Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಇಟ್ಟಿಗೆ ಭಟ್ಟಿಯಲ್ಲಿ ಬೇಯುತ್ತಿರುವ...

ಇಟ್ಟಿಗೆ ಭಟ್ಟಿಯಲ್ಲಿ ಬೇಯುತ್ತಿರುವ ಕಾರ್ಮಿಕರು

ವಾರ್ತಾಭಾರತಿವಾರ್ತಾಭಾರತಿ23 Jan 2025 9:05 AM IST
share
ಇಟ್ಟಿಗೆ ಭಟ್ಟಿಯಲ್ಲಿ ಬೇಯುತ್ತಿರುವ ಕಾರ್ಮಿಕರು

ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯವನ್ನು, ಸಂವಿಧಾನ ನೀಡಿದ ಹಕ್ಕುಗಳನ್ನು ಅಣಕಿಸುವಂತಹ ಕೃತ್ಯವೊಂದು ಕರ್ನಾಟಕದ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಹೊರವಲಯದ ಗಾಂಧಿನಗರ ಸಮೀಪದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೂಲಿ ಕಾರ್ಮಿಕರ ಮೇಲೆ ಮಾಲಕ ಮತ್ತು ಆತನ ಭಂಟರು ಸೇರಿ ಅತ್ಯಂತ ಭೀಕರವಾಗಿ ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಕ್ರಾತಿ ಹಬ್ಬಕ್ಕೆ ಎಂದು ಊರಿಗೆ ಹೋಗಿದ್ದ ಕೂಲಿ ಕಾರ್ಮಿಕರು ಹಿಂದಿರುಗುವುದು ವಿಳಂಬವಾಯಿತು ಎನ್ನುವುದೇ ಇವರು ಎಸಗಿದ ಮಹಾಪರಾಧ. ಮೂವರು ಕಾರ್ಮಿಕರನ್ನು ಹಿಡಿದು ಅವರ ಪಾದಗಳಿಗೆ ಕಟ್ಟಿಗೆ, ಕಬ್ಬಿಣದ ರಾಡ್‌ಗಳಿಂದ ಮಾಲಕ ಮತ್ತು ಆತನ ಸಹಚರರು ಭೀಕರವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲ, ಇನ್ನಿತರ ದೈಹಿಕ ದೌರ್ಜನ್ಯಗಳನ್ನು ನೀಡಿದ್ದಾರೆ. ಈ ಕೃತ್ಯ ವೀಡಿಯೊಗಳಲ್ಲಿ ವೈರಲ್ ಆಗದೇ ಇದ್ದಿದ್ದರೆ ಶಾಶ್ವತವಾಗಿ ಮುಚ್ಚಿ ಹೋಗಿ ಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಇಟ್ಟಿಗೆ ಭಟ್ಟಿ ಮಾಲಕ ಖೇಮು ರಾಠೋಡ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಉಳಿದಿಬ್ಬರು ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಬರ್ಬರ ಕೃತ್ಯ, ರಾಜ್ಯದಲ್ಲಿ ವಲಸೆ ಕಾರ್ಮಿಕರು, ಅಸಂಘಟಿತ ದಿನಗೂಲಿ ಕಾರ್ಮಿಕರ ಸ್ಥಿತಿಗತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಾಜ್ಯದಲ್ಲಿ ಜೀತ ಪದ್ಧತಿ ನಿಷೇಧವಾಗಿ 40 ವರ್ಷಕಳೆದಿದೆಯಾದರೂ, ಇನ್ನೂ ರಾಜ್ಯದಲ್ಲಿ ಇದು ಬೇರೆ ಬೇರೆ ರೂಪಗಳಲ್ಲಿ ಅಸ್ತಿತ್ವದಲ್ಲಿದೆ ಎನ್ನುವ ವಾಸ್ತವವನ್ನು ವಿಜಯಪುರದಲ್ಲಿ ನಡೆದಿರುವ ಘಟನೆ ಬಹಿರಂಗಪಡಿಸಿದೆ. 20 ವರ್ಷಗಳ ಹಿಂದೆ ಮಂಡ್ಯದ ಹಂಗರಹಳ್ಳಿಯಲ್ಲಿ ಕಾರ್ಮಿಕರ ಕಾಲಿಗೆ ಸರಪಳಿಯನ್ನು ಬಿಗಿದು ಗಣಿಗಾರಿಕೆಗೆ ಬಳಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಗಣಿ ಮಾಲಕರ ಮೇಲೆ ಮೊಕದ್ದಮೆಯೂ ದಾಖಲಾಯಿತು. ಹಲವು ತಿಂಗಳುಗಳ ಕಾಲ ಇದು ಮಾಧ್ಯಮಗಳ ಮುಖ ಪುಟ ವಿಷಯವಾಗಿ ಚರ್ಚೆಯಲ್ಲಿತ್ತು. ಬಳಿಕ ಇಡೀ ಪ್ರಕರಣವನ್ನೇ ನಕಲಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಚಿತ್ರವೊಂದರ ಶೂಟಿಂಗ್‌ಗಾಗಿ ಕಾರ್ಮಿಕರ ಕಾಲಿಗೆ ಸರಪಳಿಯನ್ನು ಬಿಗಿಯಲಾಗಿತ್ತು. ಇದನ್ನೇ ಮಾಧ್ಯಮಗಳು ತಿರುಚಿ ವರದಿ ಮಾಡಿದವು ಎಂದು ಸತ್ಯವನ್ನು ಬಹಿರಂಗಪಡಿಸಿದ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ನಡೆಯಿತು. ಇದಾದ ಬಳಿಕವೂ ರಾಜ್ಯದ ಹಲವೆಡೆೆ ಜೀತ ಪದ್ಧತಿ ಸುದ್ದಿ ಮಾಡುತ್ತಲೇ ಇದೆ. ಕೊರೋನ, ಲಾಕ್‌ಡೌನ್ ಕಾಲದಲ್ಲಿ ಬಡತನದ ಕಾರಣಕ್ಕಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನೂರಾರು ಮಕ್ಕಳು ಶಾಲೆಗಳನ್ನು ತೊರೆದು ಭೂಮಾಲಕರ ಹಟ್ಟಿ, ತೋಟವನ್ನು ಸೇರಿದರು. ಅವರನ್ನು ಮತ್ತೆ ಶಾಲೆಗೆ ತರಿಸುವ ಯಾವ ಪ್ರಯತ್ನವೂ ನಡೆದಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ದಣಿಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ, ಅವರ ಗೂಂಡಾಗಳಿಗೆ ಹೆದರಿ ತೀರ ಕಡಿಮೆ ವೇತನಕ್ಕೆ ದುಡಿಯುವ ಕಾರ್ಮಿಕರ ಬಗ್ಗೆ ಸಂಘಟನೆಗಳು ಗಮನ ಸೆಳೆಯುತ್ತಲೇ ಬಂದಿವೆ. ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ನಡೆದಿರುವುದು ಒಂದು ಸಣ್ಣ ಝಲಕ್ ಮಾತ್ರ. ಇಂತಹ ಇಟ್ಟಿಗೆ ಭಟ್ಟಿಗಳು ರಾಜ್ಯದಲ್ಲಿ ನೂರಾರು ಕಾರ್ಯಾಚರಿಸುತ್ತಿವೆ. ಅಲ್ಲಿರುವ ನೂರಾರು ಕಾರ್ಮಿಕರು ಮಾಲಕರ ಗೂಂಡಾಗಳ ದೊಣ್ಣೆ ಪೆಟ್ಟಿಗೆ ಹೆದರುತ್ತಲೇ ಆ ಭಟ್ಟಿಯೊಂದಿಗೆ ಬೇಯುತ್ತಿದ್ದಾರೆ. ಅಪರೂಪಕ್ಕಷ್ಟೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ.

