Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗ್ಯಾರಂಟಿ ಯೋಜನೆಗಳ ವಿರೋಧಿಗಳನ್ನು...

ಗ್ಯಾರಂಟಿ ಯೋಜನೆಗಳ ವಿರೋಧಿಗಳನ್ನು ವಿರೋಧಿಸೋಣ

ವಾರ್ತಾಭಾರತಿವಾರ್ತಾಭಾರತಿ15 Jan 2024 8:57 AM IST
share
ಗ್ಯಾರಂಟಿ ಯೋಜನೆಗಳ ವಿರೋಧಿಗಳನ್ನು ವಿರೋಧಿಸೋಣ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸ್ವಾಮಿ ವಿವೇಕಾನಂದರ ಹುಟ್ಟುದಿನದಂದು ‘ಯುವ ನಿಧಿ’ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ರಾಜ್ಯ ಸರಕಾರ ‘ಯುವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿತು. ಬೇರೆ ಬೇರೆ ಕಾರಣಗಳಿಗಾಗಿ ಒತ್ತಡ, ಖಿನ್ನತೆಗೆ ಬಲಿಯಾಗುತ್ತಾ, ಭವಿಷ್ಯದ ಬಗ್ಗೆ ಅಭದ್ರತೆಯನ್ನು ಅನುಭವಿಸುತ್ತಿರುವ ಯುವಕರ ತಲ್ಲಣಗಳಿಗೆ ಸ್ಪಂದಿಸಿದ ಮೊತ್ತ ಮೊದಲ ರಾಜ್ಯವಾಗಿ ಕರ್ನಾಟಕ ಈ ಮೂಲಕ ಗುರುತಿಸಿಕೊಂಡಿದೆ. ಹೆಚ್ಚುತ್ತಿರುವ ನಿರುದ್ಯೋಗದಿಂದ ಯುವಕರು ದಾರಿತಪ್ಪು ವ ಸಂದರ್ಭದಲ್ಲಿ ಅವರಿಗೆ ಭವಿಷ್ಯದೆಡೆಗೆ ಮುನ್ನಡೆಸುವ ಸಣ್ಣದೊಂದು ಊರುಗೋಲಾಗಿ ಈ ಯೋಜನೆ ನೆರವಾಗುವುದರಲ್ಲಿ ಸಂಶಯವಿಲ್ಲ. ಹತ್ತು ಹಲವು ಮಿತಿಗಳು ಈ ಯೋಜನೆಗಳಿಗೆ ಇವೆಯಾದರೂ, ಕನಿಷ್ಠ ವಿದ್ಯಾವಂತ ಯುವಕರ ಸಂಕಟಗಳಿಗೆ ಸ್ಪಂದಿಸುವ ಮೊತ್ತ ಮೊದಲ ಪ್ರಯತ್ನ ಇದಾಗಿದೆ ಎನ್ನುವ ಕಾರಣಕ್ಕಾಗಿ ಸರಕಾರವನ್ನು ಅಭಿನಂದಿಸಲೇ ಬೇಕು. ಇದು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳುತ್ತದೆ ಎನ್ನುವುದರ ಆಧಾರದ ಮೇಲೆ ಈ ಯೋಜನೆಯ ಸೋಲುಗೆಲುವು ನಿಂತಿದೆ. ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ಸರಕಾರ ತಾನು ಚುನಾವಣೆಯ ಸಂದರ್ಭದಲ್ಲಿ ನೀಡಿದ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಂತಾಗಿದೆ. ಅಧಿಕಾರಕ್ಕೇರಿದ ಒಂದೇ ವರ್ಷದೊಳಗೆ ಇದನ್ನು ಜಾರಿಗೊಳಿಸಿರುವುದು ಸಣ್ಣ ವಿಷಯವಲ್ಲ. ಇನ್ನು ಸರಕಾರದ ಮುಂದಿರುವುದು ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವುದು. ಜಾರಿಗೆ ತಂದಷ್ಟು ಸುಲಭದ ಕೆಲಸ ಇದಲ್ಲ.

