Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ಗೃಹ...

ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ಗೃಹ ಸಚಿವರೇಕೆ ಮೌನ?

ವಾರ್ತಾಭಾರತಿವಾರ್ತಾಭಾರತಿ9 July 2025 6:51 AM IST
share
ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ಗೃಹ ಸಚಿವರೇಕೆ ಮೌನ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಪರಾಧ ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದು ಕಾಲದಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಕಾರಣಗಳಿಗಾಗಿ ದೇಶ ವಿದೇಶಗಳನ್ನು ಸೆಳೆಯುತ್ತಿದ್ದ ಜಿಲ್ಲೆ, ಈಗ ಗಾಂಜಾ, ಡ್ರಗ್ಸ್, ಕೋಮುಗಲಭೆ, ಗುಂಪುಹತ್ಯೆ, ನಕಲಿ ಗೋರಕ್ಷಕರಿಗಾಗಿ ಸುದ್ದಿಯಲ್ಲಿದೆ. ಉನ್ನತ ಶಿಕ್ಷಣಕ್ಕಾಗಿ ಈ ಜಿಲ್ಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಬಂಡವಾಳ ಹೂಡುವುದಕ್ಕೆ ಬೃಹತ್ ಉದ್ಯಮಿಗಳು ಅಂಜುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಜಿಲ್ಲೆಯ ಗಾಯಗಳಿಗೆ ಬರೆ ಎಳೆಯುವಂತೆ, ಅಳಿದುಳಿದ ವರ್ಚಸ್ಸಿಗೂ ಧಕ್ಕೆ ತರುವಂತಹ ಸರಣಿ ಹತ್ಯೆಗೆ ಸಂಬಂಧಿಸಿದ ಗಂಭೀರ ಆರೋಪವೊಂದು ಮುನ್ನೆಲೆಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅತ್ಯಾಚಾರ, ಹತ್ಯೆಗಳಂತಹ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿ ಇರುವುದಾಗಿ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ಸಲ್ಲಿಸಿದ್ದಾನೆ. ಇದು ಬರೇ ಬಾಯಿ ಮಾತಿನ ಆರೋಪವಲ್ಲ. ಈ ವ್ಯಕ್ತಿ ತನ್ನ ಪರ ವಕೀಲರ ಮೂಲಕವೇ ಈ ದೂರನ್ನು ಸಲ್ಲಿಸಿದ್ದಾನೆ. "ನನಗೆ ನಿರಂತರ ಪ್ರಾಣ ಬೆದರಿಕೆಯೊಡ್ಡಿ ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಅನೇಕ ಮೃತದೇಹಗಳು ಮತ್ತು ಸಾಕ್ಷ್ಯಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಿಸಿದ್ದಾರೆ. ನನ್ನಿಂದ ಹೂತು ಹಾಕಿಸಿರುವ ಮೃತದೇಹಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರ ತೆಗೆಸುವಂತೆ ಮನವಿ ಮಾಡುತ್ತೇನೆ'' ಎಂದು ದೂರುದಾರ ಹೇಳಿದ್ದಾನೆ. ನೂರಾರು ಮೃತದೇಹಗಳನ್ನು ವಿಲೇವಾರಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿರುವುದಲ್ಲದೆ, ಎದೆ ಝಲ್ಲೆನಿಸುವಂತಹ ಹಲವು ವಿಷಯಗಳನ್ನು ಈ ದೂರಿನಲ್ಲಿ ಹಂಚಿಕೊಂಡಿದ್ದಾನೆ.