ರಾಜ್ಯದಲ್ಲಿ ಜೀತ ಪದ್ಧತಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ರಾಜ್ಯ ಸರಕಾರವೂ ಒಪ್ಪಿಕೊಂಡಿದೆ ಮಾತ್ರವಲ್ಲ, ಇದರ ವಿರುದ್ಧ ಕ್ರಮ ಕೈಗೊಳ್ಳಲು 52 ಜೀತ ನಿಗ್ರಹ ಅಧಿಕಾರಿಗಳನ್ನು ನೇಮಕ ಮಾಡಿದೆ. ರಾಜ್ಯದಲ್ಲಿ 2016ರಿಂದ 2024ರವರೆಗೆ 2,631 ಜೀತ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಸಂದರ್ಭದಲ್ಲಿ ಜೀತ ಮುಕ್ತರಾದ 4,397 ಕಾರ್ಮಿಕರಿಗೆ ಪಿಂಚಣಿ ನೀಡಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೀತ ಮುಕ್ತರಿಗೆ ಪರಿಹಾರಗಳನ್ನು ನೀಡುತ್ತದೆಯಾದರೂ, ಅದನ್ನು ಪಡೆಯುವುದು ಕಾರ್ಮಿಕರ ಪಾಲಿಗೆ ಸುಲಭವಿಲ್ಲ. ಮುಖ್ಯವಾಗಿ ಪ್ರಕರಣ ದಾಖಲಾಗಿ, ಸಕ್ಷಮ ನ್ಯಾಯಾಲಯದ ಮುಂದೆ ಅದು ಜೀತ ಪ್ರಕರಣವೆನ್ನುವುದು ಸಾಬೀತಾಗಬೇಕು. ತೀರ್ಪು ಹೊರ ಬಿದ್ದ ಬಳಿಕವೇ ಪರಿಹಾರ ಸಂದಾಯವಾಗುತ್ತದೆ. ಅಧಿಕಾರಿಗಳು ನೇರವಾಗಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದರೆ ಮಾತ್ರ ನ್ಯಾಯ ಸಿಗಬಹುದೇ ಹೊರತು, ಯಾವುದೇ ಕಾರ್ಮಿಕ ತನ್ನ ಮಾಲಕನ ವಿರುದ್ಧ ಜೀತ ಪದ್ಧತಿ ಆರೋಪವನ್ನು ಹೊರಿಸುವ ಧೈರ್ಯ ತೋರಿಸುವುದು ಕಷ್ಟ. ಅಷ್ಟೇ ಅಲ್ಲ, ದೂರು ನೀಡಿದಾಕ್ಷಣ ಭೂಮಾಲಕರ ವಿರುದ್ಧ ಪ್ರಕರಣ ದಾಖಲಾಗುವುದು ದೂರದ ಮಾತು. ಇನ್ನು ದೂರು ನೀಡಿದ ಕಾರ್ಮಿಕರಿಗೆ ಆ ಊರಿನಲ್ಲಿ ಕೆಲಸ ಸಿಗುವುದೂ ಕಷ್ಟ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಳಗಾವಿ, ಬಾಗಲಕೋಟೆ, ರಾಮನಗರ ಈ ಭಾಗದಲ್ಲಿ ಜೀತ ಪದ್ಧತಿ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ಅಧಿಕಾರಿಗಳೂ ಒಪ್ಪುತ್ತಾರೆ. ಆದರೆ ಅವರೂ ಹೆಚ್ಚಿನ ಸಂದರ್ಭದಲ್ಲಿ ಅಸಹಾಯಕರಾಗಬೇಕಾಗುತ್ತದೆ. ಹೊಟೇಲುಗಳು, ಕಲ್ಲುಕೋರೆ, ಇಟ್ಟಿಗೆ ಭಟ್ಟಿ, ಕೃಷಿ ಈ ಎಲ್ಲ ವಲಯಗಳಲ್ಲೂ ಜೀತ ಪದ್ಧತಿ ಸದ್ದಿಲ್ಲದೆ ಹರಡಿಕೊಂಡಿದೆ. ಬೃಹತ್ ಕಲ್ಲುಗಣಿಗಾರಿಕೆಗಳ ಹಿಂದೆ ರಾಜಕಾರಣಿಗಳ ಕೈಗಳಿರುವುದರಿಂದ, ಇಲ್ಲಿರುವ ಮಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅಷ್ಟು ಸುಲಭವಿಲ್ಲ.

ಕಳೆದ ನವೆಂಬರ್‌ನಲ್ಲಿ ಬೆಳಗಾವಿಯ ಖಾಸಗಿ ಡಾಬಾವೊಂದರಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಾಲದ ರೂಪದಲ್ಲಿ ಇವರಿಗೆ ಹಣವನ್ನು ನೀಡಿ, ಬಳಿಕ ಇವರನ್ನು ಹಗಲು ರಾತ್ರಿ ಶೋಷಿಸಲಾಗುತ್ತಿತ್ತು. ಸ್ಥಳೀಯ ಅಧಿಕಾರಿಗಳು ಡಾಬಾಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಬಿಡುಗಡೆ ಮಾಡಿದ್ದು, ಮಾಲಕರ ಮೇಲೆ ಮೊಕದ್ದಮೆ ದಾಖಲಿಸಿದ್ದರು. ಕೊಡಗು, ಚಿಕ್ಕಮಗಳೂರಿನಂತಹ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಸ್ಥಿತಿಯಂತೂ ಇನ್ನಷ್ಟು ಚಿಂತಾಜನಕವಾಗಿರುತ್ತವೆ. ಬಹುತೇಕ ಹೊರ ರಾಜ್ಯಗಳಿಂದ ಇವರು ಕಾರ್ಮಿಕರನ್ನು ತರಿಸಿಕೊಂಡು ಅತ್ಯಂತ ಕಡಿಮೆ ವೇತನಗಳನ್ನು ನೀಡಿ ದುಡಿಸುತ್ತಾರೆ. ಭೂಮಾಲಕರ ಅನುಮತಿಯಿಲ್ಲದೆ ಇವರು ಇನ್ನೊಂದು ತೋಟದಲ್ಲಿ ಹೋಗಿ ಕೆಲಸ ಮಾಡುವಂತಿಲ್ಲ. ಮಾಲಕರು ಅನುಮತಿ ಪತ್ರವನ್ನು ನೀಡಿದರೆ ಮಾತ್ರ ಇಂತಹ ಕಾರ್ಮಿಕರು ಇನ್ನೊಂದು ತೋಟದಲ್ಲಿ ಕೆಲಸ ಮಾಡಬಹುದಾಗಿದೆ. ಒಂದು ವೇಳೆ, ಭೂಮಾಲಕರ ವಿರುದ್ಧ ಪ್ರತಿಭಟನೆಯನ್ನು ನಡೆಸಿದರೆ, ‘ನುಸುಳುಕೋರರು’ ‘ಬಾಂಗ್ಲಾ ಅಕ್ರಮ ವಲಸಿಗರು’ ಎಂದೆಲ್ಲ ಆರೋಪಿಸಿ ಅವರನ್ನು ಸ್ಥಳೀಯರೇ ಪೊಲೀಸರ ವಶಕ್ಕೆ ನೀಡುತ್ತಾರೆ. ಅಸ್ಸಾಮಿನಿಂದ ಬಂದ ಇಂತಹ ಅದೆಷ್ಟೋ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಬಳಿಕ ‘ಬಾಂಗ್ಲಾ ವಲಸಿಗರು’ ಎಂದು ಆರೋಪಿಸಿ ಅವರನ್ನು ಭೂಮಾಲಕರು ಓಡಿಸಿದ ಉದಾಹರಣೆಗಳಿವೆ. ಭಾಷೆ ಗೊತ್ತಿಲ್ಲದ, ಊರಿನ ಪರಿಚಯವೇ ಇಲ್ಲದ ಈ ಕಾರ್ಮಿಕರು ಭೂಮಾಲಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಪೊಲೀಸರೇ ಈ ಕಾರ್ಮಿಕರ ಮೇಲೆ ದೌರ್ಜನ್ಯವೆಸಗಿ, ಭೂಮಾಲಕರಿಗೆ ಒಪ್ಪಿಸುತ್ತಾರೆ.

ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ನಡೆದಿರುವುದು ಈ ರಾಜ್ಯದ ಮೂಲೆ ಮೂಲೆಯಲ್ಲೂ ಸದ್ದಿಲ್ಲದೆ ನಡೆಯುತ್ತ ಬರುತ್ತಿವೆ. ವ್ಯವಸ್ಥೆಯೇ ಇದನ್ನು ಪರೋಕ್ಷವಾಗಿ ಪೋಷಿಸುತ್ತಿದೆ. ಕಾರ್ಮಿಕ ಇಲಾಖೆಯು ಈ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಶೋಷಣೆಯಿಂದ ಅವರನ್ನು ಪಾರು ಮಾಡಬೇಕು ಮಾತ್ರವಲ್ಲ, ಅವರಿಗೆ ಪುನರ್‌ವಸತಿ ವ್ಯವಸ್ಥೆಯನ್ನು ಮಾಡಬೇಕು. ಹಾಗೆಯೇ, ನೇರವಾಗಿ ಅಥವಾ ಪರೋಕ್ಷವಾಗಿ ಜೀತಪದ್ಧತಿಯಲ್ಲಿ ನರಳುವ ಕಾರ್ಮಿಕರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಿರಂಗವಾಗಿ ಮಾತನಾಡುವ ಆತ್ಮ ವಿಶ್ವಾಸವನ್ನು ಅವರಲ್ಲಿ ನಿರ್ಮಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಮಾಲಕರ ಮೇಲೆ ದೂರು ನೀಡಿದ ಕಾರ್ಮಿಕರ ಪೂರ್ಣ ರಕ್ಷಣೆಯ ಭಾರವನ್ನು ಸರಕಾರವೇ ವಹಿಸಬೇಕು. ಅವರಿಗೆ ಭದ್ರತೆಯನ್ನು ನೀಡಬೇಕು. ಮಾತ್ರವಲ್ಲ, ಜೀತಪದ್ಧತಿಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಲಯ ತುರ್ತು ವಿಚಾರಣೆಗೊಳಪಡಿಸಿ ಅವುಗಳನ್ನು ಇತ್ಯರ್ಥಗೊಳಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X