Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಭೀಕರ ಪ್ರವಾಹ: ನೇಪಾಳ ತತ್ತರ

ಭೀಕರ ಪ್ರವಾಹ: ನೇಪಾಳ ತತ್ತರ

ವಾರ್ತಾಭಾರತಿವಾರ್ತಾಭಾರತಿ2 Sept 2026 8:59 AM IST
share
ಭೀಕರ ಪ್ರವಾಹ: ನೇಪಾಳ ತತ್ತರ

ನಮ್ಮ ನೆರೆರಾಷ್ಟ್ರ ನೇಪಾಳದಲ್ಲಿ ದಿಢೀರ್ ಪ್ರವಾಹದಿಂದ ಸಂಭವಿಸಿದ ಭೀಕರ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಏರುತ್ತಲೇ ಇದೆ. ವಿನಾಶಕಾರಿ ಪ್ರವಾಹ ಸಂಭವಿಸಿ ವಾರ ಕಳೆದರೂ ಸಾವು-ನೋವು ಮತ್ತು ಆಸ್ತಿಪಾಸ್ತಿ ನಷ್ಟದ ಸ್ಪಷ್ಟ ಚಿತ್ರಣ ಇನ್ನೂ ಹೊರಬಿದ್ದಿಲ್ಲ. 1,000ಕ್ಕೂ ಅಧಿಕ ಮಂದಿಯ ಮೃತದೇಹಗಳು ಪತ್ತೆಯಾಗಿರುವುದಾಗಿ ವರದಿಯಾಗಿವೆ. ಬದುಕುಳಿದವರು ಮತ್ತು ಅವಶೇಷಗಳಡಿ ಸಿಲುಕಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆಯಾದರೂ ಪ್ರತಿಕೂಲ ಪರಿಸ್ಥಿತಿಯಿಂದ ಆ ಕೆಲಸಕ್ಕೆ ಅನೇಕ ಬಗೆಯ ಸವಾಲುಗಳು ಎದುರಾಗಿವೆ. ನಾಪತ್ತೆಯಾದವರ ಕುಟುಂಬಗಳು ಹಾಗೂ ಬಂಧು-ಬಳಗಕ್ಕೆ ಕ್ಷಣವೊಂದು ಯುಗವಾಗಿ ಬದಲಾಗಿದೆ. ಅವರ ತಲ್ಲಣ, ಆತಂಕಗಳು ಪದಗಳಿಗೆ ನಿಲುಕಲಾರವು. ನಾಪತ್ತೆಯಾದವರಲ್ಲಿ ಭಾರತೀಯರೂ ಸೇರಿದ್ದಾರೆ. ವಿವಿಧ ದೇಶಗಳ ಪ್ರವಾಸಿಗರೂ ಇದ್ದಾರೆ. ಈ ದುರಂತಕ್ಕೆ ಸ್ಪಷ್ಟ ಕಾರಣಗಳನ್ನು ಕಂಡುಕೊಳ್ಳಲು ಸಮಯ ಬೇಕಾಗಬಹುದು. ಆದರೆ, ಈ ದುರಂತದ ಹಿಂದೆ ಹವಾಮಾನ ವೈಪರೀತ್ಯವು ಪ್ರಕೃತಿಯ ಮೇಲೆ ಅದರಲ್ಲೂ ಹಿಮಾಲಯದ ಸೂಕ್ಷ್ಮ ಪರ್ವತಶ್ರೇಣಿಯ ಮೇಲೆ ಉಂಟುಮಾಡಿರುವ ತೀವ್ರ ಪರಿಣಾಮವು ಮಾತ್ರ ಸ್ಪಷ್ಟವಾಗಿದೆ. ಮನುಕುಲ ಎಚ್ಚೆತ್ತುಕೊಳ್ಳಲು ಪ್ರಕೃತಿ ಎಚ್ಚರಿಕೆಯ ಘಂಟೆ ಬಾರಿಸಿದೆ ಎಂದು ಭಾವಿಸಬಹುದು.

