Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗ್ಯಾರಂಟಿ ಯೋಜನೆಗಳ ಜೊತೆಗೆ ಶಾಸಕರು...

ಗ್ಯಾರಂಟಿ ಯೋಜನೆಗಳ ಜೊತೆಗೆ ಶಾಸಕರು ನಿಲ್ಲಲಿ

ವಾರ್ತಾಭಾರತಿವಾರ್ತಾಭಾರತಿ29 Oct 2025 7:11 AM IST
share
ಗ್ಯಾರಂಟಿ ಯೋಜನೆಗಳ ಜೊತೆಗೆ ಶಾಸಕರು ನಿಲ್ಲಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇತ್ತೀಚೆಗೆ ಪುತ್ತೂರಿನ ಶಾಸಕರು ಹಮ್ಮಿಕೊಂಡ ಸಮಾವೇಶವೊಂದರಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತು. ದೀಪಾವಳಿಯ ನಿಮಿತ್ತ ಇಲ್ಲಿನ ಶಾಸಕರು ‘ಅಶೋಕ ಜನ-ಮನ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತಮ್ಮದೇ ಖಾಸಗಿ ಟ್ರಸ್ಟ್‌ನಿಂದ ಈ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜನ ಸೇರಿಸಲು ಅವರು ‘ಉಡುಗೊರೆ’ಯ ಆಮಿಶ ಒಡ್ಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಗಾಗಿ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಮಿಸಿದ್ದರು. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಕಂಡರೂ, ಶಾಸಕರು ತಮ್ಮನ್ನು ತಾವೇ ಕ್ಷೇತ್ರದೊಳಗೆ ಬಿಂಬಿಸಿಕೊಳ್ಳಲು ಪ್ರಾಯೋಜಿಸಿದ ಸಮಾವೇಶವಾಗಿತ್ತು. ಇಷ್ಟಕ್ಕೂ ಶಾಸಕರು ಸೇರಿದ ಜನರಿಗೆ ನೀಡಿದ ಉಡುಗೊರೆಯಾದರೂ ಏನು? ಒಂದು ತಟ್ಟೆ, ಲೋಟ ಮತ್ತು ಒಂದು ಸಣ್ಣ ಟವೆಲ್. ಒಟ್ಟು ನೂರು ರೂಪಾಯಿ ಬೆಳೆಬಾಳಬಹುದು. ಈ ‘ಉಡುಗೊರೆ’ಯನ್ನು ತಮ್ಮದಾಗಿಸಲು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಉಡುಗೊರೆಯನ್ನು ಹಂಚುವಾಗ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ಈ ಸಂದರ್ಭದಲ್ಲಿ ನೂಕು ನುಗ್ಗಲು ಸೃಷ್ಟಿಯಾಗಿ ಹಲವರು ಆಸ್ಪತ್ರೆ ಸೇರಿದರು. ಈ ಅನಾಹುತಕ್ಕೆ ಬೇರೆ ಬೇರೆ ಕಾರಣಗಳನ್ನು ಮುಂದಿಡಲಾಗುತ್ತದೆ. ಉಚಿತ ತಟ್ಟೆ ಲೋಟ ಹಂಚಲು ಜನರನ್ನು ಗಂಟೆಗಟ್ಟಲೆ ಬಿಸಿಲಲ್ಲಿ ಕಾಯುವಂತೆ ಮಾಡಲಾಗಿತ್ತು. ಮುಖ್ಯಮಂತ್ರಿ ಬರುವವರೆಗೂ ಇವರು ಬಿಸಿಲಲ್ಲಿ ಒಣಗಿದರು. ಅವರಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿರಲೇ ಇಲ್ಲ. ಹಲವರು ಬಾಯಾರಿಕೆಯಿಂದ ಕುಸಿದು ಬಿದ್ದಿದ್ದರು. ಶಾಸಕರು ಕೊಡುವ ಉಚಿತ ಉಡುಗೊರೆ ಏನು ಎನ್ನುವುದು ತಿಳಿಯದೆ ಜನರು ಭಾರೀ ನಿರೀಕ್ಷೆಯಿಂದ ಬಂದಿದ್ದರು. ಶಾಸಕರ ವೈಯಕ್ತಿಕ ಪ್ರಚಾರ ಪ್ರಿಯತೆಗೆ ಜನರನ್ನು ಬಲಿಪಶು ಮಾಡಲಾಯಿತು ಎಂದು ಆರೋಪಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಪುತ್ತೂರು ಕ್ಷೇತ್ರದ ಜನರ ಬಡತನದ ಚಿತ್ರವನ್ನು ರಾಜ್ಯದ ಮುಂದೆ ಆ ಸಮಾವೇಶ ತೆರೆದಿಟ್ಟಿತು. ಹಲವು ದಶಕಗಳಿಂದ ಕೋಮು ಶಕ್ತಿಗಳು ನಿಯಂತ್ರಿಸುತ್ತಾ ಬಂದಿರುವ ಪುತ್ತೂರು ತಾಲೂಕಿನ ಜನರ ಸ್ಥಿತಿಗೆ ಶಾಸಕರ ತಟ್ಟೆ ಮತ್ತು ಟವೆಲ್ ಒಂದು ರೂಪಕದಂತಿದೆ. ಇಂತಹ ವ್ಯಕ್ತಿ ಕೇಂದ್ರಿತ ಕಾರ್ಯಕ್ರಮವನ್ನು ಉದ್ಘಾಟಿಸಲು ಮುಖ್ಯಮಂತ್ರಿಯನ್ನು ಕರೆತಂದಿರುವುದು ಇನ್ನೊಂದು ವಿಪರ್ಯಾಸವಾಗಿದೆ.

