Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಆನ್‌ಲೈನ್ ಗೇಮಿಂಗ್: ಆಟ ಮುಗಿಯುವುದೆ?

ಆನ್‌ಲೈನ್ ಗೇಮಿಂಗ್: ಆಟ ಮುಗಿಯುವುದೆ?

ವಾರ್ತಾಭಾರತಿವಾರ್ತಾಭಾರತಿ22 Aug 2025 7:23 AM IST
share
ಆನ್‌ಲೈನ್ ಗೇಮಿಂಗ್: ಆಟ ಮುಗಿಯುವುದೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಜೂಜು ಮತ್ತು ಮದ್ಯ ನಮ್ಮ ಸಮಾಜವನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ. ಇವೆರಡನ್ನೂ ಸಮಾಜ ಅಮಾನ್ಯ ಮಾಡುತ್ತಲೇ ಬಂದಿದೆಯಾದರೂ, ಬೇರೆ ರೂಪಗಳಲ್ಲಿ, ಬೇರೆ ನೆಪಗಳಲ್ಲಿ ಜನರ ಬದುಕಿನಿಂದ ಬೇರ್ಪಡಿಸಲಾಗದಂತೆ ಬೆಸೆದಿದೆ. ಹಿಂದೆಲ್ಲ ಜೂಜು ಎನ್ನುವುದು ಬಡವರು, ಕೂಲಿ ಕಾರ್ಮಿಕರು ವರ್ಷಕ್ಕೊಮ್ಮೆ ಸೇರುವ ಕೋಳಿ ಪಂದ್ಯಗಳಿಗೆ ಸೀಮಿತವಾಗಿರುತ್ತಿತ್ತು. ಪೊಲೀಸರು ಅವರ ಮೇಲೆ ನಡೆಸಿದ ದಾಳಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿದ್ದವು. ಇದೇ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ನಡೆಯುವ ಮಟ್ಕಾ ದಂಧೆಗಳನ್ನು ನೋಡಿಯೂ ನೋಡದಂತೆ ವ್ಯವಸ್ಥೆಯೇ ಪ್ರೋತ್ಸಾಹಿಸುತ್ತಿತ್ತು. ಮಟ್ಕಾಗಳನ್ನು ಅಧಿಕೃತ, ಅನಧಿಕೃತ ಎಂದು ವಿಂಗಡಿಸಿ ಪರೋಕ್ಷವಾಗಿ ವ್ಯವಸ್ಥೆಯೇ ಪ್ರೋತ್ಸಾಹಿಸುತ್ತಿತ್ತು. ಎಲ್ಲ ರೀತಿಯ ಜೂಜುಗಳೂ ಅಕ್ರಮವೇ ಆಗಿರುವಾಗ ಅದನ್ನು ಅಕ್ರಮ ಸಕ್ರಮವೆಂದು ವಿಂಗಡಿಸುವುದು ಎಷ್ಟು ಸರಿ? ಕೆಲವು ಜೂಜುಗಳನ್ನು ಸರಕಾರವೇ ಪ್ರೋತ್ಸಾಹಿಸುತ್ತಾ ಬರುತ್ತಿದೆ. ರೇಸ್‌ಕೋರ್ಸ್‌ಗಳಲ್ಲಿ ನಡೆಯುವ ಶ್ರೀಮಂತರ ಜೂಜುಗಳನ್ನು ಪ್ರತಿಷ್ಠೆಯ ರೂಪದಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಜೂಜು ಮತ್ತು ಮದ್ಯ ಗಂಡ-ಹೆಂಡತಿಯ ಜೋಡಿಯಿದ್ದಂತೆ. ಅದು ಒಂದನ್ನೊಂದು ಅವಿನಾಭಾವವಾಗಿ ಬೆಸೆದುಕೊಂಡಿದೆ. ವಿಪರ್ಯಾಸವೆಂದರೆ, ಅಕ್ರಮ ಮದ್ಯಗಳ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳುತ್ತಲೇ ಇನ್ನೊಂದೆಡೆ ಸರಕಾರವೇ ಮದ್ಯಗಳನ್ನು ಮಾರಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದೆ. ಜೂಜು ಮತ್ತು ಮದ್ಯ ಆಧುನಿಕ ದಿನಗಳಲ್ಲಿ ರೂಪಾಂತರಗಳನ್ನು ಪಡೆಯುತ್ತಾ ಸರಕಾರ, ಸಮಾಜದ ಎಲ್ಲ ಉರುಳುಗಳಾಚೆಗೆ ದೈತ್ಯಾಕಾರದಲ್ಲಿ ಹರಡಿಕೊಂಡಿದೆ.

