Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನ್ಯಾಯ ವ್ಯವಸ್ಥೆಯ ಮೇಲೆ ನಡೆಯುತ್ತಿರುವ...

ನ್ಯಾಯ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಗುಂಪು ದಾಳಿ

ವಾರ್ತಾಭಾರತಿವಾರ್ತಾಭಾರತಿ18 April 2024 9:34 AM IST
share
ನ್ಯಾಯ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಗುಂಪು ದಾಳಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಗುಂಪಿನಿಂದ ನಡೆಯುವ ಹತ್ಯೆ ಮತ್ತು ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಆರು ವಾರಗಳೊಳಗೆ ತನಗೆ ತಿಳಿಸಿ ಎಂದು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಸೂಚನೆ ನೀಡಿದೆ. ನ್ಯಾಶನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ಈ ಆದೇಶವನ್ನು ಹೊರಡಿಸಿದ ಸುಪ್ರೀಂಕೋರ್ಟ್, ತನ್ನ ಸೂಚನೆಗಳನ್ನು ಪಾಲಿಸದ ಮಧ್ಯ ಪ್ರದೇಶ ಸರಕಾರಕ್ಕೆ ಛೀಮಾರಿಯನ್ನು ಹಾಕಿದೆ. ವಿಪರ್ಯಾಸವೆಂದರೆ, ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದಾಗ, ಈ ಗುಂಪು ಹತ್ಯೆ ಮತ್ತು ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್ ಕಟುವಾಗಿ ಮಾತನಾಡುತ್ತದೆ. ಈ ಹಿಂದೆಯೂ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ನೀಡಿವೆಯಾದರೂ, ರಾಜ್ಯ ಸರಕಾರಗಳು ಅವುಗಳ ಪಾಲನೆಯಲ್ಲಿ ಉತ್ಸಾಹವನ್ನು ತೋರಿಸಿಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಗಳಷ್ಟೇ ಅಲ್ಲ, ಬರ್ಬರ ಕೊಲೆಗಳು ನಡೆದಿವೆಯಾದರೂ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಲ್ಲಿ, ಸಂತ್ರಸ್ತರಿಗೆ ನ್ಯಾಯ ನೀಡುವಲ್ಲಿ ಎಲ್ಲ ರಾಜ್ಯಗಳೂ ವಿಫಲವಾಗಿವೆ. ಈ ಕಾರಣದಿಂದಲೇ, ಗುಂಪು ಹಿಂಸಾಚಾರದ ಘಟನೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸರ್ವೋಚ್ಚ ನ್ಯಾಯಾಲಯದ 2018ರ ತೀರ್ಪಿಗೆ ಅನುಗುಣವಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಎಚ್ಚರಿಸಲು ಸಾಮಾಜಿಕ ಸಂಘಟನೆಗಳು ಸುಪ್ರೀಂಕೋರ್ಟ್‌ನ್ನು ಪದೇ ಪದೇ ಒತ್ತಾಯಿಸುತ್ತಿವೆ.