ಕರ್ನಾಟಕಕ್ಕೆ ಅಕ್ಕಿ ನೀಡಲು ನಿರಾಕರಿಸಿದಾಗಲೂ ಕೇಂದ್ರವನ್ನು ನೆಪ ಮಾಡಿ ತನ್ನ ‘ಅನ್ನ ಭಾಗ್ಯ’ ಯೋಜನೆಯಿಂದ ರಾಜ್ಯ ಸರಕಾರ ಹಿಂದೆ ಸರಿಯಲಿಲ್ಲ. ರಾಜ್ಯದ ಜನರ ಅನ್ನದ ಜೊತೆಗೆ ನಿಲ್ಲ ಬೇಕಾಗಿದ್ದ ಬಿಜೆಪಿ ಸಂಸದರು ಈ ಸಂದರ್ಭದಲ್ಲಿ ಅಕ್ಕಿ ನೀಡಲು ಹಿಂದೇಟು ಹಾಕಿದ ಕೇಂದ್ರ ಸರಕಾರದ ಪರವಾಗಿ ನಿಂತು, ರಾಜ್ಯದ ಗ್ಯಾರಂಟಿಗಳನ್ನು ಟೀಕಿಸುವ ನೈತಿಕ ಹಕ್ಕನ್ನೇ ಕಳೆದುಕೊಂಡರು. ಗ್ಯಾರಂಟಿ ಯೋಜನೆಗಳು ಜಾರಿಗೊಂಡರೆ ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧಪಕ್ಷಗಳು ಹಾಹಾಕಾರ ಎಬ್ಬಿಸುತ್ತಿದ್ದಂತೆಯೇ ಸರಕಾರ ಒಂದೊಂದೇ ಯೋಜನೆಗಳನ್ನು ಜಾರಿಗೆ ತರತೊಡಗಿತು. ‘ಶಕ್ತಿ ಯೋಜನೆ’ ಜಾರಿಗೊಳಿಸುತ್ತಿದ್ದಂತೆಯೇ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಬಿಜೆಪಿ ಹುಯಿಲೆಬ್ಬಿಸಿತು. ಸಣ್ಣ ಪುಟ್ಟ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು, ‘ಶಕ್ತಿ ಯೋಜನೆ’ಯನ್ನು ನಿಲ್ಲಿಸಿ ಎಂದು ಒತ್ತಾಯಿಸಿತು. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ಈ ಯೋಜನೆ ಯಶಸ್ವಿಯಾಗಿದೆ. ಗೃಹ ಲಕ್ಷ್ಮಿ ಯೋಜನೆ ಮಹಿಳೆಯರನ್ನು ಮನೆಯ ಒಡೆಯರನ್ನಾಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಮೊತ್ತ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಮಹಿಳೆಯರ ಪಾಸ್ಬುಕ್ನಲ್ಲಿ ದುಡ್ಡು ಬೀಳಲಾರಂಭಿಸಿದೆ. ಈ ಕಾರಣಕ್ಕಾಗಿ ಅವರು ಬ್ಯಾಂಕ್ನಲ್ಲಿ ವ್ಯವಹರಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಪುರುಷರ ಮುಂದೆ ಅವರ ಅಸ್ತಿತ್ವವೂ ಗುರುತಿಸಲ್ಪಡುವಂತಾಗಿದೆ. ಶಕ್ತಿ ಯೋಜನೆ ಮತ್ತು ಗೃಹ ಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗೃಹ ಜ್ಯೋತಿ ಯೋಜನೆಯೂ ಮನೆ ಮನೆಯಲ್ಲಿ ಉಳಿತಾಯವನ್ನು ಹೆಚ್ಚಿಸುತ್ತಿವೆ. ಕೊರೋನ ದಿನಗಳಲ್ಲಿ ಸರಕಾರದ ತಪ್ಪು ನೀತಿಗಳಿಂದಾಗಿ ಆರ್ಥಿಕವಾಗಿ ಸಂಕಟಗಳಿಗೆ ಸಿಲುಕಿದ್ದ ಜನರಿಗೆ ಪಾವತ್ತಿಸುತ್ತಿರುವ ದಂಡ ಪರಿಹಾರವಾಗಿದೆ ಈ ಯೋಜನೆಗಳು.