ರಾಜ್ಯದಲ್ಲಿ ಹಲವು ಶಾಸಕರು ಇಂತಹ ಉಚಿತ ಉಡುಗೊರೆಗಳ ಗಿಮಿಕ್‌ಗಳನ್ನು ಮಾಡಿ ಜನರನ್ನು ಸೇರಿಸುತ್ತಿದ್ದಾರೆ. ಆದರೆ ಇದರಿಂದ ಜನರ ಬದುಕಿನಲ್ಲಿ ಯಾವುದೇ ಆಮೂಲಾಗ್ರ ಬದಲಾವಣೆಗಳಾಗುವುದಿಲ್ಲ. ಜನರಿಗೆ ನೂರು ರೂಪಾಯಿ ತಟ್ಟೆ, ಟವೆಲ್‌ಗಳನ್ನು ಕೊಡುವುದರಿಂದ ಅವರ ಯಾವ ಸಮಸ್ಯೆಗಳೂ ಇತ್ಯರ್ಥವಾಗುವುದಿಲ್ಲ. ಇದರ ಬದಲಿಗೆ ಈ ನಾಡಿನ ಜನರ ಆಮೂಲಾಗ್ರ ಅಭಿವೃದ್ಧಿಗಾಗಿ ತಮ್ಮದೇ ಸರಕಾರ ಹಮ್ಮಿಕೊಂಡಿರುವ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಿದರೆ ಕ್ಷೇತ್ರದ ಜನರ ಬದುಕೂ ಸಹನೀಯವಾಗುತ್ತದೆ. ಸರಕಾರಕ್ಕೂ ಹೆಸರು ಬರುತ್ತದೆ. ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಸಹಾಯವಾಗುತ್ತದೆ. ರಾಜ್ಯದ ಶಾಸಕರು ಹಮ್ಮಿಕೊಳ್ಳುವ ‘ಉಚಿತ ಉಡುಗೊರೆ’ ಕಾರ್ಯಕ್ರಮಗಳಿಂದ ಸರಕಾರಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಕೆಟ್ಟ ಹೆಸರು. ಲಾಭವಾದರೆ ಅದು ಶಾಸಕರಿಗೆ ವೈಯಕ್ತಿಕವಾಗಿ ಮಾತ್ರ. ತಟ್ಟೆ ಉಡುಗೊರೆ ಕೊಟ್ಟರೆ ಸಾಕೆ? ಆ ತಟ್ಟೆಗೆ ಬಡಿಸಲು ಅನ್ನವೂ ಬೇಕು. ಅಂತಹ ಅನ್ನ ಕೊಡುವ ಕೆಲಸವನ್ನು ಸರಕಾರದ ಗ್ಯಾರಂಟಿ ಯೋಜನೆಗಳೇ ರಾಜ್ಯಾದ್ಯಂತ ಅಭೂತಪೂರ್ವವಾಗಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ವಿರೋಧಗಳನ್ನು ಎದುರಿಸಿ ಗ್ಯಾರಂಟಿ ಯೋಜನೆಗಳನ್ನು ಜೀವಂತ ಇಡಲು ಸರಕಾರದೊಳಗೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರದ ಈ ಗ್ಯಾರಂಟಿ ಯೋಜನೆಗಳ ಜೊತೆಗೆ ಬಲವಾಗಿ ನಿಂತರೆ ಅದುವೇ ತನ್ನ ಕ್ಷೇತ್ರದ ಜನರಿಗೆ ಶಾಸಕರು ನೀಡುವ ಬಹುದೊಡ್ಡ ಉಡುಗೊರೆಯಾಗಿರುತ್ತದೆ.

