Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬಡ್ಡಿ ಭಯೋತ್ಪಾದಕರನ್ನು ಬಗ್ಗು ಬಡಿದೀತೆ...

ಬಡ್ಡಿ ಭಯೋತ್ಪಾದಕರನ್ನು ಬಗ್ಗು ಬಡಿದೀತೆ ಸುಗ್ರೀವಾಜ್ಞೆ

ವಾರ್ತಾಭಾರತಿವಾರ್ತಾಭಾರತಿ27 Jan 2025 9:27 AM IST
share
ಬಡ್ಡಿ ಭಯೋತ್ಪಾದಕರನ್ನು ಬಗ್ಗು ಬಡಿದೀತೆ ಸುಗ್ರೀವಾಜ್ಞೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳು ಒಂದೊಂದಾಗಿ ಬಹಿರಂಗ ವಾಗುತ್ತಿರುವಂತೆಯೇ ಸರಕಾರ ಎಚ್ಚೆತ್ತುಕೊಂಡಿದೆ. ಸಾಲಗಾರರ ರಕ್ಷಣೆಗೆ ‘ಸುಗ್ರೀವಾಜ್ಞೆ’ ಮೂಲಕ ಕಾನೂನು ಜಾರಿಗೊಳಿಸುವ ಇಂಗಿತವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ. ಬಲವಂತದಿಂದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಅವಕಾಶ, ನೋಂದಣಿಯಾಗದ ಲೇವಾದೇವಿಗಾರರಿಗೆ ನಿಷೇಧ, ದೂರು ಸಲ್ಲಿಸಲು ಮುಕ್ತ ಅವಕಾಶ, ಸಂಜೆ 5 ಗಂಟೆಯ ಬಳಿಕ ಸಾಲ ವಸೂಲಾತಿಗೆ ನಿಷೇಧ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ, ವಸೂಲಿಗೆ ತೆರಳುವ ಖಾಸಗಿ ವ್ಯಕ್ತಿಗಳು, ರೌಡಿಶೀಟರ್‌ಗಳ ವಿರುದ್ಧ ಕ್ರಮ, ಅಧಿಕ ಬಡ್ಡಿ ವಸೂಲಿಗೆ ತಡೆ, ಸಾಲದ ಮಿತಿ ನಿರ್ಧಾರ ಇತ್ಯಾದಿಗಳನ್ನು ಕಾನೂನಿನೊಳಗೆ ಒಳಪಡಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಆದರೆ ಈ ಕಾನೂನು ಯಶಸ್ವಿಯಾಗಿ ಜಾರಿಯಾಗಲಿದೆಯೆ? ಮೈಕ್ರೋ ಫೈನಾನ್ಸ್‌ನ ಹಿಂದಿರುವ ಶಕ್ತಿಗಳು ಅದಕ್ಕೆ ಅವಕಾಶ ನೀಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಲೇವಾದೇವಿದಾರರ ದೌರ್ಜನ್ಯ, ಗೂಂಡಾಗಿರಿಗಳಿಂದ ಆತ್ಮಹತ್ಯೆಗಳು ನಡೆಯುತ್ತಿರುವುದು ರಾಜ್ಯಕ್ಕೆ ಹೊಸದೇನೂ ಅಲ್ಲ. ಈ ಹಿಂದೆಯೂ ಇದರ ವಿರುದ್ಧ ದೂರುಗಳು, ಆಕ್ರೋಶಗಳು ಕೇಳಿ ಬಂದಾಗ ಸರಕಾರ ‘ಕಠಿಣ ಕ್ರಮ’ದ ಭರವಸೆಯನ್ನು ನೀಡಿತ್ತು. ಮೈಕ್ರೋಫೈನಾನ್ಸ್‌ನ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅವಕಾಶವಿಲ್ಲ. ರಾಜ್ಯದಲ್ಲಿ ಆರ್‌ಬಿಐ ನಿಯಮಗಳನ್ನು ಈ ಫೈನಾನ್ಸ್ ಗಳು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆಯಾದರೂ, ಕೇಂದ್ರ ಸರಕಾರ ಮೌನವಾಗಿ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ಆರ್‌ಬಿಐ ಯಾಕೆ ಇವುಗಳನ್ನು ನಿಯಂತ್ರಿಸಲು ವಿಫಲವಾಗಿದೆೆ ಎನ್ನುವ ಪ್ರಶ್ನೆಗೂ ಉತ್ತರವಿಲ್ಲ. ಹಣ-ಗೂಂಡಾಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧದ ಅರಿವಿರುವವರಿಗೆ ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇನೂ ಇಲ್ಲ. ಮೈಕ್ರೋಫೈನಾನ್ಸ್ ಈ ಮೂರು ಪಿಲ್ಲರ್‌ಗಳ ಮೇಲೆ ನಿಂತಿದೆ. ಆದುದರಿಂದಲೇ ಈ ಬಡ್ಡಿ ಮಾಫಿಯಾ ವಿರುದ್ಧ ಹುಸಿ ಹೋರಾಟವನ್ನಷ್ಟೇ ಸರಕಾರ ನಡೆಸುತ್ತಾ ಬರುತ್ತಿದೆ. ಪೂರ್ಣ ಪ್ರಮಾಣದಲ್ಲಿ ಅದನ್ನು ಮಟ್ಟ ಹಾಕಲು ಸರಕಾರಕ್ಕೂ ಸಾಧ್ಯವಿಲ್ಲ ಎನ್ನುವ ಸ್ಥಿತಿಯಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಈ ಫೈನಾನ್ಸ್‌ಗಳ ಸಾಲವನ್ನೇ ನೆಚ್ಚಿಕೊಂಡು ಕೃಷಿ, ಉದ್ದಿಮೆಗಳನ್ನು ನಡೆಸುವವರಿದ್ದಾರೆ. ಶೋಷಣೆಗೊಳಗಾದರೂ, ಅದರ ವಿರುದ್ಧ ದೂರು ಸಲ್ಲಿಸುವ ಸ್ಥಿತಿಯಲ್ಲಿ ಅವರಿರುವುದಿಲ್ಲ. ಯಾಕೆಂದರೆ, ನಾಳೆಗೆ ತುರ್ತು ಹಣ ಬೇಕಾದಲ್ಲಿ ಅವರಿಗೆ ಈ ಫೈನಾನ್ಸ್ ಗಳಲ್ಲದೇ ಬೇರೆ ಮೂಲಗಳೇ ಇಲ್ಲ.

ನೋಟು ನಿಷೇಧ ಮತ್ತು ಲಾಕ್‌ಡೌನ್‌ಗಳ ಬಳಿಕ ಇಡೀ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ನೂರಾರು ಕಿರು ಉದ್ದಿಮೆಗಳು ಮುಚ್ಚಿ ಹೋದವು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ಭಾರೀ ಹಿನ್ನಡೆಯಾಯಿತು. ನೋಟು ನಿಷೇಧದ ಪರಿಣಾಮವಾಗಿ ಜನರ ಕೈ ಖಾಲಿಯಾದರೆ, ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಮಧ್ಯಮ ವರ್ಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿತು. ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಬಡವರು, ಬಡ್ಡಿಗೆ ಸಾಲ ಪಡೆದು ತಮ್ಮ ಮಕ್ಕಳನ್ನು ಭೂಮಾಲಕರ ತೋಟದ ಕೆಲಸಕ್ಕೆ ಹಚ್ಚಿದರು. ಲಾಕ್‌ಡೌನ್‌ನ ಸಂದರ್ಭದಲ್ಲಿ ಮಾಡಿದ ಬಡ್ಡಿ ಸಾಲದ ಸುಳಿಯಿಂದ ಇಂದಿಗೂ ಹೊರಬರಲಾಗದೆ ಒದ್ದಾಡುತ್ತಿರುವ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ನೂರಾರಿವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಕೂಡ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆೆ. ಬೀಜ, ಗೊಬ್ಬರ ಕೊಳ್ಳಲು ಹಣ ಹೊಂದಾಣಿಕೆಯಾಗದೇ ಇದ್ದರೆ, ಫೈನಾನ್ಸ್ ಗಳ ಮೊರೆ ಹೋಗುವುದು ರೈತರಿಗೆ ಅನಿವಾರ್ಯವಾಗುತ್ತದೆ. ಬ್ಯಾಂಕ್‌ಗಳಲ್ಲಿ ಹಣ ಪಡೆಯಬೇಕಾದರೆ ನೂರಾರು ನಿಯಮಗಳು, ಕಟ್ಟಪಾಡುಗಳಿವೆ. ಆ ನಿಯಮ, ಕಟ್ಟುಪಾಡುಗಳ ಹಿಂದೆ ಅಲೆದರೆ, ಮಳೆಗಾಲ ಮುಗಿದು ಹೋಗುತ್ತದೆ. ಆದುದರಿಂದ ರೈತರಿಗೆ ಫೈನಾನ್ಸ್‌ಗಳನ್ನು, ಸ್ಥಳೀಯ ಲೇವಾದೇವಿ, ಬಡ್ಡಿ ವ್ಯಾಪಾರಿಗಳನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅವರ ತುರ್ತು ಅಗತ್ಯದ ಸಂದರ್ಭದಲ್ಲಿ ಹಣ ಒದಗಿಸಲು ನಮ್ಮ ಸಹಕಾರಿ ಬ್ಯಾಂಕ್‌ಗಳು ಎಲ್ಲಿಯವರೆಗೆ ವಿಫಲವಾಗುತ್ತದೆಯೋ ಅಲ್ಲಿಯವರೆಗೆ ನಮ್ಮ ರೈತರು, ಸಣ್ಣ ಉದ್ದಿಮೆದಾರರು, ಕಿರು ವ್ಯಾಪಾರಿಗಳು ಫೈನಾನ್ಸ್ಗಳನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಸರಕಾರ ಮೊತ್ತ ಮೊದಲಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು, ಭಾರೀ ಬಡ್ಡಿ, ಚಕ್ರಬಡ್ಡಿಗಳು ಬೀಳುತ್ತವೆ ಎಂದು ಗೊತ್ತಿದ್ದರೂ ಜನಸಾಮಾನ್ಯರು ಈ ಫೈನಾನ್ಸ್‌ಗಳ ಬಲೆಗೆ ಯಾಕೆ ಬೀಳುತ್ತಾರೆ ಎನ್ನುವುದನ್ನು. ಅವರ ಅಸಹಾಯಕತೆಯ ಹಿಂದಿರುವವರು ಯಾರು? ಫೈನಾನ್ಸ್‌ಗಳನ್ನೆಲ್ಲ ಮುಚ್ಚಿ ಬಿಟ್ಟರೆ ರೈತರು, ಕಾರ್ಮಿಕರ ಸಮಸ್ಯೆ ಪರಿಹಾರವಾಗುತ್ತದೆಯೆ? ಬ್ಯಾಂಕ್‌ಗಳು ಸುಲಭದಲ್ಲಿ ಸಾಲಗಳನ್ನು ನೀಡದೇ ಇದ್ದಾಗ, ಬಂಡವಾಳಕ್ಕಾಗಿ ಇವರು ಯಾರನ್ನು ಆಶ್ರಯಿಸಬೇಕು? ಮೊತ್ತ ಮೊದಲಾಗಿ ಮಧ್ಯಮ ವರ್ಗದ ಜನರು ಯಾವುದೇ ಉದ್ದಿಮೆ ಅಥವಾ ಕೃಷಿಗಾಗಿ ಫೈನಾನ್ಸ್‌ಗಳನ್ನು ನೆಚ್ಚಿಕೊಳ್ಳದ ಹಾಗೆ ಅವರಿಗೆ ಆರ್ಥಿಕ ನೆರವುಗಳನ್ನು ನೀಡುವ ಕೆಲಸ ತುರ್ತಾಗಿ ಆಗಬೇಕು. ಆ ಆರ್ಥಿಕ ನೆರವುಗಳನ್ನು ನೀಡಲು ನಮ್ಮ ಬ್ಯಾಂಕ್‌ಗಳು, ಸಹಕಾರಿ ಸಂಘಗಳು, ಸರಕಾರದ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳು ಯಶಸ್ವಿಯಾದಾಗ ಜನಸಾಮಾನ್ಯರು ಫೈನಾನ್ಸ್‌ಗಳನ್ನು ನೆಚ್ಚಿಕೊಳ್ಳುವುದು ಕಡಿಮೆಯಾಗುತ್ತದೆ. ಹಾಗೆಯೇ, ಸಾಲ ನೀಡಿದ ಬಳಿಕ ಅದರ ವಸೂಲಾತಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲದ ವಿಷಯ. ಯಾಕೆಂದರೆ, ನಮ್ಮ ಸಹಕಾರಿ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡ ರೈತರ ಸಾಲ ವಸೂಲಾತಿಯಲ್ಲಿ ಯಾವ ದಾಕ್ಷಿಣ್ಯವನ್ನ್ನೂ ಮಾಡುವುದಿಲ್ಲ. ರಾತ್ರೋರಾತ್ರಿ ಮನೆಯನ್ನು ಜಪ್ತಿ ಮಾಡಿ, ಅವರನ್ನು ಬೀದಿಪಾಲು ಮಾಡುವುದರಲ್ಲಿ ಈ ಬ್ಯಾಂಕ್‌ಗಳೂ ಕುಖ್ಯಾತಿಯನ್ನು ಪಡೆದಿವೆ. ಹೀಗಿರುವಾಗ, ಕೊಟ್ಟ ಸಾಲವನ್ನು ವಸೂಲಿ ಮಾಡಬಾರದು ಎಂದು ಫೈನಾನ್ಸ್‌ಗಳಿಗೆ ನಿರ್ಬಂಧ ವಿಧಿಸುವಂತಿಲ್ಲ. ಆದರೆ ಈ ಫೈನಾನ್ಸ್‌ಗಳು ವಿಧಿಸುವ ಬಡ್ಡಿಗೆ ನಿಯಂತ್ರಣ ಹಾಕಿದ್ದೇ ಆದರೆ, ಬಹಳಷ್ಟು ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ.

