Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಆಝಾದ್‌ಗೆ ಗುಂಡು!

ಆಝಾದ್‌ಗೆ ಗುಂಡು!

ವಾರ್ತಾಭಾರತಿವಾರ್ತಾಭಾರತಿ5 July 2023 12:12 AM IST
share
ಆಝಾದ್‌ಗೆ ಗುಂಡು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆಝಾದ್ ಸಮಾಜ ಪಕ್ಷದ ಸ್ಥಾಪಕ, ಭೀಮ್ ಆರ್ಮಿಯ ಮುಖಂಡ ಚಂದ್ರಶೇಖರ ಆಝಾದ್ ಅಲಿಯಾಸ್ ರಾವಣ್ ಅವರ ಹತ್ಯೆಯ ಪ್ರಯತ್ನವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯಕ್ಕೆ ಆಝಾದ್ ಅವರು ಅಪಾಯದಿಂದ ಪಾರಾಗಿದ್ದಾರಾದರೂ, ಭವಿಷ್ಯದಲ್ಲಿ ಅವರ ಮೇಲೆ ಇಂತಹ ಹತ್ಯಾಯತ್ನಗಳು ಇನ್ನಷ್ಟು ನಡೆಯುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ ದಲಿತರ ಪ್ರತಿರೋಧದ ಸಂಕೇತವಾಗಿ ಆಝಾದ್ ಬೆಳೆಯುತ್ತಿರುವುದು ಮತ್ತು ಅದನ್ನು ತಡೆಯಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿರುವುದೇ ಈ ಕೃತ್ಯಕ್ಕೆ ಮುಖ್ಯ ಕಾರಣ. ಈ ದಾಳಿ ಕೇವಲ ಆಝಾದ್ ಅವರ ಮೇಲೆ ನಡೆದಿರುವುದಲ್ಲ. ದೇಶದಲ್ಲಿ ಶೋಷಿತರ ಪ್ರತಿರೋಧದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ ಇದಾಗಿದೆ. ಕಾನೂನಿನ ದುರ್ಬಳಕೆಯ ಮೂಲಕ, ರಾಜಕೀಯ ತಂತ್ರಗಾರಿಕೆಯ ಮೂಲಕ ಆಝಾದ್ ಅವರನ್ನು ಬಗ್ಗು ಬಡಿಯಲು ವಿಫಲವಾದ ಶಕ್ತಿಗಳು ಇದೀಗ ಅಂತಿಮವಾಗಿ ಅವರನ್ನು ದೈಹಿಕವಾಗಿ ಮುಗಿಸುವುದಕ್ಕೆ ಸಿದ್ಧತೆ ನಡೆಸುತ್ತಿವೆ. ಶೋಷಿತ ಸಮುದಾಯಗಳು ಜಾತಿ, ಧರ್ಮ, ಪಕ್ಷಗಳನ್ನು ಮರೆತು ಸಂಘಟಿತರಾಗಿ ಈ ಕೃತ್ಯವನ್ನು ವಿರೋಧಿಸಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತನ್ನ ವಿರುದ್ಧದ ಎಲ್ಲ ಪ್ರತಿರೋಧಗಳನ್ನು ಬಂದೂಕಿನ ಮೂಲಕವೇ ದಮನಿಸುವ ಕಾರ್ಯಕ್ಕೆ ವ್ಯವಸ್ಥೆ ಇಳಿಯುವ ಸಾಧ್ಯತೆಯಿದೆ.