ನೇಪಾಳ-ಚೀನಾ ಗಡಿಯಲ್ಲಿನ ಪರ್ವತದ ಇಳಿಜಾರಿನಿಂದ ಮಂಜುಗಡ್ಡೆ- ಹೆಬ್ಬಂಡೆಗಳು ಕುಸಿದ ಕಾರಣ ನದಿಗಳ ಹರಿವು ಹಠಾತ್ ಏರಿ ಅದು ಮೃತ್ಯುಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಕಾರಣ ಏನೇ ಇರಲಿ, ಭೋರ್ಗರೆವ ನದಿಗಳ ಉಬ್ಬರಕ್ಕೆ ಕಟ್ಟಡಗಳು, ವಾಹನಗಳು, ಸೇತುವೆಗಳು ಕೊಚ್ಚಿಹೋಗಿವೆ. ಪ್ರವಾಹದಿಂದಾಗಿ ಜಲವಿದ್ಯುತ್ ಘಟಕಗಳಿಗೆ ಹೆಚ್ಚು ಹಾನಿಯಾಗಿದೆ. 13 ಜಲವಿದ್ಯುತ್ ಘಟಕಗಳು ಮತ್ತು ಒಂದು ಸೌರ ವಿದ್ಯುತ್ ಘಟಕ ಸಂಪೂರ್ಣವಾಗಿ ನಾಶವಾಗಿವೆ. ನಿರ್ಮಾಣ ಹಂತದಲ್ಲಿರುವ ಕೆಲವು ಜಲ ವಿದ್ಯುತ್ ಘಟಕಗಳೂ ಹಾನಿಗೊಳಗಾಗಿವೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ನಿರ್ಮಾಣ ಹಂತದಲ್ಲಿರುವ ಸುರಂಗಗಳಲ್ಲಿ ನೂರಾರು ಕಾರ್ಮಿಕರು ಸಿಲುಕಿದ್ದರು. ಅವರಲ್ಲಿ ಕೆಲವರನ್ನು ರಕ್ಷಿಸಲಾಗಿದೆ. ಉಳಿದವರ ಸ್ಥಿತಿ ಏನಾಗಿದೆಯೋ ಎಂಬ ಆತಂಕ ಎದುರಾಗಿದೆ. ಪ್ರವಾಹ ಸಂಭವಿಸಿದ ಆಗಸ್ಟ್ 26ರಿಂದ ಈವರೆಗೂ ಕೆಲವರು ಸಂಪರ್ಕಕ್ಕೇ ಸಿಕ್ಕಿಲ್ಲ ಎಂದು ನೇಪಾಳದಿಂದ ಬಂದಿರುವ ವರದಿಗಳು ಹೇಳಿವೆ. ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರ ಪತ್ತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಗೆ ಭಾರತ ಮತ್ತು ಚೀನಾದ ರಕ್ಷಣಾ ತಂಡಗಳು ನೆರವು ನೀಡುತ್ತಿರುವುದು ಸಕಾಲಿಕ ಸ್ಪಂದನ.

‘‘ಈ ನೈಸರ್ಗಿಕ ದುರಂತದ ಪರಿಣಾಮಗಳನ್ನು ಊಹಿಸುವುದು ಕಷ್ಟಸಾಧ್ಯ, ಸ್ಥಿತಿ ಹೃದಯವಿದ್ರಾವಕವಾಗಿದೆ’’ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಹೇಳಿರುವ ಮಾತು ಪ್ರವಾಹದ ಭೀಕರ ಚಿತ್ರಣವನ್ನು ಕಟ್ಟಿಕೊಡುತ್ತದೆ. ಆಗಸ್ಟ್ 26ರಂದು ರಸುವಾ ಜಿಲ್ಲೆಯ ಲಂಗ್‌ತಾಂಗ್ ಪ್ರದೇಶದಲ್ಲಿನ ಮಂಜುಗಡ್ಡೆಯ ಬೃಹತ್ ರಾಶಿ, ಬಂಡೆಗಳು ಅಲ್ಲಿನ ಮಣ್ಣುಸಮೇತ 5,200 ಮೀಟರ್ ಎತ್ತರ ಪ್ರದೇಶದಿಂದ ಲ್ಹೆಂಡೆ ನದಿಯನ್ನು ಪ್ರವೇಶಿಸಿದವು. ನಂತರ ಕೆಳಮುಖವಾಗಿ ಹರಿದು ಬೋಟೆಕೋಶಿ- ತ್ರಿಶೂಲಿ ನದಿ ಕಾರಿಡಾರ್‌ನಲ್ಲಿ ಭಾರೀ ಪ್ರವಾಹವನ್ನು ಸೃಷ್ಟಿಸಿದವು ಎಂದು ನೇಪಾಳದ ಕೆಲವು ವಿಜ್ಞಾನಿಗಳು ತಾವು ರೂಪಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮಂಜಿನ ಬೃಹತ್ ಬಂಡೆಗಳು 22 ಕಿ.ಮೀ. ಅಂತರವನ್ನು ಬರೀ ಏಳು ನಿಮಿಷಗಳಲ್ಲಿ ಕ್ರಮಿಸಿವೆ ಎಂಬ ಅಂಶವೂ ಅವರ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ವಿಪತ್ತಿಗೆ ವೇಗ ಹೆಚ್ಚು. ಕಟ್ಟುವುದಕ್ಕೆ ಬಹಳ ಸಮಯ ಬೇಕು. ಆದರೆ ನಾಶ ಮಾಡಲು ಕ್ಷಣ ಸಾಕು ಎಂಬುದನ್ನು ಪ್ರಕೃತಿಯು ಮನುಕುಲಕ್ಕೆ ಮತ್ತೆ ನೆನಪಿಸಿದೆ. ಪ್ರಕೃತಿಯ ಸಾಮರ್ಥ್ಯದ ಎದುರು ಮಾನವಜೀವಿ ಮತ್ತು ಮನುಷ್ಯ ನಿರ್ಮಿಸಿದ ಸ್ಥಾವರಗಳು ಎಷ್ಟು ದುರ್ಬಲ ಎಂಬುದನ್ನು ಸಹ ಈ ದುರಂತ ಮತ್ತೊಮ್ಮೆ ತೋರಿಸಿದೆ.

