯಾಗಿ ಉಳಿಯದೆ, ಬಿಜೆಪಿಯ ಒಂದು ಅಂಗಸಂಸ್ಥೆ ಎಂಬಂತಾಗಿರುವುದು ಸ್ಪಷ್ಟ ಮತ್ತು ಅತಿ ದುರದೃಷ್ಟಕರ.

ಇಂದಿರಾ ಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿಯ ವಿರುದ್ಧ ದೊಡ್ಡದಾಗಿ ಮಾತನಾಡುವ ಇದೇ ಬಿಜೆಪಿ ರಾಜಕಾರಣಿಗಳು, ಸ್ವತಃ ಆ ಕರಾಳ ದಿನಗಳ ಸರಕಾರದಂತೆಯೇ ವರ್ತಿಸುತ್ತಿದ್ದಾರೆ ಎಂಬುದು ದೊಡ್ಡ ವಿರೋಧಾಭಾಸ. ಹಾಗಾಗಿಯೇ, ಈ ದೇಶದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸಬೇಕಿದ್ದ ಚುನಾವಣಾ ಆಯೋಗ ನೀತಿ ಮರೆತು ಕೂತಿದೆ ಮತ್ತು ಭಂಡತನವನ್ನೇ ಮೈಗೂಡಿಸಿಕೊಂಡವರು ಅದರ ಸಾರಥ್ಯ ವಹಿಸಿದ್ದಾರೆ. ಜನ ಏನೆಂದುಕೊಂಡಾರು ಎಂಬುದರ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದೇ ಅಪಾಯಕಾರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X