ಇಂದಿನ ದಿನಗಳಲ್ಲಿ ಬಡ್ಡಿ ವ್ಯಾಪಾರಕ್ಕೆ ಹತ್ತು ಹಲವುಮುಖಗಳಿವೆ. ಸರಕಾರ ಮಾಡಿರುವ ಯಾವುದೇ ಕಾನೂನಿನ ಉರುಳಿನಿಂದ ಅವರು ಸುಲಭವಾಗಿ ನುಣುಚಿಕೊಳ್ಳಬಹುದು. ಯಾವುದೇ ಫೈನಾನ್ಸ್‌ಗಳನ್ನು ಮಾಡದೆಯೇ ಅನಧಿಕೃತವಾಗಿ ಬಡ್ಡಿ ದಂಧೆ ಮಾಡುವವರ ಸಂಖ್ಯೆ ಬಹುದೊಡ್ಡದಿದೆ. ಸಹಕಾರಿ ಸಂಘದ ಹೆಸರಿನಲ್ಲಿಯೇ ಭಾರೀ ಬಡ್ಡಿಗಳನ್ನು ಹಾಕಿ ಸಾಲ ನೀಡಿ ಶೋಷಣೆ ಮಾಡುವ ಸಂಘಟನೆಗಳಿವೆ. ಮೈಕ್ರೋಫೈನಾನ್ಸ್ ವಿರುದ್ಧ ಮಾತನಾಡುವ ಸರಕಾರ ಇಂತಹ ಸಂಘಗಳ ವಿರುದ್ಧ ಮಾತನಾಡುವುದಿಲ್ಲ. ಯಾಕೆಂದರೆ ಇವುಗಳು ಧರ್ಮ ದೇವರ ಕಾವಲಿನಿಂದ ನಡೆಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಲ ನೀಡುವ ಆ್ಯಪ್‌ಗಳು ಬಂದಿವೆ. ಇವು ಎಷ್ಟು ಅಪಾಯಕಾರಿಯೆಂದರೆ, ವಿದ್ಯಾರ್ಥಿಗಳು, ಯುವಕರು ತುರ್ತು ಹಣದ ಆಸೆಗೆ ಬಲಿಯಾಗಿ ಈ ಆ್ಯಪ್‌ನಿಂದ ಸಾಲ ಪಡೆಯುತ್ತಾರೆ. ದುಪ್ಪಟ್ಟು ಹಣವನ್ನು ಪಾವತಿ ಮಾಡಿದ ಬಳಿಕವೂ ಈ ಆ್ಯಪ್‌ಗಳು ಸಾಲ ಪಡೆದವರನ್ನು ಶೋಷಿಸುವುದಿವೆೆ. ಬ್ಲ್ಯಾಕ್‌ಮೇಲ್ ಮಾಡುವುದಿವೆೆ. ಈ ಆ್ಯಪ್‌ಗಳು ಸಾಲ ನೀಡುವುದಕ್ಕಾಗಿ ಫಲಾನುಭವಿಗಳ ಖಾಸಗಿ ಮಾಹಿತಿಗಳನ್ನು ಪಡೆದುಕೊಳ್ಳುತ್ತವೆ. ನಿಗದಿತ ಸಮಯದಲ್ಲಿ ಸಾಲ ಪಾವತಿ ಮಾಡದೇ ಇದ್ದರೆ, ಈ ಖಾಸಗಿ ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡುತ್ತದೆ. ಈ ಡಿಜಿಟಲ್ ಸಾಲಗಳ ಬಲೆಗೆ ಬಿದ್ದು ಹಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಈ ಸಾಲ ಕಟ್ಟುವುದಕ್ಕಾಗಿಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್‌ಗಳಿಗೆ ನಿಯಂತ್ರಣ ಹೇರಿದಂತೆಯೇ, ಹೊಸ ತಲೆಮಾರಿನ ಯುವಕರನ್ನು ಬಲೆಗೆ ಕೆಡವುತ್ತಿರುವ ಈ ಮೊಬೈಲ್ ಸಾಲದ ವಿರುದ್ಧವೂ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ದೇಶಾದ್ಯಂತ ಹರಡಿರುವ ಈ ಬಡ್ಡಿ ಭಯೋತ್ಪಾದನೆಯ ವಿರುದ್ಧ ಜನಾಂದೋಲನವೊಂದು ರೂಪುಗೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X