Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕಾಂಗ್ರೆಸ್‌ಗೆ ಮುಳುವಾಗಲಿರುವ ಬಿಜೆಪಿ...

ಕಾಂಗ್ರೆಸ್‌ಗೆ ಮುಳುವಾಗಲಿರುವ ಬಿಜೆಪಿ ನಾಯಕರ ವಲಸೆ!

ವಾರ್ತಾಭಾರತಿವಾರ್ತಾಭಾರತಿ14 Oct 2023 8:39 AM IST
share
ಕಾಂಗ್ರೆಸ್‌ಗೆ ಮುಳುವಾಗಲಿರುವ ಬಿಜೆಪಿ ನಾಯಕರ ವಲಸೆ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸ್ವತಃ ಬಿಜೆಪಿಯ ನಾಯಕರೇ ಸಾರ್ವಜನಿಕವಾಗಿ ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ರಾಜ್ಯ ಬಿಜೆಪಿ ಹಳ್ಳ ಹಿಡಿದಿದೆ. ದುರಸ್ತಿ ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿಗೆ ಬಂದಿದೆ. ಆದುದರಿಂದಲೇ ವರಿಷ್ಠರು ಇನ್ನೂ ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಅವರು ಇಡೀ ಪಕ್ಷವನ್ನು ಹೊಸದಾಗಿ ಕಟ್ಟುವ ಆಲೋಚನೆಯಲ್ಲಿದ್ದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲಿಗಿಂತಲೂ ಅವಮಾನಕರವಾದ ಸನ್ನಿವೇಶವಿದು. ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಘೋಷಣೆ ಮಾಡಿದರೆ ಅದರ ಬೆನ್ನಿಗೇ ಪಕ್ಷ ಹಲವು ಚೂರಾಗಲಿದೆ ಎನ್ನುವ ಭಯ ಕೇಂದ್ರ ವರಿಷ್ಠರದು. ಬಿಜೆಪಿಯನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ ಎಲ್ಲ ಹೆಗ್ಗಳಿಕೆಯೂ ರಾಜ್ಯದ ‘ಕೇಶವ ಕೃಪಾ’ದ ಮಂದಿಗೆ ಸಲ್ಲಬೇಕು. ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳಲು ಆರೆಸ್ಸೆಸ್ ನಡೆಸಿದ ಪ್ರಯತ್ನದ ಫಲವನ್ನು ಬಿಜೆಪಿ ಅನುಭವಿಸುತ್ತಿದೆ. ಹೊರಗಿನವರು-ಒಳಗಿನವರು, ಬ್ರಾಹ್ಮಣರು-ಲಿಂಗಾಯತರು, ಆರೆಸ್ಸೆಸ್-ಆರೆಸೆಸ್ಸೇತರರು, ಹಿರಿಯರು-ಕಿರಿಯರು ಹೀಗೆ ಬಿಜೆಪಿ ಒಳಗಿಂದೊಳಗೆ ಸಿಡಿಯುವುದಕ್ಕೆ ಸಿದ್ಧವಾಗಿ ನಿಂತ ಟೈಂ ಬಾಂಬ್.

ಸದ್ಯಕ್ಕೆ ಬಿಜೆಪಿಯನ್ನು ಕೇಂದ್ರದ ನಾಯಕರೇ ದಿಲ್ಲಿಯಲ್ಲಿ ಕುಳಿತು ನಿಯಂತ್ರಿಸುತ್ತಿದ್ದಾರೆ. ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಾಜ್ಯದ ಯಾವುದೇ ಮುಖಂಡರಿಗೆ ಸರಿಯಾದ ಮಾಹಿತಿಗಳಿಲ್ಲ ಎನ್ನುವುದನ್ನು ಸ್ವತಃ ರಾಜ್ಯ ಬಿಜೆಪಿಯ ನಾಯಕರೇ ಒಪ್ಪಿಕೊಂಡಿದ್ದಾರೆ. ‘ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ’ ಎನ್ನುವ ಹೇಳಿಕೆಯನ್ನು ಉಭಯ ಪಕ್ಷಗಳ ನಾಯಕರು ದಿಲ್ಲಿಯಲ್ಲಿ ಘೋಷಿಸಿದರು. ಇದೀಗ ನೋಡಿದರೆ, ಈ ಮೈತ್ರಿಯ ಬಗ್ಗೆ ರಾಜ್ಯ ಬಿಜೆಪಿಯೊಳಗಿನ ಯಾವುದೇ ನಾಯಕರಿಗೆ ಮಾಹಿತಿಯನ್ನು ಕೇಂದ್ರ ವರಿಷ್ಠರು ನೀಡಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಸದಾನಂದಗೌಡ, ಯಡಿಯೂರಪ್ಪ ಮೊದಲಾದ ನಾಯಕರ ಯಾವ ಸಲಹೆ ಸೂಚನೆಗಳನ್ನು ಈ ಸಂದರ್ಭದಲ್ಲಿ ಕೇಂದ್ರ ವರಿಷ್ಠರು ತೆಗೆದುಕೊಂಡಿರಲಿಲ್ಲ. ಇದು ಬಿಜೆಪಿಯೊಳಗಿನ ನಾಯಕರಿಗೆ ತೀವ್ರ ಮುಜುಗರವನ್ನು ತಂದಿದೆ. ‘ಜೆಡಿಎಸ್ ಜೊತೆಗಿನ ಮೈತ್ರಿ’ ಕುರಿತಂತೆ ಒಬ್ಬೊಬ್ಬರೇ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಈ ಮೈತ್ರಿಯನ್ನು ವಿರೋಧಿಸಿ ಜೆಡಿಎಸ್ ಒಳಗಿರುವ ಹಲವು ನಾಯಕರು ರಾಜೀನಾಮೆ ನೀಡಿದ್ದಾರೆ. ಇತ್ತ ಬಿಜೆಪಿಯ ನಾಯಕರು ಕೂಡ ಜೆಡಿಎಸ್ ಜೊತೆಗಿನ ಮೈತ್ರಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಸದ್ಯಕ್ಕೆ ತುರ್ತಾಗಿ ಮೈತ್ರಿ ನಡೆಯಬೇಕಾಗಿರುವುದು ರಾಜ್ಯ ಮತ್ತು ಕೇಂದ್ರದ ವರಿಷ್ಠರ ನಡುವೆ. ಇಲ್ಲವಾದರೆ ರಾಜ್ಯ ಬಿಜೆಪಿ ಮುಂದಿನ ಚುನಾವಣೆಯನ್ನು ಕುಮಾರ ಸ್ವಾಮಿಯ ನೇತೃತ್ವದಲ್ಲಿ ಎದುರಿಸಬೇಕಾಗುತ್ತದೆ. ಸದ್ಯಕ್ಕಂತೂ ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ, ವಿರೋಧ ಪಕ್ಷದ ನಾಯಕರೂ ಆಗಿ ಕುಮಾರಸ್ವಾಮಿಯವರೇ ಅನಧಿಕೃತವಾಗಿ ಗುರುತಿಸಲ್ಪಡುತ್ತಿದ್ದಾರೆ.

ಇವೆಲ್ಲದರ ಜೊತೆಗೆ, ಬಿಜೆಪಿಯ ದೊಡ್ಡದೊಂದು ತಂಡ ಕಾಂಗ್ರೆಸ್ ಸೇರುವುದಕ್ಕೆ ಸಿದ್ಧವಾಗಿ ನಿಂತಿದೆ. ‘ವಿವಿಧ ಪಕ್ಷಗಳ ಸುಮಾರು 42 ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಲು ಸಿದ್ಧರಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಡಿಕೆಶಿ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎನ್ನುವ ಸೂಚನೆಯನ್ನು ಅವರು ನೀಡಿದ್ದಾರೆ. ಇದನ್ನು ಅವರು ಹೆಗ್ಗಳಿಕೆಯ ರೂಪದಲ್ಲಿ ಘೋಷಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯಿಂದ ಹೊರ ಬರುತ್ತಿರುವ ಅಷ್ಟೂ ನಾಯಕರು