Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ದ್ವೇಷಾಪರಾಧ ವಿರುದ್ಧದ ಕಾನೂನಿಗೆ...

ದ್ವೇಷಾಪರಾಧ ವಿರುದ್ಧದ ಕಾನೂನಿಗೆ ‘ಬೆರ್ಚಪ್ಪ’ನ ಸ್ಥಿತಿ ಬಾರದಿರಲಿ

ವಾರ್ತಾಭಾರತಿವಾರ್ತಾಭಾರತಿ8 Dec 2025 6:57 AM IST
share
ದ್ವೇಷಾಪರಾಧ ವಿರುದ್ಧದ ಕಾನೂನಿಗೆ ‘ಬೆರ್ಚಪ್ಪ’ನ ಸ್ಥಿತಿ ಬಾರದಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರಸರಣ, ಸಾಮಾಜಿಕ ಬಹಿಷ್ಕಾರ ಹೇರುವಿಕೆಗಳನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಮಹತ್ವದ ಎರಡು ಪ್ರತ್ಯೇಕ ವಿಧೇಯಕಗಳಿಗೆ ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ವಿಧೇಯಕಗಳು ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗುವುದಕ್ಕೆ ಸಿದ್ಧತೆ ನಡೆದಿದೆ. ವಿಧೇಯಕಗಳ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವಿಕಲತೆಯ ವಿರುದ್ಧ ದ್ವೇಷ ಬಿತ್ತುವುದು, ಅವುಗಳನ್ನು ಪ್ರಚಾರ ಮಾಡುವುದು ಅಪರಾಧವಾಗಿದೆ. ದತ್ತಾಂಶ ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಕಂಪ್ಯೂಟರ್ ತಂತ್ರಾಂಶಗಳನ್ನು ದ್ವೇಷಕ್ಕೆ ಬಳಸುವುದೂ ಶಿಕ್ಷಾರ್ಹವಾಗುತ್ತವೆೆ. ದ್ವೇಷ ಅಪರಾಧ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲು ಅವಕಾಶವಿದೆ. ಅಪರಾಧವನ್ನು ಪುನರಾವರ್ತಿಸಿದರೆ ಎರಡು ವರ್ಷದಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಹಾಗೆಯೇ ಯಾವುದೇ ವ್ಯಕ್ತಿ, ಕುಟುಂಬ, ಇಲ್ಲವೇ ಕುಟುಂಬದ ಸದಸ್ಯರಿಗೆ ಸಾಮಾಜಿಕವಾಗಿ ಬಹಿಷ್ಕಾರ ಹೇರುವುದೂ ಮತ್ತೊಂದು ವಿಧೇಯಕದ ಪ್ರಕಾರ ಅಪರಾಧವಾಗುತ್ತದೆ. ಸಾಮಾಜಿಕ ಬಹಿಷ್ಕಾರಕ್ಕೆ ನೆರವು, ಪ್ರಚೋದನೆ ನೀಡಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಪುಟ ಸಭೆಯು ಈ ವಿಧೇಯಕಗಳಿಗೆ ಅನುಮೋದನೆ ನೀಡಿದ ಬೆನ್ನಿಗೆ ಕೆಲವು ಕುಂಬಳ ಕಾಯಿ ಕಳ್ಳರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ದ್ವೇಷ ಭಾಷಣವನ್ನೇ ತನ್ನ ರಾಜಕೀಯ ಬದುಕಿನ ಬಂಡವಾಳ ಮಾಡಿಕೊಂಡಿರುವ ಪ್ರಮೋದ್ ಮುತಾಲಿಕ್‌ನಂತಹ ಸಂಘಪರಿವಾರ ನಾಯಕರು ಈ ವಿಧೇಯಕದ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾರೆ. ‘‘ಮಸೂದೆ ಜಾರಿಗೊಳಿಸುವ ಮೂಲಕ ಹಿಂದೂ ಸಂಘಟನೆಗಳು ಮತ್ತು ಹಿಂದೂ ಮುಖಂಡರನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ’’ ಎಂದು ಅವರು ಕೆಂಡ ಕಾರಿದ್ದಾರೆ. ಮಸೂದೆ ಮಂಡನೆಯಾದರೆ ಅದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ, ದ್ವೇಷ ಭಾಷಣಗಳ ಹಿಂದಿರುವುದು ಹಿಂದೂ ಸಂಘಟನೆಗಳು ಮತ್ತು ಹಿಂದೂ ಮುಖಂಡರು ಎಂದು ಅವರು ಜಗಜ್ಜಾಹೀರು ಮಾಡಿದಂತಾಗಿದೆ. ಹಿಂದೂ ಧರ್ಮ ಎಂದಿಗೂ ತನ್ನನ್ನು ದ್ವೇಷ ಸಾಧನೆಯ ಹೆಸರಿನಲ್ಲಿ ಗುರುತಿಸಿಕೊಂಡಿಲ್ಲ. ವಿದ್ವೇಷಗಳನ್ನು ಹರಡುವವರು ಹಿಂದೂ ನಾಯಕರು ಆಗುವುದಕ್ಕೆ ಸಾಧ್ಯವೂ ಇಲ್ಲ. ಹಿಂದೂ ಧರ್ಮದ ಮಹತ್ವದ ಸುಧಾರಕರೆಂದು ಗುರುತಿಸಿಕೊಂಡಿರುವ ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳಂತಹ ನಾಯಕರು ಸದ್ವಿವೇಕಗಳನ್ನು ಹರಡುತ್ತಾ ಹಿಂದೂಧರ್ಮೀಯರನ್ನು ಸಂಘಟಿಸಿದರು. ಹಿಂದೂ ತತ್ವ ಸಿದ್ಧಾಂತಗಳನ್ನು ಆ ಮೂಲಕವೇ ವಿಶ್ವ ಮಾನ್ಯವಾಗಿಸಿದರು. ಇದೀಗ ನಮ್ಮ ನಡುವೆ ಹಿಂದೂ ನಾಯಕರೆಂದು ಸ್ವಯಂ ಘೋಷಿಸಿಕೊಂಡು ಓಡಾಡುತ್ತಿರುವ ಪ್ರಮೋದ್ ಮುತಾಲಿಕ್‌ನಂತಹವರು ಧರ್ಮದ ಹೆಸರಿನಲ್ಲಿ ಜನರ ಮನಸ್ಸನ್ನು ಒಡೆಯುವ, ದೇಶವನ್ನು ವಿಚ್ಛಿದ್ರಗೊಳಿಸುವ ಕಾಯಕದಲ್ಲಿ ತೊಡಗಿದವರಾಗಿದ್ದಾರೆ. ಇವರಿಂದ ಅತಿ ಹೆಚ್ಚು ಧಕ್ಕೆಯಾಗಿರುವುದು ಹಿಂದೂ ಧರ್ಮಕ್ಕೆ. ಇವರು ತಮ್ಮ ವಿಧ್ವಂಸಕ ಕೃತ್ಯಗಳಿಗೆ ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆದುದರಿಂದಲೇ ಇವರಿಗೆ ದ್ವೇಷ ಅಪರಾಧಗಳನ್ನು ತಡೆಯುವ ಕಾನೂನು ಜಾರಿಗೆ ಬರುವುದು ಬೇಡವಾಗಿದೆ.