ಭಾರತದಲ್ಲಿ ಗುಂಪುಹತ್ಯೆ ಮತ್ತು ಗೋರಕ್ಷಣೆ ಹಿಂಸಾಚಾರವನ್ನು ತಡೆಯಲು ಮಾಡಿರುವ ಎಲ್ಲ ಕಾನೂನುಗಳು ಬೆದರುಬೊಂಬೆಗಳಾಗಿಯಷ್ಟೇ ಉಳಿದಿವೆ. ಅದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಯಾವ ರಾಜ್ಯಗಳೂ ಪ್ರದರ್ಶಿಸುತ್ತಿಲ್ಲ. ಯಾಕೆಂದರೆ, ಎಲ್ಲ ಗುಂಪು ಹತ್ಯೆಗಳು ಮತ್ತು ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳ ಮೇಲೆ ರಾಜಕೀಯ ಪಕ್ಷಗಳ ನೆರಳಿವೆ. ಒಂದು ನಿರ್ದಿಷ್ಟ ಪಕ್ಷ ರಾಜಕೀಯ ಕಾರಣಕ್ಕಾಗಿಯೇ ಗುಂಪು ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ಪ್ರೋತ್ಸಾಹಿಸುತ್ತಾ ಬಂದರೆ, ಉಳಿದೆಲ್ಲ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾ ಬರುತ್ತಿವೆ. ಪೊಲೀಸ್ ಇಲಾಖೆ ಮತ್ತು ಆರೋಪಿಗಳ ನಡುವೆ ಬೆಸೆದಿರುವ ಅನೈತಿಕ ಸಂಬಂಧದ ಕಾರಣದಿಂದ, ಎಫ್‌ಐಆರ್‌ನಲ್ಲಿ ಸಂತ್ರಸ್ತರೇ ಆರೋಪಿಗಳಾಗಿರುತ್ತಾರೆ. ರಾಜ್ಯ ಸರಕಾರವನ್ನು ಪೊಲೀಸ್ ಇಲಾಖೆಗಳೇ ದಾರಿ ತಪ್ಪಿಸುತ್ತವೆ. ಪರಿಣಾಮವಾಗಿ ಆರೋಪಿಗಳು ಸುಲಭದಲ್ಲಿ ಶಿಕ್ಷೆಯಿಂದ ಪಾರಾದರೆ, ಸಂತ್ರಸ್ತರು ಆರೋಪಿಗಳಾಗಿ ಕಟಕಟೆಯಲ್ಲಿ ನಿಂತು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಆದುದರಿಂದಲೇ, ಈ ಗುಂಪು ಹತ್ಯೆ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಆದೇಶ, ‘ನಾನು ಹೊಡೆದಂತೆ ಮಾಡುವೆ, ನೀನು ಅತ್ತಂತೆ ಮಾಡು’ ಎನ್ನುವಲ್ಲಿಗೆ ಸೀಮಿತವಾಗಿದೆ. ಕಾನೂನು ಮತ್ತು ನ್ಯಾಯಾಲಯದ ಅಸಹಾಯಕತೆ ದುಷ್ಕರ್ಮಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡುತ್ತಿದೆ.

ಇದಕ್ಕೆ ‘ಭೀಕರ ಉದಾಹರಣೆ’ಯಾಗಿ ನಮ್ಮ ಮುಂದೆ ಜಾರ್ಖಂಡ್‌ನ ಬಿಟ್ಟು ಬಜರಂಗಿ ಪ್ರಕರಣವಿದೆ. ಕುಖ್ಯಾತ ಕ್ರಿಮಿನಲ್ ಎಂದು ಗುರುತಿಸಲ್ಪಟ್ಟಿರುವ ಈ ಬಿಟ್ಟು ಬಜರಂಗಿಯನ್ನು ಸಾಕುತ್ತಿರುವುದೇ ಅಲ್ಲಿನ ಕಾನೂನು ವ್ಯವಸ್ಥೆ. ಕಳೆದ ವರ್ಷ ಜಾರ್ಖಂಡ್‌ನ ನೂಹ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಈತನ ಪಾತ್ರ ಬಹುದೊಡ್ಡದು. ಈ ಹಿಂದೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಲ್ಲೆಗಳಲ್ಲಿ ಗುರುತಿಸಲ್ಪಟ್ಟಿದ್ದ ಈತ ಕಳೆದ ವರ್ಷ ನೂಹ್ ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ. ಪೊಲೀಸರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ಈತ ತನ್ನ ಹಿಂಸಾಚಾರಗಳನ್ನೆಲ್ಲ ಪೊಲೀಸರ ಕಣ್ಗಾವಲಿನಲ್ಲೇ ನಡೆಸುತ್ತಾ ಬರುತ್ತಿದ್ದಾನೆ. ನೂಹ್ ಹಿಂಸಾಚಾರದಲ್ಲಿ ಅಪಾರ ಸಾವು ನೋವುಗಳಿಗೆ ಈತ ಕಾರಣನಾಗಿದ್ದರೂ, ಸುಲಭದಲ್ಲಿ ಜಾಮೀನು ದೊರಕಿತು. ಹಾಗೆ ಜಾಮೀನು ದೊರಕಿ ಹೊರ ಬಂದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬನಿಗೆ ಈತ ತನ್ನ ಸಹಚರರೊಂದಿಗೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದು ಸುಪ್ರೀಂಕೋರ್ಟ್‌ನಗಮನಕ್ಕೆ ಬಂದಿಲ್ಲ ಎಂದು ನಾವು ಭಾವಿಸೋಣವೆ? ಸುಪ್ರೀಂಕೋರ್ಟ್‌ನ ಆದೇಶಗಳನ್ನು ಜಾರ್ಖಂಡ್ ಸರಕಾರ ಗಾಳಿಗೆ ತೂರಿದ ಪರಿಣಾಮವಾಗಿಯೇ ಬಿಟ್ಟೂ ಬಜರಂಗಿ ತನ್ನ ಹಿಂಬಾಲಕರ ಜೊತೆಗೆ ಇನ್ನಷ್ಟು ವಿಜೃಂಭಿಸುತ್ತಿದ್ದಾನೆ.