ಬಿಜೆಪಿಯ ವರಿಷ್ಠರಿಂದ ತಿರಸ್ಕರಿಸಲ್ಪಟ್ಟವರು ಎನ್ನುವ ಎಚ್ಚರಿಕೆ ಕಾಂಗ್ರೆಸ್‌ಗೆ ಇರಬೇಕು. ಬಿಜೆಪಿಯ ಪರಮ ಭ್ರಷ್ಟ ಆಡಳಿತದ ವಿರುದ್ಧ ಈ ನಾಡಿನ ಜನತೆ ತೀರ್ಪು ನೀಡಿದ್ದಾರೆ. ಇಂದು ಬಿಜೆಪಿಯಿಂದ ಹೊರಗೆ ಕಾಲಿಟ್ಟವರಲ್ಲಿ ಬಹುತೇಕರು ಕಳೆದ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ಶಾಮೀಲಾದವರು. ಬಿಜೆಪಿ ಸರಕಾರದ ಜನವಿರೋಧಿ, ಜಾತ್ಯತೀತ ವಿರೋಧಿ ನೀತಿಗಳಿಗೆ ಬೆಂಬಲವಾಗಿ ನಿಂತವರು. ಜನರು ಅವರ ವಿರುದ್ಧ ನೀಡಿದ ತೀರ್ಪಾಗಿತ್ತು ಕಳೆದ ಬಾರಿಯ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ. ಆ ಭ್ರಷ್ಟಾಚಾರಿಗಳನ್ನೆಲ್ಲ ಮತ್ತೆ ತನ್ನ ಪಕ್ಷಕ್ಕೆ ಆಹ್ವಾನಿಸುವುದೆಂದರೆ, ತನ್ನನ್ನು ಆರಿಸಿದ ಜನರಿಗೆ ಕಾಂಗ್ರೆಸ್ ಮಾಡುವ ಮೋಸವಾಗಿದೆ. ಪಕ್ಷಾಂತರಗೊಂಡು ಕಾಂಗ್ರೆಸ್‌ಗೆ ಆಗಮಿಸುವ ನಾಯಕರು ಸರಕಾರದಲ್ಲಿ ಪಾಲುದಾರರಾಗಿ ಈ ನಾಡನ್ನು ಮತ್ತೆ ದೋಚುವುದಿಲ್ಲವೆ? ಬಿಜೆಪಿಯಲ್ಲಿದ್ದಾಗ ಭ್ರಷ್ಟರು, ಕಾಂಗ್ರೆಸ್‌ಗೆ ಬಂದಾಗ ಪ್ರಾಮಾಣಿಕರಾಗುವುದು ಹೇಗೆ?

ಇವರೆಲ್ಲ, ಬಿಜೆಪಿಯ ಕೈಯಲ್ಲಿ ಅಧಿಕಾರವಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಕಾಂಗ್ರೆಸ್‌ಗೆ ಪಕ್ಷಾಂತರವಾಗುವ ಸಿದ್ಧತೆ ನಡೆಸುತ್ತಿದ್ದಾರೆಯೇ ಹೊರತು ಯಾವುದೇ ಸೈದ್ಧಾಂತಿಕ ಭಿನ್ನಮತಗಳ ಕಾರಣಕ್ಕಾಗಿ ಅಲ್ಲ. ಶೆಟ್ಟರ್ ಸೇರಿದಂತೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಆಗಮಿಸಿದ, ಆಗಮಿಸುತ್ತಿರುವ ಹಲವು ನಾಯಕರಿಗೆ ಆರೆಸ್ಸೆಸ್‌ನೊಳಗಿರುವ ಈಗಿನ ನಾಯಕರ ಜೊತೆಗೆ ಭಿನ್ನಮತವಿರಬಹುದು. ಆದರೆ ಆರೆಸ್ಸೆಸ್‌ನ ಸಿದ್ಧಾಂತದ ಜೊತೆಗೆ ಭಿನ್ನಮತವಿಲ್ಲ. ಗೋಳ್ವಾಲ್ಕರ್, ಹೆಡಗೇವಾರ್‌ರಂತಹ ಜಾತೀಯವಾದಿಗಳ ವಿರುದ್ಧ ಹೇಳಿಕೆ ನೀಡಲು ಇವರು ಯಾವತ್ತೂ ಸಿದ್ಧರಿಲ್ಲ. ಅಷ್ಟೇ ಅಲ್ಲ, ಒಳಗೊಳಗೆ ಈಗಲೂ ಆರೆಸ್ಸೆಸ್ ಸಿದ್ಧಾಂತಗಳನ್ನು ಗೌರವಿಸುತ್ತಾರೆ. ‘ನಾನು ಬಿಜೆಪಿಯನ್ನು ತೊರೆದಿದ್ದೇನೆಯೇ ಹೊರತು ಆರೆಸ್ಸೆಸ್ ಸಿದ್ಧಾಂತವನ್ನು ತೊರೆದಿಲ್ಲ’ ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರ್ವಜನಿಕವಾಗಿ ‘ಆರಸ್ಸೆಸ್‌ನ ವಿರುದ್ಧ’ ಹೇಳಿಕೆ ನೀಡುತ್ತಿದ್ದಾರೆ. ಸಾವರ್ಕರ್‌ನ್ನು ಹೇಡಿಯೆಂದು ಟೀಕಿಸಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿಯಿಂದ ಆಗಮಿಸಿರುವ ಹಿರಿಯ ನಾಯಕರು ಬದ್ಧತೆಯನ್ನು ಪ್ರದರ್ಶಿಸುತ್ತಾರೆಯೇ? ಈ ಪ್ರಶ್ನೆಯನ್ನು ಮೊದಲು ಕಾಂಗ್ರೆಸ್ ನಾಯಕರು ಪಕ್ಷಾಂತರಕ್ಕೆ ಸಿದ್ಧರಿರುವ ಬಿಜೆಪಿ ನಾಯಕರ ಬಳಿ ಕೇಳಬೇಕಾಗಿದೆ. ಬಹುತೇಕ ಬಿಜೆಪಿ ನಾಯಕರು ವರಿಷ್ಠರ ಜೊತೆಗಿನ ಭಿನ್ನಮತ, ಅಧಿಕಾರ ಹಂಚಿಕೆಯ ಸಂದರ್ಭದಲ್ಲಾದ ಪಕ್ಷಪಾತವನ್ನು ವಿರೋಧಿಸಿ ಬಿಜೆಪಿಯನ್ನು ತೊರೆಯುತ್ತಿದ್ದಾರೆಯೇ ಹೊರತು, ಬಿಜೆಪಿಯ ಸಿದ್ಧಾಂತದ ಜೊತೆಗಿನ ಭಿನ್ನಮತದಿಂದಲ್ಲ. ಕಾಂಗ್ರೆಸ್ ನಂಬಿರುವ ಜಾತ್ಯತೀತ ಸಿದ್ಧಾಂತದ ಮೇಲಿನ ಪ್ರೀತಿಯಿಂದಲೂ ಅಲ್ಲ. ಇಂತಹ ನಾಯಕರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವುದರಿಂದ ಕಾಂಗ್ರೆಸ್‌ ಗೆ ಹಾನಿಯೇ ಹೊರತು ಇನ್ನಾವ ಲಾಭವೂ ಇಲ್ಲ.

ಕಾಂಗ್ರೆಸ್ ಈಗಾಗಲೇ ತನ್ನೊಳಗಿರುವ ಮೃದು ಹಿಂದುತ್ವಕ್ಕಾಗಿ ಸಾಕಷ್ಟು ಟೀಕೆಗೊಳಗಾಗಿದೆೆ. ಸಂಘಪರಿವಾರದ ಕಾರ್ಯಕರ್ತರ ಪುಂಡಾಟಗಳನ್ನು ಮಟ್ಟ ಹಾಕುವಲ್ಲಿ ಸರಕಾರ ವಿಫಲವಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರ ಜೊತೆ ಜೊತೆಗೆ ಭ್ರಷ್ಟಾಚಾರದಲ್ಲೂ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯೊಳಗಿನ ಭ್ರಷ್ಟಾಚಾರ ಮತ್ತು ಕೋಮುವಾದದೊಂದಿಗೆ ನೇರ ಪಾಲುದಾರರಾಗಿರುವ ಬಿಜೆಪಿಯ ಅರ್ಧಕ್ಕರ್ಧ ನಾಯಕರು ಕಾಂಗ್ರೆಸ್‌ನೊಳಗೆ ವಿಲೀನವಾದರೆ ಕಾಂಗ್ರೆಸ್‌ನ ಅಸ್ತಿತ್ವ ಉಳಿಯುವುದಾದರೂ ಹೇಗೆ? ಬಿಜೆಪಿಯಿಂದ ಬಂದವರಿಗೆ ಮಣೆ ಹಾಕುತ್ತಾ ಹೋದ ಹಾಗೆಯೇ, ಕಾಂಗ್ರೆಸ್ ಇನ್ನೊಂದು ಬಿಜೆಪಿಯಾಗಲಿದೆ. ಜಾತ್ಯತೀತ ಮೌಲ್ಯಗಳ ಜೊತೆಗೆ ಇನ್ನೂ ಅಷ್ಟೋ ಇಷ್ಟೋ ಗುರುತಿಸಿಕೊಂಡಿರುವ ಕಾಂಗ್ರೆಸ್‌ನೊಳಗಿರುವ ನಾಯಕರು ಕಾಂಗ್ರೆಸ್ ತೊರೆಯುವುದು ಅನಿವಾರ್ಯವಾಗಬಹುದು. ಅಥವಾ ಕಾಂಗ್ರೆಸ್(ಬಿ-ಬಿಜೆಪಿ) ಎನ್ನುವ ಹೊಸ ಪಕ್ಷ ಅಸ್ತಿತ್ವಕ್ಕೆ ಬರಬಹುದು. ಇದು ಅಂತಿಮವಾಗಿ ಈಗ ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸುವ ಹಂತಕ್ಕೆ ತಲುಪಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X