ಉತ್ತರ ಪ್ರದೇಶದ ಠಾಕೂರ್ ಸಮುದಾಯವು ದಲಿತರ ಮೇಲೆ ಎಸಗುತ್ತಾ ಬಂದ ದೌರ್ಜನ್ಯಗಳನ್ನು ಚಂದ್ರಶೇಖರ ಆಝಾದ್ ಭೀಮ್ ಆರ್ಮಿಯ ಮೂಲಕ ಎದುರಿಸಿದರು. ದಲಿತರು ಮೀಸೆ ಇಟ್ಟರೆ, ದಲಿತರು ಕುದುರೆಯೇರಿದರೆ ಹಲ್ಲೆ ನಡೆಸುವ ಠಾಕೂರ್ ಸಮುದಾಯದ ಕ್ರೌರ್ಯಗಳಿಗೆ ಅದೇ ಭಾಷೆಯಲ್ಲಿ ಉತ್ತರಿಸುವುದಕ್ಕಾಗಿಯೇ ಅವರು ಅಂಬೇಡ್ಕರ್ ಹೆಸರಿನಲ್ಲಿ ಯುವಕರ ಸೇನೆಯೊಂದನ್ನು ಕಟ್ಟಿದರು. 2015ರಲ್ಲಿ ಚಂದ್ರಶೇಖರ್ ಆಝಾದ್ ಮೂಲಕ ಈ ಆರ್ಮಿಯ ಸ್ಥಾಪನೆಯಾಯಿತು. ಸತೀಶ್‌ಕುಮಾರ್, ವಿನಾಯಕ್ ರತನ್ ಸಿಂಗ್ ಅವರು ಆಝಾದ್ ಬೆನ್ನಿಗೆ ನಿಂತರು. ಹಿಂಸೆಗೆ ಪ್ರತಿ ಹಿಂಸೆ ತಪ್ಪೇ ಆಗಿದ್ದರೂ, ಕಾನೂನಿನ ನಿಷ್ಕ್ರಿಯತೆ ಇಂತಹದೊಂದು ಸೇನೆ ಕಟ್ಟುವ ಅನಿವಾರ್ಯತೆಯನ್ನು ಆಝಾದ್‌ಗೆ ನಿರ್ಮಿಸಿತು. ಮುಖ್ಯವಾಗಿ ಭೀಮ್ ಆರ್ಮಿಯ ಮೂಲಕ ದಲಿತ ಯುವಕರಿಗೆ ಆತ್ಮವಿಶ್ವಾಸವನ್ನು ನೀಡುವ, ಅವರಲ್ಲಿ ಆತ್ಮಾಭಿಮಾನವನ್ನು ತುಂಬುವ ಕೆಲಸವನ್ನು ಮಾಡಿದರು. ಭೀಮ್ ಆರ್ಮಿ ಕಾಲದ ಅಗತ್ಯವಾಗಿತ್ತು. ಯುವಕರ ನಡುವೆ ಭೀಮ್‌ಆರ್ಮಿ ಅದೆಷ್ಟು ವೇಗವಾಗಿ ಹಬ್ಬಿತು ಎಂದರೆ, ಬರೇ ಏಳುವರ್ಷಗಳಲ್ಲಿ ಆಝಾದ್ ಸಂಘಟನೆಗೆ ರಾಜಕೀಯ ವ್ಯಕ್ತಿಗಳು ಅಂಜಬೇಕಾದ ಸ್ಥಿತಿ ನಿರ್ಮಾಣವಾಯಿತು. ಆಝಾದ್ ತನ್ನ ಚಳವಳಿ, ಹೋರಾಟವನ್ನು ಕೇವಲ ದಲಿತ ಸಮುದಾಯಗಳಿಗಷ್ಟೇ ಸೀಮಿತಗೊಳಿಸಲಿಲ್ಲ. ನಿಧಾನಕ್ಕೆ ಅವರು ಇತರ ಶೋಷಿತ ಸಮುದಾಯದ ಸಂಕಟಗಳಿಗೂ ಧ್ವನಿಯಾದರು. ಸಿಎಎ ವಿರುದ್ಧದ ಹೋರಾಟಗಳಲ್ಲಿ ಆಝಾದ್ ಪಾತ್ರ ಬಹುದೊಡ್ಡದು. ಈ ದೇಶದ ಅಲ್ಪಸಂಖ್ಯಾತರ ಸಮಸ್ಯೆಗಳ ವಿರುದ್ಧವೂ ಅವರು ಬೀದಿಗಿಳಿದರು. ಆ ಕಾರಣಕ್ಕಾಗಿಯೇ ಅವರು ಪದೇ ಪದೇ ದೇಶದ್ರೋಹ ಆರೋಪದಲ್ಲಿ ಬಂಧಿಸಲ್ಪಟ್ಟರು. ಕಾನೂನಿನ ದುರ್ಬಳಕೆಯ ಮೂಲಕ ಆಝಾದ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ಹಲವು ಬಾರಿ ಜೈಲಿಗೆ ತಳ್ಳಿದರಾದರೂ ಅವರು ಹೋರಾಟದ ಕಣದಿಂದ ಹಿಂದೆ ಸರಿಯಲಿಲ್ಲ. ಇಂದು ಭೀಮ್ ಆರ್ಮಿ ಕೇವಲ ಸಂಘಟನೆಯಾಗಿ ಉಳಿಯದೆ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. 2020ರ ಮಾರ್ಚ್ ತಿಂಗಳಲ್ಲಿ ಅವರು ‘ಆಝಾದ್ ಸಮಾಜ್ ಪಾರ್ಟಿ’ಯನ್ನು ಘೋಷಿಸಿದರು. ಉತ್ತರ ಪ್ರದೇಶದಲ್ಲಿ ದಲಿತರ ನೋವು ಸಂಕಟಗಳಿಗೆ ಸ್ಪಂದಿಸಲು ವಿಫಲವಾಗುತ್ತಿರುವ ಬಿಎಸ್‌ಪಿಗೆ ಪರ್ಯಾಯವಾಗಿ ತನ್ನನ್ನು ರೂಪಿಸುವ ಪ್ರಯತ್ನದಲ್ಲಿದೆ ಆಝಾದ್ ಘೋಷಿಸಿರುವ ಪಕ್ಷ.

ಉತ್ತರ ಪ್ರದೇಶದಲ್ಲಿ ಸದ್ಯಕ್ಕೆ ಬಿಎಸ್‌ಪಿಯನ್ನು ವೌನವಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾನ್ಶೀರಾಂ ಅವರ ಕನಸಿನ ಕೂಸಾಗಿದ್ದ ಬಿಎಸ್‌ಪಿ ಉತ್ತರ ಪ್ರದೇಶದ ಬಹುಜನರನ್ನು ಸಂಘಟಿಸುವಲ್ಲಿ ಬಹುತೇಕ ಯಶಸ್ವಿಯಾಗಿತ್ತು ಮಾತ್ರವಲ್ಲ, ರಾಷ್ಟ್ರಮಟ್ಟದ ರಾಜಕೀಯ ಶಕ್ತಿಯಾಗಿ ದಮನಿತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿತ್ತು. ಆದರೆ ಕಾನ್ಶೀರಾಮ್ ಅವರ ಕನಸನ್ನು ಬಲಿಕೊಟ್ಟು, ಮಾಯಾವತಿ ಅಧಿಕಾರಕ್ಕೇರುವ ಆತುರದಲ್ಲಿ ಬಹುಜನವನ್ನು ‘ಸರ್ವಜನ’ವಾಗಿಸಲು ಮುಂದಾದರು. ಬ್ರಾಹ್ಮಣ್ಯ ರಾಜಕೀಯಕ್ಕೆ ಸುಲಭದಲ್ಲಿ ಬಲಿಯಾದರು. ರೋಹಿತ್ ವೇಮುಲಾ ಆತ್ಮಹತ್ಯೆ, ಉನಾದಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಥಾರಸ್‌ನಲ್ಲಿ ಅತ್ಯಾಚಾರ ಇವೆಲ್ಲವುಗಳ ವಿರುದ್ಧ ಬೀದಿಗಿಳಿದು ಆಂದೋಲನ ರೂಪಿಸಬೇಕಾಗಿದ್ದ ಮಾಯಾವತಿ ಇವೆಲ್ಲ ತನಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ತನ್ನ ಅರಮನೆಯ ಎಲ್ಲ ಬಾಗಿಲು, ಕಿಟಕಿಗಳನ್ನು ಮುಚ್ಚಿ ಕೂತರು. ರೋಹಿತ್ ವೇಮುಲಾ ಹೋರಾಟದ ಸಂದರ್ಭದಲ್ಲಿ, ಹೋರಾಟಗಾರರ ವಿರುದ್ಧವೇ ಹೇಳಿಕೆಯನ್ನು ನೀಡಿದರು. ಮಾಯಾವತಿಯವರನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎನ್ನುವ ಆರೋಪಗಳಿಗೆ ಪುಷ್ಟಿ ನೀಡುವಂತೆ ಅವರು ಪ್ರಗತಿರ ಹೋರಾಟಗಾರರ ವಿರುದ್ಧ ಮಾತನಾಡತೊಡಗಿದರು. ಸಿಎಎ ವಿರುದ್ಧ ಹೋರಾಟದಲ್ಲೂ ಮಾಯಾವತಿ ಅಲ್ಪಸಂಖ್ಯಾತರ ಸಂಕಟಗಳಿಗೆ ಧ್ವನಿಯಾಗಲಿಲ್ಲ. ಆದರೆ ಯಾವಾಗ, ಆಝಾದ್ ನೂತನ ಪಕ್ಷವನ್ನು ಸ್ಥಾಪಿಸಿದರೋ ಆಗ, ‘ದಲಿತರನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ’ ಎಂಬ ಅರ್ಥದ ಹೇಳಿಕೆಗಳನ್ನು ನೀಡಿದರು. ಆಝಾದ್ ಅವರ ಪಕ್ಷ ಬಿಎಸ್‌ಪಿಯ ಜೊತೆಗೆ ಮೈತ್ರಿಯನ್ನು ಬಯಸಿದಾಗಲೂ ಅದನ್ನು ತಿರಸ್ಕರಿಸಿದರು. ಇದೀಗ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಆಝಾದ್ ನಡೆಸುತ್ತಿದ್ದಾರೆ. ಕಾನ್ಶೀರಾಮ್ ಅವರ ತತ್ವಾದರ್ಶಗಳ ಬೆಳಕಿನಲ್ಲಿ ತನ್ನ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ ಬಿಎಸ್‌ಪಿಯ ಬಾಯಿ ಮುಚ್ಚಿಸಲು ಯಶಸ್ವಿಯಾಗಿರುವ ಬಿಜೆಪಿಗೆ ಹಂತಹಂತವಾಗಿ ಬೆಳೆಯುತ್ತಿರುವ ಆಝಾದ್ ಪಕ್ಷ ಆತಂಕವನ್ನು ಸೃಷ್ಟಿಸಿದೆ. ಮಾಯಾವತಿಯ ಬಾಯಿ ಮುಚ್ಚಿಸಿದಷ್ಟು ಸುಲಭದಲ್ಲಿ ಆಝಾದ್ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ ಎನ್ನುವುದು ಸಂಘಪರಿವಾರಕ್ಕೂ ಸ್ಪಷ್ಟವಾಗಿದೆ. ಉತ್ತರ ಪ್ರದೇಶದ ನಿಯಂತ್ರಣ ಕ್ರಿಮಿನಲ್‌ಗಳ ಕೈಯಲ್ಲಿದೆ. ಇಲ್ಲಿ, ಪೊಲೀಸರ ಸಮ್ಮುಖದಲ್ಲೇ ಕೊಲೆಗಳು ನಡೆಯುತ್ತಿವೆ. ನ್ಯಾಯಾಲಯದ ಆವರಣದಲ್ಲೇ ಹತ್ಯೆಳಾಗಿವೆ. ಪೊಲೀಸ್ ಇಲಾಖೆ ಸಾಲು ಸಾಲು ಎನ್‌ಕೌಂಟರ್‌ಗಳ ಮೂಲಕ ಸುದ್ದಿಯಲ್ಲಿದೆ. ಪೊಲೀಸರು ಮತ್ತು ಪಾತಕಿಗಳ ನಡುವಿನ ಅಂತರ ದಿನದಿಂದ ದಿನಕ್ಕೆ ತೆಳುವಾಗುತ್ತಿದೆ. ಬಿಎಸ್‌ಪಿ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವಂತೆಯೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ಉತ್ತರ ಪ್ರದೇಶದಲ್ಲಿದೆ. ಇಂತಹ ಸಂದರ್ಭದಲ್ಲಿ ಚಂದ್ರಶೇಖರ್ ಆಝಾದ್‌ರ ಸಂಘಟನೆ ಜಾತಿವಾದಿಗಳಿಗೆ, ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದೆ. ಆದುದರಿಂದಲೇ, ಚಂದ್ರಶೇಖರ್ ಅವರ ಭೀಮ್ ಆರ್ಮಿ ಮತ್ತು ಆಝಾದ್ ಪಕ್ಷವನ್ನು ಕೋವಿಯಿಂದ ಮುಗಿಸುವ ಪ್ರಯತ್ನ ನಡೆದಿದೆ. ಮುಂದಿನ ಚುನಾವಣೆಗೆ ನಡೆಯುತ್ತಿರುವ ತಯಾರಿಯ ಭಾಗವಾಗಿಯೇ ದುಷ್ಕರ್ಮಿಗಳು ಆಝಾದ್‌ರನ್ನು ಮುಗಿಸಲು ಮುಂದಾಗಿದ್ದಾರೆ.

ಆಝಾದ್ ಅವರ ಚಿಂತನೆ, ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ದಲಿತರು, ಅಲ್ಪಸಂಖ್ಯಾತರು, ಶೋಷಿತರ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ತನ್ನ ಜೀವವನ್ನು ಒತ್ತೆಯಿಟ್ಟು ಅವರು ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಪೊಲೀಸರು ದೇಶದ್ರೋಹದ ಕಾನೂನಿನಲ್ಲಿ ಬಂಧಿಸುತ್ತಾರೆ ಎಂದು ಗೊತ್ತಿದ್ದೂ ಸಿಎಎ ವಿರುದ್ಧ ಮುಸ್ಲಿಮ್ ಯುವಕರ ಜೊತೆಗೆ ನಿಂತರು. ಇದೀಗ ಅವರನ್ನು ಕೊಲ್ಲುವ ಮೂಲಕ ಪ್ರಭುತ್ವದ ವಿರುದ್ಧದ ಪ್ರತಿರೋಧವನ್ನು ಇಲ್ಲವಾಗಿಸುವ ಪ್ರಯತ್ನವೊಂದು ನಡೆಯುತ್ತಿದೆ. ಇದನ್ನು ಶೋಷಿತ ಸಮುದಾಯದ ಸರ್ವರು ಜಾತಿ, ಧರ್ಮ, ಪಕ್ಷ ಭೇದ ಮರೆತು ಸಂಘಟಿತವಾಗಿ ಪ್ರತಿಭಟಿಸಬೇಕಾಗಿದೆ. ಬಿಎಸ್‌ಪಿಯೂ ಕೂಡ ಈ ಬಾರಿ ತನ್ನ ಭಿನ್ನಮತವನ್ನು ಬದಿಗಿಟ್ಟು ಆಝಾದ್ ಜೊತೆಗೆ ನಿಲ್ಲಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X