Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನಂದಿನಿ ಬೆಲೆಯೇರಿಕೆ: ಹಾಲೆಷ್ಟು?...

ನಂದಿನಿ ಬೆಲೆಯೇರಿಕೆ: ಹಾಲೆಷ್ಟು? ನೀರೆಷ್ಟು?

ವಾರ್ತಾಭಾರತಿವಾರ್ತಾಭಾರತಿ27 Jun 2024 9:23 AM IST
share
ನಂದಿನಿ ಬೆಲೆಯೇರಿಕೆ: ಹಾಲೆಷ್ಟು? ನೀರೆಷ್ಟು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಂದು ವರ್ಷ ಪೂರೈಸಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಆದರೆ ಈ ಸಾಧನೆಯ ಸಂಭ್ರಮವನ್ನು ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಇದ್ದಂತಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರಕದೇ ಇರುವ ಹಿನ್ನೆಲೆಯಲ್ಲಿ, ಅದು ತೀವ್ರ ಗೊಂದಲದಲ್ಲಿದ್ದಂತಿದೆ. ಮುಖ್ಯವಾಗಿ ನೀಡಿರುವ ಗ್ಯಾರಂಟಿಗಳನ್ನು ಪುನರ್ ಪರಿಶೀಲಿಸಬೇಕೇ ಎಂದು ಅದು ಒಳಗಿಂದೊಳಗೆ ಚಿಂತನೆ ನಡೆಸುತ್ತಿದೆ. ಗ್ಯಾರಂಟಿಗಳು ಸರಕಾರದ ಮೇಲೆ ಆರ್ಥಿಕ ಒತ್ತಡಗಳನ್ನು ಹಾಕುತ್ತಿದೆ ಎನ್ನುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಹೊತ್ತಿಗೇ ರಾಜ್ಯ ಸರಕಾರ ಪೆಟ್ರೋಲ್ ಬೆಲೆಯನ್ನು ಏರಿಸಿರುವುದು, ವಿರೋಧ ಪಕ್ಷಗಳ ಆರೋಪಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಂತಾಗಿದೆ. ‘ಆದರೆ ಈ ಬೆಲೆಯೇರಿಕೆ ದೊಡ್ಡ ಮಟ್ಟದ ದುಷ್ಪರಿಣಾಮಗಳನ್ನು ಬೀರುವುದಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ಪೆಟ್ರೋಲ್ ದರ ಕಡಿಮೆಯೇ ಇದೆ’ ಎನ್ನುವುದು ರಾಜ್ಯ ಸರಕಾರದ ಸಮರ್ಥನೆ. ಆದರೆ ಈ ಏರಿಕೆ, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ನಾಳೆ, ಈ ಬೆಲೆಯೇರಿಕೆಗೆ ಅನುಗುಣವಾಗಿ ಸರಕು, ಸಾಗಾಟಗಳ ಬೆಲೆಯೇರಿಕೆಯಾದಾಗಲೂ ಪಕ್ಕದ ರಾಜ್ಯವನ್ನು ತೋರಿಸಿ, ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾಗುತ್ತದೆ.