ವಿಧೇಯಕ ಜಾರಿಗೊಂಡಾಕ್ಷಣ ದ್ವೇಷ ಭಾಷಣ ಮಾಡುವವರೆಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ಭಾವಿಸಿದರೆ ಅದು ನಮ್ಮ ಮೂರ್ಖತನ. ಕಾನೂನುಗಳಿದ್ದರೆ ಸಾಕಾಗುವುದಿಲ್ಲ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿಯೂ ಕಾನೂನು ವ್ಯವಸ್ಥೆಗಿರಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವನೋ ಹೆಸರು, ವಿಳಾಸ ಇಲ್ಲದ ಯುವಕನೊಬ್ಬ ದ್ವೇಷ ಹರಡುವ ಸ್ಟೇಟಸ್ ಹಾಕಿದರೆ ಈ ಕಾನೂನನ್ನು ಬಳಸಿ ಆತನ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಆದರೆ ಇದೇ ಸಂದರ್ಭದಲ್ಲಿ, ಹಿಂದುತ್ವವಾದಿ ನಾಯಕನೆಂದು ಕರೆಸಿಕೊಂಡ ವ್ಯಕ್ತಿ ಸಾರ್ವಜನಿಕ ಮೈದಾನದಲ್ಲಿ ಸಾವಿರಾರು ಜನರನ್ನು ಸೇರಿಸಿ ದ್ವೇಷದ ಕರೆಗಳನ್ನು ನೀಡಿದಾಗ ನಮ್ಮ ವ್ಯವಸ್ಥೆ ಎರಡು ಕಿವಿಗಳನ್ನು ಮುಚ್ಚಿಕೊಂಡಿರುತ್ತದೆೆ. ಆತನ ಮೇಲೆ ಕ್ರಮ ತೆಗೆದುಕೊಂಡರೆ, ಸಮಾಜದ ಶಾಂತಿ ಕೆಡುವ ಅಪಾಯವಿದೆ ಎನ್ನುವ ಕುಂಟು ನೆಪ ತೆಗೆಯುತ್ತದೆ. ಕೋಮುದ್ವೇಷ ರಾಜಕಾರಣಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಕಡಿಮೆಯಿಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಸಂಘಪರಿವಾರ ಜೊತೆಗೆ ಅನೈತಿಕ ಸಂಬಂಧವಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಹೀಗಿರುವಾಗ, ಇಂತಹ ಸಿಬ್ಬಂದಿಯಿಂದ ಕಾನೂನಿನ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಬಹುದೇ ಎನ್ನುವ ಅನುಮಾನ ಉಳಿದೇ ಬಿಡುತ್ತದೆ.