ಮೇಲಿನೆಲ್ಲ ಯೋಜನೆಗಳಿಗಿಂತ ಸಂಕೀರ್ಣವಾದದ್ದು ಯುವ ನಿಧಿ ಯೋಜನೆ. ವರ್ಷದಿಂದ ವರ್ಷಕ್ಕೆ ಉದ್ಯೋಗಗಳು ಇಳಿಮುಖವಾಗುತ್ತಾ, ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗುತ್ತಾ ಹೋಗುತ್ತಿವೆ. ಯುವಕರ ಕೈಯಲ್ಲಿ ಕೆಲಸ ಇಲ್ಲದೇ ಇರುವಂತೆ ಮಾಡುವುದು ಕೂಡ ಒಂದು ರಾಜಕೀಯ ಅಜೆಂಡಾ ಆಗಿ ಪರಿವರ್ತನೆಗೊಂಡಿದೆ. ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಬೇಕಾದರೆ ನಿರುದ್ಯೋಗ ಜಾರಿಯಲ್ಲಿರಬೇಕು ಎಂದು ರಾಜಕೀಯ ನಾಯಕರು ಬಲವಾಗಿ ನಂಬಿದ್ದಾರೆ. ನಿರುದ್ಯೋಗದಿಂದ ದಿಕ್ಕೆಟ್ಟ ಯುವಕರ ಮನಸ್ಸನ್ನು ಅರಾಜಕಗೊಳಿಸಿ ಕೋಮುಗಲಭೆಗಳಿಗೆ, ದೊಂಬಿಗಳಿಗೆ ಬಳಸುವಲ್ಲಿ ರಾಜಕೀಯ ಶಕ್ತಿಗಳು ಯಶಸ್ವಿಯಾಗಿವೆ. ಕ್ರಿಮಿನಲ್ ಮಾರ್ಗವನ್ನು ಹಿಡಿದ ಯುವಕರಿಗೆ ರಾಜಕೀಯ ಪಕ್ಷಗಳು ಧರ್ಮ ಸಂಸ್ಕೃತಿಯ ಐಡೆಂಟಿಟಿಯನ್ನು ರಕ್ಷಣೆಯಾಗಿ ನೀಡುತ್ತಿವೆ. ಭಾವನೆಗಳ ಜೊತೆಗೆ ಚೆಲ್ಲಾಟವಾಡುವ ರಾಜಕೀಯದ ಕಾಲಾಳುಗಳಾಗಿ ತಮ್ಮ ಭವಿಷ್ಯವನ್ನು ಶಾಶ್ವತವಾಗಿ ಕತ್ತಲಿಗೆ ತಳ್ಳುತ್ತಿದ್ದಾರೆ. ದೇಶದ ಆಸ್ತಿಯಾಗಬೇಕಾಗಿದ್ದ ಯುವಶಕ್ತ್ತಿ ದೇಶದ ವಿನಾಶಕ್ಕೆ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇವರನ್ನು ದುರ್ಬಳಕೆ ಮಾಡುವ ಶಕ್ತಿಗಳಿಂದ ರಕ್ಷಿಸಲು ‘ಯುವ ನಿಧಿ’ ಸಹಾಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಆದರೆ ಯುವನಿಧಿ ಯಶಸ್ವಿಯಾಗುವುದು ಸುಲಭವೇನೂ ಅಲ್ಲ. ಉಳಿದೆಲ್ಲ ಗ್ಯಾರಂಟಿಗಳಿಗೆ ಹೋಲಿಸಿದರೆ ಈ ಯೋಜನೆ ದುರ್ಬಳಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಮುಖ್ಯವಾಗಿ ಯಾರು ನಿರುದ್ಯೋಗಿಗಳು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸುವುದರಲ್ಲಿಯೇ ಗೊಂದಲಗಳಿವೆ. ಅರ್ಹ ಯುವಕರು ತಮ್ಮ ಮುಂದಿನ ಕಲಿಕೆಗೆ ಈ ನಿಧಿಯನ್ನು ಪೂರಕವಾಗಿ ಬಳಸಿಕೊಂಡರೆ ಯುವನಿಧಿ ಯುವಕರ ಭವಿಷ್ಯಕ್ಕೆ ಅಮೃತಜಲ ಹರಿಸಲಿದೆ. ಆದರೆ ನಕಲಿ ಪದವೀಧರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಆದುದರಿಂದ, ಯುವನಿಧಿಯ ಅನುಷ್ಠಾನ ಸಂದರ್ಭದಲ್ಲಿ ಹೆಚ್ಚಿನ ಕಣ್ಗಾವಲು ಅತ್ಯಗತ್ಯವಿದೆ. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ಈ ಗ್ಯಾರಂಟಿಗಳು ಜಾರಿಯಲ್ಲಿರುತ್ತದೆ ಎಂದು ವಿರೋಧಪಕ್ಷಗಳು ಭವಿಷ್ಯ ನುಡಿಯುತ್ತಿವೆ. ಹಾಗೆಯೇ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ‘ರಾಜ್ಯ ದಿವಾಳಿಯಾಗುತ್ತಿದೆ. ಗ್ಯಾರಂಟಿಯನ್ನು ನಿಲ್ಲಿಸಿ’ ಎನ್ನುವ ಆಂದೋಲನವನ್ನು ವಿರೋಧ ಪಕ್ಷ ನಾಯಕರು ಆರಂಭಿಸಿದ್ದಾರೆ. ಗ್ಯಾರಂಟಿಗಳು ಜಾರಿಗೊಂಡು ಈಗಷ್ಟೇ ಜನರ ಕೈಗೆ ಅದರ ಲಾಭ ತಲುಪುತ್ತಿದೆ. ಅಷ್ಟರಲ್ಲೇ ಅದನ್ನು ನಿಲ್ಲಿಸಿ ಎಂದು ಒತ್ತಾಯಿಸುವುದು ಜನವಿರೋಧಿ ನಿಲುವಾಗುತ್ತದೆ.