Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಆಪರೇಷನ್ ಸಿಂಧೂರ: ಬೇಜವಾಬ್ದಾರಿ ಯಾರದು?

ಆಪರೇಷನ್ ಸಿಂಧೂರ: ಬೇಜವಾಬ್ದಾರಿ ಯಾರದು?

ವಾರ್ತಾಭಾರತಿವಾರ್ತಾಭಾರತಿ30 July 2025 8:15 AM IST
share
ಆಪರೇಷನ್ ಸಿಂಧೂರ: ಬೇಜವಾಬ್ದಾರಿ ಯಾರದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಆಪರೇಷನ್ ಸಿಂಧೂರ’ ಲೋಕಸಭೆಯೊಳಗೆ ಕ್ಷಿಪಣಿ ಹಾರಾಟಗಳಿಗೆ ಕಾರಣವಾಗಿದೆ. ವಿರೋಧ ಪಕ್ಷ-ಆಡಳಿತ ಪಕ್ಷದ ನಡುವಿನ ಈ ಮಾತಿನ ಸಮರ ಯಾವ ಮಧ್ಯವರ್ತಿಯ ಸಂಧಾನಗಳಿಲ್ಲದೆ ತಡರಾತ್ರಿಯವರೆಗೂ ಮುಂದುವರಿಯಿತು. ಕೊನೆಗೂ ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳ ಬಾಣಗಳನ್ನು ರಾಷ್ಟ್ರೀಯ ಭದ್ರತೆಯ ಗುರಾಣಿಯನ್ನು ಮುಂದಿಟ್ಟು ಸರಕಾರ ಎದುರಿಸಿತು. ‘ನಮ್ಮ ಗುರಿಗಳು ದೊಡ್ಡದಾಗಿರುವಾಗ ತುಲನಾತ್ಮಕವಾಗಿ ಸಣ್ಣ ವಿಷಯಗಳ ಮೇಲೆ ನಾವು ಗಮನವನ್ನು ಕೇಂದ್ರೀಕರಿಸಬಾರದು’ ಎಂದು ರಕ್ಷಣಾ ಸಚಿವರು ಉಪನ್ಯಾಸವನ್ನು ನೀಡಿ, ಏನನ್ನು ಕೇಳಬಹುದು, ಕೇಳಬಾರದು ಎನ್ನುವ ಕುರಿತ ಪಟ್ಟಿಯನ್ನು ವಿರೋಧ ಪಕ್ಷಗಳಿಗೆ ನೀಡಿದರು. ಅರ್ಥಪೂರ್ಣ ಮತ್ತು ಜವಾಬ್ದಾರಿಯುತ ಪ್ರಶ್ನೆಗಳನ್ನು ಕೇಳುವಲ್ಲಿ ಪ್ರತಿಪಕ್ಷಗಳು ವಿಫಲವಾಗುತ್ತಿವೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆ ಬಳಿಕದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕುರಿತಂತೆ ಸದನದಲ್ಲಿ ಸ್ಪಷ್ಟೀಕರಣ ನೀಡಬೇಕಾದವರು ಪ್ರಧಾನಿ ಮೋದಿ. ಆದರೆ ಅವರು ವಿರೋಧ ಪಕ್ಷಗಳ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಾ ಬಂದಿದ್ದಾರೆ. ರಕ್ಷಣಾ ಸಚಿವರು ಮೊದಲು ಪ್ರಧಾನಿ ಮೋದಿಯವರಿಗೆ ಅವರ ಜವಾಬ್ದಾರಿಗಳನ್ನು ನೆನಪಿಸಿಕೊಡಬೇಕಾಗಿತ್ತು. ಪಹಲ್ಗಾಮ್ ದಾಳಿ ನಡೆದಾಗ ಮೋದಿಯವರು ವಿದೇಶದಿಂದ ನೇರವಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಭಾಷಣ ಮಾಡಿದ್ದು, ಜವಾಬ್ದಾರಿಯುತ ಪ್ರಧಾನಿಯ ಲಕ್ಷಣ ಆಗಿಯೇ ಇರಲಿಲ್ಲ. ಆಪರೇಷನ್ ಸಿಂಧೂರದಂತಹ ಕಾರ್ಯಾಚರಣೆಗೆ ಕಾರಣವಾದ ಪಹಲ್ಗಾಮ್ ದಾಳಿಯ ಹಿಂದಿರುವ ವೈಫಲ್ಯಗಳನ್ನು ಈವರೆಗೆ ಯಾರೂ ಒಪ್ಪಿಕೊಂಡೇ ಇಲ್ಲ. ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿ ಯಾರ ವಿರುದ್ಧವೂ ಈವರೆಗೆ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇದೇ ಸಂದರ್ಭದಲ್ಲಿ ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ನಲ್ ಸೋಫಿಯಾರನ್ನು ‘ಭಯೋತ್ಪಾದಕರ ಸೋದರಿ’ ಎಂದು ಅವರದೇ ಪಕ್ಷದ ಸಚಿವನೊಬ್ಬ ಕರೆಯುತ್ತಾರೆೆ. ಇದು ಜವಾಬ್ದಾರಿಯ ಲಕ್ಷಣವೇ? ಇದೀಗ ಆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ವಿಪರ್ಯಾಸವೆಂದರೆ, ಈತ ಹೇಳಿಕೆ ನೀಡಿ ತಿಂಗಳು ಕಳೆದಿದೆಯಾದರೂ ಈವರೆಗೆ ಸಚಿವನ ವಿರುದ್ಧ ಪಕ್ಷ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಕನಿಷ್ಠ ಸಚಿವ ಸ್ಥಾನದಿಂದ ಆತನನ್ನು ವಜಾಗೊಳಿಸಬೇಕಾಗಿತ್ತು. ಅದೂ ನಡೆದಿಲ್ಲ. ಈ ಸಚಿವನ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿರುವ ಬಗ್ಗೆ ರಾಜನಾಥ ಸಿಂಗ್ ಈವರೆಗೆ ಯಾವುದೇ ಕಳವಳವನ್ನೂ ವ್ಯಕ್ತಪಡಿಸಿಲ್ಲ. ‘ಆಪರೇಷನ್ ಸಿಂಧೂರ’ದಿಂದ ದೇಶಕ್ಕಾದ ನಷ್ಟ ಎಷ್ಟು ಎಂದು ಪ್ರಶ್ನೆಯನ್ನು ಕೇಳಿದಾಗ ಮಾತ್ರ ರಕ್ಷಣಾ ಸಚಿವರಿಗೆ ‘ರಾಷ್ಟ್ರೀಯ ಭದ್ರತೆ’ಯ ನೆನಪಾಗುತ್ತದೆ.

ಆಪರೇಷನ್ ಸಿಂಧೂರದ ಬಗ್ಗೆ ಸಂಸತ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿಗೆ, ‘ಪಹಲ್ಗಾಮ್ ದಾಳಿಯಲ್ಲಿ ಭಾಗವಹಿಸಿದ ಉಗ್ರರರನ್ನು ಹತ್ಯೆ ಮಾಡಿದ್ದೇವೆ’ ಎಂಬ ಹೇಳಿಕೆಯನ್ನು ಗೃಹ ಸಚಿವರು ಘೋಷಿಸಿದ್ದಾರೆ. ಅದರ ಪೂರ್ಣ ವಿವರ ಇನ್ನಷ್ಟೇ ಬಹಿರಂಗವಾಗಬೇಕು. ಆದರೆ ಪಹಲ್ಗಾಮ್ ದಾಳಿಯನ್ನು ತಡೆಯಲು ಸಾಧ್ಯವಿರಲಿಲ್ಲವೆ? ಎಂದರೆ ಉತ್ತರ ಸ್ಪಷ್ಟ. ಆ ಪ್ರವಾಸಿ ಸ್ಥಳದಲ್ಲಿ ಇಬ್ಬರು ಸೈನಿಕರನ್ನು ಗಸ್ತಿಗೆ ನಿಲ್ಲಿಸಿದ್ದರೂ ದಾಳಿಯನ್ನು ತಡೆಯಲು ಸಾಧ್ಯವಿತ್ತು. ಯಾಕೆಂದರೆ, ಆ ದಾಳಿ ನಡೆದಿರುವುದು ಕೇವಲ ನಾಲ್ಕು ಉಗ್ರಗಾಮಿಗಳಿಂದ. ಅದೇನೂ ಆತ್ಮಹತ್ಯೆ ದಾಳಿಯಾಗಿರಲಿಲ್ಲ. ಅವರು ಬಂದೂಕುಗಳಿಂದ ಜನರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ, ಅಲ್ಲಿ ಭದ್ರತಾ ಸಿಬ್ಬಂದಿಯಿದ್ದಿದ್ದರೆ, ಸಾವುಗಳ ಸಂಖ್ಯೆ ಇಳಿಕೆಯಾಗುತ್ತಿತ್ತು ಮಾತ್ರವಲ್ಲ, ಉಗ್ರಗಾಮಿಗಳು