ವಿಪರ್ಯಾಸವೆಂದರೆ ಇಂದು ಕಾಂಗ್ರೆಸ್‌ನೊಳಗಿರುವ ಹಲವು ನಾಯಕರಿಗೆ ಈ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಾಗಿಲ್ಲ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಆರ್. ವಿ. ದೇಶಪಾಂಡೆ ಅವರು ‘‘ನಾನು ಮುಖ್ಯಮಂತ್ರಿಯಾಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿರಲಿಲ್ಲ’’ ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಅವರು ಈ ನಾಡಿನ ಮುಖ್ಯಮಂತ್ರಿಯಾಗಲು ಯಾಕೆ ಅರ್ಹರಲ್ಲ ಎನ್ನುವುದನ್ನು ಅವರ ಮಾತೇ ಹೇಳಿ ಬಿಟ್ಟಿತು. ವಿರೋಧ ಪಕ್ಷಗಳಿಗಂತೂ ಗ್ಯಾರಂಟಿ ಯೋಜನೆ ವಿಫಲವಾಗಬೇಕಾಗಿದೆ. ಯಾಕೆಂದರೆ, ಗ್ಯಾರಂಟಿ ಯೋಜನೆಗಳು ಐದು ವರ್ಷಗಳ ಕಾಲ ಯಶಸ್ವಿಯಾಗಿ ಜಾರಿಗೊಂಡರೆ ಅದು ಬಿಜೆಪಿಯ ಹಿಂದಿನ ಆಡಳಿತವನ್ನು ಜನರು ಪ್ರಶ್ನಿಸುವಂತೆ ಮಾಡುತ್ತದೆ. ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗುವುದು ಬಿಜೆಪಿಗೆ ಯಾಕೆ ಸಾಧ್ಯವಾಗುವುದಿಲ್ಲ? ಎನ್ನುವ ಪ್ರಶ್ನೆ ಏಳುತ್ತದೆ. ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರಿಗೂ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಾಗಿಲ್ಲ ಯಾಕೆಂದರೆ ದೊಡ್ಡ ಮಟ್ಟದ ಖಜಾನೆಯ ದುಡ್ಡು ಗ್ಯಾರಂಟಿ ಯೋಜನೆಗಳಿಗೆ ವ್ಯಯವಾಗುತ್ತಿರುವುದರಿಂದ, ವೈಯಕ್ತಿಕವಾಗಿ ದೋಚುವುದಕ್ಕೆ ಅವರಿಗೆ ಹಣ ಕೈಗೆ ಸಿಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಹೆಚ್ಚಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸಿದ್ದರಾಮಯ್ಯ ಅವರ ಅಭಿಮಾನಿಗಳಾಗಿ ಬದಲಾಗಿದ್ದಾರೆ. ಗ್ಯಾರಂಟಿ ಯೋಜನೆಗಳು ವಿಫಲವಾದರೆ ಮುಖ್ಯಮಂತ್ರಿಯ ವರ್ಚಸ್ಸೂ ಇಳಿಮುಖವಾಗುತ್ತದೆ. ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಅವರ ಜೊತೆಗೆ ಒಳಗೊಳಗೆ ಸ್ಪರ್ಧೆಗಿಳಿದಿರುವ ಹಲವು ನಾಯಕರಿಗೆ ಈ ಕಾರಣಕ್ಕಾಗಿ ಗ್ಯಾರಂಟಿ ಯೋಜನೆ ವಿಫಲವಾಗಬೇಕಾಗಿದೆ. ಹಾಗೆಯೇ ಸಣ್ಣ ಪುಟ್ಟ ಉಡುಗೊರೆಗಳನ್ನು ಕ್ಷೇತ್ರದ ಮತದಾರರಿಗೆ ನೀಡಿ ಅವರನ್ನು ಒಲಿಸಲು ನೋಡುವ ಶಾಸಕರಿಗೂ ಈ ಗ್ಯಾರಂಟಿ ಯೋಜನೆಗಳು ನುಂಗಲಾರದ ತುತ್ತಾಗಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಇತ್ತೀಚಿನ ದಿನಗಳಲ್ಲಿ ಇಂತಹ ಅಲ್ಪ ಉಡುಗೊರೆಯ ಭಿಕ್ಷೆಗಾಗಿ ಕೈ ಚಾಚುವುದನ್ನು ನಿಲ್ಲಿಸಿದ್ದಾರೆ. ಇದು ಸ್ವಯಂಘೋಷಿತ ‘ದಾನಶೂರ ಕರ್ಣ’ರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ.

ಗ್ಯಾರಂಟಿ ಯೋಜನೆಗಳೇ ಈ ನಾಡಿನ ಜನತೆಗೆ ಸರಕಾರ ನೀಡಿರುವ ನಿಜವಾದ ದೀಪಾವಳಿ ಉಡುಗೊರೆ. ಈ ಉಡುಗೊರೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ, ಅದರ ಬಗ್ಗೆ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲ ಶಾಸಕರು ಸ್ವಯಂಪ್ರೇರಿತರಾಗಿ ಮಾಡಬೇಕು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಿ, ಅದರ ಸಾಧಕ ಬಾಧಕಗಳನ್ನು ಎಲ್ಲ ಶಾಸಕರು ಅರಿತು ಸರಕಾರಕ್ಕೆ ವರದಿಯನ್ನು ಒಪ್ಪಿಸಬೇಕು. ಇಂತಹ ದೂರದೃಷ್ಟಿಯುಳ್ಳ ಕಾರ್ಯಕ್ರಮಗಳಷ್ಟೇ ಶಾಸಕರನ್ನು, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸೀತು. ಉಚಿತ ತಟ್ಟೆ ಲೋಟಗಳಿಂದ ಜನರನ್ನು ಯಾಮಾರಿಸುವ ಕಾಲ ಮುಗಿದಿದೆ ಎನ್ನುವುದನ್ನು ಎಲ್ಲ ಶಾಸಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X