ಇದರ ಬೆನ್ನಿಗೇ ಇದೀಗ ನಂದಿನಿ ಹಾಲಿನ ದರ ಏರಿಕೆಯ ಮೂಲಕ ಸರಕಾರ ಮತ್ತೊಮ್ಮೆ ಸುದ್ದಿಯಲ್ಲಿದೆ. ನಂದಿನಿ ಹಾಲಿನ ಬೆಲೆಯನ್ನು ಬುಧವಾರದಿಂದ ಪ್ರತಿ ಲೀಟರ್‌ಗೆ ಎರಡು ರೂ. ಹೆಚ್ಚಿಸಿದೆ. ನಂದಿನಿಯ ಎಲ್ಲ ಮಾದರಿಗಳ ಹಾಲಿನ ದರ ಮತ್ತು ಪ್ರಮಾಣವನ್ನು ಕೆಎಂಎಫ್ ಪರಿಷ್ಕರಿಸಿದ್ದು, ಒಂದು ಲೀಟರ್ ಹಾಲಿನ ಪ್ಯಾಕೆಟ್‌ಗಳ ದರವನ್ನು ಎರಡು ರೂ.ಗಳಂತೆ ಹೆಚ್ಚಳ ಮಾಡಲಾಗಿದೆ. ಬೆಲೆಯೇರಿಕೆಯ ಪ್ರಕಟಣೆ ಹೊರ ಬಿದ್ದ ಬೆನ್ನಿಗೇ ವಿರೋಧ ಪಕ್ಷಗಳು ಸರಕಾರದ ಮೇಲೆ ಮುಗಿ ಬಿದ್ದಿವೆ. ಆದರೆ ಈ ಬೆಲೆಯೇರಿಕೆಯ ಹಿಂದೆ ಸರಕಾರದ ಜಾಣ ನಡೆಯೊಂದಿದೆ. ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ. ಎಲ್.ಗೆ ಹೆಚ್ಚಳ ಮಾಡಲಾಗಿದ್ದು, ಈ ಹೆಚ್ಚುವರಿ ಹಾಲಿಗೆ ಎರಡು ರೂ. ದರ ನಿಗದಿ ಪಡಿಸಲಾಗಿದೆ. ನಂದಿನಿ ಹಾಲಿಗೆ ದರವನ್ನು ಹೆಚ್ಚಳ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಹಾಲಿನ ಬೆಲೆಯೇರಿಕೆಯ ಬೆನ್ನಿಗೇ ಹೊಟೇಲ್‌ನಲ್ಲಿ ಚಹಾ-ಕಾಫಿಯ ಬೆಲೆ ಹೆಚ್ಚಳದ ಬಗ್ಗೆ ವದಂತಿಗಳು ಹರಡಿದ್ದವು. ಆದರೆ ಈ ವದಂತಿಯನ್ನೂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ‘‘ಹೊಟೇಲ್‌ಗಳಲ್ಲಿ ಚಹಾ-ಕಾಫಿ ಬೆಲೆಯೇರಿಕೆ ಸಾಧ್ಯವೇ ಇಲ್ಲ. ಯಾಕೆಂದರೆ ಸರಕಾರ ಹಾಲಿನ ದರವನ್ನು ಹೆಚ್ಚಳವೇ ಮಾಡಿಲ್ಲ. ಇರುವ ಪ್ಯಾಕೆಟ್‌ಗಳಲ್ಲಿ 50 ಎಂ. ಎಲ್. ಹೆಚ್ಚು ಹಾಲನ್ನು ಪೂರೈಕೆ ಮಾಡುತ್ತಿದ್ದೇವೆ. ಆ ಹೆಚ್ಚುವರಿ ಹಾಲಿಗೆ 2 ರೂಪಾಯಿಯನ್ನು ವಿಧಿಸಿದ್ದೇವೆ.ಹೊಟೇಲ್‌ಗಳಿಗೆ ನೀಡಿದ ಹೆಚ್ಚುವರಿ ಹಣಕ್ಕೆ ಅಷ್ಟೇ ಹಾಲು ಸಿಗುತ್ತಿರುವಾಗ ದರವನ್ನು ಹೇಗೆ ಹೆಚ್ಚಿಸುತ್ತಾರೆ?’’ ಎಂದು ಅವರು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಯ ಹೇಳಿಕೆ ಸಮರ್ಥನೀಯವೇ ಆಗಿದೆ. ಹೊಟೇಲ್‌ಗಳು ನೀಡಿದ ಹಣಕ್ಕೆ ಪ್ರತಿಯಾಗಿ ಹೆಚ್ಚುವರಿ ಹಾಲನ್ನು ಪಡೆಯುವುದರಿಂದ ಯಾವ ಕಾರಣಕ್ಕೂ ಬೆಲೆಯೇರಿಕೆಯ ನೆಪದಲ್ಲಿ ಚಹಾ-ಕಾಫಿಯ ಬೆಲೆಯನ್ನು ಏರಿಸುವಂತಿಲ್ಲ. ಆದರೆ ಜನಸಾಮಾನ್ಯರು ತಮಗೆ ಅಗತ್ಯವಿಲ್ಲದ 50 ಎಂ. ಎಲ್. ಹಾಲನ್ನು ಹೆಚ್ಚುವರಿಯಾಗಿ ಯಾಕೆ ಪಡೆದುಕೊಳ್ಳಬೇಕು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕೆಎಂಎಫ್ ತನ್ನಲ್ಲಿರುವ ಹಾಲಿನ ಶೇಖರಣೆಯನ್ನು ಖಾಲಿ ಮಾಡುವುದಕ್ಕಾಗಿ ಸಾಮಾನ್ಯ ಗ್ರಾಹಕರ ತಲೆಗೆ ಬಲವಂತವಾಗಿ ಹಾಲನ್ನು ಸುರಿದಂತಾಗುವುದಿಲ್ಲವೆ? ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.