ಸ್ಥಳದಲ್ಲೇ ಹತರಾಗುತ್ತಿದ್ದರು. ‘ಆಪರೇಷನ್ ಸಿಂಧೂರ’ದ ಹೆಸರಿನಲ್ಲಿ ನಾಶ, ನಷ್ಟಗಳು ಈ ಮೂಲಕ ತಪ್ಪುತ್ತಿತ್ತು. ಸರಕಾರ ಒಂದೋ ಕಾಶ್ಮೀರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಬೇಕಾಗಿತ್ತು. ಇಲ್ಲವೇ ಅವರಿಗೆ ಭದ್ರತೆ ನೀಡಬೇಕಾಗಿತ್ತು. ಪ್ರವಾಸಿಗರನ್ನು ಸರಕಾರವೇ ಉಗ್ರರಿಗೆ ಬಲಿಕೊಟ್ಟಂತಾಗಿದೆ. ಪಹಲ್ಗಾಮ್ ದಾಳಿಗೆ ಸಂಬಂಧಿಸಿ ಭದ್ರತಾ ವೈಫಲ್ಯದ ಹೊಣೆಯನ್ನು ಲೆಫ್ಟಿನೆಂಟ್ ಗವರ್ನರ್ ಹೊತ್ತುಕೊಂಡಿದ್ದಾರೆ. ಅಂದರೆ ಪರೋಕ್ಷವಾಗಿ ಕೇಂದ್ರ ಸರಕಾರವೇ ಇದಕ್ಕೆ ಹೊಣೆಯೆಂದಾಯಿತು. ಪಹಲ್ಗಾಮ್ ದಾಳಿಯ ಸಾವುನೋವಿಗಾಗಿ ಪ್ರಧಾನಿ ಮೋದಿ ದೇಶದ ಕ್ಷಮೆಯಾಚಿಸಬೇಕಾಗಿತ್ತು. ಆದರೆ, ಈವರೆಗೆ ಆ ಜವಾಬ್ದಾರಿಯನ್ನು ಅವರು ನಿಭಾಯಿಸಿಲ್ಲ.

ಆಪರೇಷನ್ ಸಿಂಧೂರವನ್ನು ತನ್ನ ಹೆಗ್ಗಳಿಕೆಯೆಂಬಂತೆ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಇದರಿಂದ ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಪಾಠ ಕಲಿಸಲಾಯಿತು ಎನ್ನುವುದು ದೇಶಕ್ಕೆ ಅದು ಮನವರಿಕೆ ಮಾಡಿಲ್ಲ. ಉಗ್ರರ ನೆಲೆಗಳನ್ನು ನಾಶ ಮಾಡಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಆದರೆ ಗಡಿಯಲ್ಲಿ ಉಗ್ರರ ಜೊತೆಗೆ ಈಗಲೂ ಕಾಳಗ ಮುಂದುವರಿದಿದೆ. ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ಸಂಘರ್ಷಗಳಲ್ಲಿ, ನಾಶ ನಷ್ಟದಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನವನ್ನು ಧೂಳೀಪಟ ಮಾಡುತ್ತೇವೆ ಎಂಬಂತಹ ಹೇಳಿಕೆಯನ್ನು ಸರಕಾರ ನೀಡಿತ್ತು. ಆದರೆ ಉಭಯ ದೇಶಗಳ ಕೈಯಲ್ಲಿ ಅಣ್ವಸ್ತ್ರವಿದೆ. ಯುದ್ಧ ಮೊದಲಿನಷ್ಟು ಸಲೀಸಲ್ಲ ಎನ್ನುವುದು ಸರಕಾರಕ್ಕೆ ಗೊತ್ತಿರಬೇಕಾಗಿತ್ತು. ಯುದ್ಧದಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪರಿಸ್ಥಿತಿ ಕೈಮೀರುವ ಮೊದಲೇ ಉಭಯ ದೇಶಗಳು ಸಂಘರ್ಷದಿಂದ ಹಿಂದೆ ಸರಿದದ್ದು ಒಳ್ಳೆಯದೇ ಆಯಿತು. ಆದರೆ, ಅಮೆರಿಕದ ಆದೇಶದಂತೆ ಯುದ್ಧ ನಿಂತಿತು ಎನ್ನುವ ವದಂತಿಯನ್ನು ನಿರಾಕರಿಸಲಾಗುವುದಿಲ್ಲ. ಅಮೆರಿಕದ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಅದನ್ನು ನಿರಾಕರಿಸುತ್ತಾ ಬಂದಿದೆ. ಹಾಗಾದರೆ ಹಠಾತ್ತಾಗಿ ಭಾರತ ಯುದ್ಧದಿಂದ ಯಾಕೆ ಹಿಂದೆ ಸರಿಯಿತು? ಎನ್ನುವ ಪ್ರಶ್ನೆಯೇಳುತ್ತದೆ. ಆಪರೇಷನ್ ಸಿಂಧೂರದಿಂದ ಪಾಕಿಸ್ತಾನಕ್ಕೆ ಯಾವುದೇ ರೀತಿಯಲ್ಲಿ ಹಿನ್ನಡೆಯಾಗಿಲ್ಲ. ಈ ಕಾರ್ಯಾಚರಣೆಯ ಬಳಿಕವೂ ಪಾಕಿಸ್ತಾನವನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದೆ. ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ದೊಡ್ಡ ಮೊತ್ತದ ಸಾಲವನ್ನೂ ನೀಡಿದೆ. ಇದು ಭಾರತಕ್ಕಾಗಿರುವ ಹಿನ್ನಡೆಯೇ ಅಲ್ಲವೆ? ಯುದ್ಧದಲ್ಲಿ ಪಾಕಿಸ್ತಾನದಂತೆ ಭಾರತವೂ ಕಳೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಈ ಯುದ್ಧದಿಂದ ಭಾರತ ಸಾಧಿಸಿದ್ದೇನು? ಎಲ್ಲಕ್ಕಿಂತ ಮುಖ್ಯವಾಗಿ, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತ ಒಂಟಿಯಾಗಿತ್ತು. ಪಾಕಿಸ್ತಾನಕ್ಕೆ ನೆರೆಯ ಚೀನಾ ಮತ್ತು ತುರ್ಕಿಯ ಬಹಿರಂಗವಾಗಿಯೇ ಬೆಂಬಲ ನೀಡಿತ್ತು. ಭಾರತಕ್ಕೆ ಇಂತಹ ಸ್ಥಿತಿ ಯಾಕೆ ಒದಗಿತು? ವಿದೇಶಾಂಗ ನೀತಿಯಲ್ಲಿ ಭಾರತ ಸಂಪೂರ್ಣ ಎಡವಿದೆ ಎಂದು ಇದರ ಅರ್ಥವಲ್ಲವೆ? ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತಿಳಿಸಲು ಒಂದು ನಿಯೋಗವನ್ನು ರಚಿಸುವ ಸ್ಥಿತಿ ಭಾರತಕ್ಕೆ ನಿರ್ಮಾಣವಾಯಿತು. ಆದರೆ ಈ ನಿಯೋಗ ‘ಎಂಕು ಪಣಂಬೂರಿಗೆ ಹೋದ’ಂತಾಯಿತು. ನಿಯೋಗದಲ್ಲಿದ್ದ ಓರ್ವ ಸಂಸದನಂತೂ ಅಮೆರಿಕದಲ್ಲಿ ದೇಶದ ಮರ್ಯಾದೆಯನ್ನು ಹರಾಜು ಹಾಕಿದ ಬಗ್ಗೆ ಮಾದ್ಯಮಗಳಲ್ಲಿ ವರದಿಗಳೂ ಬಂದವು.

ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರದ ಕುರಿತಂತೆ ಸರಕಾರ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ನುಣುಚಿಕೊಳ್ಳದೆ ಉತ್ತರಿಸುವ ಮೂಲಕ ತಾನು ಎಷ್ಟು ಜವಾಬ್ದಾರಿಯುತನಾಗಿದ್ದೇನೆ ಎನ್ನುವುದನ್ನು ದೇಶಕ್ಕೆ ಸ್ಪಷ್ಟಪಡಿಸಬೇಕು. ಪ್ರಶ್ನೆಗಳನ್ನು ದಮನಿಸುವುದೆಂದರೆ, ಪರೋಕ್ಷವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಮ್ಮ ವೀರ ಯೋಧರ ತ್ಯಾಗ ಬಲಿದಾನಗಳಿಗೆ ಮಾಡುವ ಅಪಚಾರವಾಗಿದೆ ಎನ್ನುವುದನ್ನು ಸರಕಾರ ಮರೆಯಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X