ಲಾಟರಿ, ಮಟ್ಕಾ ಮೊದಲಾದವುಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಾ ಬಂದಿದ್ದ ಸರಕಾರವೇ ಇದೀಗ ಆನ್‌ಲೈನ್ ಗೇಮ್‌ಗೆ ಕಡಿವಾಣ ಹಾಕುವ ಮತ್ತು ಬೆಟ್ಟಿಂಗ್‌ಗಳನ್ನು ನಿಗ್ರಹಿಸುವ ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಈ ಹಿಂದೆಲ್ಲ ಜೂಜು ಎನ್ನುವುದು ಮನೆಯ ಹೊರಗೆ ನಡೆಯುವ ವ್ಯವಹಾರವಾಗಿತ್ತು. ಆದರೆ ಆನ್‌ಲೈನ್‌ನಿಂದಾಗಿ ಇಂದು ಜೂಜು ಎನ್ನುವುದು ಮನೆಯೊಳಗೂ ಕಾಲಿಟ್ಟು ಅತ್ಯಂತ ಅಪಾಯಕಾರಿಯಾಗಿ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡ ತೊಡಗಿದೆ. ಈ ಹಿಂದೆ ಮಧ್ಯಮವರ್ಗದ ಸದ್‌ಗೃಹಸ್ಥರು ಈ ಜೂಜಿನಂತಹ ಸಹವಾಸಗಳಿಗೆ ಹೋಗುತ್ತಿರಲಿಲ್ಲ. ಲಾಟರಿಗಳನ್ನು ಸರಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಮವರ್ಗ ಅವುಗಳ ಹಿಂದೆ ಬಿದ್ದಿದ್ದವು. ಆದರೆ ಮಟ್ಕಾ ಅಥವಾ ಇನ್ನಿತರ ಜೂಜುಗಳ ಅಡ್ಡೆಗಳಿಗೆ ಮುಕ್ತವಾಗಿ ಓಡಾಡುವ ಮನಸ್ಥಿತಿಗೆ ಇನ್ನೂ ಮಧ್ಯಮವರ್ಗ ತಲುಪಿರಲಿಲ್ಲ. ಆದರೆ ಯಾವಾಗ ಆನ್‌ಲೈನ್ ಆಟಗಳು ಬಂದವೋ. ಮಧ್ಯಮವರ್ಗಗಳು ಇದರೊಳಗೆ ಮುಕ್ತವಾಗಿ ಪ್ರವೇಶಿಸಿದವು. ಮನೆಯಿಂದ ಹೊರಗೆ ಕಾಲಿಡದೆಯೇ ಈ ಆಟದಲ್ಲಿ ಸಹಸ್ರಾರು ರೂಪಾಯಿಗಳನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚತೊಡಗಿದವು. ಆನ್‌ಲೈನ್ ಗೇಮಿಂಗ್‌ನಿಂದ ದೇಶದಲ್ಲಿ ಸುಮಾರು 45 ಕೋಟಿ ಮಂದಿ ಪ್ರತಿ ವರ್ಷ 20,000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸರಕಾರ ಅಂದಾಜಿಸಿದೆ. ಇದು ಸರಕಾರದ ಅಧಿಕೃತ ಅಂಕಿಅಂಶವಾಗಿದ್ದು, ಅನಧಿಕೃತವಾಗಿ ದುಡ್ಡುಗಳನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆ ಇನ್ನೂ ಭಯಾನಕವಾಗಿದೆ. ಈ ಆನ್‌ಲೈನ್ ಗೇಮಿಂಗ್‌ನಿಂದ ಸರಕಾರಕ್ಕೆ ಆದಾಯ ಬರುತ್ತದೆೆಯಾದರೂ, ಜನರಿಗೆ ಆಗುವ ನಷ್ಟಕ್ಕೆ ಹೋಲಿಸಿದರೆ, ಸರಕಾರ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಎದುರಿಸುತ್ತಿದೆ. ಒಂದು ರೀತಿಯಲ್ಲಿ ಜನಕಲ್ಯಾಣಕ್ಕಾಗಿ ಮಾಡಿದ ವೆಚ್ಚವೆಲ್ಲವೂ ಈ ಜೂಜಿನಿಂದಾಗಿ ಸೋರಿಕೆಯಾಗುತ್ತಿದೆ. ಜನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದಕ್ಕೆ ತಳ್ಳಲ್ಪಡುತ್ತಿದ್ದಾರೆ.

ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಬೃಹತ್ ಉದ್ಯಮ ರೂಪವನ್ನು ಪಡೆದಿದೆ. ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮದಲ್ಲಿ 3.7 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದ್ದು, 2029ರ ವೇಳೆಗೆ ಇದು 9.1 ಶತಕೋಟಿ ಡಾಲರ್‌ಗೇರುವ ಅಂದಾಜಿತ್ತು. ಸದ್ಯ ಈ ಉದ್ಯಮದಲ್ಲಿ 2 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಯುತ್ತಿದ್ದು ವಾರ್ಷಿಕ 31 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ 20 ಸಾವಿರ ಕೋಟಿಯಷ್ಟು ಹಣ ನೇರ ಹಾಗೂ ಪರೋಕ್ಷ ತೆರಿಗೆ ರೂಪದಲ್ಲಿ ಪಾವತಿಯಾಗುತ್ತಿದೆ. ಇದೀಗ ಈ ಮಸೂದೆ ಈ ಉದ್ಯಮಕ್ಕೆ ಬಹುದೊಡ್ಡ ತಡೆಯಾಗಲಿದೆ. ಮೇಲ್ನೋಟಕ್ಕೆ ಇದೊಂದು ಉದ್ಯಮದಂತೆ ಭಾಸವಾದರೂ ಆಳದಲ್ಲಿ ಇದು ದೇಶದ ಒಟ್ಟು ಆರ್ಥಿಕತೆಯನ್ನು ಹಿಂದಕ್ಕೆ ಒಯ್ಯುತ್ತಿದೆ. ಬೃಹತ್ ಉದ್ಯಮಿಗಳು, ನಟರು, ಕ್ರೀಡಾ ತಾರೆಯರು ಇದರಲ್ಲಿ ಕೋಟಿ ಕೋಟಿ ಬಾಚಿಕೊಂಡರೆ, ಸಣ್ಣ ಪುಟ್ಟ ಉದ್ಯೋಗದಲ್ಲಿರುವ, ಉದ್ಯಮಗಳನ್ನು ನಡೆಸುತ್ತಿರುವ ಮಧ್ಯಮ, ಮೇಲ್‌ಮಧ್ಯಮ ವರ್ಗದ ಕೋಟ್ಯಂತರ ಜನರು ನೇರವಾಗಿ ಬಲಿಪಶುಗಳಾಗುತ್ತಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ, ಖಿನ್ನತೆಗಳಿಗೆ ಈ ಆನ್‌ಲೈನ್ ಗೇಮಿಂಗ್‌ಗಳ ಕೊಡುಗೆ ಬಹುದೊಡ್ಡದು. ವಿದ್ಯಾರ್ಥಿಗಳು ಎಳವೆಯಲ್ಲೇ ಇದಕ್ಕೆ ಬಲಿಬಿದ್ದು ಅಪರಾಧ ಚಟುವಟಿಕೆಗೆ ಇಳಿಯುವುದು ಸಾಮಾನ್ಯ ಎಂಬಂತಾಗಿದೆ. ಆನ್‌ಲೈನ್ ಬೆಟ್ಟಿಂಗ್‌ಗಳು ಕ್ರಿಕೆಟ್‌ನಂತಹ ಕ್ರೀಡೆಯ ಉದ್ದೇಶವನ್ನೇ ವಿರೂಪಗೊಳಿಸಿದೆ. ಕ್ರಿಕೆಟ್ ಇಂದು ಮೈದಾನದಲ್ಲಿ ಆಡುವ ಕ್ರೀಡೆಯಾಗಿ ಉಳಿದಿಲ್ಲ. ಅದು ಆನ್‌ಲೈನ್‌ಗಳಲ್ಲಿ ಕೋಟಿಗಟ್ಟಳೆ ಹಣ ಹೂಡಿಕೆಯ ದಂಧೆಯಾಗಿದೆ. ಕ್ರಿಕೆಟ್ ಬಗ್ಗೆ ಆಸಕ್ತಿ ವ್ಯಕ್ತಪಡಿಸುವವರೆಲ್ಲ ಕ್ರೀಡಾ ಪ್ರೇಮಿಗಳು ಎಂದು ಭಾವಿಸಬೇಕಾಗಿಲ್ಲ. ಅವರೆಲ್ಲ ಒಳಗೊಳಗೆ ಬೆಟ್ಟಿಂಗ್‌ಗೆ ಬಲಿಯಾದವರು. ಕ್ರಿಕೆಟ್‌ನ ಸೋಲು ಗೆಲುವುಗಳು ಸಾವು ಬದುಕಿನ ಪ್ರಶ್ನೆಯಾಗುತ್ತಿರುವುದು ಇದೇ ಕಾರಣಕ್ಕಾಗಿ.

ಈ ನಿಟ್ಟಿನಲ್ಲಿ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ವಿಧೇಯಕ ಸದ್ಯದ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದ ಆದಾಯದ ಮೂಲಕ್ಕೆ ಇದರಿಂದ ಭಾರೀ ಧಕ್ಕೆಯಾಗುತ್ತದೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ ಆದಾಯವನ್ನು ಮುಂದಿಟ್ಟುಕೊಂಡು ವಿಧೇಯಕವನ್ನು ವಿರೋಧಿಸುವುದು ವಿವೇಕವಲ್ಲ. ಇದೇ ಸಂದರ್ಭದಲ್ಲಿ ಅಧಿಕೃತ ಗೇಮಿಂಗ್‌ಗಳ ಹೆಸರಿನಲ್ಲಿ ಕೆಲವು ಜೂಜುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ. ಹಾಗೆಯೇ ನೈಜ ಹಣ ಅಲ್ಲದೆ ಕ್ರಿಪ್ಟೋ ಕರೆನ್ಸಿ ಸೇರಿದಂತೆ ಇನ್ನಿತರ ಮೂಲಗಳ ಮೂಲಕ ಜೂಜುಗಳನ್ನು ಮುಂದುವರಿಯುವ ಸಾಧ್ಯತೆಗಳೂ ಎದ್ದು ಕಾಣುತ್ತವೆ. ಸರಕಾರ ಚಾಪೆಯಡಿಯಲ್ಲಿ ನುಸುಳಿದರೆ, ಈ ಕಂಪೆನಿಗಳು ರಂಗೋಲಿಯಡಿಯಲ್ಲಿ ನುಸುಳುತ್ತವೆ. ಕೆಲವೊಮ್ಮೆ ಜೂಜು ಕಂಪೆನಿಗಳು ಈ ವಿಧೆೇಯಕದ ದೌರ್ಬಲ್ಯಗಳನ್ನು ಬಳಸಿಕೊಂಡು ಹೊಸ ರೂಪದಲ್ಲಿ ತಮ್ಮ ಆಟದ ದಂಧೆಯನ್ನು ಮಾರುಕಟ್ಟೆಗೆ ಇಳಿಸಬಹುದು. ಇಷ್ಟಕ್ಕೂ ಆನ್‌ಲೈನ್ ಗೇಮಿಂಗ್‌ಗಳು ಬೆರಳ ತುದಿಯಲ್ಲೇ ಇರುವುದರಿಂದಾಗಿ, ಜನರು ಈ ಚಟವನ್ನು ಸುಲಭದಲ್ಲಿ ಬಿಡಲಾರರು. ಒಂದು ಇಲ್ಲವಾದಾಗ ಇನ್ನೊಂದನ್ನು ಅರಸಿಕೊಂಡು ಹೋಗುವ ಸಾಧ್ಯತೆಗಳೂ ಇವೆ. ಎಲ್ಲ ರೀತಿಯ ಅಧಿಕೃತ ಜೂಜುಗಳನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ನಿಯಂತ್ರಿಸಿದಾಗ ಮಾತ್ರ ಜನರನ್ನು ಈ ಆನ್‌ಲೈನ್ ಕುಣಿಕೆಯಿಂದ ಪಾರು ಮಾಡಬಹುದೇನೋ?.