ಕಳೆದ ವರ್ಷ ಈ ಸಮಯದಲ್ಲಿ 90 ಲಕ್ಷ ಲೀಟರ್ ಹಾಲು ಖರೀದಿಯಾಗುತ್ತಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ 9 ಲಕ್ಷ ಲೀಟರ್‌ಗೂ ಹೆಚ್ಚು ಹಾಲನ್ನು ಖರೀದಿಸಲಾಗುತ್ತಿದೆ. ರೈತರು ಹೆಚ್ಚು ಹಾಲು ಉತ್ಪಾದಿಸುವುದರಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ರೈತರು ಕಳೆದ ವರ್ಷಕ್ಕಿಂತ ಹೆಚ್ಚು ಹಾಲನ್ನು ಉತ್ಪಾದಿಸುತ್ತಿರುವುದು ಖಂಡಿತವಾಗಿಯೂ ಸಂತೋಷ ದಾಯಕ ಸುದ್ದಿಯಾಗಿದೆ. ಈ ಹಿಂದೆ ಬಿಜೆಪಿ ಆಡಳಿತ ಕಾಲದಲ್ಲಿ, ಹಾಲಿನ ಉತ್ಪಾದನೆ ಇಳಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈ ಸಂದರ್ಭವನ್ನು ಬಳಸಿಕೊಂಡು ಮಾರುಕಟ್ಟೆಗಳನ್ನು ಹೊರ ರಾಜ್ಯದ ಹಾಲು ಉತ್ಪನ್ನಗಳು ಆಕ್ರಮಿಸಿಕೊಂಡದ್ದು ಟೀಕೆ, ಆಕ್ರೋಶಕ್ಕೆ ಕಾರಣವಾಗಿತ್ತು. ಅಮುಲ್ ಕಂಪೆನಿಯ ಉತ್ಪನ್ನಗಳನ್ನು ರಾಜ್ಯದ ಜನರ ಮೇಲೆ ಹೇರುವ ಸಲುವಾಗಿ ನಂದಿನಿ ಹಾಲು, ತುಪ್ಪಗಳ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬದಿಗೆ ಸರಿಸಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಹಲವು ಖಾಸಗಿ ಕಂಪೆನಿಗಳು ಒಳಗಿಂದೊಳಗೆ ಕೈ ಜೋಡಿಸಿ, ನಂದಿನಿಯನ್ನು ನಾಶ ಮಾಡುವ ಹುನ್ನಾರಗಳನ್ನು ನಡೆಸುತ್ತಿವೆ ಎಂಬ ಅನುಮಾನಗಳನ್ನು ಹಲವರು ವ್ಯಕ್ತಪಡಿಸಿದ್ದರು. ನಂದಿನಿ ಕರ್ನಾಟಕದ ಪಾಲಿನ ಅತ್ಯಂತ ಹೆಮ್ಮೆಯ ಸಹಕಾರ ಸಂಸ್ಥೆಯಾಗಿದೆ. ಇದು ಸಾವಿರಾರು ಜನರಿಗೆ ಉದ್ಯೋಗಗಳನ್ನು ನೀಡಿದೆ. ರಾಜ್ಯದ ಸಾವಿರಾರು ಕೃಷಿಕರನ್ನು ಸಂಘಟಿತರನ್ನಾಗಿಸಿದೆ. ಅವರನ್ನು ಸಬಲೀಕರಿಸಿದೆ. ಇಂದು ಅವರು ಹೆಚ್ಚುವರಿ ಹಾಲನ್ನು ಉತ್ಪಾದಿಸುತ್ತಿದ್ದಾರೆ ಎಂದರೆ ಅದು ನಂದಿನಿಯ ಹೆಗ್ಗಳಿಕೆಯೇ ಆಗಿದೆ. ಇದನ್ನು ಸರಕಾರ ಯಾವ ಕಾರಣಕ್ಕೂ ಋಣಾತ್ಮಕ ದೃಷ್ಟಿಯಿಂದ ನೋಡಬಾರದು.

ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಗ್ರಾಹಕರೂ ಹೆಚ್ಚಿದ್ದಾರೆ ಎನ್ನುವುದನ್ನು ಸರಕಾರ ಮರೆಯಬಾರದು. ಕಳೆದೆರಡು ವರ್ಷಗಳಲ್ಲಿ ಹಾಲುಗಳನ್ನು ಕೊಂಡುಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಅಷ್ಟೇ ಅಲ್ಲ, ನಂದಿನಿಯು ಹಾಲು, ತುಪ್ಪ, ಮೊಸರು ಮಾತ್ರವಲ್ಲದೆ ಇನ್ನಿತರ ಸಿಹಿ ಉತ್ಪನ್ನಗಳನ್ನೂ ಮಾರುಕಟ್ಟೆಗೆ ಬಿಟ್ಟಿದೆ. ಹೊರರಾಜ್ಯದ ಅಮುಲ್ ಸೇರಿದಂತೆ ಬೇರೆ ಖಾಸಗಿ ಕಂಪೆನಿಗಳ ಹಾಲಿನ ಉತ್ಪನ್ನಗಳಿಗೆ ಸ್ಪರ್ಧೆ ನೀಡಲು ಎಲ್ಲ ರೀತಿಯಲ್ಲೂ ನಂದಿನಿ ಸಮರ್ಥವಾಗಿರುವಾಗ, ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ 50 ಎಂ. ಎಲ್. ಹೆಚ್ಚುವರಿ ಹಾಲು ಹಾಕಿ ಅದನ್ನು ಜನಸಾಮಾನ್ಯರಿಗೆ ಬಲವಂತವಾಗಿ ದಾಟಿಸುವಂತಹ ಅನಿವಾರ್ಯ ನಿಜಕ್ಕೂ ನಂದಿನಿಗೆ ಇದೆಯಾ? ಇರುವ ಗ್ರಾಹಕರ ಮೇಲೆಯೇ ಹಾಲನ್ನು ಹೇರುವ ಬದಲು ಹೊಸ ಗ್ರಾಹಕರನ್ನು ಕಂಡುಕೊಳ್ಳಲು ನಂದಿನಿ ಯಾಕೆ ಹಿನ್ನಡೆ ಅನುಭವಿಸಿದೆ ಎನ್ನುವುದರ ಬಗ್ಗೆಯೂ ಸರಕಾರ ಚಿಂತಿಸಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಈ ನಾಡಿನ ಜನರನ್ನು ಹೆಚ್ಚುವರಿ ಹಾಲು ಸೇವಿಸುವಷ್ಟು ಸಮರ್ಥರನ್ನಾಗಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹೆಚ್ಚುವರಿ ಹಾಲು ಮನೆ ಮನವನ್ನು ತಣ್ಣಗಾಗಿಸುತ್ತದೆ. ಇದೇ ಸಂದರ್ಭದಲ್ಲಿ ಈ ಹಾಲಿನ ಹಣ ಮತ್ತೆ ರೈತರಿಗೇ ತಲುಪುವುದರಿಂದ ಇದನ್ನು ಪೆಟ್ರೋಲ್ ಬೆಲೆಯೇರಿಕೆಯಂತೆ ಹೊರೆ ಎನ್ನಲಾಗುವುದಿಲ್ಲ. ಆದರೆ ಹೆಚ್ಚುವರಿ ಹಾಲು ಉತ್ಪಾದನೆಯನ್ನು ಒಂದು ಸಮಸ್ಯೆಯೆಂಬಂತೆ ಸರಕಾರ ಬಿಂಬಿಸುವುದು ಮಾತ್ರ ಸರಿಯಲ್ಲ. ಹೆಚ್ಚು ಉತ್ಪಾದನೆ ನಂದಿನಿಯ ಮಾರುಕಟ್ಟೆ ವಿಸ್ತರಣೆಗೆ ಒಂದು ನೆಪವಾಗಬೇಕು. ಹೆಚ್ಚುವರಿ ಹಾಲನ್ನು ಅಪೌಷ್ಟಿಕತೆ ತಾಂಡವವಾಡುತ್ತಿರುವ ಜಿಲ್ಲೆಗಳ ಮಕ್ಕಳಿಗೆ ತಲುಪಿಸುವ ಬಗ್ಗೆಯೂ ಸರಕಾರ ಯೋಜನೆ ರೂಪಿಸಬೇಕು. ಇಂದು 50 ಎಂ. ಎಲ್. ಹೆಚ್ಚುವರಿ ಹಾಲಿಗೆ ಎರಡು ರೂಪಾಯಿ ವಿಧಿಸಿದ್ದೇವೆ ಎನ್ನುವ ಸರಕಾರ, ನಾಳೆ ಹಾಲಿನ ಖರೀದಿ ಇಳಿಕೆಯಾಗಿ, ಪ್ಯಾಕೆಟ್‌ಗಳಲ್ಲಿ ಈ 50 ಎಂ.ಎಲ್.ಗೆ ಕಡಿತ ಬಿದ್ದರೆ ಸರಕಾರ ಮತ್ತೆ ಹಾಲಿನ ದರವನ್ನು ಇಳಿಸುತ್ತದೆಯೆ? ಎನ್ನುವ ಪ್ರಶ್ನೆಯೂ ಇಲ್ಲಿ ಏಳುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X