Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಕನಸು

ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಕನಸು

ವಾರ್ತಾಭಾರತಿವಾರ್ತಾಭಾರತಿ8 July 2023 12:00 AM IST
share
ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಕನಸು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬಿಜೆಪಿಯ ದ್ವೇಷ ರಾಜಕಾರಣವನ್ನು ಬೀಳಿಸಲೆಂದು ಚುನಾವಣೆಯ ಸಂದರ್ಭದಲ್ಲಿ ತೋಡಿದ ಗ್ಯಾರಂಟಿ ಕಂದರಗಳನ್ನು ತುಂಬುವಲ್ಲಿ ಸಿದ್ದರಾಮಯ್ಯ ಸರಕಾರ ಹೇಗೆ ಯಶಸ್ವಿಯಾಗುತ್ತದೆ ಎನ್ನುವುದರ ಆಧಾರದ ಮೇಲೆ ಈ ಬಾರಿಯ ಬಜೆಟ್‌ನ ಸೋಲು ಗೆಲುವು ನಿಂತಿತ್ತು. ‘ಗ್ಯಾರಂಟಿ ಕಿರೀಟ’ ತಲೆಗೇರಿಸಿಕೊಂಡೇ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ಕಿರೀಟದ ಭಾರವನ್ನು ತಾಳಿಕೊಳ್ಳಲಾಗದೆ ಸರಕಾರ ಉರುಳಿ ಬೀಳುತ್ತದೆ ಎನ್ನುವುದು ವಿರೋಧಪಕ್ಷಗಳ ನಿರೀಕ್ಷೆಯಾಗಿತ್ತು. ಆದರೆ ನೂತನ ಸರಕಾರದ ಮೊದಲ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಕಿರೀಟವನ್ನು ಉಳಿಸಿದ್ದಾರೆ. ವಿರೋಧ ಪಕ್ಷಗಳ ಬಾಯಿಯನ್ನು ತಾತ್ಕಾಲಿಕವಾಗಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಯಾರಂಟಿಯ ಹೊರೆಯ ಭಾರ ಇತರ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಭಾವಿಸಲಾಗಿತ್ತು. ಆದರೆ ಸಾಮಾಜಿಕ ವಲಯಗಳನ್ನು ಎಲ್ಲಿಯೂ ನಿರ್ಲಕ್ಷಿಸದೆ, ‘ಸಮಪಾಲು-ಸಮಬಾಳು’ ಘೋಷಣೆಯನ್ನು ಅನುಷ್ಠಾನಗೊಳಿಸುವ ಗರಿಷ್ಠ ಪ್ರಯತ್ನವನ್ನು ಬಜೆಟ್ ಮಾಡಿದೆ.

ಈ ಹಿಂದಿನ ಬಜೆಟ್‌ನ ತಪ್ಪು ಹೆಜ್ಜೆಗಳನ್ನು ಗುರುತಿಸುತ್ತಾ ತನ್ನ ಹೊಸ ಬಜೆಟ್‌ನ ಹಾದಿಯನ್ನು ಅವರು ಸುಗಮಗೊಳಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಿಂದಿನ ಸರಕಾರದ ತಪ್ಪು ಲೆಕ್ಕಾಚಾರಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಹಿಂದಿನ ಸರಕಾರ ಬಾಕಿಉಳಿಸಿರುವ ಕಾಮಗಾರಿಗಳ ಬಗ್ಗೆ ಬೆಳಕು ಚೆಲ್ಲುತ್ತಲೇ, ತಾನು ಮಂಡಿಸುವ ಬಜೆಟ್ ಬರೇ ಘೋಷಣೆಗಳಲ್ಲ ಗ್ಯಾರಂಟಿ ಬಜೆಟ್ ಎಂದು ಸ್ಪಷ್ಟಪಡಿಸಿದ್ದಾರೆ. ಸಹಜವಾಗಿಯೇ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಇದು ಮುಜುಗರವನ್ನು ಸೃಷ್ಟಿಸಿದೆ. ಆ ಕಾರಣಕ್ಕಾಗಿಯೇ ಅವರು ‘‘ಇದೊಂದು ದ್ವೇಷ ರಾಜಕೀಯ ಬಜೆಟ್’ ಎಂದು ಟೀಕಿಸಿದ್ದಾರೆ. ಬಜೆಟ್‌ನ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ‘ಬಜೆಟ್‌ನಲ್ಲಿ ಭವಿಷ್ಯದ ಯೋಜನೆಗಳ ಕುರಿತು ಹೇಳುವ ಬದಲು ಹಿಂದಿನ ಸರಕಾರ ಹಾಗೂ ಕೇಂದ್ರ ಸರಕಾರವನ್ನು ದ್ವೇಷಿಸುವ ರಾಜಕೀಯ ಪ್ರೇರಿತ ಬಜೆಟ್ ಮಂಡಿಸಿದ್ದಾರೆ. ಇವತ್ತಿನ ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡುವ ಬದಲು ಹಳೆಯ ಕಾರ್ಯಕ್ರಮಗಳ ವೈಫಲ್ಯಗಳನ್ನು ಹೇಳಲು ಸಮಯ ತೆಗೆದುಕೊಂಡಿದ್ದಾರೆ’ ಎಂದು ದೂರಿದ್ದಾರೆ. ಆದರೆ ಹಳೆಯ ಬಜೆಟ್‌ನ ಸಾಧನೆ ಮತ್ತು ವೈಫಲ್ಯಗಳನ್ನು ಚರ್ಚಿಸದೆ ಹೊಸ ಬಜೆಟನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೇಗೆ ಸಾಧ್ಯ? ಎನ್ನುವುದನ್ನು ಅವರು ಮರೆತಿದ್ದಾರೆ.

ಶಿಕ್ಷಣ ಕ್ಷೇತ್ರವನ್ನು ಅಧ್ವಾನಗೊಳಿಸಿದ ಖ್ಯಾತಿ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಸೇರಬೇಕು. ಕೊರೋನ ಕಾಲದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ ಹಾನಿ ಅಪಾರ. ಕೊರೋನೋತ್ತರ ದಿನಗಳಲ್ಲಿ ಅದನ್ನು ಸರಿಪಡಿಸುವ ಬದಲು, ಅನಗತ್ಯ ಹಸ್ತಕ್ಷೇಪಗಳ ಮೂಲಕ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಹದಗೆಡಿಸಲಾಯಿತು. ಮೂಲಭೂತ ಸೌಕರ್ಯಗಳಿಗೆ ಬೇಕಾದ ಅನುದಾನಗಳನ್ನು ಒದಗಿಸಿ ಶಿಕ್ಷಣ ಕ್ಷೇತ್ರವನ್ನು ಮೇಲೆತ್ತುವ ಬದಲು, ಸರಕಾರ ತನ್ನ ದ್ವೇಷ ರಾಜಕಾರಣಕ್ಕೆ ಪಠ್ಯ ಪುಸ್ತಕಗಳನ್ನೇ ಬಳಸಿಕೊಂಡಿತು. ಅವರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಾದ ಹಾನಿ ಅಪಾರ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಣ್ಣದೊಂದು ಪ್ರಯತ್ನವನ್ನು ಸಿದ್ದರಾಮಯ್ಯ ಈ ಬಜೆಟ್ ಸಂದರ್ಭದಲ್ಲಿ ಮಾಡಿದ್ದಾರೆ. ಎನ್‌ಇಪಿಯನ್ನು ರದ್ದುಗೊಳಿಸಿ ಹೊಸ ಶಿಕ್ಷಣ ನೀತಿಯನ್ನು ರೂಪಿಸುವುದಾಗಿ ಅವರು ಘೋಷಿಸಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಬಹುದಾದ ಮಹತ್ವದ ನಿರ್ಧಾರ. ಹಾಗೆಯೇ 2023-24ನೇ ಸಾಲಿಗೆ 37,587 ಕೋಟಿ ರೂ.