ಸುಪ್ರೀಂಕೋರ್ಟ್ ಮತ್ತು ಸರಕಾರ ಮನಸ್ಸು ಮಾಡಿದರೆ ಗೋರಕ್ಷಕರ ಸಂಘಟನೆಗಳನ್ನೇ ಸಂವಿಧಾನ ಬಾಹಿರವೆಂದು ಘೋಷಿಸಿ ಸಂಪೂರ್ಣ ನಿಷೇಧ ಮಾಡಬಹುದು. ತಮ್ಮನ್ನು ತಾವು ಗೋರಕ್ಷಕರು ಎಂದು ಸ್ವಯಂಘೋಷಿಸಿಕೊಳ್ಳುವ ಕ್ರಿಮಿನಲ್‌ಗಳ ಮೇಲೆ ಪೊಲೀಸರು ಸ್ವತಃ ಪ್ರಕರಣ ದಾಖಲಿಸಿ ಅವರನ್ನು ರೌಡಿಶೀಟರ್‌ಗಳ ಪಟ್ಟಿಯಲ್ಲಿಸೇರಿಸಬೇಕು. ಯಾಕೆಂದರೆ, ಗೋರಕ್ಷಕರೆಂದು ಕರೆಸಿಕೊಂಡವರಾರೂ ಜನಸಾಮಾನ್ಯರಲ್ಲ. ಅವರು ಕ್ರಿಮಿನಲ್ ಹಿನ್ನೆಲೆಗಳಿಂದ ಬಂದವರು ಮತ್ತು ಗೋರಕ್ಷಣೆ ಅವರಿಗೆ ನೆಪ ಮಾತ್ರ.

ಗೋರಕ್ಷಣೆಯ ಮರೆಯಲ್ಲಿ ಅವರು ಹಫ್ತಾ ವಸೂಲಿ, ದರೋಡೆಗಳನ್ನು ವ್ಯವಸ್ಥಿತವಾಗಿ ಮಾಡುತ್ತಾ ಬರುತ್ತಿದ್ದಾರೆ. ಈ ದೇಶದ ನಿಜವಾದ ಗೋರಕ್ಷಕರು ಗೋವುಗಳನ್ನು ಸಾಕುವ ರೈತರು ಮಾತ್ರ. ಆದರೆ ಅವರನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಮಾತ್ರವಲ್ಲ, ಈ ನಕಲಿ ಗೋರಕ್ಷಕರೆಂಬ ಕ್ರಿಮಿನಲ್‌ಗಳಿಂದಾಗಿ ರೈತರು ಗೋವುಗಳನ್ನು ಸಾಗಿಸುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ನಕಲಿ ಗೋರಕ್ಷಕರಿಂದಾಗಿ ನಿಜವಾದ ಗೋರಕ್ಷಕರು ಗೋವುಗಳ ರಕ್ಷಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಒಂದೆಡೆ ಕಾನೂನು ವಿರೋಧಿ ಕೃತ್ಯಗಳನ್ನು ಎಸಗುತ್ತಿರುವುದು ಮಾತ್ರವಲ್ಲ, ಮಗದೊಂದೆಡೆ ಈ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ

ನೀಡುತ್ತಿರುವ ಹೈನೋದ್ಯಮದ ಮೇಲೆಯೂ ಅವರು ದಾಳಿ ನಡೆಸುತ್ತಿದ್ದಾರೆ. ಗೋರಕ್ಷಕರು ಅಕ್ರಮ ಗೋಸಾಗಾಟದ ಕೊಂಡಿಯಾಗಿದ್ದಾರೆ. ಬೃಹತ್ ಸಂಸ್ಕರಣಾ ಘಟಕಕ್ಕೆ ಅನುಪಯುಕ್ತ ಗೋವುಗಳನ್ನು ಸಾಗಿಸುವ ಮಧ್ಯವರ್ತಿಗಳಾಗಿಯೂ ಇವರು ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೂ ಇವರಿಂದ ‘ಮಾಮೂಲಿ’ ಸಂದಾಯವಾಗುವುದರಿಂದ ಕಾನೂನಿನ ಬಲೆಯಿಂದ ಇವರು ಸುಲಭದಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳಿವೆ.

ಹೆಚ್ಚಿನ ಗುಂಪು ಹಿಂಸಾಚಾರದಲ್ಲಿ ಹಲ್ಲೆಗೊಳಗಾದವರ ಮೇಲೆ ಮೊದಲು ಪ್ರಕರಣ ದಾಖಲಾಗುತ್ತವೆ. ಪ್ರತಿಭಟನೆಗಳು, ಒತ್ತಡಗಳು ಬಂದ ಬಳಿಕವಷ್ಟೇ ಆರೋಪಿಗಳ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸುತ್ತಾರೆ. ಒಂದು ವೇಳೆ ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ಅವರ ಮೇಲೆ ರಾಜಕೀಯ ಒತ್ತಡಗಳು ಬೀಳುತ್ತವೆ. ಇಲ್ಲಿ ‘ಗುಂಪಾಗಿ ಹತ್ಯೆ’ ನಡೆಸುವವರು, ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಎಸಗುವವರ ಬೆನ್ನಿಗೆ ರಾಜಕೀಯ ಪಕ್ಷಗಳ ನಾಯಕರು ನಿಂತಿರುತ್ತಾರೆ. ಈ ಹಿಂಸಾಚಾರ ಆಕಸ್ಮಿಕಗಳಲ್ಲ. ಅದರ ಹಿಂದೆ ರಾಜಕೀಯ ಶಕ್ತಿಗಳ ಕುಮ್ಮಕ್ಕುಗಳು ಇರುತ್ತವೆ. ಇದು ಸುಪ್ರೀಂಕೋರ್ಟ್‌ಗೆ ತಿಳಿಯದ್ದೇನೂ ಅಲ್ಲ. ಈ ಹತ್ಯೆ, ಹಿಂಸಾಚಾರಗಳನ್ನು ನಡೆಸುತ್ತಿರುವವರು ಪರ್ಯಾಯ ಪೊಲೀಸರಾಗಿ, ನ್ಯಾಯಾಲಯಗಳಾಗಿ ಸಮಾಜವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆಗಳನ್ನು, ನ್ಯಾಯಾಲಯಗಳನ್ನು ಅಣಕಿಸುತ್ತಿದ್ದಾರೆ. ಇವರು ಈ ದೇಶದ ಪ್ರಜಾಸತ್ತೆಯ ಮೇಲೆ, ಸಂವಿಧಾನದ ಮೇಲೆ, ನ್ಯಾಯ ವ್ಯವಸ್ಥೆಯ ಮೇಲೆ ಗುಂಪು ದಾಳಿ ನಡೆಸುತ್ತಿದ್ದಾರೆ ಎನ್ನುವ ವಾಸ್ತವವನ್ನು ಅರಿತುಕೊಂಡು, ಇವರ ವಿರುದ್ಧ ಸುಪ್ರೀಂಕೋರ್ಟ್ ಸ್ವಯಂ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಇಲ್ಲವಾದರೆ, ‘ನಾನು ಹೊಡೆದಂತೆ ಮಾಡುವೆ, ನೀವು ಅತ್ತಂತೆ ಮಾಡಿ’ ಎಂಬ ಪ್ರಹಸನ ಮುಂದುವರಿಯುತ್ತದೆ. ಇದನ್ನೇ ‘ನ್ಯಾಯ’ವೆಂದು ತಿಳಿದು ಜನಸಾಮಾನ್ಯರು ಅನ್ಯಾಯದ ಜೊತೆಗೆ ಹೊಂದಾಣಿಕೆ ಮಾಡುತ್ತಾ ಬದುಕಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X