ದೂರುದಾರ ಸ್ವತಃ ತಾನೂ ಅನಿವಾರ್ಯ ಒತ್ತಡಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ ದೂರಿಗೆ ಮಹತ್ವ ಬಂದಿದೆ. "ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರ ಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ'' ಎಂದು ದೂರಿನಲ್ಲಿ ಹೇಳಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ದನದ ತಲೆ ಬುರುಡೆ ಪತ್ತೆಯಾದರೆ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು, ಗೃಹ ಸಚಿವರವರೆಗೆ ಎಲ್ಲರೂ ಜಾಗೃತರಾಗುತ್ತಾರೆ. ಕಂಡ ಕಂಡ ಬಡಪಾಯಿಗಳ ಮನೆಗಳ ಮೇಲೆ ದಾಳಿಗಳು ನಡೆಯುತ್ತವೆ. ಯಾರೋ ಫೇಸುಬುಕ್‌ನಲ್ಲಿ 'ಗುಂಪು ಹತ್ಯೆಯಲ್ಲಿ ಇಂಥವರನ್ನು ಯಾಕೆ ಬಂಧಿಸಿಲ್ಲ?' ಎಂದು ಕೇಳಿದರೆ ತಕ್ಷಣ ಆತನನ್ನು ಠಾಣೆಗೆ ಕರೆಸಿ 'ನಿನ್ನಲ್ಲಿ ಸಾಕ್ಷಿ ಇದೆಯೆ?' ಎಂದು ಬೆದರಿಸಿ, ಆತನಿಂದ ಕ್ಷಮೆಯಾಚನೆ ಮಾಡಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ಆದರೆ ಇಲ್ಲಿ ದೂರು ನೀಡಿದಾತ ನೂರಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಮಾತನಾಡುತ್ತಿದ್ದಾನೆ. ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿದ್ದಾರಾದರೂ, ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಜಿಲ್ಲೆಯಲ್ಲಿ ತರುಣಿಯರು, ವ್ಯಕ್ತಿಗಳು ನಾಪತ್ತೆಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ ಕುಟುಂಬದವರೆಲ್ಲ ಇದೀಗ ಆತಂಕ ಪಡುವಂತಾಗಿದೆ. ನಾಪತ್ತೆಯಾಗಿರುವ ತಮ್ಮ ಕುಟುಂಬ ಸದಸ್ಯರೂ ಆತ ಪ್ರಸ್ತಾಪಿಸಿದ ಮೃತದೇಹಗಳಲ್ಲಿ ಸೇರಿರಬಹುದೇ ಎಂದು ಅನುಮಾನಿಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಈ ನಿಗೂಢ ಹತ್ಯೆಗಳನ್ನು ಮಾಡಿದವರು ಯಾರು? ಯಾಕಾಗಿ ಮಾಡಿದರು? ಎಂಬಿತ್ಯಾದಿ ಪ್ರಶ್ನೆಗಳು ಇನ್ನೂ ಉತ್ತರವಿಲ್ಲದೆ ಬಿದ್ದುಕೊಂಡಿವೆ. ಇದಕ್ಕೆ ಉತ್ತರಿಸಬೇಕಾಗಿರುವ ಪೊಲೀಸ್ ಇಲಾಖೆ ನಿಗೂಢ ಮೌನವನ್ನು ತಾಳಿದೆ.

ದೂರು ನೀಡುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತು ದೂರುದಾರನನ್ನು ವಶಕ್ಕೆ ತೆಗೆದುಕೊಂಡು ಆತನಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗಿತ್ತು. ದೂರುದಾರ ನೀಡಿದ ಹೇಳಿಕೆಯಲ್ಲಿ ಒಂದಿಷ್ಟು ನಿಜವಿದೆ ಎಂದಾದರೆ, ಆತನ ಜೀವಕ್ಕೆ ಅಪಾಯವಿದೆ. ಈಗಾಗಲೇ ಆತ ತಾನು ಹೂತು ಹಾಕಲು ನೆರವಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆದರೆ ಯಾರ ನಿರ್ದೇಶನದಂತೆ ಈ ಕೃತ್ಯ ಎಸಗಿದ್ದೇನೆ ಎನ್ನುವುದರ ವಿವರಗಳನ್ನು ಇನ್ನಷ್ಟೇ ನೀಡಬೇಕಾಗಿದೆ. ಈ ಸರಣಿ ಹತ್ಯೆಯ ಹಿಂದೆ ಗಣ್ಯ ವ್ಯಕ್ತಿಗಳು ಇದ್ದಾರೆ ಎಂದಾದರೆ ಅವರು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಆತನಿಗೆ ತೊಂದರೆ ಎಸಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದುದರಿಂದ ಮೊದಲು ಆತನ ಜೀವಕ್ಕೆ ಭದ್ರತೆಯನ್ನು ನೀಡುವುದು ಪೊಲೀಸರ ಕರ್ತವ್ಯವಾಗಿದೆ. ಆತ ದೂರಿನಲ್ಲಿ ಹೇಳಿರುವಂತೆ ನೂರಕ್ಕೂ ಅಧಿಕ ಹತ್ಯೆಗಳು ನಡೆದಿವೆ. ಆದುದರಿಂದ, ಈತನ ದೂರಿನಲ್ಲಿರುವ ಸತ್ಯಾಸತ್ಯತೆಯನ್ನು ಮನಗಂಡು, ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ದೂರುದಾರನನ್ನು