ಇದೇ ಸಂದರ್ಭದಲ್ಲಿ ಸಂಪೂರ್ಣ ಮದ್ಯ ನಿಷೇಧದ ಬಗ್ಗೆಯೂ ಸರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಬೇಕು. ರಾಜ್ಯಗಳು ಅಬಕಾರಿ ಹಣದ ಮೂಲವನ್ನೇ ಅವಲಂಬಿಸಿಕೊಂಡಿದೆ ಎನ್ನುವುದನ್ನು ಇಟ್ಟುಕೊಂಡು ಮದ್ಯ ಮಾರಾಟವನ್ನು ಸಮರ್ಥಿಸಿಕೊಳ್ಳುವುದು ತಪ್ಪು. ಇಂದು ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಮೇಲೆತ್ತುವ ಪ್ರಯತ್ನ ನಡೆಸುತ್ತಿದೆಯಾದರೂ, ಅದಕ್ಕೆ ಈ ಮದ್ಯ ಸೇವನೆ ಬಹುದೊಡ್ಡ ಅಡ್ಡಿಯಾಗಿದೆ. ಒಂದುಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಅದನ್ನು ಕಿತ್ತು ಕೊಂಡರೆ ಅಭಿವೃದ್ಧಿ ಹೇಗೆ ಸಾಧ್ಯ? ಸಾರಾಯಿ ಸೇವನೆಯ ನೇರ, ಪರೋಕ್ಷ ಸಂತ್ರಸ್ತರು ಮಹಿಳೆಯರೇ ಆಗಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮದ್ಯ ಮಾರಾಟ ದೊಡ್ಡ ತೊಡಕಾಗಿದೆ. ಈ ನಿಟ್ಟಿನಲ್ಲಿ ಆನ್‌ಲೈನ್ ಗೇಮಿಂಗ್‌ನಷ್ಟೇ ಅಪಾಯಕಾರಿಯಾಗಿರುವ ಮದ್ಯವನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುವ ಧೈರ್ಯ ತೋರಿಸಬೇಕಾಗಿದೆ. ಈ ಮೂಲಕ ಬೇರೆ ಬೇರೆ ರೂಪಗಳಲ್ಲಿ ಸಮಾಜವನ್ನು ಕಾಡುತ್ತಿರುವ ಹಲವು ಅಪರಾಧಗಳನ್ನು ನಿಯಂತ್ರಿಸುವುದಕ್ಕೆ ಸರಕಾರಕ್ಕೆ ಸಾಧ್ಯವಾಗಬಹುದು. ಅಭಿವೃದ್ಧಿಗಾಗಿ ಸರಕಾರ ಮೀಸಲಿಟ್ಟ ಹಣ ಪರಿಣಾಮಕಾರಿಯಾಗಿ ಜನರನ್ನು ತಲುಪಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X