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎನ್ನುವುದಕ್ಕಿಂತ, ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎನ್ನುವುದು ವಿರೋಧ ಪಕ್ಷಗಳ ಘೋಷಣೆಯಾಗಬೇಕು. ಈ ಹಿಂದಿನ ಸರಕಾರದ ಅವಧಿಯಲ್ಲೂ ರಾಜ್ಯದ ಖಜಾನೆ ದಿವಾಳಿಯಾಗಿತ್ತು. ಆಗ ಸರಕಾರ ಜನರಿಗೆ ಯಾವುದೇ ‘ಗ್ಯಾರಂಟಿ ಯೋಜನೆ’ಗಳನ್ನು ಘೋಷಿಸಿರಲಿಲ್ಲ. ರಾಜ್ಯ ದಿವಾಳಿಯಾಗುತ್ತದೆ ಎಂದು ತಮಗೆ ಸಿಗುವ ಯಾವುದೇ ಸವಲತ್ತುಗಳನ್ನು ರಾಜಕಾರಣಿಗಳು ನಿರಾಕರಿಸಿದ ಉದಾಹರಣೆಗಳಿಲ್ಲ. ರಾಜ್ಯದ ಮಠ ಮಾನ್ಯಗಳಿಗೆ ಕೋಟಿ ಕೋಟಿ ಅನುದಾನಗಳನ್ನು ನೀಡಿದಾಗ ಈ ನಾಯಕರು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಆತಂಕ ಪಟ್ಟಿರಲಿಲ್ಲ. ಆರೆಸ್ಸೆಸ್ನ ಸಂಘ ಸಂಸ್ಥೆಗಳಿಗೆ ಕೋಟ್ಯಂತರ ಬೆಲೆಯ ಭೂಮಿಯನ್ನು ಉಚಿತವಾಗಿ ಕೊಟ್ಟಾಗಲೂ ಈ ನಾಡಿನ ಅಭಿವೃದ್ಧಿ ಕಾರ್ಯಗಳು ನೆನಪಿಗೆ ಬರಲಿಲ್ಲ. ಅಯೋಧ್ಯೆ, ರಾಮಮಂದಿರ ಯೋಜನೆಗಳಿಗೆ ರಾಜ್ಯದ ಹಣವನ್ನು ಬಿಡುಗಡೆ ಮಾಡಿದಾಗಲೂ ಖಜಾನೆ ಖಾಲಿಯಾಗುತ್ತದೆ ಎನ್ನುವ ಭಯ ಇವರಿಗಿರಲಿಲ್ಲ. ಅಥವಾ ಶೇ. ೪೦ ಭ್ರಷ್ಟಾಚಾರ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದಾಗಲೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಇವರಿಗೆ ಯೋಚನೆಯಿರಲಿಲ್ಲ. ಇದೀಗ ಗ್ಯಾರಂಟಿ ಯೋಜನೆಗಳ ಮೂಲಕ ಜನರ ತೆರಿಗೆಯ ಹಣವನ್ನು ಜನರ ಏಳಿಗೆಗಾಗಿ ಬಳಸುವಾಗ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಹಾಹಾಕಾರ ಎಬ್ಬಿಸುತ್ತಿದ್ದಾರೆ. ಅಭಿವೃದ್ಧಿಯ ಮೂಲಕ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗೆ ಪುನಃಶ್ಚೇತನ ನೀಡಬೇಕು. ತಳಸ್ತರದ ಜನರು ಆರ್ಥಿಕವಾಗಿ ಎದ್ದು ನಿಂತಲ್ಲಿ, ನಾಡು ಸಹಜವಾಗಿಯೇ ಅಭಿವೃದ್ಧಿಯಕಡೆಗೆ ಮುನ್ನಡೆಯುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಎದುರಾಗುತ್ತದೆಯಾದರೆ, ಆ ಕಾರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಸಲಹೆ ನೀಡುವುದಲ್ಲ. ಬದಲಿಗೆ ಇಂತಹ ಮೂಲಗಳಿಂದ ಹಣವನ್ನು ಹೊಂದಿಸಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿ ಎಂದು ಸರಕಾರಕ್ಕೆ ಸಲಹೆ ನೀಡಬೇಕು. ಜನರ ತೆರಿಗೆಯನ್ನು ಜನರಿಗೆ ಕೊಡಬೇಡಿ, ರಾಜಕಾರಣಿಗಳಿಗೆ ಲೂಟಿ ಮಾಡಲು ಅವಕಾಶ ಮಾಡಿ ಕೊಡಿ ಎಂದು ಸರಕಾರವನ್ನು ಒತ್ತಾಯಿಸುವ ವಿರೋಧ ಪಕ್ಷಗಳು ಪ್ರಜಾಸತ್ತೆಯ ವಿರೋಧಿಯೆಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನಾಯಕರಿಗೆ ಇರಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X