ಹಿಮನದಿಗೆ ಸಂಬಂಧಿಸಿದ ಅವಘಡಗಳು ಆಗಿಂದಾಗ ವರದಿಯಾಗುತ್ತಲೇ ಇವೆ. ಇತ್ತೀಚಿನ ಮೂರು ದಶಕಗಳಲ್ಲಿ ನೇಪಾಳ ತನ್ನ ಹಿಮ ಆವರಣದ ಮೂರನೇ ಒಂದು ಭಾಗವನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಹಿಮಾಲಯದಾದ್ಯಂತ ಹಿಮನದಿಗಳ ಸಂರಚನೆಯಲ್ಲಿ ವ್ಯತ್ಯಯಗಳು ಆಗಿರುವುದನ್ನು ತಜ್ಞರು ಗುರುತಿಸಿದ್ದಾರೆ. ಈ ಪರ್ವತ ಶ್ರೇಣಿಯಾದ್ಯಂತ ಸಣ್ಣಪುಟ್ಟ ಪರಿಸರ ಅವಘಡಗಳು ಪ್ರತೀ ದಿನ ಸಂಭವಿಸುತ್ತಲೇ ಇರುತ್ತವೆ. ಈ ಪ್ರದೇಶದಲ್ಲಿ 7,500 ಹಿಮನದಿ ಸರೋವರಗಳು ಮತ್ತು 15,000 ಹಿಮನದಿಗಳಿವೆ. ಅವುಗಳ ಸ್ಥಿತಿಗತಿ ಬಗ್ಗೆ ನಿರಂತರವಾಗಿ ನಿಗಾ ವಹಿಸುವುದು ಕಷ್ಟಸಾಧ್ಯ. ಆದರೂ ಮೇಲ್ವಿಚಾರಣೆಯ ಅಗತ್ಯವನ್ನು ಅವಘಡಗಳು ಒತ್ತಿಹೇಳುತ್ತಿವೆ. ಅದಕ್ಕಾಗಿ ಒಂದು ಸಮರ್ಪಕವಾದ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ. ಪರಿಸರವನ್ನು ಉಳಿಸುವ, ಸಂರಕ್ಷಿಸುವ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಬೇಕಾದ ಅಗತ್ಯವನ್ನು ಈ ಬಗೆಯ ಅವಘಡಗಳು ಸಾರುತ್ತಿವೆ. ಈ ಪರ್ವತ ಶ್ರೇಣಿಯ ಸ್ಥಿತಿಗತಿಗಳ ಅಧ್ಯಯನ, ಮೇಲ್ವಿಚಾರಣೆ ಮತ್ತು ಸಂರಕ್ಷಣೆಯ ಕಾರ್ಯದಲ್ಲಿ ಹಿಮಾಲಯದ ಜೊತೆ ಬೆಸೆದುಕೊಂಡಿರುವ ರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ಸಮನ್ವಯ ಸಾಧ್ಯವಾಗಬೇಕು. ಪ್ರವಾಹದಿಂದ ತೊಂದರೆಗೆ ಒಳಗಾಗಿರುವವರ ರಕ್ಷಣೆ, ಅವರಿಗೆ ಪರಿಹಾರ ಮತ್ತು ಪುನರ್‌ವಸತಿ ಕಲ್ಪಿಸುವುದಕ್ಕಷ್ಟೇ ಸರಕಾರಗಳು ಮುತುವರ್ಜಿ ವಹಿಸಿದರೆ ಸಾಲದು. ಅವಘಡಗಳನ್ನು ತಡೆಯಲು ಬೇಕಾದ ದೀರ್ಘಕಾಲಿಕ ಯೋಜನೆಗಳು ಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಣೆಕಟ್ಟು, ಜಲವಿದ್ಯುತ್‌ನಂಥ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಕುರಿತು ಮರುಚಿಂತನೆ ಆಗಬೇಕು. ಇಂತಹ ಯೋಜನೆಗಳಿಗೆ ಪ್ರೋತ್ಸಾಹ ನೀಡಬಾರದು. ಪರಿಸರ ರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ ಭಾರೀ ಅನಾಹುತಗಳಿಗೆ ದಾರಿ ತೆಗೆಯುತ್ತದೆ ಎಂಬ ಎಚ್ಚರಿಕೆಯು ಸರಕಾರಗಳಿಗೆ ಸದಾ ನೆನಪಿನಲ್ಲಿ ಇರಬೇಕು.

Tags

EditorialfloodNepal
share
ವಾರ್ತಾಭಾರತಿ
ವಾರ್ತಾಭಾರತಿ
Next Story
X