ಸಾಮಾಜಿಕ ಬಹಿಷ್ಕಾರ ವಿರುದ್ಧದ ಕಾನೂನಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಮಾಜಿಕ ಬಹಿಷ್ಕಾರದ ಹಿಂದೆ ಜಾತಿ ವ್ಯವಸ್ಥೆ ಕೆಲಸ ಮಾಡುತ್ತಾ ಬಂದಿದೆ. ದಲಿತರೊಳಗಿನ ಸಣ್ಣ ಪುಟ್ಟ ಸಮುದಾಯಗಳು ಒಬ್ಬರ ವಿರುದ್ಧ ಇನ್ನೊಬ್ಬರು ಬಹಿಷ್ಕಾರ ಘೋಷಿಸಿದರೆ ಈ ನೂತನ ಕಾನೂನು ಹುಲಿಯಂತೆ ಎಗರಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಆದರೆ, ಈ ಬಹಿಷ್ಕಾರ ಅಥವಾ ಅಸ್ಪಶ್ಯ ಆಚರಣೆಯಲ್ಲಿ ಬಲಾಢ್ಯ ಜಾತಿಗಳು ಶಾಮೀಲಾದರೆ ಅವರ ವಿರುದ್ಧ ಎಷ್ಟರಮಟ್ಟಿಗೆ

ಯೋಗವಾಗಬಹುದು? ಪೊಲೀಸರು ಈ ಸಂದರ್ಭದಲ್ಲಿ ಕಾನೂನನ್ನು ಅನುಷ್ಠಾನಗೊಳಿಸಲು ಅದೇ ಆಸಕ್ತಿಯನ್ನು ಪ್ರದರ್ಶಿಸಬಹುದೆ? ಕಾನೂನಿನ ಅನುಷ್ಠಾನದಲ್ಲಿ ಈ ತಾರತಮ್ಯಗಳು ಉಂಟಾದರೆ ಇಂತಹ ವಿಧೇಯಕಗಳು ಇದ್ದೂ ಪ್ರಯೋಜನವೇನು? ಗದ್ದೆಯ ಬೆಳೆಯ ನಡುವೆ ನಿಲ್ಲಿಸಿದ ‘ಬೆರ್ಚಪ್ಪ’ನಂತೆ ಸಣ್ಣ ಪುಟ್ಟ ಕಾಗೆಗಳನ್ನಷ್ಟೇ ಇದು ಓಡಿಸಿ, ಎರಗುವ ರಣಹದ್ದುಗಳ ಮುಂದೆ ಅಸಹಾಯಕವಾಗಬಹುದು. ಹಾಗೆಯೇ ಸೈಬರ್ ಅಪರಾಧಗಳನ್ನು ತಡೆಯಲು ನಮ್ಮ ಪೊಲೀಸ್ ಸಿಬ್ಬಂದಿಯೂ ಈ ತಂತ್ರಜ್ಞಾನಗಳ ಬಗ್ಗೆ ಸುಶಿಕ್ಷಿತರಾಗ ಬೇಕು . ನಮ್ಮ ಪೊಲೀಸ್ ಇಲಾಖೆ ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾಗ ಮಾತ್ರ ಅವುಗಳನ್ನು ತಡೆಯಲು ಸಾಧ್ಯ. ಅವರನ್ನು ಈ ಕಾನೂನನ್ನು ಅನುಷ್ಠಾನಗೊಳಿಸಲು ಪೂರಕವಾಗಿ ಸಿದ್ಧಗೊಳಿಸದೇ ಇದ್ದರೆ, ಕತ್ತಿ ವರಸೆ ಬಾರದವನ ಕೈಗೆ ಹರಿತವಾದ ಕತ್ತಿ ಕೊಟ್ಟು ಯುದ್ಧಕ್ಕೆ ಕಳುಹಿಸಿದಂತಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X