ಘಟನೆ ನಡೆದ ಸ್ಥಳಕ್ಕೆ ಕೊಂಡೊಯ್ದು ಮಹಜರು ನಡೆಸಬೇಕು. ಆತ ಹೇಳಿದ ಸ್ಥಳಗಳಲ್ಲಿ ಮೃತದೇಹಗಳ ಅವಶೇಷಗಳಿವೆಯೆ? ಎನ್ನುವುದನ್ನು ಕಂಡುಕೊಳ್ಳಬೇಕು. ಅಸ್ಥಿಪಂಜರಗಳು ಪತ್ತೆಯಾದರೆ ಅವುಗಳ ಡಿಎನ್ಎ ಪರೀಕ್ಷೆ ನಡೆಯಬೇಕು ಮತ್ತು ಆತ ಯಾರ ಆದೇಶದಂತೆ ಈ ಕೃತ್ಯಗಳನ್ನು ಎಸಗಿದ್ದ ಎನ್ನುವುದರ ಬಗ್ಗೆಯೂ ಗಂಭೀರ ತನಿಖೆ ನಡೆಯಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೂತಕದ ಮೌನ ಆವರಿಸಿದೆ. ಆರೋಪಗಳು ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರೂ ಗೃಹ ಸಚಿವರು ಈವರೆಗೆ ಮೌನ ಮುರಿದಿಲ್ಲ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರುಣಿಯರು ಒಬ್ಬೊಬ್ಬರಾಗಿ ನಾಪತ್ತೆಯಾಗುತ್ತಿದ್ದಂತೆಯೇ ಸಂಘಪರಿವಾರ 'ಲವ್ ಜಿಹಾದ್‌ಗೆ ಹಿಂದೂ ತರುಣಿಯರು ಬಲಿಯಾಗುತ್ತಿದ್ದಾರೆ' ಎಂದು ಪ್ರತಿಭಟನೆ ನಡೆಸಲು ಶುರುಹಚ್ಚಿದ್ದರು. ಬಿಜೆಪಿ ನಾಯಕರು ಲವ್ ಜಿಹಾದ್ ನಡೆಯುತ್ತಿದೆ ಎಂದು 'ದ್ವೇಷ ಭಾಷಣಗಳನ್ನು' ಮಾಡಿದ್ದರು. ಪೊಲೀಸರು ತನಿಖೆಯ ಆಳಕ್ಕಿಳಿಯುತ್ತಿದ್ದಂತೆಯೇ 'ಸಯನೈಡ್ ಮೋಹನ' ಎಂಬಾತ ಈ 'ಲವ್ ಜಿಹಾದ್'ನ ಹಿಂದಿರುವುದು ಬೆಳಕಿಗೆ ಬಂತು. ಮೋಹನ್ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ ಬಡ ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗುವ ಭರವಸೆ ನೀಡುತ್ತಿದ್ದ. ಬಳಿಕ ಪರವೂರಿಗೆ ಕರೆದೊಯ್ದು ಸಯನೈಡ್ ನೀಡಿ ಕೊಂದು ಅವರ ಒಡವೆಗಳನ್ನು ದೋಚಿ ಊರಿಗೆ ಮರಳಿ ಸಭ್ಯನಂತೆ ಬದುಕುತ್ತಿದ್ದ. ಸಂಘಪರಿವಾರ 'ಲವ್‌ ಜಿಹಾದ್' ವಿರುದ್ಧ ಪ್ರತಿಭಟನೆ ಮಾಡಿದಾಗ ಆತನೂ ಅದರಲ್ಲಿ ಸೇರಿಕೊಂಡಿದ್ದನಂತೆ. ಹೀಗೆ ಸುಮಾರು 20ಕ್ಕೂ ಅಧಿಕ ತರುಣಿಯರನ್ನು ಆತ ಸಯನೈಡ್ ನೀಡಿ ಕೊಂದು ಹಾಕಿದ್ದ. ಇದೀಗ ಧರ್ಮಸ್ಥಳದ ಸರಣಿ ಹತ್ಯೆ ಆರೋಪ ಮತ್ತೆ ಸಯನೈಡ್ ಮೋಹನನ ಪ್ರಕರಣವನ್ನು ನೆನಪಿಸುವಂತೆ ಮಾಡಿದೆ. ಒಂದು ವೇಳೆ ಇದೊಂದು ಸುಳ್ಳು ದೂರೇ ಆಗಿದ್ದರೆ ದೂರುದಾರನ ಮೇಲೆಯೇ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಯಾಕೆಂದರೆ ಈ ದೂರಿನ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವರ್ಚಸ್ಸನ್ನು ಕೆಡಿಸುವ ಹುನ್ನಾರವಿದೆ. ಆದರೆ ಇಲ್ಲಿ ದೂರುದಾರ 'ತಾನು ಕೂಡ ಕೃತ್ಯದಲ್ಲಿ ಅನಿವಾರ್ಯವಾಗಿ ಭಾಗಿಯಾಗಿದ್ದೇನೆ' ಎಂದು ಒಪ್ಪಿಕೊಂಡಿದ್ದಾನೆ. ಕೃತ್ಯ ಸಾಬೀತಾದರೆ ದೂರುದಾರನೂ ಅಪರಾಧಿಯಾಗಬೇಕಾಗುತ್ತದೆ. ತನ್ನ ಭವಿಷ್ಯವನ್ನು ಅಪಾಯಕ್ಕೊಡ್ಡಿ ಅನಗತ್ಯವಾಗಿ ಇಂತಹದೊಂದು ದೂರನ್ನು ಯಾರೂ ನೀಡಲಾರರು. ಆದುದರಿಂದ ದೂರಿನಲ್ಲಿರುವ ಸತ್ಯಾಸತ್ಯತೆ ಬಯಲಾಗಲೇಬೇಕು. ತಕ್ಷಣ ಪೊಲೀಸ್ ಇಲಾಖೆ ಮತ್ತು ಗೃಹಸಚಿವರು ಈ ಸರಣಿ ಹತ್ಯೆ ಆರೋಪದ ಕುರಿತಂತೆ ತಮ್ಮ ಮೌನವನ್ನು ಮುರಿಯಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X