ಯನ್ನು ಶಿಕ್ಷಣ ಕ್ಷೇತ್ರಕ್ಕೇ ಮೀಸಲಿಟ್ಟಿದ್ದಾರೆ. ಹೊಸ ತರಗತಿಗಳ ಕೋಣೆಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಕಟ್ಟಡ ದುರಸ್ತಿ, ಮಕ್ಕಳಿಗೆ ಹೆಚ್ಚುವರಿ ಮೊಟ್ಟೆ, ಗುಣಾತ್ಮಕ ಶಿಕ್ಷಣ ಖಾತರಿ ಹೀಗೆ ಸರಕಾರ ನೀಡಿರುವ ಹಣದಿಂದ ಶಿಕ್ಷಣ ಕ್ಷೇತ್ರದ ಬಿರುಕುಗಳನ್ನು ಮುಚ್ಚುವ ಪ್ರಯತ್ನವನ್ನು ಮಾಡಬಹುದಾಗಿದೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಶಾಲೆಗಳು ಅನಾಥ ಪ್ರಜ್ಞೆಯನ್ನು ಅನುಭವಿಸಿದ್ದವು. ಈ ಬಾರಿಯ ಬಜೆಟ್‌ನಲ್ಲಿ ಶೇ. 11ರಷ್ಟು ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಸಿ ಶಿಕ್ಷಣಕ್ಕೆ ಸರಕಾರ ತಾಯಿಯ ಮೊಲೆ ಹಾಲುಣಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಗ್ರಂಥಾಲಯಗಳಿಗೆ ಸದಭಿರುಚಿಯ ಪುಸ್ತಕಗಳನ್ನು ಒದಗಿಸಲು 10 ಕೋಟಿ ರೂ.ಯನ್ನು ಸರಕಾರ ಮೀಸಲಿಟ್ಟಿದೆ. ಈ ಹಣ ಸದುಪಯೋಗವಾಗುವಂತೆ ನೋಡುವುದು ಕೂಡ ಸರಕಾರದ ಕರ್ತವ್ಯ. ಇಂದು ಈ ಗ್ರಂಥಾಲಯಗಳಿಗೆ ಪುಸ್ತಕ ಮಾರಾಟ ಎನ್ನುವುದು ದೊಡ್ಡ ದಂಧೆಯಾಗಿದೆ. ಈ ದಂಧೆಗೆ ಪೂರಕವಾಗಿ ಪುಸ್ತಕಗಳನ್ನು ಮುದ್ರಿಸುವ ನಕಲಿ ಪ್ರಕಾಶಕರ ದಂಡೇ ಇದೆ. ಗ್ರಂಥಾಲಯಗಳು ಕಳಪೆ ಪುಸ್ತಕಗಳ ಗೋದಾಮುಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಆದುದರಿಂದ, ಗ್ರಂಥಾಲಯಗಳಿಗೆ ಪುಸ್ತಕ ಆಯ್ಕೆ ಮಾಡುವ ಸಮಿತಿಯಲ್ಲಿ ಯೋಗ್ಯರಿರುವಂತೆ ನೋಡಿಕೊಂಡಾಗ ಮಾತ್ರ, ಈ 10 ಕೋಟಿ ರೂ. ಸದುಪಯೋಗವಾಗಲು ಸಾಧ್ಯ. ಗ್ರಂಥಾಲಯಗಳು ಉತ್ತಮ ಪುಸ್ತಕಗಳನ್ನು ಹೊಂದಲು ಸಾಧ್ಯ.

ಅರ್ಹ ಬರಹಗಾರರು, ಪ್ರಕಾಶಕರು ಇದರ ಪ್ರಯೋಜನವನ್ನು ಪಡೆಯಲು ಸಾಧ್ಯ. ಇದೇ ಸಂದರ್ಭದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಡುವ ಹಣವನ್ನು ಇತರ ಯೋಜನೆಗಳಿಗೆ ಬಳಕೆಯಾಗದಂತೆ ತಡೆಯಲು ಕಾಯ್ದೆಯ 7-ಡಿಯನ್ನು ರದ್ದುಗೊಳಿಸುವ ಮೂಲಕ ಸರಕಾರ ದಲಿತರ ಏಳಿಗೆಯ ಬಗ್ಗೆ ತನಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಆ ಕಾರ್ಯಕ್ರಮಗಳಿಗಷ್ಟೇ ಬಳಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಸೆಕ್ಷನ್ 7-ಡಿ ಅಡಿಯಲ್ಲಿ ಈ ಹಣವನ್ನು ಇತರ ಸಮುದಾಯದ ಜನರ ಯೋಜನೆಗಳಿಗೆ ಜಾಣತನದಿಂದ ಹಂಚಿಕೆ ಮಾಡಲಾಗುತ್ತಿತ್ತು. ರಸ್ತೆ, ನೀರಾವರಿಯಂತಹ ಯೋಜನೆಗಳಿಗೆ ಹಣವನ್ನು ಬಳಸಿ, ಪರಿಶಿಷ್ಟರು ಕೂಡ ಆ ಯೋಜನೆಯ ಫಲಾನುಭವಿಗಳು ಎಂದು ಸಮರ್ಥನೆ ನೀಡಲಾಗುತ್ತಿತ್ತು. ಈ ಸೆಕ್ಷನ್ 7-ಡಿಯನ್ನು ರದ್ದುಗೊಳಿಸಬೇಕು ಎಂದು ದಲಿತ ಸಂಘಟನೆಗಳು ಬೇಡಿಕೆಯನ್ನಿಟ್ಟಿದ್ದವು. ಇದೀಗ ಸರಕಾರ ಅದನ್ನು ರದ್ದುಗೊಳಿಸಿರುವುದರಿಂದ ದಲಿತರ ಕಲ್ಯಾಣ ಯೋಜನೆಗಳ ಹಣವನ್ನು ದಲಿತರಿಗಾಗಿಯೇ ವಿನಿಯೋಗಿಸುವ ಅನಿವಾರ್ಯಕ್ಕೆ ಇಲಾಖೆಗಳು ಒಳಗಾಗಿವೆ. ದಲಿತರ ಮೂಗಿಗೆ ಬೆಣ್ಣೆ ಒರೆಸಿ ಅನುದಾನ ಯಾರ್ಯಾರದೋ ಪಾಲಾಗುವುದು ತಪ್ಪಿದಂತಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ 2,101 ಕೋಟಿ ರೂ.ಯನ್ನು ಮೀಸಲಿಡುವ ಮೂಲಕ ಅಭಿವೃದ್ಧಿಯಲ್ಲಿ ಎಲ್ಲರನ್ನು ಒಳಗೊಳ್ಳುವಂತೆ ನೋಡಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಪೂರಕವಾಗಿ ಬೇರೆ ಬೇರೆ ಇಲಾಖೆಗಳಿಗೆ ಹಣವನ್ನು ಮೀಸಲಿಟ್ಟಿರುವುದು ಶ್ಲಾಘನೀಯ. ರೈತರು-ಕಾರ್ಮಿಕರನ್ನು ಕೂಡ ಬಜೆಟ್‌ನಲ್ಲಿ ಹೊರಗಿಟ್ಟಿಲ್ಲ. ಹಾಗೆ ನೋಡಿದರೆ, ಸರಕಾರದ ಐದು ಗ್ಯಾರಂಟಿಗಳಲ್ಲಿ ಈ ನಾಡಿನ ಎಲ್ಲ ದಲಿತರು, ರೈತರು, ಅಲ್ಪಸಂಖ್ಯಾತರು, ದುರ್ಬಲವರ್ಗದ ಜನರು ನೇರ ಪಾಲುದಾರರು. ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇವುಗಳಿಂದದ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಗ್ಯಾರಂಟಿಯ ಮೂಲಕ ತಾನು ಯಾರಿಗೂ ಪುಕ್ಕಟೆ ನೀಡುತ್ತಿಲ್ಲ, ಅದು ಈ ನಾಡನ್ನು ಅಭಿವೃದ್ಧ್ದಿಗೊಳಿಸುವ ಭಾಗವೇ ಆಗಿದೆ ಎನ್ನುವುದನ್ನು ಬಜೆಟ್‌ನಲ್ಲಿ ವಿರೋಧಪಕ್ಷಕ್ಕೆ ಸ್ಪಷ್ಟಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಉಳಿದಂತೆ ಹಣ ಹೊಂದಿಸುವ ಸಿದ್ದರಾಮಯ್ಯ ಅವರ ಲೆಕ್ಕಾಚಾರಗಳು ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಎನ್ನುವುದನ್ನು ಕಾಲವೇ ಹೇಳಬೇಕು. ಒಟ್ಟಿನಲ್ಲಿ, ಈ ಬಜೆಟ್‌ನಲ್ಲಿ ಸರಕಾರ ಬೀಸುವ ದೊಣ್ಣೆಯಿಂದ ಪಾರಾಗಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಕಡೆಗೆ ರಾಜ್ಯವನ್ನ್ನೂ ಮುನ್ನಡೆಸಲಿದ್ದೇವೆ ಎನ್ನುವ ಸ್ಪಷ್ಟ ಸಂದೇಶವೊಂದು ಬಜೆಟ್ ಮೂಲಕ ಸರಕಾರ ನಾಡಿನ ಜನತೆಗೆ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X